ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್‍ನ್ನು ಕರೆಯೋದು ಸೆಲಬ್ರಿಟಿ ಅಂತಾನೇ. ಅಭಿಮಾನಿಗಳನ್ನು ಬಿಟ್ಟರೆ, ದರ್ಶನ್ ಹೆಚ್ಚು ಇಷ್ಟಪಡೋದು ಪ್ರೀತಿಸೋದು ಗೆಳೆಯರನ್ನ. ದರ್ಶನ್ ಅವರು ಗೆಳೆಯರ ಬಗ್ಗೆ ತೆಗೆದುಕೊಳ್ಳೋ ಕಾಳಜಿಯನ್ನು ಸ್ವತಃ ವಿನೋದ್ ಪ್ರಭಾಕರ್ ಬಿಚ್ಚಿಟ್ಟಿದ್ದಾರೆ.
ದರ್ಶನ್ ಗೆಳೆತನಕ್ಕೆ ತುಂಬಾ ಬೆಲೆ ಕೊಡ್ತಾರೆ. ಅವರ ಜೊತೆ ಊಟಕ್ಕೆ ಕುಂತರೆ, ಮೊದಲು ನಮ್ಮೆಲ್ಲರ ತಟ್ಟೆ ತುಂಬಬೇಕು. ಆಮೇಲೆ ಅವರದ್ದು. ಅವರು ನನ್ನನ್ನು ಇವತ್ತಿಗೂ ಕರೆಯೋದು ಟೈಗರ್ ಅಂತಾನೆ. ಹೈದರಾಬಾದ್ ಕಾರ್ಯಕ್ರಮದಲ್ಲೂ ಅಷ್ಟೆ, ನೀನು ಮುಂದೆ ಹೋಗು, ನಾನು ಹಿಂದೆ ಇರ್ತೀನಿ ಅಂದಿದ್ರು. ಪ್ರತಿ ಬಾರಿಯೂ ಅಷ್ಟೆ, ಅವರ ಮುಂದೆ ನಾನು ಇರಬೇಕು. ನೀನು ಏನ್ ಮಾಡ್ತಿಯಾ ಅನ್ನೋದನ್ನ ನಾನು ನೋಡ್ತಿರಬೇಕು ಅಂತಾರೆ. ಅದು ದರ್ಶನ್ ಫ್ರೆಂಡ್‍ಶಿಪ್‍ಗೆ ಕೊಡೋ ಗೌರವ ಎಂದು ಹೇಳಿಕೊಂಡಿದ್ದಾರೆ ದರ್ಶನ್.
ರಾಬರ್ಟ್ ಚಿತ್ರದಲ್ಲಿ ದರ್ಶನ್ ಜೊತೆ ವಿನೋದ್ ಪ್ರಭಾಕರ್ ಕೂಡಾ ನಟಿಸಿದ್ದು, ದೋಸ್ತಾ ಕಣೋ ಅನ್ನೋ ಹಾಡು ಅವರ ಮೇಲೇ ರಚಿತವಾಗಿದೆ. ತರುಣ್ ಸುಧೀರ್, ಈ ಇಬ್ಬರನ್ನೂ ಅದು ಹೇಗೆ ತೋರಿಸಿರಬಹುದು ಅನ್ನೋ ಕುತೂಹಲ ಇನ್ನೂ ಹಾಗೆಯೇ ಇದೆ. ಆ ಕುತೂಹಲಕ್ಕೆ ತೆರೆ ಬೀಳೋದು ಮಾರ್ಚ್ 11ಕ್ಕೆ.