` ಈ ವಾರ 5 ಸಿನಿಮಾ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಈ ವಾರ 5 ಸಿನಿಮಾ ರಿಲೀಸ್
Talaq Talaq Talaq Movie Image

ಸಿನಿಮಾಗಳೇ ಬರುತ್ತಿಲ್ಲ ಎನ್ನುವವರಿಗೆ ಸ್ಟಾರ್ ಸಿನಿಮಾಗಳು ಡೇಟ್ ಅನೌನ್ಸ್ ಮಾಡಿಕೊಂಡು ಥ್ರಿಲ್ ಕೊಟ್ಟಿವೆ. ಇದರ ನಡುವೆಯೇ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗೋಕೆ ರೆಡಿಯಾಗಿವೆ. ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳ ಸಂಖ್ಯೆಯೇ 5.

ತಲಾಖ್ ತಲಾಖ್ ತಲಾಖ್, ಪಂಟ್ರು, ಲಡ್ಡು, ರಾಜಮಾರ್ಗ, ಕತ್ಲೆಕಾಡು ಮತ್ತು ರಾಜಮಾರ್ಗ. ಈ ವಾರದ ಸಿನಿಮಾಗಳು. ಎಲ್ಲವೂ ಹೊಸಬರ ಚಿತ್ರಗಳೇ ಎನ್ನುವುದು ಗಮನಾರ್ಹ. ಸ್ಟಾರ್‍ಗಳಿಲ್ಲದ ಈ ಸಮಯವೇ ನಮಗೆ ಅವಕಾಶ ಎನ್ನುವಂತೆ ಹೊಸಬರೇನೋ ಥಿಯೇಟರಿಗೆ ಬರುತ್ತಿದ್ದಾರೆ. ಆದರೆ.. ಒಂದು ಚಿತ್ರವನ್ನು ಜನರಿಗೆ ತಲುಪಿಸುವ, ರೀಚ್ ಮಾಡುವ, ಜನರನ್ನು ಥಿಯೇಟರಿಗೆ ಕರೆತರುವ  ಪ್ರಯತ್ನಗಳೇ ಕಾಣುತ್ತಿಲ್ಲ. ಅದನ್ನು ಸಿನಿಮಾದವರೇ ಮಾಡಬೇಕು.