` ಶೀಘ್ರ ಫಿಲಂ ಚೇಂಬರ್ ಚುನಾವಣೆ ನಡೆಸುವಂತೆ ಸಹಕಾರ ಇಲಾಖೆ ಆದೇಶ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಶೀಘ್ರ ಫಿಲಂ ಚೇಂಬರ್ ಚುನಾವಣೆ ನಡೆಸುವಂತೆ ದೂರು
ಶೀಘ್ರ ಫಿಲಂ ಚೇಂಬರ್ ಚುನಾವಣೆ ನಡೆಸುವಂತೆ ದೂರು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕಾರಾವಧಿ ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಸಂಬಂಧಿಸಿದ ಇಲಾಖೆಗೆ ದೂರು ನೀಡಲಾಗಿದೆ. ಈಗ ಇರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕಾರಾವಧಿ 28-05-2023ಕ್ಕೆ ಮುಕ್ತಾಯಗೊಂಡಿದೆ. ಆದರೆ ಚುನಾವಣೆ ನಡೆಸುವ ಕುರಿತಂತೆ ಯಾವುದೇ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ. 

dc_copy_kfcc.jpgಮಂಡಳಿಯ ಬೈಲಾ ಪ್ರಕಾರ ಶೀಘ್ರದಲ್ಲೇ ಚುನಾವಣೆ ನಡೆಸಬೇಕು ಹಾಗೂ ಅಲ್ಲಿಯವರೆಗೆ ಫಿಲಂ ಚೇಂಬರ್`ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನರಸಿಂಹರಾಜು ನೀಡಿದ ದೂರಿಗೆ ಸಹಕಾರ ಸಂಘಗಳ ಇಲಾಖೆ ಶ್ರೀಘ್ರವೇ ಚುನಾವಣೆ ನಡೆಸುವಲಂತೆ ತಿಳಿಸಿತ್ತು. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ ತಿಂಗಳು ಸಮಯ ನೀಡುವಂತೆ ಮನವೆ ಸಲ್ಲಿಸಿತು. 

ನಿರ್ಮಾಪಕ ಎನ್ ಎಂ ಸುರೇಶ್ ಮತ್ತು ಪ್ರವೀಣ್ ಕುಮಾರ್ ಅವರು ಸಹಕಾರ ಇಲಾಖೆ ಸಚಿವರಾಗಿರುವ ಕೆ ಎನ್ ರಾಜಣ್ಣ ಅವರನ್ನ ಬೇಟಿ ಮಾಡಿ ತುನಾವಣೆ ಮಾಡಿಸುವಂತೆ ಮನವಿ ಮಾಡಿದರು. 

ಒಟ್ಟಿನಲ್ಲಿ ನರಸಿಂಹರಾಜು ಮತ್ತು ಇತರರು ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ.