ಬುಕ್ ಮೈ ಶೋನಲ್ಲಿ ಗೋಲ್‍ಮಾಲ್ ನಡೆಯುತ್ತಿದೆ ಎನ್ನುವುದು ಹೊಸ ವಿಷಯವೇ ಅಲ್ಲ. ಆದರೆ, ಈ ಬಾರಿ ಈ ಹೋರಾಟಕ್ಕೆ ಇನ್ನಷ್ಟು ರೊಚ್ಚು ಬಂದಿದೆ. ಏಕೆಂದರೆ ಈ ಬಾರಿ ಬುಕ್ ಮೈ ಶೋ ವಿರುದ್ಧ ಸಿಡಿದೆದ್ದಿರುವುದು ಕನ್ನಡದ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದರಾಮ್ ಮತ್ತು ಖ್ಯಾತ ವಿತರಕ ಕಾರ್ತಿಕ್ ಗೌಡ.
ಕನ್ನಡದ ಚಿತ್ರಗಳಿಗೆ ಬುಕ್ ಮೈ ಶೋನಲ್ಲಿ ಕಡಿಮೆ ರೇಟಿಂಗ್ ಇರುತ್ತೆ. ಆನಂತರ ಕೆಲವರು ಹಣಕ್ಕೆ ಡಿಮ್ಯಾಂಡ್ ಇಡುತ್ತಾರೆ. ದುಡ್ಡು ಕೊಟ್ಟರೆ ನಿಮ್ಮ ಚಿತ್ರದ ರೇಟಿಂಗ್ ಹೆಚ್ಚಿಸುತ್ತೇನೆ ಎನ್ನುತ್ತಾರೆ. ಇದು ಹಲವು ಚಿತ್ರಗಳಿಗೆ ಆಗಿರುವ ಅನ್ಯಾಯ. ಈ ಕುರಿತೇ ಧ್ವನಿ ಎತ್ತಿದ್ದಾರೆ ಸಂತೋಷ್ ಆನಂದರಾಮ್.
ಬುಕ್ ಮೈ ಶೋ ಅತೀ ಹೆಚ್ಚು ಲಾಭ ಮಾಡುತ್ತಿರುವುದು ಕರ್ನಾಟಕದಲ್ಲಿ. ಕನ್ನಡಿಗರೇ ಬುಕ್ ಮೈ ಶೋನ ಅತಿ ದೊಡ್ಡ ಕಸ್ಟಮರ್ಸ್. ಆದರೆ, ಅದರ ಲಾಭ ಮಾತ್ರ ಕನ್ನಡ ಚಿತ್ರಕ್ಕೆ ಆಗುತ್ತಿಲ್ಲ. ಅತೀ ಹೆಚ್ಚು ಹಣ ನೀಡಿ ಸಿನಿಮಾ ನೋಡುವುದು. ಹೀಗಾಗಿ ನಮ್ಮ ಸಿನಿಮಾಗಳನ್ನು ಸಪೋರ್ಟ್ ಮಾಡಿ ಎಂದಿದ್ದಾರೆ ಸಂತೋಷ್ ಆನಂದರಾಮ್.
ಇನ್ನು ವಿತರಕ ಕಾರ್ತಿಕ್ ಗೌಡ ಅವರಂತೂ ಮೊದಲು ಚೆನ್ನಾಗಿಲ್ಲ ಎಂದು ಬರುವ ವಿಮರ್ಶೆ ಮತ್ತು ರೇಟಿಂಗ್ ಹಣ ಕೊಟ್ಟ ನಂತರ ಜಾಸ್ತಿಯಾಗುತ್ತದೆ. ಪಾಸಿಟಿವ್ ಆಗುತ್ತದೆ ಎಂದರೆ ಏನರ್ಥ..? ಬುಕ್ ಮೈ ಶೋನವರೇ ಉತ್ತರಿಸಬೇಕು ಎಂದಿದ್ದಾರೆ.
ಎಂದಿನಂತೆ ಬುಕ್ ಮೈ ಶೋ ಈ ಬಾರಿಯೂ ಪ್ರತಿಕ್ರಿಯೆ ಕೊಟ್ಟಿಲ್ಲ.