` ಸುದೀಪ್, ಪ್ರೇಮ್ ವಿರುದ್ಧ ಫಿಲಂ ಚೇಂಬರ್‍ಗೆ ಕನ್ನಡ ಸಂಘಟನೆ ದೂರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kfcc gets complaint against sudeep and prem
Sudeep, Prem

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್, ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡ ಸಂಘಟನೆಯೊಂದು ಫಿಲಂ ಚೇಂಬರ್ ಮೆಟ್ಟಿಲೇರಿದೆ. ಕರ್ನಾಟಕ ಸಂಘಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್, ಸುದೀಪ್ ಮತ್ತು ಪ್ರೇಮ್ ಫಿಲಂ ಚೇಂಬರ್‍ಗೆ ದೂರು ಸಲ್ಲಿಸಿದ್ದಾರೆ.

ದಿ ವಿಲನ್ ಚಿತ್ರದ ಒಂದು ದೃಶ್ಯದಲ್ಲಿ ಸುದೀಪ್ ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಂಡಿದ್ದಾರೆ. ಇದು ನಾಡಧ್ವಜಕ್ಕೆ ಮಾಡಿದ ಅವಮಾನ. ಹೀಗಾಗಿ ಪ್ರೇಮ್ ಮತ್ತು ಸುದೀಪ್ ಕ್ಷಮೆ ಕೇಳಬೇಕು ಅನ್ನೋದು ನಾಗೇಶ್ ಆಗ್ರಹ. ಇಲ್ಲದೇ ಹೋದರೆ ದಿ ವಿಲನ್ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾಗೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ಅಕ್ಟೋಬರ್ 18ರಂದು ರಿಲೀಸ್ ಆಗಿರುವ ದಿ ವಿಲನ್ ಚಿತ್ರ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಚಿತ್ರದ ಮೇಲೆ ಮತ್ತೊಂದು ವಿವಾದದ ಹೊಡೆತ ಬಿದ್ದಿದೆ. ಈಗಾಗಲೇ ಚಿತ್ರ ರಿಲೀಸ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ. ನೀವು ನಿರ್ದೇಶಕರನ್ನೇ ಸಂಪರ್ಕಿಸಿ ಎಂದು ಹೇಳಿ ಕಳಿಸಿದೆಯಂತೆ ಫಿಲಂ ಚೇಂಬರ್.

Sri Bharaha Baahubali Pressmeet Gallery

Maya Bazaar Pressmeet Gallery