` ವಿಜಯ್ ಬಹಿಷ್ಕಾರ ಅಸಾಧ್ಯ - ಫಿಲಂ ಚೇಂಬರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kfcc will not ban duniya vijay
KFCC President Chinnegowda, Duniya Vijay

ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದುನಿಯಾ ವಿಜಯ್‍ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಪಾನಿಪುರಿ ಕಿಟ್ಟಿ ಕೂಡಾ ಮನವಿ ಮಾಡಿದ್ದಾರೆ. ಆದರೆ, ಅದು ಅಸಾಧ್ಯ ಎಂದು ಹೇಳಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ.

ಇದೊಂದು ವೈಯಕ್ತಿಕ ವಿಚಾರದ ಗಲಾಟೆ. ಮೇಲಾಗಿ ಇದು ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಚಿನ್ನೇಗೌಡ.

ಜೈಲಿನಿಂದ ಬಂದ ಮೇಲೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯನ್ನು ಕೂರಿಸಿಕೊಂಡು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

Sri Bharaha Baahubali Pressmeet Gallery

Maya Bazaar Pressmeet Gallery