ಸೌಂದರ್ಯ ಜಯಮಾಲಾ. ಇಂಗ್ಲೆಂಡ್‍ನ ವೇಲ್ಸ್ ನಗರದಲ್ಲಿರೋ ಫೈನಲ್ ಇಯರ್ ಬಿಎಸ್‍ಸಿ ಓದುತ್ತಿದ್ದರು. ಸ್ಪಾನ್ಸ್ ವಿವಿಯಲ್ಲಿ ಬಾಟನಿಯಲ್ಲಿ ಬಿಎಸ್‍ಸಿ ವ್ಯಾಸಂಗ ಮಾಡುತ್ತಿದ್ದರು. ಅವರ ಕಾಲೇಜ್‍ನ ಇಬ್ಬರು ಪ್ರೊಫೆಸರ್‍ಗಳು ಮತ್ತು ಒಬ್ಬ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡು, ಪ್ರೊಫೆಸರ್ ಒಬ್ಬರು ಮೃತಪಟ್ಟರು. ವಿವಿ ಸೀಲ್ ಡೌನ್ ಆಯ್ತು.
ಇದು ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ಇಂಗ್ಲೆಂಡ್ ಅನುಭವ. ಕಥೆ ಇಷ್ಟಕ್ಕೇ ಮುಗಿಯಲ್ಲ. ಸೌಂದರ್ಯ ದುಬೈ ಮೂಲಕ ಭಾರತಕ್ಕೆ ಬರಲು ಹೊರಡುತ್ತಾರೆ. ಅಷ್ಟು ಹೊತ್ತಿಗೆ ದುಬೈ ವಿಮಾನಗಳನ್ನು ಭಾರತ ನಿರ್ಬಂದಿಸುತ್ತೆ. ಆಗ ದುಬೈಗೆ ಬಂದಿದ್ದ ಸೌಂದರ್ಯ ಜಯಮಾಲಾ ಅವರನ್ನ ಮತ್ತೆ ಇಂಗ್ಲೆಂಡ್‍ಗೆ ವಾಪಸ್ ಕಳಿಸುತ್ತೆ ದುಬೈ ಸರ್ಕಾರ.
ಇಂಗ್ಲೆಂಡ್‍ಗೆ ಮಧ್ಯರಾತ್ರಿ ಬಂದಿಳಿದ ಸೌಂದರ್ಯ ಅಷ್ಟು ಹೊತ್ತಿಗೆ ತಾವು ಬಾಡಿಗೆ ಇದ್ದ ಅಪಾರ್ಟ್‍ಮೆಂಟ್ ಖಾಲಿ ಮಾಡಿರುತ್ತಾರೆ. ಎಲ್ಲಿಗೆ ಹೋಗೋದು.. ಅಕ್ಷರಶಃ ಫುಟ್‍ಪಾತ್. ಕೊನೆಗೆ ತಮಗೆ ಬಾಡಿಗೆ ಕೊಟ್ಟಿದ್ದವರನ್ನೇ ಸಂಪರ್ಕಿಸಿ ರಿಕ್ವೆಸ್ಟ್ ಮಾಡಿಕೊಂಡಾಗ, ಅವರು ಅಪಾರ್ಟ್‍ಮೆಂಟ್‍ನ್ನ ಬೇರೊಬ್ಬರ ಮೂಲಕ ಓಪನ್ ಮಾಡಿಸಿಕೊಡ್ತಾರೆ. ಅಪಾರ್ಟ್‍ಮೆಂಟ್‍ಗೆ ಹೋದರೆ ಏನೂ ಇಲ್ಲ. ಕರೆಂಟ್, ನೀರು, ಇಂಟರ್‍ನೆಟ್, ಫೋನ್.. ಎಲ್ಲವೂ ಕಟ್. ಕೊನೆಗೆ ನೆರವಿಗೆ ಬರೋದು ಕುವೈತ್‍ನ ಸ್ನೇಹಿತೆ. ಆಹಾರ ಮತ್ತು ವಿಟಮಿನ್ ಮಾತ್ರೆಗಳನ್ನು ತಂದುಕೊಟ್ಟು ಉಪಚರಿಸ್ತಾರೆ ಕುವೈತ್ ಗೆಳತಿ.
ಅಬ್ಬಾ.. ಅದೊಂದು ಮರೆಯಲಾಗದ ಅನುಭವ. ಇನ್ನೊಂದಷ್ಟು ವರ್ಷ ವಿಮಾನ ಹತ್ತೋಕೆ ಭಯವಾಗುಂತಾಗಿಬಿಟ್ಟಿದೆ ಎನ್ನುವ ಸೌಂದರ್ಯ, ಪರದೇಶಕ್ಕಿಂತ ನಮ್ಮೂರೇ ನಮಗೆ ಮೇಲೆ ಅನ್ನಿಸಿಬಿಟ್ಟಿದೆ. ಸದ್ಯಕ್ಕೆ ಇಲ್ಲಿಯೂ ಸೌಂದರ್ಯ ಮನೆಗೆ ಹೋಗಿಲ್ಲ. ಕ್ವಾರಂಟೈನ್‍ನಲ್ಲಿದ್ದಾರೆ.