ಕನ್ನಡದ ಖ್ಯಾತ ನಟ ದಿವಂಗತ ಕಲ್ಯಾಣ್ ಕುಮಾರ್ ಅವರ ಸೊಸೆ ಪ್ರಿಯದರ್ಶಿನಿ ನಿಧನ ಹೊಂದಿದ್ದಾರೆ. ಕಲ್ಯಾಣ್ ಕುಮಾರ್ ಪುತ್ರ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯದರ್ಶಿನಿ ತನ್ನ ಪ್ಯಾಲಿಯೋ ಡಯಟ್ ನಿಂದ ನಿಧನರಾಗಿದ್ದಾರೆ ಎನ್ನುವುದು ಹೊರಬರುತ್ತಿರೋ ಮಾಹಿತಿ. ಭರತ್ ಕಲ್ಯಾಣ್ ಸದ್ಯ ತಮಿಳು ಕಿರುತೆರೆಯಲ್ಲಿ ನಟಿಸುತ್ತಿರುವ ನಟ. ಇವರ ಪತ್ನಿ ಪ್ರಿಯದರ್ಶಿನಿ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ಪ್ರಿಯದರ್ಶಿನಿ ಡಯಟ್ ಎಡವಟ್ಟಿನಿಂದಾಗಿ ಕೆಲವು ವಾರಗಳ ಹಿಂದೆ ಕೋಮಾಗೆ ಹೋಗಿದ್ದರು. ಐಸಿಯುನಲ್ಲಿದ್ದ ಪ್ರಿಯಾ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 2ರಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ದಪ್ಪ ಇದ್ದ ಕಾರಣ ಪ್ರಿಯದರ್ಶನಿ ಪ್ಯಾಲಿಯೋ ಡಯಟ್ ಫಾಲೋ ಮಾಡುತ್ತಿದ್ದರಂತೆ. ಸಡನ್ನಾಗಿ ಡಯಟ್ ಬದಲಾದ ಕಾರಣ ಡಯಾಬಿಟೀಸ್ ಹಠಾತ್ ಏರಿಕೆಯಾಗಿತ್ತು. ಇದೇ ಪ್ರಿಯದರ್ಶಿನಿ ಸಾವಿಗೆ ಕಾರಣ ಎನ್ನಲಾಗಿದೆ.
ಪ್ಯಾಲಿಯೋ ಡಯಟ್ನಲ್ಲಿ ಕೇವಲ ಹಣ್ಣು, ತರಕಾರಿಗಳನ್ನೇ ತಿನ್ನಬೇಕು. ಅಕ್ಕಿ, ರಾಗಿ, ಗೋಧಿಯ ಆಹಾರಗಳನ್ನು ಸೇವಿಸುವಂತಿಲ್ಲ. ಪ್ರೊಟೀನ್ ಇರುವ ಅಹಾರಗಳನ್ನಷ್ಟೇ ತಿನ್ನಬೇಕು. ಒಟ್ಟಿನಲ್ಲಿ ಸಣ್ಣಗಾಗುವ ಆಸೆಗೆ ನಟಿ ಜೀವ ಬಿಟ್ಟಿದ್ದಾರೆ.