ಸಾಹಿತ್ಯ ರತ್ನ ಎಂದೇ ಖ್ಯಾತರಾಗಿದ್ದ ಚಿ.ಉದಯಶಂಕರ್ ಅವರ ಪತ್ನಿ ಶಾರದಮ್ಮ ನಿಧನರಾಗಿದ್ದಾರೆ. ಚಿ.ಉದಯಶಂಕರ್ 1993ರಲ್ಲಿ ಮೃತಪಟ್ಟಿದ್ದರು. ಅದಾದ ನಂತರ ತಮ್ಮ ಮೂರು ಮಕ್ಕಳಿಗೂ ಸುಂದರ ಬದುಕು ಕಟ್ಟಿಕೊಟ್ಟಿದ್ದವರು ಶಾರದಮ್ಮ.
ಚಿ.ಗುರುದತ್ ಸೇರಿದಂತೆ ಮೂವರು ಮಕ್ಕಳನ್ನೂ ದಡ ಸೇರಿಸಿದ್ದ ಶಾರದಮ್ಮ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಶಾರದಮ್ಮ ಮತ್ತು ಚಿ.ಉದಯಶಂಕರ್ ಅವರ ಮದುವೆ 1964ರ ಜೂನ್ 5ರಂದು ನೆರವೇರಿತ್ತು. ಮೂಲತಃ ಹೊಳೆನರಸೀಪುರದ ಚಿಟ್ನಳ್ಳಿ ಗ್ರಾಮದವರಾದ ಉದಯಶಂಕರ್, ಡಾ.ರಾಜ್ ಅವರ ಆಪ್ತಮಿತ್ರ. ಡಾ.ರಾಜ್ ಅವರ ಚಿತ್ರಗಳ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳ ಸಾಹಿತ್ಯದಲ್ಲಿ ಉದಯಶಂಕರ್ ಕೊಡುಗೆ ದೊಡ್ಡದು.