ಕಿರುತೆರೆ ನಿರೂಪಕ, ನಟ, ರಂಗಭೂಮಿ ಕಲಾವಿದ ಸಂಜೀವ ಕುಲಕರ್ಣಿ ವಿಧಿವಶರಾಗಿದ್ದಾರೆ. 49 ವರ್ಷ ವಯಸ್ಸಿನ ಸಂಜೀವ ಕುಲಕರ್ಣಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಹಣವಿಲ್ಲದೆ ಒದ್ದಾಡಿದ್ದ ಸಂಜೀವ ಕುಲಕರ್ಣಿ ಅವರಿಗಾಗಿ ನಟ ಸುದೀಪ್ ಸೇರಿದಂತೆ ಹಲವರು ನೆರವಿನ ಹಸ್ತ ಚಾಚಿದ್ದರು. ಹಣದ ಮೊತ್ತ ದೊಡ್ಡದಾಗಿತ್ತು.
ನಾರಾಯಣ ಹೃದಯಾಲಯದಲ್ಲಿ ಐಸಿಯುನಲ್ಲಿದ್ದ ಸಂಜೀವ ಕುಲಕರ್ಣಿ, ಶನಿವಾರ ರಾತ್ರಿ ನಿಧನರಾಗಿದ್ದಾರೆ.