` ಸೂಪರ್ ಬೈಕ್ ಆ್ಯಕ್ಸಿಡೆಂಟ್ - ನಿರ್ಮಾಪಕ ಅಜಯ್ ಚಂದಾನಿ ಸಾವು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajay chandani image
Producer Distributor Ajay Chandani

ಚಿತ್ರ ನಿರ್ಮಾಪಕ, ವಿತರಕ ಅಜಯ್ ಚಂದಾನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಜಯ್ ಚಲಾಯಿಸುತ್ತಿದ್ದ ಬೈಕ್, ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು, ನಂತರ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಗೋಡೆಗೆ ಗುದ್ದಿದೆ. ಕಾಂಪೌಂಡ್ ಗೋಡೆಯನ್ನು ಮುರಿದು ಬೈಕ್ ಸಿಕ್ಕಿಕೊಂಡಿದೆ. ಅಪಘಾತದಲ್ಲಿ ಅಜಯ್ ಸಾವಿಗೀಡಾಗಿದ್ದಾರೆ.

ಅಜಯ್ ಚಂದಾನಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ತಮ್ಮ ಸುಜುಕಿ ಸ್ಟಾರ್ಮ್ 650 ಎಕ್ಸ್‍ಟಿ ಸೂಪರ್ ಬೈಕ್‍ನಲ್ಲಿ ಮನೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಜೆ 6.30ರ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದೆ.