` ಅಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಭಿಮಾನಿ ಕಟ್ಟಿದ ಗಂಧದ ಗುಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth named to Australian park
Jay Prakash

ಪುನೀತ್ ರಾಜಕುಮಾರ್ ಅವರ ಹೆಸರು ಅಜರಾಮರ. ಕರ್ನಾಟಕದಲ್ಲಿ ಎಲ್ಲಿ ಹೋದರೂ ಪುನೀತ್ ಪರ ಪುತ್ಥಳಿಯೋ, ರಸ್ತೆಯೋ, ಪಾರ್ಕುಗಳೋ, ದೇವಸ್ಥಾನವೋ, ಸರ್ಕಲ್ಲುಗಳೋ.. ಕಣ್ಣಿಗೆ ಬೀಳುತ್ತಿವೆ. ಗಲ್ಲಿ ಗಲ್ಲಿಗಳಲ್ಲಿ ಪುನೀತ್ ಹೆಸರು ರಿಂಗಣಿಸುತ್ತಿದೆ.  ಕನ್ನಡಿಗರು ಎಲ್ಲಿದ್ದಾರೋ ಅಲ್ಲಿ ಪುನೀತ್ ಹೆಸರು ಮೆರೆಯುತ್ತಿದೆ. ಈಗ ಆಸ್ಟ್ರೇಲಿಯಾದಲ್ಲಿ. ಅದರಲ್ಲೂ ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯಲ್ಲಿ.

ಸಿಡ್ನಿಯಲ್ಲಿ ಪುನೀತ್ ಅವರ ಆತ್ಮೀಯ ಗೆಳೆಯ ಜಯಪ್ರಕಾಶ್ ಇದ್ದಾರೆ. ಕನ್ನಡ ಚಿತ್ರಗಳ ಬಿಡುಗಡೆ ಮತ್ತು ಕನ್ನಡ ಪರ ಕಾರ್ಯಕ್ರಮಗಳಿಗೆ ಬೆಂಬಲ ಕೊಡುತ್ತಾ, ಅಸ್ಟ್ರೇಲಿಯಾದಲ್ಲಿ ಕನ್ನಡತನವನ್ನು ಪಸರಿಸುತ್ತಿರುವ ಹೆಮ್ಮೆಯ ಕನ್ನಡಿಗ ಜಯಪ್ರಕಾಶ್. ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಕುವೆಂಪು ಅವರ ಮಂತ್ರ ಜಯಪ್ರಕಾಶ್ ಅವರ ಮಂತ್ರವೂ ಹೌದು. ಡಾ.ರಾಜ್‍ಕುಮಾರ್ ಅಪ್ಪಟ ಅಭಿಮಾನಿ. ಇವರ ಶ್ರಮದ ಫಲವಾಗಿಯೇ ಸಿಡ್ನಿಯ ಪಾರ್ಕಿಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣವಾಗಿದೆ.

ಆಕಾಶ್ ಚಿತ್ರದ ವೇಳೆ ಪರಿಚಯವಾದವರು ಅಪ್ಪು. ಅದಾದ ಮೇಲೆ ಹಲವು ಕಾರ್ಯಕ್ರಮ ಮಾಡಿದ್ದೇವೆ. ಇಲ್ಲಿನ ಕಾರ್ಯಕ್ರಮಗಳಿಗೆ ಚಿತ್ರರಂಗದಿಂದ ಯಾರೇ ಬೇಕು ಎಂದರೂ ಅಪ್ಪು ಅವರಿಗೆ ಕರೆ ಮಾಡುತ್ತಿದ್ದೆ. ಬೇರೆಯವರು ಅಷ್ಟಾಗಿ ಪರಿಚಯವಿರಲಿಲ್ಲ. ಯಾರನ್ನೇ ಕೇಳಿದರೂ ಪುನೀತ್ ಅವರಿಂದ ಕೆಲಸವಾಗುತ್ತಿತ್ತು. ಇಲ್ಲಿಗೆ ಬಂದಾಗ ಈ ಪಾರ್ಕ್‍ನಲ್ಲಿಯೇ ಓಡಾಡುತ್ತಿದ್ದರು ಪುನೀತ್. ಆ ನೆನಪಿಗಾಗಿ ಸಿಡ್ನಿಯ ಕೌನ್ಸಿಲ್‍ನಲ್ಲಿ ಪ್ರಸ್ತಾಪ ಮಾಡಿ ಪಾರ್ಕ್‍ಗೆ ಪುನೀತ್ ರಾಜಕುಮಾರ್ ಹೆಸರು ಇಟ್ಟಿದ್ದೇವೆ ಎಂದಿದ್ದಾರೆ ಜಯಪ್ರಕಾಶ್.

ಪಾರ್ಕ್‍ಗೆ ಹೆಸರು ಕೊಡಿಸಲು ಮಹಮ್ಮದ್ ಎಂಬುವವರು ಸಿಡ್ನಿಯ ಕೌನ್ಸಿಲ್‍ನಲಿ ್ಲ ನಮಗಾಗಿ ಶ್ರಮ ಪಟ್ಟರು. ಅವರಿಗೆ ಧನ್ಯವಾದ ಎಂದಿದ್ದಾರೆ ಜಯಪ್ರಕಾಶ್. ಒಟ್ಟಿನಲ್ಲಿ ಪುನೀತ್ ಹೆಸರಿನಲ್ಲೊಂದು ಗಂಧದ ಗುಡಿ ಆಸ್ಟ್ರೇಲಯಾದ ಸಿಡ್ನಿಯಲ್ಲಿ ರಾರಾಜಿಸುತ್ತಿದೆ.