` ಅಕಾಡೆಮಿ ಕುಟುಂಬಸ್ಥರಿಗೇ ಸೆನ್ಸಾರ್ ಸದಸ್ಯತ್ವ : ಸುನಿಲ್ ಪುರಾಣಿಕ್ ಮತ್ತು ಪುತ್ರ ಸಾಗರ್ ಸ್ಪಷ್ಟನೆ- Exclusive - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 

ಇದೀಗ ತಾನೇ ಸೆನ್ಸಾರ್ ಮಂಡಳಿ ಸದಸ್ಯರ ಪಟ್ಟಿ ಹೊರಬಿದ್ದಿದ್ದು, ಮಂಡಳಿಯಲ್ಲಿರುವ ಬಹುತೇಕರು ಸಿನಿಮಾ ಗಾಳಿ ಗಂಧ ಗೊತ್ತಿಲ್ಲದವರು ಹಾಗೂ ಟಿವಿ, ಸೀರಿಯಲ್ಲುಗಳಲ್ಲೇ ನಟಿಸಿದವರು ಎಂಬ Exclusive Report  ಚಿತ್ರಲೋಕದಲ್ಲಿ ಪ್ರಕಟವಾಗಿತ್ತು. ಸೆನ್ಸಾರ್ ಮಂಡಳಿಯೇನು ಅಕಾಡೆಮಿ ಅಧ್ಯಕ್ಷರು, ಕುಟುಂಬದವರಿಗೇ ಮೀಸಲಾಗಿದೆಯಾ, ಬೇರೆ ಪ್ರತಿಭಾವಂತರೇ ಇಲ್ಲವಾ ಎಂದು ಧ್ವನಿಯೆತ್ತಿತ್ತು ಚಿತ್ರಲೋಕ. ಈ ವರದಿಗೆ ಸಂಬಂಧಪಟ್ಟಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಪ್ರತಿಕ್ರಿಯೆ ನೀಡಿದ್ಧಾರೆ.ಸುನಿಲ್ ಪುರಾಣಿಕ್ ಅವರ ಪುತ್ರ ಸಾಗರ್ ಅವರಿಗೂ ಸೆನ್ಸಾರ್ ಕಮಿಟಿಯಲ್ಲಿ ಸ್ಥಾನ ಸಿಕ್ಕಿದೆ. 

ನನ್ನ ಮಗನಿಗೆ ಸ್ಥಾನ ಸಿಕ್ಕಿರುವುದಕ್ಕೂ ನನಗೂ ಸಂಬಂಧವಿಲ್ಲ. ನನ್ನ ಮಗ ಸ್ವತಂತ್ರನಾಗಿದ್ದು, ಚಿತ್ರರಂಗದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾನೆ. ನನ್ನ ಮಗನಿಗೆ ಸೆನ್ಸಾರ್ ಮಂಡಳಿ ಸದಸ್ಯತ್ವ ಸಿಕ್ಕಿರುವುದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ನನ್ನ ಪುತ್ರ ನನ್ನನ್ನೂ ಮೀರಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾನೆ. ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ ಸುನಿಲ್ ಪುರಾಣಿಕ್.

ಸುನಿಲ್ ಪುರಾಣಿಕ್ ಅವರ ಪುತ್ರ ಸಾಗರ್ ಕೂಡಾ ಸ್ಪಷ್ಟನೆ ಕೊಟ್ಟಿದ್ದಾರೆ. 

ರಿಂಗ್ ರೋಡ್ ಎಂಬ ಚಿತ್ರದಲ್ಲಿ (ರಿಂಗ್ ರೋಡ್ ಶುಭಾ ಎಂಬ ಟೈಟಲ್ನ್ನು ಬದಲಿಸಲಾಗಿತ್ತು) ನಾನು ಪ್ರಮುಖ ವಿಲನ್ ಆಗಿ ನಟಿಸಿದ್ದೆ. ಪ್ರಿಯಾ ಬೆಳ್ಳಿಯಪ್ಪ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಎಲ್ಲ ಟೆಕ್ನಿಷಿಯನ್ಗಳೂ ಮಹಿಳೆಯರಾಗಿದ್ದರು. ಅದೊಂದು ಅಪರೂಪದ ದಾಖಲೆಯ ಸಿನಿಮಾ.

ಇನ್ನು ಕನ್ನಡದ ಮೊದಲ ವೆಬ್ ಸರಣಿ ಬೈ2ಬೆಂಗಳೂರು ಕಾನ್ಸೆಪ್ಟ್ ಮಾಡಿದ್ದು ನಾನು. ದಕ್ಷಿಣ ಭಾರತದ ಅತಿದೊಡ್ಡ ಶಾರ್ಟ್ ಫಿಲಂ ಮಹಾನ್ ಹುತಾತ್ಮ. ಆ ಶಾರ್ಟ್ ಫಿಲಂ ನಿರ್ದೇಶಿಸಿದ್ದವನು ನಾನು. ಆ ಶಾರ್ಟ್ ಫಿಲಂಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಉಪರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ಧೇನೆ. ಶಾರ್ಟ್ ಫಿಲಂಗೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗ ನಾನು. ಅಲ್ಲದೆ ಡೊಳ್ಳು ಎಂಬ ಫೀಚರ್ ಫಿಲ್ಮ್ ಡೈರೆಕ್ಟ್ ಮಾಡಿದ್ದೇನೆ. 9ಕ್ಕೂ ಹೆಚ್ಚು ಸೀರಿಯಲ್ಲುಗಳಲ್ಲಿ ನಟಿಸಿದ್ದೇನೆ. ಇದರ ನಡುವೆ ಟಿವಿ ಜಾಹೀರಾತು, ಕಾರ್ಪೊರೇಟ್ ಫಿಲಂಗಳನ್ನೂ ಮಾಡಿದ್ಧೇನೆ. ಕನ್ನಡ ಚಿತ್ರರಂಗದಲ್ಲಿ ನನಗೆ ನನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದೇನೆ ಎಂಬ ಹೆಮ್ಮೆಯಿದೆ ಎಂದಿದ್ದಾರೆ.