` ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vijayalakshmi image
nagamandala fame actress vijayalakshmi

ನಾಗಮಂಡಲ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚತರಾದ ಖ್ಯಾತ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಜಯಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚೆಗಷ್ಟೇ ವಿಜಯಲಕ್ಷ್ಮಿ, ತಮಿಳು ನಟ ಸೀಮನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸೀಮನ್ ತಮಗೆ ಕಿರುಕುಳ ನೀಡುತ್ತಿದ್ದು, ನನಗೆ ಸಹಿಸಲು ಆಗುತ್ತಿಲ್ಲ. ನನಗೆ ಪ್ರಾಸ್ಟಿಟ್ಯೂಟ್ ರೀತಿ ಬಾಳೋಕೆ ಇಷ್ಟವಿಲ್ಲ. ಆದರೆ, ಸೀಮನ್ ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ನಾನು ಕನ್ನಡದವಳು, ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಏಕೈಕ ಕಾರಣಕ್ಕೆ ನನಗೆ ಸೀಮನ್ ಕಿರುಕುಳ ನೀಡುತ್ತಿದ್ದಾನೆ. ನಾನು ಈಗಾಗಲೇ ಮೂರು ಬಿಪಿ ಟ್ಯಾಬ್ಲೆಟ್ ತೆಗೆದುಕೊಂಡಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ನನಗೆ ಬಿಪಿ ಡೌನ್ ಆಗುತ್ತೆ. ಇದೇ ನನ್ನ ಕೊನೆಯ ವಿಡಿಯೋ. ನನ್ನ ಸಾವಿಗೆ ಕಾರಣರಾದ ಸೀಮನ್ ಮತ್ತು ಹರೀಂದ್ರನ್ ಎನ್ನುವವರನ್ನು ಬಿಡಬೇಡಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

you_tube_chitraloka1.gif

ಈ ಹಿಂದೆ ವಿಜಯಲಕ್ಷ್ಮಿ ಸಂಕಷ್ಟದಲ್ಲಿದ್ದಾಗ ನಟ ಸುದೀಪ್ ಮತ್ತು ರವಿಪ್ರಕಾಶ್ ನೆರವಿಗೆ ಬಂದಿದ್ದರು. ಆದರೆ, ನಟಿ ವಿಜಯಲಕ್ಷ್ಮಿ ರವಿಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪದ ವಿರುದ್ಧ ರವಿಪ್ರಕಾಶ್ ವಿಜಯಲಕ್ಷ್ಮಿ ವಿರುದ್ಧ ಕೇಸು ದಾಖಲಿಸಿದ್ದರು. ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಅಕ್ಕ ನನಗೆ ಕರೆ ಮಾಡಿ ರಾಜಿ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ. ಆದರೆ, ನಾನು ರಾಜಿ ಮಾಡಿಕೊಳ್ಳೋದಿಲ್ಲ. ಕಾನೂನು ಸಮರ ಮುಂದುವರಿಸುತ್ತೇನೆ ಎಂದು ರವಿಪ್ರಕಾಶ್ ಹೇಳಿದ್ದರು. ಇದೆಲ್ಲ ಆದ ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮಿ, ತಮಿಳು ನಟನ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Also Read

Raviprakash says he won't compromise in Vijayalakshmi case

ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

Vijayalakshmi Used Me Like A Tissue Paper & Then Made False Accusation: Raviprakash

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery