` Always Justice Will Win - SM Patil - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
regional censor officer natasha dsouza image
sm patil, natasha dsouza

ಸತ್ಯದ ಹಿನ್ನಲೆ ಇದ್ದು ಹೊರಾಟ ನಿರಂತರವಾಗಿದ್ದಾಗ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನಮ್ಮ ಘಟನೆಯೇ ಸಾಕ್ಷಿ.  ಕನ್ನಡವೇ ಗೊತ್ತಿಲ್ಲದ ನತಾಷಾ ಡಿಸೌಜಾ ಎಂಬ ಅಧಿಕಾರಿ ಸೆನ್ಸಾರ್ ಬೋರ್ಡಿನ ಪ್ರದೇಶಿಕ ಅಧಿಕಾರಿಯಾಗಿ ಬಂದು, ಒಂದೇ ತಿಂಗಳಲ್ಲಿ ವಿನಾಕಾರಣ ‘ನಿಮ್ಮನ ಅವಧಿ ಮುಗಿಯಿತು’ ಎಂದು ಸುಳ್ಳು ಹೇಳಿ ನಮ್ಮನ್ನು (6 ಜನ) ಚಿತ್ರ ವೀಕ್ಷಣೆಗೆ ಕರೆಯದೆ ತನ್ನ ಮಾನಸಿಕ ರೋಗ ಮೆರೆದಿದ್ದರು. ನಂತರ ಅವರ ತೀರ್ಮಾನದ ವಿರದ್ಧ ನನ್ನ ಹೋರಾಟ ಶುರುವಾಯಿತು. ಕೇಂದ್ರ ಸರಕಾರಕ್ಕೆ ಪತ್ರ ಬರೆದು ವಿವರ ಕೇಳಿದಾಗ ನಾವು ಈಗಲೂ ಸದಸ್ಯರಾಗಿದ್ದು ನಮ್ಮ ಅವಧಿ ಮುಗಿದಿಲ್ಲ ಅಂತಲೂ ಜೊತೆಗೆ ತಾವು ಯಾರನ್ನೂ ತೆಗೆಯುವಂತೆ ಸೂಚಿಸಿಲ್ಲ ಅಂತಲೂ ನಮಗೆ ಲಿಖಿತ ಮಾಹಿತಿ ಸಿಕ್ಕಿತು. ಈ ವಿವರ ಕೊಟ್ಟು ಪ್ರಶ್ನಿಸಲು ಹೊದಾಗ ನತಾಷಾ ನನ್ನ ಭೇಟಿ ಮಾಡಲು ಹಿಂದೇಟು ಹಾಕಿದರು. ‘ಯೂ ಹ್ಯಾವ್ ರಿಟನ್ ಅಗೇನ್ಸ್ಟ್  ಮೆಡಂ ಇನ್ ಚಿತ್ರ ಲೋಕ ಕಾಮ್ ಸರ್. ದ್ಯಾಟ್ಸ್ ವ್ಹಾಯ್ ಮೆಡಂ ಈಸ್ ಯಾಂಗ್ರೀ ಯಾಂಡ್ ಡಸಂಟ್ ವಾಂಟ್ ಟೂ ಸೀ ಯೂ ಸರ್’ ಎಂದು ಅವರ ಚೇಲಾ ಮಲಯಾಳಿ ಬಾಬು ಬಂದು ಹೇಳಿ ನಮ್ಮನ್ನು ವಾಪಸ್ಸು ಕಳಿಸಿದ್ದ!

Censor Officer Should Go Immediately - SM Patil Writes

ನಾನು ಮತ್ತು ನನ್ನ ಸಹ ಸದಸ್ಯರೊಬ್ಬರು ಸೇರಿ ಕೊರ್ಟಿನ ಮೆಟ್ಟಿಲು ಹತ್ತಲು ತೀರ್ಮಾನಿಸಿ ಖ್ಯಾತ ಲಾಯರ್ ಒಬ್ಬರನ್ನು ಗೊತ್ತು ಮಾಡಿದ್ದೂ ಆಯಿತು. ಜೊತೆಗೆ ವಿವರವಾಗಿ ಈ ಬಗ್ಗೆ ವಿವರವಾಗಿ ಸರಕಾರಕ್ಕೆ ಪತ್ರ ಬರೆದಿದ್ದೂ ಆಯಿತು. ಅಷ್ಟರಲ್ಲಾಗಲೆ ನತಾಷಾ ಅವರ ಕನ್ನಡ ಜ್ನಾನದ ಕೊರತೆಯಿಂದಾಗಿ ಕಿರಿಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಅನ್ಯಾಯ ನಡೆದು ಅದು ಹೊರಾಟದ ಮಟ್ಟಕ್ಕೆ ತಿರುಗಿತ್ತು. ಅದರ ಪರಿಣಾಮ ಮೆಡಂ ಆಗಲೆ ಕೊರ್ಟಿನ ಬೆಂಚಿನ ಮೇಲೆ ಮೂರು ಬಾರಿ ಕುಳಿತು ಬಂದಿದ್ದಾಗಿದೆ. ಜೊತೆಗೆ ಇನ್ನೂ ಹಲವು ಪ್ರಕರಣಗಳು ಚೇಂಬರಿನ ಮೆಟ್ಟಿಲೂ ಹತ್ತಿದ್ದವು. ಮೀಡಿಯಾಗಳಲ್ಲೂ ನತಾಷಾ ವಿರುದ್ಧ ಹಲವರು ತಮಗಾದ ಅನ್ಯಾಯ ತೋಡಿಕೊಂಡಿದ್ದರು. 

ಬಹುಶಃ ಇವೆಲ್ಲವೂ ಸರಕಾರದ ಗಮನ ಸೆಳೆಯಿತೂಂತ ಕಾಣಿಸುತ್ತೆ, ಈಗ ನತಾಷಾಗೆ ‘ಮಾಡಿದ್ದು ಸಾಕಮ್ಮಾ ಇಲ್ಲಿಂದ ತೊಲಗು’ ಎಂದು ಹೇಳಿ ಆರ್ಡರ್ ಹೊರಡಿಸಿದ ಸುದ್ದಿ ಬಂದಿದೆ. ‘ಮೆಡಂ ಮೆಡಂ’ ಎಂದು ಬೆಣ್ಣೆಯಂತೆ ಮಾತಾಡಿ ಮೆಡಂ ಸುತ್ತಮುತ್ತ ಗಿರಕಿ ಹೊಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕೆಲವು ಸದಸ್ಯರು ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ನಮ್ಮ ಮುಖದಲ್ಲಿ ಗೆಲುವಿನ ನಗು ಮಿಂಚುತ್ತಿದೆ. ತುಂಬಾ ಕಷ್ಟ ಪಟ್ಟು ಪ್ರಭಾವ ಬಳಸಿ ಹಿಂದಿದ್ದ ಅಧಿಕಾರಿಗಳನ್ನು ಹಿಂದಿಕ್ಕೆ ‘ಏನೊ ಸಿಗುತ್ತದೆ’ ಎಂಬ ಆಸೆಯಲ್ಲಿ ಬಂದಿದ್ದ ಈ ನತಾಷಾ ಎಂಬ ಅರೆ ಜ್ನಾನದ ಮಹಿಳೆ ಗಂಟು ಮೂಟೆ ಕಟ್ಟುತ್ತಿದ್ದಾರೆ. ದಕ್ಕಿದ್ದು ಸಿಕ್ಕಿದ್ದು ಮಾತ್ರ ಅವಹೇಳನೆ, ಅವಮಾನ. 

ಈ ಮೆಡಂ ಮತ್ತವರ ಚೇಲಾಗಳ ತಂಡ ಹೇಗೆ ಕೆಲಸ ಮಾಡಿದೆ ಎಂಬುದಕ್ಕೆ ತೆಲೆ ತಗ್ಗಿಸುವಂಥ ಒಂದು ಉದಾಹರಣೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ‘ತಿಥಿ’ ಎಂಬ ಚಿತ್ರದಲ್ಲಿ ಎದ್ದು ಕಾಣುತ್ತದೆ. ಮರ್ಮಾಂಗಗಳ ಆಡುಭಾಷೆ ಹೆಸರನ್ನು ಚಿತ್ರದಲ್ಲಿ ಬಳಸುವ ಹಾಗಿಲ್ಲ. ಇಲ್ಲಿಯವರೆಗೆ ಹಾಗೆ ಬಳಸಿದ್ದನ್ನು ನಾವು ನೀವು ಎಲ್ಲೂ ನೊಡಿಯೂ ಇಲ್ಲ. ಆದರೆ ತಿಥಿ ಚಿತ್ರದಲ್ಲಿ ‘ಟಿ ಯೂ ಎನ್ ಎನ್ ಐ’ ಎಂಬ ಪದದ ಬಳಕೆ ನಡೆದಿದೆ. ‘ಡಿ ಇ ಎನ್ ಜಿ ಯು’ ಎಂಬ ಪದದ ಬಳಕೆಯೂ ಇದೆ. ಗಯ್ಯಾಳಿಗಳು ಚಿತ್ರದಲ್ಲಿ ಇಂಥ ಯಾವ ಪದಗಳೂ ಇರಲಿಲ್ಲ. ಹಳ್ಳಿಯ ಸೊಗಡು, ಮತ್ತು ಆ ಚಿತ್ರ ಆಧರಿಸಿದ್ದ ಕಾದಂಬರಿಯಲ್ಲಿ ಬಳಸಲಾಗಿದ್ದ ಬಯ್ಗುಳಗಳು ಮಾತ್ರವೇ ಇದ್ದವು. ಅವಕ್ಕೆ ಕೊಕ್ ಕೊಟ್ಟು ಇವಕ್ಕೆ ಸ್ವಾಗತ ಕೊಟ್ಟಿದ್ದರ ಕಾರಣ ಮತ್ತೆ ಮೀನಿಂಗ್ ಅರ್ಥ ಆಗಲಿಲ್ವಂತೆ ಎಂಬ ಉತ್ತರವೇ ಇತ್ತು! 

ತಾನು ಬೆಳೆದ ಮನೆ ಮತ್ತು ಕಲಿತ ಶಾಲೆ ತನಗೆ ಎಂಥಾ ಸಂಸ್ಕಾರ ಕೊಟ್ಟಿದೆ ಎಂಬುದನ್ನು ತನ್ನ ಕುತಂತ್ರಗಳ ಮೂಲಕ ತೋರಿಸಿಕೊಟ್ಟು ಹೊಗುತ್ತಿರುವ ನತಾಷಾ ಡಿಸೌಜಾಗೆ ಒಂದು ದೊಡ್ಡ ಗುಡ್ ಬೈ. 

ಹಾಗೆಯೇ ನನ್ನ ಹೋರಾಟಕ್ಕೆ ಬೆಂಬಲ ಕೊಟ್ಟ ಚಿತ್ರಲೋಕ ಡಾಟ್ ಕಾಮ್ ಮತ್ತದರ ಸೃಷ್ಟಿ ಕರ್ತ ಶ್ರೀ ವೀರೇಶ್ ಅವರಿಗೂ ನನ್ನ ಅನಂತಾನಂತ ಕೃತಜ್ಞತೆಗಳು. ಅರಿತು ಬೆರೆತು ಸಕಾರಾತ್ಮಕವಾಗಿ ಸ್ಪಂಧಿಸಿದ ತಮಗೂ ಸಹ ನನ್ನ ತುಂಬು ಹೃದಯದ ಧನ್ಯವಾದಗಳು. 

- ಎಸ್.ಎಮ್.ಪಾಟೀಲ್

Also See

Censor Officer Should Go Immediately - SM Patil Writes

Censor Board Inside Story 3 - Writes SM Patil

Censor Board Inside Story 2 - Writes SM Patil

Censor Board Inside Story - 1 Writes SM Patil