ಮೀಟೂ ಅಭಿಯಾನ ದಿನೇ ದಿನೇ ಒಬ್ಬೊಬ್ಬರನ್ನೇ ಸುಳಿಗೆ ಎಳೆದುಕೊಳ್ಳುತ್ತಿದೆ. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್, ರವಿ ಶ್ರೀವತ್ಸ ವಿರುದ್ಧ ಸಂಜನಾ ಗರ್ಲಾನಿ ಸೇರಿದಂತೆ ಹಲವರು `ನನಗೂ ಕಿರುಕುಳವಾಗಿತ್ತು' ಎಂದು ಹೇಳಿಕೊಳ್ಳುತ್ತಿರುವಾಗ, ತಿಥಿ ಚಿತ್ರದ ಬರಹಗಾರ, ಬಳೆ ಕೆಂಪ ನಿರ್ದೇಶಕರೂ ಆಗಿರುವ ಈರೇಗೌಡರ ಮೇಲೆ ಮೀಟೂ ಆರೋಪ ಕೇಳಿ ಬಂದಿದೆ.
ಈರೇಗೌಡ, ಬ್ಯಾಡರಹಳ್ಳಿಯಲ್ಲಿರೋ ತಮ್ಮ ಗೆಳೆಯನ ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಆ ಮನೆಯಲ್ಲಿದ್ದಾಗ ನನ್ನ ದೇಹದ ಮೇಲೆ ಬಲವಂತವಾಗಿ ಕೈ ಆಡಿಸಿದ್ದರು. ನನ್ನೆದುರೇ, ಹಸ್ತಮೈಥುನ ಮಾಡಿಕೊಂಡಿದ್ದರು. ನನ್ನ ದೇಹದ ಮೇಲೆ ವೀರ್ಯ ಚೆಲ್ಲಿದ್ದರು ಎಂದೆಲ್ಲ ಬರೆದುಕೊಂಡಿದ್ದಾರೆ.
ಈರೇಗೌಡ, ತಿಥಿ ಚಿತ್ರದ ಕತೆಗಾರ. ಬಳೆ ಕೆಂಪ ಚಿತ್ರದ ನಿರ್ದೇಶಕ. ಅವರ ವಿರುದ್ಧ ಅನಾಮಿಕೆಯೊಬ್ಬರು ಸಿಡಿಸಿದ ಈ ಮೀಟೂ ಬಾಂಬ್‍ನಿಂದಾಗಿ ಅವರ ನಿರ್ದೇಶನದ ಬಳೆಕೆಂಪ ಚಿತ್ರ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ನಿಂದ ಹೊರಬಿದ್ದಿದೆ. ನವೆಂಬರ್ 1ರಿಂದ ನವೆಂಬರ್ 4ರವರೆಗೆ ಧರ್ಮಶಾಲಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಆ ಉತ್ಸವದಲ್ಲಿ ಬಳೆ ಕೆಂಪ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈಗ ಮೀಟೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರವನ್ನು ಚಿತ್ರೋತ್ಸವದಿಂದ ಹೊರಗಿಡಲಾಗಿದೆ.
ಅನಾಮಿಕೆಯೊಬ್ಬರ ಈ ಪತ್ರವನ್ನು ಶೃತಿ ಹರಿಹರನ್ ಶೇರ್ ಮಾಡಿದ್ದು, ಟೈಮ್ಸ್ ಆಫ್ ಈರೇಗೌಡ ಎಂದು ಬರೆದುಕೊಂಡಿದ್ದಾರೆ.