` hdk son nikhil gowda - chitraloka.com | Kannada Movie News, Reviews | Image

hdk son nikhil gowda

 • ನಿಖಿಲ್ ಕುಮಾರಸ್ವಾಮಿ ರಾಜ.. ರಾಣಿ ರಚಿತಾ.. 

  seetharama kalyana raja rani song

  ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಹಾಡು ರಿಲೀಸ್ ಆಗಿದೆ. ಇದು ಸೀತಾರಾಮ ಕಲ್ಯಾಣದ ಹಾಡು. ಹಾಡು ಇರುವುದೇ ರಚಿತಾ ರಾಮ್ ಮೇಲೆ. ಗುಳಿಕೆನ್ನೆ ಚೆಲುವೆಯನ್ನು ಹಾಡಿನಲ್ಲಿ ಮನಮೋಹಿನಿ, ಹಟ್ಟಿ ಚಿನ್ನದ ಗಣಿ, ಮುದ್ದು ಗಿಣಿ, ಕಾಳಿದಾಸನ ಕಾವ್ಯ ಎಂದೆಲ್ಲ ಬಣ್ಣಿಸಲಾಗಿದೆ.

  ಪ್ರೇಮ ನಿವೇದನೆಯ ಹಾಡು, ಹಾಡಿನ ವಿಡಿಯೋದಲ್ಲಿ ಬಳಸಿರುವ ಫೋಟೋಗಳಲ್ಲಿ ನಿಖಿಲ್-ರಚಿತಾ ಕೆಮಿಸ್ಟ್ರಿ ಶೃಂಗಾರ ಕಾವ್ಯದಂತಿದೆ. ನಿರ್ದೇಶಕ ಹರ್ಷ, ಲಿರಿಕಲ್ ಹಾಡನ್ನೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

  ಸುಕನ್ಯ ಸಾಹಿತ್ಯ ಬರೆದಿರುವ ಹಾಡಿಗೆ ಅನೂಪ್ ರೂಬಿನ್ಸ್ ಸಂಗೀತ ಸಂಯೋಜಿಸಿದ್ದು, ಅರ್ಮಾನ್ ಮಲ್ಲಿಕ್ ಹಾಡು ಹಾಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್‍ನ್ನು ರಿಲೀಸ್ ಮಾಡಿರುವುದು ಸಿಎಂ ಕುಮಾರಸ್ವಾಮಿ. 

 • ನಿಖಿಲ್-ರೇವತಿ ಕಲ್ಯಾಣ

  nikhil kumarswamy revathi marraige

  ಅದ್ಧೂರಿಯಾಗಿ ನಡೆಯಬೇಕಿದ್ದ ನಿಖಿಲ್ ಕುಮಾರಸ್ವಾಮಿ ವಿವಾಹ ಸರಳವಾಗಿ ನೆರವೇರಿದೆ. ರಾಮನಗರದ ಕೇತಗಾನಹಳ್ಳಿ ಸಮೀಪದ ತೋಟದ ಮನೆಯಲ್ಲಿ ವಿವಾಹ ಮಹೋತ್ಸವ ನೆರವೇರಿದೆ.

  ಬೆಳಗ್ಗೆ 6 ಗಂಟೆಯಿಂದಲೇ ಮದುವೆ ಶಾಸ್ತ್ರಗಳು ಶುರುವಾದವು. ಕುಟುಂಬ ಸದಸ್ಯರನ್ನು ಬಿಟ್ಟರೆ ಬೇರೆಯವರಿಗೆ ಪ್ರವೇಶವೇ ಇರಲಿಲ್ಲ. ತೋಟದಿಂದ ಸುಮಾರು ಕಿಲೋಮೀಟರುಗಳ ದೂರದಲ್ಲಿ ಸುತ್ತಲೂ ಪೊಲೀಸರು ಬ್ಯಾರಿಕೋಟೆ ನಿರ್ಮಿಸಿದ್ದರು.

  ಬೆಳಗ್ಗೆ 9ರಿಂದ 9.45ರೊಳಗೆ ನಡೆದ ಮುಹೂರ್ತದಲ್ಲಿ ನಿಖಿಲ್ ಕುಮಾರಸ್ವಾಮಿ ರೇವತಿಯವರಿಗೆ ಮಾಂಗಲ್ಯಧಾರಣೆ ಮಾಡಿದರು.

 • ಭಾವೀ ಸೊಸೆಯಲ್ಲಿ ಮಗಳನ್ನು ಕಂಡ ಕುಮಾರಸ್ವಾಮಿ

  kumaraswamya considers his daughter in law as his daughter

  ಅಪ್ಪ ಈಗಾಗಲೇ ರೇವತಿಯನ್ನು ಮಗಳೇ ಎನ್ನುತ್ತಿದ್ದಾರೆ. ನನ್ನ ಮೇಲಿನ ಅವರ ಪ್ರೀತಿ ಎಲ್ಲಿ ಅವರ ಕಡೆ ಟ್ರಾನ್ಸ್‍ಫರ್ ಆಗುತ್ತೋ ಎಂದು ನಾನು ಯೋಚಿಸುತ್ತಿದ್ದೇನೆ. ಇದು ನಿಖಿಲ್ ಕುಮಾರಸ್ವಾಮಿ ಮಾತು. ಭಾವೀ ಪತ್ನಿ ರೇವತಿಯ ಕುರಿತು ಮಾತನಾಡಿರುವ ನಿಖಿಲ್ `ನಾನಿನ್ನೂ ರೇವತಿ ಜೊತೆ ಮಾತನಾಡಿಲ್ಲ. ಸೂಕ್ಷ್ಮ ಮನಸ್ಸಿನ ಹುಡುಗಿ ಎನ್ನುತ್ತಿದ್ದಾರೆ. ನಾನು ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಬಲ್ಲೆ. ಅವರು ನನಗೆ ಪರ್ಫೆಕ್ಟ್ ಜೋಡಿಯಾಗುತ್ತಾರೆ ಎಂಬ ನಂಬಿಕೆಯಿದೆ' ಎಂದಿದ್ದಾರೆ.

  ಫೆಬ್ರವರಿ 10ರಂದು ಬೆಂಗಳೂರಿನಲ್ಲಿಯೇ ನಿಶ್ಚಿತಾರ್ಥ ನಡೆಯಲಿದೆ. ಏಪ್ರಿಲ್‍ನಲ್ಲಿ ಮದುವೆ ನಡೆಯಲಿದೆ. ಲೇಔಟ್ ಕೃಷ್ಣಪ್ಪ ಅವರ ಅಣ್ಣ ಲೇಔಟ್ ಮಂಜುನಾಥ್ ಅವರ ಮಗನ ಮಗಳು ರೇವತಿ. ಎಲೆಕ್ಟ್ರಿಕಲ್ ಎಂಜಿನಿಯರ್ ಓದಿದ್ದಾರಂತೆ. ರೇವತಿಯವರ ಇನ್ನೊಂದು ಹೆಸರು ರಿತಿ. ಅಂದಹಾಗೆ ರೇವತಿಯವರಿಗೆ ಸಿನಿಮಾ ರಂಗದ ಜೊತೆ ಯಾವುದೇ ರೀತಿಯ ಕಾಂಟ್ಯಾಕ್ಟ್ ಕೂಡಾ ಇಲ್ಲ.

 • ಮಗನ ಅಭಿನಯ ಮೆಚ್ಚಿಕೊಂಡ ಮುಖ್ಯಮಂತ್ರಿ

  hd kumaraswamy appreciates nikhil in kurukshetra

  ರಾಜ್ಯದಲ್ಲೀಗ ಸರ್ಕಾರ ಉಳಿಯುತ್ತಾ.. ಉರುಳುತ್ತಾ ಅನ್ನೊದೇ ದೊಡ್ಡ ಚರ್ಚೆ. ಆದರೆ, ಸಿಎಂ ಆಗಿರುವ ಕುಮಾರಸ್ವಾಮಿ ಮಾತ್ರ ಕೂಲಾಗೇ ಇದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ತೆಗೆದುಕೊಂಡು, ಇನ್ನೂ ಕೆಲವು ಶಾಸಕರು ಸಿಡಿದೆದ್ದಿದ್ದಾರೆ ಎಂಬ ಸೂಚನೆಯಿದ್ದರೂ.. ಅವರು ಮಾತ್ರ ಕೂಲ್ ಕೂಲ್. ಅವರು ನೆಮ್ಮದಿಯಾಗಿ.. ನಿರಾಳವಾಗಿ  ಮುನಿರತ್ನ ಅವರ ಮನೆಗೆ ಹೋಗಿ.. ಕುರುಕ್ಷೇತ್ರ ಚಿತ್ರದ ಒಂದು ಹಾಡು ನೋಡಿದ್ದಾರೆ. ಅಭಿಮನ್ಯು ಆಗಿ ನಟಿಸಿರುವ ಮಗನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

  ಕುರುಕ್ಷೇತ್ರ ಚಿತ್ರ ಈಗಾಗಲೇ ಒಂದೂವರೆ ವರ್ಷ ತಡವಾಗಿದೆ. ಈ ಕುರಿತು ಮಾತನಾಡಿರುವ ಮುನಿರತ್ನ, ಚಿತ್ರದ 2ಡಿ ಪ್ರಿಂಟ್ ರೆಡಿಯಾಗಿದೆ. 3ಡಿ ಪ್ರಿಂಟ್ ರೆಡಿಯಾಗುತ್ತಿದೆ. ಎರಡೂ ವರ್ಷನ್ ರೆಡಿಯಾದ ಮೇಲೆ ರಿಲೀಸ್ ಎಂದಿದ್ದಾರೆ.

 • ಸೀತಾರಾಮ ಕಲ್ಯಾಣಕ್ಕೆ ಏನಪ್ಪಾ ಇದು ಡಿಮ್ಯಾಂಡು..?

  seetharama kalyana dubbing rights on demand

  ಸೀತಾರಾಮ ಕಲ್ಯಾಣ. ಇದು ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅಭಿನಯದ ಸಿನಿಮಾ. ಸಾಲು ಸಾಲು ಹಿಟ್ ಕೊಟ್ಟಿರುವ ಹರ್ಷ ನಿರ್ದೇಶನದ ಸಿನಿಮಾ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ರಿಲೀಸ್‍ಗೂ ಮೊದಲೇ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿದೆ.

  ಸೀತಾರಾಮ ಕಲ್ಯಾಣದ ಹಿಂದಿ ಡಬ್ಬಿಂಗ್ ರೈಟ್ಸ್, 5.5 ಕೋಟಿಗೆ ಮಾರಾಟವಾಗಿದೆ. ಬಾಲಿವುಡ್‍ನ ಆರ್‍ಕೆ ಸ್ಟುಡಿಯೋಸ್ ಸಿನಿಮಾವನ್ನು ಖರೀದಿಸಿದೆ.

  ಕುಮಾರಸ್ವಾಮಿ, ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರಲು ನಿರ್ಧರಿಸಿದ್ದರು. ಚಿತ್ರದ ಪ್ರತಿ ಹಂತದಲ್ಲೂ ನಿಖಿಲ್ ತೊಡಗಿಸಿಕೊಂಡಿದ್ದರು. ಇದು ಸಿನಿಮಾಗೆ ಬಹಳ ಪ್ಲಸ್ ಆಯ್ತು. ಇದೆಲ್ಲದರ ಫಲವೇ ಚಿತ್ರದ ಸ್ಯಾಟಲೈಟ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಹರ್ಷ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery