` santhosh anandram, - chitraloka.com | Kannada Movie News, Reviews | Image

santhosh anandram,

  • Yuvaratna' Teaser Released

    yuvaratna teaser released

    The first teaser of Puneeth Rajkumar starrer 'Yuvaratna' was released on Monday evening in the Hombale Films channel of You Tube. The teaser depicts Puneeth playing the game of Rugby and winning it.

    Director Santhosh Anandaram had earlier announced that the first teaser of 'Yuvaratna' will be released on the 07th of October at 5.30 PM. Accordingly, the teaser was released and is getting good response, especially about Puneeth's dialogues and the making.

    'Yuvaratna' is scripted and directed by Santhosh Anandaram and produced by Vijay Kiragandoor under Hombale Films. Sayesh Sehgal is the heroine. Prakash Rai,  Dhananjay, John Kokken, Diganth, Sonu and others play prominent roles in the film. S S Thaman is the music composer.

  • ಅ.7.. ಸಂಜೆ 5.30.. ಯುವರತ್ನ ಹಬ್ಬ ಆರಂಭ

    yuvaratna teaser date fixed

    ಯುವರತ್ನ ಟೀಸರ್ ಯಾವಾಗ..? ಟ್ರೇಲರ್ ಯಾವಾಗ..? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರನ್ನು ಕಾಡಿದ್ದ ಪುನೀತ್ ಅಭಿಮಾನಿಗಳು, ಕೊನೆಗೆ ತಾವೇ ಬಿಡುಗಡೆ ದಿನಾಂಕವನ್ನೂ ಘೋಷಿಸಿಬಿಟ್ಟಿದ್ದರು. ಅಭಿಮಾನಿಗಳ ಈ ಪ್ರೀತಿಯ ಕಾಟಕ್ಕೆ ಮಣಿದ ಸಂತೋಷ್ ಆನಂದ್ ರಾಮ್, ಚಿತ್ರದ ಪ್ರೊಡಕ್ಷನ್ ಹಂತದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಯುವರತ್ನ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ.

    ಅಕ್ಟೋಬರ್ 7ರ ಹಬ್ಬದಂದು ಸಂಜೆ 5.30ಕ್ಕೆ ಹೊಂಬಾಳೆ ಫಿಲಂಸ್‍ನ ಯೂಟ್ಯೂಬ್ ಚಾನೆಲ್‍ನಲ್ಲಿ ಯುವರತ್ನ ಟೀಸರ್ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ಟೀಸರ್‍ನ ಡಬ್ಬಿಂಗ್ ಮುಗಿಸಿದ್ದೇನೆ ಎಂದು ವಿಷಯ ತಿಳಿಸಿದ್ದರು ಪುನೀತ್.

    ಸ್ಸೋ.. ಗೆಟ್ ರೆಡಿ ಟು ಯುವರತ್ನ ಟೀಸರ್.

  • ಅಕ್ಟೋಬರ್ 10ಕ್ಕೆ ರಾಜಕುಮಾರರ ಹೊಸ ಸಿನಿಮಾ ಟೈಟಲ್ ಬಿಡುಗಡೆ

    puneeth's new film title on oct 10th

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಮಾಚಾರಿ, ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್‍ರಾಮ್, ರಾಜಕುಮಾರ ಖ್ಯಾತಿಯ ಹೊಂಬಾಳೆ ಪ್ರೊಡಕ್ಷನ್ಸ್‍ನ ಹೊಸ ಚಿತ್ರದ ಟೈಟಲ್ ಏನೆಂದು ಗೊತ್ತಾಗುವ ಕಾಲ ಕೂಡಿ ಬಂದಿದೆ. ಅಕ್ಟೋಬರ್ 10ಕ್ಕೆ ಚಿತ್ರದ ಟೈಟಲ್ ಬಿಡುಗಡೆಯಾಗುತ್ತಿದೆ. ಇದನ್ನು ಸ್ವತಃ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹೇಳಿಕೊಂಡಿದ್ದಾರೆ.

    ಸದ್ಯಕ್ಕೆ ಪುನೀತ್, ನಟಸಾರ್ವಭೌಮ ಚಿತ್ರದ ಡಬ್ಬಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ನಟಸಾರ್ವಭೌಮ ರಿಲೀಸ್ ಹೊತ್ತಿಗೆ ಹೊಸ ಚಿತ್ರದ ಚಿತ್ರೀಕರಣವೂ ಶುರುವಾಗುವ ನಿರೀಕ್ಷೆ ಇದೆ.

  • ಅದೇ ಜೋಡಿ.. ಅದೇ ಮೋಡಿ.. ಮತ್ತೆ ರಾಜಕುಮಾರ..

    rajkumara jodi to create craze again

    ರಾಜಕುಮಾರ ಜೋಡಿ ಮತ್ತೆ ಒಂದಾಗಿದೆ. ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಹೊಂಬಾಳೆ ಫಿಲ್ಮ್ಸ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ಟೈಟಲ್ ಹೆಚ್ಚೂ ಕಡಿಮೆ ಫೈನಲ್ ಆಗಿದೆಯಂತೆ. ಅನೌನ್ಸ್ ಮಾಡೋದಷ್ಟೇ ಬಾಕಿ.

    ಇದು ಪುನೀತ್‍ಗೆ 29ನೇ ಸಿನಿಮಾ ಆದರೆ, ಸಂತೋಷ್ ಆನಂದ್‍ರಾಮ್‍ಗೆ 3ನೇ ಸಿನಿಮಾ. ಹೊಂಬಾಳೆ ಫಿಲ್ಸ್ಮ್‍ಗೆ 6ನೇ ಸಿನಿಮಾ. ನಟಸಾರ್ವಭೌಮ ಮುಗಿದ ನಂತರ ಹೊಂಬಾಳೆ ಸಿನಿಮಾ ಶುರುವಾಗಲಿದೆ. 

  • ಅಪ್ಪು ನಟಿಸಬೇಕಿದ್ದ ಚಿತ್ರಕ್ಕಿಗ ಯುವರಾಜ್ ಹೀರೋ

    ಅಪ್ಪು ನಟಿಸಬೇಕಿದ್ದ ಚಿತ್ರಕ್ಕಿಗ ಯುವರಾಜ್ ಹೀರೋ

    ರಾಜಕುಮಾರ ಮತ್ತು ಯುವರತ್ನ ಚಿತ್ರಗಳ ನಂತರ ಮತ್ತೊಮ್ಮೆ ಸಂತೋಷ್ ಆನಂದರಾಮ್ ಮತ್ತು ಪುನೀತ್ ಒಟ್ಟಿಗೇ ಮಾಡಬೇಕಿದ್ದ ಕಥೆ ಅದು. ಕಥೆ ಪುನೀತ್‍ಗೆ ಇಷ್ಟವಾಗಿತ್ತು. ಸಂತೋಷ್ ಆನಂದರಾಮ್, ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮುಗಿಸಿದ ನಂತರ ಇದು ಸೆಟ್ಟೇರಬೇಕಿತ್ತು. ಪುನೀತ್ ಅವರ ಹಲವು ಚಿತ್ರಗಳಂತೆಯೇ ಇದೂ ಕೂಡಾ ಸ್ಥಗಿತಗೊಂಡಿತ್ತು. ಈಗ ಆ ಕಥೆಯನ್ನು ಪುನೀತ್ ಅವರ ಮುದ್ದಿನ ಹುಡುಗ ಯುವರಾಜ್ ಅವರಿಗಾಗಿ ಮಾಡೋಕೆ ಸಂತೋಷ್ ಆನಂದರಾಮ್ ಮುಂದಾಗಿದ್ದಾರಂತೆ.

    ಯುವರಾಜ್, ರಾಘವೇಂದ್ರ ರಾಜ್‍ಕುಮಾರ್ ಅವರ ಮಗ. ವಿನಯ್ ಅವರ ತಮ್ಮ. ನಟಸಾರ್ವಭೌಮ ಚಿತ್ರದ ಈವೆಂಟ್‍ನಲ್ಲಿ ಅದ್ಭುತ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದರು. ಐತಿಹಾಸಿಕ ಪಾತ್ರವೊಂದರ ಟ್ರೇಲರ್ ಕೂಡಾ ರಿಲೀಸ್ ಆಗಿತ್ತು. ವ್ಹಾವ್ ಎನಿಸಿತ್ತು. ಅವರೇ ಈಗ ಅಪ್ಪು ಒಪ್ಪಿದ್ದ ಕಥೆಯ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

    ನಿರ್ಮಾಪಕರು ಯಾರು ಅನ್ನೋದು ಫೈನಲ್ ಆಗಿಲ್ಲ. ಪುನೀತ್ ಜೊತೆಗಿನ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರಾಗಬೇಕಿತ್ತು. ಈಗ ಹೊಂಬಾಳೆಯೋ, ಪಿಆರ್‍ಕೆಯೋ ಖಚಿತವಿಲ್ಲ. ಜನವರಿ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  • ಅಭಿಮಾನಿ ದೇವರ ಆಕ್ರೋಶಕ್ಕೆ ಶರಣಾದ ಯುವರತ್ನ ನಿರ್ದೇಶಕ

    director santhosh anandram requets to appu's angry fan

    ಪವರ್ ಸ್ಟಾರ್ ಪುನೀತ್, ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಯುವರತ್ ಸಿನಿಮಾ ಶೂಟಿಂಗ್ ಶುರುವಾಗಿ ತಿಂಗಳುಗಳೇ ಆಗಿವೆ. ಆಗೊಂದು ಈಗೊಂದು ಫೋಟೋ ಬಿಟ್ಟರೆ, ಉಳಿದ ವಿಷಯಗಳೆಲ್ಲ ಗುಟ್ಟು ಗುಟ್ಟು. ತಾರಾಬಳಗವೇನೋ ಭಯಂಕರ ದೊಡ್ಡದು. ಆದರೆ, ಇದುವರೆಗೆ ಒಂದು ಟೀಸರ್ ಕೂಡಾ ಹೊರಬಂದಿಲ್ಲ.

    ಇದರಿಂದ ರೊಚ್ಚಿಗೆದ್ದ ಅಭಿಮಾನಿಯೊಬ್ಬ ರಜನಿಕಾಂತ್‍ರ ವಿಡಿಯೋ ಹಾಕಿದ್ದಾನೆ. ಪೇಟಾ ಚಿತ್ರದಲ್ಲಿ ರಜನಿ ಹೇಳೋ ಡೈಲಾಗ್ ಕೊಲೆ ಮಾಡುವ ಮೂಡ್‍ನಲ್ಲಿದ್ದೇನೆ. ಹೆಂಡ್ತಿ, ಮಕ್ಕಳು, ಬಂಧುಬಳಗ ಅಂತೆಲ್ಲ ಯೋಚನೆ ಮಾಡುವವರು ಓಡಿ ಹೋಗ್ಬಿಡಿ. ಒಬ್ಬರನ್ನೂ ಉಳಿಸೋದಿಲ್ಲ ಎನ್ನುವ ಡೈಲಾಗ್ ಅದು.

    ನಾವು ಅಪ್ಪು ಫ್ಯಾನ್ಸ್ ಸದ್ಯಕ್ಕೆ ಇದೇ ಮೂಡ್‍ನಲ್ಲಿದ್ದೇವೆ ಎಂದಿದ್ದಾನೆ ಆ ಮನೋಜ್ ಎಂಬ ಅಪ್ಪು ಅಭಿಮಾನಿ. ನಿರ್ದೇಶಕ ಸಂತೋಷ್ ಆನಂದರಾಮ್ ಅಭಿಮಾನಿಗೆ ಸಮಾಧಾನ ಹೇಳಿದ್ದು ಡೋಂಟ್‍ವರಿ ಬ್ರದರ್, ಇನ್ನೊಂದೆರಡು ಮೂರು ದಿನಗಳಲ್ಲಿ ಟೀಸರ್ ಡೇಟ್ ಹೇಳ್ತೇನೆ ಎಂದಿದ್ದಾರೆ.

  • ಇಲ್ಲಿಗಿಂತ ಮೊದಲೇ ಅಲ್ಲಿ ಬರ್ತಾನೆ ಯುವರತ್ನ

    ಇಲ್ಲಿಗಿಂತ ಮೊದಲೇ ಅಲ್ಲಿ ಬರ್ತಾನೆ ಯುವರತ್ನ

    ಯುವರತ್ನ ಚಿತ್ರ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಇಂಡಿಯಾದಲ್ಲಿ ರಿಲೀಸ್ ಆಗುವುದು ಏಪ್ರಿಲ್ 1ಕ್ಕೇ ಇರಬಹುದು. ವಿದೇಶದಲ್ಲಿ ಮಾತ್ರ ಒಂದು ದಿನ ಮೊದಲೇ ರಿಲೀಸ್ ಆಗಲಿದೆ ಯುವರತ್ನ. ಮಾರ್ಚ್ 31ರಂದೇ ಅಮೆರಿಕದ ಟೆಕ್ಸಾಸ್, ಕ್ಯಾಲಿಫೋರ್ನಿಯಾ, ಅರಿಝೋನಾ, ಕೊಲರಾಡೋ, ಫ್ಲೋರಿಡಾ, ಜಾರ್ಜಿಯಾ, ಇಲಿನೊಯಿಸ್, ಮೇರಿಲ್ಯಾಂಡ್, ಮಸಾಚುಸೆಟ್ಸ್, ಮಿಚಿಗನ್, ಮಿನಿಸೋಟಾ, ನಾರ್ತ್ ಕ್ಯಾರಿಲೊನಾ, ಓಹಿಯೋ, ಓರೆಗಾಂವ್, ಫಿಲಿಡಲ್ಫಿಯಾ, ಉತಾ, ವರ್ಜಿನಿಯಾ, ವಾಷಿಂಗ್ಟನ್.. ಮೊದಲಾದೆಡೆ ರಿಲೀಸ್ ಆಗುತ್ತಿದೆ. ಫಾರಿನ್‍ನಲ್ಲೂ ವೀಕೆಂಡ್ ರಿಲೀಸ್ ದೊಡ್ಡ ಮಟ್ಟದಲ್ಲೇ ರಿಲೀಸ್ ಮಾಡುತ್ತಿದೆ. ಇನ್ನೂ ಕೆಲವೆಡೆ ಗುರುವಾರ ರಿಲೀಸ್ ಆಗಲಿದೆ.

    ಅಡ್ವಾನ್ಸ್ ಬುಕಿಂಗ್ ಅಲ್ಲಿ ಕೂಡಾ ಭರ್ಜರಿಯಾಗಿ ನಡೆಯುತ್ತಿದೆ. ಸಂತೋಷ್ ಆನಂದ್‍ರಾಮ್-ಪುನೀತ್ ರಾಜ್‍ಕುಮಾರ್-ವಿಜಯ್ ಕಿರಗಂದೂರು ಕಾಂಬಿನೇಷನ್ ಸಿನಿಮಾ ಟ್ರೆಂಡಿಂಗ್‍ನಲ್ಲಿದೆ.ನಲ್ಲೇ ಭರವಸೆ ಹುಟ್ಟಿಸುವಂತಿದೆ. ಅಂದಹಾಗೆ ಇದು 1990ರಲ್ಲಿ ಮೊಬೈಲ್ ಇಲ್ಲದ ಕಾಲದ, ಇಂಟರ್‍ನೆಟ್, ಸೋಷಿಯಲ್ ಮೀಡಿಯಾ ಯಾವುದೂ ಇಲ್ಲದ ಕಾಲದಲ್ಲಿ ನಡೆಯುವ ಲವ್ ಸ್ಟೋರಿ.

  • ಇಷ್ಟೊಂದ್ ಚಿಕ್ಕೋರಾದ್ರಾ ಅಪ್ಪು..?

    apu growing younger day by day

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿಕ್ಕೋರಾಗಿಬಿಟ್ಟಿದ್ದಾರೆ. ಎಷ್ಟು ಚಿಕ್ಕೋರಂದ್ರೆ, ಅಪ್ಪು, ಅಭಿ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ನಟಿಸಿದ್ದರಲ್ಲ, ಅದಕ್ಕಿಂತ ಚಿಕ್ಕೋವ್ರು. ಯುವರತ್ನ ಚಿತ್ರದಲ್ಲಿ ಪುನೀತ್, ಕಾಲೇಜ್ ಸ್ಟೂಡೆಂಟ್ ಆಗಿ ನಟಿಸುತ್ತಿರೋದು ಗೊತ್ತಿದೆ ತಾನೇ.

    ಅ ಚಿತ್ರದಲ್ಲಿನ ಪುನೀತ್ ಲುಕ್‍ವೊಂದನ್ನ ನಿರ್ದೇಶಕ ಸಂತೋಷ್ ಆನಂದ್‍ರಾಮ್ ರಿಲೀಸ್ ಮಾಡಿದ್ದಾರೆ. ವೈಟ್ & ವೈಟ್‍ನಲ್ಲಿ ಎಂದಿನ ಮುಗ್ದ ನಗೆ ಹೊರಸೂಸುತ್ತಿರುವ ಪುನೀತ್, ಸಿಕ್ಕಾಪಟ್ಟೆ ಯಂಗ್ ಅನ್ನಿಸ್ತಿದ್ದಾರೆ.

    ಸಯೇಷಾ ಸೈಗಲ್ ನಾಯಕಿಯಾಗಿರೋ ಚಿತ್ರದಲ್ಲಿ ಡಾಲಿ ಧನಂಜಯ್, ರಾಧಿಕಾ ಶರತ್‍ಕುಮಾರ್, ವಸಿಷ್ಠ ಸಿಂಹ ಮೊದಲಾದ ಕಲಾವಿದರು ನಟಿಸಿದ್ದು, ಒನ್ಸ್ ಎಗೇಯ್ನ್ ರಾಜಕುಮಾರ ಕಾಂಬಿನೇಷನ್ ಇರುವ ಚಿತ್ರವಿದು. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾದಲ್ಲಿ ಸಂತೋಷ್ ಆನಂದ್‍ರಾಮ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

  • ಊರಿಗೊಬ್ಬ ರಾಜನ ಹಾಲು ಜೇನು ಸ್ಟೆಪ್

    ಊರಿಗೊಬ್ಬ ರಾಜನ ಹಾಲು ಜೇನು ಸ್ಟೆಪ್

    ಯುವರತ್ನ ಚಿತ್ರದ ಊರಿಗೊಬ್ಬ ರಾಜ.. ಹಾಡಿನ ವಿಡಿಯೋ ರಿಲೀಸ್ ಆಗಿದೆ. ಏಪ್ರಿಲ್‍ಗೆ ರಿಲೀಸ್ ಆಗುತ್ತಿರುವ ಚಿತ್ರದ ಊರಿಗೊಬ್ಬ ರಾಜ ಚಿತ್ರದಲ್ಲಿ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿರೋದು ಅಪ್ಪು ಸ್ಟೆಪ್ಸ್.

    ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಯ್ಯೇಷಾ ಸೈಗಲ್, ಪುನೀತ್ ರಾಜ್‍ಕುಮಾರ್‍ಗೆ ಕಾಂಪಿಟೇಷನ್ ಕೊಟ್ಟಿದ್ದಾರೆ. ಡ್ಯಾನ್ಸ್‍ನಲ್ಲಿ ಅಪ್ಪು ವೇಗ ಮತ್ತು ಲಯಕ್ಕೆ ತಕ್ಕಂತೆ ಸಯ್ಯೇಷಾ ಕೂಡಾ ಹೆಜ್ಜೆ ಹಾಕಿದ್ದಾರೆ. ಹೀಗಾಗಿಯೇ ಇದು ಪಕ್ಕಾ ಹಾಲು ಜೇನು ಜೋಡಿ ಎನ್ನುತ್ತಿರೊ ಅಭಿಮಾನಿಗಳು, ಬುಟ್ಟಬೊಮ್ಮ ಹಾಡಿನ ಸ್ಟೆಪ್‍ನ್ನೂ ಇದು ಮೀರಿಸುತ್ತಿದೆ ಎಂದಿದ್ದಾರೆ.

    ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪುನೀತ್ ಜೊತೆ ರಮ್ಯಾ ಬೆಹರಾ ಹಾಡಿದ್ದಾರೆ. ವಿಜಯ್ ಕಿರಗಂದೂರು ಬ್ಯಾನರ್‍ನ ಸಿನಿಮಾ ಏಪ್ರಿಲ್‍ನಲ್ಲಿ ರಿಲೀಸ್ ಆಗುತ್ತಿದೆ.

  • ಕನ್ನಡದ ಹುಡುಗಿಯರಿಗೆ ಯುವರಾಣಿ ಚಾಲೆಂಜ್

    ಕನ್ನಡದ ಹುಡುಗಿಯರಿಗೆ ಯುವರಾಣಿ ಚಾಲೆಂಜ್

    ಈಕೆಯನ್ನು ಸದ್ಯಕ್ಕೆ ಯುವರಾಣಿ ಎನ್ನೋಣ. ಏಕೆಂದರೆ ಇವರು ಯುವರತ್ನ ಚಿತ್ರದ ನಾಯಕಿ. ಸಯೇಶಾ.. ಇವರೀಗ ಕನ್ನಡದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ.

    ಕರ್ನಾಟಕದ ಹುಡುಗಿಯರಿಗೆ ಒಂದು ಚಾಲೆಂಜ್. ನೀವು ನಿಮ್ಮ ಪವರ್ ತೋರಿಸಿ. ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡಿಗೆ ಕುಣಿದು ಡ್ಯಾನ್ಸ್ ಪವರ್ ತೋರಿಸಿ.

     #PowerOfYouthDanceChallenge 

    #Yuvarathnaa   

     ಹ್ಯಾಷ್ ಟ್ಯಾಗ್‍ನಲ್ಲಿ ಅಪ್‍ಲೋಡ್ ಮಾಡಿ ಎಂದಿದ್ದಾರೆ ಸಯೇಶಾ.

    ಬೆಸ್ಟ್ ಪರ್ಫಾಮೆನ್ಸ್‍ಗೆ ಯುವರತ್ನ ಚಿತ್ರದಿಂದ ಸರ್‍ಪ್ರೈಸ್ ಗಿಫ್ಟ್ ಇದೆಯಂತೆ. ನಿರ್ದೇಶಕ ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್ ಅವರಿಂದಲೇ ಈ ಉಡುಗೊರೆ ಸಿಗಲಿದೆಯಂತೆ. ಯುವರತ್ನ ಕ್ರೇಜ್ ಶುರುವಾಗುತ್ತಿದೆ.

  • ಗಟ್ಟಿ ಕಥೆಯ ಸುಳಿವು ಕೊಟ್ಟ ಯುವರತ್ನ ಟ್ರೇಲರ್

    ಗಟ್ಟಿ ಕಥೆಯ ಸುಳಿವು ಕೊಟ್ಟ ಯುವರತ್ನ ಟ್ರೇಲರ್

    ಶಿಕ್ಷಣ ಅನ್ನೋದು ವ್ಯಾಪಾರ ಅಲ್ಲ.. ಅದೊಂದು ಸೇವೆ.. ಒಳ್ಳೆಯ ಕಾಲೇಜು ಅನ್ನಿಸ್ಕೊಳ್ಳೋದು ಅದರ ಫೀಸು, ಡೊನೇಷನ್ನಿಂದ ಅಲ್ಲ.. ಆ ಸಂಸ್ಥೆಯ ಸ್ಟೂಡೆಂಟ್ಸ್ಗಳಿಂದ..

    ಇಂಥಾದ್ದೊಂದು ಚೆಂದದ ಡೈಲಾಗ್ನೊಂದಿಗೇ ಶುರುವಾಗುವ ಟ್ರೇಲರ್ ಯುವರತ್ನ. ಟ್ರೇಲರ್ನಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರೋ ಸಂಭಾಷಣೆಗಳೇ ಚಿತ್ರದಲ್ಲಿ ಒಂದು ಗಟ್ಟಿ ಕಥೆ ಮತ್ತು ಮನಮುಟ್ಟುವ ಸಂದೇಶ ಇದೆ ಅನ್ನೋದನ್ನ ಸಾರಿಬಿಡುತ್ವೆ.

    ವಿದ್ಯೆಯನ್ನು ವ್ಯಾಪಾರ ಮಾಡೋಕೆ ಹೊರಟರೆ, ಪ್ರತಿ ಅಕ್ಷರಕ್ಕೂ ಅದು ಬೆಲೆ ಕಟ್ಟುತ್ತೆ. ವಿದ್ಯೆ ಕಲಿತನಿಗಲ್ಲ..  2 ನಿಮಿಷ 17 ಸೆಕೆಂಡ್ನ ಟ್ರೇಲರ್ನಲ್ಲಿ ಇಂತಹ ಡೈಲಾಗುಗಳ ಜೊತೆ ಅಭಿಮಾನಿಗಳನ್ನು ಖುಷಿ ಪಡಿಸೋ ಸಂಭಾಷಣೆಗಳೂ ಇವೆ.

    ಓಂ ಫಿಲಂ ನೋಡಿದ್ದೀಯಾ ಅನ್ನೋ ವಿಲನ್ ಡೈಲಾಗ್ಗೆ ಅಪ್ಪು ಕೊಡೋ ಉತ್ತರ.. ನಾವೇ ಪ್ರೊಡ್ಯೂಸ್ ಮಾಡಿದ್ದು. ಶಿಳ್ಳೆ ಹಾಕೋಕೆ ಆ ಡೈಲಾಗ್ ಸಾಕು.

    ಅಂದವಾದ ಹೀರೋಯಿನ್, ಟ್ರೇಲರಿನದ್ದಕ್ಕೂ ಕಾಣಿಸಿಕೊಳ್ಳೋ ಪ್ರಕಾಶ್ ರೈ, ಮೈ ನವಿರೇಳಿಸುವ ಸ್ಟಂಟ್ಸ್.. ಜೊತೆಗೆ ಯುವರತ್ನ ಚಿತ್ರದಲ್ಲಿ ಈಗ ಪೆಡಂಭೂತವಾಗಿ ಕಾಡುತ್ತಿರೋ ಡ್ರಗ್ಸ್ ಕಥೆಯೂ ಇರುವ ಸುಳಿವಿದೆ.

    ಚಿತ್ರದ ಕಥೆ ಏನಿರಬಹುದು ಅನ್ನೋದರ ಸುಳಿವನ್ನು ಅಲ್ಲಿ ಕೊಟ್ಟಿದ್ದಾರೆ ಸಂತೋಷ್ ಆನಂದರಾಮ್. 30ಕ್ಕೂ ಹೆಚ್ಚು ಕಲಾವಿದರ ದಂಡನ್ನೇ ಇಟ್ಟುಕೊಂಡು ಒಂದೊಳ್ಳೆ ಮೆಸೇಜ್ ಇರುವ ಸಿನಿಮಾ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ವಿಜಯ್ ಕಿರಗಂದೂರು.

    ಇಡೀ ಚಿತ್ರತಂಡ ಚಿತ್ರದಲ್ಲಿರೋ ಕಥೆ ಮತ್ತು ಚಿತ್ರ ಅಂತಿಮವಾಗಿ ಕೊಡಲಿರೋ ಸಂದೇಶದ ಬಗ್ಗೆಯೇ ಪ್ರೀತಿಯಿಂದ ಮಾತನಾಡುತ್ತಿದೆ. ಹಾಗಂತ.. ಅಭಿಮಾನಿಗಳಿಗೆ ಇಷ್ಟವಾಗದಂತೇನೂ ಇಲ್ಲ. ಈಗಾಗಲೇ ಟ್ರೇಲರ್ ನೋಡಿದವರ ಸಂಖ್ಯೆ ಮಿಲಿಯನ್ ಮಿಲಿಯನ್ ಮಿಲಿಯನ್ ದಾಟಿದೆ. ಏಪ್ರಿಲ್ 1ಕ್ಕೆ ಯುವರತ್ನ ಪ್ರೇಕ್ಷಕರಿಗೆ ಭರ್ಜರಿ ಔತಣ ಫಿಕ್ಸ್.

  • ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!

    ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!

    ನವರಸ ನಾಯಕ ಅನ್ನೋ ಬಿರುದು ಹೊತ್ತಿರೋ ಜಗ್ಗೇಶ್ ಹೆಚ್ಚು ಹೆಚ್ಚಾಗಿ ಗುರುತಿಸಿಕೊಂಡಿದ್ದು ಕಾಮಿಡಿ ಚಿತ್ರಗಳಲ್ಲೇ ಆದರೂ, ಯಾವ ಪಾತ್ರಕ್ಕಾದರೂ ಸೈ ಅನ್ನೋದು ಚಿತ್ರರಂಗಕ್ಕೆ ಗೊತ್ತಿಲ್ಲದೇ ಏನಲ್ಲ. ವಿಲನ್ ಆಗಿಯೂ ಗೆದ್ದು ತೋರಿಸಿರೋ ಜಗ್ಗೇಶ್, ಬೇವು ಬೆಲ್ಲ, ಮೇಕಪ್.. ಸೇರಿದಂತೆ ಹಲವು ಚಿತ್ರಗಳಲ್ಲಿ ಸಕಲ ತಾಕತ್ತನ್ನೂ ತೋರಿಸಿರೋ ನಟ. ಇಂತಹ ಜಗ್ಗೇಶ್ ತಮ್ಮ ವೃತ್ತಿ ಬದುಕಿಗೇ ಈ ಚಿತ್ರ ನವಿಲುಗರಿಯಾಗಲಿದೆ ಎಂದಿರೋದು ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ.

    ಹೊಂಬಾಳೆ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರೋ ಜಗ್ಗೇಶ್‍ಗೆ ನಿರ್ದೇಶನ ಮಾಡುತ್ತಿರೋದು ಹಿಟ್ ಚಿತ್ರಗಳ ಸರದಾರ ಸಂತೋಷ್ ಆನಂದರಾಮ್. ಚಿತ್ರದ ಪೋಸ್ಟರ್ ಈಗಾಗಲೇ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎನ್ನೋದನ್ನು ಸಾಬೀತು ಮಾಡಿದೆ. ಇಡೀ ಚಿತ್ರದ ಚಿತ್ರೀಕರಣ ಮಲೆನಾಡಿನಲ್ಲಿ ನಡೆಯಲಿದೆಯಂತೆ. 

  • ದರ್ಶನ್ ನಂತರ ಪುನೀತ್ ಚಿತ್ರಕ್ಕೂ ಕೊರೋನಾ ಕಾಟ

    corona virus affects yuvaratna movie shooting

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಕೊರೋನಾ ವೈರಸ್ ಭೀತಿ ಬ್ರೇಕ್ ಹಾಕಿತ್ತು. ತಂತ್ರಜ್ಞರು ಮತ್ತು ತಂಡದ ಸೇಫ್ಟಿಯೇ ಮುಖ್ಯ ಎಂದಿದ್ದ ದರ್ಶನ್, ವಿದೇಶದ ಚಿತ್ರೀಕರಣಕ್ಕೇ ಬ್ರೇಕ್ ಹಾಕಿದ್ದರು. ಆದರೆ, ಕೊರೋನಾ ಕಾಟ ಅಷ್ಟಕ್ಕೇ ನಿಂತಿಲ್ಲ. ಅದು ಈಗ ಪುನೀತ್ ಚಿತ್ರಕ್ಕೂ ವಿಸ್ತರಿಸಿದೆ.

    ಪ್ಲಾನ್ ಪ್ರಕಾರ ಇಷ್ಟೊತ್ತಿಗೆಲ್ಲ ಯುವರತ್ನ ಚಿತ್ರತಂಡ ಆಸ್ಟ್ರಿಯಾ ಮತ್ತು ಸ್ಲೊವೇನಿಯಾದಲ್ಲಿರಬೇಕಿತ್ತು. ಆದರೆ ಎಲ್ಲವನ್ನೂ ಉಲ್ಟಾ ಮಾಡಿದೆ ಕೊರೋನಾ. ಕೊರೋನಾ ವೈರಸ್ ಭೀತಿ ಕೂಲ್ ಆಗುವವರೆಗೆ ಚಿತ್ರೀಕರಣವನ್ನೇ ಮುಂದೂಡಿದೆ ಚಿತ್ರತಂಡ. ನಿರ್ಮಾಪಕ ಕಾರ್ತಿಕ್ ಗೌಡ ಇದನ್ನು ಸ್ಪಷ್ಟಪಡಿಸಿದ್ದಾರೆ.

    ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಸಂತೋಷ್ ಆನಂದ್‍ರಾಮ್ ಮತ್ತು ಪುನೀತ್ ಕಾಂಬಿನೇಷನ್ನಿನಿಂದಾಗಿಯೇ ಭರ್ಜರಿ ಕುತೂಹಲ ನಿರೀಕ್ಷೆ ಹುಟ್ಟಿಸಿರುವ 2020ರ ಬಹುನಿರೀಕ್ಷಿತ ಸಿನಿಮಾ ಯುವರತ್ನ.

  • ನಾನು ಒಳ್ಳೆಯ ಡ್ಯಾನ್ಸರ್. ಆದರೆ..

    ನಾನು ಒಳ್ಳೆಯ ಡ್ಯಾನ್ಸರ್. ಆದರೆ..

    ಸಯ್ಯೇಷಾ ಸೈಗಲ್. ಪುನೀತ್ ಎದುರು ಯುವರತ್ನ ಚಿತ್ರದಲ್ಲಿ ನಾಯಕಿಯಾಗಿರುವ ಮುಂಬೈ ಬೆಡಗಿ. ಈಗಾಗಲೇ ಹಿಂದಿ, ತಮಿಳು, ತೆಲುಗಿನಲ್ಲಿ ಅಜಯ್ ದೇವಗನ್, ಕಾರ್ತಿ, ವಿಜಯ್ ಸೇತುಪತಿ, ಆರ್ಯ ಎದುರು ನಟಿಸಿರುವ ಸಯ್ಯೇಷಾ, ಇತ್ತೀಚೆಗೆ ಆರ್ಯ ಜೊತೆ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ಯುವರತ್ನ ಚಿತ್ರವನ್ನು ಒಪ್ಪಿಕೊಂಡ ಟೈಮಿನಲ್ಲೇ ಮದುವೆಯಾದ ಸಯ್ಯೇಷಾ ಯುವರತ್ನ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದುವರೆಗೆ ರಿಲೀಸ್ ಆಗಿರುವ ಟ್ರೇಲರ್ ಮತ್ತು ಹಾಡುಗಳಲ್ಲಿ ಎಲ್ಲರ ಕಣ್ಣು ಕುಕ್ಕಿರುವುದು ಆಕೆಯ ಸೌಂದರ್ಯ ಮತ್ತು ಡ್ಯಾನ್ಸ್.

    ನಾನು ಹುಟ್ಟಿದ್ದು, ಬೆಳೆದಿದ್ದು ಮುಂಬೈನಲ್ಲಿ. ಡ್ಯಾನ್ಸ್ ಗೊತ್ತು. ನನಗೆ ನಾನೊಬ್ಬ ಒಳ್ಳೆಯ ಡ್ಯಾನ್ಸರ್ ಅನ್ನೋ ಹೆಮ್ಮೆಯೂ ಇತ್ತು. ಒಂದು ಡ್ಯಾನ್ಸ್ ಬೇಸ್ ಸಿನಿಮಾ ಮಾಡಿದರೂ ನಟಿಸಬಲ್ಲೆ ಎನ್ನುವ ಕಾನ್ಫಿಡೆನ್ಸ್ ಇತ್ತು. ಆದರೆ, ಯುವರತ್ನ ಚಿತ್ರಕ್ಕೆ ಓಕೆ ಎಂದ ಮೇಲೆ ಪುನೀತ್ ಅವರ ಒಂದಿಷ್ಟು ಡ್ಯಾನ್ಸ್ ವಿಡಿಯೋ ನೋಡಿದೆ. ಅವರ ಸ್ಟೆಪ್ಸ್ ನೋಡಿದ ಮೇಲೆ.. ನನಗೆ ಒಳಗೊಳಗೇ ಒಂದಿಷ್ಟು ಟೆನ್ಷನ್ ಶುರುವಾಯ್ತು. ಇವರ ಲೆವೆಲ್ಲಿಗೆ ನಾನು ಡ್ಯಾನ್ಸ್ ಮಾಡೋಕೆ ಸಾಧ್ಯನಾ ಅನ್ನೋ ಆತಂಕವದು. ಫೈನಲಿ.. ಡ್ಯಾನ್ಸ್ ಚೆನ್ನಾಗಿ ಮಾಡಿದ್ದೇನೆ ಎನ್ನುವ ತೃಪ್ತಿಯಿದೆ. ಥ್ಯಾಂಕ್ಸ್ ಟು ಪುನೀತ್ ಸರ್ ಮತ್ತು ಸಂತೋಷ್ ಆನಂದರಾಮ್ ಎಂದಿದ್ದಾರೆ ಸಯ್ಯೇಷಾ.

    ಹೊಂಬಾಳೆ ಪ್ರೊಡಕ್ಷನ್ಸ್, ಸಂತೋಷ್ ಮತ್ತು ಪುನೀತ್ ಕಾಂಬಿನೇಷನ್ನ ಯುವರತ್ನ, ಕನ್ನಡಕ್ಕೆ ಬರೋಕೆ ನನಗೆ ಒಳ್ಳೆಯ ಆಯ್ಕೆಯಾಗಿತ್ತು. ಅದನ್ನು ಮಿಸ್ ಮಾಡಿಕೊಳ್ಳಲಿಲ್ಲ ಎಂದಿರೋ ಸಯ್ಯೇಷಾ, ಸದ್ಯಕ್ಕೆ ದುಬೈನಲ್ಲಿ  ತಮಿಳು ಚಿತ್ರವೊಂದರ ಶೂಟಿಂಗ್ನಲ್ಲಿದ್ದಾರೆ. ಕೊರೊನಾ ರೂಲ್ಸ್ ಕಾರಣ ಪ್ರಚಾರಕ್ಕೆ ಬರೋಕೆ ಸಾಧ್ಯವಾಗ್ತಿಲ್ಲ. ನಾನು ಬರಬೇಕು ಎಂದರೆ ಮತ್ತೊಮ್ಮೆ ಟೆಸ್ಟ್, ಕ್ವಾರಂಟೈನ್ ಎಲ್ಲವನ್ನೂ ಮಾಡಬೇಕು. ಚಿತ್ರದ ಪ್ರಚಾರವನ್ನು ಮಿಸ್ ಮಾಡಿಕೊಳ್ತಿದ್ದೇನೆ ಅನ್ನೋದು ಸಯ್ಯೇಷಾ ಮಾತು.

     

  • ಪರಶುರಾಮ.. ದೇವತಾ ಮನುಷ್ಯ.. ಜ್ವಾಲಾಮುಖಿ.. ಮುಂದ..?

    what is the name of puneeth anandram's new film

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ಕಾಂಬಿನೇಷನ್‍ನ ಸಿನಿಮಾದ ಟೈಟಲ್ ಏನು..? ನವೆಂಬರ್ 1ಕ್ಕೆ ಅಭಿಮಾನಿ ದೇವರಿಂದ ಸಿನಿಮಾ ಟೈಟಲ್ ಬಿಡುಗಡೆ ಎಂದಿದೆ ಚಿತ್ರತಂಡ. ಆದರೆ, ಗಾಂಧಿನಗರದಲ್ಲಿ ಸಿನಿಮಾದ ಟೈಟಲ್ ಕುರಿತು ಹತ್ತಾರು ಕಥೆಗಳು ಓಡಾಡುತ್ತಲೇ ಇವೆ. 

    ಮೊದಲಿಗೆ ಪರಶುರಾಮ್ ಎಂಬ ಹೆಸರು ಕೇಳಿಬಂದಿತ್ತು. ನಂತರ ಅಲ್ಲ.. ದೇವತಾ ಮನುಷ್ಯ ಅನ್ನೋ ಹೆಸರು ಕಾಣಿಸಿಕೊಳ್ತು. ಈಗ ಅವೆರಡನ್ನೂ ಮೀರಿ ಜ್ವಾಲಾಮುಖಿ ಅನ್ನೋ ಹೆಸರು ಓಡಾಡುತ್ತಿದೆ. ಅಂದಹಾಗೆ ಮೂರಕ್ಕೆ ಮೂರೂ ಅಣ್ಣಾವ್ರ ಚಿತ್ರದ ಹೆಸರುಗಳೇ. ಈ ಮೂರರಲ್ಲಿ ಯಾವುದೋ ಒಂದು ಹೆಸರಿರುತ್ತೆ. ಅಥವಾ.. ನಾಲ್ಕನೇ ಹೆಸರು ಬಂದರೂ ಆಶ್ಚರ್ಯವಿಲ್ಲ.

    ನವೆಂಬರ್ 1ರವರೆಗೂ ಕಾಯದೆ ವಿಧಿಯಿಲ್ಲ.

  • ಪವರ್ ಆನಂದ ಹೊಂಬಾಳೆ ಹ್ಯಾಟ್ರಿಕ್ ಮಿಲನ ಫಿಕ್ಸ್

    ಪವರ್ ಆನಂದ ಹೊಂಬಾಳೆ ಹ್ಯಾಟ್ರಿಕ್ ಮಿಲನ ಫಿಕ್ಸ್

    ಸಂತೋಷ್ ಆನಂದರಾಮ್ ಮುಂದಿನ ಚಿತ್ರವನ್ನೂ ಪುನೀತ್ ಜೊತೆಯಲ್ಲೇ ಮಾಡುತ್ತೇನೆ ಎಂದು ಯುವರತ್ನ ಚಿತ್ರದ ರಿಲೀಸ್ ವೇಳೆಯಲ್ಲೇ ಘೋಷಿಸಿದ್ದರು. ನಾನೂ ರೆಡಿ ಎಂದಿದ್ದರು ಪುನೀತ್. ಇಬ್ಬರೂ ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ. 3ನೇ ಬಾರಿಗೆ. ಒನ್ಸ್ ಎಗೇನ್.. ಈ ಬಾರಿಯೂ ಈ ಜೋಡಿಯ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಹೊಂಬಾಳೆ ಫಿಲಮ್ಸ್.

    ನನ್ನ ಮತ್ತು ಪುನೀತ್ ಸಿನಿಮಾ ಮುಂದಿನ ವರ್ಷ ಚಿತ್ರೀಕರಣ ಶುರುವಾಗಲಿದೆ ಎಂದು ಸ್ವತಃ ಸಂತೋಷ್ ಆನಂದರಾಮ್ ಮಾಹಿತಿ ಕೊಟ್ಟಿದ್ದಾರೆ. ರಾಜಕುಮಾರದಲ್ಲಿ ಹಿರಿಯರನ್ನು ಗೌರವಿಸಬೇಕು ಎಂಬ ಸಂದೇಶ ಸಾರಿದ್ದ ಜೋಡಿ, ಯುವರತ್ನದಲ್ಲಿ ಶಿಕ್ಷಣ ವ್ಯವಸ್ಥೆಯ ಕಥೆ ಇಟ್ಟುಕೊಂಡು ಗೆದ್ದಿತ್ತು. ಈಗ 3ನೇ ಸಿನಿಮಾದಲ್ಲಿ.. ಯಾವ ಸಂದೇಶ ಇರಲಿದೆ ಎಂಬ ಕುತೂಹಲವಂತೂ ಇದೆ.

    ಸದ್ಯಕ್ಕೆ ಪುನೀತ್ ಜೇಮ್ಸ್ ಮತ್ತು ಹೊಂಬಾಳೆ ಫಿಲಮ್ಸ್‍ನಲ್ಲೇ ದ್ವಿತ್ವ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ದಿನಕರ್ ತೂಗುದೀಪ ಚಿತ್ರವೂ ಕ್ಯೂನಲ್ಲಿದೆ. ಅತ್ತ ಹೊಂಬಾಳೆ ಫಿಲಮ್ಸ್ ಲಿಸ್ಟಿನಲ್ಲಿ ಕೆಜಿಎಫ್ ಚಾಪ್ಟರ್ 2, ಸಾಲಾರ್, ದ್ವಿತ್ವ, ಕಾಂತಾರಾ, ರಿಚರ್ಡ್ ಆಂಟನಿ.. ಹೀಗೆ ಸಾಲು ಸಾಲು ಚಿತ್ರಗಳಿವೆ.

  • ಪವರ್ ಸ್ಟಾರ್ ಚಿತ್ರಕ್ಕೆ ದೂದ್‍ಪೇಡ ಎಂಟ್ರಿ..

    diganth jons yuvaratna team

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಕ್ಯಾಂಪ್‍ಗೆ ಇನ್ನೊಬ್ಬ ಸ್ಟಾರ್ ಆಗಮನ. ದೂದ್‍ಪೇಡ ದಿಗಂತ್ ಪ್ರವೇಶ. ದಿಗಂತ್ ಚಿತ್ರದಲ್ಲಿ ಅತಿಥಿ ನಟರಾಗಿ ನಟಿಸುತ್ತಿದ್ದು, ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಚಿತ್ರದಲ್ಲಿ ದಿಗಂತ್ ಬೆಂಗಳೂರು ಡಿಸಿಯಷ್ಟೇ ಅಲ್ಲ, ಪುನೀತ್ ಗೆಳೆಯರೂ ಹೌದು. ಈಗಾಗಲೇ ಚಿತ್ರದಲ್ಲಿ ಪ್ರಕಾಶ್ ರೈ, ಧನಂಜಯ್, ಸೋನುಗೌಡ, ರಾಧಿಕಾ ಶರತ್‍ಕುಮಾರ್ ಮೊದಲಾದ ಸ್ಟಾರ್‍ಗಳಿದ್ದಾರೆ. ಈಗ ದಿಗಂತ್. ಯುವರತ್ನದ ತುಂಬೆಲ್ಲ ಸ್ಟಾರ್‍ಗಳೇ ತುಂಬಿ ತುಳುಕುತ್ತಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾಗೆ ಈಗಾಗಲೇ 45 ದಿನಗಳ ಶೂಟಿಂಗ್ ಮುಗಿದಿದೆ.

  • ಪುನೀತ್, ಪರಶುರಾಮನೋ.. ದೇವತಾ ಮನುಷ್ಯನೋ..?

    puneeth rajkumar's next film is parashurama

    ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್‍ನ ಹೊಸ ಸಿನಿಮಾ ಶೀಘ್ರದಲ್ಲೇ ಶುರುವಾಗಲಿದೆ. ನಟಸಾರ್ವಭೌಮ ಮುಗಿಸಿದ ತಕ್ಷಣ ಈ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಪುನೀತ್. ಚಿತ್ರದ ಕಥೆ ಸಾಮಾಜಿಕ ಸಮಸ್ಯೆಯೊಂದರ ಸುತ್ತ ಇದೆ ಎನ್ನಲಾಗಿದ್ದು, ಕಥೆ ಇನ್ನೂ ಗುಟ್ಟಾಗಿಯೇ ಇದೆ.

    ಇಷ್ಟಕ್ಕೂ ಚಿತ್ರದ ಟೈಟಲ್ ಏನು ಎಂಬ ಪ್ರಶ್ನೆಗೆ ಸಂತೋಷ್ ಆನಂದ್‍ರಾಮ್ ಎದುರು ಎರಡು ಆಯ್ಕೆಗಳಿವೆ. ಒಂದು ಪರಶುರಾಮ್, ಎರಡನೆಯದ್ದು ದೇವತಾ ಮನುಷ್ಯ. ಎರಡೂ ಕೂಡಾ ಡಾ.ರಾಜ್ ಚಿತ್ರಗಳ ಹೆಸರುಗಳೇ. ಪರಶುರಾಮ್, ಪುನೀತ್ ಬಾಲನಟನಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ. ದೇವತಾ ಮನುಷ್ಯ, ಅಣ್ಣಾವ್ರ ಕ್ಲಾಸಿಕ್‍ಗಳಲ್ಲಿ ಒಂದು.

    ಚಿತ್ರತಂಡದ ಒಳಗೆ ಪರಶುರಾಮ ಅನ್ನೋ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆಯಂತೆ. ಆದರೆ, ಚಿತ್ರದ ಟೈಟಲ್ ತಿಳಿದುಕೊಳ್ಳೋಕೆ ಗಣೇಶನ ಹಬ್ಬದವರೆಗೂ ಕಾಯಬೇಕು ಎನ್ನುತ್ತಿದ್ದಾರೆ ಸಂತೋಷ್.

  • ಪೈಲ್ವಾನ್ ಆಫ್ ರೊಮ್ಯಾನ್ಸ್ : ಕಿಚ್ಚನಿಗೆ ಸ್ಟಾರ್ ನಿರ್ದೇಶಕ ಕೊಟ್ಟ ಹೊಸ ಬಿರುದು

    santhosh anandram gives new title to sudeep

    ಪೈಲ್ವಾನ್ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಒಂಚೂರು ತರಲೆ.. ಒಂಚೂರು ರೊಮ್ಯಾನ್ಸ್ ಇರುವ ಹಾಡಿದು. ಕಣ್ಮಣಿಯೇ.. ಕಣ್ಣು ಹೊಡೆಯೇ.. ಎಂಬ ಗೀತೆಯಲ್ಲಿ ಕಿಚ್ಚನ ಹೃದಯಕ್ಕೆ ಕಚಗುಳಿ ಇಟ್ಟಿದ್ದಾರೆ ಆಕಾಂಕ್ಷಾ. ಹಾಡಿನ ಲಿರಿಕಲ್ ವಿಡಿಯೋ ಸೆನ್ಸೇಷನ್ ಸೃಷ್ಟಿಸಿದೆ. ಕಾರಣ ಇಷ್ಟೆ.. ಶೃಂಗಾರ ಗೀತೆಯಲ್ಲಿ ಸುದೀಪ್, ಆಕಾಂಕ್ಷಾ ಮಿಂಚಿ ಮಿನುಗಿದ್ದಾರೆ. ಭಾರತ ಚಿತ್ರರಂಗದ ಸ್ಟಾರ್ ನಟರೆಲ್ಲ ಹಾಡಿಗೆ ತಲೆದೂಗಿದ್ದಾರೆ. ಮೆಚ್ಚಿದ್ದಾರೆ.

    ಇದೆಲ್ಲದರ ನಡುವೆ ಕಿಚ್ಚ ಸುದೀಪ್‍ಗೆ ಹೊಸ ಬಿರುದು ಕೊಟ್ಟಿದ್ದಾರೆ ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್. ಮಿ. & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರಗಳ ನಿರ್ದೇಶಕ ಸಂತೋಷ್, ಕಿಚ್ಚ ಸುದೀಪ್‍ಗೆ ಪೈಲ್ವಾನ್ ಆಫ್ ರೊಮ್ಯಾನ್ಸ್ ಎಂಬ ಬಿರುದು ಕೊಟ್ಟಿದ್ದಾರೆ.

    ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

  • ಪೈಲ್ವಾನ್ ಜೊತೆ ಜೊತೆಯಲಿ ಯುವರತ್ನ..!

    yuvaratna ayudha pooje special in santhosh theater

    ಯುವರತ್ನ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಆಯುಧಪೂಜೆಯ ದಿನ ಸಂಜೆ 5.30ಕ್ಕೆ ಟೀಸರ್ ರಿಲೀಸ್. ಆ ದಿನ ಹೊಂಬಾಳೆ ಫಿಲ್ಮ್ಸ್ ಯೂ ಟ್ಯೂಬ್ ಚಾನೆಲ್ನಲ್ಲಿ ನೀವು ಟೀಸರ್ ನೋಡಬಹುದು. ಆದರೆ, ಅದಕ್ಕಿಂತಲೂ ಕಿಕ್ಕೇರಿಸುವ ಸುದ್ದಿಯಿದೆ. ಪೈಲ್ವಾನ್ ಜೊತೆಯಲ್ಲಿ ಯುವರತ್ನ ಬರಲಿದ್ದಾನೆ.

    ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಸಂತೋಷ್ ಚಿತ್ರಮಂದಿರದಲ್ಲಿ ಮಾಡಲು ಉದ್ದೇಶಿಸಿದೆ ಯುವರತ್ನ ಟೀಂ. ಸಂತೋಷ್ ಚಿತ್ರಮಂದಿರದಲ್ಲಿ ಈಗ ಪ್ರದರ್ಶನವಾಗುತ್ತಿರುವುದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ. ಆ ದಿನ ಪೈಲ್ವಾನ್ ಶೋ ಶುರುವಾಗುವ ಮುನ್ನ ಯುವರತ್ನ ಟೀಸರ್ ಅಲ್ಲಿಯೇ ರಿಲೀಸ್ ಆಗಲಿದೆ.

    ಯುವರತ್ನ, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ರಾಜಕುಮಾರ ಚಿತ್ರದ ನಂತರ ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.

    ಶಿಕ್ಷಣ ಮಾಫಿಯಾ ಕಥೆ ಇರುವ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ.

    ಅಪ್ಪುಗೆ ನಾಯಕಿಯಾಗಿ ಸಯೇಷಾ ಇದ್ದರೆ, ಪ್ರಕಾಶ್ ರೈ, ಸೋನು ಗೌಡ, ಡಾಲಿ ಧನಂಜಯ್, ರಾಧಿಕಾ ಶರತ್ ಕುಮಾರ್, ಅರು ಗೌಡ, ವಸಿಷ್ಠ ಮೊದಲಾದ ದೊಡ್ಡ ದೊಡ್ಡ ಕಲಾವಿದರ ಸೈನ್ಯವೇ ಚಿತ್ರದಲ್ಲಿದೆ.