` chikkanna - chitraloka.com | Kannada Movie News, Reviews | Image

chikkanna

  • ಸುಮನ್ ರಂಗನಾಥ್ ಲವ್ಸ್ ಚಿಕ್ಕಣ್ಣ

    suman ranganath's double engine love story

    ಸುಮನ್ ರಂಗನಾಥ್, ವಯಸ್ಸು 43. ಆದರೆ, 20+ ಎನ್ನಿಸುವಂತಾ ಚೆಲುವೆ. ಈ ಚೆಲುವೆಯ ಮೇಲೆ ಕಾಮಿಡಿ ಸ್ಟಾರ್ ಚಿಕ್ಕಣ್ಣಂಗೆ ಲವ್ವಾಗಿದೆ. ಅದು ಡಬಲ್ ಎಂಜಿನ್ ಚಿತ್ರದಲ್ಲಿ.

    ವಾಸ್ತವದಲ್ಲಿ ಚಿಕ್ಕಣ್ಣ, ಸುಮನ್ ರಂಗನಾಥ್ ಅವರ ಅಭಿಮಾನಿ. ಅವರ ಸಿನಿಮಾ ನೋಡಿದ್ದೆ. ನೋಡೋಕೆ ಚೆನ್ನಾಗಿದ್ರು. ಹೀಗಾಗಿಯೇ ಚಿಕ್ಕಂದಿನಲ್ಲೇ ಅವರ ಮೇಲೆ ಒಂಥರಾ ಪ್ರೀತಿ ಬೆಳೆದಿತ್ತು. ನಾವೆಲ್ಲಿ..? ಅವರೆಲ್ಲಿ..? ಆದರೆ, ಈಗ ಕನಸೊಂದು ನಿಜವಾಗಿದೆ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.

    ಆರಂಭದಲ್ಲಿ ಸುಮನ್ ಅವರ ಎದುರು ನಟಿಸೋದು ಕಷ್ಟವಾಯಿತಂತೆ. ನಂತರ ಸುಮನ್ ಅವರೇ ಚಿಕ್ಕಣ್ಣನವರಿಗೆ ಧೈರ್ಯ ಹೇಳಿದ್ರಂತೆ. ತಮ್ಮ ಮೆಚ್ಚಿನ ನಟಿಯೊಂದಿಗೆ ನಟಿಸೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.

    ಅರುಣ್ ಕುಮಾರ್, ಶ್ರೀಕಾಂತ್ ನಿರ್ಮಾಣದ ಡಬಲ್ ಎಂಜಿನ್ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶನವಿದೆ.

  • ಸುಸು ಚಿಕ್ಕಣ್ಣ ನೋಡಿದಿರಾ.. ನೊಡಿದಿರಾ..

    chikkana as susu in dalapathi

    ಹಾಸ್ಯನಟ ಚಿಕ್ಕಣ್ಣ, ದಳಪತಿಯಲ್ಲಿ ಸುಸು ಎಂಬ ಪಾತ್ರ ಮಾಡಿದ್ದಾರೆ. ಏನ್ರೀ ಇದು ಸುಸು ಎಂದು ಮೂಗು ಮುರಿಯಬೇಡಿ. ಸುಸು ಎಂದರೆ, ಬೇರೇನಲ್ಲ, ಸುರಾಪುರದ ಸುಂದರಾಂಗ ಎಂದರ್ಥ. ಶಾರ್ಟ್ & ಸ್ವೀಟಾಗಿ ಸುಸು ಎಂದು ಕರೆಯಲಾಗಿದೆ. ಅಷ್ಟೆ.

    ದಳಪತಿಯಲ್ಲಿ ಚಿಕ್ಕಣ್ಣನವರದ್ದು ಹೀರೋ ಫ್ರೆಂಡ್ ಪಾತ್ರ. ನಾಯಕ ಪ್ರೇಮ್, ಸುಸು ಎಂದು ಕರೆದಾಗಲೆಲ್ಲ ಎಂಟ್ರಿ ಕೊಡುವ ಚಿಕ್ಕಣ್ಣ, ಪ್ರಾಸಬದ್ಧವಾಗಿ ಮಾತನಾಡುತ್ತಾ ನಕ್ಕು ನಲಿಸುತ್ತಾರೆ. ಚಿಕ್ಕಣ್ಣ ಇದುವರೆಗೆ ಇಂತಹ ಪಾತ್ರ ಮಾಡಿಲ್ಲ ಎಂದು ವಿಶ್ವಾಸದಿಂದ ಹೇಳಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. ಸಿನಿಮಾ ನಾಳೆ ರಿಲೀಸ್. ಸುಸು ಮಾಡಲು.. ಅಲ್ಲಲ್ಲ.. ನೋಡಲು ಮರೆಯದಿರಿ.

  • ಸುಳ್ ಸುದ್ದಿ ಹಬ್ಬಿಸಿದವರಿಗೆ ಥ್ಯಾಂಕ್ಸ್ ಎಂದ ಚಿಕ್ಕಣ್ಣ

    ಸುಳ್ ಸುದ್ದಿ ಹಬ್ಬಿಸಿದವರಿಗೆ ಥ್ಯಾಂಕ್ಸ್ ಎಂದ ಚಿಕ್ಕಣ್ಣ

    ನಟ ನಟಿಯರಿಗೆ ಏನಾದರೂ ಆರೋಗ್ಯದಲ್ಲಿ ಸಣ್ಣ ಏರುಪೇರಾದರೂ ಅಭಿಮಾನಿಗಳು ಚಡಪಡಿಸಿಬಿಡ್ತಾರೆ. ಅಭಿಮಾನಿಗಳ ಆತಂಕಕ್ಕೆ ಹಲವಾರು ಕಾರಣಗಳಿವೆ. ಶನಿವಾರವೂ ಹೀಗೆಯೇ ಆಗಿಬಿಡ್ತು.

    ಕಾಮಿಡಿ ಸ್ಟಾರ್ ಚಿಕ್ಕಣ್ಣ ಆರೋಗ್ಯ ಏರುಪೇರಾಗಿದ್ಯಂತೆ. ಆಸ್ಪತ್ರೆಯಲ್ಲಿದ್ದಾರಂತೆ. ಸೀರಿಯಸ್ ಅಂತೆ.. ಇಂತಾದ್ದೊಂದು ಸುದ್ದಿ ಹರಿದಾಡಿದಾಗ ಚಿಕ್ಕಣ್ಣನವರ ಮೊಬೈಲ್ ರೆಸ್ಟ್ ಇಲ್ಲದೆ ರಿಂಗ್ ಆಗೋಕೆ ಶುರುವಾಯ್ತು. ಎಷ್ಟು ಜನರಿಗೆ ಅಂತ ಉತ್ತರಿಸಬಹುದು.. ಕೊನೆಗೆ ಸಾಧ್ಯವಾಗದೆ ಚಿಕ್ಕಣ್ಣನವರೇ ಪುಟ್ಟದೊಂದು ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ.

    ಸದ್ಯಕ್ಕೆ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಶೂಟಿಂಗಿನಲ್ಲಿದ್ದಾರೆ. ಉಮಾಪತಿ ನಿರ್ಮಾಣದ ಚಿತ್ರವಿದು. ಚಿಕ್ಕಣ್ಣ ಜೊತೆ ರವಿಶಂಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಯಾರೂ ಟೆನ್ಷನ್ ಮಾಡ್ಕೋಬೇಡಿ.ನಾನು ಆರಾಮ್ ಆಗಿದ್ದೇನೆ. ಉಪಾಧ್ಯಕ್ಷ ಶೂಟಿಂಗಿನಲ್ಲಿದ್ದೇನೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಮಸ್ಕಾರ ಎಂದು ಕಾಮಿಡಿಯಾಗಿಯೇ ಹೇಳಿದ್ದಾರೆ ಚಿಕ್ಕಣ್ಣ.

  • ಹೀರೋ ಚಿಕ್ಕಣ್ಣ.. ಆದರೆ, ಹೀರೋ ಅಲ್ಲ..!

    who is double engine real hero

    ಡಬಲ್ ಎಂಜಿನ್ ಚಿತ್ರದ ನಾಯಕ ಯಾರು..? ಚಿಕ್ಕಣ್ಣ. ಆದರೆ, ಚಿಕ್ಕಣ್ಣ ಹೀರೋ ಅಲ್ವಂತೆ. ಚಿತ್ರದಲ್ಲಿ ಚಿಕ್ಕಣ್ಣ ಜೊತೆ ಇನ್ನೂ ಇಬ್ಬರಿದ್ದಾರೆ ಪ್ರಭು ಮತ್ತು ಅಶೋಕ್. ಚಿಕ್ಕಣ್ಣಂಗೆ ಹೀರೋಯಿನ್ ಆಗಿರೋದು ಅವರ ಅಂದಕಾಲತ್ತಿಲ್ ಕನಸಿನ ರಾಣಿ ಸುಮನ್ ರಂಗನಾಥ್. ಆದರೆ, ಅವರು ಚಿಕ್ಕಣ್ಣಂಗೆ ಹೀರೋಯಿನ್ ಅಲ್ಲ. ಕನ್‍ಫ್ಯೂಸ್ ಆಗಬೇಡಿ. ಸಿನಿಮಾ ರಿಲೀಸ್ ಆಗೋಕೂ ಮುಂಚೆ ಸಿನಿಮಾ ಕಥೆ ಹೇಳೊಕಾಗುತ್ತಾ..?

    ಹಳ್ಳಿಯ ರೈತರ ಮಕ್ಕಳು ದುಡ್ಡು ಮಾಡೋಕೆ ಅಂತಾ ಹೊರಟಾಗ, ಅವರಿಗೇ ಗೊತ್ತಿಲ್ಲದೆ ಆಗುವ ಅವಾಂತರಗಳು, ಸೃಷ್ಟಿಯಾಗುವ ಸಮಸ್ಯೆಗಳು ಚಿತ್ರದ ಕಥೆ. ಹಳ್ಳಿಯಲ್ಲಿ ಲೈಟಾಗಿ ಶುರುವಾಗುವ ಕಥೆ, ಹೋಗ್ತಾ ಹೋಗ್ತಾ ಸೀರಿಯಸ್ ಆಗುತ್ತೆ. ಚಿತ್ರದ ಡಬಲ್ ಮೀನಿಂಗ್ ಡೈಲಾಗುಗಳ ಟ್ರೇಲರ್ರು, ಸುಮನ್ ರಂಗನಾಥ್ ಗ್ಲ್ಯಾಮರ್ರು.. ಎಲ್ಲವೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರೋಕೆ. ಚಿತ್ರದ ಕಥೆ, ಪ್ರತಿಯೊಬ್ಬರಿಗೂ ಇಷ್ಟವಾಗುವಂತಿದೆ ಎನ್ನುವ ಭರವಸೆ ಕೊಟ್ಟಿರೋದು ಚಿಕ್ಕಣ್ಣ.

    ಚಿಕ್ಕಣ್ಣ ಸ್ಟಾರ್ ವ್ಯಾಲ್ಯೂ ಜಾಸ್ತಿ ಆಗಿದೆ. ನಿಜ. ಆದರೆ, ಅವರು ಹೀರೋ ಆಗೋಕೆ ರೆಡಿ ಇಲ್ಲ. ಹೀರೋ ಆಗೋದು ಅಂದ್ರೆ, ಅದೊಂದು ದೊಡ್ಡ ಜವಾಬ್ದಾರಿ. ನನಗೆ ಆ ಶಕ್ತಿ ಇಲ್ಲ. ನನ್ನ ಕೆಲಸ ನಗಿಸೋದು. ನಗಿಸ್ತೀನಿ. ಅದೇ ನನ್ನ ಶಕ್ತಿ ಅಂತಾರೆ ಚಿಕ್ಕಣ್ಣ.

    ಬಾಂಬೆ ಮಿಠಾಯಿ ನಿರ್ದೇಶಕರ 2ನೇ ಪ್ರಯತ್ನವಾಗಿರೋ ಡಬಲ್ ಎಂಜಿನ್ ಚಿತ್ರದಲ್ಲಿ, ಮನರಂಜನೆಯನ್ನೂ ಮೀರಿದ ಸಂದೇಶವೂ ಇದೆಯಂತೆ.