ದಳಪತಿ. ಎಲ್ಲವೂ ಪ್ಲಾನ್‍ನಂತೆಯೇ ಆಗಿದ್ದರೆ, 2017ರಲ್ಲೇ ತೆರೆಗೆ ಬರಬೇಕಿತ್ತು. ಜೂಮ್ ಚಿತ್ರಕ್ಕೂ ಮೊದಲೇ ನಿರ್ದೇಶಕ ಪ್ರಶಾಂತ್ ರಾಜ್‍ರ ಒನ್‍ಲೈನ್ ಸ್ಟೋರಿ ಕೇಳಿಯೇ ಪ್ರೇಮ್ ಓಕೆ ಎಂದುಬಿಟ್ಟಿದ್ದರು. ಕೃತಿ ಕರಬಂಧ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ದಳಪತಿ ತೆರೆಗೆ ಬರೋಕೆ ಒಂದು ವರ್ಷ ಕಾಯಬೇಕಾಯ್ತು. ಇಷ್ಟಕ್ಕೂ ಕಾರಣಗಳೇನು ಗೊತ್ತಾ..?
ದಳಪತಿ ಚಿತ್ರಕ್ಕೆ ಓಕೆ ಎನ್ನುವಾಗಲೇ ಕೃತಿ ಕರಬಂಧ ಒಂದು ಷರತ್ತು ಹಾಕಿದ್ದರು. ಬಾಲಿವುಡ್ ಚಿತ್ರದ ಮಾತುಕತೆಯೊಂದು ಫೈನಲ್ ಹಂತದಲ್ಲಿದೆ. ಅದು ಓಕೆ ಆದರೆ, ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದಿದ್ದರು. ಪ್ರಶಾಂತ್ ಕೂಡಾ ಓಕೆ ಎಂದಿದ್ದರು. ಕೃತಿ ಬಾಲಿವುಡ್‍ಗೆ ಹೋದರು. ಸಿನಿಮಾ ತಡವಾಗೋಕೆ ಶುರುವಾಗಿದ್ದೇ ಆಗ.
ಇತ್ತ ಪ್ರೇಮ್, ಚೌಕ ಚಿತ್ರಕ್ಕೆ ಹೋದರು. ಚೌಕದ ವೇಳೆಯಲ್ಲಿ ಕೃತಿಯ ಡೇಟ್ಸ್ ಸಿಕ್ಕರೂ, ಪ್ರೇಮ್ ಚೌಕದ ಗೆಟಪ್ ಬದಲಾಯಿಸುವ ಹಾಗಿರಲಿಲ್ಲ. ಹೀಗಾಗಿ ದಳಪತಿ ಮತ್ತೆ ಮುಂದಕ್ಕೆ ಹೋಯ್ತು.
ಅತ್ತ ಪ್ರೇಮ್, ಇತ್ತ ಕೃತಿ ರೆಡಿಯಾಗಿ ಬರುವಷ್ಟರಲ್ಲಿ ನಿರ್ದೇಶಕ ಪ್ರಶಾಂತ್ ರಾಜ್, ಜೂಮ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದರು.
ಹೀಗೆ ಎಲ್ಲವನ್ನೂ ಮುಗಿಸಿದ ಪ್ರಶಾಂತ್ ಚಿತ್ರಕ್ಕೆ ಕೈ ಹಾಕಿದ್ದು ಜೂಮ್ ಮುಗಿದ ಮೇಲೆಯೇ. ರಿಲೀಸ್ ವೇಳೆಗೆ ಯುಎಫ್‍ಓ, ಕ್ಯೂಬ್ ವಿರುದ್ಧದ ಪ್ರತಿಭಟನೆ, ಮತ್ತೆ ಎರಡು ವಾರ ಮುಂದೆ ಹೋಗುವಂತೆ ಮಾಡಿತು. ಈಗ.. ಕಾಲ ಕೂಡಿ ಬಂದಿದೆ.
ಚಿತ್ರ ತಡವಾಗಿರಬಹುದು. ಆದರೆ, ಕಥೆ ಫ್ರೆಶ್ ಆಗಿದೆ. ನನ್ನ ಸಿನಿಮಾದ ಕಥೆಗಳು ಕನಿಷ್ಠ ನಾಲ್ಕೈದು ವರ್ಷ ಚಾಲ್ತಿಯಲ್ಲಿರುವಂತಹ ಕಥೆಗಳಾಗಿರುತ್ತವೆ. ದಳಪತಿ ಕೂಡಾ ಅಂಥಾದ್ದೇ ಚಿತ್ರ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.