` actor chethan - chitraloka.com | Kannada Movie News, Reviews | Image

actor chethan

  • Chethan Back With Duniyadari Remake

    actor chethan image

    Actor Chethan who was last seen in Mynaa is back with a new untitled film which is all set to be launched in the month of August. Dingri Nagaraj's son Rajvardhan, Meghana Raj and Sushmitha Joshi ('Run Antony' fame) also play prominent roles in the film.The film is based on a Marathi novel 'Duniyadari' written by Suhas Shivalkar. A Marathi film was made in 2013 based on that novel. Swapnil Joshi had acted in it, while Sanjay Jadhav directed. The Kannada film is being directed by Kumaresh. The photo shoot of the film was held recently. Charan Raj is the music composer of the film.

  • Chethan's New Film 'Marga' Launched

    chethan's new film marga launched

    Actor Chethan who was busy with social activities in recent times, is back to acting once again. This time, Chethan is all set to act in a new film called 'Marga' being directed by debutante Mohan.

    'Marga' was launched on Friday morning in Banagiri Vinayaka Temple in Padmanabhanagar. Actor Puneeth Rajakumar arrived as chief guest and sounded the clap for the first shot of the film.

    'Marga' is a crime thriller and Chethan plays a youth in this film. Chethan says he liked the concept of the film. 'Mohan has written an technologically advanced script and I found it very interesting and that is the reason, why I opted for this film' sayd Chethan.

    Khushi and Greeshma play the heroines in the film. Ajaneesh Lokanath is the music composer of the film, while S K Rao is the cinematographer.

  • Nagshekar-Chetan New Film Named Raja Rani

    raja rani image

    Nagshekar and Chetan who together enjoyed the huge success of Myna have been planning one more film together for sometime. Now the making of this film has been confirmed. Nagshekar who has written an original script for the film is in favour of naming it Raja Rani.

    The producers Kanakapura Srinivas and KP Srikanth have agreed to this title sources said.

    The shooting for the film will start as soon as the script work is completed which is under full swing now. Myna was a huge success and gave a new lease of life to Chetan's career. 

  • ಆ ದಿನಗಳು ಚೇತನ್ ವಿರುದ್ಧ ಬ್ರಾಹ್ಮಣ ಸಮುದಾಯ ದೂರು

    ಆ ದಿನಗಳು ಚೇತನ್ ವಿರುದ್ಧ ಬ್ರಾಹ್ಮಣ ಸಮುದಾಯ ದೂರು

    ಆ ದಿನಗಳು ಖ್ಯಾತಿಯ ನಟ ಚೇತನ್ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚು, ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಉಪೇಂದ್ರ ಅವರ ವಿರುದ್ಧ ಕಿಡಿಕಾರಿದ್ದ ಚೇತನ್, ಈಗ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ನಟ ಚೇತನ್ ಬ್ರಾಹ್ಮಣರ ಕ್ಷಮೆ ಕೇಳಬೇಕು. ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಚೇತನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಬೆಂಗಳೂರು ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ. ಕಾನೂನು ಕ್ರಮದ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಕಮಲ್ ಪಂತ್.

    ಬ್ರಾಹ್ಮಣ ಮತ್ತು ಬ್ರಾಹ್ಮಣ್ಯವನ್ನು ಚೇತನ್ ಭಯೋತ್ಪಾದನೆಗೆ ಹೋಲಿಸಿದ್ದಾರೆ ಎನ್ನುವುದು ಸಚ್ಚಿದಾನಂದ ಮೂರ್ತಿ ದೂರು. ಆದರೆ, ಸರ್ಕಾರಿ ಸಂಸ್ಥೆಯ ಕಚೇರಿ, ಲಾಂಛನವನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಚೇತನ್ ಮಹಿಳಾ ಹೋರಾಟಗಾರ್ತಿ ಕಾವ್ಯ ಅಚ್ಯುತ್, ಬ್ರಾಹ್ಮಣ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.

  • ಉಪೇಂದ್ರ ಮತ್ತು ಚೇತನ್ ಮಧ್ಯೆ ಶುರುವಾಗಿದೆಯಾ ಟಾಕ್ ವಾರ್?

    ಉಪೇಂದ್ರ ಮತ್ತು ಚೇತನ್ ಮಧ್ಯೆ ಶುರುವಾಗಿದೆಯಾ ಟಾಕ್ ವಾರ್?

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆ ದಿನಗಳು ಖ್ಯಾತಿಯ ಚೇತನ್ ಮಧ್ಯೆ ಟಾಕ್ ವಾರ್ ಶುರುವಾಗಿದೆಯಾ? ಈ ಬಾರಿ ಚೇತನ್ ಪರೋಕ್ಷವಾಗಿ ಟೀಕಿಸಿ, ನೇರವಾಗಿಯೇ ಉಪೇಂದ್ರರನ್ನು ತಿವಿದಿದ್ದಾರೆ. ಇತ್ತೀಚೆಗೆ ನಟ ಉಪೇಂದ್ರ ಜಾತಿಯ ಬಗ್ಗೆ ಮಾತನಾಡುತ್ತಾ ನಾವು ಜಾತಿಯನ್ನು ಕೇಳವುದನ್ನು ಮತ್ತು ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಿಡಬೇಕು. ಜಾತಿ ಬಗ್ಗೆ ಮಾತನಾಡುತ್ತಾ ಹೊದರೆ ಅದನ್ನು ಬೆಳೆಸಿದಂತಾಗುತ್ತದೆ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೇತನ್ ಒಬ್ಬ ಸೆಲಬ್ರಿಟಿ ತನ್ನ ವೈಚಾರಿಕತೆ ಕೊರತೆಯಿಂದ ಆಡಿರುವ ಮಾತು ಕೇಳಿ ಬೇಸರವಾಯಿತು. ಒಬ್ಬ ಸೆಲಬ್ರಿಟಿ ಜಾತಿ ಬಗ್ಗೆ ಮಾತನಾಡಿದ್ದಾರೆ. ಜಾತಿ ಬಗ್ಗೆ ಮಾತನಾಡಿದರೆ ಅದು ಜೀವಂತವಾಗಿ ಉಳಿಯುತ್ತೆ. ಮಾತನಾಡದೇ ಹೋದರೆ ಅದು ಹೊರಟು ಹೋಗುತ್ತೆ ಎಂದಿದ್ದಾರೆ. ಇದು ಹಾಸ್ಯಾಸ್ಪದ ಎಂದಿದ್ದಾರೆ ಚೇತನ್.

    ಆ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದು ಗೊತ್ತಿದೆ. ಸ್ವಲ್ಪ ಸಂವಿಧಾನ ಓದಿ. ನೀವು ಅರ್ಹತೆ ಇಲ್ಲದೆಯೂ ಸಾವಿರಾರು ವರ್ಷ ಸವಲತ್ತು ಪಡೆದುಕೊಂಡಿದ್ದೀರಿ. ಸ್ವಲ್ಪ ಬುದ್ದಿವಂತರಾಗಿ ಎಂದಿರುವ ಚೇತನ್ ನೇರವಾಗಿ ಎಲ್ಲಿಯೂ ಪೇಂದ್ರ ಹೆಸರು ಹೇಳಿಲ್ಲ. ಉಪೇಂದ್ರ ಅವರ ಅಣ್ಣನ ಪೋಸ್ಟ್‍ನಲ್ಲಿ ನಿರ್ಧಿಷ್ಟ ಜಾತಿಯವರಿಗೆ ಪರಿಹಾರ ನೀಡಿದ್ದರ ಬಗ್ಗೆ ಮಾತನಾಡಿದ್ದಾರೆ. ಪರೋಕ್ಷವಾಗಿ ಉಪೇಂದ್ರ ಅವರ ಜಾತಿಯನ್ನೂ ಪ್ರಶ್ನಿಸಿದ್ದಾರೆ.

  • ಚೆಗವೇರಾ ಮಾದರಿ ಪಾತ್ರದಲ್ಲಿ ಚೇತನ್

    chethan's role is an inspiration from che guvera

    ಯಾರಿದು ಚೆಗವೇರಾ..? ಕ್ಯೂಬಾ ಅನ್ನೋ ಪುಟ್ಟ ದೇಶದ ಕಥೆ ಗೊತ್ತಿಲ್ಲದವರು ಕೇಳುವ ಪ್ರಶ್ನೆ ಇದು. ಅಮೆರಿಕದಂತ ಅಮೆರಿಕವನ್ನೇ ನಡುಗಿಸಿದ ಕ್ರಾಂತಿಕಾರಿ ಚೆಗವೇರಾ. ಆತನನ್ನು ನ್ಯಾಯದ ಮಾರ್ಗದಲ್ಲಿ ಕೊಲ್ಲೋಕೆ ಅಮೆರಿಕಾಗೆ ಸಾಧ್ಯವಾಗಲೇ ಇಲ್ಲ. ಆ ಕಥೆ ಬಿಡಿ, ಈಗ ಆತನನ್ನೇ ಹೋಲುವ ಪಾತ್ರವನ್ನಿಟ್ಟುಕೊಂಡು ಕನ್ನದಲ್ಲೊಂದು ಸಿನಿಮ ಮಾಡುತ್ತಿದ್ದಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್. ಚಿತ್ರದ ಹೆಸರು ರಣಂ.

    ಆ ದಿನಗಳು, ಮೈನಾ ಖ್ಯಾತಿಯ ಚೇತನ್ ಇತ್ತೀಚೆಗೆ ಬಿಜೆಪಿ ವಿರೋಧಿ ಚಳವಳಿಗಳಲ್ಲೇ ಗುರುತಿಸಿಕೊಂಡಿದ್ದ ನಟ. ದಿಡ್ಡಳ್ಳಿ ನಿರ್ವಸಿತರು, ಎಂಡೋಸಲ್ಫಾನ್ ಹೋರಾಟಗಳಲ್ಲಿದ್ದ ಚೇತನ್, ಬಹುದಿನಗಳ ನಂತರ ರಣಂ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

    ಈ ಸಿನಿಮಾದಲ್ಲಿ ದರ್ಶನ್ ಹಾಗೂ ಉಪೇಂದ್ರ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚೇತನ್‍ಗೆ ಈ ಸಿನಿಮಾದಲ್ಲಿ ನಾಲ್ವರು ನಾಯಕಿಯರು. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ತಯಾರಾಗುತ್ತಿರುವ ಚಿತ್ರಕ್ಕೆ ಸಮುದ್ರ ನಿರ್ದೇಶಕರು.

    ಚೇತನ್‍ಗೆ ಖುಷಿಯಾಗೋಕೆ ಕಾರಣ, ಚೇತನ್ ಕೂಡಾ ಚೆಗವೇರಾ ಅಭಿಮಾನಿ. ಚೇತನ್ ಹೋರಾಟದ ಬದುಕಿಗೆ ಚೆಗವೇರಾ ಸ್ಫೂರ್ತಿಯಂತೆ. ಹೀಗಾಗಿಯೇ ಈ ಚಿತ್ರ ನನಗೆ ಖುಷಿ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ ಚೇತನ್.

    ಇದು ಈಗಿನ ಕಾಲಕ್ಕೆ, ಪರಿಸ್ಥಿತಿಗೆ ಹೇಳಿ ಮಾಡಿಸಿದ ಕಥೆ. ಇಷ್ಟವಾಯಿತು. ಕನ್ನಡ ಚಿತ್ರಕ್ಕೆ ಮಾತ್ರ ನಾನು ನಿರ್ಮಾಪಕ. ತೆಲುಗಿಗೆ ಬೇರೆ ನಿರ್ಮಾಪಕರಿದ್ದಾರೆ. ಎರಡೂ ಭಾಷೆಗೆ ಸಮುದ್ರ ಅವರೇ ನಿರ್ದೇಶಕ. ಚೇತನ್ ಕೂಡಾ ಕನ್ನಡದಲ್ಲಿ ಮಾತ್ರ ಹೀರೋ ಎಂದು ಮಾಹಿತಿ ಕೊಟ್ಟಿದ್ದಾರೆ ಕನಕಪುರ ಶ್ರೀನಿವಾಸ್.

  • ಲಿಂಗಾಯತ ಧರ್ಮ ವಿಚಾರದಲ್ಲಿ ನಟ ಚೇತನ್ ಹೇಳಿಕೆ ಕೋಲಾಹಲ

    chetha, bsy, suttur seer

    ಆ ದಿನಗಳು, ಮೈನಾ ಚಿತ್ರಗಳ ಖ್ಯಾತಿಯ ನಟ ಚೇತನ್, ಅಭಿನಯಿಸಿರುವ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು. ಇವುಗಳನ್ನು ಹೊರತುಪಡಿಸಿದ ಸಾಮಾಜಿಕ ಸೇವೆ ಮತ್ತು ಹೋರಾಟಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವವರು. ಈಗ ಚೇತನ್, ಚಿತ್ರರಂಗಕ್ಕೆ ಸಂಬಂಧಪಡದ ಸುದ್ದಿಯೊಂದರಲ್ಲಿ ವಿವಾದವಾಗಿದ್ದಾರೆ.

    ಬೆಂಗಳೂರಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಸಭೆ ಕರೆಯಲಾಗಿತ್ತು. ಈ ವೇದಿಕೆಯಲ್ಲಿ ಮಾತನಾಡಿದ ನಟ ಚೇತನ್, ಲಿಂಗಾಯತ ಧರ್ಮವನ್ನು ಒಡೆದಿದ್ದೇ ಬಿಎಸ್‍ವೈ ಮತ್ತು ಸುತ್ತೂರು ಶ್ರೀಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬಿಎಸ್‍ವೈ ರಾಜಕೀಯ ಲಾಭಕ್ಕಾಗಿ ಲಿಂಗಾಯತರನ್ನು ಒಡೆದರು. ಸುತ್ತೂರು ಶ್ರೀಗಳು ಅದಕ್ಕೆ ಬೆಂಬಲ ನೀಡಿದರು ಎಂದು ಟೀಕಿಸಿದ್ದಾರೆ.

    ನಟ ಚೇತನ್ ಹೇಳಿಕೆಗೆ ವೇದಿಕೆಯಲ್ಲೇ ಪ್ರತಿಭಟನೆ ವ್ಯಕ್ತವಾಗಿದೆ. ಬಿಎಸ್‍ವೈ ಬೆಂಬಲಿಗರು ಸಭೆಯಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಸುತ್ತೂರು ಶ್ರೀಗಳ ವಿರುದ್ಧದ ಹೇಳಿಕೆಯಂತೂ ಕೋಲಾಹಲವನ್ನೇ ಸೃಷ್ಟಿಸಿದೆ.