` mysuru - chitraloka.com | Kannada Movie News, Reviews | Image

mysuru

 • Is Pratham's Wish With Rishika Fulfilled? - Exclusive

  Rishika Pratham Image

  It seems that Pratham's wish to go on a long drive is fulfilled. The truth is not known but that's what most people who saw them together at the BIFFES in Mysuru concluded!

  Prashant who won the Bigg Boss Kannada season 4 is now the darling for many and a sensation of sorts. In the Bigg Boss house Pratham was a close friend with actress Rishika. He had even expressed that Rishika was an inspiration for him. To make matters interesting Rishika had made a special dance appearance for Pratham in the finals. Pratham had expressed a wish that he wanted to go on a long drive to Mysore with Rishika.

  Is this wish fulfuilled? Take a guess. 

  At the BIFFES international film festival Pratham and Rishika were seen in Mysore Fortune hotel together. They became instant attraction for the people who were there. Had Pratham managed to come on the cherished drive with her from Bengaluru or were they coincidentally meeting there? That was the question on the minds of people who had seen them on Bigg Boss.

  Rishika was eliminated from Bigg Boss much before Pratham. But there was no denying the friendship the two shared. Only Pratham and Rishika can answer whether the two have taken the drive.

 • Vishnu Memorial : Fans Upset With Shift to Mysuru

  vishnuvardhan image

  Many fans of late star Vishnuvardhan are upset with the fact that the family members are okay with the idea of shifting the actor's memorial to Mysuru. Fans of Vishnuvardhan including those from the film industry are insisting that the memorial should come up in Bengaluru. Lyricist and director Nagendra Prasad had made his displeasure public and on behalf of fans has urged that the memorial should come up in Bengaluru.

  More than five years after the death of Vishnuvardhan his memorial work is still in limbo. The two acres of land near Abhiman Studio that was granted by the government is in legal trouble as some people have complained that it is forest land.

 • ಕನ್ನಡವೇ ನಮ್ಮಮ್ಮ.. ಬರಬೇಡ ಹೋಗಮ್ಮ..

  film industry upset over kannada sahitya sammelana

  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಆ ಸಮ್ಮೇಳನದಲ್ಲಿ ಏನೇನೆಲ್ಲ ಇದೆಯೆಂದರೆ ಸಾಹಿತ್ಯಕ್ಕೆ ಬೇಕಾದದ್ದು, ಬೇಡವಾದದ್ದು, ಊಟ, ಕೂಲ್‍ಡ್ರಿಂಕ್ಸು, ಬ್ಯುಸಿನೆಸ್ಸು, ರಾಜಕೀಯ ಹಾಗೂ ಹೊಲಸು ರಾಜಕೀಯ.. ಎಲ್ಲಕ್ಕೂ ಜಾಗವಿದೆ. ಆದರೆ, ಸಿನಿಮಾಗೆ ಮಾತ್ರ ಇಲ್ಲ.

  ಅದೇಕೋ ಏನೋ.. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಸಿನಿಮಾ ಮಂದಿಯ ಬಗ್ಗೆ ಒಂದು ಮನೋಭಾವವಿದೆ. ನೀವು ದೊಡ್ಡ ದೊಡ್ಡ ಸಾಹಿತಿಗಳನ್ನು ಮಾತನಾಡಿಸಿ ನೋಡಿ... ಅವರು ಕನ್ನಡ ಸಿನಿಮಾಗಳನ್ನು ನೋಡದೆ ವರ್ಷಗಳೇ ಕಳೆದುಹೋಗಿವೆ. ನಾನ್ ಕನ್ನಡ ಸಿನಿಮಾ ನೋಡಲ್ಲ ಅನ್ನೋದು ಅವರಿಗೆ ಹೆಮ್ಮೆಯ ವಿಷಯವಾಗಿದೆ. ಆದರೆ, ನೆನಪಿರಲಿ.. ಅವರು ಕನ್ನಡದ ಸಾಹಿತಿಗಳು. 

  ಇನ್ನೂ ಕೆಲವರಿದ್ದಾರೆ, ಅವರಿಗೆ ಸಿನಿಮಾ ಎಂದರೆ ಇಂದಿಗೂ ರಾಜ್‍ಕುಮಾರ್ ಮಾತ್ರ. ಬಹುಶಃ, ರಾಜ್‍ಕುಮಾರ್ ಇವರ ಟೀಕೆಗೂ ನಿಲುಕದಷ್ಟು ಎತ್ತರಕ್ಕೆ ಬೆಳೆಯದೇ ಹೋಗಿದ್ದರೆ, ಅವರನ್ನೂ ಒಪ್ಪುತ್ತಿರಲಿಲ್ಲವೇನೋ. ಅಂಥಹವರಿಗೆ ಈಗಿನ ಹೊಸ ಹುಡುಗರ ವಿಭಿನ್ನ ಪ್ರಯತ್ನಗಳ ಗಾಳಿ ಗಂಧವೇ ಗೊತ್ತಿಲ್ಲ.

  ಈ ಸಾಹಿತಿಗಳಿಗೆ ಅತ್ತ ಕಮರ್ಷಿಯಲ್ ಸಿನಿಮಾಗಳನ್ನು ನೋಡುವುದೆಂದರೆ ಅವಮಾನ, ವಿಭಿನ್ನ ಪ್ರಯತ್ನಗಳನ್ನು ತಿಳಿದುಕೊಳ್ಳೋದಕ್ಕೆ ಅಜ್ಞಾನ. ಇವರು ಸಿನಿಮಾವನ್ನು ಸಾಹಿತ್ಯ ಎಂದು ಒಪ್ಪಿಕೊಂಡರಾದರೂ ಹೇಗೆ..?

  ಜಾನಪದ, ಪುರಾಣ, ಆಡುಭಾಷೆ, ಸಂಸ್ಕøತ, ವೇದಾಂತ, ತುಂಟತನ, ಒಗಟು, ಗಾದೆ.. ಹೀಗೆ ಪ್ರತಿಯೊಂದನ್ನೂ ಪ್ರಯೋಗ ಮಾಡಿರುವ, ಪ್ರಯೋಗಿಸಿ ಗೆದ್ದಿರುವ ಹಂಸಲೇಖರಂಥಹವರನ್ನೇ ಸಾಹಿತಿ ಎಂದು ಒಪ್ಪಿಕೊಳ್ಳಲ್ಲ. ಇನ್ನು ಹೊಸ ಹುಡುಗರು ಗೊತ್ತಾಗುವುದಾದರೂ ಹೇಗೆ..? ಸಾಹಿತ್ಯ ಪ್ರಕಾರಕ್ಕಿಂತ ಅತಿ ದೊಡ್ಡ ವರ್ಗವೊಂದು ಸಿನಿಮಾ ನೋಡುತ್ತಿದೆ. ಅವರನ್ನು ಸಾಹಿತ್ಯದತ್ತ ಸೆಳೆಯುವ ಅವಕಾಶವನ್ನು ಪ್ರತಿ ವರ್ಷವೂ ಸಾಹಿತ್ಯ ಸಮ್ಮೇಳನ ಮಿಸ್ ಮಾಡಿಕೊಳ್ಳುತ್ತಲೇ ಇದೆ. ಸಾಹಿತ್ಯವೆಂದರೆ ಪುಸ್ತಕವಷ್ಟೇ ಎನ್ನುವ ಕಲ್ಪನೆಯೂ ಓಡಿಹೋಗುತ್ತಿರುವ ಈ ಕಾಲದಲ್ಲಿ ಸಿನಿಮಾ, ಸಾಮಾಜಿಕ ತಾಣ, ಸಾಫ್ಟ್‍ವೇರ್‍ನಂತಹ ಸಮಕಾಲೀನ ಬದಲಾವಣೆಗಳನ್ನೂ ತೆಕ್ಕೆಗೆ ತೆಗೆದುಕೊಳ್ಳಬೇಕು. 

  ಹಾಗೆ ನೋಡಿದರೆ, ಸಿನಿಮಾ ರಂಗದ ಕುರಿತೇ ಚರ್ಚೆ ನಡೆಸಲು ಎಂಥೆಂತಹ ಸಮಸ್ಯೆಗಳಿದ್ದವು. ಡಬ್ಬಿಂಗ್, ರೀಮೇಕ್, ಸಿನಿಮಾ ಮಾರ್ಕೆಟಿಂಗ್, ಪರಭಾಷಾ ಚಿತ್ರಗಳ ಹಾವಳಿಯಂತಹ ವಿಚಾರಗಳಿದ್ದವು. (ಸಮಸ್ಯೆಗಳನ್ನಷ್ಟೇ ಚರ್ಚೆ ಮಾಡಬೇಕು ಎನ್ನುವುದು  ಸಾಹಿತ್ಯ ಸಮ್ಮೇಳನದ ಅಲಿಖಿತ ನಿಯಮ). ಸಾಧನೆಯ ಬಗ್ಗೆ ಮಾತನಾಡೋಕೆ ರಾಜಕುಮಾರ, ಕಿರಿಕ್ ಪಾರ್ಟಿ ಸೇರಿದಂತೆ ಹಲವು ಕಮರ್ಷಿಯಲ್ ಚಿತ್ರಗಳಿದ್ದವು. ತಿಥಿ, ಗೋಧಿ ಬಣ್ಣ, ರಾಮಾ ರಾಮಾ ರೇ.. ಒಂದಾ ಎರಡಾ.. ವಿಶೇಷವೆಂದರೆ, ಇವೆಲ್ಲ ಹೊಸ ಬರಹಗಾರರ, ಹೊಸ ಪ್ರತಿಭೆಗಳ ಸೃಷ್ಟಿ.

  ದುರಂತವಿರುವುದು ಇಲ್ಲೇ. ಈ ಸಾಹಿತ್ಯ ಸಮ್ಮೇಳನ ನಡೆಸುವವರಿಗೆ ರಾಜ್‍ಕುಮಾರ್ ನಂತರದ ಬಹುತೆಕ ಕಲಾವಿದರ ಸಿನಿಮಾಗಳ ಬಗ್ಗೆ ಗೊತ್ತಿಲ್ಲ. ಪುಟ್ಟಣ್ಣ ಕಣಗಾಲ್ ನಂತರದ ನಿರ್ದೇಶಕರೂ ಗೊತ್ತಿಲ್ಲ. ಬರಹಗಾರರ ಬಗ್ಗೆ ಗೊತ್ತಿಲ್ಲ. ಗೀತ ಸಾಹಿತಿಗಳ ಬಗ್ಗೆ ಗೊತ್ತಿಲ್ಲ. ಸಿನಿಮಾ, ಸೀರಿಯಲ್‍ಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು ಇವರ ಪ್ರಕಾರ ಸಾಹಿತ್ಯವೇ ಅಲ್ಲ. 

  ಆದರೂ, ಸಿನಿಮಾಗಳಲ್ಲಿ ಮಾತ್ರ ಕನ್ನಡವೇ ನಮ್ಮಮ್ಮ ಎಂದು ಹಾಡುತ್ತಾರೆ. ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಎಂದು ಕುಣಿಯುತ್ತಾರೆ. ಕನ್ನಡ ಹೊನ್ನುಡಿ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ. ಕನ್ನಡದ ಕವಿಗಳ ಹಾಡುಗಳನ್ನು ತಮ್ಮ ಚಿತ್ರದಲ್ಲಿ ಹಾಕಿಕೊಂಡು ಸಂಭ್ರಮಿಸುತ್ತಾರೆ. ಇಷ್ಟೆಲ್ಲ ಮಾಡಿಯೂ.. ಕನ್ನಡದ ಒಂದು ದೊಡ್ಡ ಹಬ್ಬದಲ್ಲಿ ನಮಗೆ ಆಹ್ವಾನವೇ ಇಲ್ಲವಲ್ಲ, ನಾವು ಯಾರೂ ಅಲ್ಲವೇ, ಏನೇನೂ ಅಲ್ಲವೇ ಎಂದು ಅನಿಸಿದಾಗ ಬೇಸರಿಸಿಕೊಳ್ಳುತ್ತಾರೆ. 

  ಇದೊಂಥರಾ ಪಂಚಮಿ ಹಬ್ಬಕ್ಕೆ ಅಣ್ಣ ಕರೆಯುತ್ತಾನೆ ಎಂದು ಕಾಯುತ್ತಾ ಕೂರುವ ತಂಗಿಯಂತೆ. ಅಣ್ಣ ಬರುತ್ತಾನೋ.. ಬಾರನೋ.. ತಂಗಿ ಕಾಯುತ್ತಲೇ ಇರುತ್ತಾಳೆ. ಅಣ್ಣನನ್ನು ಬಿಟ್ಟು ಅವಳಿಗಾದರೂ ಬೇರೆ ಯಾರಿದ್ದಾರೆ..? 

 • ವಿಷ್ಣುವರ್ಧನ್ ಅವರ ಸಮಾದಿ ಪುಣ್ಯ ಭೂಮಿ - ಸುದೀಪ್

  sudeep request cm for vishnu memorial in mysore

  ವಿಷ್ಣುವರ್ಧನ್ ಅವರ ಸಮಾಧಿ ಇರುವುದು ಅಭಿಮಾನ್ ಸ್ಟುಡಿಯೋದಲ್ಲಿ. ಅಲ್ಲಿಂದ ಸಮಾಧಿಯನ್ನು ಮೈಸೂರಿಗೆ ಸ್ಥಳಾಂತರಿಸಿ ಅಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ವಾದ ಒಂದು ಕಡೆ, ಸಮಾಧಿ ಇಲ್ಲಿಯೇ ಇರಲಿ, ಸ್ಮಾರಕವೂ ಇಲ್ಲಿಯೇ ಆಗಲಿ ಎನ್ನುವ ಹೋರಾಟ ಮತ್ತೊಂದು ಕಡೆ. ಈ ಎರಡು ವಾದಗಳ ಮಧ್ಯೆ ವಿಷ್ಣುವರ್ಧನ್ ಸ್ಮಾರಕದ ಕನನು ಕನಸಾಗಿಯೇ ಉಳಿದುಬಿಟ್ಟಿದೆ.

  ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಕಿಚ್ಚ ಸುದೀಪ್, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಹೋರಾಟಕ್ಕೆ ಮತ್ತೆ ಬಲ ತಂದಿದ್ದಾರೆ. ಅವರು ಸಿದ್ದರಾಮಯ್ಯನವರನ್ನು ಕೇಳಿರುವುದು ಇಷ್ಟೆ. ವಿಷ್ಣು ಅವರ ಸಮಾಧಿ ಇರುವ ಜಾಗ ಪುಣ್ಯಭೂಮಿ. ಅದನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದು ಬೇಡ. ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರವನ್ನು ಕೊಡಿ. ಅವರ ಕುಟುಂಬದ ಮೇಲೆ ಸರ್ಕಾರ ಹಾಕಿರುವ ಕೇಸ್​ಗಳನ್ನು ವಾಪಸ್ ತೆಗೆದಕೊಂಡರೆ ವಿವಾದ ಬಗೆಹರಿಯಬಹುದು. ಖುದ್ದು ನೀವೇ ಸಂಧಾನ ನಡೆಸಿ, ಮಾತನಾಡಿದರೆ, ಬಾಲಕೃಷ್ಣ ಕುಟುಂಬಸ್ಥರು ಒಪ್ಪಿಯೇ ಒಪ್ಪುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ ಸುದೀಪ್.

  ಸಮಾಧಿ ಜಾಗದ ಸಮಸ್ಯೆಯೊಂದನ್ನು ಬಗೆಹರಿಸಿಬಿಡಿ. ಆ ಜಾಗವನ್ನು ನಮಗೆ ಕೊಡಿ. ವಿಷ್ಣು ಅಭಿಮಾನಿಗಳೊಂದಿಗೆ ನಾವು ಆ ಜಾಗವನ್ನು ಅಭಿವೃದ್ಧಿಪಡಿಸುತ್ತೇವೆ. ಇದನ್ನು ಹೊರತುಪಡಿಸಿ, ಸರ್ಕಾರ ಮಾಡಲು ಉದ್ದೇಶಿಸಿರುವ ಸ್ಮಾರಕವನ್ನು ಎಲ್ಲಿ ಬೇಕಾದರೂ ನಿರ್ಮಿಸಿ. ಅದಕ್ಕೆ ನಮ್ಮ ತಕರಾರಿಲ್ಲ ಎಂದಿದ್ದಾರೆ ಸುದೀಪ್. 

  ವಿಷ್ಣುವರ್ಧನ್ ನಿಧನರಾಗಿ ಇದೇ ಡಿಸೆಂಬರ್ 30ಕ್ಕೆ 8 ವರ್ಷ ತುಂಬಲಿದೆ. ಆದರೆ, ಸಮಾಧಿಯ ಜಾಗದಲ್ಲಿ ವಿಷ್ಣು ಅವರ ನೆನಪಿಗಾಗಿ ಏನೆಂದರೆ ಏನೂ ಇಲ್ಲ. ಹೀಗಾಗಿಯೇ, ಅದರ ಜವಾಬ್ದಾರಿಯನ್ನು ಅಭಿಮಾನಿಗಳ ಜೊತೆ ಸ್ವತಃ ತಾವು ಹೊತ್ತುಕೊಳ್ಳೋದಾಗಿ ಹೇಳಿದ್ದಾರೆ ಸುದೀಪ್. ಹಾಗೆಂದು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ವಿಷ್ಣು ಅವರ ಸ್ಮಾರಕಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವುದು ಗಮನಾರ್ಹ. ಅಭಿಮಾನವೆಂದರೆ ಇದೇ ಅಲ್ಲವೆ.