ಕಳೆದ ವರ್ಷದ ಸೂಪರ್ ಡ್ಯೂಪರ್ ಹಿಟ್ ಚಿತ್ರ ಟಗರು. ಆ ಟೀಂ ಮತ್ತೆ ಈಗ ಸಲಗ ಚಿತ್ರಕ್ಕಾಗಿ ಒಂದಾಗಿದೆ. ಚಿತ್ರದ ಬಹುತೇಕ ತಂತ್ರಜ್ಞರು ಹಾಗೂ ಕಲಾವಿದರು, ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರಕ್ಕೆ ಕೈಜೋಡಿಸಿದ್ದಾರೆ.
ಆದರೆ, ಸಲಗ ಚಿತ್ರದ ನಿರ್ದೇಶಕ ದುನಿಯಾ ಸೂರಿ ಅಲ್ಲ. ಉಳಿದಂತೆ ಟಗರು ಸಂಭಾಷಣೆಗಾರ ಮಾಸ್ತಿ, ಕೋ ಡೈರೆಕ್ಟರ್ ಅಭಿ, ಆರ್ಟ್ ವಿಭಾಗದ ಮಲ್ಲ, ಸಂಗೀತ ನಿರ್ದೇಶಕ ಚರಣ್‍ರಾಜ್ ಎಲ್ಲರೂ ಒಂದಾಗಿದ್ದಾರೆ. ಅಷ್ಟೆ ಅಲ್ಲ, ಟಗರು ನಿರ್ಮಾಪಕ ಶ್ರೀಕಾಂತ್ ಅವರೇ, ಸಲಗಕ್ಕೂ ಬಂಡವಾಳ ಹೂಡುತ್ತಿರುವುದು.
ಟಗರು ಚಿತ್ರತಂಡದ ಬಹುತೇಕ ತಂತ್ರಜ್ಞರು ಒಂದಾಗಿದ್ದಾರೆ. ತಂತ್ರಜ್ಞರ್ಟೇ ಅಲ್ಲ, ಡಾಲಿ ಧನಂಜಯ್, ಕಾಕ್ರೋಚ್ ಸುಧಿ ಕೂಡಾ ಇದ್ದಾರೆ. ನಿರ್ದೇಶಕರು ಯಾರು ಅನ್ನೋದನ್ನು ಸದ್ಯದಲ್ಲೇ ಹೇಳ್ತೇನೆ ಎನ್ನುತ್ತಾರೆ ಶ್ರೀಕಾಂತ್.
ಚರಣ್‍ರಾಜ್, ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೇ ನೀಡುತ್ತಾರೆ. ಹಾಡು ಕಟ್ಟಿಕೊಡುವುದು ನವೀನ್ ಸಜ್ಜು. ಸೂಪರ್ ಹಿಟ್ ಚಿತ್ರ ನೀಡಿದ್ದ ತಂಡವೇ ನನ್ನ ಚಿತ್ರಕ್ಕೆ ಒಂದಾಗಿರುವುದು ಖುಷಿಯ ವಿಚಾರ. ನಾನಿಲ್ಲಿ ಕೇವಲ ಪಾತ್ರಧಾರಿ ಎಂದು ಹೇಳಿಕೊಂಡಿದ್ದಾರೆ ದುನಿಯಾ ವಿಜಯ್.