` actor sharan, - chitraloka.com | Kannada Movie News, Reviews | Image

actor sharan,

  • ಅವತಾರ ಪುರುಷ.. ತಂದೇಬಿಟ್ಟ ಹರುಷ

    ಅವತಾರ ಪುರುಷ.. ತಂದೇಬಿಟ್ಟ ಹರುಷ

    ತಮಟೆ ಹೊಡಿ ಬಾರೋ..

    ಎಂಟ್ರಿ ಕೊಟ್ಟ ಹೀರೋ..

    ತರುತಾನೆ ಹರುಷ.. ಅವತಾರ ಪುರುಷ..

    ಶರಣ್-ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಸಿನಿಮಾ ಅವತಾರ ಪುರುಷ ಚಿತ್ರದ ಹಾಡಿನ ಸಾಲುಗಳಿವು. ಹೀರೋ ಇಂಟ್ರೊಡಕ್ಷನ್ ಸಾಂಗ್ ಅಥವಾ ಚಿತ್ರದ ಟೈಟಲ್ ಟ್ರ್ಯಾಕ್. ಏನು ಬೇಕಾದರೂ ಹೇಳಬಹುದು. ಹಾಡನ್ನು ಭರ್ಜರಿಯಾಗಿ ಶೂಟ್ ಮಾಡಿರುವ ಸುನಿ, ಹಾಡನ್ನು ಪವರ್‍ಫುಲ್ ಕನ್ನಡದ  ಯುವಜನತೆಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.

    ಕಿರಣ್ ಕೊಟ್ಟ, ಆರ್‍ಆರ್ ಅರ್ಜುನ್‍ರ ಸಾಹಿತ್ಯಕ್ಕೆ ತಮಟೆ ಸೌಂಡು ಸಖತ್ತಾಗಿ ಮ್ಯಾಚ್ ಆಗಿದೆ. ಹಾಡಿನ ಸಾಹಿತ್ಯಕ್ಕೆ ಅಷ್ಟೇ ಸಖತ್ತಾಗಿ ಕೂರಿಸಿರೋದು ಅರ್ಜುನ್ ಜನ್ಯಾ. ಶರಣ್ ಮತ್ತು ಆಶಿಕಾ ರಂಗನಾಥ್ ಹೀರೋ ಹೀರೋಯಿನ್ ಆಗಿರುವ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

  • ಅವತಾರ ಪುರುಷನ ಪೌರುಷ ನೋಡಿದ್ರಾ..?

    sharan simple suni's laughter riot avarata purusha teaser is a must watch

    ನಟನೆಯಲ್ಲೇ ನಗು ಉಕ್ಕಿಸೋ ಶರಣ್, ಕಣ್ಣಿನಲ್ಲೇ ಕಚಗುಳಿ ಕೊಡುವ ಅಶಿಕಾ ರಂಗನಾಥ್.. ಇವರಿಬ್ಬರನ್ನೂ ಪೆನ್ನಿನಲ್ಲಿ ಚುಚ್ಚಿ, ಮಾತಿನಲ್ಲಿ ಚಚ್ಚಿ ನಗೆಯುಕ್ಕಿಸುವ ಸುನಿ. ಕಾಂಬಿನೇಷನ್ ಒಟ್ಟಾದಾಗ ಉದ್ಭವವಾಗಿರುವ ಅವತಾರ ಪುರುಷ, ನಗೆಯ ಹಬ್ಬದೂಟದ ಸೂಚನೆ ಕೊಟ್ಟಿದೆ.

    ಜ್ಯೂನಿಯರ್ ಕಲಾವಿದನಾಗಿ ಶರಣ್, ಅವಕಾಶ ಕೊಡುವ ಹುಡುಗಿಯಾಗಿ ಅಶಿಕಾ.. ಅದರ ನಡುವೆ ಮಗನನ್ನು ಕಳೆದುಕೊಂಡವರ ಕಥೆ, ಇನ್ನೊಂದು ದಿಕ್ಕಿನಲ್ಲಿ ಬ್ಲಾಕ್ ಮ್ಯಾಜಿಕ್ ಜೊತೆ ಪ್ರತ್ಯಕ್ಷವಾಗಿ ಕಣ್ಣುಗಳಲ್ಲೇ ಭಯ ಹುಟ್ಟಿಸುವ ಶ್ರೀನಗರ ಕಿಟ್ಟಿ.. ಅವತಾರ ಪುರುಷನ ಮೊದಲ ಟೀಸರಿನಲ್ಲೇ ಇಷ್ಟೆಲ್ಲವೂ ಇದೆ.

    ನಡು ನಡುವೆ ಒಗ್ಗರಣೆಯಾಗಿ ಚುಟು ಚುಟು ಬರುತ್ತೆ. ಸುನಿಯ ಪೋಲಿತನವಿದೆ. ಭವ್ಯ, ಸುಧಾರಾಣಿ, ಸಾಯಿಕುಮಾರ್ ಕೂಡಾ ನಟಿಸಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. 

  • ಅವತಾರ ಪುರುಷನನ್ನು ಮೆಚ್ಚಿದ ಕಿಚ್ಚ

    ಅವತಾರ ಪುರುಷನನ್ನು ಮೆಚ್ಚಿದ ಕಿಚ್ಚ

    ಶರಣ್, ಆಶಿಕಾ ರಂಗನಾಥ್ ಅಭಿನಯದ ಅವತಾರ್ ಪುರುಷ ಥಿಯೇಟರಿನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದೆ. ಸಿಂಪಲ್ ಸುನಿ ಮತ್ತೊಮ್ಮೆ ಕಮಾಲ್ ತೋರಿಸಿದ್ದಾರೆ. ಈ ಬಾರಿ ನಗುವಿನ ಜೊತೆಗೆ ವಾಮಾಚಾರ, ಸಸ್ಪೆನ್ಸ್, ಥ್ರಿಲ್ಲರ್‍ನ್ನೂ ಸೇರಿಸಿ ಸೃಷ್ಟಿಸಿರೋ ನಗುವಿನ ಹಬ್ಬವನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಅವತಾರ್ ಪುರುಷ ಚಿತ್ರವನ್ನು ಪ್ರೇಕ್ಷಕರ ಜೊತೆಗೆ ಕಿಚ್ಚ ಸುದೀಪ್ ಕೂಡಾ ಮೆಚ್ಚಿಕೊಂಡಿರೋದು ವಿಶೇಷ.

    ಅವತಾರ್ ಪುರುಷ ಚಿತ್ರವನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ತಂಡದ ಪ್ರತಿಯೊಬ್ಬರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಸುನಿ ಚೆಂದದ ಕಥೆಯನ್ನು ಅಷ್ಟೇ ಇಂಟ್ರೆಸ್ಟಿಂಗ್ ಆಗಿ ಹೇಳಿದ್ದಾರೆ. ಕಾಮಿಡಿ, ಲಾಜಿಕ್ ಎಲ್ಲವೂ ಇಲ್ಲಿದೆ. ಶರಣ್ ಅವರ ಅಭಿನಯ ವ್ಹಾವ್ ಎನ್ನುವಂತಿದೆ. ಪಟಾಕಿ ಪೋರಿ ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್.

    ಸುದೀಪ್ ಅವರ ಪ್ರಶಂಸೆ ಚಿತ್ರ ತಂಡಕ್ಕೊಂದು ಕಿರೀಟ ಕೊಟ್ಟ ಹಾಗಿದೆ. ಶರಣ್ ಇದ್ದಾರೆಂದ ಮೇಲೆ ಕಾಮಿಡಿಗೆ ಮೋಸವಿಲ್ಲ. ಸುನಿ ಚಿತ್ರವೆಂದರೂ ಕಾಮಿಡಿಗೆ ಕೊರತೆಯಿಲ್ಲ. ಪ್ರೇಕ್ಷಕ ಚಿತ್ರವನ್ನು ನೋಡಿ ನಗುತ್ತಿದ್ದಾನೆ. ಪ್ರೇಕ್ಷಕರು ಇನ್ನೂ ಹೆಚ್ಚು ಹೆಚ್ಚು ನಕ್ಕರೆ ಪ್ರೇಕ್ಷಕರ ಜೊತೆ ನಿರ್ಮಾಪಕರೂ ನಗುತ್ತಾರೆ. 

  • ಅವತಾರ ಪುರುಷನಿಗೆ ಅಶಿಕಾ ಟೀಚರ್

    ಅವತಾರ ಪುರುಷನಿಗೆ ಅಶಿಕಾ ಟೀಚರ್

    ಅವನು ಅವತಾರ ಪುರುಷ. ಓವರ್ ಌಕ್ಟಿಂಗ್ ಅನಿಲ ಎಂದೇ ಖ್ಯಾತಿ. ಏನು ಹೇಳಿದರೂ.. ಅದನ್ನ ಓವರ್ ಆಗಿಯೇ ಮಾಡುವ ಜೂನಿಯರ್ ಆರ್ಟಿಸ್ಟ್. ಅವನಿಗೊಬ್ಬಳು ಟೀಚರ್. ನಾನಾ ಅವತಾರ ತಾಳುವ ಅವತಾರ ಸ್ತ್ರೀ. ಇಲ್ಲಿ ಅವತಾರ ಪುರುಷ ಶರಣ್ ಆದರೆ, ಅವತಾರ ಸ್ತ್ರೀ ಅಶಿಕಾ ರಂಗನಾಥ್.

    ಱಂಬೋ 2 ನಂತರ ಹಿಟ್ ಕಾಂಬಿನೇಷನ್ ಆಗಿ ಗುರುತಿಸಿಕೊಂಡ ಶರಣ್ ಮತ್ತು ಅಶಿಕಾ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಇದು. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಅವತಾರ ಪುರುಷ ಅಷ್ಟದಿಗ್ಬಂಧನಮಂಡಲಕ ಡಿಸೆಂಬರ್ನಲ್ಲಿ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ಡೈರೆಕ್ಷನ್ನಿನಲ್ಲಿ ಬರುತ್ತಿರೋ ಸಿನಿಮಾದಲ್ಲಿ ಮಸ್ತ್ ಮಸ್ತ್ ಎಂಟರ್ಟೈನ್ಮೆಂಟ್ ಅಂತೂ ಇರಲಿದೆ.

  • ಅವತಾರ್ ಪುರುಷನ ಜೊತೆ ಶ್ರೀನಗರ ಕಿಟ್ಟಿ ಛೂಮಂತ್ರ

    srinagar kitty in avatar purusha

    ಶರಣ್-ಅಶಿಕಾ ರಂಗನಾಥ್-ಸಿಂಪಲ್ ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ್ ಪುರುಷ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಮಂತ್ರವಾದಿಯಾಗಿ. ಸುದೀರ್ಘ ಗ್ಯಾಪ್‍ನ ನಂತರ ಶ್ರೀನಗರ ಕಿಟ್ಟಿ ನಟಿಸುತ್ತಿರುವ ಚಿತ್ರವಿದು. ಅವರದ್ದು ಇಲ್ಲಿ ಅತಿಥಿ ಪಾತ್ರವಾದರೂ, ಚಿತ್ರದಲ್ಲಿ ಅವರ ಪಾತ್ರಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ.

    ಚಿತ್ರದಲ್ಲಿ ಅವತಾರ್ ಪುರುಷ ಶರಣ್. ಅವರ ನಾನಾ ಅವತಾರ್‍ಗಳನ್ನು ಬಯಲು ಮಾಡುವ ಬ್ಲಾಕ್ ಮ್ಯಾಜಿಷಿಯನ್ ಶ್ರೀನಗರ ಕಿಟ್ಟಿ ಎಂದು ಕಿಟ್ಟಿ ಪಾತ್ರದ ಸಂಕ್ಷಿಪ್ತ ವಿವರ ನೀಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

    Related Articles :-

    Srinagara Kitty As Black Magician in Avatara Purusha

  • ಅವತಾರ್ ಪುರುಷನಿಗೆ ಅರ್ಜುನ್ ಜನ್ಯಾ ಬಂದಿದ್ದು ಏಕೆ..?

    reason behind arjun janya's music in avatara purusha

    ಶರಣ್, ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಅವತಾರ್ ಪುರುಷ. ಪುಷ್ಕರ್ ಬ್ಯಾನರ್‌ನಲ್ಲಿ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಚಿತ್ರ ಅವತಾರ್ ಪುರುಷ. ಶ್ರೀನಗರ ಕಿಟ್ಟಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಬೇಕಿತ್ತು. ಆರಂಭದಲ್ಲಿ ಚಿತ್ರತಂಡವೂ ಇದೇ ಮಾತು ಹೇಳಿತ್ತು. ಆದರೀಗ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

    ಇದಕ್ಕೆ ಕಾರಣವೂ ಇದೆ. ರವಿಚಂದ್ರನ್-ಹAಸಲೇಖ, ದರ್ಶನ್-ಹರಿಕೃಷ್ಣ ಜೋಡಿಯಂತೆ ಹಿಟ್ ಆಗಿರುವ ಜೋಡಿ ಶರಣ್-ಜನ್ಯಾ ಕಾಂಬಿನೇಷನ್. ರ‍್ಯಾಂಬೋ, ರ‍್ಯಾಂಬೋ-೨, ಅಧ್ಯಕ್ಷ, ವಿಕ್ಟರಿ, ವಿಕ್ಟರಿ-೨, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦.. ಹೀಗೆ ಇಬ್ಬರ ಜೋಡಿಯ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿರುವುದು ಇದಕ್ಕೆ ಕಾರಣ. ಹಿಟ್ ಜೋಡಿಯನ್ನು ಬೇರೆ ಮಾಡೋದೇಕೆ ಎಂಬ ಕಾರಣಕ್ಕೆ ಜನ್ಯಾ, ಅವತಾರ್ ಪುರುಷನಿಗೆ ಸರಿಗಮಪ ಹೇಳುತ್ತಿದ್ದಾರೆ.

  • ಅಷ್ಟದಿಗ್ಬಂಧನ ಮಂಡಲಕ : ದೆವ್ವದ ಕಥೆಯೋ.. ಮಾಟ ಮಂತ್ರದ ಕಥೆಯೋ.. ಲವ್ ಸ್ಟೋರಿಯೋ..

    ಅಷ್ಟದಿಗ್ಬಂಧನ ಮಂಡಲಕ : ದೆವ್ವದ ಕಥೆಯೋ.. ಮಾಟ ಮಂತ್ರದ ಕಥೆಯೋ.. ಲವ್ ಸ್ಟೋರಿಯೋ..

    ಓವರ್ ಆ್ಯಕ್ಟಿಂಗ್ ಅನಿಲ : ಶರಣ್

    ಓವರ್ ಆಕ್ಟಿಂಗ್ ಮಾಡೋದೇ ಇವನಿಗೆ ಮುಳುವಾಗಬಹುದಾ..? ಶರಣ್ ಪಾತ್ರದಲ್ಲಿ ನಟಿಸಿದ್ದಾರೆ ಅನ್ನೋದಕ್ಕಿಂತ ಜೀವಿಸಿದ್ದಾರೆ. 100ನೇ ಸಿನಿಮಾದಲ್ಲಿ ಹೀರೋ ಆಗಿ ಗೆದ್ದ ಶರಣ್‍ಗೆ ಈ ಪಾತ್ರ ತಮ್ಮ ಆರಂಭದ ದಿನಗಳನ್ನು ನೆನಪಿಸಿದೆಯಂತೆ.

    ಸಿರಿ : ಅಶಿಕಾ ರಂಗನಾಥ್

    ಅನಿಲನನ್ನು ಕರ್ಣ ಎಂದು ಹೇಳ್ಕೊಂಡು ಕರೆದುಕೊಂಡು ಬರೋ ಚೆಲುವೆ. ಬೇಕಿತ್ತಾ ಇದೆಲ್ಲ ಅನ್ನೋವಾಗ್ಲೇ ಲವ್ವಾಗುತ್ತೆ.. ಮುಂದಿರೋದೇ ಚುಟು ಚುಟು..

    ರಾಮಾ ಜೋಯಿಸ್ : ಸಾಯಿಕುಮಾರ್

    ಸಕಲ ವಿದ್ಯಾಪಾರಂಗತರು.

    ಸುಶೀಲಾ : ಭವ್ಯ

    ಇವರು ಹುಡುಕುತ್ತಿರುವ ಮಗನೇ ಕರ್ಣ. ಆತ ಅನಿಲ್ ಅರ್ಥಾತ್ ಶರಣ್ ಅಲ್ಲ. ರಿಯಲ್ ಕರ್ಣ ಸಿಗ್ತಾನಾ..?

    ಯಶೋಧಾ : ಸುಧಾರಾಣಿ

    ತವರು ಮನೆಯ ಪ್ರೀತಿಗಾಗಿ ಕಾಯುತ್ತಿರೋ ಮಗಳು. ಇವರಿಗಾಗಿಯೇ ಸಿರಿ ಅನಿಲನನ್ನು ಕರ್ಣನನ್ನಾಗಿ ತೋರಿಸುವ ಸಾಹಸಕ್ಕೆ ಕೈ ಹಾಕೋದು.

    ಗಣಪ : ಸಾಧುಕೋಕಿಲ

    ಕಾಮಿಡಿಗಾಗಿಯೇ ಹುಟ್ಟಿದ ಅರ್ಧಂಬರ್ಧ ತಿಳಿದುಕೊಂಡಿರೋ ಗಾಂಪ

    ಇನ್ನು ಭೋಜರಾಜ, ಕಂಠೀ ಜೋಯಿಸ, ಬ್ರಹ್ಮ ಜೋಯಿಸ, ಹಿನ್ನುಡಿ.. ಹೀಗೆ ಹಲವು ಪಾತ್ರಗಳು ಬರುತ್ತವೆ. ಶಾಕ್ ಕೊಡಲೆಂದೇ ಬರುವವನು ಕುಮಾರ.

    ಕುಮಾರ : ಶ್ರೀನಗರ ಕಿಟ್ಟಿ

    ಈತನಿಗೆ ನಿಲುಕದ.. ಸಿಲುಕದ ಶಕ್ತಿಗಳೇ ಇಲ್ಲ..

    ಇವರನ್ನೆಲ್ಲ ಇಟ್ಟುಕೊಂಡೇ ಅವತಾರ ಪುರುಷನಿಗೆ ಅಷ್ಟದಿಗ್ಬಂಧನ ಮಂಡಲಕ ಹಾಕಿಸಿದ್ದಾರೆ ಸುನಿ. ಸೇಫ್ ಝೋನ್‍ನಿಂದ ಆಚೆ ಹೋಗಿ ಸೃಷ್ಟಿಸಿರೋ ಹೊಸತನದ ಕತೆ ಅವತಾರ ಪುರುಷ. ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ನಿರೀಕ್ಷೆ ದೊಡ್ಡದು.

  • ಅಳು.. ನಗು.. ಕೋಪ.. ಮುನಿಸು.. ಎಲ್ಲೆಲ್ಲೂ ಅಧ್ಯಕ್ಷನದ್ದು ರೊಮ್ಯಾನ್ಸ್

    adhyaksha's various colors of romance

    ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ರಾಗಿಣಿ ಜೊತೆ ನಟಿಸಿರುವ ಶರಣ್, ಚಿತ್ರದುದ್ದಕ್ಕೂ ಸಿಕ್ಕಾಪಟ್ಟೆ ರೊಮ್ಯಾನ್ಸ್ ಮಾಡಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಗಂಡ.. ಅಲ್ಲಲ್ಲ.. ಹೆಂಡತಿ. ಶರಣ್ ಹೆಂಡತಿ.. ಅಲ್ಲಲ್ಲ.. ಗಂಡ. ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಮಿಡಿ ಇದೆ.

    ಕೋಪದಲ್ಲಿ ರೊಮ್ಯಾನ್ಸ್ ಇದೆ. ಜಗಳದಲ್ಲಿ ರೊಮ್ಯಾನ್ಸ್ ಇದೆ. ವಿರಹದಲ್ಲೂ ರೊಮ್ಯಾನ್ಸ್ ಇದೆ. ಕಾಮಿಡಿಯಲ್ಲೂ ರೊಮ್ಯಾನ್ಸ್ ಇದೆ ಎನ್ನುವುದು ರಾಗಿಣಿ-ಶರಣ್ ಒಕ್ಕೊರಲ ಮಾತು.

    ಅಧ್ಯಕ್ಷದಲ್ಲಿ ಶರಣ್-ಚಿಕ್ಕಣ್ಣ ಜೋಡಿ ಸಕ್ಸಸ್ ಆಗಿತ್ತು. ಅದಾದ ಮೇಲೆ ಇಬ್ಬರೂ ಒಟ್ಟಿಗೇ ನಟಿಸಿದ್ದ ಚಿತ್ರಗಳೂ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದವು. ಈ ಚಿತ್ರದಲ್ಲಿ ಶರಣ್ ಜೊತೆ ಶಿವರಾಜ್ ಕೆ.ಆರ್.ಪೇಟೆ ನಟಿಸಿದ್ದಾರೆ. ನಗೋಕೆ ರೆಡಿಯಾಗಿ.

  • ಆಲ್ ಇಂಡಿಯಾ ರೋಡಲ್ಲಿ ರ್ಯಾಂಬೋ-2 ಸರ್ಕಸ್

    rambo 2 all india jounery

    Rambo- 2. ಇದು ಕಾಮಿಡಿ  ಥ್ರಿಲ್ಲರ್. ಜರ್ನಿಯಲ್ಲೇ ಸಾಗುವ ಕಥೆ. ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಇಡೀ ಭಾರತವನ್ನು ರೌಂಡ್ ಹೊಡೆದಿದೆ. ಒಂಥರಾ ಲಾರಿ, ಕಾರುಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಅನ್ನೋ ಬೋರ್ಡ್ ಇರುತ್ತಲ್ಲಾ.. ಆ ಥರ.. ಹೀಗಾಗಿ ಸಿನಿಮಾ ಟೀಂ, ಕರ್ನಾಟಕ, ಜೋಧ್‍ಪುರ ಕಡೆಗೆಲ್ಲ ಹೋಗಿದೆ. ಆದರೆ, ಸಿನಿಮಾದಲ್ಲಿ ಕಥೆ ನಡೆಯೋದು ಉತ್ತರ ಕರ್ನಾಟಕ ಮತ್ತು ಗೋವಾ ಮಧ್ಯೆ ಜರ್ನಿಯಲ್ಲಿ. ಹಾಗಾದರೆ, ರಾಜಸ್ಥನಕ್ಕೆ ಹೋಗೋ ಅಗತ್ಯ ಏನಿತ್ತು ಅಂತೀರಾ..?

    ಸಿನಿಮಾ ಶೂಟಿಂಗ್ ವೇಳೆ ಕರ್ನಾಟಕದಲ್ಲಿ ಮಳೆಯೋ ಮಳೆ.. ಹಸಿರು ತುಂಬಿತ್ತು. ಹೀಗಾಗಿ ಕರ್ನಾಟಕದ ವಾತಾವರಣ ಹೋಲುವ ರಾಜಸ್ಥಾನದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಯ್ತು. ಇನ್ನು ಕಥೆಯಲ್ಲಿ ಬರುವ ರಸ್ತೆಯ ಫಲಕಗಳನ್ನು ಕನ್ನಡದಲ್ಲಿ ಕಾಣುವಂತೆ ಮಾಡಲು ಅದೇನೇನು ಸರ್ಕಸ್ ಮಾಡಿದ್ದಾರೋ.. ನಿರ್ದೇಶಕ ಅನಿಲ್ ಚಿತ್ರೀಕರಣದ ರಸಘಳಿಗೆಗಳನ್ನು ಹೇಳಿಕೊಳ್ತಾರೆ.

    ನಾವು ಶೂಟಿಂಗ್‍ಗೆ ಪ್ಲಾನ್ ಮಾಡಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ಶೂಟಿಂಗ್ ಶುರುವಾಗುವ ಹೊತ್ತಿಗೆ ಇಡೀ ಪ್ರದೇಶ ಹಸಿರೋ ಹಸಿರು. ಹೀಗಾಗಿ ರಾಜಸ್ಥಾನ ಹುಡುಕಿಕೊಂಡೆವು. ಗೋವಾದ ದೃಶ್ಯಗಳನ್ನೂ ಅಷ್ಟೆ.. ಕೆಲವು ಸೀನ್‍ಗಳನ್ನು ಗೋವಾ ಹೋಲುವ ರಾಮೇಶ್ವರಂನಲ್ಲಿ ಶೂಟ್ ಮಾಡಲಾಗಿದೆ. ಆದರೆ, ಇದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಎಷ್ಟರಮಟ್ಟಿಗೆ ಅಂದ್ರೆ, ರಸ್ತೆಯಲ್ಲಿ ಬರುವ ಫಲಕಗಳನ್ನೂ ಕೂಡಾ ನಾವು ಕನ್ನಡಮಯವಾಗಿಸಿದ್ದೇವೆ. ಹೀಗಾಗಿ ಯಾವುದು ಉತ್ತರ ಕರ್ನಾಟಕ.. ಯಾವುದು ರಾಜಸ್ಥಾನ.. ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಜೋಧ್‍ಪುರ್, ಜೈಸಲ್ಮೇರ್, ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ಶೂಟಿಂಗ್ ಆಗಿದೆ ಎಂದು ಶೂಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಅನಿಲ್.

    ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾಗಿದ್ದರೆ, ಚಿಕ್ಕಣ್ಣ ಕಾಂಬಿನೇಷನ್ ಕೂಡಾ ಸಿನಿಮಾದಲ್ಲಿದೆ. ನಾಳೆಯೇ ಸಿನಿಮಾ ರಿಲೀಸ್. ತರುಣ್ ಸುಧೀರ್ ಸಾರಥ್ಯದಲ್ಲಿ ತಂತ್ರಜ್ಞರು ಮತ್ತು ಕಲಾವಿದರು ಒಗ್ಗೂಡಿ ನಿರ್ಮಿಸಿರುವ ಸಿನಿಮಾ ಇದು. 

  • ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಶರಣ್ ಈಗ ಹೇಗಿದ್ದಾರೆ..?

    Sharan's Health Update

    ಕನ್ನಡದ ಕಾಮಿಡಿ ಕಿಂಗ್ ಶರಣ್ ಅವತಾರ್ ಪುರುಷ ಶೂಟಿಂಗ್ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದು, ನಂತರ ಡಿಸ್‍ಚಾರ್ಜ್ ಆಗಿದ್ದು ಗೊತ್ತಿರೋ ವಿಷಯವೇ. ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದ ಶರಣ್ ಆರೋಗ್ಯ ಪರಿಸ್ಥಿತಿ ಸುಧಾರಿಸಿರುವುದು ಹೌದು. ಆದರೆ, ಶರಣ್ ಸಂಪೂರ್ಣ ಗುಣಮುಖರಾಗಬೇಕು ಎಂದರೆ ಅವರು ವೈದ್ಯರು ಹೇಳಿದ್ದನ್ನು ಪಾಲಿಸಲೇಬೇಕು.

    ಶರಣ್ ಈ ಮೊದಲು ಯಾರಾದರೂ ನೀರು ಕುಡಿಯಿರಿ ಎಂದರೆ ತಲೆಗೆ ಹಾಕಿಕೊಳ್ತಾ ಇರಲಿಲ್ಲ. ಈಗ ಅವರೇ ಯಾರಾದರೂ ನೀರು ಕುಡೀರಿ ಎಂದರೆ ಕಡೆಗಣಿಸಬೇಡಿ ಎನ್ನುತ್ತಿದ್ದಾರೆ. ಕಾರಣ ಇಷ್ಟೆ, ಶರಣ್ ಅವರಿಗೆ ಕಿಡ್ನಿ ಸ್ಟೋನ್ ಆಗಿದೆ. ನನಗೆ ನೀರು ಕುಡಿಯೋ ಅಭ್ಯಾಸವೇ ಇರಲಿಲ್ಲ. ಇದೇ ಮೊದಲು ಈ ರೀತಿ ತೊಂದರೆ ಕಾಣಿಸಿಕೊಂಡಿದ್ದು. ಮೊದಲು ಮಸಲ್ ಕ್ಯಾಚ್ ಎಂದುಕೊಂಡೆ. ಆದರೆ ಹೊಟ್ಟೆನೋವು ತೀವ್ರವಾದಾಗ ಆಸ್ಪತ್ರೆ ಸೇರಿಕೊಂಡೆ. ಈಗ ವೈದ್ಯರೇ ಸಲಹೆ ಕೊಟ್ಟಿದ್ದಾರೆ. ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಿಕೊಂಡು ಇಟ್ಟುಕೊಳ್ಳಬೇಕು ಎಂದಿದ್ದಾರೆ ಶರಣ್.

    ಅಕಸ್ಮಾತ್, ಇದರಿಂದ ಕಿಡ್ನಿ ಸ್ಟೋನ್ ಹೋಗದೇ ಇದ್ದಲ್ಲಿ ಸರ್ಜರಿ ಅನಿವಾರ್ಯವಂತೆ. 

  • ಎಲ್ಲ ಸಿನಿಮಾ ಎಂಡ್ ಆಗುವ ದೃಶ್ಯದಿಂದಲೇ ಅಧ್ಯಕ್ಷನ ಸ್ಟೋರಿ ಆರಂಭ..!

    adhyaksha in america has different story

    ಬಹುತೇಕ ಸಿನಿಮಾಗಳ ಕ್ಲೈಮಾಕ್ಸ್ ಏನಿರುತ್ತೆ ಹೇಳಿ.. ಆ್ಯಕ್ಷನ್ ಸಿನಿಮಾ ಬಿಟ್ಹಾಕಿ.. ಬೇರೆ ಸಿನಿಮಾಗಳ ವಿಚಾರಕ್ಕೆ ಬಂದರೆ ಹೀರೋ-ಹೀರೋಯಿನ್ ಮದುವೆಯ ದೃಶ್ಯ. ನಾಯಕ, ನಾಯಕಿಗೆ ತಾಳಿ ಕಟ್ಟಿದರೆ ಸಿನಿಮಾ ಶುಭಂ. ಆದರೆ, ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಶುರುವಾಗುವುದೇ ಮದುವೆಯಿಂದ.

    ಶರಣ್ ಕಾಮಿಡಿಗೆ ಕಿಂಗ್. ಆದರೆ ರಾಗಿಣಿಗೆ ಇದು ಮೊದಲ ಕಾಮಿಡಿ ಸಿನಿಮಾ. ಚಿತ್ರದ ಬಹುತೇಕ ಶೂಟಿಂಗ್ ಅಮೆರಿಕದಲ್ಲಿಯೇ ಆಗಿದೆ. ಗಂಡ-ಹೆಂಡತಿ ಸಂಬಂಧದ ಕಥೆಯನ್ನು ಕಾಮಿಡಿಯಾಗಿ ಹೇಳಿದ್ದಾರೆ ನಿರ್ದೇಶಕ ಯೋಗಾನಂದ್. ಚಿತ್ರಕ್ಕೆ ವಿಶ್ವಪ್ರಸಾದ್, ವಿವೇಕ್ ನಿರ್ಮಾಪಕರು.

  • ಐಟಂ ಸಾಂಗ್‍ಗೆ ಐಂದ್ರಿತಾ ಒಪ್ಪಿದ್ದು ಹೀಗೆ..

    special song in rambo 2 movie

    ರ್ಯಾಂಬೋ 2 ಚಿತ್ರ, ರಿಲೀಸ್‍ಗೂ ಮೊದಲೇ ಸದ್ದು ಮಾಡ್ತಿರೋದು ಹಾಡುಗಳಿಂದ. ಒಂದೊಂದು ಹಾಡೂ ಒಂದೊಂದು ರೀತಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಅದರಲ್ಲಿ ಒಂದು ಐಂದ್ರಿತಾ ಹೆಜ್ಜೆ ಹಾಕಿರುವ ಐಟಂ ಡ್ಯಾನ್ಸ್. ಚಿತ್ರದ ವಿಡಿಯೋ ಸಾಂಗ್‍ನ್ನು ಚಿತ್ರತಂಡ ಇನ್ನೂ ಬಿಡುಗಡೆ ಮಾಡಿಲ್ಲ. ಲಿರಿಕಲ್ ಹಾಡಿಗೇ ಚಿತ್ರರಸಿಕರು ಥ್ರಿಲ್ಲಾಗಿದ್ದಾರೆ.

    ಆದರೆ, ಈ ಹಾಡಿಗೆ ಹೆಜ್ಜೆ ಹಾಕಿಸೋಕೆ ನಿರ್ಮಾಪಕರು ಐಂದ್ರಿತಾ ಬೆನ್ನು ಬಿದ್ದು ಒಪ್ಪಿಸಿದ ಕಥೆ ಇದ್ಯಲ್ಲ, ಅದು ಐಟಂ ಹಾಡಿನಷ್ಟೇ ಇಂಟ್ರೆಸ್ಟಿಂಗ್. ಬಸಂತಿ, ಮೂರೇ ಮೂರು ಪೆಗ್ಗು, ಸೌಂದರ್ಯ ಸಮರದಂತಹಾ ಸಾಂಗ್‍ಗಳಲ್ಲಿ ಐಂದ್ರಿತಾ ರೈ ಮಿಂಚಿದ್ದರು. ಆದರೆ ಅದಾದ ಮೇಲೆ ಐಟಂ ಸಾಂಗುಗಳ ಸಹವಾಸವೇ ಬೇಡ ಎಂದುಬಿಟ್ಟಿದ್ದರು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ಐಂದ್ರಿತಾ ರೈ ಅವರನ್ನು ಕಾಂಟ್ಯಾಕ್ಟ್ ಮಾಡಿದಾಗ ನೋ ಎಂದು ಫೋನಿಟ್ಟಿದ್ದರಂತೆ ಐಂದ್ರಿತಾ.

    ಭೇಟಿ ಮಾಡಿ ಒಂದ್ಸಲ ಹಾಡು ಕೇಳಿ ಎಂದರೂ ಒಪ್ಪಿರಲಿಲ್ಲ. ಕೊನೆಗೆ ಹಠಕ್ಕೆ ಬಿದ್ದು, ಒಂದ್ಸಲ ಹಾಡು ಕೇಳಿ ಎಂದು ಇಯರ್ ಫೋನ್ ಕೊಟ್ಟು ಕೇಳಿಸಿದೆ. ಅರ್ಧ ಹಾಡು ಕೂಡಾ ಮುಗಿದಿರಲಿಲ್ಲ, ಐಂದ್ರಿತಾ ಎಸ್ ಎಂದಿದ್ದರು ಎಂದು ಹಾಡಿನ ಕಥೆ ಬಿಚ್ಚಿಟ್ಟಿದ್ದಾರೆ ತರುಣ್ ಸುಧೀರ್.

    ಚಿತ್ರದಲ್ಲಿ ಈ ಹಾಡಿಗೆ ಧ್ವನಿಯಾಗಿರುವುದು ಅರುಣ್ ಸಾಗರ್ ಅವರ ಪುತ್ರ ಆದಿತಿ ಸಾಗರ್. ಪುಟ್ಟ ಹುಡುಗಿಯಾದರೂ, ಧ್ವನಿ ಜಯಶ್ರೀ ಅವರನ್ನು ನೆನಪಿಸುವಂತಿದೆ ಎಂದು ಗುನುಗುತ್ತಿರುವುದು ಚಿತ್ರರಸಿಕರು.

  • ಒಂದೇ ಚಿತ್ರ.. ಏಳೆಂಟು ಅವತಾರ..

    sharan talks about avatara purusha specialty

    ಅಧ್ಯಕ್ಷನಾಗಿ.. ಕಳ್ಳನಾಗಿ.. ರೋಮಿಯೋ ಆಗಿ.. ಹುಡುಗಿಯಾಗಿ.. ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರೋ ಶರಣ್, ಈ ಬಾರಿ ಒಂದೇ ಚಿತ್ರದಲ್ಲಿ ಏಳೆಂಟು ಅವತಾರ ಎತ್ತಿದ್ದಾರೆ. ಅವತಾರ ಪುರುಷ ಚಿತ್ರದಲ್ಲಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಅವತಾರ್ ಪುರುಷ ಶರಣ್ಗೆ ಅಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದು ಕಂಪ್ಲೀಟ್ ಸಿಂಪಲ್ ಸುನಿ ಎನ್ನುವ ಶರಣ್ ‘‘ಚಿತ್ರದಲ್ಲಿ ಏಳೆಂಟು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಹಾಡು ಶೂಟಿಂಗ್ ಬ್ಯಾಲೆನ್ಸ್ ಇದೆ. ಲೆಕ್ಕಾಚಾರದ ಪ್ರಕಾರವೇ ಎಲ್ಲವೂ ನಡೆದರೆ, ಬೇಸಗೆಯಲ್ಲಿ ಸಿನಿಮಾ ರಿಲೀಸ್’’ ಎಂದು ಮಾಹಿತಿ ನೀಡಿದ್ದಾರೆ.

    ನಾನು ಈವರೆಗೆ ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಇದು ತುಂಬಾ ವಿಭಿನ್ನ. ನಾನು ವಿಪರೀತ ಪ್ರಯೋಗಕ್ಕೆ ಹೋಗಲ್ಲ. ನನಗೆ ನನ್ನ ಲಿಮಿಟ್ ಗೊತ್ತಿದೆ. ಈ ಚಿತ್ರದಲ್ಲಿ ಲವ್‌, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟರಿ, ಡ್ರಾಮಾ ಎಲ್ಲವೂ ಇದೆ. ಜೊತೆಯಲ್ಲಿ ಬ್ಲಾಕ್ ಮ್ಯಾಜಿಕ್ ಕೂಡಾ ಇದೆ. ಬ್ಲಾಕ್ ಮ್ಯಾಜಿಕ್ ಕಥಾ ಹಂದರದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎಂದಿದ್ದಾರೆ ಶರಣ್.

    ಬ್ಲಾಕ್ ಮೆಜಿಷಿಯನ್ ಅವತಾರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದರೆ, ಭವ್ಯಾ ಅತ್ಯಂತ ಪ್ರಮುಕ ರೋಲ್ನಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.

  • ಕಾಳಿದಾಸನ ಕಥೆ ಹೇಳೋದು ಶರಣ್..!

    sharan tells kaalidasa kannada mestru story

    ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟುç ಚಿತ್ರಕ್ಕೆ ಕವಿರಾಜ್ ನಿರ್ದೇಶಕ. ಮೇಘನಾ ಗಾಂವ್ಕರ್ ನಾಯಕಿ. ೯೦ರ ದಶಕದ ಕಥೆ ಇದು. ಕನ್ನಡ ಮೇಷ್ಟುç ಆಗ ಹೇಗಿದ್ದರು, ತೊಳಲಾಟಗಳೇನು.. ಎಲ್ಲವನ್ನೂ ಒಂದು ಕಾಮಿಡಿಯ ಚೌಕಟ್ಟಿನಲ್ಲಿ ಜೋಡಿಸಿದ್ದಾರೆ ಕವಿರಾಜ್. ಇದುವರೆಗೆ ಲವ್ಲಿ ಲವ್ಲಿ ಕ್ಯಾರೆಕ್ಟರುಗಳಲ್ಲಿ ಕಂಗೊಳಿಸಿದ್ದ ಮೇಘನಾ ಗಾಂವ್ಕರ್, ಈ ಚಿತ್ರದಲ್ಲಿ ಜಗ್ಗೇಶ್ ಪಾಲಿನ ಕಾಳಿಯಾಗಿದ್ದಾರೆ.

    ಇವೆಲ್ಲಕ್ಕಿಂತಲೂ ವಿಶೇಷ, ಚಿತ್ರದ ಹಿನ್ನೆಲೆ ಧ್ವನಿಯದ್ದು. ಏಕೆಂದರೆ, ಈ ಚಿತ್ರದಲ್ಲಿ ಪ್ರತಿ ಪಾತ್ರದ ಪರಿಚಯ ಮಾಡಿಕೊಟ್ಟಿರುವುದು ಶರಣ್. ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದಿರುವ ಶರಣ್ ಧ್ವನಿ, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

  • ಖೋಖೋ ಸಿನಿಮಾ ಗುರು ಶಿಷ್ಯರು ನೋಡಬೇಕಾದ ಸಿನಿಮಾ : ಶರಣ್ ಕೊಟ್ಟರು ಕಾರಣ

    ಖೋಖೋ ಸಿನಿಮಾ ಗುರು ಶಿಷ್ಯರು ನೋಡಬೇಕಾದ ಸಿನಿಮಾ : ಶರಣ್ ಕೊಟ್ಟರು ಕಾರಣ

    ಗುರು ಶಿಷ್ಯರು ಥಿಯೇಟರುಗಳಲ್ಲಿದೆ. ಮೊದಲಿಗೆ ಗಮನ ಸೆಳೆದಿದ್ದು ಗುರು ಶಿಷ್ಯರು ಚಿತ್ರದ ಟೈಟಲ್. ಅದು ವಿಷ್ಣುವರ್ಧನ್-ಮಂಜುಳಾ-ದ್ವಾರಕೀಶ್ ಸೇರಿದಂತೆ ನವರಸರತ್ನಗಳು ನಟಿಸಿದ್ದ 80ರ ದಶಕದ ಅದ್ಭುತ ಕಾಮಿಡಿ ಸಿನಿಮಾ. ಆ ಟೈಟಲ್ ಇಟ್ಟುಕೊಂಡು ಮಾಡಿದ ಸಿನಿಮಾದಲ್ಲಿರೋದು ಕಾಮಿಡಿ ಕಥೆಯಲ್ಲ.. ಖೋಖೋ ಕಥೆ.  

    ಅಲ್ಲದೆ ಮಾರ್ಗದರ್ಶಿ ಅನ್ನೋ ಚಿತ್ರದಲ್ಲಿ ಡಾ.ರಾಜ್ ಹಾಡಿದ್ದ ಹಾಡನ್ನು.. ಅದೂ ಕುವೆಂಪು ವಿರಚಿತ ಗೀತೆ ನಡೆ ಮುಂದೆ.. ನಡೆ ಮುಂದೆ.. ಹಾಡನ್ನು ಈ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ. ಆ ಗೀತೆಗೆ ಹೆಚ್ಚು ಕಡಿಮೆ ಶತಮಾನದ ಇತಿಹಾಸವಿದೆ.

    ಚಿತ್ರದಲ್ಲಿ ನಾಯಕ ಶರಣ್. ನಾಯಕಿ ನಿಶ್ವಿಕಾ ನಾಯ್ಡು. ನಿರ್ದೇಶಕ ಜಡೇಶ್ ಕುಮಾರ್ ಹಂಪಿ. ಅಲ್ಲದೆ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಶರಣ್, ನವೀನ್ ಕೃಷ್ಣ, ರವಿಶಂಕರ್ ಗೌಡ, ಬುಲೆಟ್ ಪ್ರಕಾಶ್ ಹಾಗೂ ಶಾಸಕ ರಾಜೂಗೌಡ ಪುತ್ರರು ನಟಿಸಿದ್ದಾರೆ.

    ಚಿತ್ರದ ಹಾಡುಗಳು ನಡೆ ಮುಂದೆ.. ನಡೆ ಮುಂದೆ.., ಆಣೆ ಮಾಡಿ ಹೇಳುತೀನಿ ನೀನು ನನ್ನವಳು.. ಹಾಡು ಹಿಟ್ ಆಗಿವೆ. ಆದರೆ.. ಇವೆಲ್ಲವನ್ನೂ ಮೀರಿದ ಇನ್ನಷ್ಟು ಕಾರಣಗಳನ್ನು ಕೊಟ್ಟಿದ್ದಾರೆ ಚಿತ್ರದ ಹೀರೋ ಕಂ ನಿರ್ಮಾಪಕ ಶರಣ್.

    ಈ ಚಿತ್ರದಲ್ಲಿ ನಿಮಗೆ ಶರಣ್ ಸಿಗಲ್ಲ. ದೈಹಿಕ ಶಿಕ್ಷಕ ಮನೋಹರ್ ಸಿಗುತ್ತಾರೆ. ಅಷ್ಟರಮಟ್ಟಿಗೆ ಚಿತ್ರದಲ್ಲಿ ಕಥೆಯೇ ಹೀರೋ. ಚಿತ್ರದ ಪಾತ್ರ ಗಂಭೀರವಾದದ್ದು. ಅದರೂ ಕಾಮಿಡಿ ಇದೆ. ಹಾಸ್ಯ ನನ್ನ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಶರಣ್.

    ಮನೋಹರನನ್ನು ನನ್ನೊಳಗೆ ಇಳಿಸಿದ್ದು ಜಡೇಶ್ ಮತ್ತು ತರುಣ್ ಸುಧೀರ್. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕ್ರೀಡೆಯನ್ನು ಬಳಸಿಕೊಂಡಿದ್ದೇವೆ. ಚಿತ್ರದಲ್ಲಿ ಖೋಖೋಗಾಗಿ ನಾನು ತರಬೇತಿ ಪಡೆದುಕೊಂಡು ನಟಿಸಿದ್ದೇನೆ. ಚಿತ್ರ ನೋಡಿ ಬಂದವರು ಖೋಖೋ ಮತ್ತು ಸಿನಿಮಾ ಎರಡನ್ನೂ ಮೆಚ್ಚಿಕೊಳ್ಳುತ್ತಾರೆ ಎನ್ನುವುದು ಶರಣ್ ನಂಬಿಕೆ.

  • ಗುರು ರಾಯರ ಹಾಡು ಹಾಡಿ ಶಾಸ್ತಿçÃಯ ಸಂಗೀತಗಾರನಾದ ಶರಣ್

    sharan sings dvotional song at an evernt in tumkur

    ಅದು ತುಮಕೂರಿನ ಗುಬ್ಬಿ ವೀರಣ್ಣ ರಂಗಮAದಿರ. ಹಾಡುತ್ತಿದ್ದವರು ಶರಣ್. ಜೊತೆಯಲ್ಲಿದ್ದವರು ಶಂಕರ್ ಶಾನ್‌ಬಾಗ್. ಎದುರಿನಲ್ಲಿದ್ದವರು ಭಾರತೀಯ ಜೈನ ಸಮುದಾಯದ ಯುಗಳ ಮುನಿ ಶ್ರೀ ಅಮೋಘತೀರ್ಥ ಮಹಾರಾಜರು ಮತ್ತು ಮುನಿ ಶ್ರೀ ಅಮರಕೀರ್ತಿ ಮಹಾರಾಜರು. ಆ ಜೈನ ಮುನಿಗಳೇನೂ ಸಾಮಾನ್ಯರಲ್ಲ, ಇಡೀ ದೇಶವನ್ನು ಕಾಲ್ನಡಿಗೆಯಲ್ಲೇ ಸುತ್ತುವ ತಪಸ್ವಿಗಳು. ಒಂದು ಪ್ರದೇಶಕ್ಕೆ ಕಾಲಿಟ್ಟರೆ, ಮತ್ತೆ ಅಲ್ಲಿಗೆ ಬರುವುದು ೧೨ ವರ್ಷಗಳ ನಂತರ. ಅಂತಹ ಸಾಧಕರ ಸಮ್ಮುಖದಲ್ಲಿ ಶಾಸ್ತಿçÃಯ ಸಂಗೀತದಲ್ಲಿ ಹಾಡು ಹಾಡಿದ್ದಾರೆ ನಟ ಶರಣ್.

    ಗುರು ರಾಯರಿಗಾಗಿ ಡಾ.ರಾಜ್ ಕುಮಾರ್ ಹಾಡಿರುವ ಏನೋ ದಾಹ.. ಯಾವ ಮೋಹ.. ತಿಳಿಯದಾಗಿದೆ.. ಸ್ವಾಮಿ.. ಹಾಡನ್ನು ಹಾಡಿದ್ದಾರೆ ಶರಣ್. ಅದು ಜಿನ ಭಜನೆ ಕಾರ್ಯಕ್ರಮ. ಯಾವ ಹಾಡು ಹಾಡುವುದು ಎಂಬ ಗೊಂದಲದಲ್ಲಿದ್ದೆ. ನನಗೆ ಜಿನ ಭಜನೆ ಗೊತ್ತಿಲ್ಲ. ಯಾವ ಹಾಡುವುದು ಎಂದಾಗ ನಮ್ಮ ತಂದೆ ನಾಟಕ ಕಂಪೆನಿಯಲ್ಲಿದ್ದಾಗ ಹಾಡುತ್ತಿದ್ದ ಹಾಡು ನೆನಪಾಯಿತು. ಹಾಡುವುದೇ ಬೇಡವೇ ಎಂಬ ಗೊಂದಲದಲ್ಲಿದ್ದೆ. ಆಗ ಸುರೇಂದ್ರ ಕುಮಾರ್ (ವೀರೇಂದ್ರ ಹೆಗ್ಗಡೆಯವರ ಸಹೋದರ. ಕಾರ್ಯಕ್ರಮದ ಆಯೋಜಕರು) ಅವರು ಎಲ್ಲರ ಗುರಿ ಒಂದೇ. ಪಥ ಬೇರೆ. ಭಕ್ತಿ ಮಾರ್ಗ ಬೇರೆಯಾದರೂ ಉದ್ದೇಶ ಒಂದೇ. ಹಾಡಿ ಎಂದು ಧೈರ್ಯ ತುಂಬಿದರು. ಹಾಡಿದೆ ಎಂದಿದಿದ್ದಾರೆ ಶರಣ್.

    ಅಂದಹಾಗೆ ಶರಣ್ ಶಾಸ್ತಿçÃಯ ಸಂಗೀತವನ್ನು ಶಾಸ್ತಿçÃಯವಾಗಿ ಕಲಿತಿಲ್ಲ. ಕೇಳಿದ್ದನ್ನು ನೋಡಿದ್ದನ್ನು ಸ್ವಯಂಕೃಷಿ ಮಾಡಿದ್ದಾರೆ ಅಷ್ಟೆ. ಹಾಡುವುದು ನಾನು ಕಲಿತಿದ್ದಲ್ಲ. ಗಳಿಸಿದ್ದಲ್ಲ. ವಂಶಪಾರAಪರ್ಯವಾಗಿ ನಾವು ಪಡೆದುಕೊಂಡ ಭಾಗ್ಯ ಎಂದಿದ್ದಾರೆ ಶರಣ್. 

  • ಗುರು ಶಿಷ್ಯರ `ಸೂಜಿ'ಯ ಕಥೆ ಕೇಳಿ

    ಗುರು ಶಿಷ್ಯರ `ಸೂಜಿ'ಯ ಕಥೆ ಕೇಳಿ

    ಗುರು ಶಿಷ್ಯರು. ಸೆಪ್ಟೆಂಬರ್ 26ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಖೋಖೋ ಆಟವನ್ನು ಬೇಸ್ ಆಗಿಟ್ಟುಕೊಂಡು ಮಾಡಿರುವ ಸಿನಿಮಾ ಇದು. ಖೋಖೋ ಆಟದ ಕಥೆ ಎಂದುಕೊಂಡರೆ ಮಲಯಾಳಂನ ಖೋಖೋ ಬಿಟ್ಟರೆ ಬೇರೊಂದು ಚಿತ್ರ ಇಲ್ಲ.

    ಗುರು ಶಿಷ್ಯರು ಚಿತ್ರದಲ್ಲಿ ಖೋಖೋ ಹೇಳಿಕೊಡುವ ಪಿಟಿ ಮಾಸ್ಟರ್ ಆಗಿ ಶರಣ್ ನಟಿಸಿದ್ದಾರೆ. ಸೂಜಿಯಾಗಿ ನಟಿಸಿರೋದು ನಿಶ್ವಿಕಾ ನಾಯ್ಡು. ಈಗಷ್ಟೇ ಗಾಳಿಪಟ 2 ಗೆಲುವಿನ ಗುಂಗಿನಲ್ಲಿರುವ ನಿಶ್ವಿಕಾ ನಾಯ್ಡು ಮತ್ತೊಂದು ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.

    ಗುರು ಶಿಷ್ಯರು ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸೂಜಿ. ಹಳ್ಳಿ ಹುಡುಗಿ. ಡೈರಿ ಫಾರ್ಮ್ ನಡೆಸುವ ಹಾಗೂ ಹಾಲು ಮಾರುವ ಹುಡುಗಿ. ವೇಷಭೂಷಣವೂ ಹಳ್ಳಿ ಸೊಗಡೇ. ಚಿತ್ರಕ್ಕಾಗಿ ಪಕ್ಕಾ ಹಳ್ಳಿ ಭಾಷೆಯಲ್ಲಿ ಮಾತನಾಡುವುದು ಹಾಗೂ ಸೈಕಲ್ ಹೊಡೆಯುವುದು ಕಲಿತುಕೊಂಡೆ. ತೂಕವನ್ನೂ ಇಳಿಸಿಕೊಂಡೆ. ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ನಿಶ್ವಿಕಾ ನಾಯ್ಡು.

    ಚಿತ್ರದಲ್ಲಿ ರವಿಚಂದ್ರನ್ ಅಭಿಮಾನಿಯ ಪಾತ್ರವಂತೆ. ರಿಯಲ್ ಲೈಫಲ್ಲೂ ನಿಶ್ವಿಕಾ ನಾಯ್ಡು ರವಿಚಂದ್ರನ್ ಫ್ಯಾನ್ ಎನ್ನುವುದು ವಿಶೇಷ. ಬೆಳ್ಳಿತೆರೆಯಲ್ಲಿ ಖೋಖೋ ಆಧಾರವಾಗಿಟ್ಟುಕೊಂಡು ಕನ್ನಡ ಸಿನಿಮಾ ಬಂದಿಲ್ಲ. ಇದೊಂದು ಹೆಗ್ಗುರುತು ಮೂಡಿಸುವ ಸಿನಿಮಾ ಆಗಲಿದೆ ಎನ್ನುವುದು ನಿಶ್ವಿಕಾ ಭರವಸೆ.

    ಜಂಟಲ್‍ಮನ್ ಚಿತ್ರದ ಮೂಲಕ ತಾನೊಬ್ಬ ಡಿಫರೆಂಟ್ ಡೈರೆಕ್ಟರ್ ಎಂದು ಸಾಬೀತು ಮಾಡಿದ್ದ ಜಡೇಶ್ ಕೆ.ಹಂಪಿ ಚಿತ್ರದ ನಿರ್ದೇಶಕ. ತರುಣ್ ಸುಧೀರ್ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಚಿತ್ರದ ನಿರ್ಮಾಣ ಶರಣ್ ಮತ್ತು ತರುಣ್ ಅವರದ್ದು.

  • ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

    ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

    ಗುರು ಶಿಷ್ಯರು ಚಿತ್ರ ಇಷ್ಟವಾಗೋಕೆ ಹಲವು ಕಾರಣಗಳಿವೆ. ಚೆಂದದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ.. ಶರಣ್, ನಿಶ್ವಿಕಾ ಹಾಗೂ 12 ಹುಡುಗರ ಗತ್ತು ಗೈರತ್ತಿನ ಅಭಿನಯ.. ಇವೆಲ್ಲವನ್ನೂ ಮೀರಿ ಇಷ್ಟವಾಗಿದ್ದು ಖೋಖೋ ಆಟದ ಹಿನ್ನೆಲೆಯ ಕಥೆ ಇರುವ ಕಾರಣಕ್ಕೆ. ಚಿತ್ರವನ್ನು ಪ್ರೇಕ್ಷಕರು ಕೈಚಾಚಿ ಮನದುಂಬಿ ಅಪ್ಪಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಇಂಥಾದ್ದೊಂದು ಚಿತ್ರ ಕನ್ನಡದಲ್ಲಿ ಬರಬೇಕಿತ್ತು. ಇನ್ನು ಮುಂದೆಯೂ ಇಂತಹ ಚಿತ್ರಗಳು ಬರಲಿ ಎಂದು ಹಾರೈಸುತ್ತಿದ್ದಾರೆ.

    ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಶರಣ್, ನಿಶ್ವಿಕಾ  ನಾಯ್ಡು, ತರುಣ್ ಸುಧೀರ್ ಎಲ್ಲರೂ ಮೆಚ್ಚುಗೆಯ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ. ಚಿತ್ರ ಬಿಡುಗಡೆ ದಿನವೇ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಿಗೆ ತೋರಿಸುವುದಾಗಿ ಶರಣ್ ಹೇಳಿಕೊಂಡಿದ್ದರು. ಇದೀಗ ಶರಣ್ ಖುದ್ದು ಮುಖ್ಯಮಂತ್ರಿಗಳನ್ನು  ಭೇಟಿ ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.

    ಸಿನಿಮಾ ಬಗ್ಗೆ ಕೇಳಿದ್ದೇನೆ. ಖೋಖೋ ಆಟವನ್ನು ಹೈಲೈಟ್ ಮಾಡಿ ತೋರಿಸಿದ್ದೀರಂತೆ. ಖಂಡಿತಾ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡುತ್ತೇನೆ. ಇಂತಹ ಇನ್ನಷ್ಟು ಚಿತ್ರಗಳು ಬರಲಿ ಎಂದಿದ್ದಾರೆ ಬಸವರಾಜ ಬೊಮ್ಮಾಯಿ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಮ್ಮ ಚಿತ್ರತಂಡದ ಭೇಟಿಗೆ ಸಮಯ ನೀಡಿದ ಮುಖ್ಯಮಂತ್ರಿಗಳಿಗೆ ನಟ ಶರಣ್, ತರುಣ್ ಸುಧೀರ್, ಜಡೇಶ್ ಕುಮಾರ್ ಹಂಪಿ ಹಾಗೂ ಗುರು ಶಿಷ್ಯರು ಚಿತ್ರತಂಡ ಧನ್ಯವಾದ ಅರ್ಪಿಸಿದೆ.

  • ಗುರು ಶಿಷ್ಯರು : ಶರಣ್`ಗೆ ಠಕ್ಕರ್ ಕೊಡೋವ್ರೆಲ್ಲ ಸ್ಟಾರ್ ನಟರ ಮಕ್ಕಳೇ..

    ಗುರು ಶಿಷ್ಯರು : ಶರಣ್`ಗೆ ಠಕ್ಕರ್ ಕೊಡೋವ್ರೆಲ್ಲ ಸ್ಟಾರ್ ನಟರ ಮಕ್ಕಳೇ..

    ಗುರು ಶಿಷ್ಯರು. ಇತ್ತೀಚೆಗಷ್ಟೇ ಚಿತ್ರದ ಪುಟ್ಟ ಪುಟ್ಟ ಮಕ್ಕಳ ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗಿದೆ. ಚಿತ್ರದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ನಟಿಸಿದ್ದಾರೆ. ಖೋಖೋ ಕಲಿಸ್ತಾರಂತೆ. ಖೋಖೋ ಕಲಿಸ್ತಾರಂತೆ ಅಂದ್ಮೇಲೆ ಖೋಖೋ ಹುಡುಗರ ಟೀಂ ಕೂಡಾ ಇರಬೇಕಲ್ವಾ? ಈಗ ಬಿಟ್ಟಿರೋ 13 ಹುಡುಗರ ಟೀಂ ಅದೇ. ಆದರೆ ವಿಶೇಷವೇನು ಗೊತ್ತೇ..? ಇವರೆಲ್ಲ ಸ್ಟಾರ್ ನಟರ ಮಕ್ಕಳು. 13ರಲ್ಲಿ 6 ಜನ ಕಲಾವಿದರ ಮಕ್ಕಳೇ..

    ಸ್ವತಃ ಶರಣ್ ತಮ್ಮ ಪುತ್ರ ಹೃದಯ್‍ನನ್ನು ತೆರೆಗೆ ತರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ನಟ ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್ ಹಾಗೂ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಇಲ್ಲಿ ನಟಿಸುತ್ತಿದ್ದಾರೆ. ಶಾಸಕ ರಾಜುಗೌಡ ಪುತ್ರ ಮಣಿಕಾಂತ್ ನಾಯಕ್ ಕೂಡಾ ಇಲ್ಲಿ ನಟಿಸುತ್ತಿರೋದು ಇನ್ನೊಂದು ಸ್ಪೆಷಲ್.

    ಸುಮಾರು 450 ಹುಡುಗರನ್ನು ಅಡಿಷನ್ ಮಾಡಿ ಫೈನಲ್ ಮಾಡಿರೋ 13 ಹುಡುಗರು ಇವರು. ಹಾಗಂತ ಇವರನ್ನು ಸುಮ್ಮನೆ ಆಕ್ಟ್ ಮಾಡಿಸಿಲ್ಲ. ವಿಜಯನಗರ ಖೋಖೋ ಫೆಡರೇಷನ್ ಕ್ಲಬ್‍ಗೆ ಸೇರಿಸಿ ಒಂದು ತಿಂಗಳು ಟ್ರೇನಿಂಗ್ ಕೂಡಾ ಕೊಡಿಸಿದ್ದಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.

    ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿರೋದು ಖೋಖೋ ಕಥೆಯೇ ಅಂತೆ. ನಿಶ್ವಿಕಾ ನಾಯ್ಡು ಹೀರೋಯಿನ್ ಆಗಿದ್ದು ಲಡ್ಡು ಸಿನಿಮಾಸ್ ಮೂಲಕ ಗುರು ಶಿಷ್ಯರು ರೆಡಿಯಾಗುತ್ತಿದ್ದಾರೆ.

  • ಗುರು ಶಿಷ್ಯರು : ಸೋಮಾರಿ..ಮೋಸಗಾರ..ಛಲಗಾರನ ಕಥೆಯಾ..?

    ಗುರು ಶಿಷ್ಯರು : ಸೋಮಾರಿ..ಮೋಸಗಾರ..ಛಲಗಾರನ ಕಥೆಯಾ..?

    ಅವನು ಸೋಮಾರಿ. ಕೆಲಸಕ್ಕೆ ಬಾರದವನು. ಅವನಿಗೆ ಒಂದು ಊರಿನ ಪಿಟಿ ಮೇಷ್ಟ್ರು ಕೆಲಸ ಸಿಗುತ್ತೆ. ಬೈದುಕೊಂಡೇ ಊರಿಗೆ ಹೋದವನಿಗೆ ಚೆಲುವಾಂತ ಚೆಲುವೆಯೂ ಸಿಗ್ತಾಳೆ. ಹಳ್ಳಿಮೇಷ್ಟ್ರು ಅಂತಾ ನಂಬ್ತಾಳೆ. ಜೊತೆಗೆ ಉಢಾಳ್ ಹುಡುಗ್ರು. ಊರಿಗೊಬ್ಬ ವಂಚಕ. ಮೋಸಗಾರನಾಗೋಕೆ ಹೊರಡುವ ಮೇಷ್ಟ್ರು ಆಮೇಲೆ ಛಲಗಾರನಾಗುತ್ತಾನೆ. ನಡುವೆ ಮೈ ನವಿರೇಳಿಸುವ ಖೋಖೋ ಆಟ..

    ಒಂದು ಸಿನಿಮಾಗೆ ಏನೇನೆಲ್ಲ ಇರಬೇಕೋ.. ಅವೆಲ್ಲವೂ ಇದೆ. ಶರಣ್ ತಾನು ಕಾಮಿಡಿಗಷ್ಟೆ ಅಲ್ಲ, ಅಳಿಸೋಕೂ ಗೊತ್ತು ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಈ ಚಿತ್ರದಲ್ಲಿ ಎಮೋಷನ್ಸ್ ಜಾಸ್ತಿ ಇವೆ. ನಿಶ್ವಿಕಾ ನಾಯ್ಡು ಪಕ್ಕಾ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಾರೆ. ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು.. ಹಾಗೂ ಪಾಠ ಮಾಡುವ ಮೇಷ್ಟ್ರುನ್ನು ಭಗವಂತನಿಗೆ  ಹೋಲಿಸಿ ಬರೆದಿದ್ದ ಗೀತೆಗಳ ಮೂಲಕವೇ ಹವಾ ಸೃಷ್ಟಿಮಾಡಿದ್ದ ಸಿನಿಮಾ, ಟ್ರೇಲರ್ ಮೂಲಕ ಹೊಸತನದ ಕಥೆ ಅನ್ನೋದನ್ನ ಸಾಬೀತು ಮಾಡಿದೆ.

    ಜಡೇಶ್ ಕುಮಾರ್ ನಿರ್ದೇಶನದ ಚಿತ್ರದ ಇನ್ನೊಂದು ಹೈಲೈಟ್ 12 ಹುಡುಗರು. ಆ 12ರಲ್ಲಿ 6 ಜನ ಸ್ಟಾರ್ ಕಲಾವಿದರ ಮಕ್ಕಳು. ನೆನಪಿರಲಿ ಪ್ರೇಮ್, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ರವಿಶಂಕರ್, ಶಾಸಕ ರಾಜೂಗೌಡ ಮಕ್ಕಳು. ಹವಾ ಜೋರಾಗಿದೆ.