` actor sharan, - chitraloka.com | Kannada Movie News, Reviews | Image

actor sharan,

 • ಅಕ್ಕಾ ಎನ್ನಿಸಿಕೊಂಡಿದ್ದ ರಾಗಿಣಿಯೇ ಶರಣ್​ಗೆ ಜೋಡಿ

  ragini paired opposite sharan

  ವಿಕ್ಟರಿ ಚಿತ್ರದ ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ ಹಾಡು ಕೇಳಿ, ಮೈ ಬಿಸಿಯೇರಿ ಕುಣಿದಿದ್ದ ಅಭಿಮಾನಿಗಳಿಗೆ ಈಗೊಂದು ಖುಷಿ ಖುಷಿ ಸುದ್ದಿ. ಏನೆಂದರೆ, ಆ ಹಾಡಿನಲ್ಲಿ ಶರಣ್ ಜೊತೆ ಕುಣಿದಿದ್ದ ರಾಗಿಣಿ, ಶರಣ್ ಮುಂದಿನ ಚಿತ್ರಕ್ಕೆ ನಾಯಕಿ.

  ಮುಕುಂದ ಮುರಾರಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್, ಶರಣ್​ರ ಹೊಸ ಚಿತ್ರದ ಡೈರೆಕ್ಟರ್. ಶರಣ್ ಜೊತೆ ನಟಿಸಲಿರುವ ಚಿತ್ರಕ್ಕೆ ಈಗಾಗಲೇ ರಾಗಿಣಿ ಹೊಸ ಹೇರ್​ಸ್ಟೈಲ್ ಮಾಡಿಸಿಕೊಂಡಿದ್ದಾರಂತೆ. 

  ಅಕ್ಕಾ ನಿನ್ ಮಗ್ಳು ಹಾಡಿನಲ್ಲಿ ದುಂಡ ದುಂಡಗೆ ಇದ್ದ ರಾಗಿಣಿ, ಈಗ ಫುಲ್ ಸ್ಲಿಮ್ ಆಗಿದ್ದಾರೆ. ಶರಣ್ ಚಿತ್ರ ಎಂದ ಮೇಲೆ ಕಾಮಿಡಿಯ ಹೂರಣ, ಒಬ್ಬಟ್ಟು ಇರಲೇಬೇಕು. ಕಾಮಿಡಿಯ ಒಬ್ಬಟ್ಟಿನ ಚಿತ್ರದಲ್ಲಿ ತುಪ್ಪದ ಹುಡುಗಿ ಹೇಗಿರುತ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರದ್ದು.

 • ಅಕ್ಟೋಬರ್ 10ಕ್ಕೆ ಅಧ್ಯಕ್ಷ ಇನ್ ಅಮೆರಿಕ ಇನ್ ಅಮೆರಿಕ..

  adhyaksha in america to release in usa on oct 10th

  ರಾಜ್ಯಾದ್ಯಂತ ನಗೆಯ ಬುಗ್ಗೆ ಉಕ್ಕಿಸಿರುವ ಅಧ್ಯಕ್ಷ ಇನ್ ಅಮೆರಿಕ, ಅಮೆರಿಕಕ್ಕೇ ಹೊರಟು ನಿಂತಿದೆ. ಹೇಳಿ ಕೇಳಿ ಇದು ಅಮೆರಿಕದಲ್ಲೇ ಹೆಚ್ಚು ಶೂಟಿಂಗ್ ಮಾಡಿರುವ ಸಿನಿಮಾ. ಶರಣ್, ರಾಗಿಣಿ ಜೋಡಿಯಂತೂ ಮೋಡಿಯನ್ನೇ ಮಾಡಿದೆ. ಚಿತ್ರ ಅಕ್ಷರಶಃ ಮ್ಯಾಜಿಕ್ ಸೃಷ್ಟಿಸಿದೆ. ನಿರ್ದೇಶಕ ಯೋಗಾನಂದ್ ಮುದ್ದಾನ್ ಮೊದಲ ಬಾಲಿನಲ್ಲೇ ಸಿಕ್ಸರ್ ಹೊಡೆದಿದ್ದಾರೆ.

  ಈಗ ಅಧ್ಯಕ್ಷ ಇನ್ ಅಮೆರಿಕ ಅಮೆರಿಕಕ್ಕೆ ಹೊರಟು ನಿಂತಿದೆ. ಅಕ್ಟೋಬರ್ 10ರಂದು ಸಿನಿಮಾ ಅಮೆರಿಕದಲ್ಲಿ ರಿಲೀಸ್ ಆಗಲಿದೆ. 25ಕ್ಕೂ ಹೆಚ್ಚು ಸೆಂಟರುಗಳಲ್ಲಿ ರಿಲೀಸ್ ಆಗುತ್ತಿದೆ ಅಧ್ಯಕ್ಷ ಇನ್ ಅಮೆರಿಕ. ಶರಣ್ ಚಿತ್ರಗಳಿಗೆ ಅಮೆರಿಕದಲ್ಲಿ ಬಹುದೊಡ್ಡ ಮಾರ್ಕೆಟ್ ಇದೆ.

 • ಅಧ್ಯಕ್ಷ ಅಮೆರಿಕಕ್ಕೆ ಹೋಗೋಕೆ ಏನೇನೆಲ್ಲ ಸರ್ಕಸ್ ಆಯ್ತು ಗೊತ್ತಾ..?

  adhyakasha's struggle to reach america

  ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿದೆ. ಶರಣ್ ಜೊತೆ ಇದೇ ಮೊದಲ ಬಾರಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ಯೋಗಾನಂದ್ ಮುದ್ದಾನ್‍ಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಡುಗಳು ವೈರಲ್ಲಾಗಿ, ಸಿನಿಮಾದ ಮೇಲೆ ಭರ್ಜರಿ ನಿರೀಕ್ಷೆ ಇರುವಾಗ ಅಮೆರಿಕದ ಕಥೆ ಹೇಳಿಕೊಂಡಿದ್ದಾರೆ ಶರಣ್.

  ಶರಣ್ ಅವರಿಗೂ ಅಮೆರಿಕ ಹೊಸದು. ಪ್ರಥಮ ಅನುಭವ. ಬಹುಪಾಲು ಅಮೆರಿಕದಲ್ಲೇ ಶೂಟಿಂಗ್ ಆಗಬೇಕಿತ್ತು. ದೊಡ್ಡ ತಂಡವೇ ಹೋಗಬೇಕು. ಹೀಗಾಗಿ ವೀಸಾ ಪಡೆಯಲು ಎಲ್ಲರಿಗೂ ಸೆಷನ್ ಮಾಡಿಸಿದ್ರಂತೆ. ಅದರಲ್ಲಿನ ವಿಶೇಷಗಳೇನು ಗೊತ್ತಾ..?

  ಅಮೆರಿಕದಲ್ಲಿ ಮೊದಲೇ ಶೂಟಂಗುಗಳು ಜಾಸ್ತಿ. ಅದೇ ಗನ್ ಶೂಟಿಂಗ್. ಹೀಗಾಗಿ ವೀಸಾ ಪಡೆಯುವಾಗ ಏಕೆ ಎಂದು ಕೇಳಿದರೆ ಶೂಟಿಂಗ್ ಎನ್ನಬಾರದು, ಫಿಲ್ಮಿಂಗ್ ಎನ್ನಬೇಕು ಎನ್ನುವುದನ್ನು ಪ್ರಾಕ್ಟೀಸ್ ಮಾಡಿಸಲಾಯ್ತಂತೆ. ಆದರೆ, ಶರಣ್ ಅನುಭವವೇ ಬೇರೆ. ಪ್ರಶ್ನೆಗಳಿಗೆಲ್ಲ ರೆಡಿಯಾಗಿ ಹೋಗಿ ಕುಳಿತರೆ ಶರಣ್‍ಗೆ ಒಂದೇ ಒಂದು ಪ್ರಶ್ನೆ ಕೇಳದೆ, ವೀಸಾ ಕೊಟ್ಟು ಕಳಿಸಿದ್ರಂತೆ.

  ಇನ್ನು ಅಮೆರಿಕದಲ್ಲೋ.. ಇವರು ಶೂಟಿಂಗ್ ಮಾಡ್ತಿದ್ದ ಜಾಗದಲ್ಲಿ ರಾತ್ರಿ 10 ಗಂಟೆಯಾದರೂ ಸೂರ್ಯನಿರುತ್ತಿದ್ದ. ಬಿಸಿಲಿರುತ್ತಿತ್ತು. ರಾತ್ರಿಯಾಗದೆ, ಕತ್ತಲಾಗದೆ ನಿದ್ರೆ ಬರಲ್ಲ. ಅಡ್ಜಸ್ಟ್ ಆಗೋದು ಬಹಳ ಕಷ್ಟವಾಯ್ತು ಎಂಬ ವಿಭಿನ್ನ ಅನುಭವ ಹೇಳಿಕೊಂಡಿದ್ದಾರೆ ಶರಣ್.

 • ಅಧ್ಯಕ್ಷ ಇನ್ ಅಮೆರಿಕ

  sharan's new film is adhyaksha in america

  ಶರಣ್ ಅಭಿನಯದ ಹೊಸ ಸಿನಿಮಾಗೆ ಅಧ್ಯಕ್ಷ ಇನ್ ಅಮೆರಿಕ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಅಂದಹಾಗೆ ಈ ಹೊಸ ಸಿನಿಮಾಗೂ, ಹಳೆ ಅಧ್ಯಕ್ಷನ ಕಥೆಗೂ ಯಾವುದೇ ಸಂಬಂಧ ಇಲ್ಲ. ಅಂದಹಾಗೆ ಇದು ಮಲಯಾಳಂನ ಟೂ ಕಂಟ್ರೀಸ್ ಚಿತ್ರದಿಂದ ಸ್ಫೂರ್ತಿ ಪಡೆದಿರುವ ಸಿನಿಮಾ ಅಂತೆ. ಚಿತ್ರಕ್ಕೆ ಯೋಗಾನಂದ ಮುದ್ದಾನ್ ನಿರ್ದೇಶಕ.

  ವಿಕ್ಟರಿ ಸಿನಿಮಾದಲ್ಲಿ ಶರಣ್ ಜೊತೆ ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ ಹಾಡಿಗೆ ಹೆಜ್ಜೆ ಹಾಕಿದ್ದ ರಾಗಿಣಿ, ಈ ಚಿತ್ರದಲ್ಲಿ ಶರಣ್‍ಗೆ ಹೀರೋಯಿನ್.

  ತೆಲುಗಿನಲ್ಲಿ ಅಲಾ ಮೊದಲಯಿಂದಿ, ಕೇಶವ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ವಿಶ್ವ ಹಾಗೂ ವಿವೇಕ್ ಎಂಬುವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೇ 15ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಸಂಪೂರ್ಣ ವಿದೇಶದಲ್ಲೇ ಚಿತ್ರೀಕರಣ ನಡೆಯಲಿದೆ.

  Related Articles :-

  Sharan's New Film Titled 'Adhyaksha in America'

 • ಅಧ್ಯಕ್ಷ ಇನ್ ಅಮೆರಿಕಾ.. ಆಗಸ್ಟ್ ನಲ್ಲಿ ಇನ್ ಥಿಯೇಟರ್ಸ್

  adhyaksha in america to release in august

  ಶರಣ್, ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ನಾಯಕ,ನಾಯಕಿಯಾಗಿ ಜೋಡಿಯಾಗಿರುವ ಸಿನಿಮಾ ಅಧ್ಯಕ್ಷ ಇನ್ ಅಮೆರಿಕ. ಈ ಹಿಂದೆ ಶರಣ್ ಚಿತ್ರಗಳಲ್ಲಿ ಸ್ಪೆಷಲ್ ಸಾಂಗ್ಸ್‍ಗೆ ಹೆಜ್ಜೆ ಹಾಕಿದ್ದ ರಾಗಿಣಿ, ಈ ಚಿತ್ರದಲ್ಲಿ ಹೀರೋಯಿನ್. 

  ಶರಣ್ ಜೊತೆ ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಕೆಆರ್‍ಪೇಟೆ ಶಿವರಾಜು ಕಾಮಿಡಿಯ ಕಿಕ್ಕೇರಿಸುತ್ತಾರೆ.

  ಇದು ಮಲಯಾಳಂನ ಟು ಕಂಟ್ರೀಸ್ ಚಿತ್ರದ ರೀಮೇಕ್. ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರಕ್ಕೆ ವಿಶ್ವಪ್ರಸಾದ್ ಮತ್ತು ವಿವೇಕ್ ಕುಚ್ಚಿಬೊಟ್ಟಾ ನಿರ್ಮಾಪಕರು. ಶೈಲೇಂದ್ರ ಬಾಬು ಚಿತ್ರದ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದ್ದು, ಸಿನಿಮಾ ಆಗಸ್ಟ್ ಕೊನೆ ವಾರದಲ್ಲಿ ರಿಲೀಸ್ ಆಗಲಿದೆ.

 • ಅಧ್ಯಕ್ಷನ ಜೊತೆ ಜೊತೆಯಲಿ ರಾಗಿಣಿ 25 ದಾಖಲೆ

  ragini dwivedi reaches 25th film with adhyaksha in america

  ತುಪ್ಪದ ಹುಡುಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಕನ್ನಡದಲ್ಲಿ ದಾಖಲೆಯನ್ನೇ ಬರೆದಿದ್ದಾರೆ. ವೀರ ಮದಕರಿ ಮೂಲಕ ಬೆಳ್ಳಿತೆರೆಗೆ ಪರಿಚಿತರಾದ ಪಂಜಾಬಿ ಚೆಲುವೆ, ಅದಾದ ಮೇಲೆ ಕನ್ನಡದ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ರವಿಚಂದ್ರನ್ ಸೇರಿದಂತೆ ಹಲವು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅವರೀಗ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ದಾಖಲೆಯನ್ನೂ ಬರೆದಿದ್ದಾರೆ. ಇದು ಅವರ 25ನೇ ಸಿನಿಮಾ.

  ಅದು ನನಗೂ ಗೊತ್ತಿರಲಿಲ್ಲ. ಶರಣ್ ಅವರು ಇದನ್ನು ಹೇಳಿದಾಗ ಅಚ್ಚರಿಯಾಯ್ತು. 10 ವರ್ಷಗಳ ವೃತ್ತಿ ಜೀವನದಲ್ಲಿ ಸೋಲು, ಗೆಲುವು, ಏಳುಬೀಳು ಎಲ್ಲವನ್ನೂ ಕಂಡಿದ್ದೇನೆ. ಚಿತ್ರರಂಗದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವನ್ನೂ ನೋಡಿದ್ದೇನೆ ಎನ್ನುವ ರಾಗಿಣಿ, ಇದೇ ಮೊದಲ ಬಾರಿ ಕಾಮಿಡಿ ರೋಲ್ ಮಾಡಿದ್ದಾರೆ.

  ಶರಣ್ ಜೊತೆ ನಟನೆ ಹೊಸದಲ್ಲ. ನಾಯಕಿಯಾಗಿ ಇದು ಪ್ರಥಮ ಚಿತ್ರ. ಚಿತ್ರದಲ್ಲಿ ನನ್ನದು ನಂದಿನಿ ಅನ್ನೋ ಎನ್‍ಆರ್‍ಐ ಪಾತ್ರ ಎಂದು ಪಾತ್ರದ ಬಗ್ಗೆಯೂ ಹೇಳಿಕೊಂಡಿದ್ದಾರೆ ರಾಗಿಣಿ.

   

 • ಅಧ್ಯಕ್ಷನ ದರ್ಶನ ಮಾಡಿದ್ರೆ ಕಚಗುಳಿ ಗ್ಯಾರಂಟಿ

  adhyakasha in america is fun filled laughter ride

  ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿದೆ. ಅಧ್ಯಕ್ಷ ಚಿತ್ರದ ಕಾಮಿಡಿಯನ್ನು ನೆನಪಿಸಿಕೊಂಡು ಈಗಲೂ ನಗುವ ಪ್ರೇಕ್ಷಕರಿಗೆ ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಡಬ್ಕು ಡಬಲ್ ಕಾಮಿಡಿ ಕಚಗುಳಿ ಇದೆಯಂತೆ. ಇದು ಶರಣ್ ಕೊಟ್ಟಿರೋ ಪ್ರಾಮಿಸ್.

  `ಚಿತ್ರದಲ್ಲಿ ನನ್ನ ಮತ್ತು ರಾಗಿಣಿ ನಡುವಿನ ದೃಶ್ಯಗಳು ಸಿಕ್ಕಾಪಟ್ಟೆ ಕಾಮಿಡಿಯಾಗಿವೆ. ಒಂದೊಂದು ದೃಶ್ಯವೂ ನಗಿಸುತ್ತದೆ. ಪ್ರೇಕ್ಷಕರಿಗೆ ಮನರಂಜನೆಯ ಫುಲ್ ಗ್ಯಾರಂಟಿ ಕೊಡ್ತೇನೆ' ಎಂದಿದ್ದಾರೆ ಶರಣ್.

  ಶರಣ್ ಇದ್ದ ಮೇಲೆ ಕಾಮಿಡಿಗೆ ಬರವಿಲ್ಲ. ರಾಗಿಣಿಗೆ ಇದೇ ಪ್ರಥಮ ಅನುಭವ. ಯೋಗಾನಂದ್ ಮದ್ದಾನ್ ಅವರಿಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಅದೇನೇ ಇದ್ದರೂ ಕಾಮಿಡಿಗಂತೂ ಮಿತಿಯಿರಲ್ಲ.

 • ಅಪ್ಪ-ಅಮ್ಮಂದಿರ ಜೊತೆ ಶರಣ್ ಕಾಶೀ ಯಾತ್ರೆ

  sharan on kashi yatra with his parents

  ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕು, ಗಂಗಾ ಸ್ನಾನ ಮಾಡಬೇಕು ಎನ್ನುವುದು ಹಿಂದೂಗಳ ಕನಸು, ನಂಬಿಕೆ. ಸಹಜವಾಗಿಯೇ ಹಿರಿಯರಿಗೆ ಆ ಬಯಕೆ ಇರುತ್ತದೆ. ತಂದೆ-ತಾಯಿಗೆ ಕಾಶಿ ದರ್ಶನ ಮಾಡಿಸುವುದು ಮಹಾಪುಣ್ಯದ ಕೆಲಸ ಎನ್ನುವುದು ನಂಬಿಕೆ. ಈಗ ಶರಣ್ ಆ ಕೆಲಸ ಮಾಡಿದ್ದಾರೆ.

  ಶರಣ್ ಅವರಿಗೆ ಇಬ್ಬರು ತಾಯಿಯರು. ತಂದೆ ಕೃಷ್ಣ ಹಾಗೂ ಅಮ್ಮಂದಿರ ಜೊತೆ ಕಾಶಿಯಲ್ಲಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಅಪ್ಪ-ಅಮ್ಮಂದಿರ ಜೊತೆ ವಿಶ್ವನಾಥನ ದರ್ಶನ ಪಡೆಯುವ ಭಾಗ್ಯ ನನ್ನದಾಗಿತ್ತು ಎಂದು ಖುಷಿ ಹಂಚಿಕೊAಡಿದ್ದಾರೆ ಶರಣ್.

 • ಅಮೆರಿಕಕ್ಕೆ ಅಧ್ಯಕ್ಷ ಸೇಲ್

  old song gets new look for adhyaksha in america

  ಅಮ್ಮಾ ನಾ ಸೇಲ್ ಆದೆ.. ಅಮೆರಿಕ ಪಾಲಾದೆ.. ಇದು ಕಾಶೀನಾಥ್ ಅವರ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಚಿತ್ರದ ಸೂಪರ್ ಹಿಟ್ ಹಾಡು. ಆ ಹಾಡನ್ನು ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ.

  `ನಮ್ಮ ಚಿತ್ರದ ಸನ್ನಿವೇಶಕ್ಕೆ ಆ ಹಾಡು ಸೂಕ್ತವಾಗುತ್ತಿತ್ತು. ಹಾಗಂತ ನಾವು ಇಡೀ ಹಾಡನ್ನು ಪುನರ್‍ಬಳಕೆ ಮಾಡಿಲ್ಲ. ಹಾಡಿನ ಆರಂಭದ ಸಾಲನ್ನಷ್ಟೇ ಎತ್ತಿಕೊಂಡಿದ್ದೇವೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ' ಎಂದಿದ್ದಾರೆ ನಿರ್ದೇಶಕ ಯೋಗಾನಂದ್ ಮದ್ದಾನ್.

  ಶರಣ್, ರಾಗಿಣಿ ಕಾಂಬಿನೇಷನ್ನಿನಲ್ಲಿ ಬರುತ್ತಿರುವ ಅಧ್ಯಕ್ಷ ಇನ್ ಅಮೆರಿಕ ಭರ್ಜರಿ ಹವಾ ಎಬ್ಬಿಸಿದೆ. 

 • ಅಮೆರಿಕಕ್ಕೆ ಹಾರಿಬಿಟ್ರು ರಾಗಿಣಿ, ಶರಣ್

  sharan and ragini flies to america

  ಕಾಮಿಡಿ ಕಿಂಗ್ ಆಗಿರುವ ಶರಣ್, ತುಪ್ಪದ ಹುಡುಗಿ ರಾಗಿಣಿ ಜೊತೆ ಅಮೆರಿಕಕ್ಕೆ ಹಾರಿಬಿಟ್ಟಿದ್ದಾರೆ. ಜೋಡಿಯಾಗಿ. ಚಿತ್ರವೊಂದರ ಶೂಟಿಂಗ್‍ಗೆ ಜೊತೆ ಜೊತೆಯಾಗಿ ತೆರಳಿದ್ದಾರೆ ರಾಗಿಣಿ ಮತ್ತು ಶರಣ್.

  ಶರಣ್ ಮತ್ತು ರಾಗಿಣಿ ಹೊಸ ಚಿತ್ರವೊಂದರಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಮಲಯಾಳಂನ ಟೂ ಕಂಟ್ರಿಸ್ ಚಿತ್ರದ ರೀಮೇಕ್ ಆಗಿರುವ ಚಿತ್ರ ಅದು. ಬಹುಭಾಗದ ಚಿತ್ರೀಕರಣ ಅಮೆರಿಕದಲ್ಲೇ ನಡೆಯಲಿದೆ.

  ಈ ಹಿಂದೆ ವಿಕ್ಟರಿ ಚಿತ್ರದಲ್ಲಿ ಅಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಗಲ್ವಾ ಎಂಬ ಹಾಡಿನಲ್ಲಿ ಶರಣ್ ಜೊತೆ ಹೆಜ್ಜೆ ಹಾಕಿದ್ದ ರಾಗಿಣಿ, ಈಗ ಶರಣ್‍ಗೇ ನಾಯಕಿಯಾಗಿರೋದು ಇಂಟ್ರೆಸ್ಟಿಂಗ್. ಈ ಚಿತ್ರದ ಚಿತ್ರೀಕರಣ ಅಮೆರಿಕದಲ್ಲೇ ಸುಮಾರು 1 ತಿಂಗಳು ನಡೆಯಲಿದೆ.

 • ಅಮೆರಿಕದಲ್ಲಿ ಚುಟು ಚುಟು ಮ್ಯಾಜಿಕ್

  rambo 2 to release in america ad canada

  ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಲ್ಲಿ ನಾಳೆ ತೆರೆ ಕಾಣುತ್ತಿರುವ ರ್ಯಾಂಬೋ2 ಸಿನಿಮಾ, ಬಿಡುಗಡೆಗೂ ಮುನ್ನವೇ ದಾಖಲೆ ಬರೆದುಬಿಟ್ಟಿದೆ. ಅಮೆರಿಕದಲ್ಲಿ 40ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ರ್ಯಾಂಬೋ 2 ರಿಲೀಸ್ ಆಗುತ್ತಿದೆ. ವಾಷಿಂಗ್ಟನ್ ಡಿಸಿ, ಲಾಸ್ ಏಂಜಲೀಸ್, ಕನ್ಸಾಸ್ ಸಿಟಿ, ಸ್ಯಾಂಡಿಯಾಗೋ, ಮಿನ್ನೆಪೊಲೀಸ್, ಡೆಟ್ರಾಯ್ಟ್, ಸಾಲ್ಟ್ ಲೇಕ್ ಸಿಟಿ, ಸ್ಯಾಕ್ರಾಮೆಂಟೋ, ಅಟ್ಲಾಂಟಾ, ಮಿಯಾಮಿ, ಫಿಲಿಡಲ್ಫಿಯಾ, ಬಾಲ್ಟಿಮೋರ್ ಹಾಗೂ ಸೀಟಲ್ ನಗರಗಳಲ್ಲಿ ತೆರೆ ಕಾಣುತ್ತಿದೆ. ಕೆನಡಾದಲ್ಲಿಯೂ ಹಲವಾರು ಕಡೆ ಚಿತ್ರ ತೆರೆ ಕಾಣುತ್ತಿದೆ.

  ಚಿತ್ರ ನಿರ್ಮಾಪಕರಾದ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ, ಅಮೆರಿದಕ ಕಸ್ತೂರಿ ಮೀಡಿಯಾ ಹೌಸ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆನಡಾದಲ್ಲಿ ಡ್ರೀಮ್ಸ್ ಮೀಡಿಯಾ ಬಿಡುಗಡೆಯ ಜವಾಬ್ದಾರಿ ತೆಗೆದುಕೊಂಡಿದೆ. ಉತ್ತರ ಅಮೆರಿಕದಲ್ಲಿ ಇದು ಕನ್ನಡ ಚಿತ್ರವೊಂದರ ಅತ್ಯಂತ ಅದ್ಧೂರಿ ಬಿಡುಗಡೆ ಎಂದರೂ ತಪ್ಪಾಗಲ್ಲ.

  ಈಗಾಗಲೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಮ್ಯಾಜಿಕ್ ಸೃಷ್ಟಿಸಿರುವ ರ್ಯಾಂಬೋ 2, ನಾಳೆಯಿಂದ ಅಮೆರಿಕ, ಆಸ್ಟ್ರೇಲಿಯಾ, ಕೆನಡಾಗಳಲ್ಲು ಚುಟುಚುಟು ಎನ್ನಲಿದೆ. ಶರಣ್, ಅಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ವಿದೇಶದ ಪ್ರೇಕ್ಷಕರಿಗೂ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ. 

 • ಅಮೆರಿಕದಿಂದ ರಷ್ಯಾಕ್ಕೆ ಶರಣ್

  adhyaksha in america shooting in russia

  ಕಾಮಿಡಿ ಕಿಂಗ್ ಶರಣ್, ಅಮೆರಿಕದಿಂದ ವಾಪಸ್ ಆಗಿದ್ದಾರೆ. ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಚಿತ್ರೀಕರಣ ಅಮೆರಿಕದಲ್ಲಿಯೇ ನಡೆಯುತ್ತಿತ್ತು. ಒಂದು ತಿಂಗಳ ಶೂಟಿಂಗ್ ಮುಗಿಸಿರುವ ಶರಣ್, ಈಗ ರಷ್ಯಾಕ್ಕೆ ಹೋಗಿದ್ದಾರೆ. ರಜಾ ಸಮಯ, ವಿಶ್ರಾಂತಿ ಎಂದುಕೊಳ್ಳಬೇಡಿ. ಅಲ್ಲಿ ಇನ್ನೊಂದು ಸಿನಿಮಾ ಇದೆ.

  ಸಂತು ನಿರ್ದೇಶನದ ವಿಕ್ಟರಿ 2 ಸಿನಿಮಾದ ಚಿತ್ರೀಕರಣ ರಷ್ಯಾದಲ್ಲಿ ಫಿಕ್ಸ್ ಆಗಿದೆ. ಆ ಚಿತ್ರದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ರ್ಯಾಂಬೋ 2 ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶರಣ್, ಅಧ್ಯಕ್ಷ ಇನ್ ಅಮೆರಿಕ ಹಾಗೂ ವಿಕ್ಟರಿ 2 ಚಿತ್ರಗಳಲ್ಲೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 • ಅಳು.. ನಗು.. ಕೋಪ.. ಮುನಿಸು.. ಎಲ್ಲೆಲ್ಲೂ ಅಧ್ಯಕ್ಷನದ್ದು ರೊಮ್ಯಾನ್ಸ್

  adhyaksha's various colors of romance

  ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ರಾಗಿಣಿ ಜೊತೆ ನಟಿಸಿರುವ ಶರಣ್, ಚಿತ್ರದುದ್ದಕ್ಕೂ ಸಿಕ್ಕಾಪಟ್ಟೆ ರೊಮ್ಯಾನ್ಸ್ ಮಾಡಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಗಂಡ.. ಅಲ್ಲಲ್ಲ.. ಹೆಂಡತಿ. ಶರಣ್ ಹೆಂಡತಿ.. ಅಲ್ಲಲ್ಲ.. ಗಂಡ. ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಮಿಡಿ ಇದೆ.

  ಕೋಪದಲ್ಲಿ ರೊಮ್ಯಾನ್ಸ್ ಇದೆ. ಜಗಳದಲ್ಲಿ ರೊಮ್ಯಾನ್ಸ್ ಇದೆ. ವಿರಹದಲ್ಲೂ ರೊಮ್ಯಾನ್ಸ್ ಇದೆ. ಕಾಮಿಡಿಯಲ್ಲೂ ರೊಮ್ಯಾನ್ಸ್ ಇದೆ ಎನ್ನುವುದು ರಾಗಿಣಿ-ಶರಣ್ ಒಕ್ಕೊರಲ ಮಾತು.

  ಅಧ್ಯಕ್ಷದಲ್ಲಿ ಶರಣ್-ಚಿಕ್ಕಣ್ಣ ಜೋಡಿ ಸಕ್ಸಸ್ ಆಗಿತ್ತು. ಅದಾದ ಮೇಲೆ ಇಬ್ಬರೂ ಒಟ್ಟಿಗೇ ನಟಿಸಿದ್ದ ಚಿತ್ರಗಳೂ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದವು. ಈ ಚಿತ್ರದಲ್ಲಿ ಶರಣ್ ಜೊತೆ ಶಿವರಾಜ್ ಕೆ.ಆರ್.ಪೇಟೆ ನಟಿಸಿದ್ದಾರೆ. ನಗೋಕೆ ರೆಡಿಯಾಗಿ.

 • ಅವತಾರ ಪುರುಷನ ಪೌರುಷ ನೋಡಿದ್ರಾ..?

  sharan simple suni's laughter riot avarata purusha teaser is a must watch

  ನಟನೆಯಲ್ಲೇ ನಗು ಉಕ್ಕಿಸೋ ಶರಣ್, ಕಣ್ಣಿನಲ್ಲೇ ಕಚಗುಳಿ ಕೊಡುವ ಅಶಿಕಾ ರಂಗನಾಥ್.. ಇವರಿಬ್ಬರನ್ನೂ ಪೆನ್ನಿನಲ್ಲಿ ಚುಚ್ಚಿ, ಮಾತಿನಲ್ಲಿ ಚಚ್ಚಿ ನಗೆಯುಕ್ಕಿಸುವ ಸುನಿ. ಕಾಂಬಿನೇಷನ್ ಒಟ್ಟಾದಾಗ ಉದ್ಭವವಾಗಿರುವ ಅವತಾರ ಪುರುಷ, ನಗೆಯ ಹಬ್ಬದೂಟದ ಸೂಚನೆ ಕೊಟ್ಟಿದೆ.

  ಜ್ಯೂನಿಯರ್ ಕಲಾವಿದನಾಗಿ ಶರಣ್, ಅವಕಾಶ ಕೊಡುವ ಹುಡುಗಿಯಾಗಿ ಅಶಿಕಾ.. ಅದರ ನಡುವೆ ಮಗನನ್ನು ಕಳೆದುಕೊಂಡವರ ಕಥೆ, ಇನ್ನೊಂದು ದಿಕ್ಕಿನಲ್ಲಿ ಬ್ಲಾಕ್ ಮ್ಯಾಜಿಕ್ ಜೊತೆ ಪ್ರತ್ಯಕ್ಷವಾಗಿ ಕಣ್ಣುಗಳಲ್ಲೇ ಭಯ ಹುಟ್ಟಿಸುವ ಶ್ರೀನಗರ ಕಿಟ್ಟಿ.. ಅವತಾರ ಪುರುಷನ ಮೊದಲ ಟೀಸರಿನಲ್ಲೇ ಇಷ್ಟೆಲ್ಲವೂ ಇದೆ.

  ನಡು ನಡುವೆ ಒಗ್ಗರಣೆಯಾಗಿ ಚುಟು ಚುಟು ಬರುತ್ತೆ. ಸುನಿಯ ಪೋಲಿತನವಿದೆ. ಭವ್ಯ, ಸುಧಾರಾಣಿ, ಸಾಯಿಕುಮಾರ್ ಕೂಡಾ ನಟಿಸಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. 

 • ಅವತಾರ್ ಪುರುಷನ ಜೊತೆ ಶ್ರೀನಗರ ಕಿಟ್ಟಿ ಛೂಮಂತ್ರ

  srinagar kitty in avatar purusha

  ಶರಣ್-ಅಶಿಕಾ ರಂಗನಾಥ್-ಸಿಂಪಲ್ ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ್ ಪುರುಷ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಮಂತ್ರವಾದಿಯಾಗಿ. ಸುದೀರ್ಘ ಗ್ಯಾಪ್‍ನ ನಂತರ ಶ್ರೀನಗರ ಕಿಟ್ಟಿ ನಟಿಸುತ್ತಿರುವ ಚಿತ್ರವಿದು. ಅವರದ್ದು ಇಲ್ಲಿ ಅತಿಥಿ ಪಾತ್ರವಾದರೂ, ಚಿತ್ರದಲ್ಲಿ ಅವರ ಪಾತ್ರಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ.

  ಚಿತ್ರದಲ್ಲಿ ಅವತಾರ್ ಪುರುಷ ಶರಣ್. ಅವರ ನಾನಾ ಅವತಾರ್‍ಗಳನ್ನು ಬಯಲು ಮಾಡುವ ಬ್ಲಾಕ್ ಮ್ಯಾಜಿಷಿಯನ್ ಶ್ರೀನಗರ ಕಿಟ್ಟಿ ಎಂದು ಕಿಟ್ಟಿ ಪಾತ್ರದ ಸಂಕ್ಷಿಪ್ತ ವಿವರ ನೀಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

  Related Articles :-

  Srinagara Kitty As Black Magician in Avatara Purusha

 • ಅವತಾರ್ ಪುರುಷನಿಗೆ ಅರ್ಜುನ್ ಜನ್ಯಾ ಬಂದಿದ್ದು ಏಕೆ..?

  reason behind arjun janya's music in avatara purusha

  ಶರಣ್, ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಅವತಾರ್ ಪುರುಷ. ಪುಷ್ಕರ್ ಬ್ಯಾನರ್‌ನಲ್ಲಿ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಚಿತ್ರ ಅವತಾರ್ ಪುರುಷ. ಶ್ರೀನಗರ ಕಿಟ್ಟಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಬೇಕಿತ್ತು. ಆರಂಭದಲ್ಲಿ ಚಿತ್ರತಂಡವೂ ಇದೇ ಮಾತು ಹೇಳಿತ್ತು. ಆದರೀಗ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

  ಇದಕ್ಕೆ ಕಾರಣವೂ ಇದೆ. ರವಿಚಂದ್ರನ್-ಹAಸಲೇಖ, ದರ್ಶನ್-ಹರಿಕೃಷ್ಣ ಜೋಡಿಯಂತೆ ಹಿಟ್ ಆಗಿರುವ ಜೋಡಿ ಶರಣ್-ಜನ್ಯಾ ಕಾಂಬಿನೇಷನ್. ರ‍್ಯಾಂಬೋ, ರ‍್ಯಾಂಬೋ-೨, ಅಧ್ಯಕ್ಷ, ವಿಕ್ಟರಿ, ವಿಕ್ಟರಿ-೨, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦.. ಹೀಗೆ ಇಬ್ಬರ ಜೋಡಿಯ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿರುವುದು ಇದಕ್ಕೆ ಕಾರಣ. ಹಿಟ್ ಜೋಡಿಯನ್ನು ಬೇರೆ ಮಾಡೋದೇಕೆ ಎಂಬ ಕಾರಣಕ್ಕೆ ಜನ್ಯಾ, ಅವತಾರ್ ಪುರುಷನಿಗೆ ಸರಿಗಮಪ ಹೇಳುತ್ತಿದ್ದಾರೆ.

 • ಆಲ್ ಇಂಡಿಯಾ ರೋಡಲ್ಲಿ ರ್ಯಾಂಬೋ-2 ಸರ್ಕಸ್

  rambo 2 all india jounery

  Rambo- 2. ಇದು ಕಾಮಿಡಿ  ಥ್ರಿಲ್ಲರ್. ಜರ್ನಿಯಲ್ಲೇ ಸಾಗುವ ಕಥೆ. ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಇಡೀ ಭಾರತವನ್ನು ರೌಂಡ್ ಹೊಡೆದಿದೆ. ಒಂಥರಾ ಲಾರಿ, ಕಾರುಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಅನ್ನೋ ಬೋರ್ಡ್ ಇರುತ್ತಲ್ಲಾ.. ಆ ಥರ.. ಹೀಗಾಗಿ ಸಿನಿಮಾ ಟೀಂ, ಕರ್ನಾಟಕ, ಜೋಧ್‍ಪುರ ಕಡೆಗೆಲ್ಲ ಹೋಗಿದೆ. ಆದರೆ, ಸಿನಿಮಾದಲ್ಲಿ ಕಥೆ ನಡೆಯೋದು ಉತ್ತರ ಕರ್ನಾಟಕ ಮತ್ತು ಗೋವಾ ಮಧ್ಯೆ ಜರ್ನಿಯಲ್ಲಿ. ಹಾಗಾದರೆ, ರಾಜಸ್ಥನಕ್ಕೆ ಹೋಗೋ ಅಗತ್ಯ ಏನಿತ್ತು ಅಂತೀರಾ..?

  ಸಿನಿಮಾ ಶೂಟಿಂಗ್ ವೇಳೆ ಕರ್ನಾಟಕದಲ್ಲಿ ಮಳೆಯೋ ಮಳೆ.. ಹಸಿರು ತುಂಬಿತ್ತು. ಹೀಗಾಗಿ ಕರ್ನಾಟಕದ ವಾತಾವರಣ ಹೋಲುವ ರಾಜಸ್ಥಾನದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಯ್ತು. ಇನ್ನು ಕಥೆಯಲ್ಲಿ ಬರುವ ರಸ್ತೆಯ ಫಲಕಗಳನ್ನು ಕನ್ನಡದಲ್ಲಿ ಕಾಣುವಂತೆ ಮಾಡಲು ಅದೇನೇನು ಸರ್ಕಸ್ ಮಾಡಿದ್ದಾರೋ.. ನಿರ್ದೇಶಕ ಅನಿಲ್ ಚಿತ್ರೀಕರಣದ ರಸಘಳಿಗೆಗಳನ್ನು ಹೇಳಿಕೊಳ್ತಾರೆ.

  ನಾವು ಶೂಟಿಂಗ್‍ಗೆ ಪ್ಲಾನ್ ಮಾಡಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ಶೂಟಿಂಗ್ ಶುರುವಾಗುವ ಹೊತ್ತಿಗೆ ಇಡೀ ಪ್ರದೇಶ ಹಸಿರೋ ಹಸಿರು. ಹೀಗಾಗಿ ರಾಜಸ್ಥಾನ ಹುಡುಕಿಕೊಂಡೆವು. ಗೋವಾದ ದೃಶ್ಯಗಳನ್ನೂ ಅಷ್ಟೆ.. ಕೆಲವು ಸೀನ್‍ಗಳನ್ನು ಗೋವಾ ಹೋಲುವ ರಾಮೇಶ್ವರಂನಲ್ಲಿ ಶೂಟ್ ಮಾಡಲಾಗಿದೆ. ಆದರೆ, ಇದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಎಷ್ಟರಮಟ್ಟಿಗೆ ಅಂದ್ರೆ, ರಸ್ತೆಯಲ್ಲಿ ಬರುವ ಫಲಕಗಳನ್ನೂ ಕೂಡಾ ನಾವು ಕನ್ನಡಮಯವಾಗಿಸಿದ್ದೇವೆ. ಹೀಗಾಗಿ ಯಾವುದು ಉತ್ತರ ಕರ್ನಾಟಕ.. ಯಾವುದು ರಾಜಸ್ಥಾನ.. ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಜೋಧ್‍ಪುರ್, ಜೈಸಲ್ಮೇರ್, ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ಶೂಟಿಂಗ್ ಆಗಿದೆ ಎಂದು ಶೂಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಅನಿಲ್.

  ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾಗಿದ್ದರೆ, ಚಿಕ್ಕಣ್ಣ ಕಾಂಬಿನೇಷನ್ ಕೂಡಾ ಸಿನಿಮಾದಲ್ಲಿದೆ. ನಾಳೆಯೇ ಸಿನಿಮಾ ರಿಲೀಸ್. ತರುಣ್ ಸುಧೀರ್ ಸಾರಥ್ಯದಲ್ಲಿ ತಂತ್ರಜ್ಞರು ಮತ್ತು ಕಲಾವಿದರು ಒಗ್ಗೂಡಿ ನಿರ್ಮಿಸಿರುವ ಸಿನಿಮಾ ಇದು. 

 • ಎಲ್ಲ ಸಿನಿಮಾ ಎಂಡ್ ಆಗುವ ದೃಶ್ಯದಿಂದಲೇ ಅಧ್ಯಕ್ಷನ ಸ್ಟೋರಿ ಆರಂಭ..!

  adhyaksha in america has different story

  ಬಹುತೇಕ ಸಿನಿಮಾಗಳ ಕ್ಲೈಮಾಕ್ಸ್ ಏನಿರುತ್ತೆ ಹೇಳಿ.. ಆ್ಯಕ್ಷನ್ ಸಿನಿಮಾ ಬಿಟ್ಹಾಕಿ.. ಬೇರೆ ಸಿನಿಮಾಗಳ ವಿಚಾರಕ್ಕೆ ಬಂದರೆ ಹೀರೋ-ಹೀರೋಯಿನ್ ಮದುವೆಯ ದೃಶ್ಯ. ನಾಯಕ, ನಾಯಕಿಗೆ ತಾಳಿ ಕಟ್ಟಿದರೆ ಸಿನಿಮಾ ಶುಭಂ. ಆದರೆ, ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಶುರುವಾಗುವುದೇ ಮದುವೆಯಿಂದ.

  ಶರಣ್ ಕಾಮಿಡಿಗೆ ಕಿಂಗ್. ಆದರೆ ರಾಗಿಣಿಗೆ ಇದು ಮೊದಲ ಕಾಮಿಡಿ ಸಿನಿಮಾ. ಚಿತ್ರದ ಬಹುತೇಕ ಶೂಟಿಂಗ್ ಅಮೆರಿಕದಲ್ಲಿಯೇ ಆಗಿದೆ. ಗಂಡ-ಹೆಂಡತಿ ಸಂಬಂಧದ ಕಥೆಯನ್ನು ಕಾಮಿಡಿಯಾಗಿ ಹೇಳಿದ್ದಾರೆ ನಿರ್ದೇಶಕ ಯೋಗಾನಂದ್. ಚಿತ್ರಕ್ಕೆ ವಿಶ್ವಪ್ರಸಾದ್, ವಿವೇಕ್ ನಿರ್ಮಾಪಕರು.

 • ಐಟಂ ಸಾಂಗ್‍ಗೆ ಐಂದ್ರಿತಾ ಒಪ್ಪಿದ್ದು ಹೀಗೆ..

  special song in rambo 2 movie

  ರ್ಯಾಂಬೋ 2 ಚಿತ್ರ, ರಿಲೀಸ್‍ಗೂ ಮೊದಲೇ ಸದ್ದು ಮಾಡ್ತಿರೋದು ಹಾಡುಗಳಿಂದ. ಒಂದೊಂದು ಹಾಡೂ ಒಂದೊಂದು ರೀತಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಅದರಲ್ಲಿ ಒಂದು ಐಂದ್ರಿತಾ ಹೆಜ್ಜೆ ಹಾಕಿರುವ ಐಟಂ ಡ್ಯಾನ್ಸ್. ಚಿತ್ರದ ವಿಡಿಯೋ ಸಾಂಗ್‍ನ್ನು ಚಿತ್ರತಂಡ ಇನ್ನೂ ಬಿಡುಗಡೆ ಮಾಡಿಲ್ಲ. ಲಿರಿಕಲ್ ಹಾಡಿಗೇ ಚಿತ್ರರಸಿಕರು ಥ್ರಿಲ್ಲಾಗಿದ್ದಾರೆ.

  ಆದರೆ, ಈ ಹಾಡಿಗೆ ಹೆಜ್ಜೆ ಹಾಕಿಸೋಕೆ ನಿರ್ಮಾಪಕರು ಐಂದ್ರಿತಾ ಬೆನ್ನು ಬಿದ್ದು ಒಪ್ಪಿಸಿದ ಕಥೆ ಇದ್ಯಲ್ಲ, ಅದು ಐಟಂ ಹಾಡಿನಷ್ಟೇ ಇಂಟ್ರೆಸ್ಟಿಂಗ್. ಬಸಂತಿ, ಮೂರೇ ಮೂರು ಪೆಗ್ಗು, ಸೌಂದರ್ಯ ಸಮರದಂತಹಾ ಸಾಂಗ್‍ಗಳಲ್ಲಿ ಐಂದ್ರಿತಾ ರೈ ಮಿಂಚಿದ್ದರು. ಆದರೆ ಅದಾದ ಮೇಲೆ ಐಟಂ ಸಾಂಗುಗಳ ಸಹವಾಸವೇ ಬೇಡ ಎಂದುಬಿಟ್ಟಿದ್ದರು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ಐಂದ್ರಿತಾ ರೈ ಅವರನ್ನು ಕಾಂಟ್ಯಾಕ್ಟ್ ಮಾಡಿದಾಗ ನೋ ಎಂದು ಫೋನಿಟ್ಟಿದ್ದರಂತೆ ಐಂದ್ರಿತಾ.

  ಭೇಟಿ ಮಾಡಿ ಒಂದ್ಸಲ ಹಾಡು ಕೇಳಿ ಎಂದರೂ ಒಪ್ಪಿರಲಿಲ್ಲ. ಕೊನೆಗೆ ಹಠಕ್ಕೆ ಬಿದ್ದು, ಒಂದ್ಸಲ ಹಾಡು ಕೇಳಿ ಎಂದು ಇಯರ್ ಫೋನ್ ಕೊಟ್ಟು ಕೇಳಿಸಿದೆ. ಅರ್ಧ ಹಾಡು ಕೂಡಾ ಮುಗಿದಿರಲಿಲ್ಲ, ಐಂದ್ರಿತಾ ಎಸ್ ಎಂದಿದ್ದರು ಎಂದು ಹಾಡಿನ ಕಥೆ ಬಿಚ್ಚಿಟ್ಟಿದ್ದಾರೆ ತರುಣ್ ಸುಧೀರ್.

  ಚಿತ್ರದಲ್ಲಿ ಈ ಹಾಡಿಗೆ ಧ್ವನಿಯಾಗಿರುವುದು ಅರುಣ್ ಸಾಗರ್ ಅವರ ಪುತ್ರ ಆದಿತಿ ಸಾಗರ್. ಪುಟ್ಟ ಹುಡುಗಿಯಾದರೂ, ಧ್ವನಿ ಜಯಶ್ರೀ ಅವರನ್ನು ನೆನಪಿಸುವಂತಿದೆ ಎಂದು ಗುನುಗುತ್ತಿರುವುದು ಚಿತ್ರರಸಿಕರು.

 • ಒಂದೇ ಚಿತ್ರ.. ಏಳೆಂಟು ಅವತಾರ..

  sharan talks about avatara purusha specialty

  ಅಧ್ಯಕ್ಷನಾಗಿ.. ಕಳ್ಳನಾಗಿ.. ರೋಮಿಯೋ ಆಗಿ.. ಹುಡುಗಿಯಾಗಿ.. ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರೋ ಶರಣ್, ಈ ಬಾರಿ ಒಂದೇ ಚಿತ್ರದಲ್ಲಿ ಏಳೆಂಟು ಅವತಾರ ಎತ್ತಿದ್ದಾರೆ. ಅವತಾರ ಪುರುಷ ಚಿತ್ರದಲ್ಲಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಅವತಾರ್ ಪುರುಷ ಶರಣ್ಗೆ ಅಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದು ಕಂಪ್ಲೀಟ್ ಸಿಂಪಲ್ ಸುನಿ ಎನ್ನುವ ಶರಣ್ ‘‘ಚಿತ್ರದಲ್ಲಿ ಏಳೆಂಟು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಹಾಡು ಶೂಟಿಂಗ್ ಬ್ಯಾಲೆನ್ಸ್ ಇದೆ. ಲೆಕ್ಕಾಚಾರದ ಪ್ರಕಾರವೇ ಎಲ್ಲವೂ ನಡೆದರೆ, ಬೇಸಗೆಯಲ್ಲಿ ಸಿನಿಮಾ ರಿಲೀಸ್’’ ಎಂದು ಮಾಹಿತಿ ನೀಡಿದ್ದಾರೆ.

  ನಾನು ಈವರೆಗೆ ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಇದು ತುಂಬಾ ವಿಭಿನ್ನ. ನಾನು ವಿಪರೀತ ಪ್ರಯೋಗಕ್ಕೆ ಹೋಗಲ್ಲ. ನನಗೆ ನನ್ನ ಲಿಮಿಟ್ ಗೊತ್ತಿದೆ. ಈ ಚಿತ್ರದಲ್ಲಿ ಲವ್‌, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟರಿ, ಡ್ರಾಮಾ ಎಲ್ಲವೂ ಇದೆ. ಜೊತೆಯಲ್ಲಿ ಬ್ಲಾಕ್ ಮ್ಯಾಜಿಕ್ ಕೂಡಾ ಇದೆ. ಬ್ಲಾಕ್ ಮ್ಯಾಜಿಕ್ ಕಥಾ ಹಂದರದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎಂದಿದ್ದಾರೆ ಶರಣ್.

  ಬ್ಲಾಕ್ ಮೆಜಿಷಿಯನ್ ಅವತಾರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದರೆ, ಭವ್ಯಾ ಅತ್ಯಂತ ಪ್ರಮುಕ ರೋಲ್ನಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery