` actor sharan, - chitraloka.com | Kannada Movie News, Reviews | Image

actor sharan,

  • ಶರಣ್ ಹೊಸ ಪಿಕ್ಚರ್ : ಶಾಕ್ ಶಾಕ್ ಶಾಕ್

    ಶರಣ್ ಹೊಸ ಪಿಕ್ಚರ್ : ಶಾಕ್ ಶಾಕ್ ಶಾಕ್

    ಇದ್ಯಾಕೆ ಶಾಕ್ ಶಾಕ್ ಶಾಕ್ ಎನ್ನಬೇಡಿ. ಕಾಮಿಡಿ ಶಾಕ್ ಕೊಡುತ್ತಿದ್ದ ಶರಣ್, ಇದೀಗ ಎಲೆಕ್ಟ್ರಿಕ್ ಶಾಕ್ ಕೊಡೋಕೆ ಬರ್ತಿದ್ದಾರೆ. ಯೆಸ್, ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್ ಅವರ ಹೊಸ ಸಿನಿಮಾಗೆ ಶರಣ್ ಹೀರೋ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ  ಚಿತ್ರದಲ್ಲಿ ಶರಣ್ ಎಲೆಕ್ಟ್ರಿಷಿಯನ್ ಪಾತ್ರ ಮಾಡುತ್ತಿದ್ದಾರೆ. ಸಿಂಪಲ್ ಸುನಿ ಜೊತೆಯಲ್ಲಿ ಡಾರ್ಕ್ ಹಾರರ್ ಕಾಮಿಡಿ ಮೂಲಕ ಅವತಾರ ಪುರುಷನಾಗಿ ಗೆದ್ದಿದ್ದ ಶರಣ್, ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದಾರೆ.

    ಶರಣ್ ಅಭಿನಯದಲ್ಲಿ ಒಂದು ಹ್ಯೂಮರ್ ಟಚ್ ಇರುತ್ತದೆ. ಚಿತ್ರದಲ್ಲಿ ಹೀರೋ ಆದ್ರೂ, ಹಾಸ್ಯಕ್ಕೆ ಕೊರತೆ ಇರೋದಿಲ್ಲ.ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರಲಿದ್ದು, ಬಾಗಲಕೋಟೆಯ ಕಥೆ ಇದೆ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ. ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಮೊದಲ  ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್  ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು.

    ಇನ್ನೂ ಹೆಸರಿಡದ ಈ ಚಿತ್ರ ನೈಜ ಘಟನೆಯ ಸುತ್ತ ಸುತ್ತುತ್ತದೆ. ಇದು ರಾಜಕೀಯ ವಿಡಂಬನೆಯಾಗಿದ್ದು, ಉತ್ತರ ಕರ್ನಾಟಕದ ಬಾಗಲಕೋಟೆಯ ಭೌಗೋಳಿಕತೆಯನ್ನು ಆಧರಿಸಿದ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದೆ. ಚಿತ್ರದ ಕಥಾವಸ್ತುವು ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಣಾಮವಾಗಿ ಸುಮಾರು 20 ಹಳ್ಳಿಗಳು ಮುಳುಗಡೆ ಪ್ರದೇಶಕ್ಕೆ ಬಂದವು ಮತ್ತು ಕೃಷಿ ಭೂಮಿಯನ್ನು ಹೊಂದಿದ್ದ ಜನರ ಮೇಲೆ ಅದರ ಪ್ರಭಾವದ ಕುರಿತಾಗಿದೆ. ಇದು ನಮ್ಮ ಕಥಾಹಂದರದ ಕಾಲ್ಪನಿಕ ಹಿನ್ನೆಲೆಯಾಯಿತು ಎಂದು ಅರವಿಂದ್ ಹೇಳುತ್ತಾರೆ.

    ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಆಯ್ಕೆಯಾಗಿದ್ದು, ಪತ್ರಕರ್ತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತು ರಾಜು ತಾಳಿಕೋಟೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಇದೇ ತಿಂಗಳ 20 ರಂದು ಚಿತ್ರೀಕರಣ ಆರಂಭಗೊಳ್ಳುತ್ತಿದೆ.

  • ಶರಣ್-ತರುಣ್-ಸಂತು.. ಒಂದಾದ ಮೇಲೆ..

    sharan hruday;s new movie launched

    ಕಾಮಿಡಿ ಚಿತ್ರಗಳೆಂದರೆ ಈಗ ತಕ್ಷಣ ನೆನಪಾಗುವುದು ನಟ ಶರಣ್. ಸದಾ ಬ್ಯುಸಿಯಾಗಿರುವ ಶರಣ್ ಅಭಿನಯದ ಹೊಸ ಚಿತ್ರವೊಂದು ಸೆಟ್ಟೇರಿದೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಚಿತ್ರದ ನಿರ್ದೇಶಕ ಸಂತು. ನಿರ್ಮಾಪಕ ತರುಣ್ ಶಿವಪ್ಪ.

    ಮಾಸ್ ಲೀಡರ್ ಚಿತ್ರದ ನಂತರ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಸಿನಿಮಾ ಇದು. ಕಾಲೇಜ್ ಕುಮಾರ ನಂತರ ಸಂತು ನಿರ್ದೇಶಿಸುತ್ತಿರುವ ಸಿನಿಮಾಗೆ ಶರಣ್ ಹೀರೋ. ಇನ್ನು ಕಾಲೇಜ್ ಕುಮಾರ ಚಿತ್ರದ ರಿಯಲ್ ಹೀರೋ ಆಗಿದ್ದ ರವಿಶಂಕರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

    ಸಾಧುಕೋಕಿಲ, ತಬಲಾ ನಾಣಿ, ಪ್ರಶಾಂತ್ ಸಿದ್ಧಿ ಮೊದಲಾದವರು ನಟಿಸುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಫೈನಲ್ ಆಗಿಲ್ಲ. ತರುಣ್ ಸುಧೀರ್ ಕಥೆ ಮತ್ತು ಚಿತ್ರಕಥೆ ಇರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

  • ಶಿವಣ್ಣ ಮೆಚ್ಚಿದ ಸತ್ಯ ಹರಿಶ್ಚಂದ್ರ..!

    shivanna likes satya harischandra trailer

    ಶರಣ್ ಅಭಿನಯದ, ದಯಾಳ್ ಪದ್ಮನಾಭ್ ನಿರ್ದೇಶನದ ಸತ್ಯ ಹರಿಶ್ಚಂದ್ರ ಬಿಡುಗಡೆಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ. ಮೊದಲು ಕುಲದಲ್ಲಿ ಕೀಳ್ಯಾವುದೋ ಚಿತ್ರದಿಂದ ಸೌಂಡ್ ಮಾಡಿದ್ದ ಚಿತ್ರ, ನಂತರ ಹಲವಾರು ವಿಶೇಷಗಳಿಂದ ಕುತೂಹಲ ಹೆಚ್ಚಿಸುತ್ತಲೇ ಇದೆ. ಶರಣ್ ಚಿತ್ರವಾದ್ದರಿಂದ ನಗುವಿಗೆ ಮೋಸವಿಲ್ಲ. ಕಾಮಿಡಿಗೆ ಬರವಿಲ್ಲ.

    ಇನ್ನು ಚಿತ್ರತಂಡದವರ ಖುಷಿ ಹೆಚ್ಚಿಸಿರುವುದು ಇದಷ್ಟೇ ಅಲ್ಲ, ಚಿತ್ರರಂಗದ ಹಲವು ಕಲಾವಿದರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆ ಚಿತ್ರದ ಟ್ರೇಲರ್‍ನ್ನು ಶಿವಣ್ಣ ನೋಡಿದ್ದು ಕೂಡಾ ಆಕಸ್ಮಿಕ. ಕೆ.ಮಂಜು ಅವರಿಗೆ ಶಿವರಾಜ್ ಕುಮಾರ್‍ಗಾಗಿ ಚಿತ್ರವೊಂದನ್ನು ನಿರ್ಮಿಸಬೇಕು ಎಂಬ ಕನಸಿದೆ. ಹೀಗಾಗಿ ಸತ್ಯ ಹರಿಶ್ಚಂದ್ರ ಚಿತ್ರದ ನಿರ್ದೇಶಕ ದಯಾಳ್ ಜೊತೆ ಕಥೆಯೊಂದನ್ನು ಹೇಳಲು ಹೋಗಿದ್ದಾಗ, ಶಿವಣ್ಣ ಟ್ರೇಲರ್ ನೋಡುವ ಆಸೆ ಹೇಳಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ನೋಡಿದ ನಂತರ, ದೀಪಾವಳಿಗೆ ಒಳ್ಳೆ ಸಿನಿಮಾ ಕೊಡುತ್ತಿದ್ದೀರಿ ಎಂದು ಹೊಗಳಿದರಂತೆ ಶಿವರಾಜ್ ಕುಮಾರ್. 

    ಸಿನಿಮಾ ಮೇಕಿಂಗ್ ಶಿವಣ್ಣಗೆ ಇಷ್ಟವಾಗಿದೆ. ಶರಣ್, ಸಂಚಿತಾ ಪಡುಕೋಣೆ ಹಾಗೂ ಭಾವನಾ ರಾವ್ ಅಭಿನಯದ ಚಿತ್ರದಲ್ಲಿ ಸತ್ಯ ಮತ್ತು ಸುಳ್ಳಿನ ಕಥೆಯಿದೆ. ಅದನ್ನು ಹಾಸ್ಯದೊಂದಿಗೆ ಹೇಳಲಾಗಿದೆ. ಸತ್ಯ ಹರಿಶ್ಚಂದ್ರ ಈ ದೀಪಾವಳಿಗೆ ಪ್ರೇಕ್ಷಕರ ಎದೆಯಲ್ಲಿ ನಗೆಯ ಪಟಾಕಿ ಹಚ್ಚಲಿದ್ದಾನೆ.

  • ಶಿಷ್ಯರಿಂದ ಗುರುಗಳಿಗಾಗಿ.. ಕನ್ನಡಿಗರಿಂದ ಕನ್ನಡಕ್ಕಾಗಿ.. ಗುರು ನಮನ ಗೀತೆ..

    ಶಿಷ್ಯರಿಂದ ಗುರುಗಳಿಗಾಗಿ.. ಕನ್ನಡಿಗರಿಂದ ಕನ್ನಡಕ್ಕಾಗಿ.. ಗುರು ನಮನ ಗೀತೆ..

    ಬಳಪ ಹಿಡಿದ ಭಗವಂತಾ..

    ಇರುತಾನೆ ನಮ ಸುತ್ತ..

    ನಮ್ಮೆಲ್ಲರ ಹಣ ಬರಹ ತಿದ್ದೀ ಬರೆಯಲು..

    ಗುರುಗಳು ನಮ್ಮ ಗುರುಗಳು..

     

    ಆಹಾ.. ಇದು ಶಿಷ್ಯರು ಗುರುಗಳಿಗಾಗಿ.. ಪ್ರೀತಿಯಿಂದ ಭಕ್ತಿಯಿಂದ ಬರೆದಿರೋ ಗೀತೆ.. ಆ ಗೀತೆಯನ್ನು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಎಂಬಂತೆ ಹಾಡಿದ್ದಾರೆ ವಿಜಯ ಪ್ರಕಾಶ್. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ಎಂಬಂತೆ ಅಕ್ಷರ ತಿದ್ದಿದ್ದಾರೆ ಡಾ.ವಿ. ನಾಗೇಂದ್ರ ಪ್ರಸಾದ್. ಗುರು ಶಿಷ್ಯರು ಚಿತ್ರದ ಹೊಸ ಹಾಡಿನ ಲಿರಿಕಲ್ ಗೀತೆ ಕೇಳಿದವರು ಗುರುಗಳನ್ನು ನೆನಪಿಸಿಕೊಳ್ಳೋದು ಖಂಡಿತಾ.

    ಹಾಡಿನ ಲಿರಿಕಲ್ ವಿಡಿಯೋ ನೋಡಿ.. ಹಾಡು ಕೇಳಿ ಹಲವು ಗುರುಗಳು ಭಾವುಕರಾಗಿ ಮಾತನ್ನಾಡಿದ್ದಾರೆ. ಅದನ್ನೂ ಲಿರಿಕಲ್ ವಿಡಿಯೋನಲ್ಲಿ ತೋರಿಸಲಾಗಿದೆ. ಕ್ರಿಯೇಟಿವ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ಡೈರೆಕ್ಟರ್ ಜಡೇಶ್ ಕೆ.ಹಂಪಿ ಪರಿಕಲ್ಪನೆಯ ಹಾಡಿದು. ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಗುರು ಶಿಷ್ಯರ ಕಥೆಯೇ ಇದೆ.

  • ಶೃತಿ, ಶರಣ್ ಕುಟುಂಬದ ಮತ್ತೊಂದು ಕುಡಿ ಧರಣಿ ಪ್ರವೇಶ

    ಶೃತಿ, ಶರಣ್ ಕುಟುಂಬದ ಮತ್ತೊಂದು ಕುಡಿ ಧರಣಿ ಪ್ರವೇಶ

    ಆ ಕುಟುಂಬದಿಂದ ಚಿತ್ರರಂಗಕ್ಕೆ ಬಂದ ಮೊದಲ ಕುಡಿ ಶೃತಿ. ಸ್ತ್ರೀಪ್ರಧಾನ ಚಿತ್ರಗಳಿಗೆ ಹೊಸ ಸೆನ್ಸೇಷನ್ ತಂದು ಕೊಟ್ಟವರು. ಶೃತಿ ಅವರ ಜೊತೆಯಲ್ಲೇ ಶರಣ್ ಪೋಷಕ ನಟರಾಗಿ ಚಿತ್ರರಂಗಕ್ಕೆ ಬಂದು ಈಗ ಚಿತ್ರರಂಗದ ಡಿಮ್ಯಾಂಡ್ ಇರುವ ಸ್ಟಾರ್ ನಟ. ಈಗಾಗಲೇ ಶರಣ್ ಅವರ ಮಗ ಹೃದಯ್ ಗುರು ಶಿಷ್ಯರು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಶರಣ್-ಶೃತಿ ಅವರ ಕಿರಿಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಮನೋಜ್ ನಾಯಕನಾಗಿ ನಟಿಸುತ್ತಿರುವ ʻಧರಣಿʼ ಫಸ್ಟ್ ಲುಕ್  ಪೋಸ್ಟರ್  ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು ಈ ಚಿತ್ರದಲ್ಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಈಗ ಕೀರ್ತಿ ಆಯ್ಕೆಯಾಗುವ ಮೂಲಕ ʻಧರಣಿʼಯ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶ್ರುತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಮುಖಕ್ಕೆ ಬಣ್ಣ ಹಚ್ಚಿದ್ದವರು ಕೀರ್ತಿ. ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಬೇಕು ಅಂತಾ ಕಾದಿದ್ದ ಕೀರ್ತಿ ಮತ್ತು ಅವರ ಕುಟುಂಬದವರಿಗೆ ʻಧರಣಿʼಯ ಕತೆ ಅಪಾರವಾಗಿ ಇಷ್ಟವಾಗಿದ್ದರಿಂದ ಈ ಚಿತ್ರದ ಮೂಲಕ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.

    ಶರಣ್-ಶೃತಿ ಅವರ ಇಬ್ಬರು ತಾಯಂದಿರೂ ರಂಗಭೂಮಿಯಲ್ಲಿ ಕಲಾವಿದೆಯಾಗಿದ್ದವರು. ತಂದೆ ಕೃಷ್ಣ, ತಾಯಂದಿರಾದ ರಾಧಾ-ರುಕ್ಮಿಣಿ ಇಬ್ಬರೂ ರಂಗಭೂಮಿಯಲ್ಲಿ ಬಣ್ಣ ಹಚ್ಚಿದ್ದವರು. ಕಲೆಗೂ ಅವರಿಗೂ ಬಿಡಿಸಲಾಗದ ನಂಟು. ಧರಣಿ ಚಿತ್ರವನ್ನು ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನ ಮಾಡುತ್ತಿದ್ದರೆ, ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು  ನಿರ್ಮಿಸುತ್ತಿದ್ದಾರೆ.

  • ಸತ್ಯ ಹರಿಶ್ಚಂದ್ರ ಬಿಡುಗಡೆಗೆ ಮುನ್ನವೇ ಬೊಂಬಾಟ್

    satya harishchandra in profit

    ಯಾವುದೇ ಸಿನಿಮಾ ಬಿಡುಗಡೆಗೆ ಮುನ್ನವೇ ಸದ್ದು ಮಾಡಿದರೆ, ಮೊದಲು ಖುಷಿಯಾಗುವುದು ನಿರ್ಮಾಪಕ. ಏಕೆಂದರೆ, ಅವನು ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ಸು ಬರಲು ಶುರುವಾಗಿರುತ್ತೆ. ಈಗ ಹಾಗೆ ಖುಷಿಪಡುವ ಸರದಿ ಸತ್ಯ ಹರಿಶ್ಚಂದ್ರ ಚಿತ್ರದ ನಿರ್ಮಾಪಕ ಕೆ. ಮಂಜು ಅವರದ್ದು.

    ಶರಣ್ ಅಭಿನಯದ ಸತ್ಯ ಹರಿಶ್ಚಂದ್ರ ಇನ್ನೂ ರಿಲೀಸ್ ಆಗಬೇಕಿದೆ. ಮುಂದಿನ ವಾರ ರಿಲೀಸ್ ಆಗುತ್ತಿರುವ ಈ ಸಿನಿಮಾದಿಂದ ಈಗಾಗಲೇ ಅರ್ಧ ದುಡ್ಡು ಬಂದಿದೆಯಂತೆ. ಟಿವಿ ರೈಟ್ಸ್‍ನಿಂದ 1.80 ಕೋಟಿ, ಆಡಿಯೋ ರೈಟ್ಸ್‍ನಿಂದ 15 ಲಕ್ಷ ಹಾಗೂ ಹಿಂದಿ ಡಬ್ಬಿಂಗ್ ರೈಟ್ಸ್‍ನಿಂದ 30 ಲಕ್ಷ ಬಂದಿದೆಯಂತೆ. ಹೀಗಾಗಿ ಚಿತ್ರ ಬಿಡುಗಡೆಗೂ ಮೊದಲೇ ನಾನು ಅರ್ಧ ಸೇಫ್ ಎಂದು ಹೇಳಿಕೊಂಡಿದ್ದಾರೆ ಮಂಜು. 

    ಚಿತ್ರದ ವಿತರಣೆ ಹಕ್ಕು ಪಡೆದಿರುವುದು ಜಾಕ್ ಮಂಜು. ಬಿಡುಗಡೆಯಾಗುತ್ತಿರುವುದು ದೀಪಾವಳಿ ಟೈಮಲ್ಲಿ. ಹೀಗಾಗಿ ಲಾಭ ಕಟ್ಟಿಟ್ಟ ಬುತ್ತಿ ಎಂಬ ನಿರೀಕ್ಷೆಯಲ್ಲಿದ್ದಾರೆ ಸತ್ಯ ಹರಿಶ್ಚಂದ್ರನ ನಿರ್ಮಾಪಕ. 

  • ಸತ್ಯ ಹರಿಶ್ಚಂದ್ರದಲ್ಲಿ ಸ್ನೇಹಿತರ ಮಿಲನ

    satya harishchandra

    ಸತ್ಯ ಹರಿಶ್ಚಂದ್ರ. ಇದೇ ದೀಪಾವಳಿಗೆ ತೆರೆಗೆ ಬರುತ್ತಿರುವ ಚಿತ್ರ. ಚಿತ್ರದ ಹೀರೋ ಶರಣ್, ನಾಯಕಿ ಭಾವನಾ ರಾವ್. ನಿರ್ದೇಶಕ ದಯಾಳ್ ಪದ್ಮನಾಭನ್. ನಿರ್ಮಾಪಕ ಕೆ.ಮಂಜು. ಈ ಇಷ್ಟೂ ಜನರ ಮಧ್ಯೆ ಇರೋ ಒಂದು ಕಾಮನ್ ವಿಷಯ.. ಇವರೆಲ್ಲರೂ ಸ್ನೇಹಿತರು.

    ಸಿನಿಮಾವನ್ನು ರಿಲೀಸ್‍ಗೆ ಸಿದ್ಧಪಡಿಸಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಬಿಗ್‍ಬಾಸ್ ಮನೆ ಸೇರಿದ್ದಾರೆ. ವಿಶೇಷವೆಂದರೆ, ಶರಣ್ ಮತ್ತು ದಯಾಳ್ ಇಬ್ಬರೂ ಚಿತ್ರರಂಗಕ್ಕೆ ಬಂದಿದ್ದು ಒಂದೇ ಸಮಯದಲ್ಲಿ. ಇನ್ನು ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಶರಣ್ ಅವರಿಂದ ಎಷ್ಟೋ ವಿಷಯಗಳನ್ನು ಕಲಿತೆ. ಒಳ್ಳೊಳ್ಳೆಯ ಮಾಹಿತಿ ಪಡೆದುಕೊಂಡೆ ಎಂದಿದ್ದಾರೆ ದಯಾಳ್.

    ಇನ್ನು ಭಾವನಾ ರಾವ್ ಅವರು ಫೇಮಸ್ ಆಗಿದ್ದು ಗಾಳಿಪಟದ ಮೂಲಕ. ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಭಾವನಾ ರಾವ್ ಅವರನ್ನು ಪರಿಚಯಿಸಿದ್ದೇ ದಯಾಳ್. ಚಿತ್ರದ ನಿರ್ಮಾಪಕ ಕೆ.ಮಂಜು ಜೊತೆ ಈ ಹಿಮದೆ ಯಶ್‍ವಂತ್ ಸಿನಿಮಾ ಮಾಡಿದ್ದ ದಯಾಳ್, ಮಂಜು ಅವರಿಗೂ ಸ್ನೇಹಿತರು. 

    ಹೀಗೆ ಸ್ನೇಹಿತರೆಲ್ಲ ಒಟ್ಟಾಗಿ ಸೇರಿ ಮಾಡಿರುವ ಸಿನಿಮಾ, ದೀಪಾವಳಿಗೆ ತೆರೆ ಕಾಣುತ್ತಿದೆ. ಅದು ಪಟಾಕಿಯಂತೆ ಸದ್ದು ಮಾಡಿ, ಸುರುಸುರು ಬತ್ತಿಯಂತೆ ಬೆಳಗಲಿ.

     

  • ಸದಾ ಸುಳ್ಳು ಹೇಳುವವನೇ ಸತ್ಯ ಹರಿಶ್ಚಂದ್ರ..!

    satya harishchandra is irony to its name

    ಸತ್ಯ ಹರಿಶ್ಚಂದ್ರ ಚಿತ್ರದ ಕಥೆ ಏನು..? ಅಣ್ಣಾವ್ರ ಆ ಚಿತ್ರಕ್ಕೂ, ಶರಣ್‍ರ ಈ ಚಿತ್ರಕ್ಕೂ ಎಲ್ಲಾದರೂ ಹೋಲಿಕೆಯಿದೆಯೇ..? ಇಂಥ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿ ಶರಣ್ ಅವರದ್ದು ಎನ್‍ಆರ್‍ಐ ಪಾತ್ರ. ಆತ ಬಾಯ್ಬಿಟ್ಟರೆ ಹೇಳೋದು ಸುಳ್ಳು. ಆ ಸುಳ್ಳೇ ಒಂದ್ಸಲ ಆತನ ಜೀವಕ್ಕೇ ಅಪಾಯ ತಂದುಬಿಡುತ್ತೆ. ಅದರಿಂದ ತಪ್ಪಿಸಿಕೊಳ್ಳಲು ಆತ ಏನು ಮಾಡ್ತಾನೆ..? ಸುಳ್ಳು ಹೇಳೋದ್ರಿಂದ ಉದ್ಭವವಾಗುವ ಸಮಸ್ಯೆಗಳು ಎಂಥವು..? ಇವುಗಳನ್ನೆಲ್ಲ ಪ್ರೇಮಕಥೆಯ ಮಸಾಲೆ ಜೊತೆ ಅದ್ಬುತವಾಗಿ ಹೇಳಿದ್ದಾರಂತೆ ದಯಾಳ್ ಪದ್ಮನಾಭನ್.

    ಇದು ಸಿಂಗಾರ್ ವರ್ಸಸ್ ಕೌರ್ ಎಂಬ ಪಂಜಾಬಿ ಚಿತ್ರದ ರೀಮೇಕ್. ಚಿತ್ರದಲ್ಲಿ ಸಂಚಿತಾ ಪಡುಕೋಣೆ ಹಾಗೂ ಭಾವನಾ ರಾವ್ ನಾಯಕಿಯರು. ಭಾವನಾ ಅವರದ್ದು ಮುಗ್ಗ ಹುಡುಗಿಯ ಪಾತ್ರ. ಫೇಸ್‍ಬುಕ್‍ನಲ್ಲೇ ಲವ್ವಾಗಿ ಅವನನ್ನು ಹುಡುಕಿಕೊಂಡು ಯೂರೋಪ್‍ಗೆ ಹೋಗುವ ಪಾತ್ರ. ಚಿತ್ರದ ಕಥಾ ಹಂದರವಂತೂ ಕುತೂಹಲ ಹುಟ್ಟಿಸುತ್ತಿದೆ.

  • ಸಲೀಮ್ ಅನಾರ್ಕಲಿ ಓಡಿ ಹೋಗ್ಬಿಟ್ರು.. ಅಧ್ಯಕ್ಷನ ಹಿಂದೆ..

    shara as salim, ragini as anarkali in adhyaksha in america

    ಸಲೀಂ ಅನಾರ್ಕಲಿ ಅಮರ ಪ್ರೇಮಿಗಳು. ಈಗ ಆ ಅಮರ ಪ್ರೇಮಿಗಳ ವೇಷದಲ್ಲಿ.. ರೂಪದಲ್ಲಿ.. ಪ್ರೇಮದ ಟಾನಿಕ್ ಕೊಡಲು ಬಂದಿದ್ದಾರೆ ಶರಣ್ ಮತ್ತು ರಾಗಿಣಿ ದ್ವಿವೇದಿ. ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

    ಸಲೀಮ್ ಅನಾರ್ಕಲಿ ಗೋಡೆ ಕಟ್ಟೋ ಟೈಮಿನಲ್ಲಿ ಕಾಂಪೌಂಡ್ ಹಾರಿ ಓಡೋಗಿರ್ಬೋದು.. ಎನ್ನುವ ಹಾಡಿನ ಮೊದಲ ಸಾಲೇ ಕಾಮಿಡಿಯ ಪರಾಕಾಷ್ಠೆ ತೋರಿಸುತ್ತಿದೆ.

    ಇಂತಹ ತರಲೆಯನ್ನು ಇನ್ಯಾರು ಅಕ್ಷರ ರೂಪಕ್ಕೆ ತಂದಿರಬಹುದು ಎಂಬ ಬಗ್ಗೆ ಅನುಮಾನವೇ ಬೇಡ. ಅದು ಯೋಗರಾಜ ಭಟ್ಟರ ಸಾಹಿತ್ಯ. ವಿ. ಹರಿಕೃಷ್ಣ ಸಂಗೀತದಲ್ಲಿ ಹಾಡಿಗೆ ಧ್ವನಿ ನೀಡಿರುವುದು ಸಂಚಿತ್ ಹೆಗ್ಡೆ. ಯೋಗಾನಂದ್ ಮದ್ದಾನ್ ನಿರ್ದೇಶನದ ಮೊದಲ ಚಿತ್ರವಿದು.

     

  • ಸಿನಿಮಾ ಇನ್ ಟಾಕೀಸ್.. ಡೈರೆಕ್ಟರ್ ಇನ್ ಬಿಗ್‍ಬಾಸ್

    cinema in theater, dayal in big boss

    ಸತ್ಯ ಹರಿಶ್ಚಂದ್ರ. ಈತ ಮೊದಲೇ ಸುಳ್ಳು ಹೇಳೋ ಸತ್ಯ ಹರಿಶ್ಚಂದ್ರ. ಶರಣ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಅಭಿನಯದ ಸತ್ಯ ಹರಿಶ್ಚಂದ್ರ ಇವತ್ತೇ ಥಿಯೇಟರಿಗೆ ಕಾಲಿಟ್ಟಿದೆ. ಆದರೆ, ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭ್ ಇಲ್ಲಿಲ್ಲ. 

    ದಯಾಳ್, ಬಿಗ್‍ಬಾಸ್ ಮನೆ ಸೇರಿದ್ದಾರೆ. ನಿರ್ದೇಶಕರೇ ಇಲ್ಲದೆ ಚಿತ್ರದ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟು, ಚಿತ್ರವನ್ನು ಥಿಯೇಟರಿಗೆ ಸೇರಿಸುವವರೆಗೂ ಕೆಲಸ ಮಾಡಿದ್ದ ದಯಾಳ್, ಸಿನಿಮಾ ರಿಲೀಸ್ ಆಗುವ ಕೆಲವೇ ದಿನಗಳ ಮುನ್ನ ಬಿಗ್‍ಬಾಸ್ ಮನೆ ಸೇರಿದ್ದಾರೆ. 

    ಹಾಗೆಂದು ಚಿತ್ರಕ್ಕೇನೂ ಸಮಸ್ಯೆಯಾಗಿಲ್ಲ. ಚಿತ್ರ ಒಂದು ಹವಾ ಎಬ್ಬಿಸಿದೆ. ಥಿಯೇಟರಿಗೆ ನುಗ್ಗುತ್ತಿದೆ. ಪ್ರೇಕ್ಷಕರು ಥಯ್ಯಕುದಾ.. ಥಕತಯ್ಯೇ ಕುದಾ ಅನ್ನಬೇಕಷ್ಟೆ..

  • ಸಿಂಪಲ್ ಸುನಿ ಆಫರ್ ಕೊಟ್ಟರೂ ಕೊಹ್ಲಿ ಉಳಿಸಿಕೊಳ್ಳಲಿಲ್ಲ..!

    ಸಿಂಪಲ್ ಸುನಿ ಆಫರ್ ಕೊಟ್ಟರೂ ಕೊಹ್ಲಿ ಉಳಿಸಿಕೊಳ್ಳಲಿಲ್ಲ..!

    ಸಿಂಪಲ್ ಸುನಿ. ಸಿನಿಮಾ ನಿರ್ದೇಶಕರಷ್ಟೇ ಅಲ್ಲ, ಅಪ್ಪಟ ಕ್ರಿಕೆಟ್ ಪ್ರೇಮಿ. ರಣಜಿ ಕ್ರಿಕೆಟ್‍ನ್ನೂ ಬಿಡದೆ ಫಾಲೋ ಮಾಡುವ ಅಪ್ಪಟ ಕ್ರಿಕೆಟ್ ಅಭಿಮಾನಿ. ಸಹಜವಾಗಿಯೇ ಆರ್.ಸಿ.ಬಿ. ಫ್ಯಾನು. ವಿರಾಟ್ ಕೊಹ್ಲಿಗೆ ಕಟ್ಟರ್ ಫ್ಯಾನು. ಹೀಗಾಗಿ ಅವರು ಬುಧವಾರ ಒಂದು ಆಫರ್ ಬಿಟ್ಟಿದ್ದರು. ಚೆನ್ನೈ ಮತ್ತು ಆರ್‍ಸಿಬಿ ಮ್ಯಾಚ್‍ನಲ್ಲಿ ಕೊಹ್ಲಿ ಸೆಂಚುರಿ ಹೊಡೆದರೆ.. ಅವರ ಟ್ವೀಟ್‍ನ್ನು ರೀ ಟ್ವೀಟ್ ಮಾಡಿದವರಿಗೆಲ್ಲ ಅವತಾರ ಪುರುಷ ಟಿಕೆಟ್ ಫ್ರೀ ಎಂದಿದ್ದರು ಸುನಿ.

    ಸುನಿ ನಿರ್ದೇಶನದ ಅವತಾರ ಪುರುಷ ಇದೇ ವಾರ ರಿಲೀಸ್. ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಕಾಮಿಡಿ ಹಾರರ್ ಸಬ್ಜೆಕ್ಟ್ ಇದೆ. ಸುನಿಯವರ ಆಸೆ ಮತ್ತು ಆಫರ್‍ಗೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಸಪೋರ್ಟೂ ಇತ್ತು. ಆದರೆ.. ಫೈನಲಿ..

    ಆರ್.ಸಿ.ಬಿ. ಮ್ಯಾಚ್ ಗೆಲ್ತು. ಇದೇ ಟೂರ್ನಿಯಲ್ಲಿ ಆಗಿದ್ದ ಸೋಲಿನ ಸೇಡು ತೀರಿಸಿಕೊಳ್ತು. ಆದರೆ ಕೊಹ್ಲಿ ಆಟ 30 ರನ್ನಿಗೇ ಮುಗಿದು ಹೋಯ್ತು. ಸೆಂಚುರಿಗೆ ಜಸ್ಟ್ 70 ರನ್ ಕಡಿಮೆ.

    ಆದರೆ.. ಸುನಿ & ಆರ್.ಸಿಬಿ. ಅಭಿಮಾನಿಗಳು ಮಾತ್ರ..  ಐಪಿಎಲ್ ಅತ್ಲಾಗಿರಲಿ.. ಸಿನಿಮಾ ಸೂಪರ್ ಆಗಿ ಗೆಲ್ಲಲಿ ಎನ್ನುತ್ತಿದ್ದಾರೆ.

  • ಸಿಂಪಲ್ ಸುನಿ ಡಬಲ್ ಪಟಾಕಿ

    ಸಿಂಪಲ್ ಸುನಿ ಡಬಲ್ ಪಟಾಕಿ

    ನವೆಂಬರ್ 26ಕ್ಕೆ ಗಣೇಶ್, ನಿಶ್ವಿಕಾ ನಾಯ್ಡು ನಟಿಸಿರೋ ಸಖತ್ ರಿಲೀಸ್.

    ಡಿಸೆಂಬರ್ 10ಕ್ಕೆ ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಅವತಾರ್ ಪುರುಷ ರಿಲೀಸ್.

    ಎರಡೂ ಚಿತ್ರಗಳ ಡೈರೆಕ್ಟರ್ ಒಬ್ಬರೇ. ಸಿಂಪಲ್ ಸುನಿ. ಹಾಗಾಗಿಯೇ ಇದು ಡಬಲ್ ಪಟಾಕಿ.

    ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಸೋಳಂಕಿ, ಸುಪ್ರೀತ್ ನಿರ್ಮಾಪಕರಾದರೆ, ಅವತಾರ್ ಪುರುಷ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

    ಸುನಿ ಕೈಚಳಕ ಇದ್ದ ಮೇಲೆ ನಗುವಿಗೆ ಬರವಿರಲ್ಲ. ಜೊತೆಗೆ ಸಖತ್ ಚಿತ್ರದಲ್ಲಿ ಗಣೇಶ್ ಹೀರೋ ಆದರೆ, ಅವತಾರ್ ಪುರುಷನಾಗಿರೋದು ಶರಣ್. ಅಲ್ಲಿಗೆ ನಗುವೂ ಡಬಲ್ ಪಟಾಕಿಯಂತೆ ಸಿಡಿಯಲಿದೆ.

  • ಸೀಕ್ವೆಲ್ ಸ್ಟಾರ್ ಶರಣ್ ಗಂಟಲಿಗೆ ಅದೇನಾಯ್ತು..?

    sharan down with throat onfection

    ಇತ್ತೀಚೆಗೆ ಸೀಕ್ವೆಲ್ ಸ್ಟಾರ್ ಆಗುತ್ತಿರುವ ಶರಣ್ ಗಂಟಲಿಗೆ ಇನ್‍ಫೆಕ್ಷನ್ ಆಗಿದೆ. ಹೀಗಾಗಿಯೇ ಶರಣ್ ಅವರ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಡಬ್ಬಿಂಗ್‍ಗೆ ಬ್ರೇಕ್ ಬಿದ್ದಿದೆ. ಏಕೋ ಏನೋ ಗೊತ್ತಿಲ್ಲ. ಡಬ್ ಮಾಡುವಾಗ ನನ್ನ ಧ್ವನಿ ನನಗೇ ಕರ್ಕಶ ಎನ್ನಿಸೋಕೆ ಶುರುವಾಯ್ತು. ಹೀಗಾಗಿ ಡಬ್ಬಿಂಗ್‍ಗೆ ನಿಲ್ಲಿಸಿದ್ದೇವೆ ಎಂದಿದ್ದಾರೆ ಶರಣ್.

    ಇತ್ತೀಚೆಗೆ ಶರಣ್ ಸೀಕ್ವೆಲ್ ಸ್ಟಾರ್ ಆಗುತ್ತಿದ್ದಾರೆ. ರ್ಯಾಂಬೋ-2, ವಿಕ್ಟರಿ 2 ನಂತರ ಈಗ ಅಧ್ಯಕ್ಷ ಇನ್ ಅಮೆರಿಕ ಶೂಟಿಂಗ್ ಮುಗಿಸಿದ್ದಾರೆ. ಇದು ಅಧ್ಯಕ್ಷ ಚಿತ್ರದ ಸೀಕ್ವೆಲ್. ಇವೆಲ್ಲ ಅವರದ್ದೇ ಚಿತ್ರದ ಸೀಕ್ವೆಲ್ ಆದರೆ, ಮುಂದಿನ ಸಿನಿಮಾ ಯೋಗರಾಜ್ ಭಟ್ಟರ ಗಾಳಿಪಟ 2. ಅದು ಭಟ್ಟರೇ ಮಾಡುತ್ತಿರುವ ಅವರ ಚಿತ್ರದ ಸೀಕ್ವೆಲ್. ಒಟ್ಟಿನಲ್ಲಿ ಶರಣ್ ಈಗ ಸೀಕ್ವೆಲ್ ಸ್ಟಾರ್.

  • ಸುನಿ, ಪುಷ್ಕರ್ ಆಟ.. ಶರಣ್ ತ್ರಿಶಂಕು 

    pushkar team up with simple suni and sharan for their next movie

    ವಿಭಿನ್ನ ಪ್ರಯತ್ನಗಳಿಂದಲೇ ಯಶಸ್ಸನ್ನೂ ಪಡೆದು, ಹೆಸರು ಮಾಡುತ್ತಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೀಗೂ ಸಿನಿಮಾ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟ, ಹೊಸ ಜಾನರೆ ಸೃಷ್ಟಿಸಿದ ಸಿಂಪಲ್ ಸುನಿ, ಪ್ರೇಕ್ಷಕರನ್ನು ಡಿಸೈನ್ ಡಿಸೈನಾಗಿ ನಗಿಸಿ ಗೆಲ್ಲುತ್ತಿರುವ ಶರಣ್.. ಈ ಮೂವರೂ ಒಂದಾಗಿದ್ದಾರೆ. ಹೊಸ ಚಿತ್ರ ಮಾಡುತ್ತಿದ್ದಾರೆ. 

    ಚಿತ್ರಕ್ಕೆ ಮಹಾಭಾರತದ ತ್ರಿಶಂಕು ಕಥೆಯೇ ಸ್ಫೂರ್ತಿ. ಸುನಿ ಮತ್ತು ಶರಣ್ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಭಾರಿ ಖುಷಿ ಇದೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಕಾಮಿಡಿ ಕಥೆಯೇ ಆದರೂ, ಇದು ನನ್ನ ರೆಗ್ಯುಲರ್ ಸಿನಿಮಾ ಅಲ್ಲ. ನನಗೆ ಇದೊಂದು ಸವಾಲಿನ ಪಾತ್ರ ಎಂದಿದ್ದಾರೆ ಶರಣ್. ಮಹಾಭಾರತದ ಕಥೆಯನ್ನಿಟ್ಟುಕೊಂಡು ಒಂದು ಮಜವಾದ ಕಥೆ ಹೇಳುತ್ತಿದ್ದೇನೆ ಎಂದಿದ್ದಾರೆ ಸುನಿ.

    ಜನವರಿ 16ಕ್ಕೆ ಆ ಸಿನಿಮಾ ಸೆಟ್ಟೇರುತ್ತಿದೆ. ಜನವರಿ 20ಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

  • ಸೂಜಿಗೆ ಸೂಜಿಮಲ್ಲಿಗೆ ಮನೋಹರ್ ಮೇಷ್ಟ್ರು ಹೇಗೆ?

    ಸೂಜಿಗೆ ಸೂಜಿಮಲ್ಲಿಗೆ ಮನೋಹರ್ ಮೇಷ್ಟ್ರು ಹೇಗೆ?

    ಗುರು ಶಿಷ್ಯರು ಚಿತ್ರ ಇದೇ ಸೆಪ್ಟೆಂಬರ್ 23ಕ್ಕೆ ಬಿಡುಗಡೆಯಾಗುತ್ತಿದೆ. ನಿಶ್ವಿಕಾ ನಾಯ್ಡು ಗುರು ಪ್ರೇಯಸಿಯಾಗಿದ್ದಾರೆ. ಚಿತ್ರದ ಪ್ರಮೋಷನ್ನು ಕೂಡಾ ಹಾಗೆ ಇದೆ. ಶಿಷ್ಯರಿಬ್ಬರು ಹೋಟೆಲ್ಲಿನಲ್ಲಿ ಪ್ರೇಮ ಪಾಠ ಮಾಡುತ್ತಿರುವ ಟೈಮಲ್ಲಿ ಗುರು ಎಂಟ್ರಿಯಾಗುತ್ತಾರೆ. ಮೇಷ್ಟ್ರು ರೀತಿಯೇ ಮಾತನಾಡುತ್ತಾರೆ. ಆಗ.. ಗುರುವನ್ನು ಕರೆಯೋಕೆ ಸೂಜಿ ಬರುತ್ತಾರೆ. ಅಲ್ಲಿಗೆ.. ಹುಡುಗರು ಗುರುವಿನ ಲವ್ ಸ್ಟೋರಿ ಹೇಳಂಗಿಲ್ಲ. ಗುರುವರ್ಯ.. ಶಿಷ್ಯರ ಪ್ರೇಮಕಥೆ ಬಗ್ಗೆ ತುಟಿ ಬಿಚ್ಚಂಗಿಲ್ಲ. ಒಂದು ತಮಾಷೆಯ ವಿಡಿಯೋ ಇದು.

    ಆದರೆ ಚಿತ್ರದಲ್ಲಿ ಹಾಗಿರಲ್ಲ. ಸೂಜಿ ಅಂದ್ರೆ ನಿಶ್ವಿಕಾ ನಾಯ್ಡು ಲವ್ ಮಾಡೋ ಹುಡುಗನಾಗಿ ಶರಣ್ ನಟಿಸಿದ್ದಾರೆ. ಮನೋಹರ್ ಅನ್ನೊ ಪಿಟಿ ಮೇಷ್ಟ್ರ ಪಾತ್ರದಲ್ಲಿ ಶರಣ್ ನಟಿಸಿದ್ದಾರೆ. ಕನ್ನಡದಲ್ಲಿ ಖೋಖೋ ಬಗ್ಗೆ ಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಗುರು ಶಿಷ್ಯರು. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರದಲ್ಲಿ ಗುರುವಿನ ಗುರುವಾಗಿ ನಟಿಸಿರೋದು ದತ್ತಣ್ಣ. ದತ್ತಣ್ಣ ಶಿಷ್ಯ ಶರಣ್ ಪಿಟಿ ಮೇಷ್ಟ್ರಾಗಿ ಬೆಟ್ಟದಪುರಕ್ಕೆ ಬಂದು ಖೋಖೋ ಆಡಿಸುವ ಹುಡುಗರ ತಂಡ ಕಟ್ಟಿ

    ಗೆಲ್ಲುವ ಕಥೆಯೇ ಗುರು ಶಿಷ್ಯರು. ಚಿತ್ರದಲ್ಲಿ ಕುವೆಂಪು ಅವರ ಗೀತೆಯನ್ನೂ ಬಳಸಿಕೊಳ್ಳಲಾಗಿದೆ. ಅಂದಹಾಗೆ ಶಿಷ್ಯರ ಕಡಿಮೆಯಿಲ್ಲ ಬಿಡಿ. ಶರಣ್, ಲವ್ಲೀ ಪ್ರೇಮ್, ಬುಲೆಟ್ ಪ್ರಕಾಶ್, ರವಿಶಂಕರ್ ಗೌಡ, ಶಾಸಕ ರಾಜೂಗೌಡರ ಮಕ್ಕಳೂ ಸೇರಿ ಎಲ್ಲರೂ ಶಿಷ್ಯ ಪಾತ್ರ ಮಾಡಿದ್ದಾರೆ.

  • ಹುಟ್ಟು ಹಬ್ಬದ ದಿನ ಶರಣ್ ಎಲ್ಲಿರ್ತಾರೆ ಗೊತ್ತಾ..?

    where will sharan be on his borthday

    ಕನ್ನಡ ಚಿತ್ರರಸಿಕರ ಅಧ್ಯಕ್ಷ ಶರಣ್, ಈಗ ಅವತಾರ ಪುರುಷನಾಗುತ್ತಿದ್ದಾರೆ. ಶರಣ್‍ರನ್ನು ಅವತಾರ ಪುರುಷನನ್ನಾಗಿಸಿರುವುದು ಸಿಂಪಲ್ ಸುನಿ. ಫೆಬ್ರವರಿ 6ನೇ ತಾರೀಕು ಅವರ ಹುಟ್ಟುಹಬ್ಬ. ಆದರೆ, ಶರಣ್ ಮನೆಯಲ್ಲಿ ಇರಲ್ಲ. ಹಾಗಾದ್ರೆ ಎಲ್ಲಿರ್ತಾರೆ..?

    ನನಗೂ ಅಭಿಮಾನಿಗಳ ಜೊತೆ ಮನೆಯೆದುರೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಅನ್ನೋ ಆಸೆ ಇದೆ. ಯಾಕಂದ್ರೆ, ಅಭಿಮಾನಿಗಳೇ ನಾವು ಸಂಪಾದಿಸಿರುವ ಆಸ್ತಿ. ಆದರೆ, ಮೊದಲಿನಿಂದಲೂ ಹುಟ್ಟುಹಬ್ಬದ ದಿನ ಯಾವುದಾದರೂ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ಬೆಳೆದುಕೊಂಡು ಬಂದಿದೆ. ಕುಟುಂಬ ಸಮೇತ ದೇವರ ಸನ್ನಿಧಿಯಲ್ಲೇ ಹುಟ್ಟುಹಬ್ಬ ಆಚರಿಸುತ್ತೇವೆ. ಕಳೆದ ವರ್ಷ ತಿರುಪತಿಗೆ ಹೋಗಿದ್ದೆವು. ಈ ಬಾರಿ ದಕ್ಷಿಣ ಕರ್ನಾಟಕದ ದೇವಸ್ಥಾನಗಳಿಗೆ ಹೊರಟಿದ್ದೇವೆ ಎಂದಿದ್ದಾರೆ ಶರಣ್.

    ಶರಣ್ ಹುಟ್ಟುಹಬ್ಬಕ್ಕೆಂದೇ ಅವತಾರ ಪುರುಷ ಚಿತ್ರ ತಂಡ ವಿಶೇಷ ಟೀಸರ್ ರಿಲೀಸ್ ಮಾಡುತ್ತಿದೆ. ಅಷ್ಟದಿಗ್ಬಂದನ ಮಂಡಲಕ ಅನ್ನೋ ಸ್ಪೆಷಲ್ ಟೈಟಲ್ ಕೊಟ್ಟಿರೋ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲೇ ಸೆಲಬ್ರೇಟ್ ಮಾಡುತ್ತಿದ್ದಾರೆ.