` actor sharan, - chitraloka.com | Kannada Movie News, Reviews | Image

actor sharan,

 • ಮೇ 28ಕ್ಕಿಲ್ಲ ಅವತಾರ ಪುರುಷ

  ಮೇ 28ಕ್ಕಿಲ್ಲ ಅವತಾರ ಪುರುಷ

  ಕೊರೊನಾ ಹಾವಳಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಚಿತ್ರಗಳ ಬಿಡಗಡೆ ಮುಂದಕ್ಕೆ ಹೋಗಿದೆ. ಶರಣ್-ಸಿಂಪಲ್ ಸುನಿ-ಅಶಿಕಾ ರಂಗನಾಥ್-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್‍ನ ಅವತಾರ ಪುರುಷ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗುತ್ತಿದೆ. ಅಫ್‍ಕೋರ್ಸ್, ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲವಾದರೂ ಚಿತ್ರದ ಬಿಡಗಡೆ ಮುಂದಕ್ಕೆ ಹಾಕೋಕೆ ಚಿತ್ರತಂಡ ನಿರ್ಧರಿಸಿರುವುದು ಸತ್ಯ.

  ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಅದೇ ಡೇಟ್‍ಗೆ ರಿಲೀಸ್ ಮಾಡೋ ಪ್ಲಾನ್ ಹಾಗೆಯೇ ಇದೆ. ಆದರೆ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಆಗುತ್ತಿಲ್ಲ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಎಲ್ಲವೂ ಸಿದ್ಧವಾಗಿದ್ದರೂ ಚಿತ್ರದ ಬಿಡುಗಡೆ ಮೇ 28ಕ್ಕಿಲ್ಲ. ಅವತಾರ ಪುರುಷ 2 ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಮೇ 28ಕ್ಕೆ ಬರಬೇಕಿತ್ತು. ಈಗಾಗಲೇ ಚಿತ್ರದ ಟ್ರೇಲರ್ ಸಂಚಲನ ಸೃಷ್ಟಿಸಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ, ಕೊರೊನಾ ಕಪಿಮುಷ್ಠಿಯಿಂದ ದೇಶ ಬಿಡುಗಡೆಯಾಗದ ಹೊರತು ಅವತಾರ ಪುರುಷನ ದರ್ಶನ ಭಾಗ್ಯ ಕಷ್ಟ.

 • ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಫೆ.19ರಿಂದ ಶುರುವಾಗುತ್ತಿರೋ ಕನ್ನಡದ ಸ್ಟಾರ್ ನಟರ ಚಿತ್ರಗಳ ಜಾತ್ರೆ ಕಂಟಿನ್ಯೂ ಆಗಲಿದೆ. ಸರಾಸರಿ ಪ್ರತಿ 15 ದಿನಕ್ಕೊಂದು ಸ್ಟಾರ್ ಸಿನಿಮಾ ಆಗುತ್ತಿದೆ. ಮೇ 14ಕ್ಕೆ ಭಜರಂಗಿ 2 ಇದ್ದು, ಅದಾದ ನಂತರ ಮೇ 28ಕ್ಕೆ ಶರಣ್ ಎಂಟ್ರಿ ಕೊಡುತ್ತಿದ್ದಾರೆ.

  ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ನಟಿಸಿರುವ ಅವತಾರ ಪುರುಷ ಅಷ್ಟಮಂಡಲಕ ದಿಗ್ಬಂಧನ ಮೇ 28ಕ್ಕೆ ರಿಲೀಸ್ ಆಗುತ್ತಿದೆ. ಕಾಮಿಡಿ ಲವ್ ಸ್ಟೋರಿಗಳಿಗೆ ಫೇಮಸ್ ಆಗಿರೋ ಸಿಂಪಲ್ ಸುನಿ, ಈ ಬಾರಿ ಸಿಂಪಲ್ಲಾಗ್ ಒಂದಿಷ್ಟು ಹಾರರ್ ಮಿಕ್ಸ್ ಮಾಡಿದ್ದಾರೆ. ಅದೂ 2 ಭಾಗಗಳಲ್ಲಿ. ಅವತಾರ ಪುರುಷ ಚಿತ್ರದ ಭಾಗ 1 ಮೇ 28ಕ್ಕೆ ರಿಲೀಸ್ ಆದರೆ, 2ನೇ ಭಾಗ ಅದಾದ 2 ತಿಂಗಳ ನಂತರ ಥಿಯೇಟರ್‍ಗೆ ಬರಲಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಿಂಪಲ್ ಸುನಿ ನಿರ್ದೇಶನ ಮತ್ತು ಶರಣ್ ನಟನೆ. ಎಲ್ಲವೂ ಹೊಚ್ಚ ಹೊಸ ಕಾಂಬಿನೇಷನ್ ಎನ್ನುವುದು ವಿಶೇಷ.

 • ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು

  ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು

  ಗುರು ಶಿಷ್ಯರು ಚಿತ್ರತಂಡ ವಿಭಿನ್ನವಾಗಿ ಪ್ಲಾನ್ ಮಾಡಿ ಇಡೀ ಚಿತ್ರತಂಡವನ್ನು ಸ್ಪೆಷಲ್ ಆಗಿ ಪರಿಚಯ ಮಾಡಿಕೊಟ್ಟಿದೆ.

  ಬಸವ : ಹರ್ಷಿತ್ ನವೀನ್ ಕೃಷ್ಣ

  ಚೆನ್ನಿಗರಾಯ : ಆಸಿಫ್ ಮುಲ್ಲಾ

  ಜೋಸೆಫ್ : ಸೂರ್ಯ ರವಿಶಂಕರ್

  ಬಾಷ : ರಕ್ಷಕ್ ಬುಲೆಟ್

  ಓಬಳೇಶ : ಸಾಂಬ ಶಿವ

  ನಟೇಶ-ಗಿರೀಶ : ಸಂದೇಶ್-ಸಾಗರ್

  ಕಾಡಸಿದ್ಧ : ರುದ್ರಗೌಡ

  ಟೈರ್ : ಅನೂಪ್ ರಮಣ

  ಕಿರಣ್ : ಅಮಿತ್ ಬಿ

  ಕಾರ್ತಿಕ್ : ಹೃದಯ್ ಶರಣ್

  ಸೀನ : ಏಕಾಂತ್ ಪ್ರೇಮ್

  ವೀರಣ್ಣ : ಮಣಿಕಂಠ ನಾಯಕ್

  ಇವರೆಲ್ಲರ ಗುರು ಶರಣ್. ಇದು 1995ರಲ್ಲಿ ನಡೆಯೋ ಕಥೆ. ಶರಣ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಜಂಟಲ್‍ಮನ್ ಖ್ಯಾತಿಯ ಜಡೇಶ್ ಹಂಪಿ ನಿರ್ದೇಶನವಿದೆ.

 • ರಷ್ಯಾದಲ್ಲಿ ಶರಣ್ ಹುಲಿ ಕುಣಿತ

  sharan's huli kunitha in russia

  ಕನ್ನಡದ ಕಾಮಿಡಿ ಕಿಂಗ್ ಶರಣ್, ಈಗ ವಿಕ್ಟರಿ 2 ಚಿತ್ರದಲ್ಲಿ ಬ್ಯುಸಿ. ರ್ಯಾಂಬೋ2 ಸಕ್ಸಸ್ ಸಂಭ್ರಮದಲ್ಲಿರೋ ಶರಣ್ ಟೀಂ, ರಷ್ಯಾದಲ್ಲಿ ವಿಕ್ಟರಿ2 ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಿದೆ. ರಷ್ಯಾದಲ್ಲಿ ಕನ್ನಡದ ಜನಪದ ಕಲೆಗಳಾದ ಹುಲಿ ಕುಣಿತ, ಯಕ್ಷಗಾನಗಳ ಹಿನ್ನೆಲೆಯಲ್ಲಿ ಹಾಡು ಚಿತ್ರೀಕರಿಸಿದೆ. ರಷ್ಯಾದ ಹಿನ್ನೆಲೆಯಲ್ಲಿ ಕನ್ನಡದ ಜಾನಪದ ಕಲೆಗಳ ಕುಣಿತ ವಿಶೇಷವಾಗಿ ಕಣ್ತುಂಬಿಕೊಳ್ಳಲಿದೆ.

  ಪ್ಲೀಸ್ ಟ್ರಸ್ಟು.. ನಾನು ಚೀಪ್ & ಬೆಸ್ಟು.. ಎಂಬ ಹಾಡಿಗೆ ಶರಣ್ ಹಾಗೂ ಅಸ್ಮಿತಾ ಸೂದ್ ಕುಣಿದು ಕುಪ್ಪಳಿಸಿದ್ದಾರೆ. ನಮ್ಮ ನೆಲದ ಜನಪದ ಕಲೆಗಳನ್ನು ವಿದೇಶದಲ್ಲಿ ಚಿತ್ರೀಕರಿಸುವುದೇ ಒಂದು ಸೊಗಸು. ಹೀಗಾಗಿ ಇಲ್ಲಿಂದಲೇ ಕಾಸ್ಟ್ಯೂಮ್ ಹಾಗೂ ನಾಲ್ವರು ನೃತ್ಯಗಾರರರನ್ನು ಕರೆದುಕೊಂಡು ಹೋಗಿದ್ದೆವು. ಎಂದು ವಿವರ ಹಂಚಿಕೊಂಡಿದ್ಧಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್. ರಷ್ಯಾದ ಬಾಕು ಎಂಬಲ್ಲಿ ಈ ಹಾಡು ಚಿತ್ರೀಕರಿಸಲಾಗಿದೆ. ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ, ಸಂತು ನಿರ್ದೇಶನವಿದೆ.

 • ರಾಗಿಣಿಗಾಗಿ ಅಮೆರಿಕಕ್ಕೆ ಸೇಲ್ ಆದ ಅಧ್ಯಕ್ಷ

  adhyaksha in america song

  ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಹಾಡೊಂದು ಹೊರಬಿದ್ದಿದೆ. ಅಮ್ಮ ನಾ ಸೇಲಾದೆ.. ಅಮೆರಿಕ ಪಾಲಾದೆ ಅನ್ನೋ.. ಹಾಡು. ಇದು ಕಾಶೀನಾಥ್ ಅವರ ಚಿತ್ರದ ಹಿಟ್ ಸಾಂಗ್‍ನ ತುಣುಕು. ಆದರೆ, ಅಧ್ಯಕ್ಷ ಇನ್ ಅಮೆರಿಕದಲ್ಲಿ ಅದೊಂದು ಸಾಲನ್ನಷ್ಟೇ ಎತ್ತಿಕೊಂಡು ಹೊಸ ಹಾಡನ್ನೇ ಸೃಷ್ಟಿಸಲಾಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹೊಸದೇ ಹಾಡು ಸೃಷ್ಟಿಯಾಗಿದ್ದು, ಹಾಡು ಶಿಳ್ಳೆ ಹೊಡೆಯುವಂತಿದೆ.

  ರಾಗಿಣಿಯ ಚೆಲುವಿಗೆ ಮಾರು ಹೋಗಿ ಅವರ ಹಿಂದೆ ಬೀಳೋ ತುಂಟನಾಗಿ ಹುಚ್ಚೆದ್ದು ಕುಣಿದಿದ್ದಾರೆ ಶರಣ್. ಶರಣ್ ಚಿತ್ರಕ್ಕೆ ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಸಂಗೀತ ಕೊಟ್ಟಿದ್ದಾರೆ. ಯೋಗಾನಂದ್ ಮದ್ದಾನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಇದು. ವಿಶ್ವಪ್ರಸಾದ್ ಚಿತ್ರದ ನಿರ್ಮಾಪಕ. ಬಹುತೇಕ ಅಮೆರಿಕದಲ್ಲಿಯೇ ಚಿತ್ರೀಕರಣವಾಗಿರುವ ಸಿನಿಮಾದ ಹಾಡು, ಟ್ರೆಂಡ್ ಆಗಿದೆ.

 • ರಾಜ್ ವಿಷ್ಣುನಲ್ಲಿ ಸಾಧು ಮಹಾರಾಜ್ ಅವತಾರವೇ ಡಿಫರೆಂಟು..!

  raj vishnu

  ಸಿನಿಮಾ ಯಾವುದೇ ಇರಲಿ, ಸಾಧು ಕೋಕಿಲ ಕಾಣಿಸಿಕೊಂಡರೆ ಸಾಕು, ಶಿಳ್ಳೆ ಹೊಡೆಯೋ ಅಭಿಮಾನಿಗಳಿಗೆ ಬರವಿಲ್ಲ. ಸಾಧು ಮಹಾರಾಜ್ ಅನ್ನೋದು ಅದ್ಯಾವ ಸಿನಿಮಾದಲ್ಲಿ ಪ್ರಸ್ತಾಪವಾಯಿತೋ ಗೊತ್ತಿಲ್ಲ, ಈಗಂತೂ ಅಭಿಮಾನಿಗಳು ಅವರನ್ನು ಕರೆಯೋದೇ ಸಾಧು ಮಹಾರಾಜ್ ಅಂತಾ. ಇತ್ತೀಚೆಗಂತೂ ಸಾಧು ಕೋಕಿಲಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಇಂಥ ಸಾಧು ಕೋಕಿಲಾ ರಾಜ್ ವಿಷ್ಣು ಚಿತ್ರದಲ್ಲಿ ನಾಲ್ಕು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ರಾಜ್ ವಿಷ್ಣು ಚಿತ್ರದಲ್ಲಿ ಸಾಧು ಜ್ಯೋತಿಷ್ಯ ಹೇಳ್ತಾರೆ.. ಐಸ್‍ಕ್ರೀಂ ಮಾರ್ತಾರೆ.. ತಮಟೆ ಹೊಡೀತಾರೆ.. & ವಾಗಾಬಾಂಡ್. ಅದೊಂಥರಾ ಬೇರೆಯೇ ಎಕ್ಸ್‍ಪೀರಿಯನ್ಸ್ ಅಂತಾರೆ ಡೈರೆಕ್ಟರ್ ಮಾದೇಶ್. ಅಷ್ಟೂ ಪಾತ್ರಗಳಲ್ಲಿ ಸಾಧು ಅಭಿನಯ, ಒಂದನ್ನೊಂದು ಮೀರಿಸುವ ಹಾಗಿದೆ. ಚಿತ್ರದಲ್ಲಿ ಅದು ತುಂಬಾನೇ ಮುಖ್ಯ ಪಾತ್ರ ಎನ್ನುವ ಮಾತು ಚಿತ್ರ ತಂಡದಲ್ಲಿದೆ.

  ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಪಾತ್ರದಲ್ಲಿರುವ ಸಿನಿಮಾದಲ್ಲಿ, ಶ್ರೀ ಮುರಳಿ ಅತಿಥಿ ನಟರಾಗಿದ್ದಾರೆ. ಇನ್ನು ಸಾಧು ಕೋಕಿಲ 4 ಅವತಾರಗಳಲ್ಲಿದ್ದಾರೆ ಎಂದರೆ ಅಭಿಮಾನಿಗಳ ನಿರೀಕ್ಷೆಯೂ 

 • ಲಡ್ಡು ಕಾಣಿಕೆ ಗುರು ಶಿಷ್ಯರು..!

  ಲಡ್ಡು ಕಾಣಿಕೆ ಗುರು ಶಿಷ್ಯರು..!

  ಗುರು ಶಿಷ್ಯರು. ಈ ಹೆಸರು ಕೇಳಿದರೆ ಸಾಕು, ಕನ್ನಡದ ಕ್ಲಾಸಿಕ್ ಸಿನಿಮಾ ನೆನಪಾಗುತ್ತೆ. ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್ ಅಭಿನಯದ ಸಿನಿಮಾ. ದೊಡ್ಡವರೆಲ್ಲ ಜಾಣರಲ್ಲ ಹಾಡು, ಪೆದ್ದು ಶಿಷ್ಯರ ತರಲೆ ಆಟ.. ಎಲ್ಲವೂ ಈಗಲೂ ನಗು ಬರಿಸುತ್ತವೆ. ಅದೇ ಟೈಟಲ್ ಈಗ ಮತ್ತೊಮ್ಮೆ ಸಿನಿಮಾ ಆಗುತ್ತಿದೆ.

  ಇತ್ತೀಚೆಗೆ ಡಿ.21ಕ್ಕೆ ಲಡ್ಡು ಕೊಡ್ತೇನೆ ಎಂದು ವಿಜಿಲ್ ಊದಿದ್ದ ತರುಣ್ ಸುಧೀರ್ ಮತ್ತು ಶರಣ್ ಊದಿರುವ ವಿಜಲ್ ಇದು, ಗುರು ಶಿಷ್ಯರು. ಇದು ಲಡ್ಡು ಬ್ಯಾನರ್‍ನ ಹೊಸ ಸಿನಿಮಾ.

  ತರುಣ್ ಮತ್ತು ಶರಣ್ ನಿರ್ಮಾಪಕರಾಗಿರುವ ಚಿತ್ರಕ್ಕೆ ಶರಣ್ ಅವರೇ ಹೀರೋ. ಜಡೇಶ್ ಕುಮಾರ್ ಹಂಪಿ ನಿರ್ದೇಶಕ. ಜಂಟಲ್‍ಮನ್ ಮತ್ತು ರಾಜಹಂಸ ಚಿತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಜಡೇಶ್, ಈ ಬಾರಿ ಕಾಮಿಡಿ ಸಬ್ಜೆಕ್ಟ್‍ಗೆ ಕೈ ಹಾಕಿದ್ದಾರೆ.

 • ವಿಕ್ಟರಿ 2ಗೆ ಧ್ರುವ ಸರ್ಜಾ ಎಂಟ್ರಿ..

  dhruva sarja lends voice to victory 2

  ವಿಕ್ಟರಿ 2 ಚಿತ್ರ ತಂಡಕ್ಕೆ ಧ್ರುವ ಸರ್ಜಾ ಸೇರ್ಪಡೆಯಾಗಿದ್ದಾರೆ. ನಟನಾಗಿ ಅಲ್ಲ, ಕಂಠದಾನ ಕಲಾವಿದನಾಗಿ. ಶರಣ್ ಅಭಿನಯದ ವಿಕ್ಟರಿ2 ಸಿನಿಮಾದ ಪಾತ್ರಧಾರಿಗಳನ್ನು ಹಿನ್ನೆಲೆಯಲ್ಲಿ ಪರಿಚಯಿಸುವುದು ಧ್ರುವ ಸರ್ಜಾ. ಕೆಲವು ದೃಶ್ಯಗಳ ಹಿನ್ನೆಲೆಗೂ ಧ್ರುವ ಸರ್ಜಾ ವಾಯ್ಸ್ ಓವರ್ ನೀಡಲಿದ್ದಾರೆ.

  ಶರಣ್ ಜೊತೆ ಅಪೂರ್ವ, ಅಸ್ಮಿತಾ ಸೂದ್ ಜೋಡಿಯಾಗಿ ನಟಿಸುತ್ತಿದ್ದಾರೆ. ರವಿಶಂಕರ್, ತಬಲಾ ನಾಣಿ, ಸಾಧು ಕೋಕಿಲ, ಪ್ರಶಾಂತ್ ಸಿದ್ಧಿ ಮೊದಲಾದವರ ದೊಡ್ಡ ತಂಡವೇ ಚಿತ್ರದಲ್ಲಿದೆ. ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ.

 • ವಿಕ್ಟರಿ 2ನಲ್ಲಿ ಶರಣ್ 4..!

  sharan to play 4 roles in victory 2

  ಶರಣ್ ಅಭಿನಯದ ವಿಕ್ಟರಿ 2 ಚಿತ್ರದಲ್ಲಿ ಶರಣ್ ಹೀರೋ ಎನ್ನುವುದರಲ್ಲೇನೂ ಡೌಟಿಲ್ಲ. ಆದರೆ, ಅವರ ಪಾತ್ರ ಯಾವುದು..? ಅದೇ ದೊಡ್ಡ ಸಸ್ಪೆನ್ಸ್. ಚಿತ್ರದಲ್ಲಿ ಶರಣ್, 4 ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಕ್ಟರಿಯಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದ ಶರಣ್, ಈ ಚಿತ್ರದಲ್ಲಿ 4 ಪಾತ್ರಗಳಲ್ಲಿ ಮಿಂಚಲಿದ್ದಾರೆ.

  ರಾಜಕಾರಣಿಯಾಗಿ, ತರಲೆ ಯುವಕನಾಗಿ, ಹುಡುಗಿಯಾಗಿ, ಬ್ಯುಸಿನೆಸ್‍ಮ್ಯಾನ್ ಆಗಿ ಮಿಂಚಲಿದ್ದಾರೆ ಶರಣ್. ಒಂದೊಂದು ಪಾತ್ರಕ್ಕೂ ಒಂದೊಂದು ಹೆಸರೂ ಇದೆ. ಅಸ್ಮಿತಾ ಸೂದ್ ಮತ್ತು ಅಪೂರ್ವ ಚಿತ್ರಕ್ಕೆ ನಾಯಕಿಯರು. ಕಾಮಿಡಿ ಕಿಕ್ ಹೆಚ್ಚಿಸೋಕೆ ರವಿಶಂಕರ್ ಮತ್ತು ಸಾಧುಕೋಕಿಲ ಇಬ್ಬರೂ ಇದ್ದಾರೆ. 

  ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ. ನಾಳೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

 • ವಿಕ್ಟರಿ-2 ಟೀಂ ಜೊತೆ ಚಾಲೆಂಜಿಂಗ್ ಸ್ಟಾರ್

  darshan visits victory 2

  ರ್ಯಾಂಬೋ 2 ಸಕ್ಸಸ್ ಖುಷಿಯಲ್ಲಿರುವ ಶರಣ್, ವಿಕ್ಟರಿ2ಗೆ ದೊಡ್ಡ ಮಟ್ಟದಲ್ಲಿ ರೆಡಿಯಾಗುತ್ತಿದ್ದಾರೆ. ಒನ್ಸ್ ಎಗೇಯ್ನ್, ಕಾಮಿಡಿ ಸಬ್ಜೆಕ್ಟ್. ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಶರಣ್ ಟೀಂಗೆ ದೊಡ್ಡ ಸರ್‍ಪ್ರೈಸ್ ಕೊಟ್ಟಿದ್ದಾರೆ ದರ್ಶನ್.

  ಚಿತ್ರದ ಶೂಟಿಂಗ್ ಸೆಟ್‍ಗೆ ಭೇಟಿ ಕೊಟ್ಟಿರೋ ದರ್ಶನ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.  ಕಾರಣ ಇಷ್ಟೇ, ದರ್ಶನ್ ಅವರ ಯಜಮಾನ ಚಿತ್ರದ ಶೂಟಿಂಗ್ ಕೂಡಾ ಅಲ್ಲಿಯೇ ನಡೆಯುತ್ತಿತ್ತು. ಶೂಟಿಂಗ್ ಮಧ್ಯೆಯೇ ವಿಕ್ಟರಿ 2 ತಂಡದ ಶೂಟಿಂಗ್ ಬಗ್ಗೆ ತಿಳಿದುಕೊಂಡ ದರ್ಶನ್, ತಕ್ಷಣ ವಿಕ್ಟರಿ ಸೆಟ್‍ಗೆ ಭೇಟಿ ಕೊಟ್ಟು ಸರ್‍ಪ್ರೆಸ್ ಕೊಟ್ಟಿದ್ಧಾರೆ.

  ದರ್ಶನ್ ಆಗಮನ ಸಹಜವಾಗಿಯೇ ವಿಕ್ಟರಿ2 ತಂಡದ ಖುಷಿ ಹೆಚ್ಚಿಸಿದೆ. ಶರಣ್ ನಾಯಕರಾಗಿರುವ ವಿಕ್ಟರಿ 2 ಸಿನಿಮಾಗೆ ತರುಣ್ ಶಿವಪ್ಪ ನಿರ್ಮಾಪಕ. ರವಿಶಂಕರ್ ಕೂಡಾ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಸಂತು ನಿರ್ದೇಶಕ. ವಿಕ್ಟರಿ 2 ಸಿನಿಮಾ ನವೆಂಬರ್ 1ಕ್ಕೆ ರಿಲೀಸ್ ಆಗಲಿದೆ.

 • ಶರಣ್ ಅವತಾರಗಳಿಗೆ ಪ್ರೇಕ್ಷಕರ ಪ್ರೇಮ ದಿಗ್ಬಂಧನ

  ಶರಣ್ ಅವತಾರಗಳಿಗೆ ಪ್ರೇಕ್ಷಕರ ಪ್ರೇಮ ದಿಗ್ಬಂಧನ

  ತಮ್ಮ ರೆಗ್ಯುಲರ್ ಜಾನರ್ ಬಿಟ್ಟು ಬಂದ ಸಿಂಪಲ್ ಸುನಿ, ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಸಿನಿಮ ಮೂಲಕವೂ ಗೆದ್ದಿದ್ದಾರೆ. ಸುನಿ ಶರಣ್ ಅವರನ್ನಿಟ್ಟುಕೊಂಡು ನಾನಾ ಬಗೆಯ ಅವತಾರ ಮಾಡಿಸಿ ನಕ್ಕು ನಲಿಸಿ, ಕುತೂಹಲ ಹುಟ್ಟಿಸಿ ಭಯಾನಕತೆ ಸೃಷ್ಟಿಸಿ ಪ್ರೇಕ್ಷಕರ ಹೃದಯ ಕದ್ದಿದ್ದಾರೆ.

  ಚಿಕ್ಕಂದಿನಲ್ಲಿ ತಪ್ಪಿಸಿಕೊಂಡು ಹೋದ ಮಗನ ಅವತಾರದಲ್ಲಿ ಬರುವ ಓವರ್ ಆಕ್ಟಿಂಗ್ ಸುನಿಲ ಕರ್ಣನಾಗುತ್ತಾನೆ. 500 ರುಪಾಯ್ ಕೊಟ್ರೆ ಮಗನಾಗ್ತಾನೆ. 1000 ರುಪಾಯ್ ಕೊಟ್ರೆ ಕಳ್‍ನನ್ ಮಗನೂ ಆಗ್ತಾನೆ ಎಂದು ಪರಿಚಯ ಮಾಡಿಸಿದಾಗ ಇವನೇ ಬೇಕು ಎಂದು ಖುಷಿಯಾಗುವ ಅಶಿಕಾ ರಂಗನಾಥ್ ನಗೆಯ ಲಡ್ಡುವನ್ನು ಬಾಯಲ್ಲೇ ಇಡ್ತಾರೆ. ಶರಣ್ ಪಾತ್ರದ ಟ್ವಿಸ್ಟು ಮತ್ತು ಶ್ರೀನಗರ ಕಿಟ್ಟಿಯ ಸಸ್ಪೆನ್ಸ್ ಎಂಟ್ರಿಯೊಂದಿಗೆ ಅಷ್ಟಮಂಡಲ ದಿಗ್ಬಂದನ ಮಂಡಲಕ ಮುಗಿದಿದೆ. ಪ್ರೇಕ್ಷಕರು ಖುಷ್ ಹುವಾ..

 • ಶರಣ್ ಇದ್ರೆ ರಾಗಿಣಿ ಅದೊಂದನ್ನು ತೆಗೆದಿಟ್ಟು ಬರ್ತಾರೆ..!

  ragini always takes care of her slipper while she is with ragini

  ರಾಗಿಣಿ ದ್ವಿವೇದಿ, ತುಪ್ಪದ ಹುಡುಗಿ. ಕೆಲವು ವರ್ಷಗಳ ಹಿಂದೆ ಅಧ್ಯಕ್ಷ ಶರಣ್‍ಗೆ ಅಕ್ಕನ ಮಗಳಾಗಿದ್ದ ರಾಗಿಣಿ,  ಈಗ ಅಧ್ಯಕ್ಷ ಅಮೆರಿಕಕ್ಕೆ ಹೋಗಿದ್ದೇ ತಡ.. ಜೊತೆಗಾತಿಯಾಗಿದ್ದಾರೆ. ರಾಗಿಣಿಗೆ ಹೋಲಿಸಿದ್ರೆ.. ಶರಣ್ ಕುಳ್ಳ. ಹೀಗಾಗಿ ರಾಗಿಣಿ, ಶರಣ್ ಇದ್ರೆ ಹೈ ಹೀಲ್ಡ್ ತೆಗೆದಿಟ್ಟು ಬರ್ತಾರಂತೆ.

  ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಸುದ್ದಿಗೋಷ್ಟಿಯಲ್ಲೂ ಅಷ್ಟೆ, ಹೈ ಹೀಲ್ಡ್‍ನ್ನೇ ಹಾಕಿಕೊಂಡು ಬಂದಿದ್ದವರಿಗೆ ತಕ್ಷಣ ಶರಣ್ ಇರುವುದು ನೆನಪಾಗಿ ಹೈಹೀಲ್ಡ್ ಬಿಚ್ಚಿಟ್ಟರಂತೆ.

  ಶರಣ್ ಅವರದ್ದು ಟ್ಯಾಲೆಂಟ್ ಪವರ್ ಹೌಸ್ ಎನ್ನುವ ರಾಗಿಣಿ, ನನ್ನ ಅವರ ಸ್ನೇಹ 10 ವರ್ಷಕ್ಕೂ ಹೆಚ್ಚು ಹಳೆಯದು. ನನ್ನ ಕೆರಿಯರ್‍ನಲ್ಲೇ ಫಸ್ಟ್ ಟೈಂ ಕಾಮಿಡಿ ಮಾಡಿದ್ದೇನೆ. ಚೆನ್ನಾಗಿ ಬಂದಿದೆ ಎನ್ನುವುದು ನನ್ನ ನಂಬಿಕೆ. ಉಳಿದದ್ದು ಪ್ರೇಕ್ಷಕರು ಹೇಳಬೇಕು ಎನ್ನುತ್ತಾರೆ.

  ಅಧ್ಯಕ್ಷ ಇನ್ ಅಮೆರಿಕ ಅಕ್ಟೋಬರ್ ಮೊದಲ ವಾರ ರಿಲೀಸ್ ಆಗುತ್ತಿದೆ. ಯೋಗಾನಂದ್ ಮುದ್ದಾನ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ವಿಶ್ವಪ್ರಸಾದ್ ನಿರ್ಮಾಪಕ.

 • ಶರಣ್ ಕಾಮಿಡಿ ಟೈಮಿಂಗ್‍ಗೆ ರಿಯಾಕ್ಷನ್ ಕಷ್ಟ ಕಷ್ಟ..!

  bhavana rao shares experience

  ಸತ್ಯ ಹರಿಶ್ಚಂದ್ರ. ಶರಣ್ ಅಭಿನಯದ ಈ ಸಿನಿಮಾ ದೀಪಾವಳಿಗೆ ನಗೆ ಪಟಾಕಿ ಹಚ್ಚೋಕೆ ಬರ್ತಾ ಇದೆ. ಶರಣ್ ಚಿತ್ರ ಎಂದ ಮೇಲೆ ಕಾಮಿಡಿ ಇರಲಬೇಕು. ಈ ಚಿತ್ರದಲ್ಲಿ ಶರಣ್ ಪಾತ್ರದ ಹೆಸರು ಸತ್ಯ ಹರಿಶ್ಚಂದ್ರ. ಆದರೆ, ಹೇಳೋದೆಲ್ಲ ಸುಳ್ಳು. ಶರಣ್‍ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅದರಲ್ಲಿ ಒಬ್ಬರು ಭಾವನಾ ರಾವ್.

  ಚಿತ್ರದ ಶೂಟಿಂಗ್ ಅನುಭವ ಹೇಳಿಕೊಂಡಿರೋ ಭಾವನಾ ರಾವ್, ಶರಣ್ ಕಾಮಿಡಿ ಟೈಮಿಂಗ್ ಅದ್ಭುತ ಎಂದಿದ್ದಾರೆ. ಶರಣ್ ಅವರ ಟೈಮಿಂಗ್‍ಗೆ ಸರಿಯಾಗಿ ನಾವು ರಿಯಾಕ್ಷನ್ ಕೊಡಬೇಕು. ಅದು ಬಹಳ ಕಷ್ಟವಾಗಿತ್ತು. ಶೂಟಿಂಗ್‍ನಲ್ಲಿ ಅದನ್ನು ಕಲಿತುಕೊಂಡೆ ಎಂದು ಅನುಭವ ಹಂಚಿಕೊಂಡಿದ್ದಾರೆ ಭಾವನಾ ರಾವ್.

  ಅಳಿಸೋದು ಸುಲಭ..ನಗಿಸೋದು ಕಷ್ಟ ಅನ್ನೋದು ಭಾವನಾ ರಾವ್ ಅನುಭವದ ಮಾತು. ಆ ಕಷ್ಟವನ್ನು ದಯಾಳ್ ಪದ್ಮನಾಭನ್ ತಾಳ್ಮೆಯಿಂದ ಹೇಳಿಕೊಟ್ಟು ಸುಲಭವಾಗಿಸಿದರು ಎಂದಿದ್ದಾರೆ ಭಾವನಾ ರಾವ್.

 • ಶರಣ್ ಚಿತ್ರಕ್ಕೆ ಪೋರ್ಚುಗಲ್ ಸ್ಟಂಟ್ ಮಾಸ್ಟರ್

  sharan stunts with portugal stunt master

  ಕುಲದಲ್ಲಿ ಕೀಳ್ಯಾವುದೋ.. ಹಾಡನ್ನು ರೀಮಿಕ್ಸ್ ಮಾಡಿಕೊಂಡು ಬರುತ್ತಿರುವ ಶರಣ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರ ಈಗ ಇನ್ನೊಂದು ಇಂಟ್ರೆಸ್ಟಿಂಗ್ ಕಾರಣದಿಂದ ಸುದ್ದಿಯಾಗಿದೆ. ಚಿತ್ರದ ಫೈಟಿಂಗ್ ಸೀನ್‍ಗಳನ್ನು ಪೋರ್ಚುಗಲ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರದ ಸ್ಟಂಟ್ ದೃಶ್ಯಗಳನ್ನು ಸಂಯೋಜಿಸಿರುವುದು ಪೋರ್ಚುಗಲ್‍ನ ಜನಪ್ರಿಯ ಸ್ಟಂಟ್ ಮಾಸ್ಟರ್ ಡೆವಿಡ್ ಚಾನ್.

  ಕಲಾವಿದರನ್ನು ನೋಡಿ, ಅವರನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಫೈಟ್ ದೃಶ್ಯಗಳನ್ನು ಸಂಯೋಜಿಸುವ ಅವರ ಸ್ಟೈಲ್ ಶರಣ್‍ಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಪೋರ್ಚುಗಲ್‍ನ ಸ್ಟಂಟ್ ಮಾಸ್ಟರ್, ಸಿಕ್ಕಾಪಟ್ಟೆ ರಿಸ್ಕೀ ಸ್ಟಂಟ್ ಇಡ್ತಾರೋ ಏನೋ ಎಂದುಕೊಂಡಿದ್ದವರಿಗೆ ಅವರು ಕೊಟ್ಟಿದ್ದು, ಶರಣ್ ಬಾಡಿಲಾಂಗ್ವೇಜ್‍ಗೆ ಹೊಂದಿಕೆಯಾಗುವಂತಹ ಸ್ಟಂಟ್‍ಗಳು. ಹೀಗಾಗಿ ಆ ಸೀನ್‍ಗಳನ್ನೆಲ್ಲ ಸಲೀಸಾಗಿ ಶೂಟಿಂಗ್ ಮಾಡಿದೆವು ಎಂದಿದ್ದಾರೆ ಶರಣ್.

  ಡೆವಿಡ್ ಚಾನ್, ಇತ್ತೀಚೆಗೆ ತೆಲುಗು ಸ್ಟಾರ್ ಬಾಲಕೃಷ್ಣ ಅಭಿನಯದ ಪೈಸಾ ವಸೂಲ್ ಚಿತ್ರಕ್ಕೆ ಸ್ಟಂಟ್ ಸಂಯೋಜಿಸಿದ್ದರು. ಈಗ ಕನ್ನಡದಲ್ಲಿ ಸ್ಟಂಟ್ ಮಾಡಿಸಿದ್ದಾರೆ.

 • ಶರಣ್ ಚಿತ್ರಕ್ಕೆ ಮಂಜು ಸ್ವರಾಜ್ ನಿರ್ದೇಶನ

  sharan's new movie with manju swaraj

  ಶ್ರೀಕಂಠ ಚಿತ್ರದ ಮೂಲಕ ಶಿವರಾಜ್ ಕುಮಾರ್ ಅವರನ್ನು ವಿಭಿನ್ನ ಗೆಟಪ್‍ನಲ್ಲಿ ತೋರಿಸಿದ್ದ ಮಂಜು ಸ್ವರಾಜ್, ಈಗ ಶರಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಮಾಸ್ ಲೀಡರ್ ನಂತರ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರಕ್ಕೆ ಶರಣ್ ಹೀರೋ. ಮಂಜು ಸ್ವರಾಜ್ ನಿರ್ದೇಶಕ.

  ಚಿತ್ರಕ್ಕೆ ಕಥೆ ಸಿದ್ಧವಾಗುತ್ತಿದ್ದು, ತರುಣ್ ಸುಧೀರ್ ಆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶರಣ್ ಅಭಿನಯದ ರ್ಯಾಂಬೋ, ವಿಕ್ಟರಿ, ಅಧ್ಯಕ್ಷ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ತರುಣ್ ಸುಧೀರ್, ಮತ್ತೊಮ್ಮೆ ಶರಣ್ ಚಿತ್ರಕ್ಕೆ ಜೊತೆಯಾಗಿದ್ದಾರೆ. ರ್ಯಾಂಬೋ 2 ಚಿತ್ರದಲ್ಲಿ ಬ್ಯುಸಿಯಾಗಿರುವ ಶರಣ್, ನಂತರ ಮಲಯಾಳಂನ `ಟು ಕಂಟ್ರೀಸ್' ಚಿತ್ರದ ರೀಮೇಕ್‍ನಲ್ಲಿ ನಟಿಸಲಿದ್ದಾರೆ. ಅದಾದ ಮೇಲೆ ಮಂಜು ಸ್ವರಾಜ್ ನಿರ್ದೇಶನದ ಚಿತ್ರ ಶುರುವಾಗಲಿದೆ.

 • ಶರಣ್ ಜೊತೆ ಫೈವ್ ಸ್ಟಾರಿಣಿಯರ ಸ್ಟೆಪ್ಪು

  sharan's dance steps with five heroines

  ಶರಣ್ ಜೊತೆ ಒಂದೇ ಹಾಡಿನಲ್ಲಿ ಶ್ರುತಿ ಹರಿಹರನ್, ಭಾವನಾ ರಾವ್, ಸಂಚಿತಾ ಪಡುಕೋಣೆ, ಶುಭಾ ಪೂಂಜಾ ಹಾಗೂ ಮಯೂರಿ ಒಟ್ಟಿಗೇ ಡ್ಯಾನ್ಸ್ ಮಾಡುತ್ತಿದ್ದಾರೆ. ಇದು ರ್ಯಾಂಬೋ-2 ಚಿತ್ರದ ಸ್ಪೆಷಲ್ ಸಾಂಗ್. ಇನ್ನೋವೇಟಿವ್ ಫಿಲ್ಮ್‍ಸಿಟಿಯಲ್ಲಿ ಈಗಾಗಲೇ ಹಾಡಿನ ಶೂಟಿಂಗ್ ಜೋರಾಗಿ ಸಾಗಿದೆ. ಇವರೆಲ್ಲರೂ ಈ ಮೊದಲು ಶರಣ್ ಚಿತ್ರಗಳಲ್ಲಿ ನಾಯಕಿಯರಾಗಿದ್ದವರು ಎಂಬುದು ವಿಶೇಷ.

  ಶರಣ್ ಅವರ ಲಡ್ಡು ಸಿನಿಮಾ ಬ್ಯಾನರ್‍ನಲ್ಲಿ ತಯಾರಾಗುತ್ತಿರುವ ರ್ಯಾಂಬೋ-2ಗೆ, ಅಟ್ಲಾಂಟಾ ನಾಗೇಂದ್ರ ಹಾಗೂ ತಂತ್ರಜ್ಞರೆಲ್ಲರೂ ನಿರ್ಮಾಪಕರೇ. ಚಿತ್ರಕ್ಕೆ ಅಶಿಕಾ ರಂಗನಾಥ್ ನಾಯಕಿಯಾಗಿದ್ದರೆ, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಐವರು ನಾಯಕಿಯರ ಜೊತೆಗಿನ ಈ ಹಾಡಿನ ಶೂಟಿಂಗ್ ಮುಗಿದರೆ, ಹೆಚ್ಚೂ ಕಡಿಮೆ ಚಿತ್ರದ ಶೂಟಿಂಗ್ ಮುಗಿದಂತೆ. ಇನ್ನೊಂದು ಕಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಬಿರುಸಿನಿಂದಲೇ ಮುಗಿಸಿರುವ ಚಿತ್ರತಂಡ, ಈ ತಿಂಗಳ ಕೊನೆಯ ಹೊತ್ತಿಗೆ ಸೆನ್ಸಾರ್ ಮುಂದೆ ಬರುವ ಪ್ಲಾನ್ ಹಾಕಿಕೊಂಡಿದೆ.

 • ಶರಣ್ ಪುತ್ರಿ ಚಿನಕುರುಳಿ ಪುಣ್ಯ ಸಿನಿಮಾ ಎಂಟ್ರಿ

  sharan's daughter enters film industry

  ಕಾಮಿಡಿ ಸ್ಟಾರ್ ಶರಣ್ ಪುತ್ರಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶರಣ್ ಅಭಿನಯದ ಅವತಾರ್ ಪುರುಷ ಚಿತ್ರದಲ್ಲಿ ಶರಣ್ ಪುತ್ರಿ ಪುಣ್ಯ ಕೂಡಾ ನಟಿಸುತ್ತಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮುದ್ದು ಮುದ್ದಾಗಿರುವ ಪುಣ್ಯಳ ಎಂಟ್ರಿಯನ್ನು ಅವತಾರ್ ಪುರುಷ ಚಿತ್ರತಂಡ, ಪುಣ್ಯ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿಯೇ ಘೋಷಿಸಿದೆ. 

  ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರಕ್ಕೆ ಶರಣ್ ಹೀರೋ. ಅಶಿಕಾ ರಂಗನಾಥ್ ಹೀರೋಯಿನ್. ಪುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

  ಚಮಕ್ ಚಿತ್ರದಲ್ಲಿ ಗಣೇಶ್ ಮಗಳನ್ನು ಬೆಳ್ಳಿತೆರೆಗೆ ತಂದಿದ್ದ ಸುನಿ, ಈ ಚಿತ್ರದಲ್ಲಿ ಶರಣ್ ಪುತ್ರಿಯನ್ನು ಪರಿಚಯಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

 • ಶರಣ್ ಯಾಕೆ ಸ್ಟಾರ್ ಅಂತಾ ಕರೆಸಿಕೊಳ್ಳಲ್ಲ. ಶರಣ್ ಹೇಳಿದ ಸೀಕ್ರೆಟ್

  sharan reveals star secret

  ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ.. ಅಂತಾ ಜೋಗಿ ಪ್ರೇಮ್ ವಿಲನ್‍ನಲ್ಲಿ ಸುಮ್ಮನೆ ಬರೆದಿದ್ದೇನೂ ಅಲ್ಲ. ಮೊದಲ ಚಿತ್ರ ಮಾಡುವಾಗಲೇ ಹೀರೋಗೊಂದು ಬಿರುದು ಕೊಟ್ಟಿರುತ್ತಾರೆ. ಎಲ್ಲರೂ ಸ್ಟಾರ್‍ಗಳೇ. ಆದರೆ ಶರಣ್ ಹಾಗಲ್ಲ. ನೀವು ಅವರ ಯಾವುದೇ ಸಿನಿಮಾ ನೋಡಿ.. ಟೈಟಲ್ ಕಾರ್ಡ್‍ನಲ್ಲಿ ಜಸ್ಟ್ ಶರಣ್ ಎಂದಷ್ಟೇ ಬರುತ್ತೆ. ಆದರೆ, ಶರಣ್ ಲಿಸ್ಟ್‍ನಲ್ಲಿ ಈಗಾಗಲೇ ಹಿಟ್ ಚಿತ್ರಗಳ ದೊಡ್ಡ ಸಾಲೇ ಇದೆ. ಹೀಗಿದ್ದರೂ ಶರಣ್ ಯಾಕೆ ಸ್ಟಾರ್ ಅನ್ನೋ ಬಿರುದು ಬಾವಳಿ ಇಟ್ಟುಕೊಳ್ಳೋದಿಲ್ಲ ಎಂಬ ಪ್ರಶ್ನೆಗೆ ಶರಣ್ ಅವರೇ ಉತ್ತರ ಕೊಟ್ಟಿದ್ದಾರೆ.

  `ನಾನು ಹುಟ್ಟುವ ವೇಳೆ ನನ್ನ ತಂದೆ, ತಾಯಿ ಗುಬ್ಬಿ ಕಂಪೆನಿಯಲ್ಲಿದ್ದರು. ಯಾದಗಿರಿಯಲ್ಲಿ ಕ್ಯಾಂಪ್ ಹಾಕಿದ್ದಾಗ ನನ್ನ ತಾಯಿ ಗರ್ಭಿಣಿ. ಅಮ್ಮನನ್ನು ಚೆಕ್ ಮಾಡಿದ ಡಾಕ್ಟರ್, ಮಗು ಅಪಾಯದಲ್ಲಿದೆ, ತೆಗೆಸಿಬಿಡಿ ಎಂದರಂತೆ. ಆದರೆ, ಅಮ್ಮ ಗಟ್ಟಿಗಿತ್ತಿ. ಅಲ್ಲಿಯೇ ಇದ್ದ ಶ್ರೀ ಶರಣ ಬಸವೇಶ್ವರ ಸನ್ನಿಧಿಗೆ ಹೋಗಿ, ಯಾವುದೇ ತೊಂದರೆಯಾಗದೆ ಮಗು ಹುಟ್ಟಿದರೆ ನಿನ್ನ ಹೆಸರೇ ಇಡುತ್ತೇನೆ ಎಂದು ಹರಕೆ ಹೊತ್ತರು. ಆಗ ನಾನು ಹುಟ್ಟಿದೆ. ಶರಣ ಎಂದು ಹೆಸರಿಟ್ಟರು. ಯಾವುದೇ ಗಳಿಗೆ, ಜಾತಕ, ನಕ್ಷತ್ರ, ರಾಶಿ ಫಲ ನೋಡಲಿಲ್ಲ. ಅದೇ ಹೆಸರು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಮತ್ತೇಕೆ ಬಿರುದು..?''

  ಇದು ಶರಣ್ ಪ್ರಶ್ನೆ. ನನ್ನ ಚಿತ್ರಗಳನ್ನು ಜನ ಕಾಮಿಡಿಗಾಗಿಯೇ ನೋಡುತ್ತಾರೆ. ಶಿಳ್ಳೆ ಹಾಕುತ್ತಾರೆ. ಚಪ್ಪಾಳೆ ತಟ್ಟುತ್ತಾರೆ. ಅದು ನನಗೆ ಸಾಕು ಅನ್ನೋ ಶರಣ್, ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ಶೀಘ್ರದಲ್ಲೇ ಮತ್ತೊಮ್ಮೆ ನಗಿಸೋಕೆ ರೆಡಿಯಾಗಿದ್ದಾರೆ.

 • ಶರಣ್ ಸಿನಿಮಾಗಳಲ್ಲೇ ಅತಿ ದೊಡ್ಡ ರಿಲೀಸ್ ರಾಜ್ ವಿಷ್ಣು

  raj vishnu

  ಶರಣ್ ಚಿತ್ರಗಳು ಸೂಪರ್ ಹಿಟ್ ಆಗಿವೆ. ಆವರೇಜ್ ಲೆವೆಲ್‍ನಲ್ಲಿ ಗೆದ್ದಿವೆ. ಫ್ಲಾಪ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಶರಣ್ ಚಿತ್ರಗಳಿಗೆ ಹೋದರೆ ಆರಾಮವಾಗಿ ನಕ್ಕು ಬರಬಹುದು ಎಂಬ ನಿರೀಕ್ಷೆ ಪ್ರೇಕ್ಷಕರದ್ದು. ಹೀಗಿದ್ದರೂ ಶರಣ್ ನಾಯಕತ್ವದ ಯಾವ ಚಿತ್ರಕ್ಕೂ, ರಾಜ್ ವಿಷ್ಣು ಚಿತ್ರಕ್ಕೆ ಸಿಗುತ್ತಿರುವಂತದ ದೊಡ್ಡ ಮಟ್ಟದ ಹೈಪ್ ಸಿಕ್ಕಿರಲಿಲ್ಲ.

  ರಾಜ್ ವಿಷ್ಣು ಚಿತ್ರ ಏಕಕಾಲದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶರಣ್ ಚಿತ್ರಜೀವನದಲ್ಲಿಯೇ ಇದು ಅತಿದೊಡ್ಡ ಮಟ್ಟದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿರುವ ಚಿತ್ರ. ಕೋಟಿ ರಾಮು ಎಂದೇ ಫೇಮಸ್ ಆಗಿರುವ ರಾಮು ಬ್ಯಾನರ್‍ನ 37ನೇ ಚಿತ್ರ ರಾಜ್ ವಿಷ್ಣು.

  ದುಡ್ಡು ಕೊಟ್ಟು ಬರುವ ಯಾವೊಬ್ಬ ಪ್ರೇಕ್ಷಕನಿಗೂ ಮೋಸವಾಗಲ್ಲ. ಎರಡು ಗಂಟೆ ಕಾಲ ನಗಬಹುದು. ಬಾಂಧವ್ಯಗಳ ಕಥೆಯನ್ನೂ ನೋಡಬಹುದು ಎಂದಿದ್ದಾರೆ ರಾಮು.

  3 ವರ್ಷಗಳ ನಂತರ ಮತ್ತೆ ಜೊತೆಯಾಗಿರುವ ಶರಣ್-ಚಿಕ್ಕಣ್ಣ ಕಾಂಬಿನೇಷನ್, ಅವರಿಬ್ಬರ ನಗೆಯೂಟದ ಮಧ್ಯೆ ಉಪ್ಪಿನಕಾಯಿಯಂತೆ ಕಾಣುತ್ತಿರುವ ಸಾಧುಕೋಕಿಲ, ಹಿಟ್ ಆಗಿರುವ ಹಾಡುಗಳು.. ಎಲ್ಲವೂ ನಿರೀಕ್ಷೆಯನ್ನು ಭರ್ಜರಿಯಾಗಿಯೇ ಹೆಚ್ಚಿಸಿವೆ.

 • ಶರಣ್ ಹೀರೋ.. ರಾಗಿಣಿ ಹೀರೋಯಿನ್.. ಏನಂದ್ರು ಫ್ಯಾನ್ಸು..?

  adhykasha in america movie image

  ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಚಿತ್ರದ ಟೀಸರ್, ಹಾಡುಗಳು ಹೊರಬರುತ್ತಿದ್ದಂತೆಯೇ ಟ್ರೆಂಡ್ ಸೃಷ್ಟಿಸುತ್ತಿವೆ. ರಾಗಿಣಿಯಂತೂ ಮುದ್ದು ಮುದ್ದಾಗಿ ಕಾಣುತ್ತಿದ್ದು, ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

  ಆದರೆ, ಎಲ್ಲ ಕಡೆಯಲ್ಲೂ ಅಭಿಮಾನಿಗಳು ಕಿಚಾಯಿಸುತ್ತಿರುವುದು ಶರಣ್ ಅವರನ್ನೇ. ಏಕೆಂದರೆ ರಾಗಿಣಿ ನಾಯಕಿಯಾಗಿದ್ದ ಕೆಂಪೇಗೌಡ, ಆರಕ್ಷಕ ಮೊದಲಾದ ಚಿತ್ರಗಳಲ್ಲಿ ಶರಣ್ ಕಾಮಿಡಿಯನ್ ಆಗಿದ್ದರು. ಈಗ ಅದೇ ರಾಗಿಣಿ, ಶರಣ್‍ಗೆ ಹೀರೋಯಿನ್.

  ಹಾಗೆಂದು ರಾಗಿಣಿ, ಶರಣ್ ಜೊತೆ ನಟಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ವಿಕ್ಟರಿ ಚಿತ್ರದಲ್ಲಿ ರಾಗಿಣಿ ಸ್ಪೆಷಲ್ ಸಾಂಗಿಗೆ ಹೆಜ್ಜೆ ಹಾಕಿದ್ದರು. ಈಗ ನಾಯಕಿಯೇ ಆಗಿ ಬಂದಿದ್ದಾರೆ.

  ಆದರೂ.. ಏನ್ ಅದೃಷ್ಟಾರೀ ಶರಣ್ ನಿಮ್ದು ಎಂದು ಕಿಚಾಯಿಸುತ್ತಲೇ ಇದ್ದಾರೆ ಫ್ಯಾನ್ಸ್. ಯೋಗಾನಂದ್ ನಿರ್ದೇಶನದ ಅಧ್ಯಕ್ಷ ಇನ್ ಅಮೆರಿಕ ಅಕ್ಟೋಬರ್ 4ರಂದು ರಿಲೀಸ್ ಆಗುತ್ತಿದೆ.