` allu arjun - chitraloka.com | Kannada Movie News, Reviews | Image

allu arjun

  • Lord Channakeshava Vanished For A Telugu Movie

    dj shooting at beluru

    Vaishnava Principles was changed for Allu Arjun's movie at Hassan's historical Beluru Temple. the complete environment of the temple was changed for the shooting. Lord Shiva's idol was installed in the Vaishanav temple. The main entrance was shut for the devotees to enter. it is also said that the movie team has hurt the religious sentiments of the people. The shooting is of Allu's Arjun's new movie DJ. The devotes present at the temple are furious for hurting their beliefs and sentiments.

    dj_shooting_1telugu.jpgBelur is worldwide famous for its uniqueness. Channakeshava Temple is one of the most famous tourist spots in Karnataka, which has visitors from all over the world. Law protectors who are supposed to safeguard the famous world heritage property are the one's corrupting it. Everyday 1000's of devotes, visit the temple but today, there is no entrance to the devotees because of movie shooting.

    The movie has a prior permission from the historical department to shoot in the temple. but the main question is, how far is it good to shoot hurting so many sentiments and faith? The most alarming part is, Channakeshava temple was under the hit list of Terrorists, and the security was previously beefed up. but now, the movie team is using drone camera and is shooting every bit of the temple,this has raised many speculations about the safety of the temple.

    To what extent is it right to hurt the sentiments of devotes by manipulating the principles of Vaishnava religion and also by prohibiting the devotes from entering the temple only because of Allu Arjun's movie?

  • Pavan Wadeyar to Direct Allu Arjun - Exclusive

    allu arjun, pavan wadeyar

    Director Pavan Wadeyar is in talks with a Telugu producer to direct a Telugu film starring Allu Arjun. The producer is Lagapati Babu who had produced Pavan's earlier Telugu film which was a remake of Govindaya Namaha. The new film will be an original sources said.

    Pavan has had a hat trick of success in Kannada with Govindaya Namaha, Googly and Ranavikrama.

  • Shooting Permission to Telugu film in Belur cancelled

    Duvvada Jagannadham image

    The Archaeological Survey of India has cancelled the permission granted to the Telugu film DJ starring Allu Arjun to shoot at the Chennakeshava Temple at Belur. The department cancelled the permission because the film team violated the Rule 44.

    The permission was granted earlier to shoot the film there from February 16 to February 19. The film team had put up sets inside the protected monument.

    Also See

    Lord Channakeshava Vanished For A Telugu Movie

  • ಅಲ್ಲು ಅರ್ಜುನ್ ಜೊತೆ ಡಾಲಿ ಧನಂಜಯ್

    dolly Dhananjaya, Allu Arjun Image

    ತೆಲುಗಿನಲ್ಲಿ ಹೊಸ ಸೆನ್ಸೇಷನ್ ಪುಷ್ಪ. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ನಿನ ಚಿತ್ರವಿದು. ಇತ್ತ ಅಲ್ಲು ಅರ್ಜುನ್ ಅಲಾ ವೈಕುಂಠಪುರಂಲೋ ಚಿತ್ರದ ಭರ್ಜರಿ ಸಕ್ಸಸ್ಸಿನ ಉತ್ತುಂಗದಲ್ಲಿದ್ದರೆ, ಅತ್ತ ಸುಕುಮಾರ್ ಕೂಡಾ ರಂಗಸ್ಥಳಂನಂತಹ ಮೆಗಾ ಮೆಗಾ ಹಿಟ್ ನಂತರ ನಿರ್ದೇಶಿಸುತ್ತಿರುವ ಚಿತ್ರ ಪುಷ್ಪ. ಈಗ ಹೊಸ ಸುದ್ದಿಯೆಂದರೆ ಆ ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ.

    ಭೈರವಗೀತ ಚಿತ್ರದ ಮೂಲಕ ತೆಲುಗರಿಗೂ ಪರಿಚಿತರಾಗಿರುವ ಡಾಲಿಗೆ ಮತ್ತೊಂದು ಸೂಪರ್ ಹಿಟ್ ಕಾಂಬಿನೇಷನ್ನಿನ ಚಿತ್ರದಲ್ಲಿ ಅವಕಾಶ ಸಿಕ್ಕಿದೆ ಎನ್ನುವ ಸುದ್ದಿಯಿದೆ. ಸದ್ಯಕ್ಕಿನ್ನೂ ಡಾಲಿ ಕನ್ಫರ್ಮ್ ಮಾಡಿಲ್ಲ.

    ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಪುಷ್ಪ ಚಿತ್ರ ಕನ್ನಡದಲ್ಲೂ ಬರುತ್ತಿದೆ.

  • ಕನ್ನಡಕ್ಕೆ ಅಲ್ಲು ಅರ್ಜುನ್

    allu arjun debut's in kannada

    ಟಾಲಿವುಡ್`ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸದ್ಯಕ್ಕೆ ಅಲ್ಲಿನ ಟಾಪ್ ಹೀರೋ. ಅಲಾ ವೈಕುಂಠಪುರಂಲೋ ಸಿನಿಮಾ ಸೃಷ್ಟಿಸಿದ ದಾಖಲೆ ಅಂಥದ್ದು. ಅಂತಹ ಅಲ್ಲು ಅರ್ಜುನ್ ಈಗ ಕನ್ನಡಕ್ಕೆ ಬರುತ್ತಿದ್ದಾರೆ. ಪುಷ್ಪ ಸಿನಿಮಾ ಮೂಲಕ.


    ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದ ಪೋಸ್ಟರ್, ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕಾಗಿಯೇ ರಿಲೀಸ್ ಆಗಿದೆ. ಸಿನಿಮಾದ ಪೋಸ್ಟರ್ ಕನ್ನಡದಲ್ಲಿಯೂ ಬಂದಿದೆ. ಇದರರ್ಥ ಸಿಂಪಲ್, ಪುಷ್ಪ ಈ ಹಿಂದೆ ಬಂದಂತಹ ಸೈರಾ, ರಂಗಸ್ಥಳ ಮಾದರಿಯಲ್ಲಿ ಕನ್ನಡಕ್ಕೆ ಡಬ್ ಆಗಿ ಲಗ್ಗೆಯಿಡಲಿದೆ.

     

    --

  • ನಾನೇಕೆ ಕನ್ನಡಕ್ಕೆ ಡಬ್ಬಿಂಗ್ ಮಾಡಲಿಲ್ಲ :ಪುಷ್ಪ ನಾಯಕಿ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

    ನಾನೇಕೆ ಕನ್ನಡಕ್ಕೆ ಡಬ್ಬಿಂಗ್ ಮಾಡಲಿಲ್ಲ :ಪುಷ್ಪ ನಾಯಕಿ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

    ಪುಷ್ಪ. ರಂಗಸ್ಥಳಂ ಸುಕುಮಾರ್ ನಿರ್ದೇಶನದ ಚಿತ್ರ. ಅಲ್ಲು ಅರ್ಜುನ್ ಎದುರು ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ತೆಲುಗಿನ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡಕ್ಕೂ ಬರುತ್ತಿದೆ. ಟ್ರೇಲರ್ ಈಗಾಗಲೇ ಬಂದಿದೆ. ಆದರೆ, ಟ್ರೇಲರ್ ನೋಡಿದವರಿಗೆ ರಶ್ಮಿಕಾ ಮಂದಣ್ಣ ನಿರಾಸೆ ಮೂಡಿಸಿದ್ದರು. ರಶ್ಮಿಕಾ ಅವರ ಪಾತ್ರಕ್ಕೆ ಬೇರೆ ಯಾರೋ ಡಬ್ಬಿಂಗ್ ಮಾಡಿದ್ದರು. ಆದರೆ, ತೆಲುಗಿನಲ್ಲಿ ಸ್ವತಃ ರಶ್ಮಿಕಾರೇ ಡಬ್ ಮಾಡಿದ್ದರು. ಕನ್ನಡದ ಹುಡುಗಿ, ಕನ್ನಡದಲ್ಲಿಯೂ ಅವರೇ ಡಬ್ ಮಾಡಬೇಕಿತ್ತು ಎಂಬ ಆಕ್ರೋಶ ಕನ್ನಡಿಗರಿಂದ ಹೊರಬಿದ್ದಿತ್ತು.

    ಅದರಲ್ಲೂ ಆರ್‍ಆರ್‍ಆರ್ ಚಿತ್ರದಲ್ಲಿ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಅವರೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ ಅನ್ನೋದು ಗೊತ್ತಾದ ಮೇಲೆ ಆ ಆಕ್ರೋಶ ಇನ್ನಷ್ಟು ದೊಡ್ಡದಾಗಿತ್ತು. ಅದಕ್ಕೆಲ್ಲ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ.

    ಕನ್ನಡಕ್ಕೆ ಡಬ್ ಮಾಡುವ ಆಸೆ ನನಗೂ ಇತ್ತು. ಆದರೆ ನನ್ನ ಕೈಲೀಗ 4 ಚಿತ್ರಗಳಿವೆ. ತುಂಬಾ ಬ್ಯುಸಿ ಇದ್ದೇನೆ. ತೆಲುಗಿನಲ್ಲಿಯೂ ಇನ್ನೂ ಡಬ್ಬಿಂಗ್ ಪೂರ್ತಿ ಆಗಿಲ್ಲ. ಸಮಯ ಹೊಂದಿಸೋಕೆ ಆಗುತ್ತಿಲ್ಲ. ಪುಷ್ಪ ಚಿತ್ರಕ್ಕೆ ಕನ್ನಡ ಅವತರಣಿಕೆಯಲ್ಲಿ, ನನ್ನ ಪಾತ್ರಕ್ಕೆ ಕನ್ನಡದಲ್ಲಿ ನಾನು ಡಬ್ ಮಾಡಿಲ್ಲ ಎನ್ನುವ ಬೇಸರ ನನಗೂ ಇದೆ. ಮುಂದೆ ಇಂತಹ ತಪ್ಪು ಆಗೋಕೆ ಬಿಡಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

  • ಭಜರಂಗಿಗೆ ಶುಭ ಕೋರಿದ ಅಲ್ಲು ಅರ್ಜುನ್

    ಭಜರಂಗಿಗೆ ಶುಭ ಕೋರಿದ ಅಲ್ಲು ಅರ್ಜುನ್

    ಭಜರಂಗಿ 2, ಕರ್ನಾಟಕದಲ್ಲಷ್ಟೇ ಅಲ್ಲ.. ಅತ್ತ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಅಲೆಯನ್ನೇ ಸೃಷ್ಟಿಸಿರೋ ಭಜರಂಗಿ 2ಗೆ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಶುಭ ಕೋರಿದ್ದಾರೆ. ತೆಲುಗಿನ ವರುಡುಕಾವಲೇನು ಚಿತ್ರದ ಈವೆಂಟ್‍ನಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, ಭಜರಂಗಿ 2ಗೆ ಶುಭ ಹಾರೈಸಿದ್ದಾರೆ.

    ಕನ್ನಡದಲ್ಲಿ ಭಜರಂಗಿ 2 ರಿಲೀಸ್ ಆಗುತ್ತಿದೆ. ಎಲ್ಲರೂ ಕಾಯುತ್ತಿದ್ದಾರೆ. ಸಿನಿಮಾ ಟ್ರೇಲರ್ ನೋಡಿದ್ದೇನೆ. ಅದ್ಭುತವಾಗಿದೆ. ಆ ಚಿತ್ರ ಗೆಲ್ಲಲಿ. ಕನ್ನಡ ಚಿತ್ರರಂಗಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

    ಕೇರಳದಲ್ಲಿನ್ನೂ ಥಿಯೇಟರ್ ಓಪನ್ ಆಗಿಲ್ಲ ಎಂದು ಹೇಳಿದ ಅಲ್ಲು ಅರ್ಜುನ್, ತಮಿಳುನಾಡಿನಲ್ಲಿ ರಜನಿಕಾಂತ್`ರ ಅಣ್ಣಾತೆ ಕೂಡಾ ಗೆಲ್ಲಬೇಕು. ಚಿತ್ರರಂಗ ಮತ್ತೆ ಗೆಲುವಿನ ಹಾದಿಗೆ ಬರಲಿ ಎಂದು ಹಾರೈಸಿದ್ದಾರೆ.

  • ಯಶ್ ಹಾದಿಯಲ್ಲೇ ಹೆಜ್ಜೆಯಿಟ್ಟ ಅಲ್ಲು ಅರ್ಜುನ್ : 10 ಕೋಟಿ ಆಫರ್ ಬೇಡ ಎಂದರಂತೆ..

    ಯಶ್ ಹಾದಿಯಲ್ಲೇ ಹೆಜ್ಜೆಯಿಟ್ಟ ಅಲ್ಲು ಅರ್ಜುನ್ : 10 ಕೋಟಿ ಆಫರ್ ಬೇಡ ಎಂದರಂತೆ..

    ಕೋಟಿ ಕೋಟಿ ಸಿಗುತ್ತೆ ಎಂದ ಕೂಡಲೇ ಅದು ಎಂತಹ ಜಾಹೀರಾತೇ ಆಗಲಿ.. ಸೈ ಎನ್ನುವ ನಟರಿಗೇನೂ ಕಡಿಮೆ ಇಲ್ಲ. ಆದರೆ ಕೆಲವರಿರುತ್ತಾರೆ. ಅವರು ಹಣವನ್ನೂ ಮೀರಿ ಕೆಲವು ನಿಯಮಗಳಿಗೆ ಬದ್ಧರಾಗಿರುತ್ತಾರೆ. ನೀವು ಜಾಹೀರಾತುಗಳಲ್ಲಿ ಸರೋಗೇಟ್ ಜಾಹೀರಾತು ನೋಡಿಯೇ ಇರುತ್ತೀರಿ. ಸಿಗರೇಟ್, ಮದ್ಯಗಳನ್ನು ಅಡ್ವರ್ಟೈಸ್ ಮಾಡುವಂತಿಲ್ಲ. ಆದರೆ.. ಅವುಗಳ ಹೆಸರನ್ನು ಓಪನರ್, ಕೂಲ್ ಡ್ರಿಂಕ್ಸ್, ಮೌತ್ ವಾಷ್.. ಹೀಗೆ ಯಾವ್ಯಾವುದೋ ಪ್ರಾಡಕ್ಟ್‍ಗಳಿಗೆ ಇಟ್ಟು ಜಾಹೀರಾತು ಮಾಡುತ್ತಾರೆ. ಅಂತಹವುಗಳಿಂದ ದೂರ ಉಳಿದಿರುವುದು ಕೆಲವೇ ಕೆಲವು ಸ್ಟಾರ್ಸ್.

    ಸಚಿನ್ ತೆಂಡೂಲ್ಕರ್ ಮದ್ಯಪಾನ ಮತ್ತು ಧೂಮಪಾನ ಪ್ರಚೋದಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲ್ಲ. ವಿರಾಟ್ ಕೊಹ್ಲಿ ಇನ್ನೂ ಒಂದು ಹೆಜ್ಜೆ ಮುಂದೆ. ಕೂಲ್‍ಡ್ರಿಂಕ್ಸ್ ಜಾಹೀರಾತಿಗೇ ನೋ ಎಂದಿದ್ದವರು. ರಜನಿಕಾಂತ್ ಜಾಹೀರಾತಿನಲ್ಲೇ ನಟಿಸಲ್ಲ. ಡಾ.ರಾಜ್, ಅಪ್ಪು ಮೊದಲಾದವರು ಜನೋಪಯೋಗಿ ಜಾಹೀರಾತುಗಳಲ್ಲಿ ಉಚಿತವಾಗಿ ನಟಿಸಿದವರು. ಆ ಹಾದಿಗೀಗ ಅಲ್ಲು ಅರ್ಜುನ್ ಸೇರುತ್ತಿದ್ದಾರೆ.

    ಕಣಕಣದಲ್ಲೂ ಕೇಸರಿ ಎಂಬ ಜಾಹೀರಾತು ನೋಡಿಯೇ ಇರುತ್ತೀರಿ. ಅದರಲ್ಲಿ ಆರಂಭದಲ್ಲಿ ಕಾಣಿಸಿಕೊಂಡವರು ಅಜಯ್ ದೇವಗನ್. ಸ್ವಲ್ಪ ದಿನ ಕಳೆದಂತೆ ಅಜಯ್ ದೇವಗನ್ ಜೊತೆಗೆ ಶಾರೂಕ್ ಕೂಡಾ ಕಾಣಿಸಿಕೊಂಡರು. ಮತ್ತೂ ಕೆಲದಿನಗಳ ನಂತರ ಆ ಲಿಸ್ಟಿನಲ್ಲಿ ಅಕ್ಷಯ್ ಕುಮಾರ್ ಕೂಡಾ ಸೇರಿಬಿಟ್ಟರು. ಆಗ ರೊಚ್ಚಿಗೆದ್ದರು ಫ್ಯಾನ್ಸ್. ಅಕ್ಷಯ್ ಕುಮಾರ್ ಸ್ವಚ್ಛ ಭಾರತ್ ಅಭಿಯಾನವನ್ನು ಬೆಂಬಲಿಸಿದ್ದವರು. ದೇಶಪ್ರೇಮದ ಕಥಾ ಹಂದರ ಹಾಗೂ ಸಾಮಾಜಿಕ ಕಳಕಳಿಯ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸಿದ್ದವರು. ಅಕ್ಷಯ್ ವಿರುದ್ಧ ಅಭಿಯಾನವೇ ಶುರುವಾಯ್ತು. ಕೊನೆಗೆ ಈಗ ಪಡೆದಿರುವ ಹಣವನ್ನು ಸಮಾಜಸೇವೆಗೆ ಬಳಸುತ್ತೇನೆ ಹಾಗೂ ಮುಂದೆಂದೂ ಗುಟ್ಕಾ ಜಾಹೀರಾತಿನಲ್ಲಿ ನಟಿಸಲ್ಲ ಎಂದು ಸ್ಪಷ್ಟನೆ ಕೊಟ್ಟರು ಅಕ್ಷಯ್ ಕುಮಾರ್.

    ವಿಚಿತ್ರವೆಂದರೆ ಇಂತಹುದೇ ಗುಟ್ಕಾ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಹಲವು ತಾರೆಯರು ನಟಿಸಿದ್ದಾರೆ. ಆದರೆ..  ಮೊದಲ ಆಕ್ರೋಶ ವ್ಯಕ್ತವಾಗಿದ್ದು ಮಾತ್ರ ಅಕ್ಷಯ್ ಕುಮಾರ್ ಅವರಿಗೇ..

    ಅದಾದ ನಂತರ ಕೆಜಿಎಫ್ ಸ್ಟಾರ್ ಯಶ್ ಅವರಿಗೂ ಅಂತಹುದೇ ಒಂದು ಗುಟ್ಕಾ ಕಂಪೆನಿಯ ಜಾಹೀರಾತಿನ ಆಫರ್ ಹೋಯ್ತು. ವಿಶೇಷವೆಂದರೆ ಯಶ್ ಆ ಜಾಹೀರಾತನ್ನು ಕೋಟಿ ಕೋಟಿ ಕೊಟ್ಟರೂ ಬೇಡ ಎಂದು ತಿರಸ್ಕರಿಸಿಬಿಟ್ಟರು. ಈಗ ಅಲ್ಲು ಅರ್ಜುನ್ ಸರದಿ. ಗುಟ್ಕಾ ಕಂಪೆನಿಯೊಂದು ಅಲ್ಲು ಅರ್ಜುನ್ ಅವರಿಗೆ 10 ಕೋಟಿಯ ಆಫರ್ ಕೊಟ್ಟಿತ್ತಂತೆ. ಆದರೆ ಅದನ್ನು ಬೇಡ ಎಂದಿದ್ದಾರೆ ಅಲ್ಲು ಅರ್ಜುನ್.

  • ಯಶ್, ಅಲ್ಲು ಅರ್ಜುನ್ ಕುರಿತು ಅನುರಾಗ್ ಕಶ್ಯಪ್ ಹೇಳಿದ ಭವಿಷ್ಯ

    ಯಶ್, ಅಲ್ಲು ಅರ್ಜುನ್ ಕುರಿತು ಅನುರಾಗ್ ಕಶ್ಯಪ್ ಹೇಳಿದ ಭವಿಷ್ಯ

    ಗ್ಯಾಂಗ್ಸ್ ಆಫ್ ವಸೇಯ್‍ಪುರ್, ದೇವ್ ಡಿಯಂತಾ ಚಿತ್ರಗಳನ್ನು ನಿರ್ದೇಶಿಸಿರುವ ಅನುರಾಗ್ ಕಶ್ಯಪ್ ಬಾಲಿವುಡ್‍ನಲ್ಲಿ ದೊಡ್ಡ ಹೆಸರಲ್ಲದೇ ಹೋದರೂ.. ಒಂದು ಲೆವೆಲ್ಲಿಗೆ ಖ್ಯಾತ ನಿರ್ದೇಶಕ. ನಟನಾಗಿಯೂ ಗುರುತಿಸಿಕೊಂಡಿರುವ ಅನುರಾಗ್ ಕಶ್ಯಪ್ ಇತ್ತೀಚೆಗೆ ಬಾಲಿವುಡ್‍ನಲ್ಲಿ ಹೆಚ್ಚುತ್ತಿರುವ ಸೌಥ್ ಸ್ಟಾರ್‍ಗಳ ಬಗ್ಗೆ ಮಾತನಾಡಿದ್ದಾರೆ.

    ಉತ್ತರ ಭಾರತದಲ್ಲಿನ ಜನರಿಗೆ ಈಗ ಪುಷ್ಪರಾಜ್ ಗೊತ್ತು. ರಾಕಿಭಾಯ್ ಗೊತ್ತು. ಫಹಾದ್ ಫಾಸಿಲ್ ಬಗ್ಗೆ ಗೊತ್ತು. ಶಾರುಕ್, ಅಮೀರ್ ಖಾನ್ ಮೇಲಿನ ಪ್ರೀತಿ, ಮೋಹ ಕ್ರೇಜ್ ಎಲ್ಲ ಇಳಿದು ಹೋಗಿದೆ. ಇವರ ಮೂಲ ಹೆಸರು ಹಳ್ಳಿ ಹಳ್ಳಿಗಳಿಗೆ ಇನ್ನೂ ತಲುಪಿಲ್ಲ. ಆದರೆ ಪುಷ್ಪರಾಜ್, ರಾಕಿಭಾಯ್ ಎಂದರೆ ಜನರಿಗೆ ಗೊತ್ತು ಎಂದಿದ್ದಾರೆ ಅನುರಾಗ್ ಕಶ್ಯಪ್.

    ಇನ್ನೊಂದೆರಡು ಹಿಟ್ ಕೊಟ್ಟರೆ ಸಾಕು. ಆಗ ಉತ್ತರ ಭಾರತದ ಹಳ್ಳಿ ಹಳ್ಳಿಯ ಜನ ಕೂಡಾ ರಾಕಿಭಾಯ್ ಎಂದರೆ ಯಶ್, ಪುಷ್ಪರಾಜ್ ಎಂದರೆ ಅಲ್ಲು ಅರ್ಜುನ್ ಎಂದು ಹೆಸರು ಹೇಳೋಕೆ ಶುರು ಮಾಡ್ತಾರೆ ಎಂದಿದ್ದಾರೆ.

    ಒಂದೆಡೆ ಬಾಲಿವುಡ್‍ನ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳೆಲ್ಲ ತೋಪಾಗುತ್ತಿರುವಾಗ ದಕ್ಷಿಣ ಭಾರತದ ಸ್ಟಾರ್ ಚಿತ್ರಗಳು ಹಿಂದಿಯಲ್ಲಿ ಸದ್ದು ಮಾಡುತ್ತಿರುವುದು ವಿಶೇಷ. ಬಾಯ್ಕಾಟ್ ಅಭಿಯಾನವಲ್ಲ, ಒಂದು ಲೆಕ್ಕಕ್ಕೆ ಹೇಳಬೇಕೆಂದರೆ ಬಾಲಿವುಡ್ ಚಿತ್ರಗಳ ಕ್ವಾಲಿಟಿಯೇ ಮಾಯವಾಗಿರುವುದು ನಿಜ. ಬಹುತೇಕ ಚಿತ್ರಗಳಲ್ಲಿ ಭಾರತೀಯ ನೆಲದ, ಭಾರತೀಯ ಸಂಸ್ಕøತಿಯ ಕಥೆಯೇ ಇರುವುದಿಲ್ಲ. ಗೊತ್ತಿಲ್ಲದ ದೇಶದ, ಅರಗಿಸಿಕೊಳ್ಳೋಕೆ ಕಷ್ಟವಾಗುವ ಕಥಾ ಹಂದರದ ಚಿತ್ರಗಳನ್ನು ಜನರಾದರೂ ಏಕೆ ನೋಡುತ್ತಾರೆ ಅಲ್ಲವೇ? ಅದೇನೇ ಇರಲಿ, ಸೌಥ್ ಸ್ಟಾರ್‍ಗಳನ್ನು ಒಪ್ಪಿಕೊಂಡಿರೋ ಬಗ್ಗೆ ಬಾಲಿವುಡ್ ನಿರ್ದೇಶಕರೂ ಮಾತನಾಡುವಂತಾಗಿದೆ. ದಟ್ಸ್ ಗ್ರೇಟ್.