` rachita ram - chitraloka.com | Kannada Movie News, Reviews | Image

rachita ram

 • ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

  rachitha ram is the new padmavathi

  ಊರಿಗೊಬ್ಳೇ ಪದ್ಮಾವತಿ.. ಅಂದ್ರೆ ಸಾಕು.. ರಮ್ಯಾ ನೆನಪಾಗ್ತಾರೆ. ಜಾನಿ ಮೇರಾ ನಾಮ್ ಚಿತ್ರದಲ್ಲಿ ದುನಿಯಾ ವಿಜಿ ಮತ್ತು ರಮ್ಯಾ ಕುಣಿದು ಕುಪ್ಪಳಿಸಿದ್ದ ಹಾಡು, ಸೂಪರ್ ಹಿಟ್ ಆಗಿತ್ತು. ಈಗ ಹೊಸ ಪದ್ಮಾವತಿ ಹಾಡು ಬರ್ತಾ ಇದೆ. ಅದು ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ.

  ಆ ಹಾಡಿಗೆ ಹೆಜ್ಜೆ ಹಾಕಿರುವುದು ರಚಿತಾ ರಾಮ್. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ರೈನ್ ಬೋ ಕಾಲೊನಿ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಮುರಳಿ ನೃತ್ಯ ನಿರ್ದೇಶನದಲ್ಲಿ ರಚಿತಾ ಸೌಂದರ್ಯಕ್ಕೆ, ದುನಿಯಾ ವಿಜಿ ಅವರ ಸಿಕ್ಸ್‍ಪ್ಯಾಕ್ ಬಾಡಿಯ ಅನಾವರಣವೂ ಆಗಲಿದೆ.

  ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಎಸ್ ಪಪ್ಪಾದಲ್ಲಿ ಹೊಸ ಪದ್ಮಾವತಿ ಹೇಗೆ ಕಾಣಿಸಿಕೊಳ್ತಾರೋ.. ನೋಡಬೇಕು.

   

 • ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್

  rockline banner is like family banner says puneeth

  ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

  ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

  ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

  ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.

 • ರಾಜಾರಾಣಿ ಹಾಡು ಬಂತು ನೋಡಿದ್ರಾ..

  ninna raja video song from seetharama kalyana

  ಬಾಕ್ಸಾಫೀಸ್‍ನಲ್ಲಿ ಮೋಹದ ಅಲೆ ಎಬ್ಬಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರ ತಂಡ, ಅದೇ ಖುಷಿಯಲ್ಲಿ ಸೂಪರ್ ಹಿಟ್ ಹಾಡು ನಿನ್ನ ರಾಜ ನಾನು.. ನನ್ನ ರಾಣಿ ನೀನು ಹಾಡಿನ ವಿಡಿಯೋ ಹೊರಬಿಟ್ಟಿದೆ.

  ಲಹರಿ ವಿಡಿಯೋದಿಂದ ಹೊರಬಂದಿರುವ ಚಿತ್ರ ಹಾಡಿನಲ್ಲಿ ರಚಿತಾ ರಾಮ್ ಮುಗ್ಧ ಹುಡುಗಿಯಾಗಿ, ಪೆದ್ದು ಪೆದ್ದಾಗಿ ನಟಿಸಿ ಇಷ್ಟವಾದರೆ, ರಚಿತಾರ ಬೆನ್ನ ಹಿಂದೆ ಕನಸು ಕಾಣುವ ಹುಡುಗನಾಗಿ ಕುಣಿಯುವ ನಿಖಿಲ್ ಅವರ ಡ್ಯಾನ್ಸ್ ಗಮನ ಸೆಳೆಯುತ್ತದೆ.

  ನಿರ್ದೇಶಕ ಹರ್ಷ.. ತಾವು ಅದ್ಭುತ ಕೊರಿಯೋಗ್ರಫರ್ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡುತ್ತಾರೆ. ಪ್ರೀತಿಯ ಅಲೆಯಲ್ಲಿ ಮಿಂದೇಳುವವರಿಗೆ ಈ ಹಾಡು ರಿಲ್ಯಾಕ್ಸ್ ಕೊಡುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

 • ರಾಜ್ ಸಿನಿಮಾ ಸ್ಫೂರ್ತಿ.. ಅಪ್ಪನ ಸಿನಿಮಾಗಳೇ ಪ್ರೇರಣೆ - ನಿಖಿಲ್ ಕುಮಾರಸ್ವಾಮಿ

  nikhil kumaraswamy talks about seetharama kalyana

  ಡಾ.ರಾಜ್‍ಕುಮಾರ್ ಸಿನಿಮಾಗಳನ್ನು ನೋಡಿ ಬೆಳೆದವನು ನಾನು.. ಹೀಗಾಗಿಯೇ ನನ್ನ ಚಿತ್ರಗಳಲ್ಲಿ ಅಶ್ಲೀಲತೆ ಇರುವುದಿಲ್ಲ. ಸಮಾಜಕ್ಕೆ ಒಂದು ಸಂದೇಶವಿರುವಂತ ಕೌಟುಂಬಿಕ ಮನರಂಜನಾತ್ಮಕ ಸಿನಿಮಾಗಳನ್ನು ಮಾಡುತ್ತೇನೆ.. ಸಿಎಂ ಕುಮಾರಸ್ವಾಮಿ, ತಮ್ಮ ನಿರ್ಮಾಣದ ಸಿನಿಮಾಗಳ ಬಗ್ಗೆ ಆಗಾಗ್ಗೆ ಈ ಮಾತು ಹೇಳುತ್ತಲೇ ಇರುತ್ತಾರೆ. ಅದೇ ಮಾತನ್ನು ಈಗ ನಿಖಿಲ್ ಕೂಡಾ ಹೇಳಿದ್ದಾರೆ.

  `ನಾನು ರಾಜಕಾರಣವನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬೆಳೆದವನು. ಅದು ನನಗೆ ಹೊಸದಲ್ಲ. ನಾನು ನನ್ನ ತಂದೆಯಂತೆಯೇ ರಾಜಕಾರಣ ಹಾಗೂ ಸಿನಿಮಾ.. ಎರಡೂ ಕ್ಷೇತ್ರಗಳಲ್ಲಿರುತ್ತೇನೆ. ನನಗೂ ಡಾ.ರಾಜ್ ಸಿನಿಮಾಗಳೆಂದರೆ ಇಷ್ಟ. ಅವರ ಹಾಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ' ಎಂದು ಹೇಳಿಕೊಂಡಿದ್ದಾರೆ ನಿಖಿಲ್.

  ಸೀತಾರಾಮ ಕಲ್ಯಾಣ ಚಿತ್ರವೂ ಕೂಡಾ ಅದೇ ಮಾದರಿಯದ್ದು. ಕೌಟುಂಬಿಕ ಹಿನ್ನೆಲೆಯ ಮನರಂಜನಾತ್ಮಕ ಸಿನಿಮಾ. ಚಿತ್ರದಲ್ಲೊಂದು ಸುಂದರ ಸಂದೇಶವೂ ಇದೆ. ನಿರ್ದೇಶಕ ಹರ್ಷ ಚಿತ್ರವನ್ನು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ನಾನು ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ ನಿಖಿಲ್.

 • ರಾವಣನ ಹುಡುಕಾಟದಲ್ಲಿ ರಚಿತಾ ರಾಮ್

  ರಾವಣನ ಹುಡುಕಾಟದಲ್ಲಿ ರಚಿತಾ ರಾಮ್

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಅರ್ಜೆಂಟ್ ಆಗಿ ರಾವಣ ಬೇಕು. ರಾವಣನ ಹುಡುಕಾಟಕ್ಕೆ ಹೊರಟಿರುವ ರಚಿತಾ, ರಾಮನವಮಿಯಂದೇ ಅದಕ್ಕೆ ಓಂನಾಮ ಬರೆದಿದ್ದಾರೆ. ಇದು ರಚಿತಾ ರಾಮ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಶಬರಿ ಸರ್ಚಿಂಗ್ ಫಾರ್ ರಾವಣ ಸ್ಟೋರಿ.

  ಸಂಕಲನಕಾರ ನವೀನ್ ಶೆಟ್ಟಿ, ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ಕೆಕೆ ಪ್ರೊಡಕ್ಷನ್ಸ್ ಮತ್ತು ಎಟಿಎಂ ಸ್ಟುಡಿಯೋಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಕಿರಣ್ ಕುಮಾರ್ ಪ್ರೊಡ್ಯೂಸರ್.

  ಮಹಿಳಾ ಕೇಂದ್ರಿತ ಚಿತ್ರವಿದು. ಕಥೆ ತುಂಬಾ ಚೆನ್ನಾಗಿದೆ. ಚಿತ್ರದ ಘೋಷಣೆಗೆ ವಿಶೇಷ ದಿನಕ್ಕಾಗಿ ಕಾಯ್ದು, ರಾಮನವಮಿ ದಿನ ಬಹಿರಂಗಪಡಿಸಿದ್ದೇವೆ ಎಂದಿರುವ ರಚಿತಾ ರಾಮ್, ನವೀನ್ ಶೆಟ್ಟಿ ಚಿತ್ರದ ಮೇಲೆ ಭರವಸೆ ಇಟ್ಟಿದ್ದಾರೆ.

  ಅಂದಹಾಗೆ ಇದು ರಚಿತಾ ಅವರ 36ನೇ ಸಿನಿಮಾ ಅಂತೆ. ಸದ್ಯಕ್ಕೆ ರಚಿತಾ ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಬ್ಯುಸಿ. ಅವರ ಕೈಲೀಗ ಅಭಿಷೇಕ್ ಅಂಬರೀಷ್ ಅವರ ಬ್ಯಾಡ್ ಮ್ಯಾನರ್ಸ್, ಅಜಯ್ ರಾವ್ ಜೊತೆ ಲವ್ ಯೂ ರಚ್ಚು, ಪ್ರಜ್ವಲ್ ದೇವರಾಜ್ ಜೊತೆ ವೀರಂ, ಸತೀಶ್ ನೀನಾಸಂ ಜೊತೆ ಮ್ಯಾಟ್ನಿ ಚಿತ್ರಗಳಿವೆ. ಡಾಲಿ ಧನಂಜಯ್ ಮತ್ತು ಡಾರ್ಲಿಂಗ್ ಕೃಷ್ಣ ಜೊತೆಗೆ ತಲಾ ಒಂದು ಚಿತ್ರಗಳಿವೆ.

  100, ಏಕ್ ಲವ್ ಯಾ ಮತ್ತು ತೆಲುಗಿನ ಸೂಪರ್ ಮಚ್ಚಿ ರಿಲೀಸ್ ಆಗಬೇಕಿವೆ.  

 • ರೌಡಿ ಬೇಬಿ ಧಮ್ ಹೊಡೆಯೋಕೆ ಡಾಲಿ ಮಾಡೆಲ್ ಅಂತೆ..!

  Rachita Ram Shares Her Power Packed Look From Her Upcoming Movie

  ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಗಾರ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಅದು ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಫೋಟೋ. ರಕ್ಷಿತಾ ಪ್ರೇಮ್ ಅವರ ಸೋದರ ನಾಯಕನಾಗಿ ಎಂಟ್ರಿ ಕೊಡ್ತಿರೋ ಚಿತ್ರದಲ್ಲಿ ರಚಿತಾ ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದಾರೆ. ಅಕ್ಷರಶಃ ರೌಡಿ ಬೇಬಿ.

  ಜೋಗಿ ಪ್ರೇಮ್ ಮೊದಲು ಗಣೇಶ ಬೀಡಿ ಕೊಟ್ಟರು. ನಂತರ ಸಿಗರೇಟು.. ಕೊನೆಗೆ ಸಿಗಾರ್‍ನ್ನೂ ಸೇದಿಸಿದರು ಎನ್ನುವ ರಚಿತಾ ರಾಮ್, ಪಾತ್ರಕ್ಕಾಗಿ ಅದನ್ನು ಮಾಡಿದ್ದೇನೆ ಅನ್ನೋದನ್ನ ಮರೆಯೋದಿಲ್ಲ.

  ಸಿಗರೇಟು ಸೇದುವ ಹಾಗೂ ರಿವಾಲ್ವರ್ ಹಿಡಿಯುವ ದೃಶ್ಯಗಳ ಬಿಟ್ಸ್‍ಗಳಲ್ಲಿ ಡಾಲಿ ಧನಂಜಯ್ ಅವರನ್ನು ಫಾಲೋ ಮಾಡಿದ್ದೇನೆ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳೋ ರಚಿತಾ ರಾಮ್, ಈಗ ಸಿಕ್ಕಾಪಟ್ಟೆ ಬ್ಯುಸಿ ಹೀರೋಯಿನ್. ಹೆಚ್ಚೂ ಕಡಿಮೆ ಒಂದು ಡಜನ್ ಚಿತ್ರಗಳು ರಚಿತಾ ರಾಮ್ ಬತ್ತಳಿಕೆಯಲ್ಲಿವೆ.

 • ಲಕ್ಷಾಂತರ ಜನರ ಎದುರು ಸೀತಾ ರಾಮ ಕಲ್ಯಾಣ

  seetharama kalyana teaser today

  ಸೀತಾರಾಮ ಕಲ್ಯಾಣ. ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಅಭಿನಯದ ಹರ್ಷ ನಿರ್ದೇಶನದ ಸಿನಿಮಾ. ಹರ್ಷ ಚಿತ್ರಗಳು ಸತತವಾಗಿ ಗೆದ್ದಿರೋ ಕಾರಣ, ಈ ಚಿತ್ರದ ಮೇಲೂ ಕುತೂಹಲ ಸಹಜ. ಜೊತೆಗೆ ಕುಮಾರಸ್ವಾಮಿ ಸಿಎಂ ಆದ ಮೇಲೆ ರಿಲೀಸ್ ಆಗುತ್ತಿರುವ ನಿಖಿಲ್ ಅಭಿಯನದ ಮೊದಲ ಸಿನಿಮಾ. ಇವತ್ತು, ಸೀತಾ ರಾಮ ಕಲ್ಯಾಣದ ಟೀಸರ್ ರಿಲೀಸ್ ಆಗುತ್ತಿದೆ.

  ರಾಮನಗರದಲ್ಲಿಯೇ ಟೀಸರ್ ರಿಲೀಸ್ ಮಾಡೋಕೆ ರಾಜಕೀಯ ಕಾರಣವೂ ಇದೆ. ರಾಮನಗರ ಕುಮಾರಸ್ವಾಮಿಯವರ ರಾಜಕೀಯ ತವರು. ರಾಮನಗರದ ಜ್ಯೂ.ಕಾಲೇಜು ಮೈದಾನದಲ್ಲಿ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ರಿಲೀಸ್ ಮಾಡುತ್ತಿರುವುದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ. 

  ಅದೂ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ. ಇಡೀ ಚಿತ್ರತಂಡ ಹಾಜರ್ ಇರುತ್ತದೆ. ಜೊತೆಗೆ ಭರಪೂರ ಮನರಂಜನೆಯೂ ಇರುತ್ತೆ.

 • ಲವ್ ಕಲ್ಯಾಣದಲ್ಲಿ ವೈರಲ್ ಆಗಿದ್ದು ಅಣ್ಣ-ತಂಗಿ ಡೈಲಾಗು..!

  seetharama kalyana auto dialogue goes viral

  ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಮುದ್ದು ಮುದ್ದು ಜೋಡಿಯಿದೆ. ನಿಖಿಲ್ ಮತ್ತು ರಚಿತಾ ರಾಮ್ ಜೊತೆಯಾಗಿ ನಟಿಸಿರುವ ಸಿನಿಮಾ, ಲವ್ ಸ್ಟೋರಿ. ಆ ಚಿತ್ರದಲ್ಲೇ ಅವರೇ ಪ್ರೇಮಿಗಳು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. 

  ಆದರೂ ಚಿತ್ರದ ಟ್ರೇಲರ್‍ನಲ್ಲಿ ಬರೋ ಒಂದು ಡೈಲಾಗು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಟೋದಲ್ಲಿ ಕುಳಿತು, ಆಟೋಡ್ರೈವರ್‍ಗೆ ರಚಿತಾ ರಾಮ್ ಹೇಳೋ ಡೈಲಾಗ್ ಅದು. ``ಲವರ್ಸಾ.. ಯಾಕೆ.. ನಿಮ್ ಕಣ್ಣಿಗೆ ನಾವಿಬ್ರೂ ಅಣ್ಣ ತಂಗಿ ಥರಾ ಕಾಣಿಸ್ತಿಲ್ವಾ..' ಅಂತಾ ಹೇಳೋ ಡೈಲಾಗ್ ಅದು.

  ಎ.ಹರ್ಷ, ತಮ್ಮ ಚಿತ್ರದಲ್ಲಿ ಇಂಥಾದ್ದೊಂದು ಸಣ್ಣ ನಗೆ ಉಕ್ಕಿಸೋದ್ರಲ್ಲಿ ಫೇಮಸ್. 

 • ಲವ್ ಯೂ ಎನ್ನಲಾ.. ಕಲ್ಯಾಣ ಎನ್ನಲಾ.. ರಚಿತಾ ರಾಮ್ ಗೊಂದಲ

  one day two events

  ಎರಡು ದೊಡ್ಡ ಸಿನಿಮಾಗಳು. ಎರಡೂ ಚಿತ್ರಗಳ ಮೇಲೆ ಭರ್ಜರಿ ನಿರೀಕ್ಷೆ. ಎಲ್ಲಿ ಹೋಗೋದು.. ಏನ್ ಮಾಡೋದು.. ಸಂಪೂರ್ಣ ಗೊಂದಲದಲ್ಲಿರೋದು ಡಿಂಪಲ್ ಚೆಲುವೆ ರಚಿತಾ ರಾಮ್. ಅವರಿಗೆ ಈಗ ಜನವರಿ 19ರ ಟೆನ್ಷನ್.

  ಜನವರಿ 19ಕ್ಕೆ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಪ್ರಿ-ರಿಲೀಸ್ ಈವೆಂಟ್ ಇದೆ. ಜನವರಿ 25ಕ್ಕೇ ರಿಲೀಸ್ ಆಗುತ್ತಿರುವ ಚಿತ್ರವದು. ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿರುವ ಚಿತ್ರ. ಸಿಎಂ ಕುಮಾರಸ್ವಾಮಿ ಬ್ಯಾನರ್‍ನ ಸಿನಿಮಾ. ಎ. ಹರ್ಷ ನಿರ್ದೇಶನದ ಸಿನಿಮಾ. 

  ಅದೇ ದಿನ.. ಇತ್ತ ದಾವಣಗೆರೆಯಲ್ಲಿ ಐ ಲವ್ ಯೂ ಸಿನಿಮಾದ ಆಡಿಯೋ ಬಿಡುಗಡೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ಸ್ಟಾರ್‍ಗಳು ಆ ದಿನ ದಾವಣಗೆರೆಯಲ್ಲಿರುತ್ತಾರೆ. ರಾಜಮೌಳಿ ಸೇರಿದಂತೆ.. ಉಪೇಂದ್ರ ಹೀರೋ. ಆರ್.ಚಂದ್ರು ನಿರ್ದೇಶಕ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಪ್ರೇಮಿಗಳ ದಿನಕ್ಕೆ ರಿಲೀಸ್ ಆಗುತ್ತಿರುವ ಚಿತ್ರ. 

  ಈಗ.. ರಚಿತಾ ರಾಮ್ ಕನ್‍ಫ್ಯೂಸ್ ಇದೇ. ಮೈಸೂರಿಗೆ ಹೋಗೋದೊ.. ದಾವಣಗೆರೆಗೆ ಹೋಗೋದೋ.. 

 • ಲವ್ ಯೂ ರಚ್ಚು ಅಂತಿದ್ದಾರೆ ಅಜೇಯ್ ರಾವ್

  ಲವ್ ಯೂ ರಚ್ಚು ಅಂತಿದ್ದಾರೆ ಅಜೇಯ್ ರಾವ್

  ರಚಿತಾ ರಾಮ್`ರನ್ನು ಅವರ ಹತ್ತಿರದವರು ಕರೆಯೋದೇ ಹಾಗೆ ರಚ್ಚು ಅಂತಾ. ಅಭಿಮಾನಿಗಳಿಗಷ್ಟೇ ಅವರು ಬುಲ್ ಬುಲ್, ಡಿಂಪಲ್ ಕ್ವೀನ್, ಡಿಂಪಿ.. ಈಗ ರಚಿತಾ ರಾಮ್`ರನ್ನು ಅಜೇಯ್ ರಾವ್ ಲವ್ ಯೂ ರಚ್ಚು ಅಂತಿದ್ದಾರೆ.

  ಯೆಸ್, ಇದು ರಚಿತಾ ರಾಮ್ ಮತ್ತು ಅಜೇಯ್ ರಾವ್ ನಟನೆಯ ಹೊಸ ಚಿತ್ರದ ಟೈಟಲ್. ಇಬ್ಬರೂ ಒಟ್ಟಿಗೇ ನಟಿಸುತ್ತಿರೋದು ಇದೇ ಮೊದಲು. ಈ ಚಿತ್ರಕ್ಕೆ ನಿರ್ದೇಶಕರು ಶಂಕರ್ ರಾಜ್ ಅನ್ನೋ ಹೊಸ ನಿರ್ದೇಶಕ.

  ಈ ಶಂಕರ್ ರಾಜ್ ಬೆನ್ನ ಹಿಂದಿರೋದು ಅವರ ಗುರುಗಳಾದ ಗುರು ದೇಶಪಾಂಡೆ ಮತ್ತು ಶಶಾಂಕ್. ಟೈಟಲ್ ಕೇಳಿದಾಗ ಶಾಕ್ ಮತ್ತು ಥ್ರಿಲ್ ಎರಡೂ ಆಯ್ತು. ಆದರೆ, ಸ್ಕ್ರಿಪ್ಟ್ ಓದಿದ ಮೇಲೆ ಟೈಟಲ್ ಸೂಪರ್ ಅನ್ನಿಸ್ತು. ಶಶಾಂಕ್ ಮತ್ತು ಗುರು ದೇಶಪಾಂಡೆ ಟೀಂ ಇರೋದ್ರಿಂದ ಖುಷಿಯಾಗಿಯೇ ಒಪ್ಪಿಕೊಂಡೆ ಎಂದಿದ್ದಾರೆ ರಚಿತಾ. ಅಜೇಯ್ ರಾವ್ ಜೊತೆ ಮೊದಲ ಸಿನಿಮಾ ಅನ್ನೋದು ಅತ್ತ ರಚಿತಾ ಇತ್ತ ಅಜೇಯ್ ರಾವ್ ಇಬ್ಬರಿಗೂ ಖುಷಿ ಕೊಟ್ಟಿದೆ. ಇದೊಂದು ಫ್ರೆಶ್ ಜೋಡಿಯಾಗಲಿದೆ ಅನ್ನೋ ನಿರೀಕ್ಷೆ ಅಜೇಯ್ ರಾವ್ ಅವರದ್ದು. ಈ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.

 • ಲವ್ ಯೂ ರಚ್ಚು ದುರಂತ : ನಿಜಕ್ಕೂ ನಡೆದಿದ್ದಾದರೂ ಏನು?

  ಲವ್ ಯೂ ರಚ್ಚು ದುರಂತ : ನಿಜಕ್ಕೂ ನಡೆದಿದ್ದಾದರೂ ಏನು?

  ಲವ್ ಯೂ ರಚ್ಚು ಚಿತ್ರ ಮೊದಲು ಸುದ್ದಿಯಾಗಿದ್ದು ಚಿತ್ರದ ಚೆಂದದ ಟೈಟಲ್ಲು, ಲುಕ್.. ಇತ್ಯಾದಿಗಳಿಗೆ. ಆದರೆ ಆಗಸ್ಟ್ 9ನೇ ತಾರೀಕು ನಡೆದ ದುರಂತ, ಫೈಟರ್ ವಿವೇಕ್ ದುರ್ಮರಣ ಚಿತ್ರತಂಡಕ್ಕೂ ಶಾಕ್. ಇಷ್ಟಕ್ಕೂ ಆಗಿದ್ದೇನು?

  ದುರಂತಕ್ಕೆ ಕಾರಣ ಸಾಹಸ ನಿರ್ದೇಶಕ ವಿನೋದ್ ಅಲ್ಲ, ಚಿತ್ರತಂಡದಲ್ಲಿದ್ದ ಯಾವೊಬ್ಬ ಸಾಹಸ ಕಲಾವಿದರೂ ಅಲ್ಲ. ಬದಲಿಗೆ ಇದೆಲ್ಲ ಆಗಿದ್ದು ಕ್ರೇನ್ ಆಪರೇಟರ್‍ನಿಂದ. ಬಿಡದಿಯ ಜೋಗಯ್ಯನ ಪಾಳ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್‍ನಲ್ಲಿ ರೋಪ್ ಸ್ಟಂಟ್ ಇತ್ತು. ದುರದೃಷ್ಟವಶಾತ್ ಅದು ಹೈಟೆನ್ಷನ್ ವೈರ್ ಕೆಳಗೆ ನಡೆಯುತ್ತಿದ್ದ ಸಾಹಸ. ಆ ವೇಳೆ ಕ್ರೇನ್ ಆಪರೇಟರ್, ಕ್ರೇನ್‍ನ್ನು ಮರಕ್ಕೆ ಟಚ್ ಮಾಡಿದ್ದ. ಆಗ ಅವನಿಗೆ ವಾರ್ನಿಂಗ್ ಕೊಡಲಾಗಿತ್ತು. ಕೊನೆಗೆ ಆತ ವೈರ್‍ಗೆ ಟಚ್ ಮಾಡಿಬಿಟ್ಟ. ಅದು 11  ಕೆವಿ ವಿದ್ಯುತ್ ಲೇನ್. ಆಗ ಕ್ರೇನ್‍ಗೆ ತಗುಲಿದ್ದ ಕರೆಂಟ್, ವಿವೇಕ್ ಮತ್ತು ರಂಜಿತ್ ಇಬ್ಬರಿಗೂ ಟಚ್ ಆಯ್ತು. ರಂಜಿತ್ ಅದೃಷ್ಟ ಚೆನ್ನಾಗಿತ್ತು. ಕರೆಂಟ್ ಹೊಡೆದರೂ ಬದುಕುಳಿದರು. ವಿವೇಕ್ ಅಲ್ಲಿಯೇ ಮೃತಪಟ್ಟರು. ಇದು ರಂಜಿತ್ ಹೇಳಿರುವ ಘಟನೆಯ ವಿವರ.

  ಸದ್ಯಕ್ಕೆ ಚಿತ್ರದ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್, ಟ್ರೇನ್ ಆಪರೇಟರ್ ಮಾದೇಶ (ಮುನಿಯಪ್ಪ) ಹಾಗೂ ಜಮೀನಿನ ಮಾಲೀಕ ಪುಟ್ಟರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರು ಪಡಿಸಿ ವಿಚಾರಣೆ ಆರಂಭಿಸಿದ್ದಾರೆ.

  ನಿರ್ಮಾಪಕ ಗುರು ದೇಶಪಾಂಡೆ ಸ್ಥಳದಲ್ಲಿ ಇರಲಿಲ್ಲ. ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ ಗುರು ದೇಶಪಾಂಡೆ.

 • ಲವ್ ಯೂ ರಚ್ಚುನಲ್ಲಿದ್ದಾಳೆ ಇನ್ನೊಬ್ಬಳು ಸುಂದರಿ..!

  ಲವ್ ಯೂ ರಚ್ಚುನಲ್ಲಿದ್ದಾಳೆ ಇನ್ನೊಬ್ಬಳು ಸುಂದರಿ..!

  ಲವ್ ಯೂ ರಚ್ಚು ಚಿತ್ರದ ಸುಂದರಿ ಯಾರು? ನೋ ಡೌಟ್.. ಎಲ್ಲರೂ ಹೇಳೋ ಹೆಸರು ರಚ್ಚು ಅಲಿಯಾಸ್ ರಚಿತಾ ರಾಮ್ ಅವರ ಹೆಸರನ್ನೇ. ಆದರೆ.. ರಚ್ಚುವನ್ನೂ ಮೀರಿಸೋ ಇನ್ನೊಬ್ಬಳು ಸುಂದರಿ ಆ ಚಿತ್ರದಲ್ಲಿದ್ದಾಳೆ. ಆಕೆಯ ಹೆಸರು ಚರಿಷ್ಮಾ. ರಚ್ಚು ಮತ್ತು ಚರಿಷ್ಮಾ.. ಇಬ್ಬರಲ್ಲಿ ಯಾರು ಸುಂದರಿ ಎಂದರೆ.. ಅನುಮಾನವೇ ಇಲ್ಲದಂತೆ ಅಜೇಯ್ ರಾವ್ ಎತ್ತಿಕೊಂಡು ಮುದ್ದಾಡೋದು ಚರಿಷ್ಮಾ ಅವರನ್ನೇ.

  ಕನ್‍ಫ್ಯೂಸ್ ಆಗುವಂತದ್ದೇನೂ ಇಲ್ಲ. ಲವ್ ಯೂ ರಚ್ಚು ಚಿತ್ರದಲ್ಲಿ ನಟಿಸಿರೋ ಆ ಚರಿಷ್ಮಾ, ಅಜೇಯ್ ರಾವ್ ಅವರ ಪ್ರೀತಿಯ ಪುತ್ರಿ. ಈ ಚಿತ್ರದಲ್ಲಿರೋ ಸರ್‍ಪ್ರೈಸ್ ಆಕೆಯೇ. ಪುಟಾಣಿ ಬೇಬಿ ಚರಿಷ್ಮಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

  ಆಕೆಯ ಪಾತ್ರ ಇಡೀ ಚಿತ್ರದಲ್ಲಿ ತುಂಬಾನೇ ಸ್ಪೆಷಲ್. ಬೇಬಿ ಚರಿಷ್ಮಾ ಪಾತ್ರ, ಇಡೀ ಚಿತ್ರದ ಹೈಲೈಟ್ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ. ಶಂಕರ್ ಎಸ್.ರಾಜ್ ನಿರ್ದೇಶನದ ಮೊದಲ ಚಿತ್ರ ಲವ್ ಯೂ ರಚ್ಚು. ಈಗಾಗಲೇ ಚಿತ್ರದ ರೊಮ್ಯಾಂಟಿಕ್ ಸಾಂಗ್ ಹವಾ ಎಬ್ಬಿಸಿದೆ.

 • ಲವ್ ಲೆಕ್ಚರರ್ ಉಪೇಂದ್ರ

  love lecturer upendra

  ಐ ಲವ್ ಯೂ ಚಿತ್ರದ ಮೂಲಕ ಉಪೇಂದ್ರ ಲೆಕ್ಚರರ್ ಆಗಿದ್ದಾರೆ. ಚಿತ್ರದಲ್ಲಿ ಡಬಲ್ ಶೇಡ್‍ನಲ್ಲಿ ಕಾಣಿಸಿಕೊಳ್ತಿರೋ ಉಪ್ಪಿ, ಕಾಲೇಜು ಹುಡುಗ ಹುಡುಗಿಯರಿಗೆ ಲವ್ ಪಾಠ ಹೇಳಲಿದ್ದಾರೆ. ಐ ಲವ್ ಯೂ ಹೇಳೋದು ಹೇಗೆ ಅನ್ನೋದನ್ನ ಕಲಿಸಿಕೊಡ್ತಾರಂತೆ ಉಪೇಂದ್ರ.

  ಎ ಚಿತ್ರದಲ್ಲಿ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯ್ ಎಂದಿದ್ದ ಉಪೇಂದ್ರ, ಉಪೇಂದ್ರ ಚಿತ್ರದಲ್ಲಿ ದುಡ್ಡಿದ್ರೆ ಲವ್ ಎಂದಿದ್ದರು. ಪ್ರೀತ್ಸೆಯಲ್ಲಿ ಪಾಗಲ್ ಪ್ರೇಮಿಯಾಗಿದ್ದರು. ಆದರೆ, ಇಲ್ಲಿ ಉಪ್ಪಿ ಬೇರೆಯದ್ದೇ ಸ್ಟೈಲ್. ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಅನ್ನೋದನ್ನ ಹೇಳಿಕೊಡ್ತಾರಂತೆ ಉಪ್ಪಿ. 

  ಈ ಸಿನಿಮಾ ನೋಡಿದ ಮೇಲೆ ಪ್ರೇಮಿಗಳ ಸಂಖ್ಯೆ ಜಾಸ್ತಿಯಾಗುತ್ತೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ನಿರ್ದೇಶಕ ಆರ್.ಚಂದ್ರು. ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಸಿನಿಮಾ ಮುಂದಿನ ತಿಂಗಳು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ, ಕನ್ನಡ & ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

 • ಲಿಪ್ ಲಾಕ್ ಸೀನ್ : ರಚಿತಾ, ಪ್ರೇಮ್ ರಿಯಾಕ್ಷನ್

  ek love ya image

  ಏಕ್ ಲವ್ ಯಾ ಟೀಸರ್ ಹೊರಬಿದ್ದ ಕ್ಷಣದಿಂದ ಚರ್ಚೆಯಾಗುತ್ತಿರೋದು ಇದೇ ವಿಷಯ. ಇತ್ತೀಚೆಗೆ ಐ ಲವ್ ಯೂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದ ರಚಿತಾ ರಾಮ್, ಈ ಚಿತ್ರದಲ್ಲಿ ಹೀರೋ ರಾಣಾ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ರಚಿತಾ ಇದುವರೆಗೆ ಯಾವುದೇ ಚಿತ್ರದಲ್ಲಿ ಚುಂಬನ ದೃಶ್ಯಗಳಲ್ಲಿ ನಟಿಸಿರಲಿಲ್ಲ. ಅಷ್ಟೇ ಅಲ್ಲ, ಜೋಗಿ ಪ್ರೇಮ್ ಚಿತ್ರಗಳಲ್ಲಿಯೂ ಇದುವರೆಗೆ ಕಿಸ್ಸಿಂಗ್ ಸೀನ್ ಇರಲೇ ಇಲ್ಲ. ಈ ಬಗ್ಗೆ ಕೇಳಿದಾಗ ಜೋಗಿ ಪ್ರೇಮ್ ಹೇಳಿರೋದು ಇದು.

  ನಾನು ಸುಮ್‌ಸುಮ್ನೆ ನಾನು ಕಿಸ್ಸಿಂಗ್ ಸೀನ್‌ ಇಟ್ಟಿಲ್ಲ. ಕಿಸ್ಸಿಂಗ್ ಸೀನ್‌ ಕಥೆಗೆ ಅವಶ್ಯಕವಾಗಿದ್ದರೆ ಇಡೋದ್ರಲ್ಲಿ ತಪ್ಪೇನಿಲ್ಲ. ಸುಮ್ ಸುಮ್ನೆ ತುರುಕಬಾರದು. ಸಿನಿಮಾ ನೋಡಿ, ಆ ದೃಶ್ಯ ಏಕೆ ಇದೆ ಅನ್ನೋದು ನಿಮಗೇ ಗೊತ್ತಾಗುತ್ತೆ ಎನ್ನುತ್ತಾರೆ ಡೈರೆಕ್ಟರ್ ಪ್ರೇಮ್.

  ಇನ್ನು ಆ ದೃಶ್ಯ ಮಾಡೋಕೆ ಕಾರಣ ಏನು ಅಂದ್ರೆ ರಚಿತಾ ರಾಮ್ ಹೇಳೋದಿಷ್ಟು. ‘ನನಗೆ ಪ್ರೇಮ್ ಚಿತ್ರದಲ್ಲಿ ನಟಿಸಬೇಕು ಅನ್ನೋ ಆಸೆಯಿತ್ತು. ಹಾಗಾಗಿ ಈ ಚಿತ್ರ ಒಪ್ಪಿಕೊಂಡೆ. ಅಭಿಮಾನಿಗಳು ಆ ದೃಶ್ಯಕ್ಕೆ, ಸ್ಮೋಕಿಂಗ್ ಸೀನ್ಗಳಿಗೆ ಬೇಸರ ಮಾಡಿಕೊಂಡಿದ್ದಾರೆ. ನಾನು ಕೇಳಿಕೊಳ್ಳೋದು ಇಷ್ಟೆ, ಅಭಿಮಾನಿಗಳಿಲ್ಲದೆ ನಾವಿಲ್ಲ. ಸಿನಿಮಾ ನೋಡಿ. ಆ ಸೀನ್ ಯಾಕೆ ಇದೆ ಅನ್ನೋದು ಗೊತ್ತಾಗುತ್ತೆ’ ಎಂದಿದ್ದಾರೆ.

  ರಕ್ಷಿತಾ ಪ್ರೇಮ್ ಸೋದರ ರಾಣಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಚಿತ್ರ ಇದು. ರಕ್ಷಿತಾ ಅವರೇ ನಿರ್ಮಾಪಕಿ. ರಾಣಾ ಸುಮಾರು 2 ವರ್ಷ ಅಮೆರಿಕದಲ್ಲಿ ಅಭಿನಯ ತರಬೇತಿ ಮಾಡಿ, ನಂತರ ವಿಲನ್ ಚಿತ್ರದಲ್ಲಿ ಪ್ರೇಮ್ ಅವರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿ ನಂತರ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ.

   

 • ವಸಿಷ್ಠ ಸಿಂಹ ಜೊತೆ ರಚಿತಾ ರಾಮ್

  rachita to pair opposite vasistha simha

  ರಚಿತಾ ರಾಮ್ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು ಪಂಥ. ವಿಶೇಷವೆಂದರೆ ಈ ಪಂಥ ಚಿತ್ರದ ಹೀರೋ ವಸಿಷ್ಠ ಸಿಂಹ. ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯದ್ದು ಅತ್ಯಂತ ವಿಶಿಷ್ಟ ಪಾತ್ರವಂತೆ.

  ರಚಿತಾ ಇದುವರೆಗೆ ಸ್ಟಾರ್ ಚಿತ್ರಗಳಲ್ಲಿಯೇ ನಟಿಸಿದ ನಾಯಕಿ. ಆರಂಭದ ಚಿತ್ರ ಬುಲ್‍ಬುಲ್‍ನಿಂದ ಇದೇ ವಾರ ರಿಲೀಸ್ ಆಗುತ್ತಿರುವ ಅಯುಷ್ಮಾನ್ ಭವ ಚಿತ್ರದವರೆಗೆ ರಚಿತಾ ಸ್ಟಾರ್ ಚಿತ್ರಗಳಲ್ಲಿಯೇ ಕಾಣಿಸಿಕೊಂಡವರು. ಈಗ ಪಂಥ ಚಿತ್ರದಲ್ಲಿ ವಸಿಷ್ಠ ಸಿಂಹ ಜೊತೆ ನಟಿಸುತ್ತಿದ್ದಾರೆ. ಈ ಮೂಲಕ ತಾನು ಸ್ಟಾರ್ ಚಿತ್ರಗಳಿಗಷ್ಟೇ ಸೀಮಿತವಾದ ನಟಿ ಅಲ್ಲ ಅನ್ನೋದನ್ನೂ ಬ್ರೇಕ್ ಮಾಡುತ್ತಿದ್ದಾರೆ.

  ಪಂಥ ಟೈಟಲ್‍ಗೆ ಡಿಬೇಟ್ ಆನ್ ದಿ ಬೆಟ್ ಅನ್ನೋ ಸಬ್ ಟೈಟಲ್ ಇದೆ. ಕಥೆ, ಪಾತ್ರ ಎರಡೂ ವಿಭಿನ್ನವಾಗಿದೆ. ಈ ಪಾತ್ರಕ್ಕೆ ರಚಿತಾ ಅತ್ಯಂತ ಸೂಕ್ತ ಹಾಗೂ ನ್ಯಾಯ ನೀಡಬಲ್ಲ ಕಲಾವಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ ನಾಗೇಂದ್ರ ಪ್ರಸಾದ್.

 • ಶಬರಿಗೆ ಕೂಡಿ ಬಂತು ಮುಹೂರ್ತ

  ಶಬರಿಗೆ ಕೂಡಿ ಬಂತು ಮುಹೂರ್ತ

  ಶಬರಿ - ಸರ್ಚಿಂಗ್ ಫಾರ್ ರಾವಣ. ಒಂದು ವಿಭಿನ್ನ ಕಥೆಯ ಎಳೆಯನ್ನಿಟ್ಟುಕೊಂಡು ನಿರ್ಮಾಣವಾಗುತ್ತಿರೋ ಚಿತ್ರ. ಶಬರಿ ಯಾಕೆ ರಾವಣನನ್ನು ಹುಡುಕಬೇಕು, ಅವಳು ಹುಡುಕುವುದು.. ಕಾಯುವುದು ರಾಮನನ್ನಲ್ಲವೇ.. ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಮೂಡುತ್ತೆ. ಅಲ್ಲಿಗೆ ಟೈಟಲ್ ಇಟ್ಟ ನಿರ್ದೇಶಕರು ಗೆದ್ದಂತೆ. ಆ ಚಿತ್ರಕ್ಕೀಗ ಮುಹೂರ್ತ ಕೂಡಿ ಬಂದಿದೆ.

  ಶಬರಿ ಅನ್ನೋ ಟೈಟಲ್ಲಿನಲ್ಲಿ ರಚಿತಾ ರಾಮ್ ಉಗ್ರಾವತಾರ ಬೆರಗು ಹುಟ್ಟಿಸುತ್ತಿದೆ. ನವೀನ್ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಕಿರಣ್ ಕುಮಾರ್, ಅರವಿಂದ್ ನಿರ್ಮಾಪಕರು. ಚಿತ್ರಕ್ಕೆ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ.

 • ಶಿವಣ್ಣನ ಫ್ಯಾನ್ ಆಗಿ ಬಂದಿದ್ದೇನೆ : ಯಶ್

  ಶಿವಣ್ಣನ ಫ್ಯಾನ್ ಆಗಿ ಬಂದಿದ್ದೇನೆ : ಯಶ್

  ಭಜರಂಗಿ 2 ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಯಶ್ ಹೇಳಿದ ಮಾತುಗಳಿವು. ನನಗೆ ಶಿವಣ್ಣ ಇಷ್ಟ. ಭಜರಂಗಿ ನೋಡೋಕೆ ತ್ರಿವೇಣಿ ಥಿಯೇಟರಿಗೆ ಹೋಗಿದ್ದೆ. ಫ್ಯಾನ್ ಆಗಿ ಹೋಗಿದ್ದೆ. ಇವತ್ತು ಭಜರಂಗಿ 2 ರಿಲೀಸ್‍ಗೆ ಬಂದಿದ್ದೇನೆ. ಈಗಲೂ ಫ್ಯಾನ್ ಆಗಿಯೇ ಬಂದಿದ್ದೇನೆ ಎಂದ ಯಶ್, ಶಿವಣ್ಣ ನಾನು ಹುಟ್ಟೋಕೆ ಮೊದಲಿನಿಂದಲೂ ಸಿನಿಮಾ ಮಾಡ್ತಾ ಬಂದಿದ್ದಾರೆ.

  ಇವರ ನಡವಳಿಕೆಗಳನ್ನ ನೋಡಿ ನಾವೆಲ್ಲ ಕಲೀಬೇಕು. ಅಮ್ಮನಿಗೆ ಡಾ.ರಾಜ್‍ಕುಮಾರ್ ಅಂದ್ರೆ ತುಂಬಾ ಇಷ್ಟ. ನನಗೆ ಅಪ್ಪು ತರಾ ಡ್ಯಾನ್ಸ್, ಫೈಟ್ ಮಾಡೋಕೆ ಇಷ್ಟ. ಅದಕ್ಕಾಗಿಯೇ ಇಂಡಸ್ಟ್ರಿಗೆ ಬಂದೆ ಎಂದ ಯಶ್ ಭಜರಂಗಿ 2 ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.

 • ಶ್ರೀಮುರಳಿಗೆ ವೆಲ್‍ಕಂ ಹೇಳ್ತಾರೆ ಡಿಂಪಲ್ ಕ್ವೀನ್ 

  rachita ram to shake leg with srimurali in special song

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದಲ್ಲಿ ರಚಿತಾ ರಾಮ್ ಹಾಡಿ ಕುಣಿದು ಕುಪ್ಪಳಿಸೋಕೆ ರೆಡಿಯಾಗಿದ್ದಾರೆ. ಅರೆ.. ಆ ಚಿತ್ರದ ಹೀರೋಯಿನ್ ಶ್ರೀಲೀಲಾ ಅಲ್ವಾ ಅಂದ್ಕೋಬೇಡಿ. ಹೀರೋಯಿನ್ ಅವರೇ. ರಚಿತಾ ಹೆಜ್ಜೆ ಹಾಕೋದು ಹೀರೋ ಇಂಟ್ರೊಡಕ್ಷನ್ ಸಾಂಗ್‍ಗೆ.

  ಭರಾಟೆ ಚಿತ್ರದ ಕಥೆ, ಹೀರೋನ ಫೋರ್ಸ್ ಎಲ್ಲವನ್ನೂ ಒಳಗೊಂಡಿರೋ ಹಾಡಿಗೆ ಒಬ್ಬರು ಜನಪ್ರಿಯ ನಾಯಕಿ ಬೇಕು ಎಂದು ಯೋಚಿಸಿದಾಗ ಹೊಳೆದಿದ್ದು ರಚಿತಾ ರಾಮ್ ಹೆಸರು. ಅವರ ಎಂಟ್ರಿ, ಚಿತ್ರದ ಎನರ್ಜಿ ಹೆಚ್ಚಿಸಿದೆ ಅಂದಿದ್ದಾರೆ ಭರ್ಜರಿ ಚೇತನ್.

  ಶ್ರೀಮುರಳಿ ಜೊತೆ ರಥಾವರ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿರುವ ರಚಿತಾ ರಾಮ್, ಇತ್ತೀಚೆಗೆ ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಪುಟ್ಟ ಹಾಡಿಗೆ ಸ್ಟೆಪ್ ಹಾಕಿದ್ದರು. ಅದು ಬಿಟ್ಟರೆ ಈಗ ಭರಾಟೆಯಲ್ಲಿ ಸ್ಪೆಷಲ್ ಡ್ಯಾನ್ಸ್‍ಗೆ ಎಂಟ್ರಿ ಕೊಟ್ಟಿದ್ದಾರೆ.

 • ಸಿದ್ಧಗಂಗಾ ಶ್ರೀಗಳ ಅನಾರೋಗ್ಯ - ಐ ಲವ್ ಯೂ ಆಡಿಯೋ ರಿಲೀಸ್ ಮುಂದಕ್ಕೆ..

  i love you audio release postponed

  ನಿರ್ದೇಶಕ ಆರ್.ಚಂದ್ರು, ಐ ಲವ್ ಯೂ ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಿದ್ದಾರೆ. ಫೆಬ್ರವರಿ 14ರಂದು ಸಿನಿಮಾ ರಿಲೀಸ್‍ಗೆ ಪ್ಲಾನ್ ಮಾಡಿರುವ ಆರ್.ಚಂದ್ರು, ಇಂದು ದಾವಣಗೆರೆಯಲ್ಲಿ ಆಡಿಯೋ ರಿಲೀಸ್ ಇಟ್ಟುಕೊಂಡಿದ್ದರು. ತೆಲುಗು ಹಾಗೂ ಕನ್ನಡ ಚಿತ್ರರಂಗದ ಸ್ಟಾರ್‍ಗಳು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಆರ್.ಚಂದ್ರು, ಆಡಿಯೋ ಬಿಡುಗಡೆ ಮುಂದೂಡಿದ್ದಾರೆ. ಇದಕ್ಕೆ ಕಾರಣ, ಸಿದ್ಧಗಂಗಾ ಶ್ರೀಗಳ ಆನಾರೋಗ್ಯ.

  `ನಾಡಿನ ಜನರೆಲ್ಲ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ವೇಳೆ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ'' ಎಂದಿದ್ದಾರೆ ಆರ್.ಚಂದ್ರು.

  ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಪ್ರಧಾನ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ.

 • ಸೀತಾ ರಾಮ ಕಲ್ಯಾಣಕ್ಕೂ ಕಳ್ಳರ ಕಾಟ

  piracy haunts seetharama kalyana too

  ಮೊನ್ನೆಯಷ್ಟೇ ಬಜಾರ್ ಚಿತ್ರತಂಡ ಪೈರಸಿ ಚೋರರ ವಿರುದ್ಧ ಕಂಪ್ಲೇಂಟ್ ಕೊಟ್ಟಿತ್ತು. ಈಗ ಸೀತಾರಾಮ ಕಲ್ಯಾಣದ ಸರದಿ. ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅಭಿನಯದ, ಹರ್ಷ ನಿರ್ದೇಶನದ ಸಿನಿಮಾ, ಥಿಯೇಟರುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಪೈರಸಿ ಚೋರರ ಕಾಟವೂ ಶುರುವಾಗಿದೆ. ಹೀಗಾಗಿಯೇ ನಿರ್ಮಾಪಕಿ ಅನಿತಾ ಕುಮಾರಸ್ವಾಮಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಚಿತ್ರದ ಪೈರಸಿ ವಿರುದ್ಧ ದೂರು ದಾಖಲಿಸಿದ್ದಾರೆ.

  ಟಿ.ಎನ್. ಶಶಿಧರ್ ಮತ್ತು ಕನ್ನಡ ನ್ಯೂ ಮೂವೀಸ್ ಎಂಬ ಆನ್‍ಲೈನ್ ಚಾನೆಲ್ ವಿರುದ್ಧ ಕಾಪಿರೈಟ್ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ಶುರುವಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery