` rachita ram - chitraloka.com | Kannada Movie News, Reviews | Image

rachita ram

 • ಡಾ.ರಾಜ್‍ಕುಮಾರ್ ಸಿನಿಮಾ ನೆನಪಿಸಿದ ಮಗನ ಚಿತ್ರ - ಸಿಎಂ ಕುಮಾರಸ್ವಾಮಿ

  cm hd kumaraswamy remembers dr raj's movie after seetharama kalyana

  ನನ್ನ ಮಗನ ಸಿನಿಮಾ ಪ್ರದರ್ಶನವಿದೆ. ದಯವಿಟ್ಟು ಎಲ್ಲರೂ ಬರಬೇಕು. ಹೀಗೆಂದು ಸಿಎಂ ಕುಮಾರಸ್ವಾಮಿ ಮಾಡಿದ ಆಹ್ವಾನಕ್ಕೆ ಬಹುತೇಕ ಎಲ್ಲ ಗಣ್ಯರೂ ಆಗಮಿಸಿ, ಥಿಯೇಟರಿಗೆ ಬಂದು ಚಿತ್ರವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ.

  ಸಿದ್ದರಾಮಯ್ಯ, ಜಮೀರ್ ಅಹ್ಮದ್, ಶಿವರಾಮೇ ಗೌಡ, ಈಶ್ವರಪ್ಪ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಚಿತ್ರಕ್ಕೆ ಬರಲು ಸಾಧ್ಯವಾಗದಿದ್ದರೂ, ಮಗನ ಸಿನಿಮಾ ನೋಡಿ ಖುಷಿ ಪಡಿ. ರಾಜಕೀಯ ಜಂಜಾಟ ಮರೆತುಬಿಡಿ ಎಂದು ಶುಭ ಹಾರೈಸಿದ್ದಾರೆ.

  ಎಲ್ಲರ ನಡುವೆ ಸಿನಿಮಾ ನೋಡಿದ ಕುಮಾರಸ್ವಾಮಿ `ಮಗನ ಸಿನಿಮಾ ತುಂಬಾ ಚೆನ್ನಾಗಿದೆ. ಹಾಡು, ಡ್ಯಾನ್ಸು, ಫೈಟು, ಅಭಿನಯ ಎಲ್ಲದರಲ್ಲೂ ಮಗ ನಿಖಿಲ್ ತುಂಬಾ ಚೆನ್ನಾಗಿ ಮಾಡಿದ್ದಾನೆ. ನನಗಂತೂ ಸಿನಿಮಾ ಡಾ.ರಾಜ್ ಸಿನಿಮಾಗಳನ್ನು ನೆನಪಿಸಿತು. ಮಗನಿಗೆ ನಾನು 100ಕ್ಕೆ 100 ಅಂಕ ಕೊಡುತ್ತೇನೆ' ಎಂದಿದ್ದಾರೆ.

 • ಡಾಕ್ಟರ್ ಡಿಂಪಲ್ ಕ್ವೀನ್

  rachita ram to act as doctor

  ಬುಲ್ ಬುಲ್, ಡಿಂಪಲ್ ಕ್ವೀನ್, ರಚ್ಚು.. ಹೀಗೆಲ್ಲ ಅಭಿಮಾನಿಗಳಿಂದ ಕರೆಯಿಸಿಕೊಳ್ಳೋ ರಚಿತಾ ರಾಮ್ ಈಗ ಡಾಕ್ಟರ್ ಆಗೋಕೆ ಹೊರಟಿದ್ದಾರೆ. ಆಯುಷ್ಮಾನ್ ಭವ ಚಿತ್ರದಲ್ಲಿ ಮನೋವೈದ್ಯೆಯ ಬಳಿ ಹೋಗುವ ರೋಗಿಯಾಗಿದ್ದ ರಚಿತಾ ರಾಮ್, ಇಲ್ಲಿ ಸೈಕಾಲಜಿಸ್ಟ್. ಡಾಕ್ಟರ್ ಲಿಲ್ಲಿ.

  ವಿಜಯ್ ಎಸ್.ಗೌಡ ಎಂಬುವವರು ಹೆಣೆದಿರುವ ಸೈಕಲಾಜಿಕಲ್ ಮಿಸ್ಟರಿ ಕಥೆಯಲ್ಲಿ ಬೇರೆಯದ್ದೇ ರೀತಿಯ ಕಥೆಯಿರುತ್ತೆ. ಪುಟ್ಟ ವಯಸ್ಸಿನಲ್ಲಿ ಮಕ್ಕಳನ್ನು ನಿರ್ಲಕ್ಷಿಸಿದರೆ, ಹಿಂಸೆ ಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ದೊಡ್ಡವರಾದ ಮೇಲೆ ಅದು ಬೀರುವ ಪರಿಣಾಮವನ್ನು ಹೇಳುವ ಕಥೆ ಚಿತ್ರದಲ್ಲಿದೆಯಂತೆ. ಎಲ್ಲವೂ ರೆಡಿಯಿದ್ದು, ಲಾಕ್ ಡೌನ್ ಮುಗಿಯುವುದನ್ನೇ ಕಾಯುತ್ತಿದೆ ಲಿಲ್ಲಿ ಟೀಂ.

 • ಡಾರ್ಲಿಂಗ್ ಜೊತೆ ಡಿಂಪಿ

  ಡಾರ್ಲಿಂಗ್ ಜೊತೆ ಡಿಂಪಿ

  ಡಿಂಪಲ್ ಕ್ವೀನ್, ಲಕ್ಕಿ ಕ್ವೀನ್ ಎಂದೆಲ್ಲ ಫೇಮಸ್ ಆಗಿರೋ ಬುಲ್ ಬುಲ್ ರಚಿತಾ ರಾಮ್, ಕನ್ನಡದ ಬಹುತೇಕ ಎಲ್ಲ ಸ್ಟಾರ್‍ಗಳಿಗೂ ನಾಯಕಿಯಾಗಿ ನಟಿಸಿದ್ದಾರೆ. ಯಶ್ ಒಬ್ಬರನ್ನು ಬಿಟ್ಟು. ಈಗ ರಚಿತಾ ರಾಮ್ ಕನ್ನಡದ ಇನ್ನೊಬ್ಬ ಸ್ಟಾರ್ ನಟ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗುತ್ತಿದ್ದಾರೆ.

  ಲವ್ ಮಾಕ್‍ಟೇಲ್ ನಂತರ ತಮ್ಮದೇ ವಿಶಿಷ್ಟ ಫ್ಯಾನ್ಸ್ ಗ್ರೂಪ್ ಸೃಷ್ಟಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ, ರಚಿತಾ ರಾಮ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಕ್ ಗಂಗಾಧರ್ ನಿರ್ದೇಶಕ.

  ಅತ್ತ ಮದುವೆ.. ಇತ್ತ ಹೊಸ ಹೊಸ ಸಿನಿಮಾ.. ಎಲ್ಲದರ ನಡುವೆ ಡಾರ್ಲಿಂಗ್ ಕೃಷ್ಣ ಬ್ಯುಸಿಯಾಗಿದ್ದರೆ, ಕೈತುಂಬಾ 10ಕ್ಕೂ ಹೆಚ್ಚು ಸಿನಿಮಾ ಇಟ್ಟುಕೊಂಡಿರೋ ರಚಿತಾ ರಾಮ್ ಇನ್ನಷ್ಟು ಬ್ಯುಸಿಯಾಗುತ್ತಲೇ ಇದ್ದಾರೆ.

 • ಡಾರ್ಲಿಂಗ್ ಡಿಂಪಲ್ ಚಿತ್ರದ ಟೈಟಲ್ ಕಾಂಟ್ರವರ್ಸಿ : ಅಸಲಿ ಕಥೆ ಏನು?

  ಡಾರ್ಲಿಂಗ್ ಡಿಂಪಲ್ ಚಿತ್ರದ ಟೈಟಲ್ ಕಾಂಟ್ರವರ್ಸಿ : ಅಸಲಿ ಕಥೆ ಏನು?

  ಮೊನ್ನೆ ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಚಿತ್ರಕ್ಕೆ ಲವ್ ಮೀ ಆರ್ ಹೇಟ್ ಮಿ ಚಿತ್ರ ಘೋಷಣೆಯಾಗಿತ್ತು. ಟೈಟಲ್ ಹೊರಬಿದ್ದ ಬೆನ್ನಲ್ಲೇ ವಿವಾದ ಸುತ್ತಿಕೊಂಡಿದೆ.

  ಈ ಚಿತ್ರದ ಟೈಟಲ್ ನನ್ನದು ಎಂದು ತಗಾದೆ ತೆಗೆದಿದ್ದಾರೆ ನಿರ್ದೇಶಕ ವಿ.ದೇವದತ್ತ. ವಿ. ದೇವದತ್ತ ಸೈಕೋ ಚಿತ್ರವನ್ನು ನಿರ್ದೇಶಿಸಿದ್ದವರು. ಚಿತ್ರದ ಟೈಟಲ್ ಪ್ರಶ್ನಿಸಿ ದೇವದತ್ತ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.

  ಇತ್ತ ನಿರ್ದೇಶಕ ದೀಪಕ್ ಗಂಗಾಧರ್. ಲವ್ ಮೀ ಆರ್ ಹೇಟ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಇಂಟರ್‍ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದು, ಬಿ.ಕೆ.ರವಿಕಿರಣ್ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಪ್ರೋಮೋ ಶೂಟಿಂಗ್ ಆಗಿದೆ. ಹೀಗಾಗಿ ಚಿತ್ರದ ಟೈಟಲ್ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ದೀಪಕ್ ಗಂಗಾಧರ್.

  ವಿವಾದಕ್ಕೆ ಕಾರಣ ಏನೆಂದು ಹುಡುಕಿದರೆ ಎರಡು ಫಿಲಂ ಚೇಂಬರ್‍ಗಳ ಕಥೆ ಹೊರಬಿದ್ದಿದೆ. ಕರ್ನಾಟಕ ಫಿಲಂ ಚೇಂಬರ್, ರಾಜ್ಯದ ಅಧಿಕೃತ ಮೂಲ ಸಂಸ್ಥೆ. ಚಿತ್ರರಂಗದ ಬಹುತೇಕ ವ್ಯವಹಾರಗಳು ನಡೆಯುವುದು ಈ ಸಂಸ್ಥೆಯ ಅಡಿಯಲ್ಲಿ. ದೇಶದ ಹಾಗೂ ದಕ್ಷಿಣ ಭಾರತದ ಫಿಲಂ ಚೇಂಬರ್‍ಗಳಲ್ಲಿಯೂ ಈ ಸಂಸ್ಥೆಗೆ ಅಧಿಕೃತ ಮಾನ್ಯತೆ ಇದೆ.  ಇದರ ನಡುವೆ ಕೆಲವು ವರ್ಷಗಳ ಹಿಂದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಮತ್ತೊಂದು ಪರ್ಯಾಯ ಚೇಂಬರ್ ಹುಟ್ಟುಹಾಕಲಾಯಿತು.

  ಈಗ ದೀಪಕ್ ಗಂಗಾಧರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದಾರೆ. ಅತ್ತ ದೇವದತ್ತ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟ್ರಾರ್ ಮಾಡಿಸಿದ್ದಾರೆ. ಎರಡು ಫಿಲಂ ಚೇಂಬರುಗಳಲ್ಲಿ ಯಾವ ಚೇಂಬರ್‍ನಲ್ಲಿರುವ ಟೈಟಲ್‍ಗೆ ಮಾನ್ಯತೆ ಸಿಗಲಿದೆ ಎನ್ನುವುದು ಕುತೂಹಲಕಾರಿ.

 • ಡಾಲಿ ಧನಂಜಯ್‌ಗೆ ರಚಿತಾ ರಾಮ್ ಜೋಡಿ

  rachita ram to pair opposite dolly dhananjay

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಆಯುಷ್ಮಾನ್ ಭವ ಇದೇ ವಾರ ರಿಲೀಸ್. ಇದು ಮುಗಿಯುತ್ತಿದ್ದಂತೆಯೇ ಮತ್ತೆ ಬೆನ್ನು ಬೆನ್ನಿಗೆ ರಚಿತಾ ಚಿತ್ರಗಳ ಭರಾಟೆ ಶುರುವಾಗುತ್ತೆ. ಈಗಾಗಲೇ ಏಕ್ ಲವ್ ಯಾ, ೧೦೦, ಏಪ್ರಿಲ್, ಪಂಥ, ಸೀರೆ, ವೀರಂ ಚಿತ್ರಗಳಲ್ಲಿ ತೊಡಗಿಸಿಕೊಂಡಿರೋ ರಚಿತಾ ರಾಮ್, ತೆಲುಗಿನತ್ತಲೂ ಕಾಲಿಟ್ಟಿದ್ದಾರೆ. ಇದರ ಜೊತೆಯಲ್ಲೇ ಒಪ್ಪಿಕೊಂಡಿರೋ ಚಿತ್ರ ಡಾಲಿ.

  ಇದು ಡಾಲಿ ಧನಂಜಯ್ ಅಭಿನಯದ ಸಿನಿಮಾ. ಪ್ರಭು ಶ್ರೀನಿವಾಸ್ ನಿರ್ದೇಶನದ ಚಿತ್ರ ಡಾಲಿ. ಡಿಸೆಂಬರ್‌ನಲ್ಲಿ ಸಿನಿಮಾ ಸೆಟ್ಟೇರುತ್ತಿದೆ. ಧನಂಜಯ್ ಮತ್ತು ರಚಿತಾ ರಾಮ್ ಜೋಡಿ ಹೇಗಿರಲಿದೆ..? ಜಸ್ಟ್ ವೇಯ್ಟ್.

 • ಡಾಲಿಗೆ ಬುಲ್‍ಬುಲ್ ಜೋಡಿ

  rachita to star opposite dhananjay

  ಟಗರು ನಂತರ ಡಾಲಿ ಎಂದೇ ಫೇಮಸ್ ಆಗಿರೋ ಧನಂಜಯ್. ಕನ್ನಡಿಗರ ಪಾಲಿಗೆ ಬುಲ್‍ಬುಲ್, ಡಿಂಪಲ್ ಕ್ವೀನ್ ಆಗಿರೋ ರಚಿತಾ ರಾಮ್. ಇವರಿಬ್ಬರನ್ನೂ ಒಟ್ಟಿಗೇ ನೋಡಿ ಸಂಭ್ರಮಿಸುವ ಸಮಯ ಹತ್ತಿರವಾಗಿದೆ. ಅದು ಡಾಲಿ ಚಿತ್ರದಲ್ಲಿ.

  ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಡಾಲಿ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ರಚಿತಾ ರಾಮ್ ಈ ಚಿತ್ರಕ್ಕೆ ಹೀರೋಯಿನ್ ಆಗುವ ಸಾಧ್ಯತೆ ಇದೆ. ಈಗಾಗಲೇ ಮಾತುಕತೆ ಮುಗಿದಿದ್ದು ಫೈನಲ್ ಹಂತದಲ್ಲಿದೆಯಂತೆ. 

  ಇತ್ತ ರಚಿತಾ ಆಯುಷ್ಮಾನ್ ಭವ, 100, ಏಕ್‍ಲವ್ ಯಾ ಚಿತ್ರಗಳಲ್ಲಿ ಬ್ಯುಸಿಯಿದ್ದರೆ, ಧನಂಜಯ್ ಪಾಪ್‍ಕಾರ್ನ್ ಮಂಕಿ ಟೈಗರ್, ಯುವರತ್ನ, ಪೊಗರು, ಸಲಗ ಚಿತ್ರಗಳಲ್ಲಿ ಬ್ಯುಸಿ. 

  ಪ್ರಭು ಶ್ರೀನಿವಾಸ್ ನಿರ್ದೇಶನದ ಡಾಲಿಯಲ್ಲಿ ಧನಂಜಯ್‍ಗೆ ಎರಡು ಶೇಡ್‍ನ ಪಾತ್ರವಿದೆಯಂತೆ.

 • ಡಿಂಪಲ್ ಕ್ವೀನ್ ಈಗ ಬೆಂಝ್ ಕ್ವೀನ್

  rachita ram buys mercedes benzs

  ಒಂದು ಕಡೆ ಒಂದರ ಹಿಂದೊAದು ಹಿಟ್.. ಮತ್ತೊಂದೆಡೆ ತೆಲುಗು ಚಿತ್ರರಂಗದ ಬಂಪರ್ ಆಫರ್.. ಮಗದೊಂದು ಕಡೆ ಅಕ್ಕನ ಮದುವೆ.. ಹೀಗೆ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ರಚಿತಾ ರಾಮ್, ಈಗ ಮರ್ಸಿಡಿಸ್ ಬೆಂಝ್ ಕಾರಿನ ಒಡತಿ.

  ಮರ್ಸಿಡಿಸ್ ಬೆಂಝ್ ಕಾರು ಖರೀದಿಸಬೇಕು ಎನ್ನುವುದು ರಚಿತಾ ರಾಮ್ ಕನಸಾಗಿತ್ತಂತೆ. ಆ ಕನಸನ್ನು ಈಗ ಈಡೇರಿಸಿಕೊಂಡಿದ್ದಾರೆ ರಚಿತಾ. ೯೦ ಲಕ್ಷ ರೂ. ಮೌಲ್ಯದ ಬೆಂಝ್ ಕಾರಿನಲ್ಲಿಯೇ ಅಕ್ಕನ ಮದುವೆಯಲ್ಲಿ ಮಹಾರಾಣಿಯಾಗಿ ಕಂಗೊಳಸಲಿದ್ದಾರೆ ರಚಿತಾ.

 • ಡಿಂಪಲ್ ಕ್ವೀನ್ ಜೊತೆ ರಮೇಶ್ 100 

  ramesh aravind's next movie titled 100

  ರಮೇಶ್ ಮತ್ತು ರಚಿತಾ ರಾಮ್ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ. ಪುಷ್ಪಕ ವಿಮಾನ ಚಿತ್ರದ ನಂತರ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಗೊತ್ತಿದೆಯಷ್ಟೇ. ಈಗ ಆ ಚಿತ್ರದ ಟೈಟಲ್ ಹೊರಬಿದ್ದಿದೆ. ಚಿತ್ರದ ಟೈಟಲ್ 100.

  ಈ ಚಿತ್ರದಲ್ಲಿಯೂ ರಮೇಶ್ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರವಂತೆ. ರಚಿತಾ ರಾಮ್ ಅವರಷ್ಟೆ ಅಲ್ಲದೆ, ಜೋಶ್ ಖ್ಯಾತಿಯ ಪೂರ್ಣ ಇನ್ನೊಬ್ಬ ನಾಯಕಿಯಂತೆ. ನಾಯಕ ನಟನಾಗಿ ಅಷ್ಟೇ ಅಲ್ಲದೆ, ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ರಮೇಶ್ ಅರವಿಂದ್, ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದ್ದಾರೆ.

 • ಡಿಂಪಲ್ ಕ್ವೀನ್ ಪಂಕಜ ಕಸ್ತೂರಿ ಆಗ್ತಾರಾ..?

  rachita ram image

  ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಕೋಕಿಲ ಆಗೋಕೆ ರೆಡಿಯಾಗುತ್ತಿದ್ದಾರೆ. ಕನ್ನಡದಲ್ಲೀಗ ಕೊಲಮಾವು ಕೋಕಿಲ ಚಿತ್ರದ ರೀಮೇಕ್ ನಡೆಯುತ್ತಿದ್ದು, ರಚಿತಾ ರಾಮ್ ನಾಯಕಿಯಾಗುತ್ತಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಕೊಲಮಾವು ಕೋಕಿಲ, ಡ್ರಗ್ಸ್ ಜಾಲ, ಅದರೊಳಗೇ ಇದ್ದು ತಪ್ಪಿಸಿಕೊಳ್ಳಲು ಬಯಸುವ ನಾಯಕಿ, ಕಳ್ಳ-ಪೊಲೀಸ್ ಆಟದ ರೋಚಕ ಕಥಾ ಹಂದರ ಹೊಂದಿತ್ತು. ಈಗ ಆ ಕಥೆ ಕನ್ನಡದಲ್ಲಿ ಸಿನಿಮಾ ಆಗುತ್ತಿದೆ. ಅಲ್ಲಿ ನಯನತಾರಾ ಹೀರೋಯಿನ್ ಆಗಿದ್ದರು.

  you_tube_chitraloka1.gif

  ಕನ್ನಡ್ ಗೊತ್ತಿಲ್ಲ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ, ಈ ಚಿತ್ರಕ್ಕೆ ನಿರ್ದೇಶಕ. ಕನ್ನಡದಲ್ಲಿ ಅತೀ ಹೆಚ್ಚು ಬ್ಯುಸಿ ಇರುವ ರಚಿತಾ ರಾಮ್, ಈಗ ತೆಲುಗಿನಲ್ಲೂ ಕಾಲಿಟ್ಟಿದ್ದಾರೆ. ಸೂಪರ್ ಮಚ್ಚಿ ಚಿತ್ರದ ಚಿತ್ರೀಕರಣ ಮುಗಿಸಿರೋ ರಚಿತಾ, ಕನ್ನಡದಲ್ಲಿ ಐ ಲವ್ ಯೂ, ಏಪ್ರಿಲ್, ವೀರಂ, ಲಿಲ್ಲಿ.. ಹೀಗೆ ಸಾಲು ಸಾಲು ಚಿತ್ರಗಳಿಗೆ ಯೆಸ್ ಎಂದಿದ್ದಾರೆ. ಅಕ್ಟೋಬರ್‍ನಲ್ಲಿ ಸಿನಿಮಾ ಶುರುವಾಗಲಿದೆ.

  ಕನ್ನಡದಲ್ಲಿ ಚಿತ್ರಕ್ಕೆ ಪಂಕಜ ಕಸ್ತೂರಿ ಅನ್ನೋ ಟೈಟಲ್ ಫೈನಲ್ ಆಗುವ ಸಾಧ್ಯತೆ ಇದೆ. ಚಿತ್ರದ ಸ್ಕ್ರಿಪ್ಟ್‍ನ್ನು ಘಾಟಿ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸಿ ಆಶೀರ್ವಾದ ಪಡೆದಿದ್ದಾರೆ ಮಯೂರ ರಾಘವೇಂದ್ರ.

 • ಡಿಂಪಲ್ ಕ್ವೀನ್ ಸೂಪರ್ ಮಚ್ಚಿ

  dimple queen's telugu movie journey begins

  ಅಕ್ಕನ ಮದುವೆ ಮುಗಿಸಿದ್ದೇ ತಡ, ಡಿಂಪಲ್ ಕ್ವೀನ್ ಹೈದರಾಬಾದ್ ಸೇರಿಕೊಂಡಿದ್ದಾರೆ. ಸೂಪರ್ ಮಚ್ಚಿ ಎನ್ನುತ್ತಿದ್ದಾರೆ. ಯೆಸ್.. ಈಗ ರಚಿತಾ ರಾಮ್ ಟಾಲಿವುಡ್ನ ಸೂಪರ್ ಮಚ್ಚಿ ಚಿತ್ರದ ಶೂಟಿಂಗ್ನಲ್ಲಿದ್ದಾರೆ.

  ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ಹೀರೋ ಆಗಿರುವ ಸಿನಿಮಾ ಸೂಪರ್ ಮಚ್ಚಿ. ಐ ಲವ್ ಯೂ ಚಿತ್ರದ ತೆಲುಗು ವರ್ಷನ್ ಮೂಲಕ ತೆಲುಗರಿಗೆ ಪರಿಚಿತರಾಗಿದ್ದ ರಚಿತಾ, ಈಗ ತೆಲುಗು ಸಿನಿಮಾದಲ್ಲೇ ನಾಯಕಿ. ಸೂಪರ್ ಮಚ್ಚಿಗೆ ಪುಲಿ ವಾಸಿ ನಿರ್ದೇಶಕ. ಕಲ್ಯಾಣ್ ದೇವ್ಗೆ ಇದು 2ನೇ ಸಿನಿಮಾ

 • ಡಿಂಪಲ್ ಕ್ವೀನ್ ಹಿಂದೆ ಉಪ್ಪಿ ಅಲೆದಾಟ

  i love you film lyrical video released

  ಎ ಚಿತ್ರದಲ್ಲಿ ಚಾಂದಿನಿ ಹಿಂದೆ, ಪ್ರೀತ್ಸೆ ಚಿತ್ರದಲ್ಲಿ ಸೋನಾಲಿ ಬೇಂದ್ರೆ ಹಿಂದೆ, ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್, ದಾಮಿನಿ, ಪ್ರೇಮಾ ಹಿಂದೆ ಪ್ರೀತಿಗಾಗಿ ಅಲೆದಾಡಿದ್ದ ಉಪ್ಪಿ, ಈಗ ರಚಿತಾ ರಾಮ್ ಬೆನ್ನು ಬಿದ್ದಿದ್ದಾರೆ. ಪ್ರೀತ್ಸೆ ಪ್ರೀತ್ಸೆ ಎನ್ನುತ್ತಿದ್ದಾರೆ. ಐ ಲವ್ ಯೂ ಎನ್ನುತ್ತಿದ್ದಾರೆ. ಐ ಲವ್ ಯೂ ಚಿತ್ರದಲ್ಲಿ.

  ಐ ಲವ್ ಯೂ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ.. ಎಂದು ಶುರುವಾಗುವ ಹಾಡು, ಪ್ರೇಕ್ಷಕರನ್ನು ಥ್ರಿಲ್ಲಾಗಿಸಿದೆ. ಆರ್. ಚಂದ್ರು ಕಥೆ, ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಐ ಲವ್ ಯೂ. ಆರ್ಯ ದಕ್ಷಿಣ್ ಸಂಗೀತ ಸಂಯೋಜನೆಯ ಹಾಡನ್ನು ಸುಚಿತ್ ಸುರೇಶ್ ಹಾಡಿದ್ದಾರೆ.

 • ಡಿಂಪಲ್ ಕ್ವೀನ್..ಓನ್ಲಿ ಫಾರ್ ಸ್ಟಾರ್ ಹೀರೋಸ್

  rachitha ram

  ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್. ಬುಲ್‍ಬುಲ್ ರಚಿತಾ ಎಂದೇ ಕರೆಸಿಕೊಳ್ಳುವ ಬೆಡಗಿ ರಚಿತಾ. ಅವರ ಇನ್ನೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ರಚಿತಾ ರಾಮ್ ನಟಿಸುವುದು ಸ್ಟಾರ್‍ಗಳ ಜೊತೆ ಮಾತ್ರಾನಾ..? ಇದು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ.

  ರಚಿತಾ ರಾಮ್ ಚಿತ್ರರಂಗ ಪ್ರವೇಶಿಸಿದ್ದು 2013ರಲ್ಲಿ. ಅದೂ ಚಾಲೆಂಜಿಂಗ್ ಸ್ಟಾರ್ ಜೊತೆ, ಬುಲ್ ಬುಲ್ ಚಿತ್ರದ ಮೂಲಕ. ಆ ಚಿತ್ರದಿಂದಲೇ ರಚಿತಾರಾಮ್ ಬುಲ್‍ಬುಲ್ ರಚಿತಾ ಎಂದು ಗುರುತಿಸಿಕೊಂಡರು. ಈ ನಾಲ್ಕು ವರ್ಷಗಳಲ್ಲಿ ಅವರು ನಟಿಸಿರುವುದು 8 ಚಿತ್ರಗಳಲ್ಲಿಮಾತ್ರ. ಮತ್ತು ಎಲ್ಲವೂ ಸ್ಟಾರ್ ಚಿತ್ರಗಳು.

  ನೀವೇ ನೋಡಿ. ದರ್ಶನ್ ಜೊತೆ ಎರಡು ಚಿತ್ರ (ಬುಲ್‍ಬುಲ್, ಅಂಬರೀಷ), ಪುನೀತ್ ರಾಜ್‍ಕುಮಾರ್(ಚಕ್ರವ್ಯೂಹ), ಸುದೀಪ್(ರನ್ನ), ಶ್ರೀಮುರಳಿ(ರಥಾವರ),ದಿಲ್ ರಂಗೀಲಾ(ಗಣೇಶ್),ಪುಷ್ಪಕವಿಮಾನ(ರಮೇಶ್ ಅರವಿಂದ್), ಭರ್ಜರಿ(ಧ್ರುವ ಸರ್ಜಾ), ಉಪ್ಪಿರುಪ್ಪಿ(ಉಪೇಂದ್ರ).. ಹೀಗೆ ನಟಿಸಿರುವ ಮತ್ತು ನಟಿಸುತ್ತಿರುವ ಚಿತ್ರಗಳೆಲ್ಲ ಸ್ಟಾರ್ ಚಿತ್ರಗಳೇ. 

  ಇನ್ನು ಅತಿಥಿ ನಟಿಯಾಗಿ ಕಾಣಿಸಿಕೊಂಡ ಜಗ್ಗುದಾದ, ಮುಕುಂದ ಮುರಾರಿ ಚಿತ್ರಗಳೂ ಕೂಡಾ ಸ್ಟಾರ್ ಹೀರೋಗಳಿದ್ದ ಚಿತ್ರಗಳೇ. ಹೀಗಾಗಿಯೇ ರಚಿತಾ ರಾಮ್ ಓನ್ಲಿ ಫಾರ್ ಸ್ಟಾರ್ ಹೀರೋಸ್ ಎನ್ನುತ್ತಿರುವುದು. ಚಿತ್ರರಂಗಕ್ಕೆ ಬಂದು 4 ವರ್ಷ ಕಳೆದು, 8 ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದರೂ, ಅವುಗಳಲ್ಲಿ ಒಂದೇ ಒಂದು ಹೊಸಬರ ಚಿತ್ರವಿಲ್ಲ ಎನ್ನುವುದೇ ಇದಕ್ಕೆ ಕಾರಣ.

 • ಡಿಂಪಲ್ ಕ್ವೀನ್‍ಗೆ ಕಣ್ಣು ಕಾಣಲ್ಲ..!

  dimple queen tp play role of visually challenged

  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ನಾಗಶೇಖರ್ ಸಿನಿಮಾ. ಸಂಜಯ್ ಅಲಿಯಾಸ್ ಸಂಜು ಚಿತ್ರಕ್ಕೆ ರಚಿತಾ ಹೀರೋಯಿನ್. ರಚಿತಾ ರಾಮ್ ಟೀಂಗೆ ಬಂದಿರೋದನ್ನ ಸ್ಪಷ್ಟಪಡಿಸಿದ್ದಾರೆ ನಾಗಶೇಖರ್. ಸದ್ಯಕ್ಕೆ ನಾಗಶೇಖರ್ ಮೈನಾ ಚಿತ್ರದ ಹಿಂದಿ ವರ್ಷನ್‍ನಲ್ಲಿ ಬ್ಯುಸಿ.

  ಅಂದಹಾಗೆ ಇದು ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್ ಅಲ್ಲ. ಇದು ಮನ ಮಿಡಿಯುವ ಪ್ರೇಮಕಥೆ. ಚಿತ್ರದಲ್ಲಿ ರಚಿತಾ ರಾಮ್ ವಿಕಲಚೇತನಳ ಪಾತ್ರ ಮಾಡುತ್ತಿದ್ದಾರೆ. ಅಂದರೆ ಅಂಧಳ ಪಾತ್ರ ಎಂದಿದ್ದಾರೆ ನಾಗಶೇಖರ್. ಸಿನಿಮಾ ವರ್ಷದ ಕೊನೆಗೆ ಶುರುವಾಗಲಿದೆ.

 • ಡಿಂಪಲ್ ಸ್ಥಾನಕ್ಕೆ ಶಾನ್ವಿ..!

  Shanvi Replaces Rachita Ram In 'Kasturi Mahal'

  ರಚಿತಾ ರಾಮ್ ಮೊದಲು ಒಪ್ಪಿಕೊಂಡು ನಂತರ ನೋ ಎಂದಿದ್ದ ಸಿನಿಮಾ ಕಸ್ತೂರಿ ಮಹಲ್. ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್ ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

  ಇದು ದಿನೇಶ್ ಬಾಬು ಚಿತ್ರ. ಕಥೆಯೂ ಚೆನ್ನಾಗಿದೆ. ಅವರ ಚಿತ್ರಗಳಲ್ಲಿ ಪಾತ್ರಗಳಿಗೆ ಒಳ್ಳೆಯ ಸ್ಕೋಪ್ ಇರುತ್ತೆ. ದಿನೇಶ್ ಬಾಬು ಚಿತ್ರಗಳಲ್ಲಿ ಅವಕಾಶ ಸಿಗುವುದೇ ಹೆಮ್ಮೆಯ ವಿಷಯ. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ಶಾನ್ವಿ.

  ಚಿತ್ರದಲ್ಲಿ 300 ವರ್ಷಗಳಷ್ಟು ಹಳೆಯ ಕಥೆ ಹೇಳುತ್ತಿದ್ದು, ಇಡೀ ಚಿತ್ರದ ಕಥೆ ನನ್ನ ಸುತ್ತವೇ ಸುತ್ತಲಿದೆ. ಎಕ್ಸೈಟಿಂಗ್ ಆಗಿದ್ದೇನೆ ಎಂದಿರೋ ಶಾನ್ವಿ, ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ.

 • ಡಿಂಪಿ ಸೆನ್ಸೇಷನ್ : 100 ರಿಲೀಸ್.. ಎಣ್ಣೆ ಸಾಂಗ್ ಹಿಟ್.. ಮುದ್ದು ಸಾಂಗೂ ಹಿಟ್..

  ಡಿಂಪಿ ಸೆನ್ಸೇಷನ್ : 100 ರಿಲೀಸ್.. ಎಣ್ಣೆ ಸಾಂಗ್ ಹಿಟ್.. ಮುದ್ದು ಸಾಂಗೂ ಹಿಟ್..

  ಈ ವಾರದ ಸೆನ್ಸೇಷನಲ್ ಸ್ಟಾರ್ ರಚಿತಾ ರಾಮ್. ಒಂದು ಕಡೆ ರಚಿತಾ ರಾಮ್ ಮತ್ತು ರಮೇಶ್ ಅರವಿಂದ್ ಕಾಂಬಿನೇಷನ್ನಿನ 100 ಸಿನಿಮಾ ಥ್ರಿಲ್ಲರ್ ಸೆನ್ಸೇಷನ್ ಸೃಷ್ಟಿಸಿದೆ. ಇದೇ ವಾರ ರಿಲೀಸ್ ಆಗುತ್ತಿದೆ. ರಮೇಶ್ ಅವರೇ ಡೈರೆಕ್ಟ್ ಮಾಡಿರೋ ಸಿನಿಮಾ ಆಗಿರೋ ಕಾರಣ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿರೋದು ಸೈಬರ್ ಕ್ರೈಂ ಸ್ಟೋರಿ.

  ಅದೇ ಖುಷಿಯಲ್ಲಿರೋ ರಚಿತಾಗೆ ಇನ್ನೊಂದು ಕಿಕ್ ಕೊಟ್ಟಿರೋದು ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಎಣ್ಣೆ ಸಾಂಗ್. ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ ಹಾಡು.. ಈ ಹಾಡು ರೆಕಾರ್ಡ್ ಬರೆದಿದ್ದು 30 ಲಕ್ಷಕ್ಕೂ ಹೆಚ್ಚು ಜನ ಹಾಡನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ.

  ಮತ್ತೊಂದು ರಚಿತಾ ರಾಮ್ ಅವರೇ ಕೊಟ್ಟಿರೋ ಕಿಕ್ಕು. ಸಖತ್ ಬೋಲ್ಡ್ ಆಗಿ ನಟಿಸಿದ್ದ ಲವ್ ಯೂ ರಚ್ಚು ಚಿತ್ರದ ಮುದ್ದು ನೀನು ಹಾಡು ಕೂಡಾ 20 ಲಕ್ಷಕ್ಕೂ ಹಿಟ್ಸ್ ಪಡೆದಿದೆ.

  ಒಟ್ಟಿನಲ್ಲಿ ಒಂದೆಡೆ ಥ್ರಿಲ್ ಕೊಡೋಕೆ ಬರುತ್ತಿರೋ ರಚಿತಾ.. ಇನ್ನೊಂದ್ ಕಡೆ ಕಿಕ್ ಹತ್ತಿಸಿಕೊಂಡಿದ್ದಾರೆ. ಮತ್ತೊಂದ್ ಕಡೆ ಕಿಕ್ ಹೆಚ್ಚಿಸುತ್ತಿದ್ದಾರೆ. ಟೋಟ್ಟಲ್ಲಿ.. ಸೆನ್ಸೇಷನ್.

 • ತಮಿಳಿಗೆ ಐ ಲವ್ ಯೂ, ಉಪ್ಪಿ ಪಾತ್ರದಲ್ಲಿ ವಿಜಯ್ ಸೇತುಪತಿನಾ..? ಕಾರ್ತಿನಾ..?

  i kove you in tamil

  ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಿ ದೂಳೆಬ್ಬಿಸುತ್ತಿರುವ ಚಿತ್ರ ಐ ಲವ್ ಯೂ. ಆರ್.ಚಂದ್ರು ನಿರ್ದೇಶನದ ಸಿನಿಮಾ ಹೌಸ್‍ಫುಲ್ ಆಗಿ ಮುನ್ನುಗ್ಗುತ್ತಿರುವಾಗಲೇ, ಚಿತ್ರಕ್ಕೆ ಕಾಲಿವುಡ್‍ನಿಂದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೆಂಗಳೂರಿಗೆ ಬಂದು ಸಿನಿಮಾ ನೋಡಿದ ನಿರ್ಮಾಪಕ ಸಂಜಯ್ ಕಾಲ್ವಾನಿ, ತಮಿಳಿನಲ್ಲಿ ಡೈರೆಕ್ಷನ್ ಮಾಡುವಂತೆ ಆರ್.ಚಂದ್ರುಗೆ ಆಫರ್ ಕೊಟ್ಟಿದ್ದಾರೆ. ಅಡ್ವಾನ್ಸ್‍ನ್ನೂ ಕೊಟ್ಟಿದ್ದಾರೆ.

  ಹೌದು, ಚಿತ್ರವನ್ನು ತಮಿಳಿನಲ್ಲಿ ಮಾಡುತ್ತಿರುವುದು ನಿಜ. ನಾನೇ ಅಲ್ಲಿಯೂ ನಿರ್ದೇಶಕ. ಅಡ್ವಾನ್ಸ್ ಕೂಡಾ ಕೊಟ್ಟಿದ್ದಾರೆ ಎಂದಿರುವ ಚಂದ್ರು, ತಮಿಳಿನ ನೇಟಿವಿಟಿಗೆ ತಕ್ಕಂತೆ ಸ್ಕ್ರಿಪ್ಟ್‍ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಿದ್ದಾರಂತೆ. ಉಪೇಂದ್ರ ಅವರ ಪಾತ್ರದಲ್ಲಿ ವಿಜಯ್ ಸೇತುಪತಿ ಅಥವಾ ಕಾರ್ತಿ ನಟಿಸಬಹುದು ಎಂಬ ಸುದ್ದಿಯಿದೆ.

  ಈಗಾಗಲೇ ತೆಲುಗಿನಲ್ಲಿ ಕೃಷ್ಣಮ್ಮ ಕಲಿಪಿ ಇದ್ದರೇನಿ ಚಿತ್ರ ನಿರ್ದೇಶಿಸಿರುವ ಚಂದ್ರು, ಐ ಲವ್ ಯೂ ಮೂಲಕ ತಮಿಳಿಗೂ ಕಾಲಿಡಲಿದ್ದಾರೆ. ಉಪೇಂದ್ರ, ರಚಿತಾರಾಮ್, ಸೋನುಗೌಡ ಅಭಿನಯದ ಐ ಲವ್ ಯೂ ಸಿನಿಮಾ, ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಚಿತ್ರದ ಯಶಸ್ಸಿಗೆ ಕಾರಣ

 • ತಮ್ಮನ ಚಿತ್ರಕ್ಕೆ ಕೊಡವರ ಗೀತೆಗೆ ದಚ್ಚು ಡ್ಯಾನ್ಸ್

  darshan rachita's kodava song released

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಡವನಾಗಿದ್ದಾರೆ. ಕೊಡವರೆಂದರೆ, ತಕ್ಷಣ ನೆನಪಾಗುವುದು ಜನರಲ್ ಕಾರಿಯಪ್ಪ, ತಿಮ್ಮಯ್ಯ. ಸಿನಿಮಾದಲ್ಲಿ ಕೊಡವರೆಂದರೆ ತಕ್ಷಣ ನೆನಪಾಗೋದು ಮುತ್ತಿನ ಹಾರ. ಕೊಡವರ ವೀರ.. ಹುಲಿ ಕೊಂದ ಧೀರ ಹಾಡು. ಈ ಬಾರಿ ಕೊಡವನಾಗಿ ಮುಂದೆ ಬಂದಿದ್ದಾರೆ ದರ್ಶನ್. ತಮ್ಮ ಅಮರ್ ಚಿತ್ರಕ್ಕಾಗಿ ದರ್ಶನ್ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.

  ಜೋರು ಪಾರು ಆಟ ಆಡೋಣ.. ಎಂಬ ಹಾಡು, ಸಂಪೂರ್ಣ ಕೊಡವ ಭಾಷೆಯಲ್ಲೇ ಇರುವುದು ವಿಶೇಷ. ಕಿರಣ್ ಕಾವೇರಪ್ಪ ಬರೆದಿರೋ ಹಾಡಿಗೆ ಧ್ವನಿ ನೀಡಿರುವುದು ಜೆಸ್ಸಿ ಗಿಫ್ಟ್. ಅರ್ಜುನ್ ಜನ್ಯ ಸಂಗೀತದ ಹಾಡು ಅದ್ಭುತವಾಗಿದೆ ಅನ್ನೋದು ನಿರ್ದೇಶಕ ನಾಗಶೇಖರ್ ಸರ್ಟಿಫಿಕೇಟ್. ನಾಗಶೇಖರ್ ನಿರ್ದೇಶನದ ಚಿತ್ರಗಳಲ್ಲಿ ಹಾಡು ಕೇಳುವಂತಿರುತ್ತವೆ ಹಾಗೂ ಕಣ್ಣು ಮಿಸುಕದೆ ನೋಡುವಂತಿರುತ್ತವೆ. ಹೀಗಾಗಿ ಹಾಡು ಹೇಗೆ ಬಂದಿರಬಹುದು ಅನ್ನೋ ಕುತೂಹಲ ಕನ್ನಡಿಗರಿಗೂ ಇದೆ.

 • ತಮ್ಮನಿಗಾಗಿ.. ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಟಪ್ಪಾಂಗುಚ್ಚಿ

  rakshitha to dance with rachita in ek love ya

  ರಕ್ಷಿತಾ ಪ್ರೇಮ್ ಮದುವೆಯ ನಂತರ ಬೆಳ್ಳಿತೆರೆಯಿಂದ ದೂರವೇ ಉಳಿದುಬಿಟ್ಟಿದ್ದಾರೆ. 2007ರಲ್ಲಿ ರಿಲೀಸ್ ಆದ ತಾಯಿಯ ಮಡಿಲು ಚಿತ್ರವೇ ಕೊನೆ. ಅದಾದ ನಂತರ ರಕ್ಷಿತಾ ಬಣ್ಣ ಹಚ್ಚಿಲ್ಲ. ಈಗ ಮತ್ತೆ ಬರುತ್ತಿದ್ದಾರೆ. ಅದೂ ಡಿಂಪಲ್ ಕ್ವೀನ್ ಜೊತೆ.

  ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಅವರ ಸೋದರ ರಾಣಾ ಹೀರೋ. ಆ ಚಿತ್ರದಲ್ಲಿ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ರಕ್ಷಿತಾ, ರಚಿತಾ ಜೊತೆ ಹೆಜ್ಜೆ ಹಾಕಲಿದ್ದಾರೆ.

  ಅಂದಹಾಗೆ ಇದು ಲವ್ ಫೇಲ್ಯೂರ್ ಸಾಂಗ್. ಅದೂ ಹುಡುಗರದ್ದಲ್ಲ. ಹುಡುಗೀರದ್ದು. ಹುಡುಗೀರು ಕುಡ್ಕೊಂಡ್ ಲವ್ ಫೇಲ್ಯೂರ್ ಸಾಂಗ್ ಹಾಡಿದ್ರೆ ಹೆಂಗಿರುತ್ತೆ.. ಅನ್ನೋ ಹುಳ ಬಿಟ್ಟೇ ಹಾಡಿಗೆ ರೆಡಿಯಾಗಿದ್ದಾರೆ ಪ್ರೇಮ್. ಗೆಟ್ ರೆಡಿ ಟು.. ಎಣ್ಣೆಗೂ.. ಹೆಣ್ಣಿಗೂ.. ಎಲ್ಲಿಂದ ಲಿಂಕಿದೆ ಭಗವಂತಾ..

 • ತೆಲುಗಿಗೆ ಹೊರಟು ನಿಂತ ಬುಲ್ಬುಲ್ ರಚಿತಾ

  rachitha ready to act in tollywood

  ರಚಿತಾ ರಾಮ್, ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಬುಲ್ ಬುಲ್ ಚಿತ್ರದಿಂದ ಎಂಟ್ರಿ ಕೊಟ್ಟ ರಚಿತಾ, ಈಗಾಗಲೇ ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ ಸೇರಿದಂತೆ ಹಲವು ಟಾಪ್ ನಟರ ಜೊತೆ ನಟಿಸಿದ್ದಾರೆ.

  ಈಗ ಈ ಕನ್ನಡದ ಡಿಂಪಲ್ ಕ್ವೀನ್, ತೆಲುಗಿಗೆ ಹೊರಟಿದ್ದಾರಂತೆ. ಅದಕ್ಕೆಂದೇ ವಿಶೇಷ ಫೋಟೋಶೂಟ್ ಮಾಡಿಸಿರುವ ರಚಿತಾ, ಕೆಲವು ತೆಲುಗು ನಿರ್ಮಾಪಕರಿಂದ ಕಥೆಯನ್ನೂ ಕೇಳಿದ್ದಾರಂತೆ. ಸದ್ಯಕ್ಕೆ ಯಾವುದೂ ಫೈನಲೈಸ್ ಆಗಿಲ್ಲ.ಆದರೆ, ತೆಲುಗಿನಿಂದ ಆಫರ್ ಬಂದಿರುವುದು ನಿಜ ಎಂದಿದ್ದಾರೆ ರಚಿತಾ ರಾಮ್.

  ಕನ್ನಡದಿಂದ ತೆಲುಗಿಗೆ ವಲಸೆ ಹೋದ ನಟಿಯರ ದೊಡ್ಡ ಲಿಸ್ಟೇ ಇದೆ. ಸೌಂದರ್ಯ, ಪ್ರೇಮಾ, ಪ್ರಿಯಾಮಣಿ, ರಕ್ಷಿತಾ ಮೊದಲಾದವರೆಲ್ಲ ತೆಲುಗಿನಲ್ಲೂ ಸ್ಟಾರ್ ಆಗಿ ಮಿಂಚಿದವರು. ಅಂಥದ್ದೇ ಅದೃಷ್ಟ ರಚಿತಾಗೂ ಒಲಿಯುತ್ತಾ..?

 • ತೆಲುಗಿನಲ್ಲಿ ರಚಿತಾ ಚಮಕ್ ಮಾಡ್ತಾರಂತೆ..!

  rachitha ram o act in telugu chamak

  ಗೋಲ್ಡನ್ ಸ್ಟಾರ್ ಗಣೇಶ್, ರಶ್ಮಿಕಾ ಮಂದಣ್ಣ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ಚಮಕ್, ಬಾಕ್ಸಾಫೀಸ್‍ನಲ್ಲೂ ಚಮಕ್ ಮಾಡ್ತಿರೋದು ಗೊತ್ತಿರೋ ವಿಷಯಾನೇ. ತೆಲುಗಿನಲ್ಲೂ ಚಮಕ್ ಮಾಡೋ ಇಂಗಿತ ವ್ಯಕ್ತಪಡಿಸಿದ್ದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಈಗ ತೆಲುಗು ಚಮಕ್‍ನ ಒಂದೊಂದೇ ವಿಷಯವನ್ನು ಹೊರಹಾಕತೊಡಗಿದ್ದಾರೆ.

  ತೆಲುಗಿನಲ್ಲಿ ಮಾಡಲಿರುವ ಚಮಕ್‍ಗೆ ಹೀರೋ ಆಗಿ ನಾನಿ ಆಯ್ಕೆ ಫೈನಲ್ ಹಂತದಲ್ಲಿದೆಯಂತೆ. ಇನ್ನು ರಶ್ಮಿಕಾ ಮಂದಣ್ಣ ಅವರ ಪಾತ್ರವನ್ನು ತೆಲುಗಿನಲ್ಲಿ ರಚಿತಾ ರಾಮ್ ಮಾಡುವ ಸಾಧ್ಯತೆಗಳಿವೆ. ಅಂದಹಾಗೆ ತೆಲುಗಿನಲ್ಲೂ ಕೂಡಾ ಚಂದ್ರಶೇಖರ್ ಅವರೇ ನಿರ್ಮಾಪಕರು.

  ರಚಿತಾ ರಾಮ್, ನಾಯಕಿಯಾಗಿ ನಟಿಸುತ್ತಿರುವ ಅಯೋಗ್ಯ ಚಿತ್ರಕ್ಕೆ ಇದೇ ಚಂದ್ರಶೇಖರ್ ನಿರ್ಮಾಪಕ. ಈ ಜೋಡಿ ತೆಲುಗು ಚಮಕ್‍ನಲ್ಲೂ ಕಂಟಿನ್ಯೂ ಆಗುತ್ತಿದೆ. ಆದರೆ, ಸದ್ಯಕ್ಕೆ ಯಾವುದೂ ಫೈನಲ್ ಅಲ್ಲ. ಅಧಿಕೃತ ಅಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery