` rachita ram - chitraloka.com | Kannada Movie News, Reviews | Image

rachita ram

 • ಐ ಲವ್ ಯೂ ರಿಲೀಸ್ ಹಬ್ಬದ ಸ್ಪೆಷಲ್

  fans planning a festival celebrations for uppi's i love you

  ಐ ಲವ್ ಯೂ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ. ಉಪೇಂದ್ರ ಅಭಿಮಾನಿಗಳಂತೂ ಜೂನ್ 14ನ್ನ ಹಬ್ಬದಂತೆ ಆಚರಿಸಲು ಸಿದ್ಧರಾಗಿದ್ದಾರೆ. 

  ಸಿನಿಮಾ ಜೂನ್ 14ರಂದು ತ್ರಿವೇಣಿ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ. ಅದೇ ಮೇಯ್ನ್ ಥಿಯೇಟರ್. ಅದಕ್ಕೂ ಮುನ್ನ ಜೂನ್ 10ರಂದು ಚಿತ್ರದ ಸ್ಪೆಷಲ್ ಕಟೌಟ್‍ನ್ನು ಮೆರವಣಿಗೆ ಮೂಲಕ ತಂದು ನಿಲ್ಲಿಸಲಿದ್ದಾರೆ. ಆ ದಿನ ಅಣ್ಣಮ್ಮ ದೇವಸ್ಥಾನದಿಂದ ತ್ರಿವೇಣಿ ಚಿತ್ರಮಂದಿರದವರಗೆ ಕಟೌಟ್ ಮೆರವಣಿಗೆ ನಡೆಯಲಿದೆ.

  ಚಿತ್ರದ ಮೊದಲ ಟಿಕೆಟ್‍ನ್ನು ಹರಾಜಿಗಿಡಲಾಗುತ್ತಿದ್ದು, ಟಿಕೆಟ್‍ನ್ನು ಹರಾಜಿನಲ್ಲಿ ಖರೀದಿಸಬಹುದು. ಆ ಹಣವನ್ನು ಅನಾಥಾಶ್ರಮವೊಂದಕ್ಕೆ ನೀಡಲು ನಿರ್ಧರಿಸಲಾಗಿದೆ.

  ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಅಭಿನಯಿಸಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ ಹಾಗೂ ನಿರ್ಮಾಪಕ.

 • ಐ ಲವ್ ಯೂ ಹಾರ್ಟು ನಾನೇ - ಸೋನು ಗೌಡ

  i am the heart of i love you movie

  ಐ ಲವ್ ಯೂ ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್‍ನಲ್ಲಿ ಸೋನು ಗೌಡ ಅವರನ್ನು ನೋಡಿದ ಕಿಚ್ಚ ಸುದೀಪ್, ಏನಿದು ಅಚ್ಚರಿ, ಏನು ಕಥೆ ಎಂದಿದ್ದಾರೆ. ಸೋನುಗೆ ಮೆಚ್ಚುಗೆ ಸಿಕ್ಕಿದೆ. ಆದರೆ, ಚಿತ್ರದ ಮೊದಲ ಟೀಸರ್, ಪೋಸ್ಟರ್, ಟ್ರೇಲರುಗಳಲ್ಲಿ ಸೋನು ಗೌಡ ಇರಲಿಲ್ಲ. ಏಕೆ ಎಂದರೆ, ಅದನ್ನು ನಿರ್ದೇಶಕರು ಹೇಳಿದ್ದರು. ಹಾಗಾಗಿ ನನಗೇನೂ ಬೇಸರವಿಲ್ಲ ಎಂದಿದ್ದಾರೆ ಸೋನು ಗೌಡ.

  ಚಿತ್ರದ ಮುಖ್ಯ ಭೂಮಿಕೆಯಲ್ಲಿರೋದು ಉಪೇಂದ್ರ ಮತ್ತು ರಚಿತಾ ರಾಮ್. ಅವರ ಮೇಲೆಯೇ ಇಡೀ ಕಥೆ ಫೋಕಸ್ ಆಗಿದೆ. ಆದರೆ, ನನ್ನದು ಚಿತ್ರದ ಅತ್ಯಂತ ಪ್ರಮುಖವಾದ ಪಾತ್ರ. ಒಂದು ರೀತಿಯಲ್ಲಿ ನನ್ನದು ಚಿತ್ರದ ಹೃದಯದಂತಾ ಪಾತ್ರ ಎಂಬ ಭರವಸೆ ಸೋನು ಅವರದ್ದು.

  ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ಅತಿ ಹೆಚ್ಚು ನೆನಪಿಸಿಕೊಳ್ಳೋದು ನನ್ನನ್ನೇ ಎಂಬ ಭರವಸೆಯಲ್ಲಿಯೇ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ ಸೋನು ಗೌಡ.

 • ಐ ಲವ್ ಯೂ.. ಉಪ್ಪಿ ಡೈಲಾಗ್‍ನೆಲ್ಲ ಹೇಳಿದ್ದು ರಚಿತಾ..!

  i love you trailer goes viral

  ಎಷ್ಟೇ ಎಷ್ಟೇ ಪ್ರೀತಿಸ್ತೀಯಾ ನೀನು ನನ್ನ.. ತಿಳ್ಕೋ.. ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ್ ಬದ್ನೇಕಾಯಿ..ಇದು ಎ ಚಿತ್ರದಲ್ಲಿ ಉಪ್ಪಿ ಹೇಳುವ ಡೈಲಾಗುಗಳು. ಅದೇ ಉಪ್ಪಿ.. ಡೈರೆಕ್ಟರ್ ಬೇರೆ.. ಚಿತ್ರ ಐ ಲವ್ ಯೂ. ಉಪ್ಪಿಗೆ ಆ ಡೈಲಾಗ್ ಹೇಳೋದು ರಚಿತಾ ರಾಮ್.

  ಪ್ರೇಮ ಕಾಮ ಆ ಭಗವಂತನ ಡ್ರಾಮ.. ಎಂದು ಶುರುವಾಗುವ ಐ ಲವ್ ಯೂ ಟ್ರೇಲರ್, ನೋಡ್ತಾ ನೋಡ್ತಾ ನೋಡುಗರಿಗೆ ಶಾಕ್ ಕೊಡುತ್ತಾ ಹೋಗುತ್ತೆ. ಚಿತ್ರದ ಕಥೆ ಏನು.. ಎಂಬ ಕುತೂಹಲ ಹುಟ್ಟುತ್ತೆ. ಇದು ಉಪ್ಪಿ ಸಿನಿಮಾನೋ.. ಚಂದ್ರು ಸಿನಿಮಾನೋ ಎಂಬ ಪ್ರಶ್ನೆ ಹುಟ್ಟುತ್ತೆ. ರಚಿತಾ ರಾಮ್ ರಗಡ್ ಲುಕ್‍ನಲ್ಲಿ ಬೆಚ್ಚಿಬೀಳಿಸ್ತಾರೆ. ರಗಡ್ ಲುಕ್ ಅಂದ್ರೆ, ಆ ಮಾಸ್ ಡೈಲಾಗ್ಸ್.

  ಇಷ್ಟೆಲ್ಲ ಡೈಲಾಗುಗಳ ನಂತರ ಉಪ್ಪಿ, ರೋಸ್ ತಗೊಂಡ್ ಹೋಗ್ತಾನೆ.. ಐ ಲವ್  ಯೂ ಹೇಳೋಕೆ.. ಯಾರಿಗೆ.. ಏಕೆ.. ಅಲ್ಲಿ ಏನ್ ನಡೆಯುತ್ತೆ.. ರೋಸ್ ತಗೊಂಡ್ ಹೋಗಿ ಐ ಲವ್ ಯೂ ನೇ ಹೇಳ್ತಾನಾ.. ಅಥವಾ..?????

  ಸ್ಟಾಪ್. ಫೆಬ್ರವರಿ 14ಕ್ಕೆ ರಿಲೀಸ್ ಆಗ್ತಿದೆ. ವ್ಯಾಲೆಂಟೈನ್ಸ್ ಡೇಗೆ. ಆ ದಿನ ಉತ್ತರ ಸಿಗುತ್ತೆ.

 • ಓಪನ್ ದ ಬಾಟಲ್.. ಕಿಕ್ಕು ಹೆಚ್ಚಿಸಿದ ನಟಸಾರ್ವಭೌಮ

  powerstar kicks up new year party with open the bottle

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್, ಯೋಗರಾಜ್ ಭಟ್, ವಿಜಯ್ ಪ್ರಕಾಶ್, ಡಿ.ಇಮ್ಮಾನ್.. ಇವ್ರೆಲ್ಲ ಸೇರ್ಕೊಂಡು ಹೊಸ ವರ್ಷದ ಕಿಕ್ಕೇರಿಸಿಬಿಟ್ಟಿದ್ದಾರೆ. ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಹಾಡಿನ ಲಿರಿಕಲ್ ವಿಡಿಯೋ ಹೊರ ಬಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್. ಹಾಡು ಕಿಕ್ಕೇರಿಸುವಂತಿದೆ.

  ಏಳೂವರೆ ತುಟಿ ಒಣಗತೈತೆ ಏನ್ ಮಾಡಣ.. ಹಾಳು ಎಣ್ಣಿ ಚಟ ಬಿಡಬೇಕು.. ಕಮ್ಮಿ ಕುಡ್ಯಣ.. ಎಣ್ಣೆ ಬಿಡೋದಕ್ಕೆ ಇಟ್ಟಿರೋ ಪಾರ್ಟಿ ಇದು.. ಫ್ರೆಂಡ್ಸೆಲ್ಲ ಕೈ ಹಾಕ್ರಿ.. ಜೋಡಿಸ್ರೋ ಟೇಬಲ್.. ಓಪನ್ ದ ಬಾಟಲ್.. ಎಂದು ಶುರುವಾಗುವ ಹಾಡಿನಲ್ಲಿ ಮೈಮರೆತು ಕುಣಿಯೋಕೆ ಬೇಕಾದ ಎಲ್ಲ ಸರಕುಗಳೂ ಇವೆ.

  ಹಾಡು ಕೇಳೋಕಷ್ಟೇ ಅಲ್ಲ, ನೋಡೋಕೂ ಮಜವಾಗಿದೆ. ಪುನೀತ್ ಚಿಂದಿಯಾಗಿ ಕುಣಿದಿದ್ದಾರೆ. ಅವರು ಇದುವರೆಗೂ ಅಂತಹ ಸ್ಟೆಪ್ಪುಗಳನ್ನು ಹಾಕಿಯೇ ಇಲ್ಲ. ವಿಡಿಯೋನೂ ಬಿಡ್ತೇವೆ ನೋಡ್ತಾ ಇರಿ ಎಂದು ಆಸೆಯ ಕಿಕ್ಕು ಕೊಟ್ಟಿದ್ದಾರೆ ಪವನ್ ಒಡೆಯರ್.

 • ಕಥೆಯ ಗುಟ್ಟು ಬಿಡಲಿಲ್ಲ ಆಯುಷ್ಮಾನ್ ಭವ ಟ್ರೇಲರ್

  ayushmanbhava trailer out

  ಶಿವರಾಜ್ ಕುಮಾರ್, ರಚಿತಾ ರಾಮ್, ಅನಂತ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಅಭಿನಯದ ಆಯುಷ್ಮಾನ್ ಭವ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್. ರಾಜ್ಯೋತ್ಸವಕ್ಕೆ ಪ್ರೇಕ್ಷಕ ಪ್ರಭುಗಳ ಮಂದೆ ಬರ್ತಿರೋ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಆದರೆ, ಟ್ರೇಲರ್ ಎಷ್ಟು ಸಸ್ಪೆನ್ಸ್ ತುಂಬಿಕೊಂಡಿದೆಯೆಂದರೆ ಕಥೆಯ ಎಳೆ ಹೀಗಿರಬಹುದಾ ಎಂಬ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

  ನಿರ್ದೇಶಕ ಪಿ.ವಾಸು ಮತ್ತೊಮ್ಮೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ ಸೈಕಲಾಜಿಕಲ್ ಕಥೆ ಇದೆಯಾ..? ಟ್ರೇಲರ್ ಏನೆಂದರೆ ಏನೂ ಗುಟ್ಟು ಬಿಟ್ಟುಕೊಡಲ್ಲ. ಒಂದು ತುಂಬು ಸಂಸಾರ, ಅಲ್ಲೇನೋ ಒಂದು ನಿಗೂಢತೆ ಇದೆ. ಟ್ರೇಲರ್ ಹೇಳುವುದು ಇಷ್ಟೆ. ಉಳಿದಂತೆ ಒಂದೊಂದೇ ಸೀನ್‍ನಲ್ಲಿ ಎಲ್ಲರೂ ಕುತೂಹಲ ಹುಟ್ಟಿಸುತ್ತಾರೆ.

  ದ್ವಾರಕೀಶ್ ಬ್ಯಾನರ್‍ನ 52ನೇ ಸಿನಿಮಾ, ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಸಿನಿಮಾ ಅಯುಷ್ಮಾನ್ ಭವ. ಶಿವಣ್ಣ ಚಿತ್ರದ ಮ್ಯೂಸಿಷಿಯನ್ ಆಗಿದ್ದಾರಾ..? ಊಹೂಂ.. ಅದೂ ಗೊತ್ತಾಗಲ್ಲ. ಕಾಯಬೇಕಷ್ಟೆ..

 • ಕನಕ ಚಿತ್ರದ ರಚಿತಾ ರಾಮ್ ಸ್ಥಾನಕ್ಕೆ ಹರಿಪ್ರಿಯಾ

  haripriya in kanaka

  ದುನಿಯಾ ವಿಜಯ್ ಅಭಿನಯಿಸುತ್ತಿರುವ ಆರ್. ಚಂದ್ರು ನಿರ್ದೇಶನದ ಕನಕ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಬಂದಿದ್ದಾರೆ.

  ಇದೇ ಪಾತ್ರಕ್ಕೆ ಈ ಹಿಂದೆ ರಚಿತಾ ರಾಮ್ ಆಯ್ಕೆಯಾಗಿದ್ದರು. ಆದರೆ, ಡೇಟ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದರು.'ಕನಕ' ಚಿತ್ರದಲ್ಲಿ ವಿಜಯ್ ಗೆ ಇಬ್ಬರು ನಾಯಕಿಯರು. ಚಿತ್ರದ ಮತ್ತೊಬ್ಬ ನಾಯಕಿ ಮಾನ್ವಿತಾ ಹರೀಶ್. ಚಿತ್ರದ ಬಹುತೇಕ ಭಾಗದ ಶೂಟಿಂಗ್ ಮುಗಿದಿದ್ದು, ಹರಿಪ್ರಿಯಾ-ದುನಿಯಾ ವಿಜಯ್ಪೋರ್ಷನ್ ಮಾತ್ರ ಬಾಕಿ ಇದೆಯಂತೆ

  .ಈ ಮೊದಲು ದುನಿಯಾ ವಿಜಯ್ ಅಭಿನಯದ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದಿಂದಲೂ ರಚಿತಾರಾಮ್ ಮೊದಲು ಒಪ್ಪಿಕೊಂಡು ನಂತರ ಹಿಂದೆ ಸರಿದಿದ್ದರು. ಆ ಜಾಗಕ್ಕೆ ಶ್ರದ್ಧಾಶ್ರೀನಾಥ್ ಬಂದಿದ್ದಾರೆ. ಅಲ್ಲಿಗೆ ದುನಿಯಾ ವಿಜಯ್ ಅಭಿನಯದ ಎರಡೂ ಚಿತ್ರಗಳಲ್ಲಿನರಚಿತಾ ರಾಮ್ ಪಾತ್ರಕ್ಕೆ ನಾಯಕಿಯರು ಸಿಕ್ಕಂತಾಗಿದೆ.

  Related Articles :-

  Haripriya Is Vijay's Heroine In Kanaka

  K P Nanjundi To Act In Kanaka

  Rachita Ram Is Vijay's Heroine In Kanaka

  Manvita Is Vijay's Heroine In Kanaka

  First Look Of Kanaka Released

  Kanaka Shooting Starts From Today

   

 • ಕಸ್ತೂರಿ ಮಹಲ್`ನಿಂದ ರಚಿತಾ ರಾಮ್ ಔಟ್

   Rachita Ram Walks Out Of Katuri Mahal

  ಡಿಂಪಲ್ ಕ್ವೀನ್ ರಚಿತಾ ರಾಮ್ ಕಸ್ತೂರಿ ಮಹಲ್ ಚಿತ್ರದಿಂದ ದಿಢೀರನೆ ಹೊರನಡೆದಿದ್ದಾರೆ. ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರವಿದು. ಆರಂಭದಲ್ಲಿ ಕಸ್ತೂರಿ ನಿವಾಸ ಎಂದು ಟೈಟಲ್ ಇಟ್ಟುಕೊಂಡಿದ್ದ ಚಿತ್ರತಂಡ, ರಾಜ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಟೈಟಲ್‍ನ್ನು ಬದಲಿಸಿತ್ತು. ಈಗ ನಾಯಕಿಯನ್ನೇ ಬದಲಾಯಿಸಬೇಕಾಗಿದೆ.

  ಜಸ್ಟ್ ಒಂದು ಮೆಸೇಜ್ ಮಾಡಿ ಚಿತ್ರತಂಡದಿಂದ ಹೊರ ಹೋಗಿದ್ದಾರಂತೆ ರಚಿತಾ ರಾಮ್. ಅವರು ಸ್ಪಷ್ಟ ಕಾರಣಗಳನ್ನೇ ಕೊಟ್ಟಿಲ್ಲ ಎನ್ನುತ್ತಿದೆ ಚಿತ್ರತಂಡ. ಮೂಲಗಳ ಪ್ರಕಾರ ತಮ್ಮ ಕ್ಯಾರೆಕ್ಟರ್‍ನಲ್ಲಿ ಬದಲಾವಣೆಗೆ ರಚಿತಾ ರಾಮ್ ಕೇಳಿಕೊಂಡಿದ್ದರು. ಆದರೆ ಸ್ಕ್ರಿಪ್ಟ್ ಬದಲಾವಣೆಗೆ ದಿನೇಶ್ ಬಾಬು ಒಪ್ಪಲಿಲ್ಲ. ಹೀಗಾಗಿ ರಚಿತಾ ರಾಮ್ ಚಿತ್ರವನ್ನೇ ಕೈಬಿಟ್ಟರು ಎನ್ನಲಾಗುತ್ತಿದ.

  ನಾನು ಸ್ಕ್ರಿಪ್ಟ್‍ನ್ನೇ ನಂಬಿಕೊಂಡಿರುವವನು. ನನ್ನ ನಂಬಿಕೆ, ಗೌರವ ಎರಡೂ ನನ್ನ ಸ್ಕ್ರಿಪ್ಟ್. ಹೀಗಾಗಿ ಚಿತ್ರದ ಹೀರೋ, ಹೀರೋಯಿನ್‍ಗಾಗಿ ಬದಲಾವಣೆ ಮಾಡಿಕೊಳ್ಳಲಾರೆ ಎಂದಿದ್ದಾರೆ ದಿನೇಶ್ ಬಾಬು. ರಚಿತಾ ರಾಮ್ ಹೊರನಡೆದಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

  ಅಕ್ಟೋಬರ್ 5ರಿಂದ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಈಗ ಚಿತ್ರತಂಡ ಹೊಸ ನಾಯಕಿಯ ಹುಡುಕಾಟದಲ್ಲಿದೆ. ರಚಿತಾ ರಾಮ್ ಬಿಟ್ಟು ಹೋದ ಪಾತ್ರವನ್ನು ಯಾರು ಒಪ್ಪಿಕೊಳ್ತಾರೆ..?

 • ಕಾಲೇಜು ಕ್ವೀನ್ ಆಗಿ ಬರ್ತಿದ್ದಾರೆ ಡಿಂಪಲ್ ಕ್ವೀನ್..!

  rachita ram to act with prajwal devaraj in veeram

  ಸ್ಯಾಂಡಲ್ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಈಗ ಕಾಲೇಜು ಸ್ಟೂಡೆಂಟ್ ಆಗಿ ಬರಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಚಿತಾ. ಈ ಚಿತ್ರದಲ್ಲಿ ಅವರದ್ದು ಕಾಲೇಜು ಸ್ಟೂಡೆಂಟ್ ಪಾತ್ರ.

  ಯೋಗರಾಜ್ ಭಟ್-ಶಶಾಂಕ್ ನಿರ್ಮಾಣದ ಸೀರೆ, ನಾಗೇಂದ್ರ ಪ್ರಸಾದ್ ನಿರ್ದೇಶನದ ಪಂತ್ರ, ರಮೇಶ್ ಅರವಿಂದ್ ನಿರ್ದೇಶನದ 100, ಜೋಗಿ ಪ್ರೇಮ್ ಅವರ ಏಕ್ ಲವ್ ಯಾ, ಏಪ್ರಿಲ್, ಸಂಜು ಅಲಿಯಾಸ್ ಸಂಜು, ದಾಳಿ.. ಹೀಗೆ ಹಲವು ಚಿತ್ರಗಳ ನಡುವೆಯೇ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ರಚಿತಾ ರಾಮ್.

  ಅಂದಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ತೆರೆ ಕಾಣುತ್ತಿದೆ. ಇದು ಈ ವರ್ಷ ರಚಿತಾ ರಾಮ್ ನಟಿಸಿರುವ 7ನೇ ಸಿನಿಮಾ. ಈ ವರ್ಷ ಸೀತಾರಾಮ ಕಲ್ಯಾಣ, ಐ ಲವ್ ಯೂ, ರುಸ್ತುಂ, ನಟಸಾರ್ವಭೌಮ ಚಿತ್ರಗಳಲ್ಲಿ ನಟಿಸಿರುವ ರಚಿತಾ ರಾಮ್, ಅಮರ್ ಹಾಗೂ ಭರಾಟೆಯಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಎಲ್ಲವೂ ಸೇರಿದರೆ ಮುಂದಿನ ವಾರ ಬರುತ್ತಿರುವ ಆಯುಷ್ಮಾನ್ ಭವ 7ನೇ ಸಿನಿಮಾ.

  ಈಗ ಓಕೆ ಎಂದಿರುವ ವೀರಂ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಹೀರೋ. ಆ ಚಿತ್ರದಲ್ಲಿ ಪ್ರಜ್ವಲ್ ವಿಷ್ಣು ಅಭಿಮಾನಿಯಾಗಿ ಕಾಣಿಸಿಕೊಂಡಿದ್ಧಾರೆ ಖಾದರ್ ಕುಮಾರ್ ನಿರ್ದೇಶನದ ಚಿತ್ರ ವಿಷ್ಣು ಹುಟ್ಟುಹಬ್ಬದಂದೇ ಲಾಂಚ್ ಆಗಿದೆ.

 • ಕ್ರೇಜಿ ಸ್ಟಾರ್ ಚಿತ್ರಕ್ಕೆ ಡಿಂಪಲ್ ಕ್ವೀನ್

  rachita ram in ravi bopanna

  ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸುತ್ತಿರುವ ರವಿ ಬೋಪಣ್ಣ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ಆಗಮನವಾಗಿದೆ. ಈಗಾಗಲೇ ಚಿತ್ರದಲ್ಲಿ ಅತಿಥಿ ನಟರಾಗಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಈಗ ಮತ್ತೊಂದು ಪುಟ್ಟ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಚಿತಾ ರಾಮ್.

  ಈ ಚಿತ್ರದಲ್ಲಿ ರವಿಚಂದ್ರನ್ ಸಂಪೂರ್ಣ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದು, ರವಿ ಗೆಟಪ್ಪಿಗೆ ಮಸ್ತ್ ಮೆಚ್ಚುಗೆ ಸಿಕ್ಕಿದೆ. ಕಾವ್ಯಾಶೆಟ್ಟಿ ಮತ್ತು ಸಂಚಿತಾ ಪಡುಕೋಣೆ ಚಿತ್ರದ ನಾಯಕಿಯರು. ಸೈಬರ್ ಕ್ರೈಂ ಕಥಾ ಹಂದರವಿರುವ ಚಿತ್ರ ರವಿ ಬೋಪಣ್ಣ. 

 • ಕ್ಷಮೆ ಕೇಳಿದ ಶಿವಣ್ಣನಿಗೆ ಅಭಿಮಾನಿಗಳಿಂದಲೇ ಸಮಾಧಾನ

  fans console shivanna regarding ayushmanbahava release

  ಆಯುಷ್ಮಾನ್ ಭವ, ಈಗ ರಿಲೀಸ್ಗೆ ಕಂಪ್ಲೀಟ್ ರೆಡಿ. ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರವಿದು. ಪಿ.ವಾಸು, ದ್ವಾರಕೀಶ್, ರಚಿತಾ ರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಕಾಂಬಿನೇಷನ್ ಇರುವ ಸಿನಿಮಾ. ಹೀಗಾಗಿ ನಿರೀಕ್ಷೆಗಳೋ.. ಮೌಂಟ್ ಎವರೆಸ್ಟ್ ಲೆಕ್ಕದಲ್ಲಿವೆ. ಇಷ್ಟಿದ್ದರು ಸಿನಿಮಾ ಅಂದುಕೊಂಡಂತೆ ರಿಲೀಸ್ ಮಾಡಲು ಆಗಿರಲಿಲ್ಲ.

  ಚಿತ್ರದಲ್ಲಿ ಬಳಸಿದ್ದ ಗ್ರಾಫಿಕ್ಸ್ ಟೈಗರ್ ದೃಶ್ಯಕ್ಕೂ ಅನಿಮಲ್ ಬೋರ್ಡ್ ಅನುಮತಿ ಬೇಕಿದ್ದ ಕಾರಣ, ಸೆನ್ಸಾರ್ ತಡವಾಗಿತ್ತು. ಈಗ ಎಲ್ಲ ಕ್ಲಿಯರ್ ಆಗಿ ಬರುತ್ತಿದೆ. ಈ ಕುರಿತು ಮಾತನಾಡಿದ್ದ ಶಿವಣ್ಣ ನವೆಂಬರ್ 1ರಂದು ರಿಲೀಸ್ ಮಾಡುವಂತೆ ನಾನೇ ಹೇಳಿದ್ದೆ. ಯೋಗಿಯೂ ಅದಕ್ಕಾಗಿ ಕೆಲಸ ಮಾಡಿದ್ದರು. ಆದರೆ, ಆಗಲಿಲ್ಲ. ಅಭಿಮಾನಿಗಳ ನಿರೀಕ್ಷೆ ಸುಳ್ಳಾಯ್ತು. ಅದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ ಎಂದಿದ್ದರು.

  ಇದಕ್ಕೆ ಅಭಿಮಾನಿಗಳೂ ಅಷ್ಟೇ ಬೊಂಬಾಟ್ ಉತ್ತರ ಕೊಟ್ಟಿದ್ದಾರೆ. ಕ್ಷಮೆ ಕೇಳೋಕೆ ನೀವು ತಪ್ಪು ಮಾಡಿಲ್ಲ. ಸಿನಿಮಾ ಲೇಟ್ ಆದರೂ ನಾವು ನೋಡಿಯೇ ನೋಡ್ತೇವೆ. ಚಿತ್ರ ಖಂಡಿತಾ ಚೆನ್ನಾಗಿರುತ್ತೆ. ಇಂಥದ್ದಕ್ಕೆಲ್ಲ ನೀವು ಕ್ಷಮೆ ಕೇಳಬಾರದು ಎಂದು ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದಾರೆ. ಇನ್ನೂ ಕೆಲವರು ಎಷ್ಟಂದ್ರೂ ನೀವು ಅಣ್ಣಾವ್ರ ಮಗ. ಅದಕ್ಕೇ ಕ್ಷಮೆ ಕೇಳಿದ್ದೀರಿ. ಗ್ರೇಟ್ ಸರ್. ಡೋಂಟ್ ವರಿ ಎಂದು ಸಮಾಧಾನ ಹೇಳಿದ್ದಾರೆ. ಯಥಾ ಸ್ಟಾರ್.. ತಥಾ ಫ್ಯಾನ್ಸ್..

 • ಗುರು ದೇಶಪಾಂಡೆ ಒನ್ ಪೆಗ್ ಒನ್ ಶಾಟ್'ಗೆ ರಚಿತಾ ಬೆಂಬಲ

  ಗುರು ದೇಶಪಾಂಡೆ ಒನ್ ಪೆಗ್ ಒನ್ ಶಾಟ್'ಗೆ ರಚಿತಾ ಬೆಂಬಲ

  ಜಂಟಲ್‍ಮೆನ್ ಎಂಬ ಡಿಫರೆಂಟ್ ಚಿತ್ರವನ್ನು ನಿರ್ಮಿಸಿದ್ದ ಗುರು ದೇಶಪಾಂಡೆ ಈಗ ಐವರು ನಿರ್ದೇಶಕರ ಮೂಲಕ ಐದು ಕಥೆಗಳನ್ನು ಒಂದೇ ಚಿತ್ರದಲ್ಲಿ ಹೇಳೋ ಸಾಹಸಕ್ಕೆ ಕೈ ಹಾಕಿದ್ದಾರೆ. ಸಿಂಪಲ್ಲಾಗಿ ಹೇಳ್ಬೇಕಂದ್ರೆ, ರಿಷಬ್ ಶೆಟ್ಟಿಯವರ ಕಥಾ ಸಂಗಮ ದಂತಹ ಪ್ರಯೋಗ. ಈ ಸಾಹಸದ ಸಿನಿಮಾಗೆ ಅವರು ಕೊಟ್ಟಿರೋ ಟೈಟಲ್ ಪೆಂಟಗನ್.

  ಪೆಂಟಗನ್ ಚಿತ್ರದಲ್ಲಿ ಈಗ ಒಂದು ಕಥೆಯ ಥೀಮ್ ಪೋಸ್ಟರ್ ರಿಲೀಸ್ ಆಗಿದೆ. `ಒನ್ ಶಾಟ್ ಒನ್ ಪೆಗ್' ಕಥೆಯ ಥೀಮ್ ಪೋಸ್ಟರ್‍ನ್ನು ರಚಿತಾ ರಾಮ್ ರಿಲೀಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಟೈಟಲ್‍ನ್ನು ಡಾರ್ಲಿಂಗ್ ಕೃಷ್ಣ ರಿಲೀಸ್ ಮಾಡಿದ್ದರು. ಜನವರಿ 18ರ ವೇಳೆಗೆ ಎಲ್ಲ 5 ನಿರ್ದೇಶಕರೂ ಗೊತ್ತಾಗಲಿದ್ದಾರೆ

 • ಗುಳಿಕೆನ್ನೆ ಸುಂದರಿ ತೆಲುಗಿನತ್ತ ಸವಾರಿ

  rachita ram flies to telugu film industry

  ಸ್ಯಾಂಡಲ್‌ವುಡ್‌ನ ಬುಲ್ ಬುಲ್ ಕಾಲಿವುಡ್‌ಗೆ ಹೊರಟು ನಿಂತಿದೆ. ಗುಳಿಕೆನ್ನೆ ಚೆಲುವೆಯ ಸವಾರಿ ತೆಲುಗು ಚಿತ್ರರಂಗದ ಕಡೆ ಹೊರಟಿದ್ದು, ಮೆಗಾಸ್ಟಾರ್ ಫ್ಯಾಮಿಲಿ ಹೀರೋಗೆ ಹೀರೋಯಿನ್. ಚಿರಂಜೀವಿ ಅವರ ಕುಟುಂಬದ ಕಲ್ಯಾಣ್ ದೇವ್ ಅವರ ಚಿತ್ರಕ್ಕೆ ರಚಿತಾ ರಾಮ್ ನಾಯಕಿ.

  ನವೆಂಬರ್ ೨೨ರಿಂದ ಶೂಟಿಂಗ್ ಶುರುವಾಗಲಿದೆ. ಪುಲಿ ವಾಸು ಚಿತ್ರದ ನಿರ್ದೇಶಕ. ಚಿತ್ರಕ್ಕೆ ಸೂಪರ್ ಮಚ್ಚಿ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಬಾಲಕೃಷ್ಣ ಅಭಿನಯದ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ ಎಂಬ ಸುದ್ದಿ ತಣ್ಣಗಾಗಿದೆ.

 • ಗೌಡ್ರ ಹುಡ್ಗನ್ನೇ ಮದ್ವೆ ಆಗ್ತಾರೆ ರಚಿತಾ

  rachita ram clarifies about her marriage rumors

  ಡಿಂಪಲ್ ಕ್ವೀನ್ ಎಲ್ಲಿ ಹೋದ್ರೂ.. ಎಲ್ಲಿಗೆ ಬಂದ್ರೂ.. ಅವರಿಗೆ ಎದುರಾಗುತ್ತಿರುವ ಪ್ರಶ್ನೆ ಒಂದೇ.. ರಚಿತಾ ಮದ್ವೆ ಯಾವಾಗ.. ಹುಡುಗ ಯಾರು.. ಲವ್ ಮ್ಯಾರೇಜಾ.. ಅರೇಂಜ್ ಮ್ಯಾರೇಜಾ.. ರಾಜಕೀಯ ನಾಯಕರೊಬ್ಬರ ಮಗನೊಬ್ಬನ ಜೊತೆ ಮದುವೆ ಫಿಕ್ಸ್ ಆಗಿದ್ಯಂತೆ ನಿಜಾನಾ.. ಹೀಗೆ ಸೃಷ್ಟಿಯಾಗುತ್ತಿರುವ ಪ್ರಶ್ನೆಗಳಿಗೆ ಲೆಕ್ಕವೇ ಇಲ್ಲ. ಸೀತಾರಾಮ ಕಲ್ಯಾಣ ರಿಲೀಸ್ ಹೊತ್ತಲ್ಲೂ ಕಾಡಿದ ಇದೇ ಪ್ರಶ್ನೆಗೆ ರಚಿತಾ ಬೋಲ್ಡ್ ಉತ್ತರ ಕೊಟ್ಟಿದ್ದಾರೆ.

  `ಮದುವೆ ವಿಚಾರವನ್ನ ನನ್ನ ತಂದೆ ಇದ್ದಾರೆ. ಅವರೇ ನೋಡಿಕೊಳ್ತಾರೆ. ನಾನು ಲವ್ ಮ್ಯಾರೇಜ್ ಅಂದ್ರೂ ಯೆಸ್ ಅಂತಾರೆ. ಅರೇಂಜ್ ಮ್ಯಾರೇಜ್ ಅಂದ್ರೂ ಯೆಸ್ ಅಂತಾರೆ. ನಾನು ಗೌಡ್ರ ಹುಡುಗಿ. ಗೌಡ್ರ ಹುಡುಗನ್ನೇ ಮದ್ವೆ ಆಗ್ತೀನಿ. ಸದ್ಯಕ್ಕೆ ಸಿನಿಮಾ ನೋಡಿಕೊಳ್ತಿದ್ದೀನಿ' ಎಂದಿದ್ದಾರೆ ರಚಿತಾ.

 • ಜನವರಿ 25ಕ್ಕೆ ಸೀತಾರಾಮ ಕಲ್ಯಾಣ

  seetharama kalyana will release on jan 25th

  ಜನವರಿಯಲ್ಲಿ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಲ್ಲಿ ತುಂಬಿ ತುಳುಕಲಿವೆ. ಶಿವಣ್ಣ, ಪುನೀತ್ ಚಿತ್ರಗಳು ರಿಲೀಸ್‍ಗೆ ರೆಡಿಯಾಗಿರುವಾಗಲೇ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ, ಬಿಡುಗಡೆ ದಿನಾಂಕ ಘೋಷಿಸಿದೆ.

  ಜನವರಿ 25ಕ್ಕೆ ನಾವು ತೆರೆಗೆ ಬರುವುದು ಖಚಿತ. ಚಿತ್ರದ ಬಿಡುಗಡೆಗೆ ಸಿದ್ಧರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ ನಿಖಿಲ್.

  ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಸಿಎಂ ಕುಮಾರಸ್ವಾಮಿ ಬ್ಯಾನರ್‍ನ ಕೌಟುಂಬಿಕ ಕಥಾ ಹಂದರದ ಚಿತ್ರವಿದು.

 • ಜನವರಿ 5ಕ್ಕೆ ಆಡಿಯೋ.. ಫೆಬ್ರವರಿ 7ಕ್ಕೆ ವಿಡಿಯೋ..

  natasarvabhouma audio on jan 5th

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 2019ರ ಆರಂಭದಲ್ಲೇ ತೆರೆಗೆ ಬರುವುದು ಅಧಿಕೃತವಾಗಿದೆ. ನಟಸಾರ್ವಭೌಮ ಚಿತ್ರದ ಬಿಡುಗಡೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಜನವರಿ 5ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಆಗುವುದು ಫೆಬ್ರವರಿ 7ನೇ ತಾರೀಕಿಗೆ. ಅಂದರೆ, ಆಡಿಯೋ ರಿಲೀಸ್ ಆದ ಬರೋಬ್ಬರಿ 1 ತಿಂಗಳ ಚಿತ್ರ, ಪ್ರೇಕ್ಷಕರ ಎದುರು ಬರಲಿದೆ. ಕಳೆದ ವರ್ಷವಿಡೀ ಪುನೀತ್ ಸಿನಿಮಾ ಇರಲಿಲ್ಲ. ಹೀಗಾಗಿ ಅಪ್ಪು ಅಭಿಮಾನಿಗಳ ನಿರೀಕ್ಷೆ ಆಕಾಶದಲ್ಲಿದೆ.

  ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ರಚಿತಾ ರಾಮ್ ಮತ್ತೊಮ್ಮೆ ಅಪ್ಪು ಜೋಡಿಯಾಗಿದ್ದರೆ, ಅನುಪಮಾ ಪರಮೇಶ್ವರ್ ಗಮನ ಸೆಳೆಯುತ್ತಿದ್ದಾರೆ. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪು ಜೊತೆ ಡ್ಯಾನ್ಸ್ ಮಾಡೋಕೆ ಸಿದ್ಧರಾ

 • ಜೋಗಿ ಪ್ರೇಮ್ ಜೊತೆ ಡಿಂಪಲ್ ಕ್ವೀನ್

  rachita ram in ek love ya

  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತಾ ಅವರ ತಮ್ಮನನ್ನು ಪರಿಚಯಿಸುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಹಾಗಂತ, ರಚಿತಾ ರಾಮ್ ಹೀರೋಯಿನ್ ಅಲ್ಲ, ಅರ್ಥಾತ್ ಹೀರೋನ ಪ್ರೇಯಸಿ ಅಲ್ಲ. ಆದರೆ, ಅತ್ಯಂತ ಪ್ರಮುಖವಾದ ಪಾತ್ರವಂತೆ.

  ವಿಲನ್ ಚಿತ್ರದ ಹಾಡೊಂದರಲ್ಲಿ ನಾನು ನಟಿಸಿದ್ದೆ. ಆದರೆ, ಪ್ರೇಮ್ ಅವರ ಡೆಡಿಕೇಷನ್ ಬಹಳ ಇಷ್ಟವಾಗಿತ್ತು. ಅವರು ಬಹಳ ಒಳ್ಳೆಯ ನಿರ್ದೇಶಕ. ಅವರು ನನ್ನನ್ನು ಸೆಟ್‍ನಲ್ಲಿ ಗೌಡ್ತಿ  ಅಂತಾ ಕರೀತಿದ್ರೆ, ನಾನು ಗೌಡಾ ಸರ್ ಅಂತ ಕೂಗ್ತಿದ್ದೆ. ಈ ಚಿತ್ರದಲ್ಲಿ ನನ್ನದು ಅತ್ಯಂತ ಮುಖ್ಯ ಪಾತ್ರ ಎಂದಿದ್ದಾರೆ ರಚಿತಾ ರಾಮ್.

  ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ  ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಕ್ಷಿತಾ ಅವರೇ ಚಿತ್ರದ ನಿರ್ಮಾಪಕಿ.

 • ಜೋಪಾನ.. ಹೃದಯ ಕದ್ದೇಬಿಟ್ಟ ನಟಸಾರ್ವಭೌಮ

  natasarvabhouma duet song wins lover's heart

  ನಟಸಾರ್ವಭೌಮ ಚಿತ್ರದ ಯುಗಳ ಗೀತೆ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್-ಪವನ್ ಒಡೆಯರ್-ರಾಕ್‍ಲೈನ್ ವೆಂಕಟೇಶ್-ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ. ಫೆಬ್ರವರಿ 7ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದ ಯುಗಳ ಗೀತೆಯನ್ನು ತೇಲಿಬಿಟ್ಟಿದೆ ಚಿತ್ರತಂಡ.

  ಜೋಪಾನ.. ಜೋಕೆ ಜೋಪಾನ.. ನನ್ನ ಹೃದಯ ಕದಿಯೋ ಕಳ್ಳ ಬಂದ ಜೋಪಾನ.. ಸೋತೆ ನಾ.. ಪೂರ್ತಿ ಸೋತೆ ನಾ.. ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ.. ಸುಳಿದರು ಕಣ್ಣ ಮುಂದೆ.. ಹುಡುಗರು ನೂರು.. ಸರಿಸಮ ಯಾರಿಲ್ಲ ಇವನಿಗೆ ಚೂರು.. ಇವನನು ಹೆತ್ತವರು ಯಾರು.. 

  ಯಾರೋ ನಾನು.. ಯಾರೋ ನೀನು.. ನಂದೂ ನಿಂದೂ ಒಂದೇ ಏನು..?

  ಕವಿರಾಜ್ ಬರೆದಿರುವ ಹಾಡಿಗೆ ಅಷ್ಟೇ ಮಧುರ ಧ್ವನಿ ಕೊಟ್ಟಿರೋದು ಶ್ರೇಯಾ ಘೋಷಾಲ್. ಇಮಾನ್ ಮ್ಯೂಸಿಕ್ ನೀಡಿರುವ ಸಿನಿಮಾದ ಹಾಡು, ಹೃದಯ ಕದಿಯುವಂತಿದೆ.

 • ಟೀಚರ್ಸ್ ಡೇ ರಚಿತಾ, ಧೃವಾಗೆ ಸಿಕ್ಕಾಪಟ್ಟೆ ಸ್ಪೆಷಲ್

  rachitha ram, dhruva sarja reveals secret

  ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ  ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.

  ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.

  ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.

  ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. 

 • ಟೈಟಲ್ ಕೇಳಿದ ಕೂಡ್ಲೇ ರಚಿತಾ ಓಕೆ ಅನ್ನೋಕೆ ಅವನೇ ಕಾರಣ..!

  rachita ram reveals her hanuman bhakthi secret

  ಸೀತಾರಾಮ ಕಲ್ಯಾಣ ಚಿತ್ರ, ಆಂಜನೇಯನ ಪರಮಭಕ್ತರ ಸಂಗಮವೇನೋ ಎನ್ನಿಸುವ ಹಾಗಿದೆ. ಹೇಳಿ ಕೇಳಿ.. ನಿರ್ದೇಶಕ ಹರ್ಷ ಭಜರಂಗಿಯ ಭಕ್ತ. ಇದುವರೆಗೆ ಅವರು ನಿರ್ದೇಶಿಸಿರುವ ಪ್ರತಿ ಚಿತ್ರದ ಹೆಸರಲ್ಲೂ ಆಂಜನೇಯ ಇರೋದೇ ಅದಕ್ಕೆ ಸಾಕ್ಷಿ. ಇನ್ನು ಸೀತಾರಾಮ ಕಲ್ಯಾಣದಲ್ಲೂ ಅಷ್ಟೆ, ಅದು ಆಂಜನೇಯನ ಆರಾಧ್ಯ ದೈವಗಳ ಹೆಸರು. ಹೀಗಿರುವಾಗ ಈ ಚಿತ್ರವನ್ನು ರಚಿತಾ ಒಪ್ಪಿಕೊಂಡಿದ್ದು ಹೇಗೆ..?

  ``ಕಥೆ ಕೇಳಲಿಲ್ಲ, ಕೇವಲ ಟೈಟಲ್ ಕೇಳಿದೆ. ಸೀತಾರಾಮ ಕಲ್ಯಾಣ ಅನ್ನೋ ಟೈಟಲ್ ಬಹಳ ಇಷ್ಟವಾಯ್ತು. ಟೈಟಲ್ ಕೇಳಿದವಳೇ ಓಕೆ ಎಂದುಬಿಟ್ಟೆ, ಏಕಂದ್ರೆ ನಾನು ಆಂಜನೇಯನ ಭಕ್ತೆ'' ಎಂಬ ಕಥೆ ಒಪ್ಪಿಕೊಂಡ ರಹಸ್ಯ ಹೇಳಿದ್ದಾರೆ ರಚಿತಾ.

  ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿಯ ಪಾತ್ರ. ಲಂಗ, ದಾವಣಿ, ಬಿಂದಿ, ತಲೆ ತುಂಬಾ ಹೂವು.. ಹೀಗೆ ಪಕ್ಕಾ ಹಳ್ಳಿ ಹುಡುಗಿ. ಅಯೋಗ್ಯದ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿ ಹುಡುಗಿಯಾಗಿ ಚೆಂದವಾಗಿ ಕಾಣಿಸ್ತೀನಂತೆ. ಹಾಗಾಗಿ ಇನ್ನು ಮುಂದೆ ಇನ್ನೊಂದಿಷ್ಟು ಹಳ್ಳಿ ಕ್ಯಾರೆಕ್ಟರ್‍ಗಳಲ್ಲಿ ನಟಿಸುವ ಆಸೆ ಇದೆ ಎಂದು ಬಯಕೆ ಹೇಳಿಕೊಂಡಿದ್ದಾರೆ ರಚಿತಾ.

  ನಿಖಿಲ್ ಅವರಿಗೆ ಇದು 2ನೇ ಸಿನಿಮಾ. ಆದರೆ, ಅಭಿನಯ ನೋಡಿದರೆ ಹಾಗನ್ನಿಸೋದಿಲ್ಲ. ಪಾತ್ರಕ್ಕೆ ತಕ್ಕಂತೆ ಚೆನ್ನಾಗಿ ನಟಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೂ ಮೆಚ್ಚುಗೆ ಕೊಟ್ಟಿದ್ದಾರೆ ಡಿಂಪಲ್ ಕ್ವೀನ್.

 • ಡಯಲ್ 100

  ಡಯಲ್ 100

  100. ಇದು ಪೊಲೀಸ್ ಎಮರ್ಜೆನ್ಸಿ ಡಯಲ್ ನಂಬರ್. ಯಾರಿಗೆ ಏನೇ ಸಮಸ್ಯೆ ಆದರೂ 100ಗೆ ಕಾಲ್ ಹೋಗುತ್ತೆ. ಆ ಸಮಸ್ಯೆಗೆ ಪರಿಹಾರ ಹುಡುಕಬೇಕಾದವರು ಪೊಲೀಸ್. ಅಂತಹ ಪೊಲೀಸ್ ಅಧಿಕಾರಿ ವಿಷ್ಣು. ರಮೇಶ್ ಅರವಿಂದ್.

  ಆ ವಿಷ್ಣುವಿಗೆ ಒಬ್ಬಳು ಮುದ್ದಿನ ತಂಗಿ. ಅಣ್ಣನನ್ನು ಗೋಳು ಹೊಯ್ದುಕೊಳ್ಳೋ ತರಲೆ.. ತುಂಟಿ.. ರಚಿತಾ ರಾಮ್.

  ಪೂರ್ಣ ಆ ಕುಟುಂಬದ ಯಜಮಾನಿ.

  ಆ ಮನೆಗೊಬ್ಬ ಕ್ರಿಮಿನಲ್ ಎಂಟ್ರಿ ಕೊಡ್ತಾನೆ. ಅವನು ಸೈಬರ್ ಕ್ರಿಮಿನಲ್. ಇನ್ಸ್‍ಸ್ಟಾ ಮೂಲಕ ಎಂಟ್ರಿ ಕೊಡೋ ಆತ ಇಡೀ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡು ಬಿಡ್ತಾನೆ.. ಅದರಿಂದ ಹೊರಬರೋಕೆ ವಿಷ್ಣು ಪಡೋ ಸಾಹಸವೇ 100 ಸ್ಟೋರಿ.

  ನಿರ್ಮಾಪಕ ರಮೇಶ್ ರೆಡ್ಡಿ ಅವರ ಫ್ರೆಂಡ್ ಮನೆಯಲ್ಲಿ ರಿಯಲ್ಲಾಗಿ ನಡೆದ ಘಟನೆಗೆ ಸಿನಿಮಾಟಿಕ್ ಟಚ್ ಕೊಟ್ಟಿದ್ದಾರೆ ರಮೇಶ್. ಚಿತ್ರದ ಡೈರೆಕ್ಟರ್ ಅವರೇ. ಇದೇ ವಾರ ರಿಲೀಸ್ ಆಗುತ್ತಿರೊ 100 ಚಿತ್ರದ ಮೇಕಿಂಗ್ ಕೂಡಾ ಭರ್ಜರಿಯಾಗಿದೆ. ಚೇಸಿಂಗ್ ದೃಶ್ಯಗಳು ಉಸಿರು ಬಿಗಿ ಹಿಡಿದು ನೋಡುವಂತಿವೆ. ವೇಯ್ಟ್.. ಫಾರ್.. 100.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery