` bharjari - chitraloka.com | Kannada Movie News, Reviews | Image

bharjari

  • Haripriya Joins Bharjari Team

    haripriya image

    The shooting for Dhruva Sarja-Rachita Ram starrer 'Bharjari' has already been started and now actress Haripriya has joined the star cast. Haripriya will be playing an important role in the film and the shooting will be starting from Monday.

    The film is being produced by Kanakapura Srinivas is being directed by Chethan Kumar. Chethan himself has written the story, screenplay and dialogues of the film apart from directing it. Apart from Dhruva Sarja and Rachita Ram, the film stars Srinivasamurthy, Ravishankar and others.

  • Mugulu Nage And Bharjari Release Postponed

    mugulu nage, bharjari postponed

    Earlier, there was news that Ganesh starrer 'Mugulu Nage' and Dhruva Sarja starrer 'Bharjari' might compete against each other to release during the Ganesha festival song. Now both the films have been postponed and won't be releasing during the Ganesha festival season.

    'Mugulu Nage' marks the return of Ganesh and Yogaraj Bhatt after 'Galipata'. The film has four heroines and Apoorva, 'Nikitha Narayan, Ashitha and Amulya have acted opposite Ganesh in the film. Yogaraj Bhatt himself has written the story, screenplay and dialogues of 'Mugulunage'. 

    Bharjari' marks the return of the 'Bahaddur' team once again. The film is being produced by Kanakapura Srinivas and is being directed by Chethan Kumar. The film stars Dhruva Sarja, Rachita Ram, Harirpriya, Rangayana Raghu and others in prominent roles. Chethan himself has written the story, screenplay and dialogues of the film apart from directing it. Srisha Kudavalli is the cinematographer, while V Harikrishna is the music director.

  • Shivarajakumar Attends Bharjari 75 Days Celebrations

    shivanna ar bharajari 75 days function

    Dhruva Sarja starrer 'Bharjari' has completed 75 days and is running successfully. To mark the occasion, Shivarajakumar visited the Nartaki theater where the film is being screened and participated in the 75 days celebrations of the film.

    On Sunday afternoon, Shivarajakumar and Dhruva visited Santhosh Complex in KG Road and watched 'Mufti' film together. After that, Shivarajakumar went to Nartaki theater in the same complex and attended the 75 days celebrations of the film.

    Bharjari' is produced by Kanakapura Srinivas and is being directed by Chethan Kumar. Dhruva, Haripriya, Rachita Ram, Sadhu Kokila, Tara, Avinash, Uday and others play prominent roles in the film. Chethan himself has written the story, screenplay and dialogues of the film apart from directing it. Srisha Kudavalli is the cinematographer, while V Harikrishna is the music director.

  • ಜೇಮ್ಸ್ ಗೆ ಭರ್ಜರಿ ಚೇತನ್ ರೆಡಿ

    bharjari chethan's next is james

    ಭರ್ಜರಿಯಂತಹಾ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ ಚೇತನ್ ಕುಮಾರ್, ಧ್ರುವಾ ಜೊತೆ ಎರಡು ಹಿಟ್ ಕೊಟ್ಟವರು. ಎಲ್ಲವೂ ಅಂದುಕೊಂಡಂತೆ, ಪ್ಲಾನ್ ಪ್ರಕಾರ ಆಗಿದ್ದರೆ, ಇಷ್ಟು ಹೊತ್ತಿಗೆ ಚೇತನ್, ನಿಖಿಲ್ ಅಭಿನಯದ ಹೊಸ ಚಿತ್ರ ನಿರ್ದೇಶಿಸಬೇಕಿತ್ತು. ಅದೇನಾಯ್ತೋ ಏನೋ.. ಚೇತನ್ ಪ್ರಾಜೆಕ್ಟ್‍ನಿಂದ ಹೊರಬಂದರು. ಚಿತ್ರವೇ ನಿಂತು ಹೋಯ್ತು. ಈಗ ಚೇತನ್, ಹೊಸ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

    ಯಾರು ಹೀರೋ..? ಕಥೆ ಏನು..? ಎಂದರೆ, ಚೇತನ್ ಗುಟ್ಟು ಬಿಡೋದಿಲ್ಲ. ಕತೆ, ಚಿತ್ರಕತೆ ಕುರಿತು ಸ್ಕ್ರಿಪ್ಟ್ ವರ್ಕ್ ನಡೀತಾ ಇದೆ. ಭರ್ಜರಿ ಚಿತ್ರದ ಶತದಿನೋತ್ಸವದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನುತ್ತಾರೆ ಚೇತನ್.

    ಒಂದು ಮಾಹಿತಿ ಪ್ರಕಾರ, ಚೇತನ್ ಕಥೆ ಸಿದ್ಧ ಮಾಡುತ್ತಿರುವುದು ಪುನೀತ್‍ಗೆ. ಜೇಮ್ಸ್ ಚಿತ್ರಕ್ಕೆ ಕಥೆ,ಚಿತ್ರಕಥೆ ಸಿದ್ಧ ಮಾಡುತ್ತಿದ್ದಾರೆ. ಈಗಾಗಲೇ ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಪುನೀತ್, ಅದೇ ವೇಳೆ ಜೇಮ್ಸ್ ಚಿತ್ರಕ್ಕೂ ಡೇಟ್ಸ್ ಕೊಡಲು ನಿರ್ಧರಿಸಿದ್ದಾರಂತೆ.

  • ಧ್ರುವ ಸರ್ಜಾ, ಶಿವಣ್ಣ ಜೋಡಿ ಸಂಭ್ರಮ

    shivanna, dhruva during bharjari 75 days

    ಹ್ಯಾಟ್ರಿಕ್ ಹೀರೋ ಎಂದರೆ, ಕನ್ನಡಿಗರಿಗೆ ತಕ್ಷಣ ನೆನಪಾಗೋದು ಶಿವರಾಜ್ ಕುಮಾರ್. ಆನಂದ್, ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರಗಳು ಸತತವಾಗಿ ಹಿಟ್ ಆಗಿ ಶಿವರಾಜ್ ಕುಮಾರ್‍ಗೆ ಸಿಕ್ಕಿದ್ದು ಬಿರುದು ಅದು. ಈಗ ಅದೇ ಹಾದಿಯಲ್ಲಿರೋದು ಧ್ರುವ ಸರ್ಜಾ.

    ವಿಶೇಷವೇನು ಗೊತ್ತಾ..? ಸಂತೋಷ್‍ನಲ್ಲಿ ಮಫ್ತಿ ಚಿತ್ರ ಭರ್ಜರಿಯಾಗಿ ಓಡುತ್ತಿದ್ದರೆ, ಅದರ ಪಕ್ಕದಲ್ಲೇ ಭರ್ಜರಿ ಶತದಿನೋತ್ಸವ ಸಮೀಪಿಸುತ್ತಿದೆ. ಚಿತ್ರದ 75ನೇ ದಿನದ ಸಂಭ್ರಮಕ್ಕೆ ಧ್ರುವ ಬಂದಿದ್ದರೆ, ಮಫ್ತಿ ಚಿತ್ರವನ್ನು ಪ್ರೇಕ್ಷಕರ ಜೊತೆ ನೋಡಲು ಶಿವರಾಜ್ ಕುಮಾರ್ ಬಂದಿದ್ದರು. 

    ಸಂಭ್ರಮವನ್ನು ಇಬ್ಬರೂ ಒಟ್ಟಿಗೇ ಆಚರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಧ್ರುವಾ ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದರು. ಕನ್ನಡಕ್ಕೊಬ್ಬರೇ ಹ್ಯಾಟ್ರಿಕ್ ಹೀರೋ, ಅದು ಶಿವಣ್ಣ ಎಂದರು. 

    ಧ್ರುವ ಸರ್ಜಾ ಬೆನ್ನು ತಟ್ಟಿದ ಶಿವಣ್ಣ, ಆರಂಭದ ದಿನಗಳನ್ನು ನೆನಪಿಸಿಕೊಂಡರು. ಧ್ರುವ ಸರ್ಜಾ ಸತತ ಹ್ಯಾಟ್ರಿಕ್ ಹಿಟ್ ನೀಡಿರುವುದನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಿದರು.

    Related Articles :-

    Shivarajakumar Attends Bharjari 75 Days Celebrations

  • ನಂ.1 ರಾಜಕುಮಾರ, 2 ಭರ್ಜರಿ, 3 ಮೊಟ್ಟೆ..

    biffes best commercial movies of the year

    ಬೆಂಗಳೂರಿನಲ್ಲಿಯೇ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಮರ್ಷಿಯಲ್ ಸಿನಿಮಾಗಳ ಆಯ್ಕೆಯಾಗಿದೆ. ಕಲಾತ್ಮಕ ಚಿತ್ರಗಳ ಜೊತೆ ಜೊತೆಯಲ್ಲೇ ಪ್ರದರ್ಶನವಾಗುವ ಮನರಂಜನಾತ್ಮಕ ಚಿತ್ರಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ.

    ಚಲನಚಿತ್ರೋತ್ಸವದ ನಂ.1 ಕಮರ್ಷಿಯಲ್ ಚಿತ್ರವಾಗಿ ಹೊರಹೊಮ್ಮಿರುವುದು ರಾಜಕುಮಾರ. ಸಂತೋಷ್ ಆನಂದ್‍ರಾಮ್ ನಿರ್ದೇಶನದ, ಹೊಂಬಾಳೆ ಪ್ರೊಡಕ್ಷನ್ಸ್‍ನ ಪುನೀತ್ ರಾಜ್‍ಕುಮಾರ್ ಚಿತ್ರಕ್ಕೆ ನಂಬರ್ ಒನ್ ಪಟ್ಟ ಸಿಕ್ಕಿದೆ.

    2ನೇ ಪ್ರಶಸ್ತಿ ಸಿಕ್ಕಿರುವುದು ಧ್ರುವ ಸರ್ಜಾಗೆ ಹ್ಯಾಟ್ರಿಕ್ ಸಕ್ಸಸ್ ಕೊಟ್ಟ ಭರ್ಜರಿ ಚಿತ್ರಕ್ಕೆ. 3ನೇ ಅತ್ಯುತ್ತಮ ಕಮರ್ಷಿಯಲ್ ಚಿತ್ರವಾಗಿ ಹೊರಹೊಮ್ಮಿರುವುದು ರಾಜ್ ಬಿ ಶೆಟ್ಟಿ ಅಭಿನಯದ ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ. 

     

  • ಬಹಾದ್ದೂರ್‍ನ ಭರ್ಜರಿಯೂ ಸೆಂಚುರಿ.. ಸಂಭ್ರಮ ಅದ್ಧೂರಿ

    bharjari completes 100 days

    ಧ್ರುವ ಸರ್ಜಾ ಅವರ ಭರ್ಜರಿ ಚಿತ್ರ ಭರ್ಜರಿ ಯಶಸ್ಸನ್ನೇ ಕಂಡಿದೆ. ಚಿತ್ರ ಹಿಟ್ ಎಂಬ ಸೂಚನೆ ಸಿಕ್ಕ ದಿನದಿಂದಲೂ ಚಿತ್ರತಂಡ, ಸಿನಿಮಾದ ಪ್ರತಿ ಮೈಲುಗಲ್ಲನ್ನೂ ಸಂಭ್ರಮಿಸುತ್ತಾ ಬಂದಿತ್ತು. 25 ದಿನ, 50 ದಿನ & 75ನೇ ದಿನದ ಸಂಭ್ರಮವನ್ನು ಥಿಯೇಟರುಗಳಲ್ಲಿ ಆಚರಿಸಿತ್ತು. ಧ್ರುವ ಸರ್ಜಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.

    ಇಂದು ಚಿತ್ರಕ್ಕೆ 100 ದಿನ. ಶತದಿನೋತ್ಸವದ ಸಂಭ್ರಮವೂ ಜೋರಾಗಿಯೇ ನಡೆಯಲಿದೆ. ಇಂದು ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಮೈಸೂರು ಬ್ಯಾಂಕ್ ಸರ್ಕಲ್‍ನಿಂದ ನರ್ತಕಿ ಚಿತ್ರಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಿದ್ದಾರೆ. ಡೊಳ್ಳುಕುಣಿತ, ವೀರಗಾಸೆ, ಕೇರಳ ಚಂಡೆ, ಕೀಲುಗೊಂಬೆ, ತಮಟೆ.. ಎಲ್ಲ ವಾದ್ಯಗಳ ಮೇಳವೂ ಇರಲಿದೆ.

    ಇನ್ನು ಇಡೀ ದಿನ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ಹೂವಿನ ಅಭಿಷೇಕ, ಪಟಾಕಿಗಳ ಮೊರೆತ ಇರಲಿದೆ. ಧ್ರುವ ಸರ್ಜಾ ಅವರ 75 ಅಡಿ ಕಟೌಟ್‍ಗೆ ಅಭಿಷೇಕವೂ ನಡೆಯಲಿದೆ. 101 ಕೆಜಿಯ ಕೇಕ್ ಕಟ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  • ಭರ್ಜರಿ.. ಭರ್ಜರಿ ಹಿಟ್.. ಆದರೆ, ಸಂಭಾವನೆ ಕಟ್

    bharjari hit

    ಭರ್ಜರಿ. ಧ್ರುವ ಸರ್ಜಾ ಅವರಿಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. 100 ದಿನ ಪೂರೈಸಿರುವ ಚಿತ್ರದ ಕಲಾವಿರದರು, ತಂತ್ರಜ್ಞರು ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದರೂ, ಆ ಸಂಭ್ರಮ ಅವರ ಮುಖದಲ್ಲಿಲ್ಲ. ಕಾರಣ, ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್. ನಿರ್ಮಾಪಕರು ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಸರಿಯಾಗಿ ಸಂಭಾವನೆ ಕೊಟ್ಟಿಲ್ಲ.

    ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಅನ್ನೋಕೆ ಕಾರಣವೂ ಇದೆ. ಇದೇ ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೂ ನಿರ್ಮಾಪಕರಾಗಿದ್ದವರು. ಆ ಚಿತ್ರವೂ ಹಿಟ್ ಆಗಿತ್ತು. ಆ ಚಿತ್ರದ ನಿರ್ದೇಶಕ, ತಂತ್ರಜ್ಞರಿಗೂ ಶ್ರೀನಿವಾಸ್ ಸಂಭಾವನೆ ಕೊಟ್ಟಿರಲಿಲ್ಲ. ಭರ್ಜರಿ ಚಿತ್ರದ ಬಿಡುಗಡೆ ವೇಳೆ ಕೋರ್ಟ್ ಮೆಟ್ಟಿಲೇರುವ ಸೂಚನೆ ನಿಡಿದ್ದ ನಿರ್ದೇಶಕ ಯೋಗರಾಜ್ ಭಟ್, ಭರ್ಜರಿ ಸಿನಿಮಾ ಬಿಡುಗಡೆಗೆ ತೊಡಕಾಗದಿರಲಿ ಎಂದು ಸುಮ್ಮನಾಗಿದ್ದರು.  ಶ್ರೀನಿವಾಸ್ ಕೂಡಾ ಮತ್ತೊಮ್ಮೆ ಸಂಭಾವನೆ ಕೊಡುವ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಮತ್ತೊಮ್ಮೆ ಸುಳ್ಳಾಗಿತ್ತು. ಯೋಗರಾಜ್ ಭಟ್ಟರಿಗೆ ಕೊಟ್ಟಿದ್ದ ಚೆಕ್ಕು, ಮತ್ತೊಮ್ಮೆ ಬೌನ್ಸ್ ಆಗಿತ್ತು. ಹೀಗಾಗಿ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗ ಮತ್ತೊಮ್ಮೆ ಅದೇ ನಿರ್ಮಾಪಕರ ವಿರುದ್ಧ ಭರ್ಜರಿ ಚಿತ್ರತಂಡದ ಕಲಾವಿದರು ತಂತ್ರಜ್ಞರಿಂದಲೂ ಆರೋಪ ಕೇಳಿಬಂದಿದೆ. ಸ್ವತಃ ಧ್ರುವ ಸರ್ಜಾ ಇದನ್ನು ಒಪ್ಪಿಕೊಂಡಿದ್ದಾರೆ. ನಾವೇನೋ ರಾಜಿಗೆ ಬರಬಹುದು. ಸುಮ್ಮನಾಗಬಹುದು. ಆದರೆ, ನಿರ್ಮಾಪಕರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾಗೆ ಕೆಲಸ ಮಾಡಿದವರಿಗೆ ಕೊಡಬೇಕಾದ ಸಂಭಾವನೆ ಕೊಡುವುದು ಮುಖ್ಯ ಎಂದಿದ್ದಾರೆ ಧ್ರುವ ಸರ್ಜಾ.

    ಹೀಗಾಗಿ ಸಿನಿಮಾ ಶತದಿನೋತ್ಸವ ಆಚರಿಸಿದ್ದರೂ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಚಿತ್ರತಂಡ ಇಲ್ಲ. ಕನಕಪುರ ಶ್ರೀನಿವಾಸ್ ಹೀಗೇಕೆ ಮಾಡ್ತಾರೋ ಅರ್ಥವಾಗಲ್ಲ. 

     

  • ಭರ್ಜರಿ' ಬಾಕ್ಸಾಫೀಸ್ ರಿಯಲ್ ಕಲೆಕ್ಷನ್ ಎಷ್ಟು..?

    bharjari's real box office collection ad per producer

    ಭರ್ಜರಿ, ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ನೀಡಿದ ಚಿತ್ರ. ರಚಿತಾ ರಾಮ್, ಹರಿಪ್ರಿಯಾ ನಟಿಸಿದ್ದ ಚಿತ್ರ, ಶತದಿನೋತ್ಸವವನ್ನಾಚರಿಸಿತ್ತು. ಆಗ ಕೇಳಿಬಂದಿದ್ದ ಸುದ್ದಿಯೇನೆಂದರೆ, ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿದೆ ಅನ್ನೋದು. ಈ ಕುರಿತು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಾಯ್ಬಿಟ್ಟಿದ್ದಾರೆ.

    ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿಲ್ಲ. ಚಿತ್ರಕ್ಕೆ 17 ಕೋಟಿ ಖರ್ಚು ಮಾಡಿದ್ದೆ. 21 ಕೋಟಿ ಬಂತು. ಲಾಭ ಎಂದು ನನಗೆ ಸಿಕ್ಕಿದ್ದು 3 ಕೋಟಿ ಮಾತ್ರ ಎಂದಿದ್ದಾರೆ ಶ್ರೀನಿವಾಸ್.

    ಕೋಟಿ ಕೋಟಿ ಕಲೆಕ್ಷನ್ ಆಯ್ತು ಎಂದು ಮಾತನಾಡಿಬಿಟ್ಟರೆ, ಸಂಭಾವನೆ ಹೆಚ್ಚುತ್ತೆ ಅನ್ನೋದು ಕಾರಣ ಇರಬಹುದೇನೋ ಎಂದು ಧ್ರುವ ಸರ್ಜಾರತ್ತಲೇ ಬ್ಯಾಟು ಬೀಸಿದ್ದಾರೆ. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಬೋಗಸ್ ಫಿಗರ್ ಕೊಡಬಾರದು. ಹಾಗೆ ಹೇಳಿದವರಿಗೆ ಉಗೀರಿ ಎಂದಿದ್ದಾರೆ ಕನಕಪುರ ಶ್ರೀನಿವಾಸ್.

  • ಭರ್ಜರಿಗೆ ಫೇಸ್​ಬುಕ್ ಲೈವ್  ಕಾಟ 

    bharjari in facebook live image

    ಪೈರಸಿ ಅನ್ನೋದು ಚಿತ್ರರಂಗವನ್ನು ಕಾಡುತ್ತಿರುವ ದೆವ್ವ, ಭೂತ..ಏನಾದರೂ ಹೇಳಿ. ಅದರಿಂದ ಚಿತ್ರರಂಗಕ್ಕೆ ಹೊಡೆತ ಬೀಳುತ್ತಿರುವುದು ಸತ್ಯ. ಆದರೆ, ಈ ಬಾರಿ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದರ ಬಿಸಿ ತಟ್ಟಿರುವುದು ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾಗೆ.

    ಧಾರವಾಡದಲ್ಲಿ ಸಂತೋಷ್ ಎಂಬ ಯುವಕ ಥಿಯೇಟರ್ ಹೊಕ್ಕಿದ್ದೇ ತಡ, ಸಿನಿಮಾ ಆರಂಭದಿಂದ ಫೇಸ್​ಬುಕ್​ ಲೈವ್ ಕೊಡಲು ಶುರುಮಾಡಿಬಿಟ್ಟಿದ್ದಾನೆ. ರಾಜ್​ಸಾಗರ್ ಎಂಬ ಯುವಕನೂ ಫೇಸ್​ಬುಕ್​ನಲ್ಲಿ ಇದೇ ಮಾರ್ಗ ಅನುಸರಿಸಿದ್ದಾನೆ. ಇದು ಸುದ್ದಿಯಾಗುತ್ತಿರುವಾಗಲೇ ಮತ್ತೊಬ್ಬ ಮಾಸ್ಕ್ ಮಂಜು, ದೇವು ನಿಶಾಂತ್ ಗೌಡ ದ್ರುವ ದತ್ತ ಎಂಬ ಯುವಕರು ಫೇಸ್​ಬುಕ್​ ಲೈವ್​ನಲ್ಲಿ ಸಿನಿಮಾ ಪ್ರಸಾರ ಮಾಡಿದ್ಧಾನೆ. ಇಷ್ಟು ದಿನ ಸಿಡಿ, ವೆಬ್​ಸೈಟ್​ಗಳ ಮೂಲಕ ಪೈರಸಿ ಎದುರಿಸುತ್ತಿದ್ದ ಚಿತ್ರರಂಗಕ್ಕೆ ಇದು ಇನ್ನೊಂದು ದೊಡ್ಡ ಹೊಡೆತ.

    ಯಾವ ಫೇಸ್​ಬುಕ್ ಮೂಲಕ ಚಿತ್ರವನ್ನು ಪ್ರಚಾರ ಮಾಡುತ್ತಾರೋ..ಅದೇ ಫೇಸ್​ಬುಕ್​ನ ಲೈವ್ ಟೆಕ್ನಾಲಜಿ ಈಗ ಚಿತ್ರರಂಗವನ್ನೇ ಸುಡಲು ಆರಂಭಿಸಿದೆ. ಇಂದು ಧ್ರುವ ಸರ್ಜಾರ ಭರ್ಜರಿ..ನಾಳೆ ಇನ್ನೊಬ್ಬರದ್ದು..

  • ಮೂರು ಗೊಂಬೆಗಳ ಜೊತೆ ಧ್ರುವ ರೊಮ್ಯಾನ್ಸ್

    3 heroines in bharjari

    ಧ್ರುವ ಸರ್ಜಾ ಮತ್ತು ಚೇತನ್‌ ಕಾಂಬಿನೇಷನ್‌ನ 2ನೇ ಚಿತ್ರ, ಧ್ರುವ ಸರ್ಜಾರ ಮೂರನೇ ಚಿತ್ರ ಭರ್ಜರಿ. ಹಿಂದಿನ ಎರಡೂ ಚಿತ್ರಗಳಲ್ಲಿ ಧ್ರುವಾಗೆ ನಾಯಕಿ ಒಬ್ಬರೇ. ರಾಧಿಕಾ ಪಂಡಿತ್. ಆದರೆ, 3ನೇ ಚಿತ್ರದಲ್ಲಿ ಧ್ರುವ ಮೂರು ಗೊಂಬೆಗಳ ಜೊತೆ ರೊಮ್ಯಾನ್ಸ್ ಮಾಡುತ್ತಿದ್ಧಾರೆ. 

    ಆರ್‌.ಎಸ್‌. ಪ್ರೊಡಕ್ಷನ್ಸ್‌ನ ಈ ಸಿನಿಮಾದಲ್ಲಿ ರಚಿತಾ ರಾಮ್‌, ಹರಿಪ್ರಿಯಾ ಹಾಗೂ ವೈಶಾಲಿ ನಾಯಕಿಯರು. ಪ್ರಮುಖ ನಾಯಕಿ ರಚಿತಾರಾಮ್‌. ಇನ್ನೊಂದು ಪ್ರಮುಖ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದರೆ, ಮತ್ತೊಂದು ಮುಖ್ಯ  ಪಾತ್ರದಲ್ಲಿ ವೈಶಾಲಿ ದೀಪಕ್‌ ನಟಿಸಿದ್ದಾರೆ. ಈ ಮೂರೂ ಗೊಂಬೆಗಳು ಒಂದೇ ಹಾಡಿನಲ್ಲಿ ಧ್ರುವ ಜತೆ ಹೆಜ್ಜೆ ಹಾಕಿರುವುದು ವಿಶೇಷ. 

    ಏನಿದು ವಿಶೇಷದ ಹಿಂದಿನ ರಹಸ್ಯ ಎಂದು ಹುಡುಕಿದರೆ, ನಿರ್ದೇಶಕ ಚೇತನ್ ಉತ್ತರ ಕೊಡಲ್ಲ. ಸಿನಿಮಾ ನೋಡಿ, ಎಲ್ಲ ಪಾತ್ರಗಳಿಗೂ ಸ್ಪೇಸ್ ಇದೆ. ಕತೆ ಸಾಗುತ್ತಿರುವಾಗ ಹರಿಪ್ರಿಯಾ ಮತ್ತು ವೈಶಾಲಿ ಪಾತ್ರ ಬರುತ್ತದೆ. ರಚಿತಾ ಅವರದ್ದು ಜಡ್ಜ್‌ಮೆಂಟ್‌ ಸಿಗದೇ ಇರುವ ಪಾತ್ರ. ಹರಿಪ್ರಿಯಾ ಅವರದ್ದು ಸ್ವಲ್ಪ ಸಸ್ಪೆನ್ಸ್‌ ಉಳ್ಳ ಪಾತ್ರ. ಇವತ್ತಿನ ಜನರೇಶನ್‌ಗೆ ತಕ್ಕಂತೆ ಸಿಕ್ಕಾಪಟ್ಟೆ ಎನರ್ಜಿಟಿಕ್‌ ಪಾತ್ರದಲ್ಲಿ ವೈಶಾಲಿ ನಟಿಸಿದ್ದಾರೆ ಅಂತಾರೆ. 

    ಅಂದಹಾಗೆ ಧ್ರುವ ಸಿನಿಮಾಗಳಲ್ಲಿ ಮಾಸ್​ಗೆ ಇಷ್ಟವಾಗುವ ಡೈಲಾಗ್​ಗಳು ಕಾಮನ್. ಆದರೆ, ಧ್ರುವಗಿಂತಾ ನಾನೇ ಹೆಚ್ಚು ಮಾತನಾಡಿದ್ದೇನೆ ಎನ್ನುತ್ತಾರೆ ರಚಿತಾ. ಅವರ ಪಾತ್ರದ ಹೆಸರು ಗೌರಿಯಂತೆ. ಹೀಗಾಗಿಯೇ ಪುಟ್ಟಗೌರಿ ಹಾಡು ರೆಡಿಯಾಗಿರೋದು. ಸೆಕೆಂಡ್‌ ಆಫ್‌ನಲ್ಲಿ ಅಯ್ಯೋ ಗೌರಿಗೆ ಹೀಗೆ ಆಗಬಾರದಿತ್ತು ಅಂತಾ ನೀವು ಬೇಜಾರ್ ಮಾಡ್ಕೋತೀರಾ ಅಂತಾನೇ ಇನ್ನೊಂದು ಡಿಂಪಲ್ ಬೀಳಿಸ್ತಾರೆ ರಚಿತಾ. 

    ಭರ್ಜರಿ ಚಿತ್ರದಲ್ಲಿ ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ಮೂವರು ನಾಯಕಿಯರಿಗೂ ಇದೆ. ಮೂವರಿಗೂ ಒಟ್ಟಿಗೆ ನಟಿಸುವ ಸಾಕಷ್ಟು ದೃಶ್ಯಗಳಿವೆ. ಯಾರೂ ತಮ್ಮ ಸ್ಟಾರ್‌ಗಿರಿಯನ್ನು ತೋರಿಸಿಕೊಂಡಿಲ್ಲ. ಇದು ಭರ್ಜರಿ ಹೈಲೈಟ್ಸ್.