` vinay rajkumar - chitraloka.com | Kannada Movie News, Reviews | Image

vinay rajkumar

 • ಸಿಕ್ಸ್ತ್ ಸೆನ್ಸ್ ಸೀನ ವಿನಯ್ ರಾಜ್‍ಕುಮಾರ್

  ಸಿಕ್ಸ್ತ್ ಸೆನ್ಸ್ ಸೀನ ವಿನಯ್ ರಾಜ್‍ಕುಮಾರ್

  ವಿನಯ್ ರಾಜ್‍ಕುಮಾರ್ ನಟಿಸಿರುವ ಹೊಸ ಸಿನಿಮಾ ಗ್ರಾಮಾಯಣ. ಚಿತ್ರದ ನಿರ್ಮಾಪಕರು ಮೃತಪಟ್ಟ ಹಿನ್ನೆಲೆಯಲ್ಲಿ ಚಿತ್ರ ನಿಂತೇಹೋಯ್ತು ಎನ್ನುತ್ತಿರುವಾಗ ಚಿತ್ರದ ಇನ್ನೊಂದು ಸ್ವಾರಸ್ಯವನ್ನು ರಿವೀಲ್ ಮಾಡಿದೆ ಚಿತ್ರತಂಡ. ವಿನಯ್ ರಾಜ್‍ಕುಮಾರ್ ಅವರ ಪಾತ್ರದ ಹೆಸರು ಸಿಕ್ಸ್ತ್‍ಸೆನ್ಸ್ ಸೀನ ಎನ್ನುವ ವಿಷಯ ಬಹಿರಂಗವಾಗಿದೆ.

  ದಾಡಿ, ಲುಂಗಿಯ ರಗಡ್ ಲುಕ್‍ನಲ್ಲಿ ವಿನಯ್ ರಾಜ್‍ಕುಮಾರ್ ಗಮನ ಸೆಳೆದಿದ್ದಾರೆ. ಅಮೃತಾ ಅಯ್ಯರ್ ನಾಯಕಿಯಾಗಿರುವ ಚಿತ್ರದಲ್ಲಿರೋ ಪಕ್ಕಾ ಹಳ್ಳಿ ಸ್ಟೋರಿ. ಚಿತ್ರೀಕರಣ ಬಹುತೇಕ ಮುಗಿಯುತ್ತಿರುವ ಹೊತ್ತಿನಲ್ಲಿ ಶುರುವಾದ ಲಾಕ್‍ಡೌನ್‍ನಿಂದಾಗಿ ಚಿತ್ರ ಅಲ್ಲಿಯೇ ನಿಂತಿದೆ. ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಲಾಕ್ ಡೌನ್ ಮುಗಿದ ನಂತರ ಎಲ್ಲವನ್ನೂ ಪೂರೈಸಿಕೊಂಡು ಜನರ ಮುಂದೆ ಬರುವ ಉತ್ಸಾಹದಲ್ಲಿದೆ.

 • ಹುಟ್ಟೂರು ನೆನಪಿಸುತ್ತಿರುವ ಗ್ರಾಮಾಯಣ

  gramayana teaser recalls childhood memories

  ನೀವು ನಿಮ್ ಹಳ್ಳೀನ ಎಷ್ಟು ಮಿಸ್ ಮಾಡ್ಕೋತೀರೋ ಗೊತ್ತಿಲ್ಲ. ಆದರೆ, ನಿಮ್ ಹಳ್ಳಿ ನಿನ್ನಮ್ಮ ಎಷ್ಟು ಮಿಸ್ ಮಾಡ್ಕೊಂತಿದೆ ಅನ್ನೊದನ್ನ ಯಾವತ್ತಾದರೂ ಯೋಚ್ನೆ ಮಾಡಿದಿರಾ.. ಇಂತಾದ್ದೊಂದು ಪ್ರಶ್ನೆಯೊಂದಿಗೆ ಮುಗಿಯುತ್ತೆ ಗ್ರಾಮಾಯಣ ಟೀಸರ್.

  ಸುಮಾರು 5 ನಿಮಿಷಗಳ ಟೀಸರ್‍ನಲ್ಲಿ ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಹಲವು ಜನರ ಅಭಿಪ್ರಾಯಗಳಿವೆ. ಅವರು ತಮ್ಮ ಹಳ್ಳಿ ಹೇಳಿಕೊಳ್ಳುವುದು ಮುಗಿಯುತ್ತಿದ್ದಂತೆಯೇ, ಡಾ.ರಾಜ್, ತಮ್ಮ ಹುಟ್ಟೂರು ಗಾಜನೂರಿನ ಕಥೆ ಹೇಳ್ತಾರೆ. ಅದಾದ ಮೇಲೆ ತೆರೆದುಕೊಳ್ಳೋದು ಅಸಲಿ ಟೀಸರ್. ವಿನಯ್ ರಾಜ್‍ಕುಮಾರ್ ಪ್ರವೇಶವಾಗೋದು ಆಗಲೇ.

  ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣದಲ್ಲಿ ವಿನಯ್ ರಾಜ್‍ಕುಮಾರ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಮೃತಾ ಅಯ್ಯರ್, ಸಂಪತ್, ಮೈತ್ರಿಯಾ, ಅಪರ್ಣಾ ಮೊದಲಾದವರು ನಟಿಸಿರುವ ಸಿನಿಮಾಗೆ ಎಲ್.ಎನ್.ಮೂರ್ತಿ ನಿರ್ಮಾಪಕರು.

 • ಹೈಕೋರ್ಟ್‍ನಲ್ಲಿ ವಿನಯ್ ರಾಜ್‍ಕುಮಾರ್ ಫೋಟೋ ವಿವಾದ

  shooting in high court creates controversy

  ಇತ್ತೀಚೆಗಷ್ಟೇ ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ಮುಹೂರ್ತವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಹೀಗಿರೋವಾಗ್ಲೇ ಚಿತ್ರಕ್ಕೊಂದು ವಿವಾದ ಅಂಟಿಕೊಂಡಿದೆ. ಅದು ಚಿತ್ರದ ಫೋಟೋಶೂಟ್‍ಗೆ ಸಂಬಂಧಿಸಿದ್ದು.

  ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಫೋಟೋಶೂಟ್ ಹೈಕೋರ್ಟ್ ಆವರಣ ಮತ್ತು ಲೈಬ್ರೆರಿಯಲ್ಲಿ ನಡೆಸಲಾಗಿದೆ. ವಿವಾದಕ್ಕೆ ಕಾರಣವಾಗಿರುವುದು ಇದೇ ವಿಚಾರ. ಏಕೆಂದರೆ, ಹೈಕೋರ್ಟ್ ಆವರಣದಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧ.

  ಭದ್ರತೆಗಾಗಿ ಹೈಕೋರ್ಟ್ ಆವರಣದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ದಿನ ನಡೆಯುವ ಧ್ವಜಾರೋಹಣದಲ್ಲಿ ಮಾಧ್ಯಮಗಳು ಕ್ಯಾಮೆರಾ ತರಬಹುದು, ವಿಡಿಯೋ ಶೂಟ್ ಮಾಡಬಹುದು. ನಿವೃತ್ತ ನ್ಯಾಯಮೂರ್ತಿಗಳ ಬೀಳ್ಕೊಡುಗೆ ಸಮಾರಂಭಗಳಲ್ಲಿ ಕೂಡಾ ಇದಕ್ಕೆ ಅವಕಾಶವಿದೆ. ಆದರೆ, ಅನಂತು ವ/ಸ ನುಸ್ರತ್ ಫೋಟೋಶೂಟ್ ನಡೆದಿರುವುದು ರಿಜಿಸ್ಟ್ರಾರ್ ಗಮನಕ್ಕೆ ಬಂದಿಲ್ಲ.

  ಈ ಕುರಿತು ವಕೀಲ ಜಿ.ಆರ್. ಮೋಹನ್ ಎಂಬುವರು ರಿಜಿಸ್ಟ್ರಾರ್ ಅವರಲ್ಲಿ ಮಾಹಿತಿ ಕೇಳಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಈ ಕುರಿತು ಬಾರ್ ಅಸೋಸಿಯೇಷನ್ ಅವರನ್ನು ಸಂಪರ್ಕಿಸಿದಾಗ ಗೊತ್ತಾಗಿರುವುದು ಇಷ್ಟು. ರಾಜ್ ಕುಟುಂಬ ಅನುಮತಿಯಿಲ್ಲದೆ ಶೂಟ್ ಮಾಡಿಲ್ಲ. ಫೋಟೋ ಶೂಟ್‍ಗೆ ಅನುಮತಿಗಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದರು. ಕನ್ನಡ ಮತ್ತು ಕರ್ನಾಟಕಕ್ಕೆ ಇಷ್ಟು ದೊಡ್ಡ ಸೇವೆ ಮಾಡಿರುವ ರಾಜ್ ಕುಟುಂಬದವರ ಮನವಿಗೆ ಇಲ್ಲ ಎನ್ನುವುದು ನಮಗೆ ಸಾಧ್ಯವಿರಲಿಲ್ಲ. ಹೀಗಾಗಿ ಅನುಮತಿ ಕೊಟ್ಟೆವು. ಅವರು ಸಂಘದ ಲೈಬ್ರೆರಿ ಕೋಣೆಯಲ್ಲಿ ಹಾಗೂ ಸಂಘದ ಆವರಣದಲ್ಲಿ ಶೂಟ್ ಮಾಡಿದ್ದಾರೆ. ಇದರಲ್ಲಿ ಪ್ರಮಾದವೇನೂ ಆಗಿಲ್ಲ ಎಂದಿದ್ದಾರೆ.

  ಅಲ್ಲದೆ ಶೂಟಿಂಗ್ ನಡೆದಿರುವುದು ಆಗಸ್ಟ್ 15ರಂದು. ಸ್ವಾತಂತ್ರ್ಯ ದಿನಾಚರಣೆಯ ರಜೆ ವೇಳೆ ನಡೆದಿರುವ ಶೂಟಿಂಗ್‍ನಲ್ಲಿ ಭದ್ರತಾ ಲೋಪವೇನೂ ಆಗಿಲ್ಲ ಎಂಬ ವಾದವೂ ಇದೆ.