` vinay rajkumar - chitraloka.com | Kannada Movie News, Reviews | Image

vinay rajkumar

  • ಅರೆರೇ... ಇವರು ವಿನಯ್ ರಾಜ್‌ಕುಮಾರ್..!

    vinay rakumar's new look in ten

    ಸಂಪೂರ್ಣ ಗಡ್ಡಧಾರಿಯಾಗಿಯೇ ಗುರುತಿಸಿಕೊಂಡಿರುವ ವಿನಯ್ ರಾಜ್‌ಕುಮಾರ್ ಈಗ ಇದ್ದಕ್ಕಿದ್ದಂತೆ ಗಡ್ಡವನ್ನಷ್ಟೇ ಅಲ್ಲ, ಮೀಸೆಯನ್ನೂ ತೆಗೆದುಬಿಟ್ಟಿದ್ದಾರೆ. ಲುಕ್ ಕಂಪ್ಲೀಟ್ ಹೊಸದಾಗಿದೆ. ಬಾಕ್ಸಿಂಗ್ ಪಟುವಾಗಿ ನಟಿಸುತ್ತಿರುವ ವಿನಯ್ ಅವರ ಹೊಸ ಲುಕ್ ಇದು.

    ಇದು ವಿನಯ್ ಅಬಿನಯದ ಟೆನ್ ಸಿನಿಮಾದ ಫೋಟೋ. ಕರಮ್ ಚಾವ್ಲಾ ನಿರ್ದೇಶನದ ಪುಷ್ಕರ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ವಿನಯ್, ಹೊಚ್ಚ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್ ಅವರಿಗೆ ಈ ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ ಬಾಕ್ಸಿಂಗ್ ಕೋಚ್ ಆಗಿ ನಟಿಸಿದ್ದಾರೆ.

  • ನೆಪೋಟಿಸಂ ಆರೋಪಕ್ಕೆ ವಿನಯ್ ರಾಜ್`ಕುಮಾರ್ ಕೊಟ್ಟರು ಮುಟ್ಟಿನೋಡಿಕೊಳ್ಳುವಂತಾ ಉತ್ತರ..!

    vinay rajkumar's answer to nepotism issue

    ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ನಂತರ ಬಾಲಿವುಡ್‍ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ಬಂದ ಪದ ನೆಪೋಟಿಸಂ. ಹೀಗಂದ್ರೆ ಇನ್ನೇನೂ ಅಲ್ಲ, ಚಿತ್ರಮಂದಿರದ ದೊಡ್ಡ ದೊಡ್ಡವರು ತಾವು ಮತ್ತು ತಮ್ಮ ಕುಟುಂಬದವರನ್ನೇ ಬೆಳೆಸುತ್ತಾರೆ. ಉಳಿದವರನ್ನು ತುಳಿಯುತ್ತಾರೆ ಎನ್ನೋದು ಈ ನೆಪೋಟಿಸಂ ಅನ್ನೋ ಪದದ ಆರ್ಥ ವಿವರಣೆ. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಸ್ವಜನ ಪಕ್ಷಪಾತ.

    ಡಾ.ರಾಜ್ ಕುಟುಂಬವೂ ಇಂಥದ್ದನ್ನೇ ಮಾಡ್ತಿದೆ. ಉಪೇಂದ್ರರ ಮಕ್ಕಳೂ ಇಂಡಸ್ಟ್ರಿಗೆ ಬರ್ತಿದ್ದಾರೆ ಎಂದು ಒಂದು ಟ್ರೋಲ್ ಪೇಜ್‍ನವರು ನೆಪೋಟಿಸಂ ಪ್ರಸ್ತಾಪ ಮಾಡಿ ಪೋಸ್ಟ್ ಮಾಡಿದ್ದರು. ಇದಕ್ಕೆ ಡಾ.ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‍ಕುಮಾರ್ ಮಗ ವಿನಯ್ ರಾಜ್‍ಕುಮಾರ್ ಮುಟ್ಟಿನೋಡಿಕೊಳ್ಳುವಂತಾ ಉತ್ತರ ಕೊಟ್ಟಿದ್ದಾರೆ.

    `ಕನ್ನಡದಲ್ಲಿ ನೆಪೋಟಿಸಂ ಬಗ್ಗೆ ಮಾತಾಡ್ತಿದ್ದೀಯಾ.. ತಮ್ಮ ಮನೆ ಮಕ್ಕಳನ್ನಷ್ಟೇ ಬೆಳೆಸಿಲ್ಲ. ಹೊರಗಿನಿಂದ ಬಂದ ಎಷ್ಟೋ ಜನರನ್ನು ಸ್ವಂತ ಬ್ಯಾನರ್‍ನಲ್ಲಿ ಅವಕಾಶ ನೀಡಿ ಬೆಳೆಸುತ್ತಿದ್ದಾರೆ. ಟ್ಯಾಲೆಂಟ್ ಬಗ್ಗೆ ಮಾತಾಡ್ತಿದ್ದೀಯಾ.. ನಿನ್ ಹತ್ರ ಏನಿದೆ ಟ್ಯಾಲೆಂಟ್..? ನೆಪೋಟಿಸಂ ಇದ್ದಿದ್ದರೆ ಇವತ್ತು ಇಂಡಸ್ಟ್ರಿಯಲ್ಲಿ ಹೊರಗಿನವರು ಇರ್ತಾನೇ ಇರ್ಲಿಲ್ಲ. ಡಾ.ರಾಜ್ ಏನು ಅಂತ ಹೊರಗಿನಿಂದ ಬಂದ ಜಗ್ಗೇಶ್ ಅವರ ಬಳಿ ಕೇಳು. ರಾಜ್ ಮಕ್ಕಳು ಏನು ಅಂತ ಡಾರ್ಲಿಂಗ್ ಕೃಷ್ಣ, ಯಶ್‍ಗೆ ಕೇಳು, ಹೇಳ್ತಾರೆ. ಫಾಲೋವರ್ಸ್ ಹೆಚ್ಚು ಮಾಡಿಕೊಳ್ಳೋಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬೇಡ' ಎಂದು ಉತ್ತರ ಕೊಟ್ಟಿದ್ದಾರೆ ವಿನಯ್ ರಾಜ್‍ಕುಮಾರ್.

    ಅಫ್‍ಕೋರ್ಸ್..  ಡಾ.ರಾಜ್ ಧೈರ್ಯ ಮಾಡಿ ಮುಂದಾಳತ್ವ ವಹಿಸದೇ ಇದ್ದಿದ್ದರೆ, ಕನ್ನಡ ಚಿತ್ರರಂಗ ಮದ್ರಾಸ್ ಬಿಟ್ಟು ಬರುತ್ತಲೇ ಇರಲಿಲ್ಲ. ಆಗಿನ ಕಾಲಕ್ಕೇ ತಮ್ಮ ವೃತ್ತಿ ಜೀವನವನ್ನೇ ಪಣವಾಗಿಟ್ಟಿದ್ದರು ರಾಜ್. ಅದಾದ ನಂತರ ಕನ್ನಡ ಚಿತ್ರರಂಗದ ಬೆಳವಣಿಯಲ್ಲಿ ರಾಜ್ ಬೇರೆಯದ್ದೇ ಪಾತ್ರ ವಹಿಸಿದರು. ಅವರೂ ಬೆಳೆದರು. ಅವರ ಸಂಸ್ಥೆಗಳೂ ಬೆಳೆದವು. ಅವುಗಳ ಜೊತೆ ಜೊತೆಗೆ ನೂರಾರು ತಂತ್ರಜ್ಞರು, ಕಲಾವಿದರೂ ಬೆಳೆದರು. ಇದೆಲ್ಲದರ ನಡುವೆ ಚಿತ್ರರಂಗದ ಯುವ ಕಲಾವಿದರ ಸಿನಿಮಾಗಳಿಗೆ ಬೆನ್ನೆಲುಬಾಗುವುದರಲ್ಲಿ ರಾಜ್ ಮನೆತನ ಹಿಂದೆ ಬಿದ್ದಿಲ್ಲ. ರಾಜ್ ಮನೆತನ ಅಷ್ಟೇ ಅಲ್ಲ, ಕನ್ನಡದಲ್ಲಿ ಅಂಥಾದ್ದೊಂದು ಸಿಸ್ಟಂ ಇಲ್ಲ.

    ತಮ್ಮ ಮನೆಯವರ ಸಿನಿಮಾ ಎಂದಾಗ ವಿಶೇಷ ಕಾಳಜಿ ವಹಿಸುತ್ತಾರೆ. ಅದು ಅತ್ಯಂತ ಸಹಜ. ಆದರೆ ಬಾಲಿವುಡ್‍ನಲ್ಲಿ ಕೇಳಿ ಬರುತ್ತಿರುವಂತೆ ಬೇರೆಯವರ ಸಿನಿಮಾ ತುಳಿಯುವ, ಸೋಲಿಸುವ, ಅವಕಾಶ ಸಿಗದಂತೆ ಮಾಡುವ ಪ್ರಯತ್ನಗಳಿಲ್ಲ.

  • ಪೆಪೆ ಅವತಾರ : ವಿನಯ್ ರಾಜ್ ಕುಮಾರ್ ಏನಿದು ಮೀನಿಂಗು..?

    ಪೆಪೆ ಅವತಾರ : ವಿನಯ್ ರಾಜ್ ಕುಮಾರ್ ಏನಿದು ಮೀನಿಂಗು..?

    ವಿನಯ್ ರಾಜ್‍ಕುಮಾರ್ ಅವರ ಹೊಸ ಚಿತ್ರದ ಪೋಸ್ಟರ್ ಹೊರಬಿದ್ದಿದೆ. ಚಿತ್ರದ ಹೆಸರು ಪೆಪೆ. ಏನಿದರ ಮೀನಿಂಗು.. ಕೇಳುವಂತಿಲ್ಲ. ಟೈಟಲ್ ಕುತೂಹಲ ಕೆರಳಿಸಿರುವುದಂತೂ ಸತ್ಯ. ಮೈತುಂಬಾ ಸುರಿಯುತ್ತಿರುವ ರಕ್ತ, ಲಾಂಗು.. ಟೋಟಲ್ಲಿ ರಗಡ್ ಲುಕ್ಕು. ಜೊತೆಗೆ ಟೈಟಲ್ ಪೆಪೆ.

    ಶ್ರೀಲೇಶ್ ಎಸ್. ನಾಯರ್ ಎಂಬುವವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ನಿಜಗುಣ ಗುರುಸ್ವಾಮಿ ಮತ್ತು ಉದಯ ಶಂಕರ್ ಎಸ್. ನಿರ್ಮಾಪಕರು.

  • ಪೆಪೆ.. ವಿನಯ್ ರಾಜ್ ಕುಮಾರ್ ಭರವಸೆ

    ಪೆಪೆ.. ವಿನಯ್ ರಾಜ್ ಕುಮಾರ್ ಭರವಸೆ

    ಪೆಪೆ ಚಿತ್ರದ ಟೀಸರ್ ಹೊರಬಿದ್ದಿದೆ. ವಿನಯ್ ರಾಜ್ಕುಮಾರ್ ಅವರ ಹಳೆಯ ಸಿನಿಮಾಗಳಾದ ಸಿದ್ದಾರ್ಥ, ರನ್ ಌಂಟನಿ, ಅನಂತು ವರ್ಸಸ್ ನುಸ್ರತ್ ನೋಡಿದವರಿಗೆ ಇಲ್ಲಿ ಬೇರೆಯದೇ ವಿನಯ್ ಸಿಗುತ್ತಾರೆ. ಈ ಬಾರಿ ವಿನಯ್ ಪಕ್ಕಾ ಲೋಕಲ್ ಹುಡುಗನಾಗಿದ್ದಾರೆ.

    ಟೀಸರ್ ನೋಡಿದವರಿಗೆ ಇದು ದಕ್ಷಿಣ ಕನ್ನಡ ಅಥವಾ ಮಲೆನಾಡಿನ ಕಥೆ ಇರಬಹುದು ಎಂಬ ಸುಳಿವು ಸಿಗುತ್ತದೆ. ಕಥೆಯ ಗುಟ್ಟು ಬಿಟ್ಟುಕೊಡಲ್ಲ. ಆದರೆ ಕ್ಯಾಮೆರಾ ಕಣ್ಣಿನಲ್ಲಿ ಕಾಣುವ ಪ್ರತಿ ಸೀನ್ ಕೂಡಾ ಕುತೂಹಲ ಹುಟ್ಟಿಸುವಂತಿದೆ. ಪೆಪೆ ಟ್ರೇಲರ್ ಪ್ರೇಕ್ಷಕರಿಗೆ ಇಷ್ಟವಾಗೋದು ಈ ಕಾರಣಕ್ಕೆ. ಪಂಚೆ ಉಟ್ಟುಕೊಂಡು ಹಳ್ಳಿ ಹುಡುಗನಾಗಿ ಮಿಂಚಿರುವ ವಿನಯ್ ಮಚ್ಚು ಹಿಡಿದಿದ್ದಾರೆ. ಆದರೆ ರೌಡಿ ಅಲ್ಲ.

    ಶ್ರೀಲೇಷ್ ಎಸ್.ನಾಯರ್ ನಿರ್ದೇಶನದ ಚಿತ್ರದಲ್ಲಿ ಇನ್ನೊಂದೆಡೆ ಗಮನ ಸೆಳೆಯೋದು ಪೂರ್ಣಚಂದ್ರ ತೇಜಸ್ವಿ ಬಿಜಿಎಂ. ಉದಯ್ ಶಂಕರ್ ಎಸ್. ನಿರ್ಮಾಣದ ಪೆಪೆ, ಕೇವಲ ಟೈಟಲ್ ಅಷ್ಟೇ ಅಲ್ಲ, ಟೀಸರ್ನಿಂದಲೂ ಕ್ಯೂರಿಯಾಸಿಟಿ ಹೆಚ್ಚಿಸಿರೋ ಸಿನಿಮಾ.

  • ಮಗನ ಚಿತ್ರಕ್ಕೆ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಶುಭ ಹಾರೈಕೆ

    vinay rajkumar's new movie

    ಸಿದ್ಧಾರ್ಥ ನಂತರ ವಿನಯ್ ರಾಜ್​ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ಅನಂತು ವರ್ಸಸ್ ನುಸ್ರತ್. ಲಾಯರ್ ವೇಷದಲ್ಲಿ ಕಾಣಿಸಿಕೊಳ್ತಿರೋ ವಿನಯ್ ರಾಜ್​ಕುಮಾರ್​ಗೆ ಇದು 3ನೇ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ವಿಶೇಷವೆಂದರೆ, ಮಗನ ಚಿತ್ರದ ಮುಹೂರ್ತಕ್ಕೆ ಅಪ್ಪ, ಚಿಕ್ಕಪ್ಪ ಮತ್ತು ದೊಡ್ಡಪ್ಪ ಸಾಕ್ಷಿಯಾಗಿದ್ದು.

    ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರಕ್ಕೆ ಅಪ್ಪ ರಾಘವೇಂದ್ರ ರಾಜ್​ಕುಮಾರ್, ದೊಡ್ಡಪ್ಪ ಶಿವರಾಜ್ ಕುಮಾರ್, ಮತ್ತು ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಶುಭ ಹಾರೈಸಿದರು. ಸುಧೀರ್ ಶಾನ್​ಭೋಗ್ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೋಡಕ್ಷನ್ ನಿರ್ಮಾಣವಾಗುತ್ತಿದೆ.

    Related Articles :-

    ಲಾಯರ್ ಆದರಾ ವಿನಯ್ ರಾಜ್​ಕುಮಾರ್..?

  • ಮಗನ ಜೊತೆ ನಟಿಸ್ತಾರೆ ಶಿವಣ್ಣ..!

    shivarajkumar to act with vinay rajkumar

    ಶಿವ ರಾಜ್‍ಕುಮಾರ್ ಹಾಗೂ ವಿನಯ್ ರಾಜ್‍ಕುಮಾರ್ ಒಟ್ಟಿಗೇ ನಟಿಸಲಿದ್ದಾರೆ. ಎನ್.ಎಸ್.ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶಿವಣ್ಣ ಓಕೆ ಎಂದಿದ್ದಾರಂತೆ. ಜಟ್ಟ, ಮೈತ್ರಿ, ಮೈನಾ ಮೊದಲಾದ ಚಿತ್ರಗಳ ನಿರ್ಮಾಪಕ ರಾಜ್‍ಕುಮಾರ್, ಆಗಸ್ಟ್‍ನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರಂತೆ.

    ವಿನಯ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ. ಶಿವರಾಜ್‍ಕುಮಾರ್ ಅವರಿಗೂ ಮಗನಂತೆಯೇ. ಇಬ್ಬರ ಕಾಂಬಿನೇಷನ್‍ನ ಸಿನಿಮಾ ಶುರುವಾಗೋದು ದಿ ವಿಲನ್, ರುಸ್ತುಂ, ಕವಚ, ಎಸ್‍ಆರ್‍ಕೆ ಚಿತ್ರಗಳೆಲ್ಲ ಕಂಪ್ಲೀಟ್ ಆದ ನಂತರ.

  • ಮೈಲಾರ್ಡ್ ನನ್ನ ವಾದ.. ಹಾಡು ಮತ್ತೆ ಬರಲಿದೆ..!

    chelisuva modagalu song to be remade

    ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ.. ಹಾಡು ನೆನಪಿದೆಯಾ..? ಚಲಿಸುವ ಮೋಡಗಳು ಚಿತ್ರದಲ್ಲಿ ಡಾ.ರಾಜ್‍ಕುಮಾರ್, ಅಂಬಿಕಾ ಅವರ ಮೇಲೆ ಚಿತ್ರಿಸಲಾಗಿದ್ದ ಸುಂದರ ಗೀತೆಯದು. ನವಿರು ಹಾಸ್ಯವನ್ನೊಳಗೊಂಡಿದ್ದ ಆ ಯುಗಳ ಗೀತೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಆರ್ಡರ್ ಆರ್ಡರ್ ಎನ್ನುವುದನ್ನು ನೋಡುವುದೇ ಒಂದು ಚೆಂದ. ಈಗ ಆ ಹಾಡು ಮತ್ತೊಮ್ಮೆ ಬರುತ್ತಿದೆ.

    ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಈ ಹಾಡನ್ನು ಮರುಸೃಷ್ಟಿಸಲಾಗುತ್ತಿದೆ. ವಿನಯ್ ರಾಜ್‍ಕುಮಾರ್ ಅಭಿನಯದ ಚಿತ್ರದಲ್ಲಿ ಈ ಹಾಡನ್ನು ಆಗಿನ ಸ್ಟೆಪ್‍ಗಳನ್ನೇ ಇಟ್ಟುಕೊಂಡು ಚಿತ್ರೀಕರಿಸಲಾಗುತ್ತಿದೆ. ಈ ಸಿನಿಮಾದಲ್ಲಿಯೂ ನಾಯಕನದ್ದು ಲಾಯರ್ ಪಾತ್ರ. 36 ವರ್ಷಗಳ ನಂತರ ಆ ಸೂಪರ್ ಹಿಟ್ ಮರುಸೃಷ್ಟಿಯಾಗುತ್ತಿರುವುದು ವಿಶೇಷ.

  • ಯುವ ರಾಜ್ ಕುಮಾರ್ ಚಿತ್ರಕ್ಕೆ ಕೂಡಿ ಬಂತಾ ಕಾಲ?

    ಯುವ ರಾಜ್ ಕುಮಾರ್ ಚಿತ್ರಕ್ಕೆ ಕೂಡಿ ಬಂತಾ ಕಾಲ?

    ದೊಡ್ಮನೆ ಕುಡಿಯ ಮೊದಲ ಚಿತ್ರವೆಂದರೇನೇ ಹಾಗೆ, ಒಂದು ಸಂಚಲನ ಮೂಡಿಸುತ್ತೆ. ಈಗ ಯುವ ರಾಜ್ ಕುಮಾರ್ ಸರದಿ. ಇದೇ ಮೊದಲ ಬಾರಿಗೆ ರಾಜ್ ಕುಟುಂಬದ ಒಬ್ಬ ಹೀರೋ ಎಂಟ್ರಿ ಬೇರೆಯವರ ಬ್ಯಾನರ್ ಮೂಲಕ ಆಗುತ್ತಿದೆ. ಹೊಂಬಾಳೆ ಮೂಲಕ ಯುವ ರಾಜ್ ಕುಮಾರ್ ಎಂಟ್ರಿಯಾಗುತ್ತಿದ್ದು, ಸಂತೋಷ್ ಆನಂದರಾಮ್ ನಿರ್ದೇಶಕ ಅನ್ನೋ ಸಂಗತಿ ಗೊತ್ತೇ ಇದೆ. ಈ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿ ಕೊನೆಯಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ ಎಂಬ ಸುದ್ದಿ ಚಿತ್ರರಂಗದ ತುಂಬೆಲ್ಲ ಹರಿದಾಡುತ್ತಿದೆ.

    ರಾಮಾಚಾರಿಯಲ್ಲಿ ಪ್ರೀತಿ, ಸ್ನೇಹ ಹಾಗೂ ವಾತ್ಸಲ್ಯದ ಕಥೆ ಹೇಳಿದ್ದ ಸಂತೋಷ್ ಆನಂದರಾಮ್, ರಾಜಕುಮಾರ ಚಿತ್ರದಲ್ಲಿ ತಂದೆ ಮಕ್ಕಳ ಬಾಂಧವ್ಯ, ಅನಾಥಾಶ್ರಮದ ಬಗ್ಗೆ ಮನೋಜ್ಞ ಚಿತ್ರಣ ಕಟ್ಟಿಕೊಟ್ಟಿದ್ದರು. ಸಂತೋಷ್ ಅವರ ವೃತ್ತಿ ಜೀವನದ ಮಾಸ್ಟರ್ ಪೀಸ್ ರಾಜಕುಮಾರ. ಯುವರತ್ನದಲ್ಲಿ ಕಾಲೇಜು, ಡ್ರಗ್ಸ್ ಇತ್ಯಾದಿ ಇತ್ಯಾದಿಗಳ ಬಗ್ಗೆ ಸಂದೇಶ ನೀಡಿದ್ದರು. ರಾಘವೇಂದ್ರ ಸ್ಟೋರ್ಸ್ ಚಿತ್ರ ಇನ್ನೂ ರಿಲೀಸ್ ಆಗಬೇಕಿದೆ. ಯುವ ಚಿತ್ರದಲ್ಲಿ ತಂದೆ ಮಗನ ವಾತ್ಸಲ್ಯದ ಕಥೆ ಇದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಇಲ್ಲ.

    ಯುವರಾಜ್ ಚಿತ್ರದ ಮುಹೂರ್ತವನ್ನು ಅದ್ಧೂರಿಯಾಗಿ ನಡೆಸುವ ಯೋಚನೆ ಹೊಂಬಾಳೆಯವರಿಗಿದೆ. ವಿಜಯ್ ಕಿರಗಂದೂರು ಚಿತ್ರದ ಮುಹೂರ್ತಕ್ಕೆ ವಿಶೇಷ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫೆಬ್ರವರಿ 2ನೇ ವಾರದಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಪ್ರಿ-ಪ್ರೊಡಕ್ಷನ್ಸ್ ಕೆಲಸಗಳೆಲ್ಲ ಬಹುತೇಕ ಮುಗಿದಿವೆ ಎಂಬ ಮಾಹಿತಿ ಇದೆ. ಚಿತ್ರಕ್ಕೆ ಮಲಯಾಳಂ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಹೆಸರು ಕೇಳಿಬರುತ್ತಿದೆ.

  • ರವಿ ಬಸ್ರೂರು ಮತ್ತೆ ಡೈರೆಕ್ಟರ್

    ravi basrur to direct vinay rajkumar

    ಕೆಜಿಎಫ್ ಚಿತ್ರದ ನಂತರ ಮ್ಯೂಸಿಕ್‍ನಲ್ಲಿ ಬೇರೆಯದೇ ಎತ್ತರ ತಲುಪಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ಹೀರೋ ಆಗುತ್ತಿರುವುದು ವಿನಯ್ ರಾಜ್‍ಕುಮಾರ್.

    ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ವಿರ್ಮಶಕರ ಮನಗೆ ದ್ದ ವಿನಯ್ ರಾಜ್‍ಕುಮಾರ್ ನಟಿಸುತ್ತಿರುವ ಚಿತ್ರದ ಕಥೆ ಏನು..? ಅದು ಸದ್ಯಕ್ಕೆ ಸಸ್ಪೆನ್ಸ್.

    ರವಿ ಬಸ್ರೂರು ಗರ್‍ಗರ್ ಮಂಡ್ಲ, ಕಟಕದಂತಹ ಚಿತ್ರ ನೀಡಿದವರು. ಕಟಕ ಚಿತ್ರವಂತೂ ಅಪಾರ ಮೆಚ್ಚುಗೆ ಗಳಿಸಿದ್ದ ವಿಭಿನ್ನ ಶೈಲಿಯ ಥ್ರಿಲ್ಲರ್. ರವಿ-ವಿನಯ್ ಕಾಂಬಿನೇಷನ್ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಪೃಥ್ವಿ, ಜಟ್ಟ, ಮೈತ್ರಿ ಸಿನಿಮಾ ಖ್ಯಾತಿಯ ರಾಜ್‍ಕುಮಾರ್.

    ಒಟ್ಟಿನಲ್ಲಿ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುವ ನಿರ್ದೇಶಕ-ನಟ-ನಿರ್ಮಾಪಕರು ಮತ್ತೊಮ್ಮೆ ಜೊತೆಯಾಗಿದ್ದಾರೆ. ಸ್ಪೆಷಲ್ ಗ್ಯಾರಂಟಿ.

  • ರಾಜ್ ಫ್ಯಾಮಿಲಿಗೆ ಪುಷ್ಕರ್ ಸಿನಿಮಾ

    pushkar to produce vinay rajkumar's movie

    ಕನ್ನಡ ಚಿತ್ರರಂಗದ ಪ್ರತಿಷ್ಠಿತ ಬ್ಯಾನರ್ ಆಗಿರುವ ಪುಷ್ಕರ್ ಫಿಲಂಸ್, ಇದೇ ಮೊದಲ ಬಾರಿಗೆ ರಾಜ್ ಫ್ಯಾಮಿಲಿಗೆ ಸಿನಿಮಾ ಮಾಡಲು ಮುಂದಾಗಿದೆ. ಹೀರೋ ಆಗುತ್ತಿರುವುದು ವಿನಯ್ ರಾಜ್‍ಕುಮಾರ್. ನಿರ್ದೇಶಕರಾಗಿ ಕರಮ್ ಚಾವ್ಲಾ ಆಯ್ಕೆಯಾಗಿದ್ದಾರೆ.

    ಕರಂ ಚಾವ್ಲಾ ಮೂಲತಃ ಸಿನಿಮಾಟೋಗ್ರಾಫರ್. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಅವನೇ ಶ್ರೀಮನ್ನಾರಾಯಣ ಹಾಗೂ ರನ್ ಆ್ಯಂಟನಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದವರು. ಈಗ ನಿರ್ದೇಶಕರಾಗುತ್ತಿದ್ದಾರೆ.

    ವಿನಯ್ ಈ ಚಿತ್ರದಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದು, ರಿಯಲೆಸ್ಟಿಕ್ ಕಮರ್ಷಿಯಲ್ ಮೂವಿ ಎಂದಿದ್ದಾರೆ ವಿನಯ್. ವಿನಯ್ ಹುಟ್ಟುಹಬ್ಬದಂದೇ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದು, ಬಾಕ್ಸರ್ ಪಾತ್ರಕ್ಕೆ ವಿನಯ್ ತಯಾರಿ ಆರಂಭಿಸಿದ್ದಾರೆ.

    ರಾಜ್ ಕುಟುಂಬದ ಜೊತೆ ಇದು ನನ್ನ ಮೊದಲ ಸಿನಿಮಾ. ಅದೇ ದೊಡ್ಡ ಖುಷಿ. ವಿನಯ್‍ಗೆ ಹೇಳಿ ಮಾಡಿಸಿದಂತಹ ರಗಡ್ ಕಥೆ ಇದೆ. ಕನ್ನಡದ ಮಟ್ಟಿಗೆ ಇದು ಹೊಸ ಸಿನಿಮಾ ಆಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  • ಲಾಯರ್ ಆದರಾ ವಿನಯ್ ರಾಜ್​ಕುಮಾರ್..?

    vinay rajkumar image

    ನಟ ವಿನಯ್‌ ರಾಜಕುಮಾರ್‌ ಎರಡು ಹೊಸ ಸಿನಿಮಾಗಳಿಗೆ ಸಿದ್ಧರಾಗುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಒಂದು ‘ಅಚ್ಚರಿ’ ಇನ್ನೊಂದು ‘ಅನಂತು V/S ನುಸ್ರತ್‌. ಈ ಎರಡರಲ್ಲಿ ಅನಂತು V/S ನುಸ್ರತ್‌ ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಪೂಜೆ ನಡೆದಿತ್ತು. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ವಿನಯ್ ರಾಜ್​ಕುಮಾರ್ ಲಾಯರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

    ಲಾಯರ್ ಆಫೀಸ್​ನಲ್ಲಿ, ಅದಕ್ಕೇ ಸಂಬಂಧಿಸಿದ ಪುಸ್ತಕಗಳ ಮಧ್ಯೆ ಸ್ಟೈಲಿಶ್ ಆಗಿ ನಿಂತಿರುವ ವಿನಯ್ ರಾಜ್​ಕುಮಾರ್ ಗೆಟಪ್ ಕುತೂಹಲ ಹುಟ್ಟಿಸಿದೆ.ವಿನಯ್‌, ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಒಂದು ಸುದ್ದಿ ಮೂಲದ ಮಾಹಿತಿ. ಸುಧೀರ್‌ ಶಾನುಭೋಗ್‌ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೊಡಕ್ಷನ್ಸ್‌ನಲ್ಲಿ ಸಿದ್ಧವಾಗುತ್ತಿದೆ. ನಾಯಕಿ ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ

  • ಲಾಯರ್ ಒಬ್ಬನ ಪ್ರೀತಿ ನಿವೇದನೆ ಹೀಗಿರುತ್ತೆ ನೋಡಿ.

    love songs of a lawyer in ananthu vs nushruth

    ಪ್ರೀತಿಯನ್ನು ಹೇಳಿಕೊಳ್ಳೋಕೆ ಇದುವರೆಗೆ ಹೂವು, ಹಣ್ಣು, ಸೂರ್ಯ, ಚಂದ್ರ, ಚಾಕೊಲೇಟು, ಮಂಜು, ಮಳೆಯನ್ನಷ್ಟೇ ನೋಡಿದ್ದ ಪ್ರೇಕ್ಷಕರಿಗೆ ಇದು ಹೊಸ ಭಾಷೆಯ ಪ್ರೀತಿ. ಅಪ್ಪಟ ಲಾಯರ್ ಭಾಷೆಯ ಪ್ರೀತಿ. ಹೀಗೂ ಲವ್ ಸಾಂಗ್ ಬರೆಯಬಹುದಾ ಎಂದು ಅಚ್ಚರಿ ಹುಟ್ಟಿಸುವಂತೆ ಒಂದು ಹಾಡು ಕಟ್ಟಿಕೊಟ್ಟಿದೆ ಅನಂತು V/s ನುಸ್ರತ್ ಸಿನಿಮಾ ತಂಡ.

    ಈಗ ತಾನೇ ಜಾರಿಯಾಗಿದೆ ಪ್ರೀತಿ ಎಂದು ಶುರುವಾಗುವ ಹಾಡಿನಲ್ಲಿ ಬಳಸಿರುವುದ ಅಪ್ಪಟ ಕೋರ್ಟ್ ಭಾಷೆ. ವಿಚಾರಣೆಯ ಹಂತ, ಪೂರ್ವಾಪರ, ಕಾನೂನು, ಆರೋಪಿ, ವಾದ ಮಂಡನೆ, ಮುಂದೂಡಿಕೆ, ಕರಾರು, ದಾಖಲಾತಿ, ಮೀಸಲಾತಿ, ಹಾಜರಾತಿ, ಪ್ರಕರಣ, ಜಾಮೀನು.. ಹೀಗೆ ಅಪ್ಪಟ ಕೋರ್ಟಿನಲ್ಲಿ ಬಳಸುವ ಪದಗಳನ್ನೇ ಇಟ್ಟುಕೊಂಡು ಚೆಂದದ ಹಾಡು ಕಟ್ಟಿಕೊಟ್ಟಿದ್ದಾರೆ ಗೀತ ಸಾಹಿತಿ ಸಿದ್ದು ಕೋಡಿಪುರ ಮತ್ತು ಸಂಗೀತ ನಿರ್ದೇಶಕ ಸುನಾದ್ ಗೌತಮ್.

    ವಿನಯ್ ರಾಜ್‍ಕುಮಾರ್, ಲತಾ ಹೆಗ್ಡೆ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ವಿನಯ್, ಲಾಯರ್ ಅನಂತ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಡ್ಜ್ ನುಸ್ರತ್ ಫಾತಿಮಾ  ಪಾತ್ರದಲ್ಲಿ ಕಾಣಿಸಿಕೊಂಡಿರೋದು ಲತಾ ಹೆಗ್ಡೆ. ಹಾಸ್ಯ ಮಿಶ್ರಿತ ನವಿರು ಪ್ರೇಮಕಥೆಗೆ ಸುಧೀರ್ ಶಾನ್‍ಬೋಗ್ ನಿರ್ದೇಶನವಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ರೆಡಿಯಾಗುತ್ತಿದೆ.

  • ವಿನಯ್ ರಾಜಕುಮಾರ್ ಚಿತ್ರ ರಿಲೀಸ್ ಡೇಟ್ ಫಿಕ್ಸ್

    ವಿನಯ್ ರಾಜಕುಮಾರ್ ಚಿತ್ರ ರಿಲೀಸ್ ಡೇಟ್ ಫಿಕ್ಸ್

    ವಿನಯ್ ರಾಜಕುಮಾರ್ ಅವರ ಹಲವು ಚಿತ್ರಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಕೆಲವು ಹೆಚ್ಚೂ ಕಡಿಮೆ ಮುಗಿದಿದ್ದರೂ ಅಲ್ಲಲ್ಲೇ ನಿಂತುಬಿಟ್ಟಿವೆ. ಇದೀಗ ಅವರ 10 ಚಿತ್ರದ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ವಿನಯ್ ರಾಜಕುಮಾರ್ ಬಾಕ್ಸರ್ ಆಗಿ ನಟಿಸಿರುವ ಚಿತ್ರ 10. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ 10 ಇದೇ ಡಿಸೆಂಬರ್ 16ರಂದು ರಿಲೀಸ್ ಆಗುತ್ತಿದೆ.

    ಕ್ಯಾಮೆರಾಮನ್ ಕರ್ಮ್ ಚಾವ್ಲಾ 10 ಚಿತ್ರದಿಂದ ನಿರ್ದೇಶಕರಾಗಿದ್ದಾರೆ. ಒಬ್ಬ ಬಾಕ್ಸರ್ ಆಗಲು ಏನೇನೆಲ್ಲ ಮಾಡಬೇಕೋ.. ಅಷ್ಟನ್ನೂ ತಯಾರಿ ಮಾಡಿಕೊಂಡು ದೇಹವನ್ನು ಸ್ವಲ್ಪ ಹಿಗ್ಗಿಸಿಕೊಂಡು ಪಾತ್ರಕ್ಕಾಗಿ ಫಿಟ್ ಆಗಿದ್ದರು ವಿನಯ್ ರಾಜಕುಮಾರ್. ಅನುಷಾ ರಂಗನಾಥ್ ಚಿತ್ರದ ನಾಯಕಿಯಾಗಿದ್ದು, ಇದೇ ಶುಕ್ರವಾರ ಚಿತ್ರದ ಮೊದಲ ಹಾಡು ರಿಲೀಸ್ ಆಗಲಿದೆ.

  • ವಿನಯ್ ರಾಜಕುಮಾರ್ ಚಿತ್ರದಲ್ಲಿ ರವಿಚಂದ್ರನ್ ಪಾತ್ರವೇನು..?

    ವಿನಯ್ ರಾಜಕುಮಾರ್ ಚಿತ್ರದಲ್ಲಿ ರವಿಚಂದ್ರನ್ ಪಾತ್ರವೇನು..?

    ವಿನಯ್ ರಾಜಕುಮಾರ್-ಆದಿತಿ ಪ್ರಭುದೇವ ನಟಿಸುತ್ತಿರೋ ಅಂದೊಂದಿತ್ತು ಕಾಲ ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿರೋ ಸುದ್ದಿ ಹಳೆಯದು. ಪುಟ್ಟ ಪಾತ್ರವಾಗಿದ್ದರೂ ಇಡೀ ಚಿತ್ರದ ಕಥೆ ಹೇಳೋದೇ ನಾನು ಎಂದಿದ್ದಾರೆ ರವಿಚಂದ್ರನ್. ಸುರೇಶ್ ನಿರ್ಮಾಣದ ಚಿತ್ರಕ್ಕೆ ಕೀರ್ತಿ ನಿರ್ದೇಶಕ.

    ವೀಕೆಂಡ್ ವಿತ್ ರಮೇಶ್ ಮಾದರಿಯಲ್ಲಿ ಮೆಮೊರಿಸ್ ವಿತ್ ರವಿಚಂದ್ರನ್ ಅನ್ನೋ ಶೋದ ನಿರೂಪಕ ನಾನು. ವಿನಯ್ ನನ್ನ ಕುಟುಂಬದ ಹುಡುಗ. ಅವನ ಚಿತ್ರದಲ್ಲಿ ನಟಿಸೋಕೆ ಕೇಳಿದಾಗ ಇಲ್ಲ ಎನ್ನೋಕೆ ಆಗಲಿಲ್ಲ. ನಾನು ಆ ಕಾರ್ಯಕ್ರಮದ ಮೂಲಕ ನಾಯಕನ ಕಥೆ ಹೇಳಿಸುತ್ತೇನೆ. ಮೊದಲ ಬಾರಿಗೆ ನಿರೂಪಕನಾಗಿ ನಟಿಸುತ್ತಿದ್ದೇನೆ ಎಂದಿದ್ದಾರೆ ರವಿಚಂದ್ರನ್.

    ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿದ್ದೇನೆ. ನಿರೂಪಕನಾಗೋದು ಹೊಸದು ಎಂದಿರುವ ರವಿಚಂದ್ರನ್ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿರೋದಕ್ಕೆ ಕಾರಣ ಕಡಿಮೆ ಕೆಲಸ ಮತ್ತು ಹೆಚ್ಚು ಸಂಭಾವನೆ ಎಂದಿದ್ದಾರೆ.ನ

  • ವಿನಯ್ ರಾಜಕುಮಾರ್ ಜೊತೆ ಜೊತೆಯಲಿ ಮೇಘಾ ಶೆಟ್ಟಿ

    ವಿನಯ್ ರಾಜಕುಮಾರ್ ಜೊತೆ ಜೊತೆಯಲಿ ಮೇಘಾ ಶೆಟ್ಟಿ

    ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ, ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿನುಗೋಕೆ ಸಿದ್ಧವಾಗಿದ್ದಾರೆ. ಈ ಬಾರಿ ದೊಡ್ಮನೆ ಹುಡುಗ ವಿನಯ್ ರಾಜ್`ಕುಮಾರ್ ಜೊತೆಯಾಗಿದ್ದಾರೆ. ಗ್ರಾಮಾಯಣ ಚಿತ್ರಕ್ಕೆ ಮೇಘಾ ಶೆಟ್ಟಿ ಹೀರೋಯಿನ್ ಆಗಿದ್ದಾರೆ.

    ಈ ಮೊದಲು ಗಣೇಶ್ ಜೊತೆ ತ್ರಿಬ್ಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದ್ದ ಮೇಘಾ ಶೆಟ್ಟಿ, ಆಪರೇಷನ್ ಲಂಡನ್ ಕೆಫೆ, ಕೈವ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ. ಗ್ರಾಮಾಯಣ ಪಕ್ಕಾ ಹಳ್ಳಿ ಸ್ಟೋರಿಯಾಗಿದ್ದು, ಹಳ್ಳಿ ಹುಡುಗಿಯಾಗಿಯೇ ಮೇಘಾ ಶೆಟ್ಟಿ ಮಿಂಚಲಿದ್ದಾರೆ. ಮೇಘಾ ಶೆಟ್ಟಿಯವರು ಮೂಗು ಚುಚ್ಚಿಸಿಕೊಂಡು ಮೂಗುತಿ ಧರಿಸಿದ್ದು ಇದಕ್ಕೇನೇ.

    ದೇವನೂರು ಚಂದ್ರು ನಿರ್ದೇಶನದ ಚಿತ್ರಕ್ಕೆ ಇದೀಗ ಲಹರಿ ಫಿಲಮ್ಸ್ ಮತ್ತು ವೀನಸ್ ಎಂಟರ್‍ಟೈನ್‍ಮೆಂಟ್ ನಿರ್ಮಾಣದ ಹೊಣೆಗಾರಿಕೆ ಇದೆ.  ಚಿತ್ರದ ಚಿತ್ರೀಕರಣ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದ್ದು, ಮೊದಲ ದಿನದ ಚಿತ್ರೀಕರಣ ಕಡೂರಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ನಟನಾಗಿ ವಿನಯ್ ರಾಜ್ ಕುಮಾರ್ ಅವರು ನಟಿಸುತ್ತಿರುವುದು ಅಧಿಕೃತವಾಗಿದ್ದು, ನಿರ್ಮಾಪಕರು ಇದೀಗ ಚಿತ್ರದ ನಾಯಕ ನಟಿಯಾಗಿ ಮೇಘಾ ಶೆಟ್ಟಿಯವರನ್ನು ಅಂತಿಮಗೊಳಿಸಿದ್ದಾರೆ.

  • ವಿನಯ್ ರಾಜ್ ಕುಮಾರ್ ಬಾಕ್ಸಿಂಗ್ ಚಿತ್ರಕ್ಕೆ ಟೈಟಲ್ 10

    vinay rajkumar's new film with pushkar titled ten

    ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ವಿನಯ್ ರಾಜ್ ಕುಮಾರ್ ಬಾಕ್ಸರ್ ಆಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಟೆನ್ ಅನ್ನೋದು ಚಿತ್ರದ ಟೈಟಲ್. ಕರಮ್ ಚಾವ್ಲಾ ನಿರ್ದೇಶನದ ಚಿತ್ರಕ್ಕೆ ಅನುಷಾ ರಂಗನಾಥ್ ನಾಯಕಿ. ಇಷ್ಟಕ್ಕೂ 10 ಅನ್ನೋ ನಂಬರ್‍ನ್ನೇ ಟೈಟಲ್ ಆಗಿಟ್ಟಿದ್ದೇಕೆ..?

    ಬಾಕ್ಸಿಂಗ್‍ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ, ರೆಫ್ರಿ 10ರವರೆಗೂ 1..2..3.. ಎಂದು ಕೌಂಟ್ ಮಾಡುತ್ತಾರೆ. 10 ಕೌಂಟ್ ಮುಗಿದ ನಂತರವೂ ಎದುರಾಳಿ ಮೇಲೇಳದಿದ್ದರೆ ಬಿದ್ದಿದ್ದವನು ಸೋತಂತೆ. ಅಷ್ಟರೊಳಗೆ ಬಿದ್ದಿದ್ದವನು ಎದ್ದು ಕಾದಾಡಬೇಕು. ಇನ್ನು ಬಾಕ್ಸಿಂಗ್‍ನಲ್ಲಿ ಸಾಮಾನ್ಯವಾಗಿ 10 ರೌಂಡ್ಸ್ ಫಿಕ್ಸ್ ಆಗಿರುತ್ತೆ. ಈ ಎಲ್ಲವನ್ನೂ ನೋಡಿಕೊಂಡೇ ಚಿತ್ರಕ್ಕೆ 10 ಅನ್ನೋ ಟೈಟಲ್ ಫಿಕ್ಸ್ ಮಾಡಿದೆವು' ಎನ್ನುತ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  • ವಿನಯ್ ರಾಜ್`ಕುಮಾರ್ 10 ಟೀಸರ್ ಔಟ್

    vinay rajkumar's ten teaser out

    ವಿನಯ್ ರಾಜ್‍ಕುಮಾರ್, ಪುಷ್ಕರ್ ಫಿಲಂಸ್ ಕಾಂಬಿನೇಷನ್ನಿನ ಸಿನಿಮಾ 10. ಚಿತ್ರದ ಟೀಸರ್ ಹೊರಬಿದ್ದಿದ್ದು, ಬೇರೆಯದೇ ಫೀಲ್ ಕೊಡುತ್ತಿದೆ. 57 ಸೆಕೆಂಡುಗಳ ಟೀಸರಿನಲ್ಲಿ ಬಾಕ್ಸಿಂಗ್ ರಿಂಗ್‍ನಲ್ಲಿ ವಿನಯ್ ಹೊಡೆದಾಡುವ ದೃಶ್ಯಗಳಿವೆ. ಜೊತೆಗೆ ಅನುಷಾ ರಂಗನಾಥ್ ಮತ್ತು ವಿನಯ್ ಕಾಂಬಿನೇಷನ್ನಿನ ದೃಶ್ಯಗಳು ಬೇರೆ ಏನನ್ನೋ ಹೇಳುತ್ತಿವೆ. ವಿಭಿನ್ನ ಚಿತ್ರ ಎನ್ನುವುದಕ್ಕೆ ಯಾವುದೇ ಅನುಮಾನಗಳಿಲ್ಲ.

    ಕರಮ್ ಚಾವ್ಲಾ ನಿರ್ದೇಶನದ ಚಿತ್ರದಲ್ಲಿ ಬಾಕ್ಸರ್ ಒಬ್ಬನ ಏಳುಬೀಳಿನ ಕಥೆಯಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ಚಿತ್ರವನ್ನು ಆಗಸ್ಟ್ ನಂತರ ತೆರೆಗೆ ತರುವ ಯೋಚನೆಯಲ್ಲಿದ್ದಾರೆ.

  • ವಿನಯ್ ರಾಜ್`ಕುಮಾರ್ ಗ್ರಾಮಾಯಣಕ್ಕೆ ಮತ್ತೆ ಚಾಲನೆ

    ವಿನಯ್ ರಾಜ್`ಕುಮಾರ್ ಗ್ರಾಮಾಯಣಕ್ಕೆ ಮತ್ತೆ ಚಾಲನೆ

    ಸಿದ್ಧಾರ್ಥ ಚಿತ್ರದ ಮೂಲಕ ಕಾಲಿಟ್ಟ ವಿನಯ್ ರಾಜ್`ಕುಮಾರ್ ಅವರಿಗೆ ಚಿತ್ರರಂಗದಲ್ಲಿ ಇನ್ನೂ ಶುಕ್ರದೆಸೆ ಆರಂಭವಾಗಿಲ್ಲ ಎಂದೇ ಹೇಳಬೇಕು. ವಿನಯ್ ಅವರ ಹಲವು ಚಿತ್ರಗಳು ಸುದ್ದಿಯಲ್ಲಿರುವುದು ನಿಜ. ವಿನಯ್ ಹೊಸ ಚಿತ್ರಗಳನ್ನು, ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಆದರೆ ಅವರ ಚಿತ್ರಗಳು ಶುರುವಾಗಿ ಬಿಡುಗಡೆಯಾವುದಕ್ಕೆ ನಿಧಾನವಾಗುತ್ತಿದೆ. ಗ್ರಾಮಾಯಣದ ಕಥೆಯೂ ಹಾಗೆಯೇ ಆಗಿದೆ.

    ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಶುರುವಾಗಿದ್ದ, ಬಹುತೇಕ ನಿಂತೇ ಹೋಗಿದ್ದ ಗ್ರಾಮಾಯಣಕ್ಕೆ ಈಗ ಮುಕ್ತಿ ಸಿಗುವಂಂತೆ ಕಾಣುತ್ತಿದೆ. ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಶಿವಣ್ಣ ಆಪ್ತಬಳಗದ ಕೆ.ಪಿ.ಶ್ರೀಕಾಂತ್ ಸಿನಿಮಾವನ್ನು ಟೇಕಾಫ್ ಮಾಡುತ್ತಿದ್ದಾರೆ.  ‘ಯುಐ’ ಸಿನಿಮಾದ ನಂತರ ಶ್ರಿಕಾಂತ್ ಮತ್ತು ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.

    ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಒಂದೇ ಒಂದು ಟೀಸರ್ನಿಂದ ಹಲವರ ಗಮನ ಸೆಳೆದಿತ್ತು. ಕೋವಿಡ್ನಿಂದ ಮತ್ತು ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಹೊಸದಾಗಿ ಚಿತ್ರವನ್ನ ಶುರು ಮಾಡ್ತಿದ್ದಾರೆ. ಜೂನ್ 8ರಂದು ಈ ಸಿನಿಮಾದ ಮುಹೂರ್ತ ನಡೆಯಲಿದೆ. ಆರಂಭದಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್, ನಿಜಕ್ಕೂ ಅದ್ಭುತವಾಗಿತ್ತು. ಬೇರೆಯದೇ ಫ್ಲೇವರ್ ಇತ್ತು. ವಿನಯ್ ರಾಜಕುಮಾರ್ ವ್ಹಾವ್ ಎನ್ನುವಂತೆ ಕಾಣಿಸಿದ್ದರು. ಟೇಕಿಂಗ್ಸ್ ಸಖತ್ತಾಗಿಯೇ ಇತ್ತು. ಈಗ ನಿರ್ಮಾಪಕರು ಬದಲಾಗಿದ್ದಾರೆ. 8ನೇ ತಾರೀಕು ಮುಹೂರ್ತ.

  • ವಿನಯ್ ರಾಜ್`ಕುಮಾರ್ ಮುಂದಿನ ಸಿನಿಮಾ ಯಾವಾಗ?

    ವಿನಯ್ ರಾಜ್`ಕುಮಾರ್ ಮುಂದಿನ ಸಿನಿಮಾ ಯಾವಾಗ?

    ವಿನಯ್ ರಾಜ್`ಕುಮಾರ್ ಅವರ ಸಿನಿಮಾ ರಿಲೀಸ್ ಯಾವಾಗ? ಈ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. 2015ರಲ್ಲಿ ಸಿದ್ಧಾರ್ಥ ಚಿತ್ರದ ಮೂಲಕ ಎಂಟ್ರಿ ಕೊಟ್ಟ ವಿನಯ್, ನಂತರದ ಈ 5 ವರ್ಷಗಳಲ್ಲಿ ನಟಿಸಿದ್ದು 2 ಚಿತ್ರಗಳಲ್ಲಿ ಮಾತ್ರ. ಕೈಲಿ ಚಿತ್ರಗಳಿವೆ.

    ಗ್ರಾಮಾಯಣ, ಅಂದೊಂದಿತ್ತು ಕಾಲ, ಟೆನ್ ಮತ್ತು ಪೆಪೆ. ಇವುಗಳಲ್ಲಿ ಗ್ರಾಮಾಯಣ ಚಿತ್ರ ಅರ್ಧಕ್ಕೇ ನಿಂತಿದೆ. ನಿರ್ಮಾಪಕರ ಅಕಾಲಿಕ ಮರಣ ಚಿತ್ರವನ್ನು ಅರ್ಧದಲ್ಲೇ ನಿಲ್ಲುವಂತೆ ಮಾಡಿದೆ. ಆ ಚಿತ್ರ ನಿಲ್ಲಲ್ಲ ಎಂದಿದ್ದಾರೆ ವಿನಯ್. ಅಂದೊಂದಿತ್ತು ಕಾಲ ಶೂಟಿಂಗ್ ನಡೆಯುತ್ತಿದೆ.

    ಪುಷ್ಕರ್ ಜೊತೆಗಿನ ಟೆನ್ ಚಿತ್ರ ಕಂಪ್ಲೀಟ್ ಆಗಿದ್ದು, ರಿಲೀಸ್ ಆಗೋಕೆ ರೆಡಿ. ಯಾವಾಗ ಅನ್ನೋದು ಸಸ್ಪೆನ್ಸ್. ಇದರ ಮಧ್ಯೆ ಪೆಪೆ ಚಿತ್ರದ ಕೆಲಸವೂ ಶುರುವಾಗಿದೆ.

  • ವಿನಯ್ ರಾಜ್‍ಕುಮಾರ್ ಗೆ ಮಲ್ಲು ಚೆಲುವೆ ನಾಯಕಿ

    malyalam actress manasa in sandalwood

    ವಿನಯ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಮಲೆಯಾಳಿ ಚೆಲುವೆ ಬರುತ್ತಿದ್ದಾರೆ. ಮಾನಸಾ ರಾಧಾಕೃಷ್ಣನ್ ಈ ನವನಾಯಕಿಯ ಹೆಸರು. ಅಪ್ಪ ಅಮ್ಮ ಪ್ರೀತಿ ಹೆಸರಿನ ಚಿತ್ರದಲ್ಲಿ ಮಾನಸಾ ಪ್ರೀತಿಯಾಗಲಿದ್ದಾರೆ. ಅಪ್ಪ ಅಮ್ಮನಾಗಿರುವುದು ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್.

    ಕನ್ನಡದಲ್ಲಿ ಮಲಯಾಳಿ ಚೆಲುವೆಯರು ಮಿಂಚುವುದು ಹೊಸದೇನಲ್ಲ. ಇತ್ತೀಚಿನ ಉದಾಹರಣೆಗಳನ್ನಷ್ಟೇ ಹೇಳಬೇಕೆಂದರೆ ಭಾವನಾ ಮೆನನ್ ಹಾಗೂ ನಿತ್ಯಾ ಮೆನನ್ ಇದ್ದಾರೆ. ರಮ್ಯಾ ನಂಬೀಸನ್, ಭಾಮಾ ಸೇರಿದಂತೆ ಹಲವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಮಲೆಯಾಳಿ ಚೆಲುವೆಯರು. ಈಗ ಆ ದೊಡ್ಡ ಪಟ್ಟಿಗೆ ಸೇರ್ಪಡೆಯಾಗುತ್ತಿರುವುದು ಮಾನಸಾ ರಾಧಾಕೃಷ್ಣನ್.