` director nandakishore, - chitraloka.com | Kannada Movie News, Reviews | Image

director nandakishore,

 • ಬೃಹಸ್ಪತಿ ಮನೋರಂಜನ್ ಸಿಕ್ಸ್‍ಪ್ಯಾಕ್ ಹೆಂಗೆ..?

  brihaspathi movie highlights

  ಬೃಹಸ್ಪತಿ. ಮನೋರಂಜನ್ ರವಿಚಂದ್ರನ್ ಅಭಿನಯದ ಈ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದ ಕಥೆ, ತಾರಾಗಣದಂತೆಯೇ ಗಮನ ಸೆಳೆದಿರುವುದು ಮನೋರಂಜನ್ ಸ್ಟೈಲ್. ಮೊದಲ ಚಿತ್ರ ಸಾಹೇಬದಲ್ಲಿ ಸಾಫ್ಟ್ ಹುಡುಗನಾಗಿ, ಅಮ್ಮನ ಪ್ರೀತಿಯ ಮಗನಾಗಿ ಕಾಣಿಸಿಕೊಂಡಿದ್ದ ಮನೋರಂಜನ್ ಈ ಚಿತ್ರದಲ್ಲಿ ಸ್ವಲ್ಪ ರಫ್ & ಟಫ್ ಆಗಿ ಕಾಣಿಸಿಕೊಳ್ತಾರೆ.

  ಎಂಜಿನಿಯರ್ ಪಾತ್ರದಲ್ಲಿ ನಟಿಸಿರುವ ಮನೋರಂಜನ್, ಕೆಲವು ದೃಶ್ಯಗಳಲ್ಲಿ ಪ್ರೇಕ್ಷಕರ ಕಣ್ಣು ಒದ್ದೆ ಮಾಡಲಿದ್ದಾರೆ ಎನ್ನುವ ಭರವಸೆ ನಿರ್ದೇಶಕ ನಂದಕಿಶೋಕರ್ ಅವರಿಂದ ಸಿಗುತ್ತಿದೆ. ಚಿತ್ರದ ಕಥೆಯೇ ಹಾಗಿದೆ. ಸರಳವಾದ ಕಥೆಯೊಳಗೆ ನೋಡ ನೋಡುತ್ತಲೇ ಪ್ರೇಕ್ಷಕ ಇಳಿದು ಹೋಗುತ್ತಾನೆ. ಯುವಕರಂತೂ ಮನೋರಂಜನ್ ಅವರಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರೆ ಎನ್ನುವುದು ನಿರ್ದೇಶಕರ ನುಡಿ.

  ಚಿತ್ರದಲ್ಲಿ ಮನೋರಂಜನ್ ತಮ್ಮ ದೇಹದಾಢ್ರ್ಯ ಪ್ರದರ್ಶನವನ್ನೂ ಮಾಡಿದ್ಧಾರೆ. ಹುರಿಗಟ್ಟಿದ ಮಾಂಸಖಂಡಗಳ ಮನೋರಂಜನ್ ಅವರ ಪೋಸ್ಟರ್ ಕಣ್ಣು ಕುಕ್ಕುವಂತಿದೆ. ಜ್ಯೂ.ಕ್ರೇಜಿಸ್ಟಾರ್ ಆಗುವ ಭರವಸೆ ಮೂಡಿಸಿರುವ ಮನೋರಂಜನ್‍ಗೆ ಬೃಹಸ್ಪತಿ, ಬೃಹತ್ ಆದ ಹಿಟ್ ಕೊಡಲಿ.

 • ಭಯದಿಂದಲೇ ಮನೋರಂಜನ್ ಬೃಹಸ್ಪತಿಯಾದ ಕಥೆ

  manoranjan's dilemma

  ಜ್ಯೂನಿಯರ್ ಕ್ರೇಜಿಸ್ಟಾರ್ ಮನೋರಂಜನ್ ಅಭಿನಯದ ಬೃಹಸ್ಪತಿ ಇದೇ ವಾರ ತೆರೆ ಕಾಣುತ್ತಿದೆ. ಮನೋರಂಜನ್ ಅವರಿಗೆ ಇದು 2ನೇ ಸಿನಿಮಾ. ರಾಕ್‍ಲೈನ್ ಬ್ಯಾನರ್‍ನಲ್ಲಿ ನಟಿಸಿರುವ ಮನೋರಂಜನ್‍ಗೆ ತನ್ನ ಆರಂಭದ ಮೊದಲ ಎರಡೂ ಚಿತ್ರಗಳು ದೊಡ್ಡ ಬ್ಯಾನರ್‍ನಲ್ಲೇ ಬಂದ ಖುಷಿಯಿದೆ.

  ಜಯಣ್ಣ ಬ್ಯಾನರ್‍ನಲ್ಲಿ ಸಾಹೇಬನಾಗಿ ಕಾಣಿಸಿಕೊಂಡಿದ್ದ ಮನೋರಂಜನ್‍ಗೆ, 2ನೇ ಚಿತ್ರದಲ್ಲಿ ರಾಕ್‍ಲೈನ್ ಬ್ಯಾನರ್‍ನಲ್ಲಿ ನಟಿಸುವ ಅವಕಾಶ. ಹಾಗೆ ನೋಡಿದರೆ, ರಾಕ್‍ಲೈನ್ ವೆಂಕಟೇಶ್ ಮನೋರಂಜನ್‍ಗೆ ಅಪರಿಚಿತರೇನೂ ಅಲ್ಲ. ಪ್ಯಾಮಿಲಿ ಫ್ರೆಂಡ್ ಆಗಿದ್ದ ರಾಕ್‍ಲೈನ್, ಚಿಕ್ಕಂದಿನಿಂದಲೂ ಮನೋರಂಜನ್ ನೋಡಿದವರು.

  ಆದರೆ, ಬೃಹಸ್ಪತಿ ಚಿತ್ರದ ಆಫರ್ ಬಂದಾಗ ಮನೋರಂಜನ್‍ಗೆ ಸಣ್ಣದೊಂದು ಭಯವೂ ಇತ್ತು. ಏಕೆಂದರೆ, ಅದು ತಮಿಳಿನ ಧನುಷ್ ಅಭಿನದಯ ಚಿತ್ರದ ರೀಮೇಕ್. ತಮಿಳಿನಲ್ಲಿ ವಿಐಪಿ ಸಿನಿಮಾ ಧನುಷ್ ಪಾಲಿಗೆ 25ನೇ ಚಿತ್ರ. ಅಭಿನಯದ ವಿಚಾರಕ್ಕೆ ಬಂದರೆ, ಧನುಷ್‍ಗೆ ಧನುಷ್‍ರೇ ಸಾಟಿ.

  ಚಿತ್ರದಲ್ಲಿ ಅಭಿನಯಕ್ಕೆ ವಿಭಿನ್ನ ಶೇಡ್‍ಗಳಿವೆ. ಈ ಪಾತ್ರವನ್ನು ನಾನು ಮಾಡಬಲ್ಲೆನಾ ಎಂಬ ಆತಂಕದಲ್ಲಿದ್ದವರಿಗೆ ಧೈರ್ಯ ಹೇಳಿದ್ದು ರಾಕ್‍ಲೈನ್ ವೆಂಕಟೇಶ್ ಮತ್ತು ನಿರ್ದೇಶಕ ನಂದಕಿಶೋರ್. ಈಗ ಚಿತ್ರ ಸಿದ್ಧವಾಗಿ ತೆರೆಗೆ ಬರುತ್ತಿದೆ. ಸಿನಿಮಾ ನೋಡಿದ ಮೇಲೆ ಕೂಡಾ ತನ್ನನ್ನು ಧನುಷ್ ಅವರ ಜೊತೆ ಹೋಲಿಸಬೇಡಿ ಅನ್ನೋದು ಮನೋರಂಜನ್ ವಿನಂತಿ.

 • ರಶ್ಮಿಕಾ ಜೊತೆ ಅದೇನೇನ್ ಮಾತಾಡವ್ರೆ ಧ್ರುವಾ

  pogaru dialogue trailer on oct 24th

  ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ, ರಶ್ಮಿಕಾ ನಟಿಸಲಿದ್ದಾರೆ ಎಂದಾಗಲೇ ಕುತೂಹಲ ಹುಟ್ಟಿತ್ತು. ಈಗ ಆ ಕುತೂಹಲದ ಇನ್ನೊಂದು ಮಜಲು ತೋರಿಸಲಿದ್ದಾರೆ ನಂದಕಿಶೋರ್. ಅಕ್ಟೋಬರ್ 24ಕ್ಕೆ ಪೊಗರು ಚಿತ್ರದ ಡೈಲಾಗ್ ಟ್ರೇಲರ್ ಹೊರಬೀಳಲಿದೆ. ಇನ್ನೊಂದ್ಸಲ ಓದಿಕೊಳ್ಳಿ, ಇದು ಡೈಲಾಗ್ ಟ್ರೇಲರ್ ಮಾತ್ರ. ಕಥೆಯ ಸಣ್ಣದೊಂದು ಗುಟ್ಟನ್ನೂ ಬಿಡಲ್ಲ.

  ಇನ್ನೂ ಈ ಡೈಲಾಗ್ ಟ್ರೇಲರ್‍ನಲ್ಲಿ ಧ್ರುವ ಮತ್ತು ರಶ್ಮಿಕಾ ಮಂದಣ್ಣ ನಡುವಣ ಸಂಭಾಷಣೆಗಳಷ್ಟೇ ಇರಲಿವೆ. ಅಂದರೆ.. ಪ್ರೇಮದ ಪೊಗರಿನ ಡೈಲಾಗ್ಸ್ ಎಂದರ್ಥ ಮಾಡಿಕೊಳ್ಳಿ. ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಲ್ಲಿ ಡೈಲಾಗ್‍ಗಳ ಮೂಲಕವೇ ಶಿಳ್ಳೆಯ ಕಾಣಿಕೆ ಪಡೆದಿದ್ದ ಧ್ರುವಾ, ಇಲ್ಲಿಯೂ ಅದನ್ನು ಕಂಟಿನ್ಯೂ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery