ಅದ್ಧೂರಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟವರು. ಆಗ ಧ್ರುವ ಅವರನ್ನು ಪರಿಚಯಿಸಿದ್ದ ಎ.ಪಿ.ಅರ್ಜುನ್, ಈಗ ಮತ್ತೊಮ್ಮೆ ಧ್ರುವ ಅವರ ಜೊತೆ ಹೊಸ ಸಿನಿಮಾಗೆ ಮುಹೂರ್ತ ನೆರವೇರಿಸಿದ್ದಾರೆ.
ಮಾರ್ಟಿನ್ ಅನ್ನೋದು ಚಿತ್ರದ ಹೀರೋ ಹೆಸರು. ಚಿತ್ರದಲ್ಲಿ ಆತ ಸ್ಟೂಡೆಂಟ್. ಗ್ಯಾಂಗ್‍ಸ್ಟರ್. ದೇಶಪ್ರೇಮಿ. ಲವರ್ ಬಾಯ್. ಎಲ್ಲವೂ ಆಗಿರುತ್ತಾನೆ. ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಎಂದಿದ್ದಾರೆ ಧ್ರುವ ಸರ್ಜಾ.
ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ಒಂದಿಷ್ಟು ಬೀಗ ಹಾಕುತ್ತಿದ್ದಾರಂತೆ, ಅರ್ಜುನ್. ಮಾರ್ಟಿನ್ ಸ್ವಲ್ಪ ಸೈಲೆಂಟ್ ಅಂತೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಅದ್ಧೂರಿ ಟೀಂ, ಅದ್ಧೂರಿಯಾಗಿಯೇ ವಾಪಸ್ ಆಗಿದೆ.
ಅಂದಹಾಗೆ ಇದು ಪ್ಯಾನ್ ಇಂಡಿಯಾ ಸಿನಿಮಾ. ಪೊಗರು ತೆಲುಗು, ತಮಿಳಿನಲ್ಲಿ ರಿಲೀಸ್ ಆದರೂ, ಚಿತ್ರ ರೆಡಿಯಾದ ಮೇಲೆ ಮಾಡಿದ್ದ ಪ್ಲಾನ್ ಅದು. ಆದರೆ, ಮಾರ್ಟಿನ್ ಹಾಗಲ್ಲ, ಎಲ್ಲ ಭಾಷೆಗಳಿಗೂ ತಲುಪುವ ಟೈಟಲ್, ಕಥೆ ಇಟ್ಟುಕೊಂಡು ಬಂದಿರೋ ಎ.ಪಿ.ಅರ್ಜುನ್, ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ.