` dhruva sarja, - chitraloka.com | Kannada Movie News, Reviews | Image

dhruva sarja,

 • ಅವರು ಮೊದಲು ಬಂದರೆ.. ಪೊಗರು ಆಮೇಲೆ

  if they come first, i will come later

  ಏಪ್ರಿಲ್ ತಿಂಗಳು ಸ್ಯಾಂಡಲ್‍ವುಡ್‍ನ್ನು ರಂಗೇರಿಸಲಿದೆ. ಕಾರಣ ಇಷ್ಟೆ.. ಏಪ್ರಿಲ್ ತಿಂಗಳಲ್ಲಿ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗೋಕೆ ಕ್ಯೂನಲ್ಲಿ ನಿಂತಿವೆ. ಏಕೆಂದರೆ ಅದು ಬೇಸಗೆ ರಜದ ಆರಂಭ. ಈಗ ಅದೇ ಏಪ್ರಿಲ್ ತಿಂಗಳಲ್ಲಿ ಧ್ರುವ ಸರ್ಜಾ ಕೂಡಾ ಬರಲಿದ್ದಾರೆ.

  ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಸ್ಟೇಜ್‍ನಲ್ಲಿದೆ. ಏಪ್ರಿಲ್‍ನಲ್ಲಿ ತೆರೆಗೆ ಬರಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಧ್ರುವ ಸರ್ಜಾ.

  ಅದೇ ವೇಳೆ ಕ್ಯೂನಲ್ಲಿರೋದು ಸುದೀಪ್ ಅಭಿನಯದ ಕೋಟಿಗೊಬ್ಬ 3, ದರ್ಶನ್ ಅಭಿನಯದ ರಾಬರ್ಟ್, ಪುನೀತ್ ಅಭಿನಯದ ಯುವರತ್ನ.. ಹೀಗೆ ದೊಡ್ಡ ಲಿಸ್ಟ್ ಇದೆ. ದೊಡ್ಡ ಸ್ಟಾರ್ ನಟರ ಚಿತ್ರಗಳೇನಾದರೂ ಬಂದರೆ,  ನಮ್ಮ ಚಿತ್ರ ಸ್ವಲ್ಪ ಗ್ಯಾಪ್ ನಂತರ ಬರಲಿದೆ ಎಂದಿದ್ದಾರೆ ಧ್ರುವ ಸರ್ಜಾ.

  ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು ಪೊಗರು. ಏಕೆಂದರೆ ಧ್ರುವ ಸರ್ಜಾ ಸಿನಿಮಾ ರಿಲೀಸ್ ಆಗಿ ಆಗಲೇ 2 ವರ್ಷ ಕಳೆದೋಯ್ತು.

 • ಉದಯ್ ಬದುಕಿರಬೇಕಿತ್ತು - ಗೆಳೆಯನ ನೆನಪಲ್ಲಿ ಧ್ರುವ

  uday, dhruva image

  ಮಾಸ್ತಿಗುಡಿ ದುರಂತದಲ್ಲಿ ಮೃತರಾದ ಅನಿಲ್ ಮತ್ತು ಉದಯ್ ಭರ್ಜರಿ ಚಿತ್ರದಲ್ಲೂ ನಟಿಸಿದ್ದಾರೆ. ಈ ಇಬ್ಬರಲ್ಲಿ ಉದಯ್, ಧ್ರುವ ಸರ್ಜಾಗೆ ಬಾಲ್ಯದ ಗೆಳೆಯ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಇಬ್ಬರೂ ಚಡ್ಡಿ ದೋಸ್ತುಗಳು. ಧ್ರುವ ಮನೆಯ ಮುಂದಿನ ರಸ್ತೆಯಲ್ಲೇ ಉದಯ್ ಮನೆಯಿತ್ತು. ಮಾಸ್ತಿಗುಡಿ ಚಿತ್ರೀಕರಣಕ್ಕೆ ಹೋಗುವ ಹಿಂದಿನ ದಿನ ಚಿತ್ರದ ಚಿತ್ರೀಕರಣ ಮುಗಿಸಿದ್ದರಂತೆ ಉದಯ್.

  ಅವನಿಗೆ ತುಂಬಾ ಕನಸುಗಳಿದ್ದವು. ಅದಕ್ಕೆ ತಕ್ಕಂತೆ ಶ್ರಮವಹಿಸುತ್ತಿದ್ದ. ಶೂಟಿಂಗ್ ಕೊನೆಯ ದಿನ ತುಂಬಾನೇ ಮಾತನಾಡಿದ್ದೆವು. ದೀಪಾವಳಿಯ ದಿನ ಶೂಟಿಂಗ್ ಮುಗಿದಿತ್ತು. ಅದಾದ ನಂತರ ಮಾಸ್ತಿಗುಡಿ ಶೂಟಿಂಗ್​ಗೆ ಹೋದ. ಬರಲೇ ಇಲ್ಲ. ಅವನೊಬ್ಬ ನನ್ನ ಜೊತೆಯಲ್ಲಿರಬೇಕಿತ್ತು ಎಂದು ಭಾವುಕರಾಗುತ್ತಾರೆ ಧ್ರುವ.

 • ಏನಮ್ಮಿ.. ಏನಮ್ಮಿ.. ಧ್ರುವ ಸರ್ಜಾರಿಂದ..

  dhruva sarja to release ayogya songs

  ಅಯೋಗ್ಯ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ರಿಲೀಸ್‍ಗೂ ಮೊದಲೇ ಖುಷಿಯಾಗೋಕೆ ಕಾರಣ, ಚಿತ್ರದ ಆಡಿಯೋ ರೈಟ್ಸ್ ಒಳ್ಳೆಯ ರೇಟ್‍ಗೆ ಸೇಲ್ ಅಗಿರೋದು. ಚಿತ್ರದ ಹಾಡುಗಳನ್ನು ಇಷ್ಟಪಟ್ಟು ಆನಂದ್ ಆಡಿಯೋದವರು ಒಳ್ಳೆಯ ಮೊತ್ತಕ್ಕೆ ಖರೀದಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಹಾಡುಗಳು ಮಾಸ್ ಮತ್ತು ಕ್ಲಾಸ್‍ಗೆ ಇಷ್ಟವಾಗುವಂತಿವೆ.

  ಚಿತ್ರದ ಮೊದಲ ಹಾಡು ರಿಲೀಸ್ ಮಾಡುತ್ತಿರುವುದು ಧ್ರುವ ಸರ್ಜಾ. ಹಳ್ಳಿ ಸೊಗಡಿನಲ್ಲಿ ಮೂಡಿ ಬಂದಿರೋ ಏನಮ್ಮಿ.. ಏನಮ್ಮಿ.. ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಲಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಪಲಕ್ ಮುಚಾಲ್ ಹಾಡಿರುವ ಹಾಡು, ಸತೀಶ್ ಮತ್ತು ರಚಿತಾ ಮೇಲೆ ಚಿತ್ರೀಕರಿಸಿರುವ ಹಾಡು.

  ಚಮಕ್ ನಂತರ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ನಿರ್ಮಿಸಿರುವ ಸಿನಿಮಾ ಅಯೋಗ್. ಅವರು ಮತ್ತೊಂದು ಹಿಟ್ ಎದುರು ನೋಡುತ್ತಿದ್ದಾರೆ.

 • ಒಟ್ಟಿಗೇ ಖಾಕಿ ನೋಡಿದ ಸರ್ಜಾ ಬ್ರದರ್ಸ್

  sarja brothers watched khakii movie in theater

  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖಾಕಿ ಚಿತ್ರಕ್ಕೆ ಅಣ್ಣ ತಮ್ಮ ಇಬ್ಬರೂ ಒಟ್ಟೊಟ್ಟಿಗೇ  ನೋಡಿದ್ದಾರೆ. ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಶಿವಮಣಿ, ಛಾಯಾಸಿಂಗ್ ನಟಿಸಿರುವ ಖಾಕಿ ಚಿತ್ರ ಸಾಮಾನ್ಯ ಜನರೆಲ್ಲ ಒಟ್ಟಾಗಿ ಅನ್ಯಾಯವನ್ನು ಎದುರಿಸಿ ನಿಲ್ಲುವ ಕಥೆ ಹೊಂದಿದೆ. ನವೀನ್ ರೆಡ್ಡಿ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ, ಮಾನಸ ತರುಣ್ ನಿರ್ಮಾಪಕರು. ಈ ಚಿತ್ರವನ್ನೀಗ ಸರ್ಜಾ ಸೋದರರು ಒಟ್ಟಿಗೇ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದ್ದಾರೆ.

  ನರ್ತಕಿಯಲ್ಲಿ ಚಿರಂಜೀವಿ ಸರ್ಜಾ ತಮ್ಮ ತಮ್ಮ ಧ್ರುವ ಸರ್ಜಾರ ಜೊತೆ ಬಂದು ವೀಕ್ಷಿಸಿದ್ದು ವಿಶೇಷ. ಅಣ್ಣನ ಆ್ಯಕ್ಷನ್, ಶಿವಮಣಿಯವರ ಘರ್ಜನೆ ಮೆಚ್ಚಿಕೊಂಡ ಧ್ರುವಾ ಚಿತ್ರವನ್ನು ನೋಡಿ, ಹರಸಿ ಹಾರೈಸಿ ಎಂದು ಮನವಿ ಮಾಡಿಕೊಂಡರು.

 • ಕನ್ನಡದಲ್ಲಿ ನಟಿಸುತ್ತಿಲ್ಲ - ಶೃತಿ ಹಾಸನ್

  shruthi hassan not acting in kannada

  ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಶೃತಿ ಹಾಸನ್ ನಾಯಕಿ. ಇದೇ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಶೃತಿ ನಟಿಸಲಿದ್ದಾರೆ ಎಂದು ನಿರ್ದೇಶಕ ನಂದ ಕಿಶೋರ್ ಅವರೇ ತಿಳಿಸಿದ್ದರು. ಸಿನಿಮಾದ ಕಥೆ ಹೇಳಿ ಶೃತಿ ಇಷ್ಟಪಟ್ಟಿದ್ದಾರೆ. ಅತ್ಯುತ್ತಮ ನೃತ್ಯಗಾರ್ತಿಯೂ ಆದ ಶೃತಿ ಅವರಿಗೆ ಚಿತ್ರದಲ್ಲಿ ಅದ್ಭುತವಾದ ಪಾತ್ರವಿದೆ. ಅವರನ್ನು ಕನ್ನಡಕ್ಕೆ ಕರೆತರುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದರು. 

  ಈಗ ನೋಡಿದರೆ, ಶೃತಿ ಹಾಸನ್, ಕನ್ನಡದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ. ಅಚ್ಚರಿ ಮೂಡಿಸಿರುವ ವಿಚಾರವೆಂದರೆ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿರುವುದು. ಏಕೆಂದರೆ, ನಂದ ಕಿಶೋರ್, ಚಿತ್ರದ ಬಗ್ಗೆ ಶೃತಿ ಮಾತನಾಡಿದ್ದೇನೆ ಎಂದಿದ್ದರು. ಈಗ ಶೃತಿ ಕನ್ನಡದಲ್ಲಿ ನಟಿಸುವುದು ಹಾಗಿರಲಿ, ಯಾರೂ ನನ್ನನ್ನು ಸಂಪರ್ಕಿಸಿಯೇ ಇಲ್ಲ ಎಂದಿದ್ದಾರೆ.

  Related Articles :-

  ಧ್ರುವ ಸರ್ಜಾ ಪೊಗರಿಗೆ ಜೊತೆಯಾದ ಶೃತಿಹಾಸನ್

 • ಚಿರು, ಧ್ರುವಾ ಅಮ್ಮನ ದಿನದ ಸ್ಪೆಷಲ್ ವಿಡಿಯೋ

  mothers days special

  ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

  ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.

 • ಜೆಂಟಲ್‍ಮನ್ ಡೈನಮಿಕ್ ಪ್ರಿನ್ಸ್ ಆಟಕ್ಕೆ ಆ್ಯಕ್ಷನ್ ಪ್ರಿನ್ಸ್ ಪವರ್

  Dhruva Sarja To Release The Songs Of prajwal Devaraj's 'Gentleman'

  ಇವರು ಡೈನಮಿಕ್ ಪ್ರಿನ್ಸ್. ಅರ್ಥಾತ್ ಪ್ರಜ್ವಲ್‌ ದೇವರಾಜ್. ಅವರು ಆ್ಯಕ್ಷನ್  ಪ್ರಿನ್ಸ್. ಅಂದ್ರೆ ಧ್ರುವ ಸರ್ಜಾ. ಇವರಿಬ್ಬರೂ ಒಟ್ಟಿಗೇ ಌಕ್ಟ್ ಮಾಡುತ್ತಿದ್ದಾರಾ ಎಂದೆಲ್ಲ ಕೇಳಬೇಡಿ. ಆ ಶುಭ ಘಳಿಗೆ ಇನ್ನೂ ಬಂದಿಲ್ಲ. ಆದರೆ, ಡಿಫರೆಂಟ್ ಕಾನ್ಸೆಪ್ಟ್‌ ಮೂಲಕವೇ ಟ್ರೆಂಡ್ ಸೃಷ್ಟಿಸಿರುವ ಜಂಟಲ್‌ಮನ್‌ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಮುಖ್ಯ ಅತಿಥಿ.

  ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ಆನಂದ್‌ ಆಡಿಯೋ ಯೂ ಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ರಿಲೀಸ್ ಆಗುತ್ತಿದೆ. ಅದೇ ದಿನ 12 ಗಂಟೆಗೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಟ್ರೇಲರ್‌ ಬಿಡುಗಡೆಯೂ ಇದೆ. ಆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಚೀಫ್ ಗೆಸ್ಟ್.

  ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುವ ನಾಯಕನಾಗಿ ನಟಿಸಿದ್ದಾರೆ ಪ್ರಜ್ವಲ್‌. ಅಂದರೆ ದಿನಕ್ಕೆ 18 ಗಂಟೆ ನಿದ್ರೆ, 6 ಗಂಟೆ ಮಾತ್ರ ಎಚ್ಚರ ಇರುವ ನಾಯಕ. ಆ 6 ಗಂಟೆಗಳಲ್ಲಿ ಹೀರೋ ಲವ್ ಮಾಡಬೇಕು, ಫೈಟ್ ಮಾಡಬೇಕು. ಅಕಸ್ಮಾತ್ ಆಗಿ ಸಿಲುಕಿಕೊಳ್ಳೋ ಸಮಸ್ಯೆಯಿಂದ ಹೊರಬರಬೇಕು. ಜಾಗ ಸಿಕ್ಕರೆ ಗೊರಕೆ ಹೊಡೆಯೋ ಹೀರೋ ಅದರಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಚಿತ್ರದ ಕಥೆ.

  ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರಕ್ಕೆ ನಿರ್ಮಾಪಕ. ಜಡೇಶ್‌ ಕುಮಾರ್‌ ನಿರ್ದೇಶಕ. ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ಹೀರೋಯಿನ್. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿತ್ರದಲ್ಲಿ ಪೊಲೀಸ್ ಆಫೀಸರ್. ಉಳಿದ ಡೀಟೈಲ್ಸ್.. ಏನಿದ್ದರೂ ಜನವರಿ 6ಕ್ಕೆ ಕೊಡ್ತಾರೆ.

 • ಟೀಚರ್ಸ್ ಡೇ ರಚಿತಾ, ಧೃವಾಗೆ ಸಿಕ್ಕಾಪಟ್ಟೆ ಸ್ಪೆಷಲ್

  rachitha ram, dhruva sarja reveals secret

  ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ  ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.

  ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.

  ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.

  ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. 

 • ಡಿ-ಬಾಸ್ ಅಂದ್ರೆ ದರ್ಶನ್ ಮಾತ್ರ, ನಾನಲ್ಲ - ಧ್ರುವ ಸರ್ಜಾ

  dhruva sarja reacts on d boss compliments

  ಡಿ-ಬಾಸ್ ಅನ್ನೊದು ಚಾಲೆಂಜಿಂಗ್ ಸ್ಟಾರ್‍ಗೆ ಅಭಿಮಾನಿಗಳು ಪ್ರೀತಿಯಿಂದ ಕರೆಯೋ ಹೆಸರು. ಈಗ ಅದನ್ನು ಧ್ರುವ ಸರ್ಜಾ ಕೂಡಾ ಹೇಳಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣವಾಗಿದ್ದು, ಅವರ ಹುಟ್ಟುಹಬ್ಬ. ಇತ್ತೀಚೆಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾಗೆ, ಅಭಿಮಾನಿಗಳು ಕೇಕ್ ತಂದಿದ್ದರು. ಕೆಲವು ಅಭಿಮಾನಿಗಳು ಕೇಕ್ ಮೇಲೆ ಹ್ಯಾಪಿ ಬರ್ತ್ ಡೇ ಡಿ ಬಾಸ್ ಎಂದು ಬರೆದಿದ್ದರು. ದರ್ಶನ್ ಮತ್ತು ಧ್ರುವ ಎರಡೂ ಹೆಸರಿನ ಆರಂಭದ ಅಕ್ಷರ ಡಿ ಆಗಿರುವುದು ಕೂಡಾ ಇದಕ್ಕೆ ಕಾರಣ. ಇದಕ್ಕೆ ಧ್ರುವ ಸರ್ಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಡಿ ಬಾಸ್ ಅಂದ್ರೆ ದರ್ಶನ್ ಒಬ್ಬರೇ. ನನಗೆ ಯಾವತ್ತಿಗೂ ಆಂಜನೇಯನೇ ಬಾಸ್. ದರ್ಶನ್ ಹಿರಿಯ ನಟ. ನಿಮ್ಮಂತೆಯೇ ನಾನು ಕೂಡಾ ಅವರ ಅಭಿಮಾನಿ. ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಾನಿನ್ನೂ ಸಾಧಿಸುವುದು ಬಹಳಷ್ಟಿದೆ.  ದರ್ಶನ್, ಸದಾ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ ಧ್ರುವ ಸರ್ಜಾ.

  ಇದೇ ವೇಳೆ ಮುಂದಿನ ವರ್ಷ ಮದುವೆಯಾಗುವ ಸುಳಿವನ್ನೂ ಕೊಟ್ಟಿದ್ದಾರೆ ಧ್ರುವ. ಲವ್ ಮ್ಯಾರೇಜ್ ಆಗ್ತಾರಂತೆ. ಆದ್ರೆ, ಹುಡುಗಿಯೇ ಸಿಕ್ಕಿಲ್ವಂತೆ. ಇನ್ನೊಂದ್ ವರ್ಷದಲ್ಲಿ ಹುಡುಗಿ ಹುಡುಕಿ ಲವ್ ಮಾಡಿ ಮದ್ದೆ ಆಗ್ತಾರಂತೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್.

 • ಡಿ.24ಕ್ಕೆ ಪೊಗರು ದರ್ಶನ

  pogaru likely to release on dec 24th

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ ನಂದ ಕಿಶೋರ್ ನಿರ್ದೇಶನದ ಸಿನಿಮಾ ಪೊಗರು. ಒನ್ಸ್ ಎಗೇಯ್ನ್ ಧ್ರುವ ಅವರ ಹಿಂದಿನ ಸಿನಿಮಾಗಳಂತೆಯೇ ಸುದೀರ್ಘ ಸಮಯ ತೆಗೆದುಕೊಂಡ ಚಿತ್ರ. ಚಿತ್ರಕ್ಕೆ ಇನ್ನೂ 15 ದಿನಗಳ ಶೂಟಿಂಗ್ ಬಾಕಿಯಿದೆಯಂತೆ. ಆದರೆ ಎಲ್ಲವೂ ಪಕ್ಕಾ ಪ್ಲಾನ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಜೊತೆ ಜೊತೆಯಾಗಿ ನಡೆಯುತ್ತಿವೆ.

  ಎಲ್ಲವೂ ಅಂದುಕೊಂಡಂತೆ ಆಗಿಬಿಟ್ಟರೆ, ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದಿದ್ದಾರೆ ನಂದಕಿಶೋರ್.

  ಇಷ್ಟಕ್ಕೂ ಚಿತ್ರದ ಕಥೆಯೇನು..? ಚಿತ್ರದಲ್ಲಿ ನಾಯಕ ಒರಟನೆಂದರೆ ಒರಟ. ಮಹಾಒರಟ. ರಶ್ಮಿಕಾ ಮಂದಣ್ಣ ಟೀಚರ್. ರಾಘವೇಂದ್ರ ರಾಜ್‍ಕುಮಾರ್, ಡಾಲಿ ಧನಂಜಯ್ ಕೂಡಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲೊಂದು ತಾಯಿ-ಮಗನ ಸೆಂಟಿಮೆಂಟ್ ಕಥೆಯಿದೆ ಎಂದು ಮಾಹಿತಿ ಕೊಟ್ಟಿದ್ದಾರೆ ನಂದಕಿಶೋರ್.

 • ತುಂಟ ತುಟಿಗಳ ಆಟೋಗ್ರಾಫ್.. ಌಕ್ಷನ್ ಪ್ರಿನ್ಸ್ ವಾಯ್ಸ್..!

  dhruva sarja lends his voice to ap arjun's kiss movie

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ ಆಗಿದ್ದು ಅದ್ದೂರಿ ಸಿನಿಮಾದಿಂದ. ಆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್. ಅದಾದ ಮೇಲೆ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ, ಈಗ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ತಮ್ಮ ಮೊದಲ ಚಿತ್ರದ ನಿರ್ದೇಶಕರ ಹೊಸ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ.

  ವಿರಾಟ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಿಸ್ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕ ಹಾಗು ನಿರ್ಮಾಪಕ. ಆ ಚಿತ್ರಕ್ಕೆ ತಮ್ಮ ಪವರ್ ಫುಲ್  ವಾಯ್ಸ್ ಕೊಟ್ಟಿದ್ದಾರೆ ಧ್ರುವ.  ಅಲ್ಲಿಗೆ ಕಿಸ್ ಚಿತ್ರಕ್ಕೆ ಇನ್ನೊಂದು ಪವರ್ ಸಿಕ್ಕಂತಾಗಿದೆ. 

  ಈ ಮೊದಲು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್, ಬೆಟ್ಟೇಗೌಡ ವರ್ಸಸ್‌ ಚಿಕ್ಕಬೋರಮ್ಮ ಅನ್ನೋ ಹಾಡು ಹಾಡಿದ್ದರು. ಈಗ ಌಕ್ಷನ್ ಪ್ರಿನ್ಸ್ ಧ್ರುವಾ ಧ್ವನಿಯ ಪವರ್ ಸಿಕ್ಕಿದೆ. ಅಂದಹಾಗೆ ಕಿಸ್ ಚಿತ್ರಕ್ಕೆ 

  ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಟ್ಯಾಗ್ಲೈನ್ ಇದೆ.

 • ಧ್ರುವ ಲವ್ ಸ್ಟೋರಿ ಅರ್ಜುನ್ ಸರ್ಜಾಗೆ ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ..

  dhruva sarja's love story

  ಧ್ರುವ ಸರ್ಜಾ ಅವರ ಪಾಲಿಗೆ ಸರ್ವಸ್ವವೂ ಆಗಿರುವುದು ಅರ್ಜುನ್ ಸರ್ಜಾ. ಮಾವನನ್ನು ತಂದೆಯಂತೆಯೇ ಗೌರವಿಸುವ ಅರ್ಜುನ್ ಸರ್ಜಾ, ಲವ್ ವಿಷಯದಲ್ಲಿ ಮಾತ್ರ ಡಿಫರೆಂಟು. ಏಕಂದ್ರೆ, ಧ್ರುವ ಸರ್ಜಾ, ಪ್ರೇರಣಾ ಲವ್ ಸ್ಟೋರಿ, ಅರ್ಜುನ್ ಸರ್ಜಾಗೆ ಮೊದಲು ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ. ನಿಶ್ಚಿತಾರ್ಥದದ ವೇಳೆ ಸ್ವತಃ ಅವರೇ ವಿಷಯವನ್ನು ಬಹಿರಂಗಪಡಿಸಿದ್ದಾರೆ.

  ಥೇಟು ಸಿನಿಮಾ ಸ್ಟೈಲ್‍ನಲ್ಲಿ ಹೋಗಿ ಪ್ರೇರಣಾ ಅವರ ಅಪ್ಪನ ಬಳಿ, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡ್ರಿ ಎಂದು ಕೇಳಿದ್ದ ಧ್ರುವಾ. ಅದಾದ ಮೇಲೇ ನನಗೂಗ ಗೊತ್ತಾಗಿದ್ದು ಎಂದರು ಅರ್ಜುನ್ ಸರ್ಜಾ.

  ಅರ್ಜುನ್ ಸರ್ಜಾ ಹಾಗೆ ಹೇಳುತ್ತಿದ್ದರೆ ಪಕ್ಕದಲ್ಲೇ ಇದ್ದ ಧ್ರುವ, ಪ್ರೇರಣಾ, ಅಣ್ಣ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ... ಹೀಗೆ ಎಲ್ಲರ ಮುಖದಲ್ಲೂ ನಗುವೋ ನಗು.

 • ಧ್ರುವ ವೆಡ್ಸ್ ಪ್ರೇರಣಾ : ಮದುವೆ ಮನೆಯ ಅದ್ಧೂರಿ.. ಭರ್ಜರಿ ಒಂದಾ.. ಎರಡಾ..

  interesting elemets at dhruva prerna's wedding

  ಧ್ರುವ ಸರ್ಜಾ, ಪ್ರೇರಣಾ ಈಗ ಜನುಮದ ಜೋಡಿ. ಅದ್ಧೂರಿಯಾಗಿ ನಡೆದ ಬಹದ್ದೂರ್ ಮದುವೆಯಲ್ಲಿ, ಸಡಗರ, ಸಂಭ್ರಮಗಳು ಭರ್ಜರಿಯಾಗಿಯೇ ಇದ್ದವು. ಇಡೀ ಕಲ್ಯಾಣ ಮಂಟಪವನ್ನು ತಿರುಪತಿ ವೆಂಕಟೇಶ್ವರ ಥೀಂನಲ್ಲಿ ಸಿಂಗರಿಸಲಾಗಿತ್ತು.

  ಶಿವ ಪಾರ್ವತಿ, ಗಣಪತಿ ಮೂರ್ತಿಗಳ ಹಿನ್ನೆಲೆಯಲ್ಲಿ ಮತ್ತೊಂದು ಮಂಟಪವಿತ್ತು. ಒಟ್ಟು ೩ ಮಂಟಪಗಳಿದ್ದವು. ಗೋ ಪೂಜೆಗಾಗಿಯೇ ೫ ಹಸುಗಳನ್ನು ತರಿಸಲಾಗಿತ್ತು. ಬೆಳಗ್ಗೆ ೬.೩೦ಕ್ಕೆ ಗೌರಿ ಪೂಜೆ, ೬.೪೦ಕ್ಕೆ ಕಾಶಿಯಾತ್ರೆ ಶಾಸ್ತç ಮುಗಿದು, ೭.೧೫ಕ್ಕೆ ಮುಹೂರ್ತ ಆಯಿತು. ಶಾಸ್ತçಗಳನ್ನು ನೆರವೇರಿಸಲೆಂದೇ ೧೮ ಪುರೋಹಿತರಿದ್ದು.

  ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಪಂಚೆ, ಶರಟು, ಕೇಸರಿ ಶಲ್ಯ ನೀಡಲಾಗಿತ್ತು.

 • ಧ್ರುವ ಸಂಭಾವಣೆ 6 ಕೋಟಿಯಂತೆ..!

  dhruva's remunaration is 6 crores

  ಧ್ರುವ ಸರ್ಜಾ, ಭರ್ಜರಿ ಸಿನಿಮಾಗೆ 6 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಗಾಂಧಿ ನಗರದಲ್ಲಿ ವೈರಲ್ ಆಯ್ತು. ಸ್ವಾರಸ್ಯಕಾರಿ ವಿಷಯ ಏನಂದ್ರೆ, ಧ್ರುವ ಭರ್ಜರಿ ಸಿನಿಮಾದ ಅದರ ಆರ್ಧದಷ್ಟೂ ಸಂಭಾವನೆ ಪಡೆದಿಲ್ಲ. 

  ಸುದ್ದಿ ವೈರಲ್ ಆದ ಮೇಲೆ, ನೋಡೋಣ, ನನಗೂ ಅಷ್ಟು ಕೊಡ್ತಾರಾ ಅಂತಾ ಕೇಳಿದೆ. ಕೊಟ್ಟೇಬಿಟ್ಟರು ಎಂದು ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಮುಂದೆ ನನ್ನ ಸಂಭಾವನೆಯನ್ನು ಇನ್ನೂ ಜಾಸ್ತಿ ಜಾಸ್ತಿ ಹೆಚ್ಚಿಸಿ ಸುದ್ದಿ ಮಾಡಿ, ನನಗೂ ಒಳ್ಳೆಯದಾಗುತ್ತೆ ಎಂದು ಮಾಧ್ಯಮಗಳನ್ನು ತಮಾಷೆ ಮಾಡಿದ್ದಾರೆ.

  ಇನ್ನು ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ಧ್ರುವ ಸರ್ಜಾ, ಪೊಗರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮುಗಿದಿದೆ. ಅಂತಿಮ ತಿದ್ದುಪಡಿಗಳೂ ಮುಗಿದಿವೆ. ನಮ್ಮ ಕುಟುಂಬದ ಪ್ರೇಮ ಬರಹ ಚಿತ್ರದ ಆಡಿಯೋ ಬಿಡುಗಡೆ ಮುಗಿದ ಮೇಲೆ ಪೊಗರು ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಧ್ರುವ.

  ಅಂದಹಾಗೆ ಪೊಗರು ಕೂಡಾ ಸ್ವಮೇಕ್ ಸಿನಿಮಾ. ಅದಾದ ನಂತರ ಉದಯ್ ಮೆಹ್ತಾ ಅವರ ನಿರ್ಮಾಣದ ಚಿತ್ರಕ್ಕೆ ಒಪ್ಪಿದ್ದೇನೆ. 2 ವರ್ಷಕ್ಕೆ 3 ಸಿನಿಮಾ ಮಾಡುವುದು ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ ಧ್ರುವ.

 • ಧ್ರುವ ಸರ್ಜಾ ಅಭಿಮಾನಿ ದೇವರುಗಳಿಗಾಗಿ..

  feast to fans by dhruva sarja

  ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆದರು. ಸರ್ಜಾ ಫ್ಯಾಮಿಲಿ ಕೂಡಾ ಅದನ್ನೇ ಅನುಸರಿಸುತ್ತಿದೆ. ಹೀಗಾಗಿಯೇ ಧ್ರುವ ಸರ್ಜಾ ಮದುವೆಯಲ್ಲಿ ಅಭಿಮಾನಿಗಳಿಗಾಗಿಯೇ ಸ್ಪೆಷಲ್ ಔತಣಕೂಟ. ಯಾರು ಬೇಕಾದರೂ ಬರಬಹುದು. ಮದುವೆಯಾಗುವ ಅದೇ ಛತ್ರದಲ್ಲಿ ಅಭಿಮಾನಿಗಳಿಗಾಗಿ ಸ್ಪೆಷಲ್ ಭೋಜನದ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 25ರಂದು.

  ಅಭಿಮಾನಿಗಳು ಆ ದಿನ ಧ್ರುವ ಜೊತೆಯಲ್ಲಿರಬಹುದು. ದಂಪತಿ ಸಮೇತರಾಗಿ ಆ ದಿನ ಧ್ರುವ ಅಲ್ಲೇ ಇರುತ್ತಾರೆ ಎಂದು ಧ್ರುವ ಸರ್ಜಾ ಮಾವ ಅರ್ಜುನ್ ಸರ್ಜಾ ಮಾಹಿತಿ ಕೊಟ್ಟಿದ್ದಾರೆ.

  ಅಭಿಮಾನಿಗಳೇ ನನ್ನ ಮದುವೆಯಲ್ಲಿ ವಿಐಪಿ. ಬಂದು ಹೊಟ್ಟೆ ತುಂಬ ಊಟ ಮಾಡಿಕೊಂಡು ಹೃದಯದ ತುಂಬಾ ಹರಸಿ ಹೋಗಿ ಎಂದಿದ್ದಾರೆ ಧ್ರುವ. ಮದುವೆ ಆಹ್ವಾನ ಪತ್ರಿಕೆಯಲ್ಲಿ ಬ್ರಹ್ಮಚಾರಿ ಆಂಜನೇಯ ಏಕೆ ಎಂಬ ಪ್ರಶ್ನೆಗೆ ಅದು ನಮ್ಮ ನಂಬಿಕೆ. ಬಿಡೋಕೆ ಆಗಲ್ಲ ಎಂದಿದ್ದಾರೆ.

 • ಧ್ರುವ ಸರ್ಜಾ ಎದುರು ಮಯೂರಿ ಪೊಗರು

  mayuri joins pogaru team

  ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಮತ್ತೊಂದು ತಾರೆ ಸೇರಿಕೊಂಡಿದೆ. ಮಯೂರಿ ಚಿತ್ರದ ತಾರಾಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಮಯೂರಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಮಯೂರಿಯದ್ದು ಧ್ರುವ ಸರ್ಜಾ ತಂಗಿ ಪಾತ್ರವಂತೆ. ಈಗಾಗಲೇ ಶಿವಣ್ಣನಿಗೆ ತಂಗಿಯಾಗಿ ನಟಿಸಿರುವ ಮಯೂರಿ, ಈಗ ಧ್ರುವ ಸರ್ಜಾಗೂ ತಂಗಿಯಾಗಿದ್ದಾರೆ.

  ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಜಗಪತಿ ಬಾಬು, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಸ್ಟಾರ್ ಸಿನಿಮಾ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೊಗರಿನ ಖದರು ಜೋರಾಗುತ್ತಲೇ ಇದೆ.

 • ಧ್ರುವ ಸರ್ಜಾ ಕಾರು ಅಪಘಾತ

  dhruva sarja meets with an accident

  ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದಾಗ ಧ್ರುವ ಸರ್ಜಾ ಇದ್ದ ಕಾರಿಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯವಾಗಿಲ್ಲ. ಬಳ್ಳಾರಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

  ನಂದಕಿಶೋರ್‌ ನಿರ್ದೇಶನದ ‘ಪೊಗರು’ ಚಿತ್ರದ ಶೂಟಿಂಗ್‌ ಸಲುವಾಗಿ ಚಿತ್ರತಂಡ ಬಳ್ಳಾರಿಯಲ್ಲಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆ ಸುಮಾರಿನಲ್ಲಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

  ಕಾರಿನ ಹಿಂಭಾಗಕ್ಕೆ ಹಾನಿಯಾಗಿದ್ದು, ಧ್ರುವ ಜೊತೆ ಕೆಲವು ಸ್ನೇಹಿತರಿದ್ದರು. ಆದರೆ, ಎಲ್ಲರೂ ಸೇಫ್ ಆಗಿದ್ದಾರೆ.

 • ಧ್ರುವ ಸರ್ಜಾ ಗಡ್ಡ ಬಿಟ್ಟರು..!

  dhruva sarja in new look for pogaru

  ಧ್ರುವ ಸರ್ಜಾ ಕೂಡಾ ಅಣ್ಣ ಚಿರಂಜೀವಿ ಸರ್ಜಾರಂತೆಯೇ ಗಡ್ಡಧಾರಿ. ಆದರೆ, ಅಣ್ಣನಷ್ಟಲ್ಲ. ಟ್ರಿಮ್ ಗಡ್ಡಧಾರಿ. ಅವರೀಗ ಸನ್ಯಾಸಿಯ ಲೆವೆಲ್ಲಿನಷ್ಟು ಗಡ್ಡ ಬಿಟ್ಟಿದ್ದಾರೆ. ಅದೂ ಪೊಗರು ಚಿತ್ರಕ್ಕಾಗಿ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಧ್ರುವಾ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಹುಡುಗನ ವಯಸ್ಸಿನ ಪಾತ್ರಕ್ಕೆ ತೂಕ ಇಳಿಸಿಕೊಂಡಿದ್ದ ಧ್ರುವ, ಆ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಈಗ ಇಷ್ಟು ದೊಡ್ಡ ಗಡ್ಡ ಬಿಟ್ಟು, ನಟಿಸಬೇಕು.

  ಅಕ್ಟೋಬರ್ 1ರಿಂದ ಧ್ರುವ ಹೊಸ ಅವತಾರದಲ್ಲಿನ ಶೂಟಿಂಗ್ ಶುರುವಾಗಲಿದೆ. ಇಷ್ಟೆಲ್ಲ ಇದ್ದರೂ ಚಿತ್ರಕ್ಕಿನ್ನೂ ನಾಯಕಿ ಸಿಕ್ಕಿಲ್ಲ. ಪಾತ್ರಕ್ಕೆ ತಕ್ಕಂತ ನಾಯಕಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

 • ಧ್ರುವ ಸರ್ಜಾ ಚಿತ್ರಕ್ಕೆ ಬಾಲಿವುಡ್ ಕಥೆಗಾರ

  bollywood writer for dhruva's next

  ಒಂದರ ಹಿಂದೊಂದರಂತೆ ಮೂರು ಹಿಟ್ ನೀಡಿದ ಧ್ರುವ ಸರ್ಜಾ ಹೊಸ ಹೊಸ ಸಿನಿಮಾಗಳಿಗೆ ರೆಡಿಯಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. 

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿರುವುದು ಶಿರಾಜ್ ಅಹ್ಮದ್. ಯಾರು ಈ ಶಿರಾಜ್ ಅಹ್ಮದ್ ಎನ್ನಬೇಡಿ. ಆಶಿಕಿ 2, ಹಮಾರಿ ಅಧೂರಿ ಕಹಾನಿ, ಮರ್ಡರ್ 2, ಜಿಸ್ಮ್ 2,  ರೇಸ್ 2, ಒಂದು ತೆಲುಗು ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೇ ಬರೆದಿದ್ದವರು. ಈ ಹೊಸ ಚಿತ್ರಕ್ಕೆ ಜಗ್ಗುದಾದ ಚಿತ್ರ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

  ಆದರೆ, ಈ ಸುದ್ದಿಯನ್ನು ಧ್ರುವ ಸರ್ಜಾ ಇನ್ನೂ ಕನ್‍ಫರ್ಮ್ ಮಾಡಿಲ್ಲ.

 • ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್

  raghavendra rajkumar to act in pogaru

  ರಾಘವೇಂದ್ರ ರಾಜ್‍ಕುಮಾರ್, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ. ಅವರೇ ಹೀರೋ ಆಗಿ ನಟಿಸಿರುವ ಅಮ್ಮನ ಮನೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತ್ರಯಂಬಕಂ ಅನ್ನೋ ಚಿತ್ರದಲ್ಲಿಯೂ ನಟಿಸುತ್ತಿರುವ ರಾಘಣ್ಣ, ಅತಿಥಿ ನಟರಾಗಿ ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ಧ್ರುವ-ರಶ್ಮಿಕಾ ಮಂದಣ್ಣ-ನಂದಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು ಚಿತ್ರದಲ್ಲಿ ರಾಘಣ್ಣ ಅವರಿಗಾಗಿಯೇ ವಿಶೇಷ ಪಾತ್ರವಿದೆಯಂತೆ. ಅದಕ್ಕಾಗಿ ರಾಘಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಅಣ್ಣ ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರವನ್ನು ಬಿಟ್ಟರೆ, ಬೇರೆ ಯಾವುದೇ ಚಿತ್ರದಲ್ಲಿ ರಾಘಣ್ಣ ಅತಿಥಿ ನಟರಾಗಿ ನಟಿಸಿಲ್ಲ. ಪೊಗರು ಮೂಲಕ ಮತ್ತೊಮ್ಮೆ ಅತಿಥಿ ನಟರಾಗುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

Sagutha Doora Doora Movie Gallery

Popcorn Monkey Tiger Movie Gallery