` dhruva sarja, - chitraloka.com | Kannada Movie News, Reviews | Image

dhruva sarja,

 • Uday Mehta film with Dhruva Sarja to be announced

  dhruva sarja in uday mehta's movie

  Producer Uday Mehta, known for films like Bachchan, Jarasandha and Love In Mandya is all set to announce a new film with Dhruva Sarja in a few days. Sources said that the technical details and the cast and crew are being finalized and the film will be officially announced once these things are sorted out.

  Meanwhile the producer is celebrating his birthday today and has received best wishes from across the spectrum in the industry. Mehta has produced many successful films with many different stars including Krishnan Love Story and Raja Rajendra. Apart from working with many stars including Sudeep, Duniya Vijay, Sharan and Ajai Rao the producer has also worked with top directors like Shashank.

  Everyone was expecting Mehta to announce a film today on his birthday but he decided to keep his personal and professional life separate and postponed the announcement to a later date.

   

 • WWE ಫೈಟರ್ಸ್ ಎಂಟ್ರಿ ನಂತರ ಪೊಗರು ಪ್ಯಾನ್ ಇಂಡಿಯಾ ಡ್ರೀಂ

  pogaru movie team plans for pan india movie release

  ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಮಾರ್ಕೆಟಿಂಗ್ ಮಾಡಲು ಮುಂದಾಗಿದೆ ಚಿತ್ರತಂಡ. ಧ್ರುವ ಸರ್ಜಾ, ಈ ಚಿತ್ರದಲ್ಲಿ 3 ವಿಶೇಷ ಗೆಟಪ್‍ಗಳಲ್ಲಿ ನಟಿಸಿದ್ದು, ನಂದಕಿಶೋರ್ ನಿರ್ದೇಶಕ.

  WWE  ಫೈಟರ್ಸ್‍ಗಳಾದ ಮಾರ್ಗನ್ ಅಸ್ಟೆ, ಕೈಗ್ರೀನ್, ಜಾನ್ ಲುಕಾಸ್, ಜೋಸ್ಥೆಟಿಕ್ಸ್ ಪೊಗರಿನ ಪೊಗರು ಹೆಚ್ಚಿಸಿದ್ದಾರೆ. ಕ್ಲೈಮಾಕ್ಸ್ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. 

  ಹೀಗಾಗಿ ಚಿತ್ರವನ್ನು ಕನ್ನಡದಲ್ಲಷ್ಟೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡಲು ಚಿಂತನೆ ನಡೆಸಿದೆ ಪೊಗರು ಟೀಂ

 • ಅಂತೂ.. ಇಂತೂ.. ಪೊಗರು ಆರಂಭಕ್ಕೆ ಮುಹೂರ್ತ

  pogaru teaser

  ಧ್ರುವ ಸರ್ಜಾ ಅವರ ಚಿತ್ರಗಳು ಅದೇಕೋ ಏನೋ.. ಶೂಟಿಂಗ್ ಹಂತದಲ್ಲಿ ತೆವಳಿ ತೆವಳಿ ಬರುತ್ತವೆ. ಅವರೊಂಥರಾ ಅಪರೂಪದ ಸ್ಟಾರ್. 7 ವರ್ಷದಲ್ಲಿ ಬಂದಿರೋದು 3 ಸಿನಿಮಾ. ಮೂರಕ್ಕೆ ಮೂರೂ ಹಿಟ್. ಅವೆಲ್ಲವೂ ತೆವಳಿ ತೆವಳಿ ಬಂದಿದ್ದವು. ಈ ಬಾರಿಯೂ ಅಷ್ಟೆ. ಪೊಗರು ಚಿತ್ರ ತೆವಳುತ್ತಿದೆ. ಈಗ ಚಿತ್ರದ ಪ್ರಮುಖ ಹಂತದ ಚಿತ್ರೀಕರಣಕ್ಕೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 4ರಿಂದ ಪೊಗರು ಶೂಟಿಂಗ್ ಶುರುವಾಗುತ್ತಿದೆ.

  ನಂದ ಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರದ ಪ್ರಮುಖ ಪೋಷಕ ಪಾತ್ರಗಳಿಗೆ ದೊಡ್ಡ ದೊಡ್ಡ ಕಲಾವಿದರಿದ್ದಾರೆ. ಫೆಬ್ರವರಿ 4ರಂದು ಹೀರೋ ಇಂಟ್ರೊಡಕ್ಷನ್ ಫೈಟಿಂಗ್ ಸೀನ್ ಶೂಟಿಂಗ್ ಇದೆ ಎಂದಿದ್ದಾರೆ ನಂದಕಿಶೋರ್.

 • ಅಣ್ಣ, ಹರಿಪ್ರಿಯಾಗೆ ಧ್ರುವ ಸರ್ಜಾ ಫುಲ್ ಮಾಕ್ರ್ಸ್ 

  dhruva thrilled after watching samhara

  ಅಣ್ಣನ ಪರ್ಫಾಮೆನ್ಸ್ ನೋಡಿ ಬೆರಗಾದೆ. ಹರಿಪ್ರಿಯಾ ಪರ್ಫಾಮೆನ್ಸ್ ಕೂಡಾ ಅದ್ಭುತ. ಸಂಹಾರ ನನಗೆ ನಿಜಕ್ಕೂ ಒಳ್ಳೆಯ ಅನುಭವ ಕೊಡ್ತು. ಎಲ್ಲರೂ ಒಮ್ಮೆ ನೋಡಲೇಬೇಕಾದ ಸಿನಿಮಾ. ಇಂಥದ್ದೊಂದು ಸಿನಿಮಾ ಮಾಡಿದ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು.

  ಅಣ್ಣ ಚಿರಂಜೀವಿ ಸರ್ಜಾ ಚಿತ್ರಕ್ಕೆ ಧ್ರುವ ಸರ್ಜಾ ನೀಡಿರುವ ವಿಮರ್ಶೆ ಇದು. ಅಭಿಮಾನಿಗಳ ಮಧ್ಯೆ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿರುವ ಧ್ರುವ ಸರ್ಜಾ, ಅಭಿಮಾನಿಗಳ ನಡುವೆ ಅವರ ಜೊತೆಯಲ್ಲೇ ಖುಷಿಪಟ್ಟಿದ್ದಾರೆ. ಇದೇ ವಾರ ಬಿಡುಗಡೆಯಾಗಿರುವ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಿನಿಮಾ ಸಕ್ಸಸ್ ಹಾದಿಯಲ್ಲಿದೆ.

   

 • ಅಣ್ಣನನ್ನು ಹಾಗೆ ನೋಡೋಕೆ ಕಷ್ಟಪಟ್ಟ ಧ್ರುವ ಸರ್ಜಾ..!

  dhrva sarja sharesh his opinion on amma i love you

  ಅಮ್ಮ ಐ ಲವ್ ಯೂ.. ಪ್ರೇಕ್ಷಕರ ಮನಸ್ಸು ಗೆದ್ದಿರುವ ಚಿತ್ರ ದಿನೇ ದಿನೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ ಬಗ್ಗೆ ಮೌತ್ ಪಬ್ಲಿಸಿಟಿ ಹೆಚ್ಚುತ್ತಿರುವುದು ಚಿತ್ರತಂಡ ಸಂತಸ ಪಡಬೇಕಾದ ವಿಷಯ. ಚಿತ್ರ ನೋಡಿದವರ ಕಣ್ಣಂಚಲ್ಲಿ ನೀರು ಜಿನುಗಿಸಿರುವ ಅಮ್ಮ ಐ ಲವ್ ಯೂ ಚಿತ್ರದ ಕೆಲವೊಂದು ದೃಶ್ಯಗಳನ್ನು ನೋಡೋಕೆ ಧ್ರುವ ಸರ್ಜಾಗೆ ಕಷ್ಟವಾಯಿತಂತೆ. 

  ಸಿನಿಮಾದಲ್ಲಿ ಚಿರು, ತಾಯಿಗಾಗಿ ಭಿಕ್ಷೆ ಬೇಡುತ್ತಾರೆ. ಭಿಕ್ಷುಕನಾಗಿ ನಟಿಸಿರುವ ಚಿರು ಅವರ ದೃಶ್ಯಗಳನ್ನು ನೋಡೋಕೆ ಕಷ್ಟವಾಯಿತು ಎಂದಿದ್ದಾರೆ ಧ್ರುವ. ಸಹಜವೇ.. ಒಡಹುಟ್ಟಿದ್ದ ಅಣ್ಣನನ್ನು ಹಾಗೆ ಕಲ್ಪಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಕಷ್ಟವೇ.

  ಆದರೆ, ಸಿನಿಮಾದ ಹೈಲೈಟೇ ಅದು. ಕೋಟ್ಯಧಿಪತಿಯಾಗಿದ್ದರೂ, ತಾಯಿಯನ್ನು ಉಳಿಸಿಕೊಳ್ಳಲು ಬೇರೆ ಮಾರ್ಗವಿಲ್ಲದೆ ಮಗ ಭಿಕ್ಷುಕನಾಗುವುದೇ ಚಿತ್ರದ ಕಥೆ. ದ್ವಾರಕೀಶ್ ಬ್ಯಾನರ್‍ನ ಈ ಸಿನಿಮಾವನ್ನು ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಥಿಯೇಟರ್‍ಗೆ ಹೋಗಿ ನೋಡಿ ಎಂದಿದ್ದಾರೆ ಧ್ರುವ ಸರ್ಜಾ.

 • ಅಣ್ಣನಿಗೆ ತಮ್ಮನ ಕೈತುತ್ತು - ಅಭಿಮಾನಿಗಳ ಸಿಹಿಮುತ್ತು

  dhruva sarja feeds chiranjeeivi sarja

  ಹುಟ್ತಾ ಹುಟ್ತಾ ಅಣ್ಣತಮ್ಮ.. ಬೆಳೀತಾ ಬೆಳೀತಾ ದಾಯಾದಿಗಳು ಅನ್ನೋದು ಗಾದೆ. ಆ ಗಾದೆಯನ್ನು ಸುಳ್ಳು ಮಾಡುವ ಹಲವು ಸೋದರರು ನಮ್ಮ ನಡುವೆ ಇದ್ದಾರೆ. ಅಂತಹ ಸೋದರರ ಲಿಸ್ಟಿನಲ್ಲಿರೋವ್ರಲ್ಲಿ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ.

  ಇತ್ತೀಚೆಗೆ ತಮ್ಮ ಧ್ರುವನ ತಲೆಗೆ, ಅಣ್ಣ ಚಿರು ಆಯಿಲ್ ಮಸಾಜ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿ, ಅಭಿಮಾನಿಗಳು ಖುಷಿಗೊಂಡಿದ್ದರು. ಈಗ ಅಣ್ಣ ಚಿರುಗೆ ತಮ್ಮ ಧ್ರುವ ಕೈತುತ್ತು ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. 

  ಅಣ್ಣ ತಮ್ಮ ಹೀಗೆಯೇ ನೂರ್ಕಾಲ ಚೆನ್ನಾಗಿರಲಿ ಎನ್ನುವುದೇ ಎಲ್ಲರ ಹಾರೈಕೆ.

 • ಅತ್ತಿಗೆಯ ಚಿತ್ರಕ್ಕೆ ಶುಭ ಕೋರಿದ ಧ್ರುವ ಸರ್ಜಾ

  brother in lar wishes sister in law meghana raj

  ಇದು ನನ್ನ ಅತ್ತಿಗೆಯ ಸಿನಿಮಾ. ಖಂಡಿತಾ ಚೆನ್ನಾಗಿ ಬಂದಿರುತ್ತೆ. ಎಲ್ಲರೂ ನೋಡಿ, ಚಿತ್ರವನ್ನು ಬೆಂಬಲಿಸಿ.

  ಅತ್ತಿಗೆ ಮೇಘನಾ ರಾಜ್ ನಟಿಸಿರುವ ಇರುವುದೆಲ್ಲವ ಬಿಟ್ಟು.. ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಧ್ರುವ ಸರ್ಜಾ ಶುಭ ಹಾರೈಸಿದ್ದು ಹೀಗೆ. ಮದುವೆಯ ನಂತರ ಮೇಘನಾರಾಜ್ ಮತ್ತು ಚಿರಂಜೀವಿ ಸರ್ಜಾ ಒಟ್ಟಿಗೇ ಭಾಗವಹಿಸಿದ್ದ ಮೊದಲ ಕಾರ್ಯಕ್ರಮವೂ ಇದೇ ಆಗಿದ್ದುದು ವಿಶೇಷ.

  ನನ್ನ ಪತ್ನಿ ನಟಿಸಿರುವ ಸಿನಿಮಾ ಇದು. ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದು ಚಿರಂಜೀವಿ ಸರ್ಜಾ.

  ಸುಂದರ್‍ರಾಜ್, ಪ್ರಮೀಳಾ ಜೋಷಾಯ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಮೇಘನಾ ರಾಜ್.. ಎಲ್ಲರೂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮದುವೆ ಮನೆಯ ಸಂಭ್ರಮವೇ ಇತ್ತು.

 • ಅದ್ಧೂರಿ 2ಗೆ ಧ್ರುವ ಸರ್ಜಾ ಇಲ್ಲ..!

  adhuri movie image

  ಅದ್ಧೂರಿ, ಧ್ರುವ ಸರ್ಜಾ ಅಭಿನಯದ ಮೊದಲ ಸಿನಿಮಾ. ರಾಧಿಕಾ ಪಂಡಿತ್ ನಾಯಕಿಯಾಗಿದ್ದ ಅದ್ಧೂರಿ, ಸೂಪರ್ ಹಿಟ್ ಆಗಿತ್ತು. ಈಗ ಆ ಚಿತ್ರದ ಸೀಕ್ವೆಲ್‍ಗೆ ವೇದಿಕೆ ಸಿದ್ಧವಾಗಿದೆ. ಆದರೆ, ಈ ಸೀಕ್ವೆಲ್‍ನಲ್ಲಿ ಧ್ರುವ ಸರ್ಜಾ ಆಗಲೀ, ರಾಧಿಕಾ ಪಂಡಿತ್ ಆಗಲೀ ಇರಲ್ಲ. ನಿರ್ದೇಶಕರೂ ಅಷ್ಟೆ, ಎ.ಪಿ.ಅರ್ಜುನ್ ಅಲ್ಲ.

  ಅದ್ಧೂರಿಯನ್ನು ನಿರ್ಮಿಸಿದ್ದ ಶಂಕರ್ ರೆಡ್ಡಿ, ಮೋಹನ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಮೇಶ್ ವೆಂಕಟೇಶ್ ಅನ್ನೋ ಹೊಸ ಹುಡುಗ ನಿರ್ದೇಶಕರಾಗುತ್ತಿದ್ದಾರೆ.

  ಹೀರೋ ಆಗುತ್ತಿರುವುದು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ. ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಅಧಿಕೃತ ಘೋಷಣೆಯೊಂದೇ ಬಾಕಿ.

 • ಅರೆರೆ.. ಏನಿದು.. ಒಂದೇ ಕಡೆ ಕಿಚ್ಚ, ಶ್ರೀಮುರಳಿ, ಧ್ರುವ, ಮಹೇಶ್ ಬಾಬು, ಸುನಿಲ್ ಶೆಟ್ಟಿ..!

  stars come under one roof

  ಕಿಚ್ಚ ಸುದೀಪ್ ಜೊತೆ ಶ್ರೀಮುರಳಿ, ತಾರಾ, ಸುನಿಲ್ ಶೆಟ್ಟಿ ಜೊತೆ ಶ್ರೀಮುರಳಿ, ಧ್ರುವ ಸರ್ಜಾ ಜೊತೆ ರೋರಿಂಗ್ ಸ್ಟಾರ್, ಮಹೇಶ್ ಬಾಬು ಜೊತೆ, ಸುನಿಲ್ ಶೆಟ್ಟಿ ಜೊತೆ.. ಎಲ್ಲೆಲ್ಲೂ ಕನ್ನಡ ಸ್ಟಾರುಗಳೇ..

  ಏನಿದು.. ಇವರೆಲ್ಲ ಏನು ಒಟ್ಟಿಗೇ ಸಿನಿಮಾ ಮಾಡ್ತಿದ್ದಾರಾ.. ಅಂದ್ಕೋಬೇಡಿ. 

  ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡ ಸ್ಟಾರ್ಸ್ ಸಮಾಗಮವಾಗಿದೆ. ಸುದೀಪ್ ಅಭಿನಯದ ಪೈಲ್ವಾನ್, ಶ್ರೀಮುರಳಿಯ ಭರಾಟೆ, ಧ್ರುವ ಸರ್ಜಾರ ಪೊಗರು, ಮಹೇಶ್ ಬಾಬುರ ಮಹರ್ಷಿ ಚಿತ್ರಗಳು ಅಕ್ಕ ಪಕ್ಕದಲ್ಲಿಯೇ ಶೂಟಿಂಗ್ ಆಗುತ್ತಿವೆ. ಅವರ ಬಳಿ ಇವರು, ಇವರ ಬಳಿ ಅವರು ಅಪ್ಪಟ ಗೆಳೆಯರಂತೆ ಒಡನಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 

 • ಅರ್ಜುನ್, ಚಿರಂಜೀವಿ & ಧ್ರುವ ಸರ್ಜಾ ಜೊತೆ ದರ್ಶನ್

  darshan and sarja's team up

  ಸರ್ಜಾ ಕುಟುಂಬದಿಂದ ಮೂವರು ಹೀರೋಗಳು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಈಗ ಅವರ ಜೊತೆಗೊಬ್ಬ ಹೀರೋಯಿನ್. ಐಶ್ವರ್ಯಾ. ಅರ್ಜುನ್ ಸರ್ಜಾರ ಮಗಳು ಐಶ್ವರ್ಯಾ ನಟಿಸುತ್ತಿರುವ ಮೊದಲ ಚಿತ್ರ ಪ್ರೇಮಬರಹ. 

  darshan_sarjas_1prema_barah.jpgಆ ಚಿತ್ರದಲ್ಲಿ ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ಹನುಮನ ಭಕ್ತರಾಗಿ ಹೆಜ್ಜೆ ಹಾಕಿದ್ದಾರೆ. ತಿಪ್ಪಸಂದ್ರ ಬಳಿಯ ಆಂಜನೇಯ ದೇಗುದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್, ಅರ್ಜುನ್, ಧ್ರುವ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೇ ಹೆಜ್ಜೆ ಹಾಕಿರುವುದು ವಿಶೇಷ.

  ಅಂದಹಾಗೆ ದರ್ಶನ್, ಹೀಗೆ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಅರಸು, ಮೊನಾಲಿಸಾ, ಚೌಕ, ನಾಗರಹಾವು.. ಹೀಗೆ ಹಲವು ಚಿತ್ರಗಳಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಪ್ರೇಮ ಬರಹದಲ್ಲಿ ಹೆಜ್ಜೆ ಹಾಕಿರುವುದು ಸರ್ಜಾ ಫ್ಯಾಮಿಲಿ ಮೇಲಿನ ಗೌರವಕ್ಕೆ.

 • ಅಲ್ಲಿರೋ ಧ್ರುವ ನಾನಲ್ಲ..!

  dhruva sarja's important message to fans

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಅಭಿಮಾನಿಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಅಭಿಮಾನಿಗಳನ್ನು ಇಷ್ಟಪಡುವ ಅವರಿಗೆ, ಯಾರೋ ಒಬ್ಬ ಅಭಿಮಾನಿ ಸೃಷ್ಟಿಸಿರುವ ಖಾತೆ ಟೆನ್ಷನ್ ಸೃಷ್ಟಿಸಿದೆ. ಧ್ರುವ ಸರ್ಜಾ, ಸಾಮಾಜಿಕ ಜಾಲತಾಣದಲ್ಲಿದ್ದರೂ, ಅಷ್ಟೇನೂ ಆಕ್ಟಿವ್ ಅಲ್ಲ. ಟ್ವಿಟರ್‍ನಲ್ಲಿ ಮಾತ್ರ ಇದ್ದಾರೆ

  ಆದರೆ, ಇನ್‍ಸ್ಟಾಗ್ರಾಂನಲ್ಲಿ ಧ್ರುವ ಸರ್ಜಾ ಹೆಸರಲ್ಲೊಂದು ಖಾತೆ ಶುರುವಾಗಿದೆ. ಫೇಸ್‍ಬುಕ್‍ನಲ್ಲೂ ಶುರುವಾಗಿದೆ. ಆ ಖಾತೆಯಿಂದ ಕೆಲವರಿಗೆ ಅಶ್ಲೀಲ ಮೆಸೇಜ್‍ಗಳೂ ರವಾನೆಯಾಗಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಧ್ರುವ ಸರ್ಜಾ, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ನಾನಿಲ್ಲ. ಆ ಖಾತೆಗಳನ್ನು ನಂಬಿ ಮೋಸಹೋಗಬೇಡಿ. ಅಶ್ಲೀಲ ಮೆಸೇಜ್‍ಗಳು ಬಂದರೆ ಸೈಬರ್ ಕ್ರೈಂಗೆ ದೂರು ಕೊಡಿ. ಅನ್‍ಫಾಲೋ ಮಾಡಿ ಎಂದು ಅಭಿಮಾನಿಗಳಲ್ಲಿ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ  ವಿಡಿಯೋ ಸಂದೇಶ ನೀಡಿರುವ ಅಭಿಮಾನಿಗಳಿಗೆ ಧ್ರುವ ಸರ್ಜಾ, ಮೋಸ ಹೋಗದಂತೆ ಎಚ್ಚರಿಕೆ ನೀಡಿದ್ಧಾರೆ.

 • ಉದಯ್ ಬದುಕಿರಬೇಕಿತ್ತು - ಗೆಳೆಯನ ನೆನಪಲ್ಲಿ ಧ್ರುವ

  uday, dhruva image

  ಮಾಸ್ತಿಗುಡಿ ದುರಂತದಲ್ಲಿ ಮೃತರಾದ ಅನಿಲ್ ಮತ್ತು ಉದಯ್ ಭರ್ಜರಿ ಚಿತ್ರದಲ್ಲೂ ನಟಿಸಿದ್ದಾರೆ. ಈ ಇಬ್ಬರಲ್ಲಿ ಉದಯ್, ಧ್ರುವ ಸರ್ಜಾಗೆ ಬಾಲ್ಯದ ಗೆಳೆಯ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಇಬ್ಬರೂ ಚಡ್ಡಿ ದೋಸ್ತುಗಳು. ಧ್ರುವ ಮನೆಯ ಮುಂದಿನ ರಸ್ತೆಯಲ್ಲೇ ಉದಯ್ ಮನೆಯಿತ್ತು. ಮಾಸ್ತಿಗುಡಿ ಚಿತ್ರೀಕರಣಕ್ಕೆ ಹೋಗುವ ಹಿಂದಿನ ದಿನ ಚಿತ್ರದ ಚಿತ್ರೀಕರಣ ಮುಗಿಸಿದ್ದರಂತೆ ಉದಯ್.

  ಅವನಿಗೆ ತುಂಬಾ ಕನಸುಗಳಿದ್ದವು. ಅದಕ್ಕೆ ತಕ್ಕಂತೆ ಶ್ರಮವಹಿಸುತ್ತಿದ್ದ. ಶೂಟಿಂಗ್ ಕೊನೆಯ ದಿನ ತುಂಬಾನೇ ಮಾತನಾಡಿದ್ದೆವು. ದೀಪಾವಳಿಯ ದಿನ ಶೂಟಿಂಗ್ ಮುಗಿದಿತ್ತು. ಅದಾದ ನಂತರ ಮಾಸ್ತಿಗುಡಿ ಶೂಟಿಂಗ್​ಗೆ ಹೋದ. ಬರಲೇ ಇಲ್ಲ. ಅವನೊಬ್ಬ ನನ್ನ ಜೊತೆಯಲ್ಲಿರಬೇಕಿತ್ತು ಎಂದು ಭಾವುಕರಾಗುತ್ತಾರೆ ಧ್ರುವ.

 • ಏನಮ್ಮಿ.. ಏನಮ್ಮಿ.. ಧ್ರುವ ಸರ್ಜಾರಿಂದ..

  dhruva sarja to release ayogya songs

  ಅಯೋಗ್ಯ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ರಿಲೀಸ್‍ಗೂ ಮೊದಲೇ ಖುಷಿಯಾಗೋಕೆ ಕಾರಣ, ಚಿತ್ರದ ಆಡಿಯೋ ರೈಟ್ಸ್ ಒಳ್ಳೆಯ ರೇಟ್‍ಗೆ ಸೇಲ್ ಅಗಿರೋದು. ಚಿತ್ರದ ಹಾಡುಗಳನ್ನು ಇಷ್ಟಪಟ್ಟು ಆನಂದ್ ಆಡಿಯೋದವರು ಒಳ್ಳೆಯ ಮೊತ್ತಕ್ಕೆ ಖರೀದಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಹಾಡುಗಳು ಮಾಸ್ ಮತ್ತು ಕ್ಲಾಸ್‍ಗೆ ಇಷ್ಟವಾಗುವಂತಿವೆ.

  ಚಿತ್ರದ ಮೊದಲ ಹಾಡು ರಿಲೀಸ್ ಮಾಡುತ್ತಿರುವುದು ಧ್ರುವ ಸರ್ಜಾ. ಹಳ್ಳಿ ಸೊಗಡಿನಲ್ಲಿ ಮೂಡಿ ಬಂದಿರೋ ಏನಮ್ಮಿ.. ಏನಮ್ಮಿ.. ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಲಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಪಲಕ್ ಮುಚಾಲ್ ಹಾಡಿರುವ ಹಾಡು, ಸತೀಶ್ ಮತ್ತು ರಚಿತಾ ಮೇಲೆ ಚಿತ್ರೀಕರಿಸಿರುವ ಹಾಡು.

  ಚಮಕ್ ನಂತರ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ನಿರ್ಮಿಸಿರುವ ಸಿನಿಮಾ ಅಯೋಗ್. ಅವರು ಮತ್ತೊಂದು ಹಿಟ್ ಎದುರು ನೋಡುತ್ತಿದ್ದಾರೆ.

 • ಕನ್ನಡದಲ್ಲಿ ನಟಿಸುತ್ತಿಲ್ಲ - ಶೃತಿ ಹಾಸನ್

  shruthi hassan not acting in kannada

  ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಶೃತಿ ಹಾಸನ್ ನಾಯಕಿ. ಇದೇ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಶೃತಿ ನಟಿಸಲಿದ್ದಾರೆ ಎಂದು ನಿರ್ದೇಶಕ ನಂದ ಕಿಶೋರ್ ಅವರೇ ತಿಳಿಸಿದ್ದರು. ಸಿನಿಮಾದ ಕಥೆ ಹೇಳಿ ಶೃತಿ ಇಷ್ಟಪಟ್ಟಿದ್ದಾರೆ. ಅತ್ಯುತ್ತಮ ನೃತ್ಯಗಾರ್ತಿಯೂ ಆದ ಶೃತಿ ಅವರಿಗೆ ಚಿತ್ರದಲ್ಲಿ ಅದ್ಭುತವಾದ ಪಾತ್ರವಿದೆ. ಅವರನ್ನು ಕನ್ನಡಕ್ಕೆ ಕರೆತರುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದರು. 

  ಈಗ ನೋಡಿದರೆ, ಶೃತಿ ಹಾಸನ್, ಕನ್ನಡದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ. ಅಚ್ಚರಿ ಮೂಡಿಸಿರುವ ವಿಚಾರವೆಂದರೆ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿರುವುದು. ಏಕೆಂದರೆ, ನಂದ ಕಿಶೋರ್, ಚಿತ್ರದ ಬಗ್ಗೆ ಶೃತಿ ಮಾತನಾಡಿದ್ದೇನೆ ಎಂದಿದ್ದರು. ಈಗ ಶೃತಿ ಕನ್ನಡದಲ್ಲಿ ನಟಿಸುವುದು ಹಾಗಿರಲಿ, ಯಾರೂ ನನ್ನನ್ನು ಸಂಪರ್ಕಿಸಿಯೇ ಇಲ್ಲ ಎಂದಿದ್ದಾರೆ.

  Related Articles :-

  ಧ್ರುವ ಸರ್ಜಾ ಪೊಗರಿಗೆ ಜೊತೆಯಾದ ಶೃತಿಹಾಸನ್

 • ಚಿರು, ಧ್ರುವಾ ಅಮ್ಮನ ದಿನದ ಸ್ಪೆಷಲ್ ವಿಡಿಯೋ

  mothers days special

  ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

  ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.

 • ಟೀಚರ್ಸ್ ಡೇ ರಚಿತಾ, ಧೃವಾಗೆ ಸಿಕ್ಕಾಪಟ್ಟೆ ಸ್ಪೆಷಲ್

  rachitha ram, dhruva sarja reveals secret

  ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ  ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.

  ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.

  ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.

  ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. 

 • ಡಿ-ಬಾಸ್ ಅಂದ್ರೆ ದರ್ಶನ್ ಮಾತ್ರ, ನಾನಲ್ಲ - ಧ್ರುವ ಸರ್ಜಾ

  dhruva sarja reacts on d boss compliments

  ಡಿ-ಬಾಸ್ ಅನ್ನೊದು ಚಾಲೆಂಜಿಂಗ್ ಸ್ಟಾರ್‍ಗೆ ಅಭಿಮಾನಿಗಳು ಪ್ರೀತಿಯಿಂದ ಕರೆಯೋ ಹೆಸರು. ಈಗ ಅದನ್ನು ಧ್ರುವ ಸರ್ಜಾ ಕೂಡಾ ಹೇಳಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣವಾಗಿದ್ದು, ಅವರ ಹುಟ್ಟುಹಬ್ಬ. ಇತ್ತೀಚೆಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾಗೆ, ಅಭಿಮಾನಿಗಳು ಕೇಕ್ ತಂದಿದ್ದರು. ಕೆಲವು ಅಭಿಮಾನಿಗಳು ಕೇಕ್ ಮೇಲೆ ಹ್ಯಾಪಿ ಬರ್ತ್ ಡೇ ಡಿ ಬಾಸ್ ಎಂದು ಬರೆದಿದ್ದರು. ದರ್ಶನ್ ಮತ್ತು ಧ್ರುವ ಎರಡೂ ಹೆಸರಿನ ಆರಂಭದ ಅಕ್ಷರ ಡಿ ಆಗಿರುವುದು ಕೂಡಾ ಇದಕ್ಕೆ ಕಾರಣ. ಇದಕ್ಕೆ ಧ್ರುವ ಸರ್ಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಡಿ ಬಾಸ್ ಅಂದ್ರೆ ದರ್ಶನ್ ಒಬ್ಬರೇ. ನನಗೆ ಯಾವತ್ತಿಗೂ ಆಂಜನೇಯನೇ ಬಾಸ್. ದರ್ಶನ್ ಹಿರಿಯ ನಟ. ನಿಮ್ಮಂತೆಯೇ ನಾನು ಕೂಡಾ ಅವರ ಅಭಿಮಾನಿ. ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಾನಿನ್ನೂ ಸಾಧಿಸುವುದು ಬಹಳಷ್ಟಿದೆ.  ದರ್ಶನ್, ಸದಾ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ ಧ್ರುವ ಸರ್ಜಾ.

  ಇದೇ ವೇಳೆ ಮುಂದಿನ ವರ್ಷ ಮದುವೆಯಾಗುವ ಸುಳಿವನ್ನೂ ಕೊಟ್ಟಿದ್ದಾರೆ ಧ್ರುವ. ಲವ್ ಮ್ಯಾರೇಜ್ ಆಗ್ತಾರಂತೆ. ಆದ್ರೆ, ಹುಡುಗಿಯೇ ಸಿಕ್ಕಿಲ್ವಂತೆ. ಇನ್ನೊಂದ್ ವರ್ಷದಲ್ಲಿ ಹುಡುಗಿ ಹುಡುಕಿ ಲವ್ ಮಾಡಿ ಮದ್ದೆ ಆಗ್ತಾರಂತೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್.

 • ತುಂಟ ತುಟಿಗಳ ಆಟೋಗ್ರಾಫ್.. ಌಕ್ಷನ್ ಪ್ರಿನ್ಸ್ ವಾಯ್ಸ್..!

  dhruva sarja lends his voice to ap arjun's kiss movie

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ ಆಗಿದ್ದು ಅದ್ದೂರಿ ಸಿನಿಮಾದಿಂದ. ಆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್. ಅದಾದ ಮೇಲೆ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ, ಈಗ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ತಮ್ಮ ಮೊದಲ ಚಿತ್ರದ ನಿರ್ದೇಶಕರ ಹೊಸ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ.

  ವಿರಾಟ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಿಸ್ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕ ಹಾಗು ನಿರ್ಮಾಪಕ. ಆ ಚಿತ್ರಕ್ಕೆ ತಮ್ಮ ಪವರ್ ಫುಲ್  ವಾಯ್ಸ್ ಕೊಟ್ಟಿದ್ದಾರೆ ಧ್ರುವ.  ಅಲ್ಲಿಗೆ ಕಿಸ್ ಚಿತ್ರಕ್ಕೆ ಇನ್ನೊಂದು ಪವರ್ ಸಿಕ್ಕಂತಾಗಿದೆ. 

  ಈ ಮೊದಲು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್, ಬೆಟ್ಟೇಗೌಡ ವರ್ಸಸ್‌ ಚಿಕ್ಕಬೋರಮ್ಮ ಅನ್ನೋ ಹಾಡು ಹಾಡಿದ್ದರು. ಈಗ ಌಕ್ಷನ್ ಪ್ರಿನ್ಸ್ ಧ್ರುವಾ ಧ್ವನಿಯ ಪವರ್ ಸಿಕ್ಕಿದೆ. ಅಂದಹಾಗೆ ಕಿಸ್ ಚಿತ್ರಕ್ಕೆ 

  ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಟ್ಯಾಗ್ಲೈನ್ ಇದೆ.

 • ಧ್ರುವ ಲವ್ ಸ್ಟೋರಿ ಅರ್ಜುನ್ ಸರ್ಜಾಗೆ ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ..

  dhruva sarja's love story

  ಧ್ರುವ ಸರ್ಜಾ ಅವರ ಪಾಲಿಗೆ ಸರ್ವಸ್ವವೂ ಆಗಿರುವುದು ಅರ್ಜುನ್ ಸರ್ಜಾ. ಮಾವನನ್ನು ತಂದೆಯಂತೆಯೇ ಗೌರವಿಸುವ ಅರ್ಜುನ್ ಸರ್ಜಾ, ಲವ್ ವಿಷಯದಲ್ಲಿ ಮಾತ್ರ ಡಿಫರೆಂಟು. ಏಕಂದ್ರೆ, ಧ್ರುವ ಸರ್ಜಾ, ಪ್ರೇರಣಾ ಲವ್ ಸ್ಟೋರಿ, ಅರ್ಜುನ್ ಸರ್ಜಾಗೆ ಮೊದಲು ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ. ನಿಶ್ಚಿತಾರ್ಥದದ ವೇಳೆ ಸ್ವತಃ ಅವರೇ ವಿಷಯವನ್ನು ಬಹಿರಂಗಪಡಿಸಿದ್ದಾರೆ.

  ಥೇಟು ಸಿನಿಮಾ ಸ್ಟೈಲ್‍ನಲ್ಲಿ ಹೋಗಿ ಪ್ರೇರಣಾ ಅವರ ಅಪ್ಪನ ಬಳಿ, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡ್ರಿ ಎಂದು ಕೇಳಿದ್ದ ಧ್ರುವಾ. ಅದಾದ ಮೇಲೇ ನನಗೂಗ ಗೊತ್ತಾಗಿದ್ದು ಎಂದರು ಅರ್ಜುನ್ ಸರ್ಜಾ.

  ಅರ್ಜುನ್ ಸರ್ಜಾ ಹಾಗೆ ಹೇಳುತ್ತಿದ್ದರೆ ಪಕ್ಕದಲ್ಲೇ ಇದ್ದ ಧ್ರುವ, ಪ್ರೇರಣಾ, ಅಣ್ಣ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ... ಹೀಗೆ ಎಲ್ಲರ ಮುಖದಲ್ಲೂ ನಗುವೋ ನಗು.

 • ಧ್ರುವ ಸಂಭಾವಣೆ 6 ಕೋಟಿಯಂತೆ..!

  dhruva's remunaration is 6 crores

  ಧ್ರುವ ಸರ್ಜಾ, ಭರ್ಜರಿ ಸಿನಿಮಾಗೆ 6 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಗಾಂಧಿ ನಗರದಲ್ಲಿ ವೈರಲ್ ಆಯ್ತು. ಸ್ವಾರಸ್ಯಕಾರಿ ವಿಷಯ ಏನಂದ್ರೆ, ಧ್ರುವ ಭರ್ಜರಿ ಸಿನಿಮಾದ ಅದರ ಆರ್ಧದಷ್ಟೂ ಸಂಭಾವನೆ ಪಡೆದಿಲ್ಲ. 

  ಸುದ್ದಿ ವೈರಲ್ ಆದ ಮೇಲೆ, ನೋಡೋಣ, ನನಗೂ ಅಷ್ಟು ಕೊಡ್ತಾರಾ ಅಂತಾ ಕೇಳಿದೆ. ಕೊಟ್ಟೇಬಿಟ್ಟರು ಎಂದು ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಮುಂದೆ ನನ್ನ ಸಂಭಾವನೆಯನ್ನು ಇನ್ನೂ ಜಾಸ್ತಿ ಜಾಸ್ತಿ ಹೆಚ್ಚಿಸಿ ಸುದ್ದಿ ಮಾಡಿ, ನನಗೂ ಒಳ್ಳೆಯದಾಗುತ್ತೆ ಎಂದು ಮಾಧ್ಯಮಗಳನ್ನು ತಮಾಷೆ ಮಾಡಿದ್ದಾರೆ.

  ಇನ್ನು ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ಧ್ರುವ ಸರ್ಜಾ, ಪೊಗರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮುಗಿದಿದೆ. ಅಂತಿಮ ತಿದ್ದುಪಡಿಗಳೂ ಮುಗಿದಿವೆ. ನಮ್ಮ ಕುಟುಂಬದ ಪ್ರೇಮ ಬರಹ ಚಿತ್ರದ ಆಡಿಯೋ ಬಿಡುಗಡೆ ಮುಗಿದ ಮೇಲೆ ಪೊಗರು ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಧ್ರುವ.

  ಅಂದಹಾಗೆ ಪೊಗರು ಕೂಡಾ ಸ್ವಮೇಕ್ ಸಿನಿಮಾ. ಅದಾದ ನಂತರ ಉದಯ್ ಮೆಹ್ತಾ ಅವರ ನಿರ್ಮಾಣದ ಚಿತ್ರಕ್ಕೆ ಒಪ್ಪಿದ್ದೇನೆ. 2 ವರ್ಷಕ್ಕೆ 3 ಸಿನಿಮಾ ಮಾಡುವುದು ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ ಧ್ರುವ.

Geetha Movie Gallery

Ombattane Dikku Launch Meet Gallery