` dhruva sarja, - chitraloka.com | Kannada Movie News, Reviews | Image

dhruva sarja,

 • ರಶ್ಮಿಕಾ ಜೊತೆ ಅದೇನೇನ್ ಮಾತಾಡವ್ರೆ ಧ್ರುವಾ

  pogaru dialogue trailer on oct 24th

  ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ, ರಶ್ಮಿಕಾ ನಟಿಸಲಿದ್ದಾರೆ ಎಂದಾಗಲೇ ಕುತೂಹಲ ಹುಟ್ಟಿತ್ತು. ಈಗ ಆ ಕುತೂಹಲದ ಇನ್ನೊಂದು ಮಜಲು ತೋರಿಸಲಿದ್ದಾರೆ ನಂದಕಿಶೋರ್. ಅಕ್ಟೋಬರ್ 24ಕ್ಕೆ ಪೊಗರು ಚಿತ್ರದ ಡೈಲಾಗ್ ಟ್ರೇಲರ್ ಹೊರಬೀಳಲಿದೆ. ಇನ್ನೊಂದ್ಸಲ ಓದಿಕೊಳ್ಳಿ, ಇದು ಡೈಲಾಗ್ ಟ್ರೇಲರ್ ಮಾತ್ರ. ಕಥೆಯ ಸಣ್ಣದೊಂದು ಗುಟ್ಟನ್ನೂ ಬಿಡಲ್ಲ.

  ಇನ್ನೂ ಈ ಡೈಲಾಗ್ ಟ್ರೇಲರ್‍ನಲ್ಲಿ ಧ್ರುವ ಮತ್ತು ರಶ್ಮಿಕಾ ಮಂದಣ್ಣ ನಡುವಣ ಸಂಭಾಷಣೆಗಳಷ್ಟೇ ಇರಲಿವೆ. ಅಂದರೆ.. ಪ್ರೇಮದ ಪೊಗರಿನ ಡೈಲಾಗ್ಸ್ ಎಂದರ್ಥ ಮಾಡಿಕೊಳ್ಳಿ. ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಲ್ಲಿ ಡೈಲಾಗ್‍ಗಳ ಮೂಲಕವೇ ಶಿಳ್ಳೆಯ ಕಾಣಿಕೆ ಪಡೆದಿದ್ದ ಧ್ರುವಾ, ಇಲ್ಲಿಯೂ ಅದನ್ನು ಕಂಟಿನ್ಯೂ ಮಾಡಿದ್ದಾರೆ.

 • ರಶ್ಮಿಕಾ ಪೊಗರಿನ ಸಂಭಾವನೆ ಲಕ್ಷಾನಾ..? ಕೋಟಿನಾ..?

  rashmika's remuneration creates sensation

  ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟಿಯಲ್ಲಿರಲ್ಲಿ ಒಬ್ಬರು. ಅವರೀಗ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆ ಚಿತ್ರಕ್ಕೆ ಅವರು ಪಡೆದಿರುವ ಸಂಭಾವನೆಯೇ ಭರ್ಜರಿ ಸದ್ದು ಮಾಡುತ್ತಿದೆ. 

  ಒಂದು ಮೂಲದ ಪ್ರಕಾರ, ರಶ್ಮಿಕಾ ಪಡೆದಿರುವ ಸಂಭಾವನೆ 64 ಲಕ್ಷ. ಇದುವರೆಗೆ ಕನ್ನಡದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ. ನಿರ್ಮಾಪಕ ಗಂಗಾಧರ್ ಆಗಲೀ, ನಿರ್ದೇಶಕ ನಂದಕಿಶೋರ್ ಆಗಲೀ.. ಈ ಬಗ್ಗೆ ನೋ ಕಮೆಂಟ್ಸ್.

  ಇನ್ನೊಂದು ಮೂಲದ ಪ್ರಕಾರ ಇದು ಭಾರಿ ಮೊತ್ತವೇನೂ ಅಲ್ಲ. ತೆಲುಗು, ತಮಿಳಿನಲ್ಲಿ ಇದಕ್ಕಿಂತಲೂ ಒಳ್ಳೆಯ ಸಂಭಾವನೆ ಇದೆ. ಅದು ಕೋಟಿ ದಾಟಿದೆ. ಕನ್ನಡದಲ್ಲಿ ರಶ್ಮಿಕಾ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.

  ದುಡ್ಡಿನ ವಿಷ್ಯ. ಕೇಳಿದ್ರೆ ಎಲ್ಲರೂ ಶ್‍ಶ್‍ಶ್‍ಶ್‍ಶ್‍ಶ್ ಅಂತಾರೆ.

 • ರಾಬರ್ಟ್ ಬಂದ ಮೇಲಷ್ಟೇ ಪೊಗರು

  pogaru will release after roberrt

  2017, ಸೆಪ್ಟೆಂಬರ್ 15. ಭರ್ಜರಿ ರಿಲೀಸ್ ಆದ ಡೇಟ್. ಅದು ಮುಗಿದ ಕೆಲವೇ ದಿನಗಳಲ್ಲಿ ಸೆಟ್ಟೇರಿದ ಸಿನಿಮಾ ಪೊಗರು. 2 ವರ್ಷ ಕಳೆದುಹೋಗಿ, ಇನ್ನೇನು ರಿಲೀಸ್ ಆಗುವ ಡೇಟ್ ಹತ್ತಿರ ಬಂದಾಗಿದೆ. ಇದೇ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ.. ಅದೇ ತಿಂಗಳು ರಾಬರ್ಟ್ ಬರುತ್ತಿದೆ. ಹೀಗಾಗಿ ನಿರ್ದೇಶಕ ನಂದ ಕಿಶೋರ್ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಬರೋದೇನಿದ್ದರೂ ರಾಬರ್ಟ್ ನಂತರವೇ ಎಂದಿದ್ದಾರೆ ನಂದ ಕಿಶೋರ್.

  ಚಿತ್ರ ಯಾಕೆ ಲೇಟ್ ಆಯ್ತು ಎಂದು ಹೇಳೋಕಾಗಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡಿದ್ದೇನೆ ಎನ್ನುವ ನಂದ, ಈ ಚಿತ್ರ ಧ್ರುವ ಸರ್ಜಾ ಕೆರಿಯರ್‍ನಲ್ಲಿ ಬೇರೆಯದೇ ಲೆವೆಲ್ಲಿನ ಸಿನಿಮಾ ಎನ್ನುತ್ತಾರೆ.

  ತಾಯಿ ಮತ್ತು ಬಾಂಧವ್ಯದ ಸುತ್ತ ಇರುವ ಕಥೆ ಇದು. ಸಣ್ಣ ಭಿನ್ನಾಭಿಪ್ರಾಯ ಮನುಷ್ಯನ ಮನಸ್ಸಿನ ಮೇಲೆ ಏನೆಲ್ಲ ಪರಿಣಾಮ ಬೀರುತ್ತವೆ. ನಮ್ಮ ತಪ್ಪುಗಳು, ಕರ್ಮಫಲಗಳದ್ದೇ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಧ್ರುವ ಎಕ್ಸ್‍ಟ್ರೀಮ್ ಆಗಿ ನಟಿಸಿದ್ದರೆ, ರಶ್ಮಿಕಾ ಮಂದಣ್ಣ ಸೂಕ್ಷ್ಮಮನಸ್ಸಿನ ಶಿಕ್ಷಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಗುರುವಿನ ಪಾತ್ರದಲ್ಲಿದ್ದಾರೆ. ಬಿ.ಕೆ.ಗಂಗಾಧರ್ ಚಿತ್ರದ ನಿರ್ಮಾಪಕ.

 • ರಾಯನ್`ಗೆ ತಂದಿ ಬರಲಿ ಎಂಬ ಆಸೆ ನಮ್ಮದು : ಧ್ರುವ ಸರ್ಜಾ

  ರಾಯನ್`ಗೆ ತಂದಿ ಬರಲಿ ಎಂಬ ಆಸೆ ನಮ್ಮದು : ಧ್ರುವ ಸರ್ಜಾ

  ಮನೆಗಂತೂ ಒಬ್ಬ ಮಗ ಇದ್ದಾನೆ. ರಾಯನ್ ನನಗೂ ಮಗ. ಮಗ ಹುಟ್ಟಿದ್ರೆ ನಿರಾಶೆಯಾಗುತ್ತೇನೋ.. ಏಕೆಂದರೆ ಮನೆಗೆ ಈಗಾಗಲೇ ಒಬ್ಬ ಮಗ ಇದ್ದಾನೆ. ಅವನಿಗೆ ತಂಗಿಯೇ ಬರಲಿ ಎನ್ನುವುದು ನನ್ನ ಹಾಗೂ ಪ್ರೇರಣಾ ಆಸೆ ಕೂಡಾ..

  ಈ ಮಾತು ಹೇಳಿರೋದು ಖುದ್ದು ಧ್ರುವ ಸರ್ಜಾ. ಟಿವಿಯೊಂದಕ್ಕೆ ಮಾತನಾಡುವ ವೇಳೆ ಧ್ರುವ ಸರ್ಜಾ ತಮ್ಮ ಮಗುವಿನ ನಿರೀಕ್ಷೆ ಮತ್ತು  ರಾಯನ್ ಬಗ್ಗೆಯೂ ಮಾತನಾಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್`ನ್ನು ನನ್ನ ಮಗ ಎಂದಿದ್ದಾರೆ. ಇದೇ ವೇಳೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸರ್ಜಾ ದಂಪತಿ ಮೊದಲ ಮಗು ಹೆಣ್ಣಾಗಲಿ ಎಂದು ಕನಸು ಕಟ್ಟಿದ್ದಾರಂತೆ.

  ಮಕ್ಕಳಾಗುವುದೇ ಸಂಭ್ರಮ. ಈಗ ಮನೆಗೆ ಅಣ್ಣನೇ ಮತ್ತೆ ಹುಟ್ಟಿ ಬರ್ತಾನೋ.. ಅಜ್ಜಿಯೇ ಮತ್ತೆ ಬರ್ತಾಳೋ.. ನಿರೀಕ್ಷೆಯಲ್ಲಿದ್ದೇವೆ ಎನ್ನುವುದು ಧ್ರುವ ಸರ್ಜಾ ಮಾತು.

  ಚಿರು, ಧ್ರುವ ಪಾಲಿಗೆ ಕೇವಲ ಅಣ್ಣನಾಗಿರಲಿಲ್ಲ. ಅವರಿಬ್ಬರ ಬಾಂಧವ್ಯವೇ ಹಾಗಿತ್ತು. ಚಿರು ದೂರವಾಗಿದ್ದರೂ.. ಅತ್ತಿಗೆ ಮೇಘನಾ ಅವರೊಂದಿಗೆ ಇಂದಿಗೂ ಅದೇ ಪ್ರೀತಿ ವಾತ್ಸಲ್ಯ ಉಳಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅವರ ಬಗ್ಗೆ ಮೇಘನಾ ರಾಜ್ ಕೂಡಾ ಅದೇ ವಾತ್ಸಲ್ಯ ಇಟ್ಟುಕೊಂಡಿದ್ದಾರೆ.

 • ವಿಕ್ಟರಿ 2ಗೆ ಧ್ರುವ ಸರ್ಜಾ ಎಂಟ್ರಿ..

  dhruva sarja lends voice to victory 2

  ವಿಕ್ಟರಿ 2 ಚಿತ್ರ ತಂಡಕ್ಕೆ ಧ್ರುವ ಸರ್ಜಾ ಸೇರ್ಪಡೆಯಾಗಿದ್ದಾರೆ. ನಟನಾಗಿ ಅಲ್ಲ, ಕಂಠದಾನ ಕಲಾವಿದನಾಗಿ. ಶರಣ್ ಅಭಿನಯದ ವಿಕ್ಟರಿ2 ಸಿನಿಮಾದ ಪಾತ್ರಧಾರಿಗಳನ್ನು ಹಿನ್ನೆಲೆಯಲ್ಲಿ ಪರಿಚಯಿಸುವುದು ಧ್ರುವ ಸರ್ಜಾ. ಕೆಲವು ದೃಶ್ಯಗಳ ಹಿನ್ನೆಲೆಗೂ ಧ್ರುವ ಸರ್ಜಾ ವಾಯ್ಸ್ ಓವರ್ ನೀಡಲಿದ್ದಾರೆ.

  ಶರಣ್ ಜೊತೆ ಅಪೂರ್ವ, ಅಸ್ಮಿತಾ ಸೂದ್ ಜೋಡಿಯಾಗಿ ನಟಿಸುತ್ತಿದ್ದಾರೆ. ರವಿಶಂಕರ್, ತಬಲಾ ನಾಣಿ, ಸಾಧು ಕೋಕಿಲ, ಪ್ರಶಾಂತ್ ಸಿದ್ಧಿ ಮೊದಲಾದವರ ದೊಡ್ಡ ತಂಡವೇ ಚಿತ್ರದಲ್ಲಿದೆ. ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ.

 • ವ್ಹಾರೆವ್ಹಾ.. Gentleman

  gentlaman trailer released

  ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ಮನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ ಮಾಡಿದ್ದು ಪುನೀತ್ ಮತ್ತು ಧ್ರುವ ಸರ್ಜಾ ಎನ್ನುವುದೇ ವಿಶೇಷ. ಇನ್ನೂ ವಿಶೇಷವೆಂದರೆ ಪ್ರಜ್ವಲ್ ಹೇಳಿದ ಮಾತು. ‘ನನಗೆ ಸಿನಿಮಾ ರಂಗಕ್ಕೆ ಬರಲು ಸ್ಪೂರ್ತಿಯೇ ಪುನೀತ್ ಮತ್ತು ವಯಸ್ಸಿನಲ್ಲಿ ಚಿಕ್ಕವನಾದರೂ ಧ್ರುವ ನನಗೆ ಸದಾ ಪ್ರೇರಣೆ ’ ಎಂದರು ಪ್ರಜ್ವಲ್.

  ಜಡೇಶ್ ಕುಮಾರ್ ನಿರ್ದೇಶನದ ಜೆಂಟಲ್ಮ್ಯಾನ್ ಟ್ರೇಲರ್ ಟೆಕ್ನಿಕಲ್ ಸಖತ್ತಾಗಿದೆ. ಕ್ಯಾಮೆರಾ, ಮ್ಯೂಸಿಕ್, ಡೈಲಾಗ್ ಎಲ್ಲವೂ ಅದ್ಭುತ ಕ್ವಾಲಿಟಿಯಲ್ಲಿದೆ ಎಂದು ಮೆಚ್ಚಿಕೊಂಡರು ಪುನೀತ್. ಅಫ್ಕೋರ್ಸ್.. ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂದು ಕುತೂಹಲ ಹುಟ್ಟಿಸುವಂತಿದೆ ಟ್ರೇಲರ್. ಹೆಣ್ಣು ಮಕ್ಕಳ ಕಿಡ್ನಾಪ್ ಕಥೆ, ಒಂದು ಕ್ಯೂಟ್ ಲವ್ ಸ್ಟೋರಿ ಮತ್ತು ಇವೆಲ್ಲದರ ಮಧ್ಯೆ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಲ್ಲಿ ಒದ್ದಾಡುವ ಯುವಕನ ಹೋರಾಟ.

  ಗುರುದೇಶ ಪಾಂಡೆ ನಿರ್ಮಾಣದ ಜೆಂಟಲ್ಮ್ಯಾನ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹೀರೋಯಿನ್.  ಸಿನಿಮಾ ಇದೇ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

 • ಶೃತಿ ಆರೋಪಕ್ಕೆ ಧ್ರುವ ಸರ್ಜಾ ಕೆಂಡಾಮಂಡಲ

  dhruva expresse anger against sruthi hariharan

  ನನ್ನನ್ನು ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆಸಿಕೊಂಡರು. ಬಲವಂತವಾಗಿ ತಬ್ಬಿದರು. ಮೈಮೇಲೆ ಕೆಟ್ಟದಾಗಿ ಕೈ ಆಡಿಸಿದ್ರು. ರೆಸಾರ್ಟ್‍ಗೆ ಕರೆದರು ಅನ್ನೊದು ಶೃತಿ ಹರಿಹರನ್ ಆರೋಪ. ಈ ಕುರಿತು ಅರ್ಜುನ್ ಸರ್ಜಾ ಬೆನ್ನಿಗೆ ನಿಂತಿರೋದು ಅವರ ಕುಟುಂಬ. ಧ್ರುವ ಸರ್ಜಾ ಅಂತೂ ಕೆಂಡಾಮಂಡಲವಾಗಿ ಹೋಗಿದ್ದಾರೆ.

  ನಾನು ಚಿಕ್ಕ ವಯಸ್ಸಿನಿಂದ ನನ್ನ ಅಂಕಲ್‍ನನ್ನು ನೋಡಿಕೊಂಡೇ ಬಂದಿದ್ದೇನೆ. ಅವರೇನು ಅನ್ನೋದು ನನಗೆ ಚೆನ್ನಾಗಿ ಗೊತ್ತು. ನಾಯಿ, ನರಿ, ಕ್ರಿಮಿ, ಕೀಟಗಳು ಹೇಳಿದ್ದನ್ನೆಲ್ಲ ಕೇಳುವ ಅಗತ್ಯ ನನಗಿಲ್ಲ. ನಮಗೆ ಹೀಗೆಲ್ಲ ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಆಡೋಕೆ ಬರಲ್ಲ. ಆಕೆಯ ಹಿಂದೆ ಯಾರಿದ್ದಾರೋ.. ಅವರು ಇರುವ ಜಾಗಕ್ಕೆ ನಾನು ಒಬ್ಬನೇ ಹೋಗ್ತೀನಿ. ಅದೇನಾಗುತ್ತೋ ನೋಡೇ ಬಿಡೋಣ. ಕೈ ಕೈ ಮಿಲಾಯಿಸಿಬಿಡೋಣ ಎಂದಿದ್ದಾರೆ ಧ್ರುವ ಸರ್ಜಾ.

 • ಸರ್ಜಾ ಕುಟುಂಬ ಈಗ ಕೊರೊನಾ ಮುಕ್ತ..!

  sarj family is now corona free

  ಸರ್ಜಾ ಕುಟುಂಬಕ್ಕೆ ಅಂಟಿಕೊಂಡಿದ್ದ ಕೊರೊನಾ ಶಾಪ ಮುಕ್ತವಾಗಿದೆ. ಸರ್ಜಾ ಫ್ಯಾಮಿಲಿಯಲ್ಲಿ ಮೊದಲು ಧ್ರುವ ಸರ್ಜಾ, ಪ್ರೇರಣಾ ಸರ್ಜಾ ದಂಪತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನಂತರ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾಗೂ ಕೊರೊನಾ ಪಾಸಿಟಿವ್ ಆಗಿತ್ತು.

  ಕೊರೊನಾ ಹೇಗೆ ಬಂತೋ ಹಾಗೆಯೇ ಹೊರಟು ಹೋಗಿದೆ. ಮೊದಲಿಗೆ ಧ್ರುವ ಸರ್ಜಾ, ನಂತರ ಪ್ರೇರಣಾ ಸರ್ಜಾ.. ಮತ್ತೀಗ ಐಶ್ವರ್ಯಾ ಸರ್ಜಾ.. ಕೊರೊನಾದಿಂದ ಗುಣಮುಖರಾಗಿದ್ದಾರೆ. ಒಟ್ಟಿನಲ್ಲೀಗ ಸರ್ಜಾ ಕುಟುಂಬ ಕೊರೊನಾ ಮುಕ್ತವಾಗಿದೆ.

 • ಸರ್ಜಾ ಜೊತೆ ಹರಿಪ್ರಿಯಾ ಸ್ಪೆಷಲ್ ರೆಕಾರ್ಡ್..!

  haripriya's record with sarja brothers

  ಹರಿಪ್ರಿಯಾ, ಈಗ ಕನ್ನಡದಲ್ಲಿ ಅತ್ಯಂತ ಬ್ಯುಸಿ ನಟಿ. ಅತ್ತ ಕುರುಕ್ಷೇತ್ರ, ಇತ್ತ ಸಂಹಾರ, ಇನ್ನೊಂದು ಸೂಜಿದಾರ, ಮತ್ತೊಂದು ಸೆಲ್ಫಿ.. ಹೀಗೆ ಹರಿಪ್ರಿಯಾ ಕೈತುಂಬಾ ಸಿನಿಮಾಗಳಿವೆ. ಇದರ ಮಧ್ಯೆ ಹರಿಪ್ರಿಯಾ ಸದ್ದಿಲ್ಲದೇ ಒಂದು ವಿಶೇಷ ದಾಖಲೆ ಬರೆದಿದ್ದಾರೆ.

  ಸರ್ಜಾ ಫ್ಯಾಮಿಲಿಯ ಮೂವರು ಹೀರೋಗಳ ಜೊತೆ ಕಾಣಿಸಿಕೊಂಡಿರುವ ಹೊಸ ದಾಖಲೆ ಈಗ ಹರಿಪ್ರಿಯಾ ಹೆಸರಿಗೆ ಹೋಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ನಟಿಸಿರುವ ಹರಿಪ್ರಿಯಾ, ಭರ್ಜರಿಯಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿದ್ದರು. ಈಗ ಸಂಹಾರ ಚಿತ್ರದಲ್ಲಿ ಧ್ರುವ ಅಣ್ಣ ಚಿರಂಜೀವಿ ಸರ್ಜಾಗೆ ನಾಯಕಿ.

  ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹೀರೋಗಳು ಅಂಧನ ಪಾತ್ರದಲ್ಲಿ ನಟಿಸಿಯೇ ಇಲ್ಲ ಎನ್ನುವಷ್ಟು ಅಪರೂಪ. ಅಂತಹ ಚಿತ್ರದಲ್ಲಿ ಇಡೀ ಸಿನಿಮಾಗೆ ಟ್ವಿಸ್ಟ್ ಕೊಡುವ ಎರಡು ಶೇಡ್‍ಗಳಿರುವ ಪಾತ್ರದಲ್ಲಿ ನಟಿಸಿದ್ದಾರಂತೆ ಹರಿಪ್ರಿಯಾ. 

  ಕ್ಯಾರೆಕ್ಟರ್ ಹೆಂಗೆ ಅಂದ್ರೆ, ಡೈರೆಕ್ಟರ್ ಹೇಳಿದ್ದಾರೆ. ಹೇಳೋ ಹಾಗಿಲ್ಲ ಅಂತಾ ನಿರ್ದೇಶಕ ಗುರು ದೇಶಪಾಂಡೆ ಕಡೆ ಕೈತೋರಿಸ್ತಾರೆ ಹರಿಪ್ರಿಯಾ. 

   

 • ಸೆ.30ಕ್ಕೆ ಕಾಂತಾರಾ : ಮಾರ್ಟಿನ್ ಜೊತೆ ಬಾಕ್ಸಾಫೀಸ್ ಫೈಟ್

  ಸೆ.30ಕ್ಕೆ ಕಾಂತಾರಾ : ಮಾರ್ಟಿನ್ ಜೊತೆ ಬಾಕ್ಸಾಫೀಸ್ ಫೈಟ್

  ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ರಿಲೀಸ್ ಆಗಿ ಯಾವುದೋ ಕಾಲವಾಗಿತ್ತು. ಈಗ ಮತ್ತೊಮ್ಮೆ ಅಂತಾದ್ದೊಂದು ಫೈಟ್ ಶುರುವಾಗಿದೆ. ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ರಿಲೀಸ್ ಡೇಟ್ ಘೋಷಿಸಿವೆ. ಸೆಪ್ಟೆಂಬರ್ 30ಕ್ಕೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರಾ ರಿಲೀಸ್ ಆಗುತ್ತಿದೆ. ಇದು ಹೊಂಬಾಳೆ ಬ್ಯಾನರ್ ಸಿನಿಮಾ.

  ಇದಕ್ಕೂ ಮೊದಲು ಮಾರ್ಟಿನ್ ಚಿತ್ರ ತಿಂಗಳುಗಳ ಹಿಂದೆಯೇ, ಏಪ್ರಿಲ್‍ನಲ್ಲೇ..

  ಸೆಪ್ಟೆಂಬರ್ 30ರಂದು ರಿಲೀಸ್ ಎಂದು ಘೋಷಿಸಿತ್ತು. ಮಾರ್ಟಿನ್ ಚಿತ್ರ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ. ಧ್ರುವ ಸರ್ಜಾ ಹೀರೋ ಆಗಿರುವ ಚಿತ್ರಕ್ಕೆ ಎ.ಪಿ.ಅರ್ಜುನ್ ನಿರ್ದೇಶನವಿದೆ. ಇದು ಉದಯ್ ಕೆ.ಮೆಹ್ತಾ ನಿರ್ಮಾಣದ ಸಿನಿಮಾ.

 • ಸೆ.30ಕ್ಕೆ ರಿಲೀಸ್ ಆಗುತ್ತಿಲ್ಲ ಮಾರ್ಟಿನ್ : ಈಗ ಅಧಿಕೃತ

  ಸೆ.30ಕ್ಕೆ ರಿಲೀಸ್ ಆಗುತ್ತಿಲ್ಲ ಮಾರ್ಟಿನ್ : ಈಗ ಅಧಿಕೃತ

  ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರವನ್ನು ಸೆಪ್ಟೆಂಬರ್ 30ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿತ್ತು. ಈಗ ಅಧಿಕೃತವಾಗಿಯೇ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.

  ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿದೇವಮ್ಮ ನಿಧನರಾದರು. ಅದಕ್ಕೂ ಮುನ್ನ ಅವರು ಕೆಲಕಾಲ ಆಸ್ಪತ್ರೆಯಲ್ಲಿದ್ದರು. ಅವರ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಕೆಲವು ದಿನಗಳ ಶೂಟಿಂಗ್ ಆಗಲಿಲ್ಲ. ಹೀಗಾಗಿ ಚಿತ್ರದ ಶೂಟಿಂಗ್ ಸ್ವಲ್ಪ ಪೆಂಡಿಂಗ್ ಆಗಿದ್ದು ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿರೋದಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹೇಳಿದ್ದಾರೆ.

  ಧ್ರುವ ಸರ್ಜಾ ಅವರ ಶೆಡ್ಯೂಲ್ ಹೊಸದಾಗಿ ಪ್ಲಾನ್ ಮಾಡಿಕೊಂಡು ಉಳಿದ 10-12 ದಿನಗಳ ಚಿತ್ರೀಕರಣ ನಡೆಸಲಿದ್ದೇವೆ. ಒಂದು ಚೇಸಿಂಗ್ ಸೀನ್, ಎರಡು ಹಾಡುಗಳ ಚಿತ್ರೀಕರಣ ಬ್ಯಾಲೆನ್ಸ್ ಇದೆ ಎಂದಿದ್ದಾರೆ ಅರ್ಜುನ್.

  ಉದಯ್ ಕೆ.ಮೆಹ್ತಾ ನಿರ್ಮಾಪಕರಾಗಿರುವ ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ನಿಕಿತೀನ್ ಧೀರ್ ಮೊದಲಾದವರು ನಟಿಸಿದ್ದಾರೆ.

  ಮಾರ್ಟಿನ್ ಚಿತ್ರ ಸೆ.30ಕ್ಕೆ ರಿಲೀಸ್ ಆಗುತ್ತಿಲ್ಲ ಎಂದು ಚಿತ್ರಲೋಕ ಈ ಹಿಂದೆಯೇ ವರದಿ ಮಾಡಿತ್ತು.

 • ಸ್ಯಾಂಡಲ್‍ವುಡ್ ಸ್ಟಾರ್ ವಾರ್‍ಗೆ ಧ್ರುವ ಸರ್ಜಾ ಹೇಳಿದ ಮದ್ದು

  ಸ್ಯಾಂಡಲ್‍ವುಡ್ ಸ್ಟಾರ್ ವಾರ್‍ಗೆ ಧ್ರುವ ಸರ್ಜಾ ಹೇಳಿದ ಮದ್ದು

  ನಾನು ಆ ನಟನ ಫ್ಯಾನು. ನೀನು ಈ ನಟನ ಫ್ಯಾನು. ನಿಮ್ ಸ್ಟಾರ್ ಡಬ್ಬಾ. ನಮ್ ಸ್ಟಾರ್ ಒಬ್ರೇ ಒಳ್ಳೇವ್ರು... ಇದು ಇರಲಿ, ಇದಕ್ಕಿಂತ ಕೆಳಗಿನ ಮಟ್ಟಕ್ಕೆ ಇಳಿದಿದೆ ಫ್ಯಾನ್ಸ್ ಸ್ಟಾರ್‍ವಾರ್. ಓಪನ್ ಆಗಿಯೇ ಹೇಳಬೇಕೆಂದರೆ ಇದು ಯಾವ ನಟರನ್ನೂ ಬಿಟ್ಟಿಲ್ಲ. ಒಂದು ಚಿತ್ರ ಸಕ್ಸಸ್ ಆದರೆ, ಆ ಸಂಭ್ರಮವನ್ನೂ ಒಟ್ಟಿಗೇ ಸಂಭ್ರಮಿಸುವ ಸ್ಥಿತಿಯಲ್ಲಿ ಚಿತ್ರರಂಗ ಇಲ್ಲ. ಒಬ್ಬ ಸ್ಟಾರ್ ಇದ್ದ ಕಡೆ ಕೆಲವು ಸ್ಟಾರ್ ನಟರೂ ಬರೋದಿಲ್ಲ. ಒಂದು ಚಿತ್ರ ಗೆದ್ದಾಗ ಮೆಚ್ಚುಗೆಯ ಮಾತನ್ನೂ ಹೇಳೋದಿಲ್ಲ. ಇಂತಹ ಸ್ಟಾರ್ ವಾರ್‍ಗೆ ಧ್ರುವ ಸರ್ಜಾ ಹೇಳಿರೋ ಬುದ್ದಿ ಮಾತು ಇದು.

  ಕನ್ನಡದ ಎಲ್ಲ ನಟರ ಸಿನಿಮಾಗಳನ್ನೂ ನೋಡಿ. ಅದರಲ್ಲೂ ಕನ್ನಡದ ಸಿನಿಮಾಗಳನ್ನು ನೋಡಿ. ಸಿನಿಮಾ ರಂಗ ಇನ್ನೂ ಬೆಳೆಯುತ್ತದೆ. ತಮ್ಮ ಮನವಿಯನ್ನು ಫ್ಯಾನ್ಸ್ ಈಡೇರಿಸಿದರೆ ಕನ್ನಡದ  ಎಲ್ಲ ಚಿತ್ರಗಳೂ ಗೆಲ್ಲುತ್ತವೆ ಎಂದಿದ್ದಾರೆ ಧ್ರುವ ಸರ್ಜಾ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಒಬ್ಬ ನಟರ ಚಿತ್ರಗಳನ್ನು ಇನ್ನೊಬ್ಬ ನಟರ ಫ್ಯಾನ್ಸ್ ಲೇವಡಿ ಮಾಡುವ, ಪೈರಸಿ ಮಾಡಿ  ಹಂಚುವ, ನೆಗೆಟಿವ್ ಕಮೆಂಟ್ಸ್ ಮೂಲಕ ಹೀಗಳೆಯುವ ಮನೋಸ್ಥಿತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಈ ಮನವಿ ಮಾಡಿದ್ದಾರೆ.

 • ಹರಿಪ್ರಿಯಾಗೂ-ಧೃವಸರ್ಜಾಗೂ ಸ್ಪೀಡ್​ ಲವ್​..!

  bharjari song shooting in slovenia

  ಅಜ್ಜಿ ಹೇಳಿದ ಕತೆಯಲ್ಲಿ ಇದ್ದ ಏಳೂಕೋಟೆಯ ರಾಜಾ ಇವನು, ಸಪ್ತ ಸಾಗರ ದಾಟಿ ಬಂದ ಕಿನ್ನರ ಕಿಂಪುರುಷನು ಹಾಡು ಶುರುವಾಗೋದು ಹೀಗೆ. ಇದು ಭರ್ಜರಿ ಚಿತ್ರದ ಹಾಡು. ಹಾಡಿಗೆ ಹೆಜ್ಜೆ ಹಾಕಿರುವುದು ನಟ ಧೃವ ಸರ್ಜಾ ಮತ್ತು ಹರಿಪ್ರಿಯ. ಸ್ಲೊವೇನಿಯಾದ ಸುಂದಾರತಿಸುಂದರ ಜಾಗಗಳಲ್ಲಿ ಹಾಡಿನ ಶೂಟಿಂಗ್ ಆಗಿದೆ.

  ದೃವ ಸರ್ಜಾ ಫ್ರೆಂಚ್​ ಹೀರೋನಂತೆ ಕಂಡರೆ, ಹರಿಪ್ರಿಯ ಫ್ರೆಂಚ್ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. 

  ಸ್ವಾರ್ಥವೇ ತಿಳಿಯದ ಮಗು ಇವನು, ಪ್ರತಿ ತಾಯಿ ಬಯಸುವ ಮನೆ ಮಗನು ಎನ್ನುವ ಸಾಲುಗಳಲ್ಲಿ ನಾಯಕನ ವ್ಯಕ್ತಿತ್ವವನ್ನು ಬಣ್ಣಿಸುವ ಪ್ರಯತ್ನವಿದೆ. ನೃತ್ಯ ನಿರ್ದೇಶಕ ಹರ್ಷ ಇಬ್ಬರಿಗೂ ಹೆಜ್ಜೆ ಹಾಕಿಸಿದ್ದಾರೆ. 

  Related Articles :-

  Bharjari Team Shooting Songs In Slovenia

  Bharjari Trailer Released On Dhruva Sarja's Birthday

  Haripriya Joins Bharjari Team

  Bharjari Launch on June 12th

  Bharjari Music Starts From May 10