ಌಕ್ಷನ್ಸ್ ಭರ್ಜರಿ. ಧ್ರುವ ಫಿಟ್ನೆಸ್ ಬಹದ್ದೂರ್ ಆಗಿದೆ. ಒಂದೊಂದು ಹೆಜ್ಜೆ, ಸೀಕ್ವೆನ್ಸ್ನಲ್ಲೂ ಪೊಗರು ಎದ್ದು ಕಾಣುತ್ತಿದೆ. ಇವನು ಅರ್ಜುನ್. ಯೆಸ್, ಮಾರ್ಟಿನ್ ಚಿತ್ರದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಹೆಸರು ಚಿತ್ರದಲ್ಲಿ ಮತ್ತೊಮ್ಮೆ ಅರ್ಜುನ್. ಅದ್ಧೂರಿಯಲ್ಲಿ ಅರ್ಜುನ್ ಹೆಸರಲ್ಲೆ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್, ಮತ್ತೊಮ್ಮೆ ಅರ್ಜುನ್ ಹೆಸರನ್ನೇ ಚಿತ್ರದ ಹೀರೋಗೆ ಇಟ್ಟಿದ್ದಾರೆ.
ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇರುತ್ತೆ. ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ. ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ನಲ್ಲಿ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?
ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ದೇಶಪ್ರೇಮದ ಕಥೆ ಇದ್ಯಾ? ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ರಿಲೀಸ್ ಆದ ಮೇಲೆ. ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರೋದು ನಿರ್ದೇಶಕ ಎ. ಪಿ. ಅರ್ಜುನ್ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ಸಂಗೀತ ಮಣಿ ಶರ್ಮಾ ಅವರದ್ದು.
ಚಿತ್ರದ ಟೀಸರ್ನ್ನು ವೀರೇಶ್ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ದುಡ್ಡು ಕೊಟ್ಟು ಸಿನಿಮಾ ಟೀಸರ್ ನೋಡಿದ್ದಾರೆ. ಆ ಹಣ ಗೋಶಾಲೆಗೆ ಹೋಗಲಿದೆ ಎನ್ನುವುದು ಸಾರ್ಥಕದ ಖುಷಿ.ಎಲ್ಲ ಭಾಷೆಗಳಲ್ಲೂ ಟ್ರೆಂಡಿಂಗ್ನಲ್ಲಿರುವ ಮಾರ್ಟಿನ್ ಟೀಸರ್, ಕನ್ನಡದಲ್ಲಿ ನಂ.1 ಆಗಿದ್ದರೆ, ಹಿಂದಿಯಲ್ಲಿ ಟಾಪ್ 10ಗೆ ಸ್ಥಾನ ಪಡೆದಿದೆ.
ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಇದೆ.