` dhruva sarja, - chitraloka.com | Kannada Movie News, Reviews | Image

dhruva sarja,

  • ಚಾಮುಂಡಿ ತೇರು ಎಳೆದಿದ್ದೇ ಧ್ರುವ-ಪ್ರೇಮ್ ಚಿತ್ರಕ್ಕೆ ಫಸ್ಟ್ ಸೀನ್..!

    ಚಾಮುಂಡಿ ತೇರು ಎಳೆದಿದ್ದೇ ಧ್ರುವ-ಪ್ರೇಮ್ ಚಿತ್ರಕ್ಕೆ ಫಸ್ಟ್ ಸೀನ್..!

    ಜೋಗಿ ಪ್ರೇಮ್ ಮತ್ತು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಚಿತ್ರ ನಡೆಯುತ್ತಿರುವಾಗಲೇ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಧ್ರುವ. ಪ್ರೇಮ್ ಕೂಡಾ ಅಷ್ಟೆ, ಏಕ್ ಲವ್ ಯಾ ರಿಲೀಸ್ ಆಗುವುದಕ್ಕೂ ಮೊದಲೇ ಈ ಚಿತ್ರ ಒಪ್ಪಿಕೊಂಡಿದ್ದರು. ಏಕ್ ಲವ್ ಯಾ ರಿಲೀಸ್ ಆದ ಬೆನ್ನಲ್ಲೇ ಹೊಸ ಸಿನಿಮಾ ಶುರು ಕೂಡಾ ಮಾಡಿದ್ದಾರೆ. ಅವರದ್ದೂ ದಾಖಲೆಯೇ. ಡಾ.ರಾಜ್ ಹುಟ್ಟುಹಬ್ಬದ ದಿನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

    ಚಾಮುಂಡೇಶ್ವರಿ ತೇರು ಎಳೆಯುವ ದೃಶ್ಯವನ್ನು ಚಿತ್ರೀಕರಿಸೋದ್ರೊಂದಿಗೆ ಸಿನಿಮಾ ಶುರು ಮಾಡಿದ್ದಾರೆ ಪ್ರೇಮ್. ಮುಹೂರ್ತದಲ್ಲಿ ನಿರ್ಮಾಪಕ ನಿಶಾ ವೆಂಕಟ್ ಕೊಣಂಕಿ, ರಕ್ಷಿತಾ ಪ್ರೇಮ್ ಹಾಜರಿದ್ದರು.

    ಇದು 70ರ ದಶಕದ ಅಂಡರ್‍ವಲ್ರ್ಡ್ ಸಿನಿಮಾ. ಭಿನ್ನವಾದ ಲುಕ್ ಇದೆ. ಕಥೆಯೂ ಚೆನ್ನಾಗಿದೆ. ರೌಡಿಸಂ ಜೊತೆಗೆ ಸೆಂಟಿಮೆಂಟ್ ಕೂಡಾ ಇದೆ. ಒಳ್ಳೆಯ ಹಾಡುಗಳೂ ಇರುತ್ತವೆ. ಖಂಡಿತಾ ಈ ಸಿನಿಮಾ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯಲಿದೆ ಎಂದಿದ್ದಾರೆ ಧ್ರುವಾ.

  • ಚಿರು ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

    ಚಿರು ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

    ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೂ ಮೊದಲು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಕೆಲವು ಚಿತ್ರಗಳು ಕಂಪ್ಲೀಟ್ ಆಗಿದ್ದವು. ಇನ್ನೂ ಕೆಲವು ಶೂಟಿಂಗ್ ಆಗಿದ್ದವು. ಪೋಸ್ಟ್ ಪ್ರೊಡಕ್ಷನ್ ಆಗಿರಲಿಲ್ಲ. ಅಂತಹ ಚಿತ್ರಗಳಲ್ಲಿ ಒಂದು ರಾಜಮಾರ್ತಾಂಡ. ಆ ಚಿತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ ಧ್ರುವ ಸರ್ಜಾ.

    ಚಿರು ಅವರ ಯಾವುದೇ ಚಿತ್ರಗಳಿಗೆ ಬೇಕಿರುವ ಎಲ್ಲ ಸಪೋರ್ಟ್ ಮಾಡುವುದಾಗಿ ಧ್ರುವ ಹೇಳಿದ್ದರು. ಅದರಂತೆಯೇ ರಾಜಮಾರ್ತಾಂಡ ಡಬ್ಬಿಂಗ್ ಮುಗಿಸಿದ್ದಾರೆ ಧ್ರುವ. ಸಮಾಧಾನ.. ಸಮಾಧಾನ.. ಅಕ್ಕ ತಂಗಿಯರೇ.. ಅಣ್ಣ ತಮ್ಮಂದಿರೇ.. ಬಂಧು ಬಾಂಧವರೇ.. ನನ್ನ ನಂಬಿ ವೋಟ್ ಹಾಕಿ.. ನನ್ನ ಕೊನೆ ಉಸಿರು ಇರುವವರೆಗೆ ನಿಮ್ಮಗಳಿಗೋಸ್ಕರವೇ ಹೋರಾಡ್ತೀನಿ.. ಅಂತಾ ಧ್ರುವ ಹೇಳೋ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಅದು ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹೇಳೋ ಡೈಲಾಗ್.

    ಬಹುತೇಕ ಎಲ್ಲ ಕೆಲಸವನ್ನೂ ಕಂಪ್ಲೀಟ್ ಮಾಡಿರುವ ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಜೂನ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಚಿರು, ಧ್ರುವಾ ಅಮ್ಮನ ದಿನದ ಸ್ಪೆಷಲ್ ವಿಡಿಯೋ

    mothers days special

    ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

    ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.

  • ಜನವರಿ 29ಕ್ಕೆ ಪೊಗರು

    ಜನವರಿ 29ಕ್ಕೆ ಪೊಗರು

    ಕನ್ನಡದ ಮೊದಲ ಸ್ಟಾರ್ ಸಿನಿಮಾ ರಿಲೀಸ್ ಆಗೋಕೆ ಮುಹೂರ್ತ ಕೂಡಿ ಬಂದಂತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು, 2020ರಲ್ಲಿ ಕಂಪ್ಲೀಟ್ ಸೆನ್ಸೇಷನ್ ಸೃಷ್ಟಿಸಿತ್ತು. ಈಗ ಸಿನಿಮಾ ರಿಲೀಸ್ ಆಗೋಕೆ ಡೇಟ್ ಫಿಕ್ಸ್ ಮಾಡಿದೆ. ಜನವರಿ 29ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

    ನಂದಕಿಶೋರ್ ನಿರ್ದೇಶಿಸಿರುವ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗಿನಲ್ಲೂ ಬರುತ್ತಿದೆ. ಹಾಲಿವುಡ್ ನಟರೂ ನಟಿಸಿರುವ ಚಿತ್ರವಿದು. ಸಹಜವಾಗಿಯೇ ಹೆವಿ ನಿರೀಕ್ಷೆ ಇದೆ.

    ಜನವರಿ 29ರ ಹೊತ್ತಿಗೆ ಕರ್ನಾಟಕದಲ್ಲಿ ಪ್ರೇಕ್ಷಕರ ಭರ್ತಿಗೆ ಇರುವ ನಿರ್ಬಂಧ ಸಡಿಲಿಕೆಯಾಗುವ ನಿರೀಕ್ಷೆಯೂ ಇದೆ.

  • ಜೆಂಟಲ್‍ಮನ್ ಡೈನಮಿಕ್ ಪ್ರಿನ್ಸ್ ಆಟಕ್ಕೆ ಆ್ಯಕ್ಷನ್ ಪ್ರಿನ್ಸ್ ಪವರ್

    Dhruva Sarja To Release The Songs Of prajwal Devaraj's 'Gentleman'

    ಇವರು ಡೈನಮಿಕ್ ಪ್ರಿನ್ಸ್. ಅರ್ಥಾತ್ ಪ್ರಜ್ವಲ್‌ ದೇವರಾಜ್. ಅವರು ಆ್ಯಕ್ಷನ್  ಪ್ರಿನ್ಸ್. ಅಂದ್ರೆ ಧ್ರುವ ಸರ್ಜಾ. ಇವರಿಬ್ಬರೂ ಒಟ್ಟಿಗೇ ಌಕ್ಟ್ ಮಾಡುತ್ತಿದ್ದಾರಾ ಎಂದೆಲ್ಲ ಕೇಳಬೇಡಿ. ಆ ಶುಭ ಘಳಿಗೆ ಇನ್ನೂ ಬಂದಿಲ್ಲ. ಆದರೆ, ಡಿಫರೆಂಟ್ ಕಾನ್ಸೆಪ್ಟ್‌ ಮೂಲಕವೇ ಟ್ರೆಂಡ್ ಸೃಷ್ಟಿಸಿರುವ ಜಂಟಲ್‌ಮನ್‌ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಮುಖ್ಯ ಅತಿಥಿ.

    ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ಆನಂದ್‌ ಆಡಿಯೋ ಯೂ ಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ರಿಲೀಸ್ ಆಗುತ್ತಿದೆ. ಅದೇ ದಿನ 12 ಗಂಟೆಗೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಟ್ರೇಲರ್‌ ಬಿಡುಗಡೆಯೂ ಇದೆ. ಆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಚೀಫ್ ಗೆಸ್ಟ್.

    ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುವ ನಾಯಕನಾಗಿ ನಟಿಸಿದ್ದಾರೆ ಪ್ರಜ್ವಲ್‌. ಅಂದರೆ ದಿನಕ್ಕೆ 18 ಗಂಟೆ ನಿದ್ರೆ, 6 ಗಂಟೆ ಮಾತ್ರ ಎಚ್ಚರ ಇರುವ ನಾಯಕ. ಆ 6 ಗಂಟೆಗಳಲ್ಲಿ ಹೀರೋ ಲವ್ ಮಾಡಬೇಕು, ಫೈಟ್ ಮಾಡಬೇಕು. ಅಕಸ್ಮಾತ್ ಆಗಿ ಸಿಲುಕಿಕೊಳ್ಳೋ ಸಮಸ್ಯೆಯಿಂದ ಹೊರಬರಬೇಕು. ಜಾಗ ಸಿಕ್ಕರೆ ಗೊರಕೆ ಹೊಡೆಯೋ ಹೀರೋ ಅದರಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಚಿತ್ರದ ಕಥೆ.

    ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರಕ್ಕೆ ನಿರ್ಮಾಪಕ. ಜಡೇಶ್‌ ಕುಮಾರ್‌ ನಿರ್ದೇಶಕ. ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ಹೀರೋಯಿನ್. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿತ್ರದಲ್ಲಿ ಪೊಲೀಸ್ ಆಫೀಸರ್. ಉಳಿದ ಡೀಟೈಲ್ಸ್.. ಏನಿದ್ದರೂ ಜನವರಿ 6ಕ್ಕೆ ಕೊಡ್ತಾರೆ.

  • ಟೀಚರ್ಸ್ ಡೇ ರಚಿತಾ, ಧೃವಾಗೆ ಸಿಕ್ಕಾಪಟ್ಟೆ ಸ್ಪೆಷಲ್

    rachitha ram, dhruva sarja reveals secret

    ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ  ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.

    ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.

    ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.

    ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. 

  • ಡಿ-ಬಾಸ್ ಅಂದ್ರೆ ದರ್ಶನ್ ಮಾತ್ರ, ನಾನಲ್ಲ - ಧ್ರುವ ಸರ್ಜಾ

    dhruva sarja reacts on d boss compliments

    ಡಿ-ಬಾಸ್ ಅನ್ನೊದು ಚಾಲೆಂಜಿಂಗ್ ಸ್ಟಾರ್‍ಗೆ ಅಭಿಮಾನಿಗಳು ಪ್ರೀತಿಯಿಂದ ಕರೆಯೋ ಹೆಸರು. ಈಗ ಅದನ್ನು ಧ್ರುವ ಸರ್ಜಾ ಕೂಡಾ ಹೇಳಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣವಾಗಿದ್ದು, ಅವರ ಹುಟ್ಟುಹಬ್ಬ. ಇತ್ತೀಚೆಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾಗೆ, ಅಭಿಮಾನಿಗಳು ಕೇಕ್ ತಂದಿದ್ದರು. ಕೆಲವು ಅಭಿಮಾನಿಗಳು ಕೇಕ್ ಮೇಲೆ ಹ್ಯಾಪಿ ಬರ್ತ್ ಡೇ ಡಿ ಬಾಸ್ ಎಂದು ಬರೆದಿದ್ದರು. ದರ್ಶನ್ ಮತ್ತು ಧ್ರುವ ಎರಡೂ ಹೆಸರಿನ ಆರಂಭದ ಅಕ್ಷರ ಡಿ ಆಗಿರುವುದು ಕೂಡಾ ಇದಕ್ಕೆ ಕಾರಣ. ಇದಕ್ಕೆ ಧ್ರುವ ಸರ್ಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಡಿ ಬಾಸ್ ಅಂದ್ರೆ ದರ್ಶನ್ ಒಬ್ಬರೇ. ನನಗೆ ಯಾವತ್ತಿಗೂ ಆಂಜನೇಯನೇ ಬಾಸ್. ದರ್ಶನ್ ಹಿರಿಯ ನಟ. ನಿಮ್ಮಂತೆಯೇ ನಾನು ಕೂಡಾ ಅವರ ಅಭಿಮಾನಿ. ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಾನಿನ್ನೂ ಸಾಧಿಸುವುದು ಬಹಳಷ್ಟಿದೆ.  ದರ್ಶನ್, ಸದಾ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ ಧ್ರುವ ಸರ್ಜಾ.

    ಇದೇ ವೇಳೆ ಮುಂದಿನ ವರ್ಷ ಮದುವೆಯಾಗುವ ಸುಳಿವನ್ನೂ ಕೊಟ್ಟಿದ್ದಾರೆ ಧ್ರುವ. ಲವ್ ಮ್ಯಾರೇಜ್ ಆಗ್ತಾರಂತೆ. ಆದ್ರೆ, ಹುಡುಗಿಯೇ ಸಿಕ್ಕಿಲ್ವಂತೆ. ಇನ್ನೊಂದ್ ವರ್ಷದಲ್ಲಿ ಹುಡುಗಿ ಹುಡುಕಿ ಲವ್ ಮಾಡಿ ಮದ್ದೆ ಆಗ್ತಾರಂತೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್.

  • ಡಿ.24ಕ್ಕೆ ಪೊಗರು ದರ್ಶನ

    pogaru likely to release on dec 24th

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ ನಂದ ಕಿಶೋರ್ ನಿರ್ದೇಶನದ ಸಿನಿಮಾ ಪೊಗರು. ಒನ್ಸ್ ಎಗೇಯ್ನ್ ಧ್ರುವ ಅವರ ಹಿಂದಿನ ಸಿನಿಮಾಗಳಂತೆಯೇ ಸುದೀರ್ಘ ಸಮಯ ತೆಗೆದುಕೊಂಡ ಚಿತ್ರ. ಚಿತ್ರಕ್ಕೆ ಇನ್ನೂ 15 ದಿನಗಳ ಶೂಟಿಂಗ್ ಬಾಕಿಯಿದೆಯಂತೆ. ಆದರೆ ಎಲ್ಲವೂ ಪಕ್ಕಾ ಪ್ಲಾನ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಜೊತೆ ಜೊತೆಯಾಗಿ ನಡೆಯುತ್ತಿವೆ.

    ಎಲ್ಲವೂ ಅಂದುಕೊಂಡಂತೆ ಆಗಿಬಿಟ್ಟರೆ, ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದಿದ್ದಾರೆ ನಂದಕಿಶೋರ್.

    ಇಷ್ಟಕ್ಕೂ ಚಿತ್ರದ ಕಥೆಯೇನು..? ಚಿತ್ರದಲ್ಲಿ ನಾಯಕ ಒರಟನೆಂದರೆ ಒರಟ. ಮಹಾಒರಟ. ರಶ್ಮಿಕಾ ಮಂದಣ್ಣ ಟೀಚರ್. ರಾಘವೇಂದ್ರ ರಾಜ್‍ಕುಮಾರ್, ಡಾಲಿ ಧನಂಜಯ್ ಕೂಡಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲೊಂದು ತಾಯಿ-ಮಗನ ಸೆಂಟಿಮೆಂಟ್ ಕಥೆಯಿದೆ ಎಂದು ಮಾಹಿತಿ ಕೊಟ್ಟಿದ್ದಾರೆ ನಂದಕಿಶೋರ್.

  • ತಮಿಳಿನ `ಸೆಮ್ಮ ತಿಮಿರು'ನಲ್ಲಿ ಧ್ರುವ ಸರ್ಜಾ

    ತಮಿಳಿನ `ಸೆಮ್ಮ ತಿಮಿರು'ನಲ್ಲಿ ಧ್ರುವ ಸರ್ಜಾ

    ಕನ್‍ಫ್ಯೂಸ್ ಏನೂ ಆಗಬೇಡಿ. ಧ್ರುವ ಸರ್ಜಾ ತಮಿಳು ಚಿತ್ರವನ್ನೇನು ಒಪ್ಪಿಕೊಂಡಿಲ್ಲ. ಆದರೆ ತಮಿಳು ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಚಿತ್ರದ ಹೆಸರು ಸೆಮ್ಮ ತಿಮಿರು. ಕನ್ನಡದ ಪೊಗರು ಚಿತ್ರ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ತಮಿಳಿನಲ್ಲಿ ಸೆಮ್ಮ ತಿಮಿರು ಅನ್ನೋ ಹೆಸರಿಡಲಾಗಿದೆ.

    ಬಹುಶಃ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಪೊಗರು ರಿಲೀಸ್ ಆಗಬಹುದು. ಒಟ್ಟಿಗೇ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್‍ನಲ್ಲಿದೆ ಪೊಗರು ಟೀಂ. ಬಿ.ಕೆ. ಗಂಗಾಧರ್ ನಿರ್ಮಾಣದ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ಧ್ರುವ ಸರ್ಜಾ ಎದುರು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಂದನ್ ಶೆಟ್ಟಿ ನಿರ್ದೇಶಿಸಿರುವ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ.

  • ತುಂಟ ತುಟಿಗಳ ಆಟೋಗ್ರಾಫ್.. ಌಕ್ಷನ್ ಪ್ರಿನ್ಸ್ ವಾಯ್ಸ್..!

    dhruva sarja lends his voice to ap arjun's kiss movie

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ ಆಗಿದ್ದು ಅದ್ದೂರಿ ಸಿನಿಮಾದಿಂದ. ಆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್. ಅದಾದ ಮೇಲೆ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ, ಈಗ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ತಮ್ಮ ಮೊದಲ ಚಿತ್ರದ ನಿರ್ದೇಶಕರ ಹೊಸ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ.

    ವಿರಾಟ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಿಸ್ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕ ಹಾಗು ನಿರ್ಮಾಪಕ. ಆ ಚಿತ್ರಕ್ಕೆ ತಮ್ಮ ಪವರ್ ಫುಲ್  ವಾಯ್ಸ್ ಕೊಟ್ಟಿದ್ದಾರೆ ಧ್ರುವ.  ಅಲ್ಲಿಗೆ ಕಿಸ್ ಚಿತ್ರಕ್ಕೆ ಇನ್ನೊಂದು ಪವರ್ ಸಿಕ್ಕಂತಾಗಿದೆ. 

    ಈ ಮೊದಲು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್, ಬೆಟ್ಟೇಗೌಡ ವರ್ಸಸ್‌ ಚಿಕ್ಕಬೋರಮ್ಮ ಅನ್ನೋ ಹಾಡು ಹಾಡಿದ್ದರು. ಈಗ ಌಕ್ಷನ್ ಪ್ರಿನ್ಸ್ ಧ್ರುವಾ ಧ್ವನಿಯ ಪವರ್ ಸಿಕ್ಕಿದೆ. ಅಂದಹಾಗೆ ಕಿಸ್ ಚಿತ್ರಕ್ಕೆ 

    ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಟ್ಯಾಗ್ಲೈನ್ ಇದೆ.

  • ತೆಲುಗಿನಲ್ಲೂ ಖರಾಬು ದಾಖಲೆ

    pogaru karabuu song image

    ಧ್ರುವ ಸರ್ಜಾ ಅಭಿನಯದ ಪೊಗರು ತೆಲುಗಿನಲ್ಲೂ ಬಂದಾಗಿದೆ. ಕನ್ನಡದಲ್ಲಿ ಈಗಾಗಲೇ 10 ಕೋಟಿ ವೀಕ್ಷಣೆ ಪಡೆದಿರುವ ಹಾಡು, ತೆಲುಗಿನಲ್ಲೂ ರೋಮಾಂಚನ ಸೃಷ್ಟಿಸಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ.

    ಚಂದನ್ ಶೆಟ್ಟಿ ರಚಿಸಿ, ಸಂಗೀತ ನೀಡಿರುವ ಹಾಡು ಖರಾಬು ಸಾಂಗ್. ಪಡ್ಡೆ ಹುಡುಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿರುವ ಹಾಡು, ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅವರಿಂದ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ. ಧ್ರುವ ಸರ್ಜಾಗೆ ತೆಲುಗಿನಲ್ಲಿದು ಮೊದಲ ಪ್ರಯತ್ನ.

    you_tube_chitraloka1.gif

    ತೆಲುಗಿನಲ್ಲಿ ಅಲಾ ವೈಕುಂಠಪುರಂಲೋ ಚಿತ್ರದ ರಾಮುಲೋ.. ರಾಮುಲಾ ಹಾಡಿದ್ದ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.

     

  • ತೆಲುಗುಗೆ ಪೊಗರಿನ ಖರಾಬ್ ಸಾಂಗ್

    pogaru image

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ರಿಲೀಸ್`ಗೆ ರೆಡಿ. ಸದ್ಯಕ್ಕೆ ಈ ಚಿತ್ರದ ಖರಾಬು ಸಾಂಗ್ ಸಿಕ್ಕಾಪಟ್ಟೆ ಹವಾ ಎಬ್ಬಿಸಿಬಿಟ್ಟಿದೆ. ಕನ್ನಡದಲ್ಲಿ ಈಗಾಗಲೇ 9 ಕೋಟಿಗೂ ಹೆಚ್ಚು ಜನ ನೋಡಿರೋ ಹಾಡಿದು. ಈಗ ಈ ಹಾಡಿನ ತೆಲುಗು ವರ್ಷನ್ ತೆಲುಗಿನಲ್ಲಿ ಆಗಸ್ಟ್ 6ರಂದು ರಿಲೀಸ್ ಆಗುತ್ತಿದೆ. ತೆಲುಗಿಗೆ ಧ್ರುವ ಸರ್ಜಾ ಹೊಸಬರಾದರೂ, ರಶ್ಮಿಕಾ ಮಂದಣ್ಣ, ಟಾಲಿವುಡ್ ಪ್ರೇಕ್ಷಕರ ಹಾಟ್ ಫೇವರಿಟ್. ತೆಲುಗಿನಲ್ಲಿ ಸತತ ಹಿಟ್ ಕೊಟ್ಟಿರೋ ರಶ್ಮಿಕಾ ಇರೋದ್ರಿಂದ ಈ ಹಾಡು ತೆಲುಗಿನಲ್ಲೂ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ.

    you_tube_chitraloka1.gif

    ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಬಿ.ಕೆ. ಗಂಗಾಧರ್ ನಿರ್ಮಾಪಕ. ಧ್ರುವ ಸರ್ಜಾ ಜೊತೆಗೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಡಾಲಿ ಧನಂಜಯ್, ರವಿಶಂಕರ್, ಮಯೂರಿ, ಸಾಧುಕೋಕಿಲ.. ಮೊದಲಾದವರು ನಟಿಸಿದ್ದಾರೆ. ಚಂದನ್ ಶೆಟ್ಟಿ, ಸ್ವತಃ ಸಂಗೀತ ನೀಡಿ, ಬರೆದು ಹಾಡಿರುವ ಖರಾಬ್ ಸಾಂಗ್ ತೆಲುಗಿನಲ್ಲೂ ಮೋಡಿ ಮಾಡುವ ನಿರೀಕ್ಷೆ ಇದೆ.

  • ದುಃಖದಲ್ಲಿದ್ದ ಅಭಿಮಾನಿಯ ಕುಟುಂಬಕ್ಕೆ ಹೆಗಲು ಕೊಟ್ಟ ಧ್ರುವ ಸರ್ಜಾ

    ದುಃಖದಲ್ಲಿದ್ದ ಅಭಿಮಾನಿಯ ಕುಟುಂಬಕ್ಕೆ ಹೆಗಲು ಕೊಟ್ಟ ಧ್ರುವ ಸರ್ಜಾ

    ಧ್ರುವ ಸರ್ಜಾ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ಇತ್ತೀಚೆಗೆ ಧ್ರುವ ಸರ್ಜಾ ಅವರ ಅಭಿಮಾನಿ ಪೃಥ್ವಿರಾಜ್ ಎಂಬುವವರು ಅಪಘಾತಕ್ಕೀಡಾಗಿದ್ದರು. ಬ್ರೇನ್ ಡೆಡ್ ಸ್ಥಿತಿ ತಲುಪಿದ್ದರು. ಕುಟುಂಬಸ್ಥರು ದೇಹದಾನ ಮಾಡಲು ನಿರ್ಧರಿಸಿದ್ದರು. ಇದೆಲ್ಲದರ ಜೊತೆಗೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಪ್ರತಿ ಭಾನುವಾರ ಧ್ರುವ ಸರ್ಜಾರನ್ನು ನೋಡಲು ಮನೆಗೇ ಬರುತ್ತಿದ್ದ ಅಭಿಮಾನಿ ಪೃಥ್ವಿರಾಜ್.

    ಆ ಹಿನ್ನೆಲೆಯಲ್ಲಿ ನೆಚ್ಚಿನ ಅಭಿಮಾನಿಯನ್ನು ನೋಡಲು ಧ್ರುವ ಸರ್ಜಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪೃಥ್ವಿ ಅವರ ಪೋಷಕರನ್ನು ಭೇಟಿ ಮಾಡಿರುವ ಧ್ರುವ ಸರ್ಜಾ, ಅವರಿಗೆ ಧೈರ್ಯ ತುಂಬಿದ್ದಾರೆ. 'ನಾನು ಪ್ರತಿಯೊಬ್ಬರಲ್ಲೂ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಿ, ವಾಹನ ಚಾಲನೆ ವೇಳೆ ಜಾಗರೂಕರಾಗಿರಿ. ನಮ್ಮ ಅಜ್ಜಿಯನ್ನು ಆಸ್ಪತ್ರೆಯಲ್ಲಿ ನೋಡಿದ ಮೇಲೆ, ಮತ್ತೆ ಆಸ್ಪತ್ರೆಗೆ ಹೋಗುವುದು ಬೇಡ ಎಂದುಕೊಂಡಿದ್ದೆ. ಆದರೆ ಪೃಥ್ವಿಗಾಗಿ ಬರಬೇಕಾಯ್ತು. ಆ ಪೋಷಕರನ್ನು ನೋಡಿ, ಏನು ಹೇಳಬೇಕೋ ಗೊತ್ತಾಗುತ್ತಿಲ್ಲ..' ಎಂದು ಭಾವುಕರಾಗಿದ್ದಾರೆ ಧ್ರುವ ಸರ್ಜಾ.

    ಮಗನ ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದ ಪೃಥ್ವಿರಾಜ್ ಅವರ ತಂದೆಯನ್ನು ಗಮನಿಸಿದ ಧ್ರುವ ಸರ್ಜಾ ತಕ್ಷಣ 5 ಲಕ್ಷ ರೂ. ನೆರವು ನೀಡಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು ನೀಡುವ ಭರವಸೆ ನೀಡಿದ್ದಾರೆ.

  • ದುಬಾರಿ ಅಲ್ಲ. ಧ್ರುವ ಸರ್ಜಾರ ಹೊಸ ಸಿನಿಮಾ ಯಾವುದು..?

    ದುಬಾರಿ ಅಲ್ಲ. ಧ್ರುವ ಸರ್ಜಾರ ಹೊಸ ಸಿನಿಮಾ ಯಾವುದು..?

    ಪೊಗರು ಇನ್ನೂ ರಿಲೀಸ್ ಆಗುವ ಮೊದಲೇ ಸೆಟ್ಟೇರಿದ್ದ ಸಿನಿಮಾ ಪೊಗರು. ಧ್ರುವ ಸರ್ಜಾ, ಶ್ರೀಲೀಲಾ ಮತ್ತು ನಂದ ಕಿಶೋರ್ ಕಾಂಬಿನೇಷನ್‍ನಲ್ಲಿ ಶುರುವಾದ ಚಿತ್ರಕ್ಕೆ ಉದಯ್ ಮೆಹ್ತಾ ಪ್ರೊಡ್ಯೂಸರ್. ಆದರೆ ಈಗ ದುಬಾರಿಗೆ ಬ್ರೇಕ್ ಬಿದ್ದಿದೆ. ಯಾಕೆ..? ಏನು..? ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರೆಲ್ಲ ಫುಲ್ ಸೈಲೆಂಟ್. ಸದ್ಯಕ್ಕೆ ಧ್ರುವ ಸರ್ಜಾ ಹೊಸ ಹೊಸ ಸ್ಕ್ರಿಪ್ಟ್ ನೋಡುವಲ್ಲಿ ಬ್ಯುಸಿಯಾಗಿದ್ದಾರೆ.

    ಪ್ರೊಡ್ಯೂಸರ್ ಬದಲಾಗಿಲ್ಲ. ಅದೇ ಉದಯ್ ಕೆ.ಮೆಹ್ತಾ. ಆದರೆ ನಿರ್ದೇಶಕರು ಬದಲಾಗಲಿದ್ದಾರೆ. ತಂತ್ರಜ್ಞರ ಟೀಂ ಎಲ್ಲ ಫೈನಲ್ ಆಗೋದು ಆನಂತರವೇ.

    ಸದ್ಯಕ್ಕೆ ಧ್ರುವ ಸರ್ಜಾಗೆ ಕಥೆ ಹೇಳುತ್ತಿರುವವರಲ್ಲಿ ಜಗ್ಗುದಾದಾ ಖ್ಯಾತಿಯ ರಾಘವೇಂದ್ರ ಹೆಗಡೆ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಎ.ಹರ್ಷ, ಎ.ಪಿ.ಅರ್ಜುನ್ ಅವರ ಬಳಿಯಿರುವ ಸ್ಕ್ರಿಪ್ಟ್‍ಗಳನ್ನೂ ನೋಡುತ್ತಿದ್ದಾರೆ ಧ್ರುವ ಸರ್ಜಾ. ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬರಲಿದೆ.

  • ಧ್ರುವ ಲವ್ ಸ್ಟೋರಿ ಅರ್ಜುನ್ ಸರ್ಜಾಗೆ ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ..

    dhruva sarja's love story

    ಧ್ರುವ ಸರ್ಜಾ ಅವರ ಪಾಲಿಗೆ ಸರ್ವಸ್ವವೂ ಆಗಿರುವುದು ಅರ್ಜುನ್ ಸರ್ಜಾ. ಮಾವನನ್ನು ತಂದೆಯಂತೆಯೇ ಗೌರವಿಸುವ ಅರ್ಜುನ್ ಸರ್ಜಾ, ಲವ್ ವಿಷಯದಲ್ಲಿ ಮಾತ್ರ ಡಿಫರೆಂಟು. ಏಕಂದ್ರೆ, ಧ್ರುವ ಸರ್ಜಾ, ಪ್ರೇರಣಾ ಲವ್ ಸ್ಟೋರಿ, ಅರ್ಜುನ್ ಸರ್ಜಾಗೆ ಮೊದಲು ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ. ನಿಶ್ಚಿತಾರ್ಥದದ ವೇಳೆ ಸ್ವತಃ ಅವರೇ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಥೇಟು ಸಿನಿಮಾ ಸ್ಟೈಲ್‍ನಲ್ಲಿ ಹೋಗಿ ಪ್ರೇರಣಾ ಅವರ ಅಪ್ಪನ ಬಳಿ, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡ್ರಿ ಎಂದು ಕೇಳಿದ್ದ ಧ್ರುವಾ. ಅದಾದ ಮೇಲೇ ನನಗೂಗ ಗೊತ್ತಾಗಿದ್ದು ಎಂದರು ಅರ್ಜುನ್ ಸರ್ಜಾ.

    ಅರ್ಜುನ್ ಸರ್ಜಾ ಹಾಗೆ ಹೇಳುತ್ತಿದ್ದರೆ ಪಕ್ಕದಲ್ಲೇ ಇದ್ದ ಧ್ರುವ, ಪ್ರೇರಣಾ, ಅಣ್ಣ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ... ಹೀಗೆ ಎಲ್ಲರ ಮುಖದಲ್ಲೂ ನಗುವೋ ನಗು.

  • ಧ್ರುವ ವೆಡ್ಸ್ ಪ್ರೇರಣಾ : ಮದುವೆ ಮನೆಯ ಅದ್ಧೂರಿ.. ಭರ್ಜರಿ ಒಂದಾ.. ಎರಡಾ..

    interesting elemets at dhruva prerna's wedding

    ಧ್ರುವ ಸರ್ಜಾ, ಪ್ರೇರಣಾ ಈಗ ಜನುಮದ ಜೋಡಿ. ಅದ್ಧೂರಿಯಾಗಿ ನಡೆದ ಬಹದ್ದೂರ್ ಮದುವೆಯಲ್ಲಿ, ಸಡಗರ, ಸಂಭ್ರಮಗಳು ಭರ್ಜರಿಯಾಗಿಯೇ ಇದ್ದವು. ಇಡೀ ಕಲ್ಯಾಣ ಮಂಟಪವನ್ನು ತಿರುಪತಿ ವೆಂಕಟೇಶ್ವರ ಥೀಂನಲ್ಲಿ ಸಿಂಗರಿಸಲಾಗಿತ್ತು.

    ಶಿವ ಪಾರ್ವತಿ, ಗಣಪತಿ ಮೂರ್ತಿಗಳ ಹಿನ್ನೆಲೆಯಲ್ಲಿ ಮತ್ತೊಂದು ಮಂಟಪವಿತ್ತು. ಒಟ್ಟು ೩ ಮಂಟಪಗಳಿದ್ದವು. ಗೋ ಪೂಜೆಗಾಗಿಯೇ ೫ ಹಸುಗಳನ್ನು ತರಿಸಲಾಗಿತ್ತು. ಬೆಳಗ್ಗೆ ೬.೩೦ಕ್ಕೆ ಗೌರಿ ಪೂಜೆ, ೬.೪೦ಕ್ಕೆ ಕಾಶಿಯಾತ್ರೆ ಶಾಸ್ತç ಮುಗಿದು, ೭.೧೫ಕ್ಕೆ ಮುಹೂರ್ತ ಆಯಿತು. ಶಾಸ್ತçಗಳನ್ನು ನೆರವೇರಿಸಲೆಂದೇ ೧೮ ಪುರೋಹಿತರಿದ್ದು.

    ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಪಂಚೆ, ಶರಟು, ಕೇಸರಿ ಶಲ್ಯ ನೀಡಲಾಗಿತ್ತು.

  • ಧ್ರುವ ಸಂಭಾವಣೆ 6 ಕೋಟಿಯಂತೆ..!

    dhruva's remunaration is 6 crores

    ಧ್ರುವ ಸರ್ಜಾ, ಭರ್ಜರಿ ಸಿನಿಮಾಗೆ 6 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಗಾಂಧಿ ನಗರದಲ್ಲಿ ವೈರಲ್ ಆಯ್ತು. ಸ್ವಾರಸ್ಯಕಾರಿ ವಿಷಯ ಏನಂದ್ರೆ, ಧ್ರುವ ಭರ್ಜರಿ ಸಿನಿಮಾದ ಅದರ ಆರ್ಧದಷ್ಟೂ ಸಂಭಾವನೆ ಪಡೆದಿಲ್ಲ. 

    ಸುದ್ದಿ ವೈರಲ್ ಆದ ಮೇಲೆ, ನೋಡೋಣ, ನನಗೂ ಅಷ್ಟು ಕೊಡ್ತಾರಾ ಅಂತಾ ಕೇಳಿದೆ. ಕೊಟ್ಟೇಬಿಟ್ಟರು ಎಂದು ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಮುಂದೆ ನನ್ನ ಸಂಭಾವನೆಯನ್ನು ಇನ್ನೂ ಜಾಸ್ತಿ ಜಾಸ್ತಿ ಹೆಚ್ಚಿಸಿ ಸುದ್ದಿ ಮಾಡಿ, ನನಗೂ ಒಳ್ಳೆಯದಾಗುತ್ತೆ ಎಂದು ಮಾಧ್ಯಮಗಳನ್ನು ತಮಾಷೆ ಮಾಡಿದ್ದಾರೆ.

    ಇನ್ನು ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ಧ್ರುವ ಸರ್ಜಾ, ಪೊಗರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮುಗಿದಿದೆ. ಅಂತಿಮ ತಿದ್ದುಪಡಿಗಳೂ ಮುಗಿದಿವೆ. ನಮ್ಮ ಕುಟುಂಬದ ಪ್ರೇಮ ಬರಹ ಚಿತ್ರದ ಆಡಿಯೋ ಬಿಡುಗಡೆ ಮುಗಿದ ಮೇಲೆ ಪೊಗರು ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಧ್ರುವ.

    ಅಂದಹಾಗೆ ಪೊಗರು ಕೂಡಾ ಸ್ವಮೇಕ್ ಸಿನಿಮಾ. ಅದಾದ ನಂತರ ಉದಯ್ ಮೆಹ್ತಾ ಅವರ ನಿರ್ಮಾಣದ ಚಿತ್ರಕ್ಕೆ ಒಪ್ಪಿದ್ದೇನೆ. 2 ವರ್ಷಕ್ಕೆ 3 ಸಿನಿಮಾ ಮಾಡುವುದು ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ ಧ್ರುವ.

  • ಧ್ರುವ ಸರ್ಜಾ ಅಭಿಮಾನಿ ದೇವರುಗಳಿಗಾಗಿ..

    feast to fans by dhruva sarja

    ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆದರು. ಸರ್ಜಾ ಫ್ಯಾಮಿಲಿ ಕೂಡಾ ಅದನ್ನೇ ಅನುಸರಿಸುತ್ತಿದೆ. ಹೀಗಾಗಿಯೇ ಧ್ರುವ ಸರ್ಜಾ ಮದುವೆಯಲ್ಲಿ ಅಭಿಮಾನಿಗಳಿಗಾಗಿಯೇ ಸ್ಪೆಷಲ್ ಔತಣಕೂಟ. ಯಾರು ಬೇಕಾದರೂ ಬರಬಹುದು. ಮದುವೆಯಾಗುವ ಅದೇ ಛತ್ರದಲ್ಲಿ ಅಭಿಮಾನಿಗಳಿಗಾಗಿ ಸ್ಪೆಷಲ್ ಭೋಜನದ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 25ರಂದು.

    ಅಭಿಮಾನಿಗಳು ಆ ದಿನ ಧ್ರುವ ಜೊತೆಯಲ್ಲಿರಬಹುದು. ದಂಪತಿ ಸಮೇತರಾಗಿ ಆ ದಿನ ಧ್ರುವ ಅಲ್ಲೇ ಇರುತ್ತಾರೆ ಎಂದು ಧ್ರುವ ಸರ್ಜಾ ಮಾವ ಅರ್ಜುನ್ ಸರ್ಜಾ ಮಾಹಿತಿ ಕೊಟ್ಟಿದ್ದಾರೆ.

    ಅಭಿಮಾನಿಗಳೇ ನನ್ನ ಮದುವೆಯಲ್ಲಿ ವಿಐಪಿ. ಬಂದು ಹೊಟ್ಟೆ ತುಂಬ ಊಟ ಮಾಡಿಕೊಂಡು ಹೃದಯದ ತುಂಬಾ ಹರಸಿ ಹೋಗಿ ಎಂದಿದ್ದಾರೆ ಧ್ರುವ. ಮದುವೆ ಆಹ್ವಾನ ಪತ್ರಿಕೆಯಲ್ಲಿ ಬ್ರಹ್ಮಚಾರಿ ಆಂಜನೇಯ ಏಕೆ ಎಂಬ ಪ್ರಶ್ನೆಗೆ ಅದು ನಮ್ಮ ನಂಬಿಕೆ. ಬಿಡೋಕೆ ಆಗಲ್ಲ ಎಂದಿದ್ದಾರೆ.

  • ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  

    ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  

    ಌಕ್ಷನ್ಸ್ ಭರ್ಜರಿ. ಧ್ರುವ ಫಿಟ್ನೆಸ್ ಬಹದ್ದೂರ್ ಆಗಿದೆ. ಒಂದೊಂದು ಹೆಜ್ಜೆ, ಸೀಕ್ವೆನ್ಸ್ನಲ್ಲೂ ಪೊಗರು ಎದ್ದು ಕಾಣುತ್ತಿದೆ. ಇವನು ಅರ್ಜುನ್. ಯೆಸ್, ಮಾರ್ಟಿನ್ ಚಿತ್ರದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಹೆಸರು ಚಿತ್ರದಲ್ಲಿ ಮತ್ತೊಮ್ಮೆ ಅರ್ಜುನ್. ಅದ್ಧೂರಿಯಲ್ಲಿ ಅರ್ಜುನ್ ಹೆಸರಲ್ಲೆ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್, ಮತ್ತೊಮ್ಮೆ ಅರ್ಜುನ್ ಹೆಸರನ್ನೇ ಚಿತ್ರದ ಹೀರೋಗೆ ಇಟ್ಟಿದ್ದಾರೆ.

    ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ. ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ. ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ನಲ್ಲಿ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?

    ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ದೇಶಪ್ರೇಮದ ಕಥೆ ಇದ್ಯಾ? ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ರಿಲೀಸ್ ಆದ ಮೇಲೆ. ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರೋದು ನಿರ್ದೇಶಕ ಎ. ಪಿ. ಅರ್ಜುನ್ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ಸಂಗೀತ ಮಣಿ ಶರ್ಮಾ ಅವರದ್ದು.

    ಚಿತ್ರದ ಟೀಸರ್ನ್ನು ವೀರೇಶ್ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ದುಡ್ಡು ಕೊಟ್ಟು ಸಿನಿಮಾ ಟೀಸರ್ ನೋಡಿದ್ದಾರೆ. ಆ ಹಣ ಗೋಶಾಲೆಗೆ ಹೋಗಲಿದೆ ಎನ್ನುವುದು ಸಾರ್ಥಕದ ಖುಷಿ.ಎಲ್ಲ ಭಾಷೆಗಳಲ್ಲೂ ಟ್ರೆಂಡಿಂಗ್ನಲ್ಲಿರುವ ಮಾರ್ಟಿನ್ ಟೀಸರ್, ಕನ್ನಡದಲ್ಲಿ ನಂ.1 ಆಗಿದ್ದರೆ, ಹಿಂದಿಯಲ್ಲಿ ಟಾಪ್ 10ಗೆ ಸ್ಥಾನ ಪಡೆದಿದೆ.

    ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಇದೆ.

  • ಧ್ರುವ ಸರ್ಜಾ ಎದುರು ಮಯೂರಿ ಪೊಗರು

    mayuri joins pogaru team

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಮತ್ತೊಂದು ತಾರೆ ಸೇರಿಕೊಂಡಿದೆ. ಮಯೂರಿ ಚಿತ್ರದ ತಾರಾಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಮಯೂರಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಮಯೂರಿಯದ್ದು ಧ್ರುವ ಸರ್ಜಾ ತಂಗಿ ಪಾತ್ರವಂತೆ. ಈಗಾಗಲೇ ಶಿವಣ್ಣನಿಗೆ ತಂಗಿಯಾಗಿ ನಟಿಸಿರುವ ಮಯೂರಿ, ಈಗ ಧ್ರುವ ಸರ್ಜಾಗೂ ತಂಗಿಯಾಗಿದ್ದಾರೆ.

    ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಜಗಪತಿ ಬಾಬು, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಸ್ಟಾರ್ ಸಿನಿಮಾ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೊಗರಿನ ಖದರು ಜೋರಾಗುತ್ತಲೇ ಇದೆ.