` ui movie, - chitraloka.com | Kannada Movie News, Reviews | Image

ui movie,

  • ಉಪ್ಪಿ ಜೊತೆ ಅಜನೀಶ್ ಲೋಕನಾಥ್

    ಉಪ್ಪಿ ಜೊತೆ ಅಜನೀಶ್ ಲೋಕನಾಥ್

    ಅಜನೀಶ್ ಲೋಕನಾಥ್. ಈಗ ಸ್ಯಾಂಡಲ್`ವುಡ್ ಸೆನ್ಸೇಷನ್ ಮ್ಯೂಸಿಕ್ ಡೈರೆಕ್ಟರ್. ರೆಗ್ಯುಲರ್ ಜಾನರ್ ಮ್ಯೂಸಿಕ್`ನ್ನು ಬ್ರೇಕ್ ಮಾಡಿರುವ ಅಜನೀಶ್, ಬೇರೆಯದೇ ರಿದಂ ತೋರಿಸುತ್ತಿದ್ದಾರೆ. ಅತ್ತ ಉಪ್ಪಿ, ರೆಗ್ಯುಲರ್ ಜಾನರ್ ಬಿಟ್ಟೇ ಸಿನಿಮಾ ಮಾಡುವವರು. ಇವರಿಬ್ಬರೂ ಈಗ ಯುಐ ಚಿತ್ರಕ್ಕೆ ಒಂದುಗೂಡಿದ್ದಾರೆ. ಯುಐ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಅಜನೀಶ್ ಲೋಕನಾಥ್.

    ಮನೋಹರ್ ನಾಯ್ಡು ಅವರ ಲಹರಿ ಫಿಲ್ಮ್ಸ್ ಮತ್ತು ಕೆಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ನಿರ್ಮಿಸಿದ UI ನಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.

    ಯುಐ ಚಿತ್ರದ ಶೂಟಿಂಗ್ ಪೈನಲ್ ಹಂತದಲ್ಲಿದ್ದು, ಇನ್ನೊಂದು ತಿಂಗಳು ಚಿತ್ರೀಕರಣವಾದರೆ, ಶೂಟಿಂಗ್ ಮುಗಿದಂತೆಯೇ. ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸವೂ ಹೆಚ್ಚಾಗಿದೆ. ನವೀನ್ ಮನೋಹರ್ ಚಿತ್ರದ ಗ್ರಾಫಿಕ್ಸ್ ಡಿಸೈನ್ ನೋಡಿಕೊಳ್ಳುತ್ತಿದ್ದಾರೆ. ಅದು ಸುಲಭದ್ದಲ್ಲ. 3ಡಿ ಸೆಟ್ಟಿಂಗ್ಸ್ ಬೇಕು. 200ಕ್ಕೂ ಹೆಚ್ಚು ಡಿಎಸ್‍ಎಲ್‍ಆರ್ ಕ್ಯಾಮೆರಾಗಳ ಮೂಲಕವೇ ಗ್ರಾಫಿಕ್ಸ್ ಡಿಸೈನಿಗೆ ತಕ್ಕಂತೆ ಶೂಟಿಂಗ್ ಆಗಬೇಕು. ಹೀಗೆ ಹಲವು ಹೊಸ ಹೊಸ ಪ್ಲಾನ್`ಗಳೊಂದಿಗೆ ಯುಐ ಶೂಟಿಂಗ್ ನಡೆಯುತ್ತಿದೆ.

  • ಕತ್ತಲು.. ಕತ್ತಲು.. ಎಲ್ಲಿ ನೋಡಿದರೂ ಕತ್ತಲು.. ಯುಐ ಆಕಾಶವಾಣಿ ಟೀಸರ್

    ಕತ್ತಲು.. ಕತ್ತಲು.. ಎಲ್ಲಿ ನೋಡಿದರೂ ಕತ್ತಲು.. ಯುಐ ಆಕಾಶವಾಣಿ ಟೀಸರ್

    ಅಭಿಮಾನಿಗಳು ಕೇಳಿದ್ದೇನು. ಟೀಸರ್. ಉಪ್ಪಿ ಕೊಟ್ಟಿದ್ದಾರೆ. ಉಪ್ಪಿಯ ಹಠ ಏನಿತ್ತು. ಸಿನಿಮಾ ರಿಲೀಸ್ ಆಗೋವರೆಗೆ ಏನನ್ನೂ ತೋರಿಸಲ್ಲ ಅನ್ನೋದು. ಉಪ್ಪಿ ಏನನ್ನೂ ತೋರಿಸಿಲ್ಲ. ಉಪೇಂದ್ರ ಬದಲಾಗಿಲ್ಲ. ಬದಲಾಗುವುದೂ ಇಲ್ಲ ಎಂದು ಸಾಬೀತು ಮಾಡಿದ್ದಾರೆ. ಉಪೇಂದ್ರ. ಮತ್ತೊಮ್ಮೆ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಉಪೇಂದ್ರ.. ಮತ್ತೊಮ್ಮೆ ಪ್ರೇಕ್ಷಕರಲ್ಲಿ ಏನನ್ನೂ ತೋರಿಸದೇ ಕುತೂಹಲ ಹೆಚ್ಚಿಸಿದ್ದಾರೆ. ಕತ್ತಲು.. ಬರೀ ಕತ್ತಲಲ್ಲಿ ಕೇವಲ ಧ್ವನಿ ಕೇಳಿಸಿ, ಆಕಾಶವಾಣಿಯಂತ ಟೀಸರ್ ಕೊಟ್ಟಿದ್ದಾರೆ. ರೇಡಿಯೋ ಮಾಡೆಲ್ಲಿನ ಟೀಸರ್‍ನಲ್ಲಿ ಕಾಣಿಸೋದು ಚಿತ್ರದ ಟೈಟಲ್ಲು, ಬ್ಯಾನರುಗಳು ಹಾಗೂ ಹೆಸರುಗಳಷ್ಟೇ. ಉಳಿದದ್ದೆಲ್ಲ.. ಕೇಳಿ.. ಎಲ್ಲ ಕೇಳಿ.

    ಹೌದು, ಈಗ ರಿಲೀಸ್ ಮಾಡಿರುವ ಟೀಸರ್ನಲ್ಲಿ ಯಾವುದೇ ಥರದ ಸೀನ್ಗಳಿಲ್ಲ. ಬರೀ ಕತ್ಲು ಕತ್ಲು. ಟೀಸರ್ ಆರಂಭದಲ್ಲಿ ಉಪ್ಪಿಯ ಒಂದಷ್ಟು ಡೈಲಾಗ್ಸ್ ಕೇಳಿಸ್ತಾವೆ. ಊಟಕ್ಕಾಗಿ ಯಾರೋ ಪರದಾಡುತ್ತಿರುವುದು, ಅರಚಾಡುತ್ತಿರುವುದು ಕೇಳಿಸುತ್ತದೆ. ನಂತರ ಹೊಡೆದಾಟ. ಈ ಕತ್ತಲಿನಿಂದ ಎಸ್ಕೇಪ್ ಆಗಬೇಕು ಅಂದ್ರೆ ಏನ್ ಮಾಡಬೇಕು ಅನ್ನೋ ಚರ್ಚೆ ಶುರು ಆಗುತ್ತದೆ. ಆಗ ಒಂದು ಧ್ವನಿ, 'ದಿಸ್ ಈಸ್ ನಾಟ್ ಂI ವರ್ಲ್ಡ್. ದಿಸ್ ಈಸ್ ಯುಐ ವರ್ಲ್ಡ್.. ಖಿo esಛಿಚಿಠಿe, use ouಡಿ iಟಿಣeಟಟigeಟಿಛಿe..' ಎಂದು ಹೇಳುತ್ತದೆ. ಅಲ್ಲಿಗೆ ಟೀಸರ್ ಮುಕ್ತಾವಾಗುತ್ತಿದೆ. ಕೊನೆಗೆ, 'ಈ ಟೀಸರ್ ನಿಮ್ಮ ಕಲ್ಪನೆಗಾಗಿ..' ಎಂಬ ಸ್ಟೇಟ್ಮೆಂಟ್ ಇದೆ. ಅಲ್ಲಿಗೆ 'ಯುಐ' ಸಿನಿಮಾದ ವಿಶುವಲ್ಸ್ ನೋಡಬೇಕು ಎಂದು ಕಾದಿದ್ದವರಿಗೆ ಬೇರೆಯದೇ ಕಂಟೆಂಟ್ ಕೇಳಿಸಿ, ತಲೆ ಕೆಡಿಸಿದ್ದಾರೆ ಉಪೇಂದ್ರ.

    ಟೀಸರ್ ರಿಲೀಸ್ಗೂ ಪ್ರೋಮೋಗಳ ಮೂಲಕವೇ ಸಖತ್ ಸದ್ದು ಮಾಡಿತ್ತು ಯುಐ ಟೀಮ್. ಆಗಲೂ ಉಪ್ಪಿ ಟೀಸರ್ ಯಾಕೆ ತೋರಿಸಬೇಕು ಎಂದೇ ವಾದ ಮಾಡಿದ್ದರು. ಕೊನೆಗೂ ಅವರೇ ಗೆದ್ದಿದ್ದಾರೆ. ಅತ್ತ ಟೀಸರ್ ರಿಲೀಸ್ ಮಾಡಿದಂಗೂ ಇರಬೇಕು, ಇತ್ತ ಅವರ ಆಸೆಯಂತೆ ಟೀಸರ್ ತೋರಿಸದಂತೆಯೂ ಇರಬೇಕು. ಒಟ್ನಲ್ಲಿ ಫ್ಯಾನ್ಸ್ ಮಾತ್ರ ಸಖತ್ ಕನ್ಫ್ಯೂಸ್ ಆಗಿದ್ದಾರೆ.

    ಉಪೇಂದ್ರ ಏನೇ ಮಾಡಿದರೂ ಅದು ತುಂಬ ಡಿಫರೆಂಟ್ ಆಗಿರುತ್ತದೆ. ‘ಯುಐ’ ಸಿನಿಮಾದ ಟೀಸರ್ನಲ್ಲೂ ಅದು ಸಾಬೀತಾಗಿದೆ. ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು. ಆ ಮೂಲಕ ಎಲ್ಲರ ತಲೆಗೂ ಉಪೇಂದ್ರ ಕೆಲಸ ಕೊಟ್ಟಿದ್ದಾರೆ.  ಟೀಸರ್ ಕೇಳಿಸಿಕೊಂಡ ಪ್ರತಿಯೊಬ್ಬರ ತಲೆಯಲ್ಲೂ ಬೇರೆ ಬೇರೆ ಕಲ್ಪನೆ ಮೂಡುತ್ತಿದೆ. ಆ ರೀತಿ ಆಗಬೇಕು ಎಂಬುದೇ ಉಪೇಂದ್ರ ಅವರ ಆಶಯ.

    ಇದೆಲ್ಲವೂ ಕಲ್ಪನೆಯಲ್ಲೇ ಇರಲಿ. ಅದರಲ್ಲೇ ಮಜಾ ಇದೆ. ಇದು ನಿಮ್ಮ ಕಲ್ಪನೆಯನ್ನು ಟೀಸ್ ಮಾಡುವ ಟೀಸರ್. ತಲೆ ಎತ್ತಿ ಕಲ್ಪನೆ ಮಾಡಿಕೊಳ್ಳಿ. ತಲೆ ತಗ್ಗಿಸಿ ಮೊಬೈಲ್ ನೋಡೋದು ಬಿಡಿ. ಇದರಲ್ಲಿ ಸೌಂಡ್ ಟ್ರಾವೆಲ್ ಆಗುತ್ತದೆ. ಅದನ್ನು ಗಮನಿಸಿ. ಇದನ್ನು ಕೇಳಿಸಿಕೊಂಡರೆ ನೀವೆಲ್ಲ ಡೈರೆಕ್ಟರ್ ಆಗುತ್ತೀರಿ’ ಎಂದು ಉಪೇಂದ್ರ ಹೇಳಿದ್ದಾರೆ.