` yada yadahi, - chitraloka.com | Kannada Movie News, Reviews | Image

yada yadahi,

  • ವಸಿಷ್ಠ ಸಿಂಹ-ಹರಿಪ್ರಿಯಾ ಜೋಡಿಯ ಯದಾಯದಾಹಿ..

    ವಸಿಷ್ಠ ಸಿಂಹ-ಹರಿಪ್ರಿಯಾ ಜೋಡಿಯ ಯದಾಯದಾಹಿ..

    ಯದಾ ಯದಾಹಿ.. ಇದು ಹೊಸ ಸಿನಿಮಾ. ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಟ್ರೇಲರ್ ಹೊರಬಿದ್ದಿದೆ. ಅಪ್ಪಟ ಮರ್ಡರ್ ಥ್ರಿಲ್ಲರ್. ಜೂನ್ 2ಕ್ಕೆ ರಿಲೀಸ್ ಆಗಲಿರುವ ಚಿತ್ರ ತೆಲುಗಿನ ಎವರು ಚಿತ್ರದ ರೀಮೇಕ್. ತೆಲುಗಿಗಿಂತ ತುಸು ಭಿನ್ನವಾಗಿ ತೋರುತ್ತಿದೆ. ಜೊತೆಗೆ ಕಣ್ಣುಗಳಲ್ಲೇ ಮಾತನಾಡುವ ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿ, ಜೊತೆಗೆ ದಿಗಂತ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ.

    ಕ್ಷಣಕ್ಕೊಮ್ಮೆ ಕೇಳುತ್ತಿರುವ ಕಥೆ ಸುಳ್ಳು ಎಂದು ಪ್ರೇಕ್ಷಕ ದಿಗ್ಭ್ರಮೆಗೊಳಗಾಗುವಂತೆ ಇರುವ ಕಥೆ ಯದಾ ಯದಾಹಿ ಚಿತ್ರದಲ್ಲಿದೆ. ಮದುವೆಗೂ ಮೊದಲೇ ಶುರುವಾಗಿದ್ದ ಸಿನಿಮಾ ಮದುವೆಯ ನಂತರ ರಿಲೀಸ್ ಆಗುತ್ತಿರುವುದು ವಿಶೇಷ.

    ದಾ ಯದಾ ಹಿ' ಸಿನಿಮಾವನ್ನು ಜಾಕ್ ಮಂಜು ಅವರು ತಮ್ಮ ಶಾಲಿನಿ ಎಂಟರ್ಪ್ರೈಸಸ್ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಸಾಂಗನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಈಗ ಟ್ರೇಲರ್ ಕೂಡ ರಿಲೀಸ್ ಆಗಿದೆ. ವಿಶೇಷವೆಂದರೆ, ಈ ಸಿನಿಮಾದ ಹಾಡೊಂದಕ್ಕೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ದನಿಯಾಗಿದ್ದಾರೆ. 'ಯದಾ ಯದಾ ಹಿ' ಸಿನಿಮಾಗೆ ತೆಲುಗಿನ ಅಶೋಕ ತೇಜ ಅವರು ನಿರ್ದೇಶನ ಮಾಡಿದ್ದು, ರಾಜೇಶ್ ಅಗರವಾಲ್  ನಿರ್ಮಾಪಕ.

    ವಸಿಷ್ಠ, ದಿಗಂತ್ ಹಾಗೂ ನಾನು. ಇಲ್ಲಿ ಮೂವರು ಕೂಡ ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಚಾಣಾಕ್ಷರು. ಮೂವರೂ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದೇವೆ. ನನ್ನದು ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರ. ತುಂಬಾ ಸವಾಲಿನಿಂದ ಕೂಡಿತ್ತು. ಸಿನಿಮಾನೂ ಕ್ಲಾಸ್ ಆಗಿ ಮೂಡಿಬಂದಿರುವುದರಿಂದ ಪ್ರೇಕ್ಷಕರಿಗೂ ಕುತೂಹಲ ಕೆರಳಿಸುತ್ತಾ ಹೋಗುತ್ತದೆ ಎಂದು ಥ್ರಿಲ್ಲಾಗಿದ್ದಾರೆ ಹರಿಪ್ರಿಯ.

    ವಸಿಷ್ಠ ಅವರು ತಮ್ಮ ಪಾತ್ರಕ್ಕಿಂತ ಹೆಚ್ಚು ದಿಗಂತ್ ಪಾತ್ರದ ಬಗ್ಗೆ ಮಾತನಾಡಿದ್ದು ವಿಶೇಷ. ಇಲ್ಲಿ ದಿಗಂತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಬೇರೆಯದೇ ದಿಗಂತ್ ಅವರನ್ನ ನೋಡುತ್ತೀರಿ. ಯದಾ ಯದಾ ಹಿ' ಸಿನಿಮಾದಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ ಎಂದಿದ್ದಾರೆ ವಸಿಷ್ಠ ಸಿಂಹ .