` ray stevenson, - chitraloka.com | Kannada Movie News, Reviews | Image

ray stevenson,

  • RRR ಚಿತ್ರದ ವಿಲನ್ ರೇ ಸ್ಟೀವನ್ ಸನ್ ನಿಧನ

    RRR ಚಿತ್ರದ ವಿಲನ್ ರೇ ಸ್ಟೀವನ್ ಸನ್ ನಿಧನ

    ಆರ್.ಆರ್.ಆರ್. ಸಿನಿಮಾದ ಕಥೆ ಶುರುವಾಗುವುದೇ ಅವರಿಂದ. ಕೊನೆಯಾಗುವುದು ಅವರಿಂದ. ಬ್ರಿಟಿಷ್ ಅಧಿಕಾರಿಯಾಗಿ, ಬಾಲಕಿ ಮಲ್ಲಿಯನ್ನು ಹೊತ್ತುಕೊಂಡು ಹೋಗುವ ಗೌರ್ನರ್ ಸ್ಕಾಟ್ ಬಕ್ಸ್‍ಟನ್ ಪಾತ್ರದಲ್ಲಿ ಮಿಂಚಿದ್ದರು ರೇ ಸ್ಟೀವನ್‍ಸನ್. ವಯಸ್ಸು ಕೇವಲ 58 ವರ್ಷ. ಸಾಯುವ ವಯಸ್ಸೇನಲ್ಲ. ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ.

    ಕ್ಯಾಸಿನೋ ಇನ್ ಇಸ್ಚಿಯಾ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದರು. ಇಟಲಿಯಲ್ಲಿ ಚಿತ್ರೀಕರಣದಲ್ಲಿದ್ದಾಗಲೇ ದಿಢೀರನೆ ಮೃತಪಟ್ಟಿದ್ದಾರೆ. ಸಾವಿಗೆ ಏನು ಕಾರಣ ಅನ್ನೋದು ಇನ್ನಷ್ಟೇ ಗೊತ್ತಾಗಬೇಕು.

    ಹಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದ ಸ್ಟೀವನ್‍ಸನ್, ಇಂಡಿಯನ್ ಸಿನಿಮಾಗಳಲ್ಲಿ ನಟಿಸಿದ್ದ ಏಕೈಕ ಸಿನಿಮಾ ಆರ್.ಆರ್.ಆರ್.