` sumalatha ambareesh, - chitraloka.com | Kannada Movie News, Reviews | Image

sumalatha ambareesh,

  • ಸುಮಲತಾಗೆ ಪ್ರಪೋಸ್ ಮಾಡಿದ್ರಂತೆ ಅಪ್ಪು..!!!

    sumalatha and puneeth shares some of their memories

    ನಾನ್ ಮದ್ವೆ ಆದ್ರೆ ಸುಮಲತಾ ಅವರನ್ನೇ ಮದುವೆಯಾಗೋದು ಎನ್ನುತ್ತಿದ್ದರಂತೆ ಅಪ್ಪು. ಆಗ ಸುಮಲತಾ ಡಾ.ರಾಜ್ ಜೊತೆ ಹೀರೋಯಿನ್ ಆಗಿದ್ದರು. ಸೆಟ್‍ನಲ್ಲಿ ಸುಮಲತಾ ಅವರೇ ಚಿಕ್ಕ ವಯಸ್ಸಿನ ಹುಡುಗಿ. ಉಳಿದವರೆಲ್ಲ ಸೀನಿಯರ್. ಹೀಗಾಗಿ ಸುಮಲತಾ ಸೆಟ್ಟಿಗೆ ಬರುತ್ತಿದ್ದ ಪುಟ್ಟ ಹುಡುಗ ಲೋಹಿತ್‍ನನ್ನು ಹಚ್ಚಿಕೊಂಡರು. ಆ ಲೋಹಿತ್ ಅಲಿಯಾಸ್ ಅಪ್ಪು, ಮನೆಗೆ ಹೋಗಿ ನಾನು ಸುಮಲತಾ ಅವರನ್ನೇ  ಮದುವೆಯಾಗೋದು ಎಂದು ಹೇಳಿದ್ದರಂತೆ. ಆಗ ಅಪ್ಪುಗೆ ಏಳೋ .. ಎಂಟೋ ವರ್ಷ. 

    ಅಂಬರೀಷ್ ಅಂತೂ ಪುನೀತ್‍ಗೆ ಏನೋ.. ನನ್ ಹೆಂಡ್ತೀಗೇ ಲೈನ್ ಹಾಕ್ತಿಯಾ ಎಂದು ರೇಗಿಸುತ್ತಿದ್ದರಂತೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪುನೀತ್ ಅದನ್ನು ನೆನಪಿಸಿಕೊಂಡು ನಕ್ಕರು. ಸುಮಲತಾ ಅಂಬಿಗಿಂತ ಮೊದಲು ನನಗೆ ಪ್ರಪೋಸ್ ಮಾಡಿದ್ದುದು ಅಪ್ಪು ಎಂದು ನೆನಪಿಸಿಕೊಂಡು ನಕ್ಕರು.

  • ಹರಿಪ್ರಿಯಾ 25ನೇ ಸಿನಿಮಾ ರೆಡಿ

    haripriya's 25th film censored u

    ಡಾಟರ್ ಆಫ್ ಪಾರ್ವತಮ್ಮ. ಹರಿಪ್ರಿಯಾ ಅಭಿನಯದ 25ನೇ ಸಿನಿಮಾ. ಪಾರ್ವತಮ್ಮನಾಗಿ, ಹರಿಪ್ರಿಯಾ ತಾಯಿಯಾಗಿ ನಟಿಸಿರುವುದು ಸುಮಲತಾ ಅಂಬರೀಷ್. ಹರಿಪ್ರಿಯಾ ಈ ಚಿತ್ರದಲ್ಲಿ ವೈದೇಹಿ ಹೆಸರಿನ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

    ಬೆಲ್‍ಬಾಟಂ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ಡಾಟರ್ ಆಫ್ ಪಾರ್ವತಮ್ಮ, ಸೆನ್ಸಾರ್ ಗೆದ್ದಿದೆ. ಯಾವುದೇ ಕಟ್, ಮ್ಯೂಟ್‍ಗಳಿಲ್ಲದೆ ಯು ಸರ್ಟಿಫಿಕೇಟ್ ಪಡೆದಿದೆ. ಕೆ.ಎಂ.ಶಶಿಧರ್, ವಿಜಯಲಕ್ಷ್ಮೀ, ಕೃಷ್ಣೇಗೌಡ ನಿರ್ಮಾಣದ ಸಿನಿಮಾಗೆ ಶಂಕರ್ ನಿರ್ದೇಶಕ.

  • ಹರಿಪ್ರಿಯಾ ಉಡುಗೊರೆಗಳ ಸುರಿಮಳೆ..!

    haripriya gets her birthday gift

    ಹರಿಪ್ರಿಯಾಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬವಂತೂ ಅವರಿಗೆ ತುಂಬಾನೇ ಸ್ಪೆಷಲ್. ಈ ಬಾರಿ ಅವರು 25ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಉಡುಗೊರೆಗಳ ಸುರಿಮಳೆಯೇ ಆಗುತ್ತಿದೆ.

    ಹರಿಪ್ರಿಯಾರ 25ನೇ ಸಿನಿಮಾ ಡಾಟರ್ ಆಫ್ ಪಾರ್ವತಮ್ಮ ಚಿತ್ರತಂಡ, ಹರಿಪ್ರಿಯಾ ಬುಲೆಟ್ ಓಡಿಸುತ್ತಿರುವ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ್ದರೆ, ಸೂಜಿದಾರ, ಬೆಲ್‍ಬಾಟಂ, ಕನ್ನಡ್ ಗೊತ್ತಿಲ್ಲ ಚಿತ್ರತಂಡಗಳೂ ಸ್ಪೆಷಲ್ ಗಿಫ್ಟ್ ನೀಡಿವೆ.

    ಹುಟ್ಟುಹಬ್ಬ ಮುಗಿಸಿಕೊಂಡು 10 ದಿನ ಇಡೀ ಕುಟುಂಬದೊಂದಿಗೆ ಸುತ್ತುವ ಪ್ಲಾನ್ ಹಾಕಿಕೊಂಡಿದ್ದಾರೆ ಹರಿಪ್ರಿಯಾ. ಹ್ಯಾಪಿ ಬರ್ತ್ ಡೇ ಹರಿಪ್ರಿಯಾ.

  • ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು - ಸಮಸ್ತ ಕನ್ನಡಿಗರ ಹೃದಯ ಗೆದ್ದ ಸುಮಲತಾ

    sumalatha donates land to martyr guru's family

    ಹಿರಿಯ ನಟಿ, ಮಂಡ್ಯದ ಸೊಸೆ ಸುಮಲತಾ ಅಂಬರೀಷ್, ಹುತಾತ್ಮ ಯೋಧ ಹೆಚ್.ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡಲು ಮುಂದಾಗಿದ್ದಾರೆ. ಮಲೇಷ್ಯಾದಲ್ಲಿ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸುಮಲತಾ, ಸದ್ಯಕ್ಕೆ ಮಂಡ್ಯಕ್ಕೆ ಬರುವ ಸ್ಥಿತಿಯಲ್ಲಿಲ್ಲ. ಇದರ ನಡುವೆ ಮಂಡ್ಯದ ಯೋಧ ಹುತಾತ್ಮನಾಗಿರುವುದು ಹಾಗೂ ಅವರ ಕುಟುಂಬಕ್ಕೆ ಸಂಸ್ಕಾರ ನಡೆಸಲೂ ಜಾಗ ಇಲ್ಲದೇ ಇರುವ ಸುದ್ದಿ ತಿಳಿದ ಸುಮಲತಾ, ದೊಡ್ಡರಸಿನಕೆರೆಯಲ್ಲಿರುವ ಅರ್ಧ ಎಕರೆ ಜಮೀನನ್ನು ಯೋಧನ ಕುಟುಂಬಕ್ಕೆ ನೀಡಲು ನಿರ್ಧರಿಸಿದರು.

    ಈ ಕುರಿತು ಸರ್ಕಾರ ಹಾಗೂ ಕುಟುಂಬವನ್ನು ಸಂಪರ್ಕಿಸುವ ಹೊತ್ತಿಗೆ, ಸರ್ಕಾರವೇ ಯೋಧನ ಅಂತ್ಯ ಸಂಸ್ಕಾರಕ್ಕೆ 10 ಗುಂಟೆ ಜಮೀನು ನೀಡಿತು. ಇದು ಗೊತ್ತಾದ ನಂತರವೂ ಸುಮಲತಾ ನಿರ್ಧಾರ ಬದಲಾಗಲಿಲ್ಲ. 

    ಕೊಡಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದ ಮೇಲೆ, ಅದು ಅವರ ಸ್ವತ್ತು. ಅವರಿಗೇ ಸಲ್ಲಬೇಕು ಎಂದಿರುವ ಸುಮಲತಾ, ಮಲೇಷ್ಯಾದಿಂದ ವಾಪಸ್ ಬಂದ ಮೇಲೆ ಹುತಾತ್ಮ ಯೋಧನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಆ ಅರ್ಧ ಎಕರೆ ಜಮೀನನ್ನು ಗುರು ಕುಟುಂಬದವರಿಗೆ ರಿಜಿಸ್ಟರ್ ಮಾಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

    ಈ ಮಣ್ಣಿನ ಮಗಳಾಗಿ, ಮಂಡ್ಯದ ಸೊಸೆಯಾಗಿ, ಅಂಬರೀಷ್ ಪತ್ನಿಯಾಗಿ ಇದು ನನ್ನ ಕರ್ತವ್ಯ ಎಂದಿದ್ದಾರೆ ಸುಮಲತಾ.