` sumalatha ambareesh, - chitraloka.com | Kannada Movie News, Reviews | Image

sumalatha ambareesh,

  • ಅಭಿಷೇಕ್ ಅಂಬರೀಷ್ ಸ್ಪೀಕಿಂಗ್ ಫ್ರಂ ಬ್ಯಾಂಕಾಕ್

    abhishek ambi speaks

    ಅಭಿಷೇಕ್ ಅಂಬರೀಷ್ ಬ್ಯಾಂಕಾಕ್‍ನಲ್ಲಿದ್ದಾರೆ. ಅಲ್ಲಿ ಅವರು ಮಿಕ್ಸೆಡ್ ಮಾರ್ಷಲ್ ಆಟ್ರ್ಸ್ ಕಲಿಯುತ್ತಿದ್ದಾರೆ. ಸುಮಾರು ಒಂದು ತಿಂಗಳಿಂದ ಅಲ್ಲಿಯೇ ಇರುವ ಅಭಿಷೇಕ್, ಸುದ್ದಿಯಾಗಿದ್ದು ಮಾತ್ರ ತಮ್ಮದಲ್ಲದ ತಪ್ಪಿನಿಂದ.

    ಕನ್ನಡದ ಸುದ್ದಿ ವಾಹಿನಿಯೊಂದು ಆದಿಕೇಶವುಲು ಮೊಮ್ಮಗನ ಡ್ರಗ್ಸ್ ಆಕ್ಸಿಡೆಂಟ್ ಪ್ರಕರಣದಲ್ಲಿ ಅಭಿಷೇಕ್ ಕೂಡಾ ಅವರ ಕಾರ್‍ನಲ್ಲಿದ್ದರು ಎಂದು ಸುದ್ದಿ ಮಾಡಿಬಿಟ್ಟಿತು. ಆದರೆ, ಅಭಿಷೇಕ್ ಬ್ಯಾಂಕಾಕ್‍ನಲ್ಲಿದ್ದರು. ಒಂದು ತಿಂಗಳಿಂದ. ಸುಮಲತಾ ಮತ್ತು ಅಂಬರೀಷ್ ಅವರಂತೂ ಕೆಂಡಾಮಂಡಲವಾದರು. ಟಿವಿ ಚಾನೆಲ್‍ನವರಿಗೆ ಬುದ್ದಿ ಹೇಳಿದರು.

    ಈಗ ಸ್ವತಃ ಅಭಿಷೇಕ್ ಬ್ಯಾಂಕಾಕ್‍ನಿಂದಲೇ ಮಾತನಾಡಿದ್ದಾರೆ. ಒಂದು ತಿಂಗಳಿಂದ ನಾನು ಬ್ಯಾಂಕಾಕ್‍ನಲ್ಲಿದ್ದೇನೆ. ಎಲ್ಲ ಡಿಸ್ಟರ್ಬೆನ್ಸ್‍ಗಳಿಂದ ಮುಕ್ತನಾಗಿ ಫೈಟಿಂಗ್, ಮಾರ್ಷಲ್ ಆಟ್ರ್ಸ್ ಕಲಿಯುತ್ತಿದ್ದೇನೆ. ನನ್ನ ಬಗ್ಗೆ ಬಂದ ಸುಳ್ಳು ಸುದ್ದಿ ನೋಡಿದೆ. ಬೇಸರವಾಯಿತು. ಅವರು ನಮ್ಮ ಕುರಿತ ಸುಳ್ಳು ಸುದ್ದಿಯನ್ನು 20 ಗಂಟೆ ಪ್ರಸಾರ ಮಾಡ್ತಾರೆ. ಸ್ಪಷ್ಟನೆಯನ್ನು ಒಂದು ನಿಮಿಷ ಹಾಕಿ ಕೈಬಿಡ್ತಾರೆ. ನಮ್ಮ ಜೀವನದ ಬಗ್ಗೆ ಗೌರವ ಬೇಡವೇ..? ಇದು ಅಭಿಷೇಕ್ ಕೇಳುತ್ತಿರುವ ಪ್ರಶ್ನೆ.

    ಸ್ಟಾರ್ ದಂಪತಿಯ ಪುತ್ರನಾಗಿರುವ ಕಾರಣಕ್ಕೆ ಇದೆಲ್ಲವನ್ನೂ ಎದುರಿಸಬೇಕಾದ ಅನಿವಾರ್ಯತೆ ಅಭಿಷೇಕ್ ಅವರದ್ದು. ಸುದ್ದಿ ಬಂದಾಗ ಅಭಿಷೇಕ್‍ಗೆ ಸ್ವತಃ ಅಂಬರೀಷ್ ಮತ್ತು ಸುಮಲತಾ ಧೈರ್ಯ ಹೇಳಿದರಂತೆ. ನನ್ನ ತಂದೆ, ತಾಯಿ ನನಗೆ ಯಾವಾಗಲೂ ವಿಧೇಯನಾಗಿರು ಎಂಬುದನ್ನು ಹೇಳಿಕೊಟ್ಟಿದ್ದಾರೆ. ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿರುವುದು ಹೇಗೆ ಎಂದು ಕಲಿಸಿದ್ದಾರೆ. ನನ್ನಿಂದ ಅಂತಹ ತಪ್ಪುಗಳಾಗುವುದಿಲ್ಲ. ಇದು ಅಭಿಷೇಕ್ ಅಂಬರೀಷ್ ಸ್ಪಷ್ಟನೆ. 

    ಬ್ಯಾಂಕಾಕ್‍ನಲ್ಲಿ ಹಗಲಿರುಳೂ ಬೆವರು ಸುರಿಸುತ್ತಿರುವ ಅಭಿಷೇಕ್, ಸಿನಿಮಾಗಾಗಿ ಕಾಯುತ್ತಿದ್ದಾರೆ. ಬಹುಶಃ, ಮುಂದಿನ ವರ್ಷ ಅಭಿಷೇಕ್ ಆಗಮನಕ್ಕೆ ಚಿತ್ರರಂದಲ್ಲೊಂದು ವೇದಿಕೆ ಸಿದ್ಧವಾಗಬಹುದು. 

    Related Articles :-

    ಮಕ್ಕಳ ಬಗ್ಗೆ ಸುಳ್ಳುಸುಳ್ಳೇ ಬರೆಯಬೇಡಿ - ಅಂಬರೀಷ್

  • ಅಭಿಷೇಕ್ ರಾಜಕೀಯ ಪ್ರವೇಶ ಯಾವಾಗ ಎಂದು ಹೇಳಿದ ಸುಮಲತಾ

    ಅಭಿಷೇಕ್ ರಾಜಕೀಯ ಪ್ರವೇಶ ಯಾವಾಗ ಎಂದು ಹೇಳಿದ ಸುಮಲತಾ

    ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಅಂಬರೀಷ್ ಬಿಜೆಪಿಗೆ ಮಾತ್ರ ಅಧಿಕೃತವಾಗಿ ಸೇರುತ್ತಿಲ್ಲ. ಪಕ್ಷೇತರರಾಗಿ ಗೆದ್ದಿರುವ ಸುಮಲತಾ ಅವರು ವಿಭಿನ್ನವಾದ ಹೆಜ್ಜೆಯನ್ನೇ ಇಟ್ಟಿದ್ದಾರೆ. ಮೋದಿಗೆ ಬೆಂಬಲ ನೀಡುತ್ತೇನೆ. ಅವರು ಇಡಿ ದೇಶವನ್ನು ತಲೆಯೆತ್ತಿ ನೋಡುವಂತೆ ಮಾಡಿದ್ದಾರೆ. ಮಂಡ್ಯ ಜನರಿಗೆ ಬದಲಾವಣೆ ಬೇಕಿದೆ. ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿರುವ ಸುಮಲತಾ ಅಂಬರೀಷ್ ಬಿಜೆಪಿಗೆ ಅಧಿಕೃತವಾಗಿ ಸೇರದಿದ್ದರೂ, ಬಿಜೆಪಿ ಪರ ನಿಲ್ಲುವ ಘೋಷಣೆ ಮೊಳಗಿಸಿದ್ದಾರೆ. ಅಷ್ಟೇ ಏಕೆ, ಮೋದಿ, ಅಮಿತ್ ಶಾ ಹೇಳಿದರೆ ವಿಧಾನಸಭೆ ಚುನಾವಣೆಗೂ ಸಿದ್ಧ ಎಂದಿದ್ದಾರೆ ಸುಮಲತಾ. ಹೀಗಿರುವಾಗ ಸುಮಲತಾ ಬೆನ್ನಲ್ಲೇ ಅಭಿಷೇಕ್ ಅಂಬರೀಷ್ ಕೂಡಾ ರಾಜಕೀಯಕ್ಕೆ ಬರುತ್ತಾರಾ?

    ಚುನಾವಣೆಗೆ ನಿಲ್ಲುವಂತೆ ಎರಡು ಪಕ್ಷಗಳಿಂದ ಅಭಿಷೇಕ್ ಗೆ ಆಹ್ವಾನ ಬಂದಿದ್ದು ನಿಜ. ಅಭಿಷೇಕ್ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಾನು ರಾಜಕಾರಣದಲ್ಲಿ ಇರುವಾಗ, ಅವನು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಮತ್ತು ಚುನಾವಣೆಯನ್ನು  ಎದುರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

    ಸಿನಿಮಾ ಕೂಡಾ ಅಭಿಷೇಕ್‍ನದ್ದೇ ಆಯ್ಕೆ. ರಾಜಕೀಯದ ಆಯ್ಕೆಯೂ ಅವನದ್ದೇ. ಆದರೆ ರಾಜಕೀಯದಲ್ಲಿ ನಾನು ಇರುವವರೆಗೆ ಅವನು ಬರುವುದಿಲ್ಲ. ನಾನು ರಾಜಕೀಯಕ್ಕೆ ಅನಿವಾರ್ಯವಾಗಿ ಬಂದೆನೇ ಹೊರತು, ಮಗ, ಕುಟುಂಬಕ್ಕಾಗಿ ಅಲ್ಲ. ಮಗ ಸಿನಿಮಾದಲ್ಲಿಯೇ ಆಗಲಿ, ರಾಜಕೀಯದಲ್ಲಿಯೇ ಆಗಲಿ.. ಸ್ವತಂತ್ರವಾಗಿ ಬೆಳೆಯಬೇಕು ಎಂದು ಹೇಳಿದ್ದಾರೆ ಸುಮಲತಾ ಅಂಬರೀಷ್. ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ನಡುವೆ ನಿಶ್ಚಿತಾರ್ಥವಾಗಿದ್ದು, ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ.

    ಟಿಕೆಟ್ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಕೇಳಲ್ಲ. ಯಾರ ಹತ್ತಿರವಾದರೂ ಹೋಗಿ ನಾನು, ಅಭಿಷೇಕ್ ಅಂಬರೀಶ್ ಭವಿಷ್ಯಕ್ಕೆ ಏನು ಮಾಡಿಕೊಡುತ್ತೀರಾ ಅನ್ನೋ ಮಾತುಗಳನ್ನು ಆಡಿದ್ದರೆ, ನಾನು ಅಂಬರೀಶ್ ಪತ್ನಿಯಾಗಿ ಇರುವುದಕ್ಕೆ ಲಾಯಕ್ಕೇ ಅಲ್ಲ.  ಇದು ತಾಯಿ ಚಾಮುಂಡೆ ಮೇಲೆ ಆಣೆ ಒಂದೊಮ್ಮೆ ನಾನು ಕೇಳಿದ್ದೇ ಆದರೆ ಆ ತಾಯಿಯೇ ಉತ್ತರ ಕೊಡುತ್ತಾಳೆ. ಅಭಿಷೇಕ್ ಒಪ್ಪುವುದಾದರೆ ಮಂಡ್ಯ ಅಥವಾ ಮದ್ದೂರಿನಿಂದ ಟಿಕೆಟ್ ನೀಡುವುದಾಗಿ ಸ್ವತಃ ಅಭಿಷೇಕ್ಗೂ ಆಫರ್ ನೀಡಲಾಗಿತ್ತು, ಆದರೆ ಅವನು, ನನ್ನ ತಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ನಾನು ರಾಜಕೀಯ ಪ್ರವೇಶಿಸಬೇಕೆಂದರೆ ಯಾವುದಾದರೂ ಪಕ್ಷದಲ್ಲಿ ಮೊದಲು ಕಾರ್ಯಕರ್ತನಾಗಿ ಕೆಲಸ ಮಾಡಿ ಆ ನಂತರ ಚುನಾವಣೆ ಬಗ್ಗೆ ಯೋಚಿಸುತ್ತೇನೆ ಎಂದು ಉತ್ತರ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ ಸುಮಲತಾ.

  • ಅಮ್ಮ ಇನ್ನೊಬ್ಬರಿಗೆ ಅಮ್ಮನಾಗಿ ನಟಿಸುವುದು ಇಷ್ಟವಿಲ್ಲ - ಅಭಿಷೇಕ್ ಅಂಬರೀಷ್

    abishek talks about his mother, debut movie and ambareesh

    ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಚಿತ್ರ ಅಮರ್ ರಿಲೀಸ್‍ಗೆ ಹತ್ತಿರವಾಗಿದೆ. ಹೀಗಿರುವಾಗಲೇ ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಅಭಿಷೇಕ್, ಅಪ್ಪ ಹೇಳಿಕೊಟ್ಟ ನಟನೆಯ ಗುಟ್ಟು ಬಿಚ್ಚಿಟ್ಟಿದ್ದಾರೆ.

    `ನಿನ್ನ ಮೇಲೆ ದೊಡ್ಡ ಕ್ಯಾಮೆರಾ ಫೋಕಸ್ ಆಗಿದೆ. ನೂರಾರು ಜನ ನಿಂತು ನೋಡುತ್ತಿದ್ದಾರೆ ಎನ್ನುವುದನ್ನು ಮನಸ್ಸಿನಿಂದ ಆಚೆ ಹಾಕಿಬಿಡು. ಅದು ಭಯ ಹುಟ್ಟಿಸುತ್ತೆ. ನಿನ್ನೊಳಗಿನ ನಟ ಭಯಪಟ್ಟರೆ ನಟನೆ ಕಷ್ಟ. ಅದನ್ನು ಮನಸ್ಸಿನಿಂದ ತೆಗೆದುಹಾಕಿ ನಟಿಸುತ್ತಾ ಹೋಗು' ಎಂದಿದ್ದರಂತೆ ಅಂಬಿ. 

    ನಾಗಶೇಖರ್ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಜೊತೆ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಯೂತ್‍ಫುಲ್ ಲವ್ ಸ್ಟೋರಿ ಎಂದಿರುವ ಅಭಿಷೇಕ್, ಅಪ್ಪ, ಅಮ್ಮನ ಸಿನಿಮಾಗಳನ್ನು ನೋಡುತ್ತಲೇ ನಟನೆಯತ್ತ ಸೆಳೆತ ಶುರುವಾಯಿತು ಎಂದಿದ್ದಾರೆ.

    ಅಮ್ಮನ ಹಲವು ಚಿತ್ರಗಳನ್ನು ನೋಡಿರುವ ಅಭಿಷೇಕ್‍ಗೆ, ಅಮ್ಮ ಬೇರೆ ಕಲಾವಿದರಿಗೆ ತಾಯಿಯಾಗಿ ನಟಿಸುವುದು ಇಷ್ಟವಾಗುವುದಿಲ್ಲವಂತೆ. ಅವರು ನನ್ನ ಚಿತ್ರದಲ್ಲಿ ನಟಿಸಬೇಕು, ಅಮ್ಮನಾಗಿಯೇ ನಟಿಸಬೇಕು ಎಂಬ ಆಸೆಯೂ ಅಭಿಷೇಕ್ ಅವರಿಗೆ ಇದೆ.

  • ಅಮ್ಮನ ಜೊತೆ ಸೆಲ್ಫಿ ತಗೊಳ್ಳಿ.. 50,000 ರೂ. ಗೆಲ್ಲಿ

    thayige thakka maga selfie contest

    ತಾಯಿಗೆ ತಕ್ಕ ಮಗ ಚಿತ್ರ, ತಾಯಿ ಮತ್ತು ಮಕ್ಕಳಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದೆ. ನೀವು ಮಾಡಬೇಕಿರೋದು ಇಷ್ಟೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತಗೊಳ್ಳೋದು. ಮತ್ತು ಅದನ್ನು 7338259619 ನಂಬರ್‍ಗೆ ವಾಟ್ಸಪ್ ಮಾಡಿ. ಅಷ್ಟೆ

    ನೀವು ನಿಮ್ಮ ತಾಯಿಯ ಜೊತೆಗಿನ ಸೆಲ್ಫಿಯನ್ನು ನವೆಂಬರ್ 2ರವರೆಗೆ ಕಳಿಸಬಹುದು. ಪ್ರಶಸ್ತಿ ವಿಜೇತರಿಗೆ 50,000 ರೂ. ಬಹುಮಾನ ಇದೆ.

    ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್ ನಟಿಸಿರುವ ಸಿನಿಮಾ, ಬಿಡುಗಡೆಗೆ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.

  • ಅಹಿಂಸಾ ಚೇತನ್ ವಾಗ್ದಾಳಿ ಟಾರ್ಗೆಟ್ ಈಗ ಸುಮಲತಾ ಅಂಬರೀಷ್..!

    ಅಹಿಂಸಾ ಚೇತನ್ ವಾಗ್ದಾಳಿ ಟಾರ್ಗೆಟ್ ಈಗ ಸುಮಲತಾ ಅಂಬರೀಷ್..!

    ಅಹಿಂಸಾ ಚೇತನ್ ಸದಾ ಸುದ್ದಿಯಲ್ಲಿರುತ್ತಾರೆ. ಯಾರಾದರೊಬ್ಬರನ್ನು ಟೀಕಿಸುತ್ತಲೇ ಸುದ್ದಿಯಲ್ಲಿರುವ ನಟ ಚೇತನ್ ಇತ್ತೀಚೆಗೆ ಹಿಂದೂ ಧರ್ಮವನ್ನು ಸುಳ್ಳುಗಳ ಮೇಲೆ ಕಟ್ಟಿದ ಧರ್ಮ ಎಂದು ಜೈಲಿಗೂ ಹೋಗಿ ಬಂದಿದ್ದರು. ಆನಿವಾಸಿ ಭಾರತೀಯರಾಗಿರುವ, ಭಾರತೀಯ ಪೌರರಲ್ಲದ ಚೇತನ್, ಈ ಕಾರಣಕ್ಕಾಗಿಯೇ ಕಾನೂನು ಸಮರ ಎದುರಿಸುತ್ತಿದ್ದಾರೆ. ಭಾರತೀಯ ಪೌರತ್ವ ಹೊಂದಿಲ್ಲದವರು ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ. ಕೆಲವು ನಿರ್ಬಂಧಗಳಿರುತ್ತವೆ. ಹೀಗಾಗಿಯೇ ಹಿಂದೊಮ್ಮೆ ಜೈಲು ಪಾಲಾಗಿದ್ದ ಚೇತನ್, ಇತ್ತೀಚೆಗೆ ಮತ್ತೊಮ್ಮೆ ಜೈಲಿಗೆ ಹೋಗಿ ಬಂದಿದ್ದರು. ಆದರೆ ಚೇತನ್ ಅವುಗಳ ಜೊತೆ ಹೋರಾಡುತ್ತಲೇ ತಮಗೆ ಅನ್ನಿಸಿದ್ದನ್ನು ಹೇಳುತ್ತಲೇ ಇದ್ದಾರೆ. ಈ ಬಾರಿ ಅವರು ಸುಮಲತಾ ಅಂಬರೀಷ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

    ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಅದಕ್ಕೆ ಖರ್ಚಾಗಿರುವ ಸರ್ಕಾರಿ ಹಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್ ಅಹಿಂಸ, ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

    ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ ಮೊತ್ತ ಖರ್ಚಾಗಿದೆ. ಅಂಬರೀಷ್ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದ ಸುಮಲತಾ ಅವರ ಹೇಳಿಕೆಯನ್ನೇ ಇಟ್ಟುಕೊಂಡು ಚೇತನ್ ಅಹಿಂಸಾ ಸುಮಲತಾ ಅವರನ್ನು ಟೀಕೆ ಮಾಡಿದ್ದಾರೆ.

  • ಈ ಫೋಟೋ ನೋಡಿದವರಿಗೂ ಕಣ್ಣೀರು

    an heart wrenchig image of abishek watching ambi

    ಇದು ಅಭಿಷೇಕ್ ಅಂಬರೀಷ್ ತಮ್ಮ ತಂದೆ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಚಿತ್ರ. ಅಭಿಷೇಕ್ ಕೂಡಾ ಅಂಬಿಯಂತೆಯೇ. ಸ್ವಲ್ಪ ಒರಟು ಎನ್ನುವವರಿದ್ದಾರೆ. ಆದರೆ, ಪ್ರತಿಯೊಬ್ಬರ ಮನಸನ್ನೂ ಕಲಕುತ್ತಿರುವುದು ಅಭಿಷೇಕ್ ಅವರ ಮುಗ್ಧ ನೋಟ.

    ತಮ್ಮ ತಂದೆಯ ಮುಚ್ಚಿದ ಕಣ್ಣುಗಳನ್ನು ತೆರೆಸಿ ನೋಡುತ್ತಾರೇನೋ ಎನ್ನುವಂತಿದೆ ಆ ಫೋಟೋ. ಮಗನ ಅಸಹಾಯಕ ನೋಟವನ್ನು ಅಷ್ಟೇ ಅಸಹಾಯಕರಾಗಿ ನೋಡುತ್ತಿರುವ ಸುಮಲತಾ. ವಿಧಿಯೇ ಹಾಗೆ..

    ಕಣ್ಣಿಗೆ ಕಾಣದ ನಾಟಕಕಾರ.. ನಿನಗೇ ನನ್ನ ನಮಸ್ಕಾರ..

  • ಕೆಜಿಎಫ್ ಮೆಚ್ಚಿಕೊಂಡ್ರು ಸುಮಲತಾ ಅಕ್ಕ

    sumalath proud and appreciated kgf

    ಕೆಜಿಎಫ್, ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು ಅನ್ನೋದು ಅಂಬರೀಷ್ ಕನಸಾಗಿತ್ತು. ಚಿತ್ರದ ಮೊದಲ ಟೀಸರ್ ಬಿಡುಗಡೆ ವೇಳೆ ಅಂಬಿ ಇದನ್ನು ಹೇಳಿದ್ದರು. ಚಿತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆನ್ನು ತಟ್ಟಿದ್ದ ಅಂಬರೀಷ್, ಚಿತ್ರ ಬಿಡುಗಡೆ ವೇಳೆ ಇರಲಿಲ್ಲ. ಇದೊಂದು ನೋವು ನನಗಿದೆ ಎಂದು ಹೇಳಿಕೊಂಡಿದ್ದ ಯಶ್‍ಗೆ ಈಗ ಸುಮಲತಾ ಅಂಬರೀಷ್ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ಶುದ್ಧ ಚಿನ್ನ ಎಂದಿದ್ದಾರೆ ಸುಮಲತಾ.

    ಸುಮಲತಾ ಅವರು ಚಿತ್ರ ನೋಡಿರುವುದೇ ನನ್ನ ಭಾಗ್ಯ ಎಂದಿರುವ ಯಶ್, ಅಕ್ಕನಿಗೆ ಥ್ಯಾಂಕ್ಸ್ ಎಂದಿದ್ದಾರೆ. ಅಣ್ಣ ಇದ್ದಿದ್ದರೆ ಖಂಡಿತಾ ಚಿತ್ರ ನೋಡಿರುತ್ತಿದ್ದರು. ಈಗಲೂ ಅವರು ಮೇಲಿಂದಲೇ ಹರಸುತ್ತಿದ್ದಾರೆ ಎಂದಿದ್ದಾರೆ ಯಶ್.

  • ಗಂಡುಗಲಿ ಅಲ್ಲ.. ರಾಜವೀರ ಮದಕರಿ ನಾಯಕ : ರಾಜಮಾತೆ ಸುಮಲತಾ

    gandugali madkari nayaka titled changed

    ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿನಯದ ದುರ್ಗದ ಪಾಳೆಗಾರ ಮದಕರಿನಾಯಕನ ಜೀವನ ಚರಿತ್ರೆಯ ಸಿನಿಮಾಗೆ ಚಾಲನೆ ಸಿಕ್ಕಿದೆ. ಇದುವರೆಗೆ ಚರ್ಚೆಯಾಗಿದ್ದಂತೆ ಚಿತ್ರದ ಹೆಸರು ಗಂಡುಗಲಿ ಮದಕರಿ ನಾಯಕ ಅಲ್ಲ, ರಾಜವೀರ ಮದಕರಿ ನಾಯಕ.

    ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಮುನಿರತ್ನ, ಸಂಸದೆ ಸುಮಲತಾ ಅಂಬರೀಷ್, ಶ್ರೀನಿವಾಸ ಮೂರ್ತಿ.. ಸೇರಿದಂತೆ ಚಿತ್ರತಂಡದವರು ಭಾಗವಹಿಸಿದ್ದರು.

    ಅಂದಹಾಗೆ ಚಿತ್ರದಲ್ಲಿ ದರ್ಶನ್ ಅವರ ತಾಯಿಯಾಗಿ, ರಾಜಮಾತೆಯಾಗಿ ನಟಿಸುತ್ತಿರುವುದು ಸುಮಲತಾ ಅಂಬರೀಷ್. ಇದೇ ವೇಳೆ ನಿಮ್ಮ ದತ್ತು ಮಗ ದರ್ಶನ್ ಜೊತೆ ನಟಿಸುತ್ತಿದ್ದೀರಿ ಎಂಬ ಪ್ರಶ್ನೆಗೆ `ಅವನು ನನಗೆ ದತ್ತು ಮಗನಲ್ಲ, ಸ್ವಂತ ಮಗ' ಎಂದಿದ್ದಾರೆ ಸುಮಲತಾ.

  • ಡಾಟರ್ ಆಫ್ ಪಾರ್ವತಮ್ಮ ಟೀಸರ್, ಮೊಮ್ಮಗನಿಂದ ಲಾಂಚ್

    d/o parvathamma teaser launched by vinay rajkumar

    ಡಾಟರ್ ಆಫ್ ಪಾರ್ವತಮ್ಮ. ಹರಿಪ್ರಿಯಾ ಅಭಿನಯದ 25ನೇ ಸಿನಿಮಾ. ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ ನಟಿಸಿದ್ದರೆ, ಪಾರ್ವತಮ್ಮನಾಗಿರೋದು ಸುಮಲತಾ ಅಂಬರೀಷ್. ಟೈಟಲ್‍ನಿಂದಲೇ ಗಮನ ಸೆಳೆದಿದ್ದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟೀಸರ್ ಲಾಂಚ್ ಮಾಡಿರೋದು ಮೊಮ್ಮಗ ಆಫ್ ಪಾರ್ವತಮ್ಮ.

    ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ವಿನಯ್ ರಾಜ್‍ಕುಮಾರ್, ಚಿತ್ರದ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶಶಿಧರ್ ಕೆ ನಿರ್ಮಾಪಕರಾಗಿದ್ದು, ಚಿತ್ರಕ್ಕೆ ಶಂಕರ್ ಜೆ. ನಿರ್ದೇಶಕರು.ಸೂರಜ್ ಗೌಡ ಹರಿಪ್ರಿಯಾಗೆ ಜೋಡಿಯಾಗಿದ್ದಾರೆ.

    ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರದಲ್ಲಿ ಹರಿಪ್ರಿಯಾ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ನಟಿಸಿದ್ದಾರೆ. 

  • ಡಾಟರ್ ಆಫ್ ಪಾರ್ವತಮ್ಮನಿಗೆ ಡಾಲಿ ಹಾಡು

    dolly dhananjay turns lyricist with daughter of parvathamma

    ಹರಿಪ್ರಿಯಾ ಡಾಟರ್ ಆಗಿ, ಸುಮಲತಾ ಪಾರ್ವತಮ್ಮನಾಗಿ ನಟಿಸಿರುವ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಹೀರೋಯಿನ್ ಓರಿಯಂಟೆಡ್ ಚಿತ್ರದಲ್ಲಿ ಡಾಲಿ ಎಂಟ್ರಿಯಾಗಿರೋದೇ ಗಮ್ಮತ್ತಿನ ವಿಷಯ. ಹಾಗಂತ, ಡಾಲಿ ಧನಂಜಯ್ ಇಲ್ಲಿ ಹೀರೋ ಆಗಿ ಆಗಲೀ, ವಿಲನ್ ಆಗಿಯಾಗಲೀ ನಟಿಸಿಲ್ಲ. ಬದಲಿಗೆ ಹಾಡು ಬರೆದಿದ್ದಾರೆ. ರಂಗಭೂಮಿಯಿಂದ ಬಂದಿರೋ ಧನಂಜಯ್‍ಗೆ ಸಾಹಿತ್ಯವೂ ಗೊತ್ತು. ಹೀಗಾಗಿಯೇ ಒಂದೊಳ್ಳೆ ಹಾಡಿನ ಕಿಕ್ಕು, ಡಾಟರ್ ಆಫ್ ಪಾರ್ವತಮ್ಮನಿಗೆ ಸಿಕ್ಕಿದೆ.

    ಜೀವಕ್ಕಿಲ್ಲಿ ಜೀವ ಬೇಟೆ..ಪಾಪಿ ಯಾರೋ ಇಲ್ಲಿ..ಕೊಂದು ತಿನ್ನೋ ರೂಲೇ ಉಂಟು..ಪಾಪ ಯಾವುದಿಲ್ಲಿ.

    ಎಂಬ ಈ ಗೀತೆ ಮೈಮನಗಳಲ್ಲಿ ವಿಚಿತ್ರ ತಳಮಳ ಸೃಷ್ಟಿಸುವ ಶಕ್ತಿ ಹೊಂದಿದೆ. ಕಾರ್ತಿಕ್ ಚೆನ್ನೋಜಿ ರಾವ್, ನಾರಾಯಣ್ ಶರ್ಮ, ಮಿಥುನ್ ಮುಕುಂದನ್ ಹಾಡಿರೋ ಹಾಡಿಗೆ ಮ್ಯೂಸಿಕ್ಕು ಮುಕುಂದನ್ ಅವರದ್ದೇ. ಹಾಡನ್ನು ರಿಲೀಸ್ ಮಾಡಿರುವುದು ರೋರಿಂಗ್ ಸ್ಟಾರ್ ಶ್ರೀಮುರಳಿ.

  • ಡಿ ಬಾಸ್ ಅಲ್ಲ.. ದುರ್ಯೋಧನ ಬಾಸ್ - ಸುಮಲತಾ ನಾಮಕರಣ

    sumalatha renames darshan with new name

    ಅಭಿಮಾನಿಗಳಿಂದ ಚಾಲೆಂಜಿಂಗ್ ಸ್ಟಾರ್, ದಾಸ, ಡಿ ಬಾಸ್, ಚಕ್ರವರ್ತಿ, ಯಜಮಾನ ಎಂದೆಲ್ಲ ಕರೆಸಿಕೊಳ್ಳೋ ದರ್ಶನ್‍ಗೆ ಈಗ ಹೊಸ ನಾಮಕರಣವಾಗಿದೆ. ಅದು ದುರ್ಯೋಧನ ಬಾಸ್. ಈ ಹೊಸ ಹೆಸರು ನೀಡಿರೋದು ಸುಮಲತಾ ಅಂಬರೀಷ್.

    ಕುರುಕ್ಷೇತ್ರ ಸಿನಿಮಾ ನೋಡಿದ ಸುಮಲತಾ ಅಂಬರೀಷ್, ದರ್ಶನ್ ಅಭಿನಯವನ್ನು ಹೊಗಳಿದ್ದಾರೆ. ದರ್ಶನ್ ದುರ್ಯೋಧನನ ಪಾತ್ರಕ್ಕೆ ಪರ್ಫೆಕ್ಟ್ ಆಗಿ ನಟಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಆದ ಮೇಲೆ ಇದು ಹೊಸ ಮೈಲಿಗಲ್ಲು ಎಂದಿದ್ದಾರೆ ಸುಮಲತಾ.

    ಅಂಬರೀಷ್‍ರನ್ನು ಕೊನೆಯ ಬಾರಿಗೆ ಅಭಿನಯಿಸಿರುವುದನ್ನು ತೆರೆಯ ಮೇಲೆ ನೋಡುವಾಗ ಆದ ಅನುಭವ ಹೇಳೋಕಾಗಲ್ಲ ಎಂದಿರೋ ಸುಮಲತಾ, ಕುರುಕ್ಷೇತ್ರ ಒಂದು ಸಿನಿಮಾ ಅಲ್ಲ, ಅದೊಂದು ಅನುಭವ ಎಂದಿದ್ದಾರೆ.

  • ತಾಯಿಗೆ ತಕ್ಕ ಮಗ ಅಲ್ಲ, ಮಗನಿಗೆ ತಕ್ಕ ತಾಯಿ..!

    perfect son for a perfcet mother

    ತಾಯಿಗೆ ತಕ್ಕ ಮಗ. ಇದು ಶಶಾಂಕ್ ನಿರ್ಮಾಣದ ಅಜೇಯ್ ರಾವ್ ನಾಯಕರಾಗಿ ನಟಿಸುತ್ತಿರುವ ಚಿತ್ರ. ಚಿತ್ರದಲ್ಲಿ ಅತ್ಯಂತ ವಿಶೇಷ ಪಾತ್ರ ಮಾಡುತ್ತಿರುವುದು ಸುಮಲತಾ. ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಅಜೇಯ್ ರಾವ್‍ಗೆ ಅಮ್ಮನಾಗಿದ್ದ ಸುಮಲತಾ, ಈ ಚಿತ್ರದಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ.

    ಆ ಚಿತ್ರದಲ್ಲಿ ಅಜೇಯ್ ರಾವ್ ಜೀವನಕ್ಕಾಗಿ, ತಮ್ಮ ಪ್ರೀತಿಯನ್ನೇ ತ್ಯಾಗ ಮಾಡುವ ಅಮ್ಮನಾಗಿದ್ದ ಸುಮಲತಾ, ಈ ಚಿತ್ರದಲ್ಲಿ ಮಗನಿಗಾಗಿ ಹೋರಾಡುವ ಅಮ್ಮನ ಪಾತ್ರ ಮಾಡುತ್ತಿದ್ದಾರೆ.

    ಅಜೇಯ್ ರಾವ್, ಸಿನಿಮಾದಲ್ಲಿ ಅನ್ಯಾಯದ ವಿರುದ್ಧ ಹೋರಾಡುತ್ತಿರುತ್ತಾರೆ. ಮಗನ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲುವುದು ಅಮ್ಮ ಸುಮಲತಾ. ಕೋರ್ಟ್‍ನಲ್ಲಿ ಲಾಯರ್ ಆಗಿ ಮಗನನ್ನು ಗೆಲ್ಲಿಸಿಕೊಳ್ಳುವ ರೆಬಲ್ ಅಮ್ಮನಾಗಿದ್ದಾರೆ ಸುಮಲತಾ.

    ಹಾಗಾದರೆ, ಚಿತ್ರದ ಟೈಟಲ್‍ನ್ನು ಮಗನಿಗೆ ತಕ್ಕ ತಾಯಿ ಎಂದೇನಾದರೂ ಬದಲಾಯಿಸುವ ಐಡಿಯಾ ಇದೆಯಾ..? ಶಶಾಂಕ್ ಅವರನ್ನು ಕೇಳಿನೋಡಿ.. ಜೋರಾಗಿ ನಕ್ಕುಬಿಡುತ್ತಾರೆ.

  • ತಾಯಿಗೆ ತಕ್ಕ ಮಗ ಟ್ರೇಲರ್ ಹವಾ..

    thayige thakka maga creates craze

    ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ ಟೈಟಲ್‍ನಿಂದಲೇ ಸದ್ದು ಮಾಡಿದ್ದ ಸಿನಿಮಾ. ಇನ್ನು ಎಕ್ಸ್‍ಕ್ಯೂಸ್ ಮಿ ನಂತರ ಸುಮಲತಾ ಮತ್ತು ಅಜೇಯ್ ರಾವ್ ಮತ್ತೊಮ್ಮೆ ತಾಯಿ ಮಗನಾಗಿ ನಟಿಸಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಚಿತ್ರದ ಟ್ರೇಲರ್.

    ಕಿಚ್ಚು ಸುದೀಪ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿ, ತಾಯಿ-ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಹಸ ದೃಶ್ಯ ಮತ್ತು ಪಂಚಿಂಗ್ ಡೈಲಾಗುಗಳ ಹಿನ್ನೆಲೆಯಲ್ಲೂ ತಾಯಿ-ಮಗನ ಸೆಂಟಿಮೆಂಟ್ ಕಾಣುವಂತೆ ಮಾಡಿರೋದು ಶಶಾಂಕ್ ಸ್ಪೆಷಾಲಿಟಿ. 

    ಚಿತ್ರದ ನಾಯಕಿ ಆಶಿಕಾ ರಂಗನಾಥ್, ಸಿನಿಮಾದ ಹಾಟ್ ಹಾಟ್ ಸಬ್ಜೆಕ್ಟ್. ಕ್ಲಾಸ್ ಮತ್ತು ಮಾಸ್ ಎರಡೂ ಮಿಕ್ಸ್ ಆಗಿರುವ ಸಿನಿಮಾ ಅಜೇಯ್ ರಾವ್ ಅವರ 25ನೇ ಸಿನಿಮಾ ಎನ್ನವುದು ವಿಶೇಷ.

  • ತಾಯಿಗೆ ತಕ್ಕ ಮಗ ನೋಡಲು 10 ಕಾರಣಗಳು

    10 reasons to watch thayige thakka maga

    ತಾಯಿಗೆ ತಕ್ಕ ಮಗ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಶಶಾಂಕ್ ನಿರ್ದೇಶನದ ಅಜಯ್ ರಾವ್-ಸುಮಲತಾ-ಅಶಿಕಾ ರಂಗನಾಥ್ ಅಭಿನಯದ ಸಿನಿಮಾ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಈ ಸಿನಿಮಾ ನೋಡೋಕೆ ಕೆಲವು ವಿಶೇಷ ಕಾರಣಗಳೂ ಇವೆ.

    1. ತಾಯಿಗೆ ತಕ್ಕ ಮಗ, ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದ ಟೈಟಲ್. ಅಣ್ಣಾವ್ರ ಸಿನಿಮಾ ಟೈಟಲ್ ಎತ್ತಿಕೊಂಡ ತಕ್ಷಣ ನಿರ್ದೇಶಕನ ಮೇಲೊಂದು ತಂತಾನೇ ಒಂದು ಜವಾಬ್ದಾರಿ ಹೆಗಲೇರುತ್ತೆ. ಅದಕ್ಕೆ ಚ್ಯುತಿ ಬಾರದಂತೆ ಚಿತ್ರ ನಿರ್ದೇಶಿಸಿದ್ದಾರೆ ಶಶಾಂಕ್.

    2. ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸಿರುವುದು ಸುಮಲತಾ ಅಂಬರೀಷ್. ಇದುವರೆಗೆ ಇಂತಹದ್ದೊಂದು ರೋಲ್ ಮಾಡಿಲ್ಲ. ರೆಬಲ್‍ಸ್ಟಾರ್ ಅಮ್ಮನಾಗಿ, ಕ್ರಾಂತಿಕಾರಿ ಲಾಯರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ಸುಮಲತಾ.

    3. ಅಜಯ್ ರಾವ್ ಅಭಿನಯದ 25ನೇ ಸಿನಿಮಾ ಇದು ಎನ್ನುವುದು ಒಂದು ವಿಶೇಷ. ಆದರೆ, ಸಿನಿಮಾ ಶುರುವಾಗಿ ಕೆಲವು ದಿನಗಳಾಗುವವರೆಗೆ ಇದು ತಮ್ಮ 25ನೇ ಸಿನಿಮಾ ಎನ್ನುವುದು ಅವರಿಗೇ ಗೊತ್ತಿರಲಿಲ್ಲ.

    4. ನಿರ್ದೇಶಕ ಶಶಾಂಕ್ ಬ್ಯಾನರ್‍ನ ಮೊದಲ ಸಿನಿಮಾ. ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲಾ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಮುಂಗಾರು ಮಳೆ2.. ಹೀಗೆ ಹಿಟ್ ಚಿತ್ರಗಳನ್ನೇ ಹೆಚ್ಚು ನೀಡಿರುವ ಶಶಾಂಕ್ ಈ ಚಿತ್ರದ ನಿರ್ಮಾಪಕರೂ ಹೌದು.

    5. ಅಶಿಕಾ ರಂಗನಾಥ್, ಈ ಚಿತ್ರದಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಚುಟು ಚುಟು ಹಾಡಿನಲ್ಲಿ ಮೈಚಳಿ ಬಿಡಿಸಿದ್ದ ಅಶಿಕಾ, ಈ ಚಿತ್ರದಲ್ಲಿ ಮೈ ಬಿಸಿ ಏರಿಸುವಂತೆ ಕಾಣಿಸಿಕೊಂಡಿದ್ದಾರೆ.

    6. ಚಿತ್ರದಲ್ಲಿ ನಲ್‍ಪಾಡ್ ಗ್ಯಾಂಗ್‍ನ ಪ್ರಸ್ತಾಪವೂ ಇದೆ ಎನ್ನಲಾಗಿದ್ದು, ವಿವಾದಕ್ಕೂ ಕಾರಣವಾಗಿತ್ತು. ಚಿತ್ರದಲ್ಲಿ ಆ ಘಟನೆಯ ನೆರಳು ಇದೆ ಎನ್ನುವ ಸುಳಿವಂತೂ ಕಾಣುತ್ತಿದೆ.

    7. ಅಜಯ್ ರಾವ್‍ಗೆ ಮೊದಲ ಸಿನಿಮಾದ ಅಮ್ಮ ಸುಮಲತಾ ಅಂಬರೀಷ್, 25ನೇ ಸಿನಿಮಾದಲ್ಲೂ ಅಮ್ಮನಾಗಿರುವುದು ವಿಶೇಷ. 

    8. ಅಜಯ್ ರಾವ್‍ಗೆ ಆ್ಯಕ್ಷನ್ ಹೀರೋ ಆಗಬೇಕು ಎನ್ನುವ ಕನಸಿತ್ತು. ಮಾರ್ಷಲ್ ಆಟ್ರ್ಸ್ ಕೂಡಾ ಕಲಿತಿದ್ದ ಅಜಯ್ ರಾವ್‍ಗೆ ಎಕ್ಸ್‍ಕ್ಯೂಸ್ ಮಿ ಚಿತ್ರದ ಸಾಫ್ಟ್ ಹುಡುಗನ ಪಾತ್ರ ಇಮೇಜ್ ಬದಲಿಸಿತ್ತು. ಅವರ ಕನಸು 25ನೇ ಸಿನಿಮಾದಲ್ಲಿ ಈಡೇರಿದೆ.

    9. ಶಶಾಂಕ್ ಮತ್ತು ಅಜಯ್ ರಾವ್ ಅವರದ್ದು ಹ್ಯಾಟ್ರಿಕ್ ಕಾಂಬಿನೇಷನ್. ಈ ಹಿಂದೆ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣಲೀಲಾ ಎರಡರಲ್ಲೂ ಗೆದ್ದಿರುವ ಜೋಡಿ, ಹ್ಯಾಟ್ರಿಕ್ ಜೋಡಿಯಾಗುವ ಕನಸಿನಲ್ಲಿದೆ.

    10. ತಾಯಿಗೆ ತಕ್ಕ ಮಗಕ್ಕೆ ಸಂಗೀತ ನೀಡಿರುವುದು ಜುಡಾ ಸ್ಯಾಂಡಿ. ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್.

  • ತಾಯಿಗೆ ತಕ್ಕ ಮಗ.. ರಿಯಲ್ ಅಮ್ಮನ ಜೊತೆ ಹೇಗಿರ್ತಾರೆ..?

    ajai rao talks about his relationship with his mother

    ತಾಯಿಗೆ ತಕ್ಕ ಮಗ.. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಮೋಹನ್ ದಾಸ್ ಎಂಬ ಫೈರ್‍ಬ್ರಾಂಡ್ ಪಾತ್ರದಲ್ಲಿ ಮಿಂಚಿರುವುದು ಅಜಯ್ ರಾವ್. ತಾಯಿಯಾಗಿ ನಟಿಸಿರುವುದು ಎಕ್ಸ್‍ಕ್ಯೂಸ್ ಮಿಯಲ್ಲಿ ಅಮ್ಮನಾಗಿದ್ದ ಸುಮಲತಾ ಅಂಬರೀಷ್. ಮೊದಲ ಚಿತ್ರದಲ್ಲಿ ತಾಯಿಯಾಗಿದ್ದ ಸುಮಲತಾ, 25ನೇ ಚಿತ್ರಕ್ಕೆ ಮತ್ತೊಮ್ಮೆ ಅಮ್ಮನ ಪಾತ್ರದಲ್ಲಿ ನಟಿಸಿರುವುದು ಅಜಯ್ ರಾವ್ ಖುಷಿಗೆ ಕಾರಣ.

    ಇದೆಲ್ಲದರ ಜೊತೆಗೆ ಈ ಹೆಸರು ಕೇಳಿದ ಮೇಲೆ ಅಜಯ್ ರಾವ್ ತಮ್ಮ ತಾಯಿಯ ಜೊತೆ ಹೇಗಿರ್ತಾರೆ ಅನ್ನೋ ಕುತೂಹಲ ಮೂಡೋದು ಸಹಜ. `ನಾನು ನನ್ನ ಅಮ್ಮನ ಜೊತೆ ತುಂಬಾ ಫ್ರೆಂಡ್ಲಿಯಾಗಿರುತ್ತೇನೆ. ತಮಾಷೆ ಮಾಡಿಕೊಂಡಿರುತ್ತೇನೆ. ನಿರ್ದೇಶಕ ಶಶಾಂಕ್, ಕೆಲವೊಂದು ದೃಶ್ಯಗಳಿಗೆ ನನ್ನ ಮತ್ತು ನನ್ನ ಅಮ್ಮನ ಜೊತೆ ಒಡನಾಟದ ಕೆಲವು ಅಂಶಗಳನ್ನು ಮಿಕ್ಸ್ ಮಾಡಿದ್ದಾರೆ'' ಎಂದಿದ್ದಾರೆ ಅಜಯ್ ರಾವ್.

    ಅಜಯ್ ರಾವ್ ಅವರ ತಾಯಿ ಸಿನಿಮಾವನ್ನು ನೋಡಿ ತುಂಬಾ ಭಾವುಕರಾಗಿದ್ದರಂತೆ. ಸಿನಿಮಾ ನೋಡಿದ ಮೇಲೆ ಕೆಲವು ಗಂಟೆಗಳ ಯಾರೊಂದಿಗೂ ಮಾತನಾಡದೆ ಮೌನವಾಗಿ ಕುಳಿತುಬಿಟ್ಟಿದ್ದರಂತೆ. ಅಷ್ಟರಮಟ್ಟಿಗೆ ಸಿನಿಮಾ ಭಾವನಾತ್ಮಕವಾಗಿ ಮೂಡಿ ಬಂದಿದೆ.

    ಸೆಂಟಿಮೆಂಟ್ ಮತ್ತು ಕಮರ್ಷಿಯಲ್ ಎರಡೂ ಜಾನರ್‍ಗಳಲ್ಲಿ ಸಕ್ಸಸ್ ಕಂಡಿರುವ ನಿರ್ದೇಶಕ ಶಶಾಂಕ್ ಅವರ ಬ್ಯಾನರ್‍ನ ಮೊದಲ ಸಿನಿಮಾ ಇದು. ಅಜಯ್ ರಾವ್ ಜೊತೆ ಶಶಾಂಕ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಅಶಿಕಾ ರಂಗನಾಥ್ ಮತ್ತೊಂದು ಗೆಲುವಿನ ಕನಸಿನಲ್ಲಿದ್ದಾರೆ.

  • ತಾಯಿಗೆ ತಕ್ಕ ಮಗ'ದಲ್ಲಿ ನಲ್‍ಪಾಡ್ ಕೇಸ್ ನೆರಳು

    thayige thakka maga is based on true event

    ನಲ್‍ಪಾಡ್ ಗಲಾಟೆ.. ಈ ವರ್ಷ ಚುನಾವಣೆ ಹೊತ್ತಿನಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಸುದ್ದಿ. ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಮಗ ನಲ್‍ಪಾಡ್, ರೆಸ್ಟೋರೆಂಟ್‍ವೊಂದರಲ್ಲಿ ಅಮಾಯಕ ಯುವಕರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಆ ಘಟನೆಯ ನೆರಳು ತಾಯಿಗೆ ತಕ್ಕ ಮಗ ಚಿತ್ರದಲ್ಲಿದೆಯಾ..? ಈ ಕುರಿತು ನಿರ್ದೇಶಕ ಶಶಾಂಕ್ ನೇರ ಉತ್ತರ ಹೇಳೋದಿಲ್ಲ. ಬಹುಶಃ ಸಿನಿಮಾ ಬಿಡುಗಡೆಗೆ ಮೊದಲು ವಿವಾದವಾಗುವುದು ಅವರಿಗೆ ಇಷ್ಟವೂ ಇರಲಿಲ್ಲ. ಈಗ ಚಿತ್ರ ತೆರೆಗೆ ಬಂದಿದೆ.

    ಚಿತ್ರದ ಟ್ರೇಲರ್ ನೋಡಿದವರಿಗೆ ನಲ್‍ಪಾಡ್ ಕೇಸ್‍ನ ನೆರಳು ಚಿತ್ರದಲ್ಲಿದೆಯಾ ಎಂಬ ಪ್ರಶ್ನೆ ಮೂಡದೇ ಇರದು. ರಾಜಕಾರಣಿ ಮತ್ತು ಅವರ ಕುಟುಂಬದವರು ಜನಸಾಮಾನ್ಯರ ಮೇಲೆ ನಡೆಸುವ ದಬ್ಬಾಳಿಕೆ, ಕ್ರೌರ್ಯದ ಹಲವು ನೈಜ ಘಟನೆಗಳು ಈ ಚಿತ್ರಕ್ಕೆ ಪ್ರೇರಣೆ ಎನ್ನುತ್ತಾರೆ ಶಶಾಂಕ್.

    ಜನಸಾಮಾನ್ಯರಲ್ಲಿ ಇಂತಹ ವರ್ತನೆ ಮಾಡುವವರ ವಿರುದ್ಧ ಆಕ್ರೋಶ ಭುಗಿಲೆದ್ದಿರುತ್ತೆ. ಅಂತಹ ಆಕ್ರೋಶದ ರೂಪವೇ ತಾಯಿಗೆ ತಕ್ಕ ಮಗ.

    ರೆಬಲ್‍ಸ್ಟಾರ್ ಪತ್ನಿ ಸುಮಲತಾ ಅಂಬರೀಷ್, ಇಲ್ಲಿ ರೆಬಲ್ ಅಮ್ಮ. ಮಗ ಅಜಯ್ ರಾವ್ ಪಾತ್ರ, ಹಳೆಯ ಸಿನಿಮಾದ ರೆಬಲ್‍ಸ್ಟಾರ್‍ರನ್ನು ನೆನಪಿಸಿದರೆ ಅಚ್ಚರಿ ಪಡಬೇಡಿ. ಅಶಿಕಾ ರಂಗನಾಥ್.. ಚಳಿಗಾಲವನ್ನು ಬೆಚ್ಚಗಾಗಿಸುವಂತೆ ನಟಿಸಿದ್ದಾರೆ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಸಿನಿಮಾ ಈಗ ತೆರೆಯ ಮೇಲಿದೆ.

  • ತಾಯಿಗೆ ತಕ್ಕ ಮಗನಿಗೆ ಎ ಸರ್ಟಿಫಿಕೇಟಾ..?

    thayige thakka maga gets a certificate

    ನಿರ್ದೇಶಕ ಶಶಾಂಕ್, ಕೌಟುಂಬಿಕ ಸದಭಿರುಚಿ ಚಿತ್ರಗಳ ನಿರ್ದೇಶಕರೆಂದೇ ಹೆಸರಾದವರು. ಅಂತಹ ಶಶಾಂಕ್ ಚಿತ್ರ `ತಾಯಿಗೆ ತಕ್ಕ ಮಗ'ನಿಗೆ ಎ ಸರ್ಟಿಫಿಕೇಟ್ ಕೊಡೋಕೆ ಮುಂದಾಗಿದೆ ಸೆನ್ಸಾರ್ ಮಂಡಳಿ. ಚಿತ್ರದಲ್ಲಿ ಆ್ಯಕ್ಷನ್ ಸೀನ್‍ಗಳು ಹೆಚ್ಚಿವೆ ಅನ್ನೋದು ಸೆನ್ಸಾರ್ ಅಧಿಕಾರಿಗಳ ವಾದ.

    ಅವರು ಹೇಳಿದ ಸೀನ್‍ಗಳನ್ನೆಲ್ಲ ಕತ್ತರಿಸಿಬಿಟ್ಟರೆ, ಯು/ಎ ಪ್ರಮಾಣ ಪತ್ರ ಕೊಡ್ತಾರಂತೆ. ಅವರು ಹೇಳಿದಂತೆ ಮಾಡಿದರೆ ಅರ್ಧ ಸಿನಿಮಾ ಕತ್ತರಿಸಬೇಕು. ಸೆನ್ಸಾರ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದಿರುವ ಶಶಾಂಕ್, ಸಿಡಿದೇಳುವ ಸೂಚನೆ ಕೊಟ್ಟಿದ್ದಾರೆ. ಕೌಟುಂಬಿಕ ಕಥಾ ಹಂದರ ಇರುವ ಸಿನಿಮಾಗೆ ಎ ಸರ್ಟಿಫಿಕೇಟ್ ಕೊಟ್ಟರೆ ನಿರ್ಮಾಪಕರ ಗತಿ ಏನು ಅನ್ನೋದು ಶಶಾಂಕ್ ಪ್ರಶ್ನೆ.

    ಸುಮಲತಾ ಅಂಬರೀಷ್ ತಾಯಿಯಾಗಿ, ಅಜೇಯ್ ರಾವ್ ಮಗನಾಗಿ, ಆಶಿಕಾ ರಂಗನಾಥ್ ಸೊಸೆಯಾಗಿ ನಟಿಸಿರುವ ಸಿನಿಮಾ ಇದು. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಭರ್ಜರಿ ಸದ್ದು ಮಾಡುತ್ತಿವೆ.

     

  • ತಾಯಿಗೆ ತಕ್ಕ ಮಗನಿಗೆ ಕಿಚ್ಚನ ಪವರ್

    sudeep gives voice over to thayige thakka maga

    ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನ, ನಿರ್ಮಾಣದ ಸಿನಿಮಾ. ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ನಂತರ ಅಜೇಯ್ ರಾವ್ ಮತ್ತು ಶಶಾಂಕ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ. ಚಿತ್ರದ ಪ್ರಮುಖ ತಾಯಿಯ ಪಾತ್ರದಲ್ಲಿರೋದು ಸುಮಲತಾ. ಮೊದಲೇ ಅಣ್ಣಾವ್ರ ಹಳೆಯ ಸೂಪರ್ ಹಿಟ್ ಚಿತ್ರದ ಟೈಟಲ್. ಹೀಗೆ ಹಲವು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗೆ ಈಗ ಇನ್ನೊಂದು ಪವರ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

    ತಾಯಿಗೆ ತಕ್ಕ ಮಗ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಸುದೀಪ್. ಆಶಿಕಾ ರಂಗನಾಥ್ ಚಿತ್ರದ ನಾಯಕಿ. ಆಗಸ್ಟ್ 31ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು, ಅದಕ್ಕೊಂದು ಟೀಸರ್ ಕೂಡಾ ರಿಲೀಸ್ ಮಾಡಿದ್ದಾರೆ ಶಶಾಂಕ್.

  • ದಚ್ಚುಗೆ ಸುಮಲತಾ ಆಶೀರ್ವಾದ ನಿಜವಾಗೋ ಕಾಲ

    sumalatha's wishes to darshan

    ಯಜಮಾನ ನೋಡಲು ಕಾಯುತ್ತಿದ್ದೇನೆ. ಅನುಮಾನವೇ ಇಲ್ಲ. ನೀನು ಮತ್ತೊಮ್ಮೆ ಬಾಕ್ಸಾಫೀಸ್ ಬಾಸ್ ಆಗ್ತೀಯ... ದರ್ಶನ್‍ಗೆ ಇಂಥಾದ್ದೊಂದು ಹಾರೈಕೆಯ ಆಶೀರ್ವಾದ ಮಾಡಿದವರು ದರ್ಶನ್ ಪ್ರೀತಿಯ ಅಮ್ಮ ಸುಮಲತಾ ಅಂಬರೀಷ್. 

    ಸುಮಲತಾ ಅವರ ಹಾರೈಕೆ ಸುಳ್ಳಾಗಿಲ್ಲ. ಅನುಮಾನವೇ ಇಲ್ಲದಂತೆ ನಿಜವಾಗೋ ಕಾಲ ಬರುವಂತಿದೆ. ಯಜಮಾನ ಚಿತ್ರದ ಬಗ್ಗೆ ಪ್ರೇಕ್ಷಕರು ವ್ಹಾವ್ ಡಿ ಬಾಸ್ ಎಂದರೆ, ವಿಮರ್ಶಕರು ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಎಂದು ಮೆಚ್ಚುಗೆಯ ಷರಾ ಬರೆದಿದ್ದಾರೆ.

    ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಯಜಮಾನ ಚಿತ್ರ ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ. ಶುಕ್ರವಾರ ಮುಂಜಾನೆಯಿಂದಲೇ ಶುರುವಾದ ಯಜಮಾನನ ಸೌಂಡು ಭರ್ಜರಿಯಾಗಿದೆ. ಹರಿಕೃಷ್ಣ, ಮೊದಲ ಬಾರಿಗೇ ನಿರ್ದೇಶಕರಾಗಿ ಗೆದ್ದಿದ್ದಾರೆ. 

  • ದರ್ಶನ್ ಜೊತೆ ತಮ್ಮ ಬರ್ತಾನೆ..!

    amar movie thetrical trailer releasing on march 1st with yajamana screening

    ಯಜಮಾನ ರಿಲೀಸ್ ಆಗೋದು ಮಾರ್ಚ್ 1ಕ್ಕೆ. ದರ್ಶನ್ ಅಭಿನಯದ ತಾರಕ್ ರಿಲೀಸ್ ಆಗಿದ್ದು ಸೆಪ್ಟೆಂಬರ್ 29, 2017ರಲ್ಲಿ. ಅದಾದ ನಂತರ ದರ್ಶನ್ ಅಭಿನಯದ ಚಿತ್ರ ರಿಲೀಸ್ ಆಗಿಲ್ಲ. 2018 ಅಂತೂ ದರ್ಶನ್ ಅಭಿಮಾನಿಗಳಿಗೆ ಬರ. ಆ ಬರ ಮಾರ್ಚ್ 1ಕ್ಕೆ ನೀಗುತ್ತಿದೆ.

    ಈಗ ದರ್ಶನ್ ಅಭಿನಯದ ಸಿನಿಮಾ ಜೊತೆಗೆ ದರ್ಶನ್ ನನ್ನ ತಮ್ಮ ಎಂದು ಹೆಮ್ಮೆಯಿಂದ ಹೇಳಿಕೊಳ್ಳೋ ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರದ ಟ್ರೇಲರ್ ಕೂಡಾ ಬರಲಿದೆ.

    ಯಜಮಾನ ಚಿತ್ರದ ಜೊತೆಯಲ್ಲೇ ಅಭಿಷೇಕ್ ಅಂಬರೀಷ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯಜಮಾನ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿರೋ ತಾನ್ಯ ಹೋಪ್, ಅಮರ್‍ಗೆ ಹೀರೋಯಿನ್. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾಗೆ ನಾಗಶೇಖರ್ ನಿರ್ದೇಶಕ. ಅಂದಹಾಗೆ ಅಮರ್ ಚಿತ್ರದಲ್ಲಿ ದರ್ಶನ್ ಕೂಡಾ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.