` mungaru male, - chitraloka.com | Kannada Movie News, Reviews | Image

mungaru male,

  • 2006 ಮುಂಗಾರು ಮಳೆ.. 2017 ಚಮಕ್..!

    ganesh in chamak, mungaru male

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಚಿತ್ರ ಪದೇ ಪದೇ ಮುಂಗಾರು ಮಳೆಯನ್ನು ನೆನಪಿಸುತ್ತಿದೆ. ಕಾಮಿಡಿ ಟೈಂ ಅವರನ್ನು ಗೋಲ್ಡರ್ ಸ್ಟಾರ್ ಮಾಡಿದ್ದೇ ಮುಂಗಾರು ಮಳೆ. ಈಗ.. 11 ವರ್ಷಗಳ ನಂತರ ಮತ್ತೆ ಮತ್ತೆ ಮುಂಗಾರು ಮಳೆ ನೆನಪಾಗೋಕೆ ಕಾರಣವೂ ಇದೆ.

    ಮುಂಗಾರು ಮಳೆ ರಿಲೀಸ್ ಆಗಿದ್ದು 2006ರ ಡಿಸೆಂಬರ್ 29ರಂದು. ಈಗ 11 ವರ್ಷಗಳ ನಂತರ ಚಮಕ್ ರಿಲೀಸ್ ಆಗುತ್ತಿರುವುದು ಕೂಡಾ ಡಿ.29ರಂದು. 2006ರ ಡಿಸೆಂಬರ್ ಕೂಡಾ ಶುಕ್ರವಾರವೇ ಆಗಿತ್ತು. ಈ ಬಾರಿಯೂ ಶುಕ್ರವಾರವೇ ಚಮಕ್ ರಿಲೀಸ್ ಆಗುತ್ತಿದೆ.

    ಅಂದಹಾಗೆ ಮುಂಗಾರು ಮಳೆ ರಿಲೀಸ್ ಆದ ಕೆಲವೇ ದಿನಗಳಲ್ಲಿ ದುನಿಯಾ ವಿಜಯ್ ಅಭಿನಯದ ದುನಿಯಾ ರಿಲೀಸ್ ಆಗಿತ್ತು. ಈ ಬಾರಿಯೂ ಪರಿಸ್ಥಿತಿ ಹಾಗೆಯೇ ಇದೆ. ಚಮಕ್ ರಿಲೀಸ್ ಆದ ನಂತರದ ಕೆಲವೇ ದಿನಗಳಲ್ಲಿ ದುನಿಯಾ ವಿಜಿ ಅಭಿನಯದ ಕನಕ ಬಿಡುಗಡೆಯಾಗುತ್ತಿದೆ. 

    ಒಟ್ಟಿನಲ್ಲಿ ಗಣೇಶ್ ಚಮಕ್‍ಗೆ ಅದೃಷ್ಟ ಕಣ್ಣ ಮುಂದೆ ನರ್ತಿಸುತ್ತಿದೆ. ಚಿತ್ರದ ಟೀಸರ್, ಅವಲಕ್ಕಿ ಪವಲಕ್ಕಿ ಹಾಡು ಹಿಟ್ ಆಗಿರುವುದು ಒಂದು ಕಾರಣವಾದರೆ, ಚಮಕ್‍ಗೆ ಸುನಿ ನಿರ್ದೇಶನದ ಚಮಕ್ಕು ಬೇರೇ ಇದೆ. ಗಣೇಶ್‍ಗೆ ಚಮಕ್ ಮತ್ತೊಂದು ಮುಂಗಾರು ಮಳೆಯಾಗಲಿ. ಸುನಿಗೆ ಇನ್ನೊಂದು ಸಕ್ಸಸ್ ಸ್ಟೋರಿಯಾಗಲಿ.

  • 29-12-2006... ಆ ದಿನ ಆ ಚಿತ್ರವೂ ಹುಟ್ತು.. ಆ ಸ್ಟಾರ್‍ಗಳೂ ಹುಟ್ಟಿಕೊಂಡ್ರು..!

    same day that year mungaru male gave birth to many stars

    ಈಗ ಥಿಯೇಟರಿನಲ್ಲಿ, ದೇಶದಾದ್ಯಂತ ಕೆಜಿಎಫ್‍ನದ್ದೇ ಸದ್ದು. 100 ಕೋಟಿ ದಾಟಿ ಮುನ್ನುಗ್ಗುತ್ತಿರುವ ಕೆಜಿಎಫ್, ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇಂತಹ ಸಮಯದಲ್ಲೇ ನೆನಪಾಗುತ್ತಿದೆ ಮುಂಗಾರು ಮಳೆ. ಈ ದಿನ ಅಂದ್ರೆ ಡಿಸೆಂಬರ್ 29, ಮುಂಗಾರು ಮಳೆ ರಿಲೀಸ್ ಆದ ದಿನ. 2006ರಲ್ಲಿ ರಿಲೀಸ್ ಆಗಿದ್ದ ಮುಂಗಾರು ಮಳೆ, ದಾಖಲೆಗಳ ಸುನಾಮಿಯನ್ನೇ ಸೃಷ್ಟಿಸಿತ್ತು. ಆ ಚಿತ್ರದಿಂದ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಊಹೂಂ.. ರಾತ್ರೋರಾತ್ರಿ ಅನ್ನುವುದು ತಪ್ಪಾಗಬಹುದು. ಆ ಚಿತ್ರದಿಂದ ಸ್ಟಾರ್ ಆದ ಪ್ರತಿಯೊಬ್ಬರೂ ವರ್ಷಗಳ ಕಾಲ ಬೆವರು ಸುರಿಸಿದ್ದರು. ತಮ್ಮ ಪ್ರತಿಭೆಗೆ ಸಾಣೆ ಹಿಡಿದಿದ್ದರು.

    ಮುಂಗಾರು ಮಳೆ ಸ್ಟಾರ್ ನಂ. 1 : ಯೋಗರಾಜ್ ಭಟ್

    ಆ ಚಿತ್ರದಿಂದ ಸ್ಟಾರ್ ಆದವರು ನಿರ್ದೇಶಕ ಯೋಗರಾಜ ಭಟ್. ಅದು ಭಟ್ಟರ ನಿರ್ದೇಶನದ 3ನೇ ಸಿನಿಮಾ. ಮುಂಗಾರು ಮಳೆ, ಮೊದಲ ಸಕ್ಸಸ್. ತಡೆದ ಮಳೆ ಜಡಿದು ಬಡಿದಿತ್ತು. ಅದಾದ ಮೇಲೆ ಭಟ್ಟರು ಹಲವು ಹಿಟ್ ಕೊಟ್ಟಿರಬಹುದು. ಮುಂಗಾರು ಮಳೆಯೇ ಬೇರೆ.

    ಮುಂಗಾರು ಮಳೆ ಸ್ಟಾರ್ ನಂ. 2 : ಗಣೇಶ್

    ಹುಡುಗಾಟ, ಚೆಲ್ಲಾಟದಿಂದ ಸಕ್ಸಸ್ ಸಿಕ್ಕಿದ್ದರೂ, ಗಣೇಶ್‍ರನ್ನು ಗೋಲ್ಡನ್ ಸ್ಟಾರ್ ಆಗಿಸಿದ್ದು ಮುಂಗಾರು ಮಳೆ. ಅಭಿಮಾನಿಗಳು ಹೃದಯವನ್ನು ಪರ ಪರ ಅಂತ ಕೆರೆದುಕೊಂಡು, ಆ ಗಾಯವನ್ನು ವಾಸಿ ಮಾಡಿಕೊಳ್ಳೋಕೆ ಗಣೇಶ್ ಅನ್ನೋ ಮುಲಾಮು ಹಚ್ಚಿಕೊಂಡ್ರು.

    ಮುಂಗಾರು ಮಳೆ ಸ್ಟಾರ್ ನಂ. 3 : ಪೂಜಾ ಗಾಂಧಿ/ಸಂಜನಾ ಗಾಂಧಿ

    ಇಂದಿಗೂ ಪೂಜಾ ಗಾಂಧಿಯನ್ನು ಕನ್ನಡಿಗರು ಮಳೆ ಹುಡುಗಿ ಅಂಥಾ ಗುರುತಿಸ್ತಾರೆ. ಪೂಜಾ ಆ ಚಿತ್ರದ ಮೂಲಕ ಕನ್ನಡದಲ್ಲಿಯೇ ನೆಲೆ ನಿಂತರು. ಕನ್ನಡತಿಯೇ ಆಗಿ ಹೋದರು. ಆ ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ಪೂಜಾ ಗಾಂಧಿಯ ಹೆಸರು ಸಂಜನಾ ಗಾಂಧಿ ಎಂದೇ ಇತ್ತು. ನಂತರ ಅವರು ಹೆಸರು ಬದಲಿಸಿಕೊಂಡರು.

    ಮುಂಗಾರು ಮಳೆ ಸ್ಟಾರ್ ನಂ. 4 : ಮನೋ ಮೂರ್ತಿ

     

    ಮನೋಮೂರ್ತಿಗಳಿಗೆ ಸಕ್ಸಸ್ ಹೊಸದಾಗಿರಲಿಲ್ಲ. ಈ ಹಿಂದೆಯೂ ಗೆದ್ದಿದದವರೇ. ಆದರೆ, ಮುಂಗಾರು ಮಳೆಯ ಗೆಲುವು, ಸಂಗೀತದ ಯಶಸ್ಸು ಕೊಟ್ಟ ಕಿರೀಟವೇ ಬೇರೆ.

     

    ಮುಂಗಾರು ಮಳೆ ಸ್ಟಾರ್ ನಂ. 5 : ಸೋನು ನಿಗಮ್

     

    ಅನಿಸುತಿದೆ ಯಾಕೋ ಇಂದು.. ಈ ಹಾಡನ್ನು ಸೋನು ನಿಗಮ್ ಅನಿಸುತಿದೆ ಎಂದು ಹಾಡಿದರೋ.. ಹನಿಸುತಿದೆ ಎಂದು ಹಾಡಿದರೋ.. ಇಂದಿಗೂ ಗೊಂದಲಗಳಿವೆ. ಅದಕ್ಕೂ ಮೊದಲು ಕನ್ನಡದಲ್ಲಿ ಸೋನು ನಿಗಮ್ ಹಾಡಿದ್ದವರೇ. ಆದರೆ, ಮುಂಗಾರು ಮಳೆ, ಸೋನು ನಿಗಮ್ ಅವರಿಗೆ ಕನ್ನಡಿಗರ ಹೃದಯದಲ್ಲಿ ಸ್ಥಾನ ಕೊಡಿಸಿತು.

     

    ಮುಂಗಾರು ಮಳೆ ಸ್ಟಾರ್ ನಂ. 6 - ಜಯಂತ ಕಾಯ್ಕಿಣಿ

     

    ಅಫ್‍ಕೋರ್ಸ್, ಕಾಯ್ಕಿಣಿಯವರು ಕನ್ನಡಿಗರಿಗೆ ಹೊಸಬರಾಗಿರಲಿಲ್ಲ. ಅಷ್ಟು ಹೊತ್ತಿಗಾಗಲೇ ಕಾಯ್ಕಿಣಿ, ಕನ್ನಡ ಸಾಹಿತ್ಯ ಲೋಕದ ಸ್ಟಾರ್ ಆಗಿದ್ದವರು. ಕೆಲವು ಚಿತ್ರಗಳಿಗೂ ಕೆಲಸ ಮಾಡಿದ್ದರು. ಆದರೆ, ಕಾಯ್ಕಿಣಿ ಅನ್ನೋ ಹೆಸರು ಮನೆ ಮನೆಗೂ ತಲುಪಿದ್ದು ಮುಂಗಾರು ಮಳೆ ಚಿತ್ರದ ಮೂಲಕ.

     

    ಮುಂಗಾರು ಮಳೆ ಸ್ಟಾ ನಂ. 7 - ಎಸ್. ಕೃಷ್ಣ

     

    ಆ ಚಿತ್ರದಿಂದ ಹುಟ್ಟಿದ್ದ ಇಬ್ಬರು ಸ್ಟಾರ್‍ಗಳಲ್ಲಿ ಒಂದು ಜೋಗದ ಜಲಪಾತ. ಮತ್ತೊಂದು ಆ ಜಲಪಾತವನ್ನು ವಿಭಿನ್ನವಾಗಿ ತೋರಿಸಿದ ಕೃಷ್ಣ. ಮುಂಗಾರು ಮಳೆ ಚಿತ್ರದ ಛಾಯಾಗ್ರಹಕ ಕೃಷ್ಣ, ಮುಂಗಾರು ಮಳೆಯ ಅತಿ ದೊಡ್ಡ ಸ್ಟಾರ್.

     

    ಮುಂಗಾರು ಮಳೆ ಸ್ಟಾ ನಂ. 8 - ಪ್ರೀತಂ ಗುಬ್ಬಿ

     

    ಮುಂಗಾರು ಮಳೆ ಚಿತ್ರದ ಕಥೆಯಲ್ಲಿ ಭಟ್ಟರ ಜೊತೆಗಿದ್ದವರು ಪ್ರೀತಂ ಗುಬ್ಬಿ. ಚಿತ್ರದ ನಾಯಕನ ಹೆಸರೂ ಪ್ರೀತಮ್. ಅದಾದ ಮೇಲೆ ಪ್ರೀತಮ್ ಗುಬ್ಬಿ, ನಿರ್ದೇಶಕರಾಗಿಯೂ ಗೆದ್ದರು. ಮೊದಲ ಹೆಜ್ಜೆ ಮುಂಗಾರು ಮಳೆ.

     

    ಮುಂಗಾರು ಮಳೆ ಸ್ಟಾ ನಂ. 9 - ಜಯಣ್ಣ, ಭೋಗೇಂದ್ರ

     

    ಮುಂಗಾರು ಮಳೆ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡಿದ್ದು ಜಯಣ್ಣ ಮತ್ತು ಭೋಗೇಂದ್ರ ಜೋಡಿ. ಅವರಿಬ್ಬರೂ ಆಗ ತಾನೇ ಚಿತ್ರರಂಗದಲ್ಲಿ ವಿತರಕರಾಗಿ ಬೆಳೆಯುತ್ತಿದ್ದವರು. ಮುಂಗಾರು ಮಳೆ ಚಿತ್ರ, ಕನ್ನಡಕ್ಕೆ ಜನುಮದ ಜೋಡಿಯನ್ನು ಅದ್ಭುತವಾಗಿ ನೆಲೆ ನಿಲ್ಲುವಂತೆ ಮಾಡಿತು.

     

    ಮುಂಗಾರು ಮಳೆ ಸ್ಟಾ ನಂ. 10 - ಇ. ಕೃಷ್ಣಪ್ಪ

     

    ಆ ಚಿತ್ರದಿಂದ ಸ್ಟಾರ್ ಆದವರು ನಿರ್ಮಾಪಕ ಇ. ಕೃಷ್ಣಪ್ಪ. ಮುಂಗಾರು ಮಳೆ ಮಾಡುವ ಹೊತ್ತಿಗೆ ಭಟ್ಟರಾಗಲೀ, ಗಣೇಶ್ ಆಗಲೀ ದೊಡ್ಡ ಸ್ಟಾರ್‍ಗಳಲ್ಲ. ಈಗ ಬಿಡಿ.. ಇಬ್ಬರಿಗೂ ತಮ್ಮ ಹೆಸರಿನಿಂದಲೇ ಚಿತ್ರವನ್ನು ಥಿಯೇಟರಿನಲ್ಲಿ ನಿಲ್ಲಿಸುವ ಶಕ್ತಿಯಿದೆ. ಆದರೆ.. 12 ವರ್ಷಗಳ ಹಿಂದೆ ಹೀಗಿರಲಿಲ್ಲ. ಇವತ್ತಿನ ಈ ಅಷ್ಟೂ ಸ್ಟಾರ್‍ಗಳ ಸೃಷ್ಟಿಕರ್ತ ಇ. ಕೃಷ್ಣಪ್ಪ ಎಂದರೆ ತಪ್ಪಾಗಲಿಕ್ಕಿಲ್ಲ.

  • Curtain Raiser of Mungaru Male 2 Released

    mungaru male 2 curatain raiser released

    The curtain raiser of Ganesh starrer 'Mungaru Male 2' was released on Saturday night. The curtain release is not only in book form but also in video form. The video form is available in You tube.

    The curtain raiser was released by journalist Ravindra Joshi in the first press meet organised in Bangalore. Ganesh along with Shilpa Ganesh, director Shashank, producer Gangadhar and others were present during the occasion.

    'Mungaru Male 2' stars Ganesh, Ravichandran, Aindrita Ray and others in prominent roles. Shashank is the director, while Arjun Janya has composed the songs for the film. The film is scheduled for a September 09th release.

    Mungaru Male 2 Movie Gallery - View

    Also Read

    Mungaru Male2 Expected to Take a Mega Opening 

    Mungaru Male 2 Gets U Certificate

    Gokul Films To Release Mungaru Male 2

    Mungaru Male 2 To Release In 100 plus Centers Overseas

    Mungaru Male 2 Trends In Top

    Mungaru Male 2 Songs Released

    Mungaru Male 2 Official Teaser From Friday

    Mungaru Male 2 Release On September 9th - Exclusive

    Shraddha Srinath Plays A Cameo In Mungaru Male 2

    Stars Promote Mungaru Male 2

    Mungaru Male 2 Teaser On June 5th

    Mungaru Male 2 and Jackie Chan

    Ganesh to Slovenia for Mungaru Male2

    Neha Shetty Heroine for Mungaru Male 2

    Mungaru Male 2 Launched

    Ravichandran Joins Mungaru Male 2 - Exclusive

    Mungaru Male 2 Song Recording Starts

  • Mungaru Male 2 Shooting in April - Exclusive

    mungaru male 2 image

    Ganesh starrer 'Mungaru Male 2' which is being directed by well known director Shashank is all set to be launched in the month of April. Already Shashank has completed the script work of the film and is waiting for Ganesh's date as well as as his latest film 'Krishna Leela' to release. Ganesh is currently busy with 'Style King' and 'Zoom' and will be free by April. Meanwhile, Shashank is also looking forward for the release of his latest film 'Krishna Leela'. The film will be releasing on the 20th of March and Shashank is planning to move on to 'Mungaru Male 2' after that.

    Shashank is not only the director who is looking forward to work with Ganesh. Even Yogaraj Bhatt has announced a film with Ganesh and is hoping to start the film in April once he is thorough with the release of 'Vaasthu Prakaara'. With two films in hand, which one will Ganesh accomodate his dates first is yet to be seen.

  • Mungaru Male2 Gets Fantastic Response at Australia - Exclusive

    mungaru male2 image

    Golden star Ganesh starrer Mungaru Male 2 has taken a very good response in Australia. Movie got simultaneous release in Australia and USA.

    Mungaru Male 2 is directed by Shashank and produced by Gangadhar. Ganesh, Neha Shetty, V Ravichandran, Aindrita Ray are in the lead role.

    In Melbourne five shows was held and all shows was houseful. Same result was at Sydney. 

    Speaking to chitraloka Roopesh from Australia said First time we have good booking before release. Due to some technical issues we have to cancel a show. But people have enjoyed the movie. Its visuals are great and also music.

    Also See

    Mungaru Male 2 Movie Review

     

  • Overseas Market - Mungaru Male Super - Atlanta Nagendra

    mungaru male image

    In 2007, Mungaru Male was released in overseas market. This movie was screened almost all over the world. This was universal hit all over. Overseas audiences gave thumbs up for this movie (Europe, UK and Singapore) were added to the list of countries in the overseas market. 

    After this success, everyone from the KFI tried to release their movies abroad and actually crashed the already established market. Towards the end of 2008, recession started in USA, it affected the screening of Kannada movies. 

    (Article by Atlanta Nagendra)

    (to be continued)

    Also See

    Overseas Market - NRI Talents To Sandalwood - Atlanta Nagendra

    Overseas Market - KS Prasad is First Distributor Writes Nagendra

    Overseas Market For Kannada Movies - Atlanta Nagendra

    Chitraloka Updates Round The Clock - Atlanta Nagendra

     

  • Yogaraj Bhatt And Ganesh Join Hands

    ganesh, yogaraj bhat image

    After 'Mungaru Male' and 'Galipata', the hit combination of Yogaraj Bhatt and Ganesh has joined hands for yet another film and the film is all set to go on floors in the month of April. Bhatt and Ganesh's last film together was 'Galipata' which was released seven years back. After that there was news that the duo may join hands together yet again. But both were busy with their prior commitments. Now the duo has decided to work together and Bhatt is expected to start the work of the film after 'Vaasthu Prakara' gets released.

    Though not much details about the film has been divulged, it is being said that B Suresha will be producing the film.

  • ಗಣೇಶ್ ಮನೆಯಲ್ಲಿ ಹೊಸ ದೇವದಾಸ್..!

    devdas at ganesh house

    ಗಣೇಶ್​ಗೂ, ದೇವದಾಸ್​ಗೂ ಅವಿನಾಭಾವ ಸಂಬಂಧ. ಅದು ಮುಂಗಾರು ಮಳೆ ಎಫೆಕ್ಟ್. ಆ ಚಿತ್ರದಲ್ಲಿ ದೇವದಾಸು ಅನ್ನೋ ಮೊಲದ ಪಾತ್ರ ತುಂಬಾನೇ ಹಿಟ್ ಆಗಿತ್ತು. ಒಂದರ್ಥದಲ್ಲಿ ದೇವದಾಸ್ ಚಿತ್ರದ ಇನ್ನೊಂದು ಪೋಷಕ ನಟ ಅಂದರೆ ತಪ್ಪಾಗಲಿಕ್ಕಿಲ್ಲ. 

    ಗಣೇಶ್ ತಮ್ಮ ಮಗ ವಿಹಾನ್​ಗೆ ಒಂದು ಪುಟ್ಟ ಮೊಲವನ್ನ ಗಿಫ್ಟಾಗಿ ಕೊಟ್ಟಿದ್ದಾರೆ. ಆ ಮೊಲಕ್ಕೆ ದೇವದಾಸ್ ಅಂತಾನೇ ಹೆಸರಿಟ್ಟಿದ್ದಾರೆ.  ಮುಂಗಾರು ಮಳೆಯಲ್ಲಿ ದೇವದಾಸ್​ ಮೊಲಕ್ಕೆ ಗಣೇಶ್ ಹೊಡೆದಿದ್ದ ಡೈಲಾಗ್​ಗಳು ಹಿಟ್ ಆಗಿದ್ದವು. ಗಣೇಶ್ ಮಗ ವಿಹಾನ್ ಕೂಡಾ, ಅವನ ದೇವದಾಸ್​ಗೆ ಹಾಗೇ ಡೈಲಾಗ್ ಹೊಡೀತಾನಾ..? ಗೋಲ್ಡನ್ ಸ್ಟಾರೇ ಹೇಳಬೇಕು.

  • ಜೈ ಮುಂಗಾರು ಮಳೆ.. ಜೈ ಜನತೆ.. ಜೈ ಜೀವನ.. : ಗಣಪ-ಯೋಗ್ರಾಜ್ ಭಟ್

    Mungaru Male Completes 14 Years

    ಡಿಸೆಂಬರ್ 29, 2004. ಆ ಚಿತ್ರವೂ ರಿಲೀಸ್ ಆಗಿತ್ತು. ಇಬ್ಬರು ಸ್ಟಾರ್‍ಗಳೂ ಉದಯಿಸಿದ್ದರು. ಆ ಚಿತ್ರಕ್ಕೀಗ 14ನೇ ವರ್ಷದ ಮುಂಗಾರು. ಕನ್ನಡ ಚಿತ್ರರಂಗದಲ್ಲಿ ಸಿಡಿಲು, ಗುಡುಗು ಇಲ್ಲದೆಯೇ ಮಿಂಚು ಹರಿಸಿದ, ದಾಖಲೆಗಳ ಪ್ರವಾಹ ಸೃಷ್ಟಿಸಿದ ಮುಂಗಾರು ಮಳೆಯ 14ನೇ ಹುಟ್ಟುಹಬ್ಬವನ್ನು ಯೋಗರಾಜ್ ಭಟ್ ಮತ್ತು ಗಣೇಶ್ ಇಬ್ಬರೂ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

    ನಾವಿಬ್ಬರೂ.. ಜೊತೆಗೆ ಇಡೀ ತಂಡ

    ಆಗ ತಾನೇ ಕಣ್ತೆರೆದ

    ಶಿಶುಗಳಂತೆ ಮಂಗಾರು ಮಳೆ

    ಚಿತ್ರ ಮಾಡಿ, ಜನತೆಗೆ ಅರ್ಪಿಸಿ

    ಇಂದಿಗೆ 14 ವರ್ಷಗಳಾಗಿವೆ.

    ಚಿತ್ರಕ್ಕಷ್ಟೇ ಅಲ್ಲದೆ.. ನಮ್ಮಿಬ್ಬರಿಗೂ

    ಇದು ಒಂದು ರೀತಿಯ ಹುಟ್ಟುಹಬ್ಬ

    ಕೆಲಸ ಕಲಿಸಿದ, ಬದುಕು ಕೊಟ್ಟ

    ಪ್ರೀತಿ ತಿಳಿಸಿದ, ನಾಡು ನಲಿಸಿದ

    ಈ ಪ್ರೇಕ್ಷಕರ ಆಸ್ತಿಯಂತಹ

    ಮಹಾನ್ ಚಿತ್ರಕ್ಕೆ ನಮ್ಮಿಬ್ಬರ

    ದೀರ್ಘದಂಡ ನಮಸ್ಕಾರಗಳು

    ಜೈ ಮುಂಗಾರು ಮಳೆ..

    ಜೈ ಜನತೆ..

    ಜೈ ಜೀವನ..

    ಗಣಪ-ಯೋಗ್ರಾಜ್ ಭಟ್