` kaushlaya supraja rama, - chitraloka.com | Kannada Movie News, Reviews | Image

kaushlaya supraja rama,

  • Kousalya Supraja Rama Movie Review, Chitraloka Rating 4/5

    Kousalya Supraja Rama Triumphs as a Must-Watch Family Drama

    Film: Kousalya Supraja Rama

    Director: Shashank

    Star Cast: Darling Krishna, Brinda Acharya, Milana Nagaraj, Rangayana Raghu, Nagabhushana, Sudha Belawadi

    Language: Kannada

    Duration: 147 minutes

    Certificate: U/A

    Kousalya Supraja Rama (Kousalya's son Rama) is a heartwarming and captivating film that strikes a perfect balance between entertainment and emotional depth. Directed by the talented Shashank, this movie is a delightful family drama that cleverly challenges gender biases without being preachy.

    At its core, the story revolves around Rama (played with endearing charm by Darling Krishna), who starts off as a male chauvinist with a belief in every imaginable male privilege as his birthright. However, fate presents him with a life-altering challenge that forces him to confront his own prejudices and transform into a real man. Revealing the unexpected twists in the plot would do injustice to the movie's brilliance, but it suffices to say that it tugs at your heartstrings for all the right reasons and at the right moments.

    The central figure in Rama's journey of self-discovery is his mother, whose character evolves from a loving housewife to a mentor guiding her son on the right path. Sudha Belawadi's portrayal of this innocence-personified mother is truly exemplary, delivering an outstanding performance.

    Darling Krishna skillfully embraces the character's transformative arc, breathing life into it and making it his own. Brinda Acharya adds a charming presence to the film, her subtle expressions a joy to behold. Nagabhushana, as Rama's cousin and close companion Santhu, plays the role with such conviction that it feels like he was tailor-made for it. On the other hand, Rangayana Raghu's role may have been a bit exaggerated, but his performance could have benefitted from a touch more sobriety. Lastly, Milana Nagaraj's sudden appearance in a stunning role, complemented by an equally fabulous performance, adds another layer of brilliance to the film.

    The technical aspects of the movie are top-notch, with cinematographer Sugnan and editor Giri Mahesh showcasing their prowess. Arjun Janya's music works its magic, especially the soothing melodies that add to the film's overall charm. While the film might have missed a few lavish set-pieces that could have added more weight to it, it still looks and feels grand enough for the story it tells.

    In conclusion, Kousalya Supraja Rama hits the bull's eye in achieving its goals. It is an endearing film that not only entertains but also leaves a lasting impact. A must-watch for families, this movie offers a powerful message wrapped in a beautifully crafted narrative.

    -S Shyam Prasad

  • ಕೌಸಲ್ಯ ಸುಪ್ರಜಾ ರಾಮ ನೋಡಿದವರೆಲ್ಲ ಭಲೇ ಭಲೇ ಎಂದರು..

    ಕೌಸಲ್ಯ ಸುಪ್ರಜಾ ರಾಮ ನೋಡಿದವರೆಲ್ಲ ಭಲೇ ಭಲೇ ಎಂದರು..

    ಕೌಸಲ್ಯ ಸುಪ್ರಜಾ ರಾಮ. ನಾಳೆ ರಿಲೀಸ್ ಆಗುತ್ತಿದೆ. ರಿಲೀಸ್ ಆಗುವುದಕ್ಕೂ ಮೊದಲು ಪೇಯ್ಡ್ ಪ್ರೀಮಿಯರ್ ಶೋ ಇಟ್ಟುಕೊಳ್ಳಲಾಗಿದ್ದು, ಸಿನಿಮಾ ನೋಡಿದವರೆಲ್ಲ ಚಿತ್ರವನ್ನು ಹೊಗಳುತ್ತಿದ್ದಾರೆ. ಎಲ್ಲ ಪುರುಷರು ತಮ್ಮ ಕುಟುಂಬದವರ ಜೊತೆಯಲ್ಲಿ ಕುಳಿತು ನೋಡಲೇಬೇಕಾದ ಸಿನಿಮಾ ಇದು ಎನ್ನುತ್ತಿದ್ದಾರೆ ಪ್ರೇಕ್ಷಕರು. ಡಾರ್ಲಿಂಗ್ ಕೃಷ್ಣ ಇಷ್ಟವಾಗಿದ್ದಾರೆ. ನಾಯಕಿ ಬೃಂದಾ ಆಚಾರ್ಯ ಅವರಿಗೆ ಕರ್ನಾಟಕ ಕ್ರಶ್ ಎಂಬ ಬಿರುದು ಕೊಟ್ಟಿದ್ದಾರೆ. ಮಿಲನಾ ನಾಗರಾಜ್ ಅವರ ಪಾತ್ರದಲ್ಲಿ ಇರುವ ಸಸ್ಪೆನ್ಸ್ ಮತ್ತು ಟ್ವಿಸ್ಟ್ ಕೂಡ ಜನರಿಗೆ ಇಷ್ಟ ಆಗಿದೆ.

    ಲವ್ ಮತ್ತು ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಶಶಾಂಕ್ ಅವರು ಫೇಮಸ್. ‘ಮೊಗ್ಗಿನ ಮನಸು’, ‘ಕೃಷ್ಣ ಲೀಲಾ’ ಮುಂತಾದ ಸಿನಿಮಾಗಳ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಈಗ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಕೂಡ ಅವರ ಹಿಟ್ ಚಿತ್ರಗಳ ಪಟ್ಟಿಗೆ ಸೇರ್ಪಡೆ ಆಗುವ ಸೂಚನೆ ಸಿಕ್ಕಿದೆ.

    ಇತ್ತೀಚೆಗಷ್ಟೇ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋನ ಎಲ್ಲ ಟಿಕೆಟ್ಗಳು ಸೋಲ್ಡ್ಔಟ್ ಆಗಿದ್ದು ವಿಶೇಷವಾಗಿತ್ತು. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಕಾಂಬಿನೇಷನ್, ಶಶಾಂಕ್ ಅವರ ಫ್ಯಾನ್ಸ್, ಹಾಡುಗಳು ಚಿತ್ರಮಂದಿರಕ್ಕೆ ಜನರನ್ನು ಕರೆತರುತ್ತಿವೆ. ನಾಯಕ, ನಾಯಕಿ ಅಷ್ಟೇ ಅಲ್ಲ ನಾಗಭೂಷಣ, ಅಚ್ಯುತ್ ಕುಮಾರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದ ಕಲಾವಿದರ ನಟನೆಗೂ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ. ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಪೇಯ್ಡ್ ಪ್ರೀಮಿಯರ್ ಶೋ ನೋಡಿ ಮೆಚ್ಚುಗೆ ಸೂಚಿಸಿದ ಪ್ರೇಕ್ಷಕರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಚಿತ್ರತಂಡದವರು ಧನ್ಯವಾದ ತಿಳಿಸಿದ್ದಾರೆ.

  • ಕೌಸಲ್ಯ ಸುಪ್ರಜಾ ರಾಮ ಸೀಕ್ವೆಲ್ ಬರುತ್ತಾ..?

    ಕೌಸಲ್ಯ ಸುಪ್ರಜಾ ರಾಮ ಸೀಕ್ವೆಲ್ ಬರುತ್ತಾ..?

    ಕೌಸಲ್ಯ ಸುಪ್ರಜಾ ರಾಮ ಗೆದ್ದಾಗಿದೆ. ಅದರಲ್ಲೂ ಫ್ಯಾಮಿಲಿ ಆಡಿಯೆನ್ಸ್ ಚಿತ್ರಮಂದಿರಕ್ಕೆ ತಂಡೋಪತಂಡವಾಗಿ ಬರುತ್ತಿದ್ದಾರೆ. ಗಂಡಸರೇ ಗ್ರೇಟ್ ಎಂದುಕೊಂಡು ಗಂಡಸರೂ ಬರುತ್ತಿದ್ದಾರೆ. ನಾವೇನ್ ಕಡಿಮೆ ಎನ್ನುವ ಹೆಂಗಸರೂ ಬರುತ್ತಿದ್ದಾರೆ. ಅಲ್ಲಿಗೆ ಶಶಾಂಕ್ ಮತ್ತೊಮ್ಮೆ ಗೆದ್ದಂತಾಗಿದೆ. ಶಶಾಂಕ್ ಸಿನಿಮಾಗಳಲ್ಲಿ ಒಂದೊಳ್ಳೆ ಕಥೆ, ಮನರಂಜನೆ, ಹೃದಯ ಮುಟ್ಟುವ ಸಂದೇಶ ಇರುತ್ತದೆ ಎನ್ನುವ ಪ್ರೇಕ್ಷಕರ ನಂಬಿಕೆ ಮತ್ತೊಮ್ಮೆ ನಿಜವಾಗಿದೆ.

    ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ನಿಜಕ್ಕೂ ಸಂತೋಷವಾಗುತ್ತಿದೆ. ಜನ ಥಿಯೇಟರಿಗೆ ಬಂದು ಸಿನಿಮಾ ನೋಡುವುದು ಬೇರೆ. ಚಿತ್ರದ ಬಗ್ಗೆ ಪಾಸಿಟಿವ್ ಮಾತುಗಳನ್ನಾಡುವುದು ಬೇರೆ. ಈ ರೀತಿ ಹೇಳುವುದು ಬೇರೆ ಎನ್ನುವ ಶಶಾಂಕ್ `ಸಿನಿಮಾ ನೋಡಿದ ಪ್ರೇಕ್ಷಕರು ಎಮೋಷನಲ್ ಆಗುತ್ತಿದ್ದಾರೆ. ಗಂಡಸರು ಗ್ರೇಟ್ ಅಲ್ಲ ಎನ್ನುವ ಸಂದೇಶ ಇರುವ ಚಿತ್ರವನ್ನು ಗಂಡಸರೂ ಒಪ್ಪಿಕೊಂಡಿರುವುದು ವಿಶೇಷ. ಇದು ನಮ್ಮ ಕಣ್ತೆರೆಸಿದ ಚಿತ್ರ ಎನ್ನುತ್ತಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಈ ಗೆಲುವು, ನಮ್ಮ ನಿರೀಕ್ಷೆಯನ್ನು ಮೀರಿದ್ದು’ ಎಂದಿದ್ದಾರೆ.

    ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನ ನಾಗರಾಜ್, ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ್.. ಎಲ್ಲರ ಅಭಿನಯಕ್ಕೂ ಮೆಚ್ಚುಗೆ ಸಿಗುತ್ತಿದೆ. ಅದರಲ್ಲೂ ಮಿಲನ ಮತ್ತು ನಾಗಭೂಷಣ್ ಸ್ವಲ್ಪ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬಿಸಿ ಪಾಟೀಲ್ ಪುನರಾಗಮನದ ಚಿತ್ರವಿದು. ನಿರ್ಮಾಪಕರಾಗಿ ಮತ್ತೆ ಸಕ್ರಿಯರಾಗಿರುವ ಬಿಸಿ ಪಾಟೀಲ್, ಮತ್ತೊಮ್ಮೆ ಗೆಲುವಿನ ಆರಂಭ ಕಂಡಿದ್ದಾರೆ.

    ಚಿತ್ರದ ರೀಮೇಕ್ ರೈಟ್ಸ್ ತೆಗೆದುಕೊಳ್ಳೋಕೆ ಹಲವು ನಿರ್ಮಾಪಕರು, ಪ್ರೊಡಕ್ಷನ್ ಹೌಸ್ ಮುಂದೆ ಬಂದಿವೆ ಎನ್ನುತ್ತಿರುವ ಶಶಾಂಕ್ ಚಿತ್ರದಲ್ಲಿ ಸೀಕ್ವೆಲ್ ಮಾಡುವುದಕ್ಕೆ ಬೇಕಾದ ಎಲ್ಲ ಅಂಶಗಳೂ ಇವೆ. ಸದ್ಯಕ್ಕೆ ಆ ಬಗ್ಗೆ ಯಾವ ಕೆಲಸವನ್ನೂ ಶುರು ಮಾಡಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಮತ್ತೊಂದು ಹಿಟ್ ಸಿನಿಮಾ ಸೀಕ್ವೆಲ್ ಆಗುವ ಸೂಚನೆಯಂತೂ ಇದೆ.

  • ಕೌಸಲ್ಯ ಸುಪ್ರಜಾ ರಾಮ.. : ದಿ ಬೆಸ್ಟ್ ಎಂದ ಪ್ರೇಕ್ಷಕ ಪ್ರಭು

    ಕೌಸಲ್ಯ ಸುಪ್ರಜಾ ರಾಮ.. : ದಿ ಬೆಸ್ಟ್ ಎಂದ ಪ್ರೇಕ್ಷಕ ಪ್ರಭು

    ನೀನು ಗಂಡ್ಸು ಕಣೋ.. ಹೆಂಗಸಿನ ತರಾ ಆಡಬೇಡ..

    ಹೆಣ್ಣು ಮಗು.. ತಗ್ಗಿ ಬಗ್ಗೀ ನಡೆಯೋದು ಕಲಿತುಕೊ..

    ಈ ಎರಡು ಲೈನುಗಳನ್ನಿಟ್ಟುಕೊಂಡು ಚೆಂದದ ಕಥೆ ಹೇಳಿದ್ದಾರೆ ನಿರ್ದೇಶಕ ಶಶಾಂಕ್. ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ್ ಹಾಗೂ ಸ್ಪೆಷಲ್ ಆಗಿ ಬರೋ ಮಿಲನಾ ನಾಗರಾಜ್.. ಎಲ್ಲರೂ ತೆರೆಯ ಮೇಲೆ ಬಂದು ನಟಿಸಿ ಹೋಗುತ್ತಿದ್ದರೆ, ನೋಡುಗರು ಭಾವುಕರಾಗುತ್ತಾರೆ. ಇದು ನಮ್ಮದೇ ಕಥೆ ಅಲ್ವಾ ಅನ್ನಿಸೋ ಹೊತ್ತಿಗೆ.. ಈ ಕಥೆಯ ಸಿನಿಮಾವನ್ನ ಎಲ್ಲಿಯೂ ನೋಡಿಲ್ಲ ಎಂಬುದೂ ನೆನಪಾಗುತ್ತದೆ..

    ಯಾರಿಗೆ ಜಾಸ್ತಿ ಮಾಕ್ರ್ಸ್ ಕೊಡೋಣ ಎಂದುಕೊಂಡಾಗ ಪ್ರೇಕ್ಷಕಪ್ರಭು ಅವರಿಗಾ..ಇವರಿಗಾ.. ಅವರಿಗಿಂತ ಇವರು ಚೆನ್ನಾಗಿ ನಟಿಸಿದ್ದಾರೆ..ಅಲ್ಲಲ್ಲ.. ಅವರು ಇನ್ನೂ ಚೆನ್ನಾಗಿ ನಟಿಸಿದ್ದಾರೆ.. ಕಥೆ ಸಖತ್.. ಹೀಗೆ ಅಂದುಕೊಂಡೇ ಥಿಯೇಟರಿಂದ ಹೊರಬರುತ್ತಾನೆ..

    ಡಾರ್ಲಿಂಗ್ ಕೃಷ್ಣ ಅವರಂತೂ ಫಸ್ಟ್ ಹಾಫ್ ಬೇರೆ.. ಸೆಕೆಂಡ್ ಹಾಫ್ ಬೇರೆ.. ಮೊದಲನೇ ಅರ್ಧದಲ್ಲಿ ನನ್ನ ಪಾತ್ರವನ್ನು ಇಷ್ಟ ಪಡದ ಜನರೇ ಆ ನಂತರ ಆ ಪಾತ್ರ ಬದಲಾಗುವ ರೀತಿ ನೋಡಿ ಖುಷಿ ಪಡುತ್ತಾರೆ. ಮೊದಲಾರ್ಧದಲ್ಲಿರುವ ನನ್ನ ರಗಡ್ ಲುಕ್ನ ಪಾತ್ರವೂ ಹಲವರಿಗೆ ಇಷ್ಟವಾಗಲಿದೆ ಎಂದಿದ್ದಾರೆ ಕೃಷ್ಣ. ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಗಂಡಸಿನ ಅಹಂ ಕುರಿತ ಕತೆಯನ್ನು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.

    ಕೃಷ್ಣ ಅವರಿಗೆ ಇನ್ನೊಂದು ಖುಷಿಯೆಂದರೆ ಮಿಲನಾ ನಾಗರಾಜ್ ಚಿತ್ರದಲ್ಲಿ ಅವರಿಗೆ ಹೊಡೆದಿದ್ದಾರಂತೆ. ಲವ್ ಮಾಕ್ಟೆಲ್ ಸಿನಿಮಾದಲ್ಲಿ ಮಿಲನಾ, ನನ್ನನ್ನು ಒದ್ದಿದ್ದರು, ಈ ಸಿನಿಮಾದಲ್ಲಿ ಹೊಡೆದಿದ್ದಾರೆ. ಅವರು ನನ್ನನ್ನು ಹೊಡೆದರೆ ಅಥವಾ ಒದ್ದರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಅದು ಈ ಸಿನಿಮಾ ಮೂಲಕವೂ ಮುಂದುವರೆಯಲಿದೆ ಎಂದಿದ್ದಾರೆ.

  • ಕೌಸಲ್ಯ ಸುಪ್ರಜಾ ರಾಮ..ದಲ್ಲಿ ಸಿದ್ದೇಗೌಡ, ಕೌಸಲ್ಯೆ, ಸಂತು ಕಥೆಯೂ ಇಂಪಾರ್ಟೆಂಟ್

    ಕೌಸಲ್ಯ ಸುಪ್ರಜಾ ರಾಮ..ದಲ್ಲಿ ಸಿದ್ದೇಗೌಡ, ಕೌಸಲ್ಯೆ, ಸಂತು ಕಥೆಯೂ ಇಂಪಾರ್ಟೆಂಟ್

    ಹೀರೋ ಡಾರ್ಲಿಂಗ್ ಕೃಷ್ಣ. ಹೀರೋಯಿನ್ ಬೃಂದಾ ಆಚಾರ್ಯ. ಪ್ರಮುಖ ಪಾತ್ರ ಮಿಲನಾ ನಾಗರಾಜ್. ಡೈರೆಕ್ಟರ್ ಶಶಾಂಕ್. ಇಷ್ಟು ತಿಳಿದುಕೊಂಡರೆ ಸಾಕೇ.. ಡೈರೆಕ್ಟರ್ ಶಶಾಂಕ್ ಸಿನಿಮಾಗಳ ವಿಶೇಷತೆಯೆಂದರೆ ಅವರ ಚಿತ್ರದಲ್ಲಿ ಪ್ರತಿ ಪಾತ್ರಗಳಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಹೀರೋ ಹೀರೋಯಿನ್ ಅವರೇ ಅಲ್ಲದೆ, ಪೋಷಕ ಪಾತ್ರಗಳಿಗೂ ಪ್ರಾಧಾನ್ಯತೆ  ಕೊಡುತ್ತಾರೆ. ಕೌಸಲ್ಯ ಸುಪ್ರಜಾ ರಾಮದಲ್ಲೂ ಅದೇ ರೀತಿ ಇದೆ.

    ಮೊದಲಿಗೆ ನೋಡೋದಾದ್ರೆ ಸಿದ್ದೇಗೌಡರ ಪಾತ್ರ. ರಾಮ ಅರ್ಥಾತ್ ಕೃಷ್ಣನ ತಂದೆ ಪಾತ್ರ. ಟ್ರೇಲರಿನಲ್ಲಿ ರಂಗಾಯಣ ರಘು ಅಲಿಯಾಸ್ ಸಿದ್ದೇಗೌಡರ ಪಾತ್ರ ನೋಡಿದವರು ಒಂದ್ಸಲ ಶಾಕ್ ಆಗಿರ್ತಾರೆ. ಶಶಾಂಕ್ ನನಗೆ ಅವರ ಎಲ್ಲಾ ಸಿನಿಮಾಗಳಲ್ಲಿಯೂ ಕೊಂಚ ವಿಭಿನ್ನ ಪಾತ್ರಗಳನ್ನೇ ನೀಡಿದ್ದಾರೆ. ಈ ಚಿತ್ರದಲ್ಲಿಯೂ ಸಹ ಹೊಸ ರೀತಿಯ ಪಾತ್ರದಲ್ಲಿಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ರೀತಿ ಹಲವು ಗಂಡಸರು ಸಮಾಜದಲ್ಲಿದ್ದಾರೆ. ಅವರನ್ನು ಇಲ್ಲಿ ಪ್ರತಿನಿಧಿಸಿದ್ದೇನೆ’ ಎಂದಿದ್ದಾರೆ ರಘು.

    ಈ ಚಿತ್ರದ ಟೈಟಲ್ಲಿನಲ್ಲಿ ಬರುವ ಕೌಸಲ್ಯೆಯೇ ಸುಧಾ ಬೆಳವಾಡಿ. ರಂಗಾಯಣ ರಘು ಪತ್ನಿ, ಕೃಷ್ಣ ಅರ್ಥಾತ್ ರಾಮನ ಅಮ್ಮ. ಸುಧಾ ಬೆಳವಾಡಿ ಕನ್ನಡ ಚಿತ್ರರಂಗದವರ ಪಾಲಿಗೀಗ ಆಧುನಿಕ ಪಂಡರಿಬಾಯಿ ಆಗಿದ್ದಾರೆ. ಅಮ್ಮನ ಪಾತ್ರಕ್ಕೆ ಫೇವರಿಟ್ ಆಗಿದ್ದಾರೆ. ಅಮ್ಮ-ಮಗನ ಪಾತ್ರ ಎಷ್ಟು ಚೆನ್ನಾಗಿ ಬಂದಿದೆ ಎಂದರೆ, ಚಿತ್ರೀಕರಣ ಮಾಡುವಾಗ ಅವರ ಅಭಿನಯ ತುಂಬಾ ಇಷ್ಟವಾಗುತ್ತಿತ್ತು. ಥಿಯೇಟರಿನಲ್ಲಿಯೂ ಅಷ್ಟೆ, ತಾಯಿ-ಮಗನ ಪಾತ್ರ ನೋಡಿದವರು ಕಣ್ಣೀರು ಹಾಕ್ತಾರೆ ಅನ್ನೋದು ಶಶಾಂಕ್ ಭರವಸೆ.

    ಇನ್ನು ಸಂತು ಪಾತ್ರದಲ್ಲಿ ಮಿಂಚಿರುವುದು ನಾಗಭೂಷಣ್. ನಾಯಕನ ಬದುಕಿನಲ್ಲಿ ನಾಯಕಿ ಎಷ್ಟು ಮುಖ್ಯವೋ, ಇಲ್ಲಿರಾಮ್ ಬದುಕಿನಲ್ಲಿಸಂತು ಪಾತ್ರವೂ ಅಷ್ಟೇಮುಖ್ಯ. ನಾನು ಏನು ಅಂದುಕೊಂಡಿದ್ದನೋ ಅದರಂತೆ ನಾಗಭೂಷಣ್ ನಟಿಸಿದರು. ಪ್ರೇಕ್ಷಕರಿಗೆ ಅವರ ಪಾತ್ರ ಬಹಳ ಇಷ್ಟವಾಗಲಿದೆ ಎನ್ನುವ ಶಶಾಂಕ್ ಅವರಿಗೆ ಈಗ ಹೆರಿಗೆ ಸಮಯ.

     ಬಿ ಎಂ ಗಿರಿರಾಜ್, ಅಚ್ಯುತ್ ಕುಮಾರ್, ಯಮುನಾ ಶ್ರೀನಿಧಿ ಮೊದಲಾದವರು ನಟಿಸಿರುವ ಕೌಸಲ್ಯ ಸುಪ್ರಜಾ ರಾಮ್ ಇದೀಗ ಥಿಯೇಟರುಗಳಲ್ಲಿದೆ.

  • ಕೌಸಲ್ಯ ಸುಪ್ರಜಾ ರಾಮಗೆ 50ನೇ ದಿನದ ಸಂಭ್ರಮ

    ಕೌಸಲ್ಯ ಸುಪ್ರಜಾ ರಾಮಗೆ 50ನೇ ದಿನದ ಸಂಭ್ರಮ

    50 ದಿನದ ಸಂಭ್ರಮಗಳೆಲ್ಲ ಈಗ ಮುಗಿದ ಅಧ್ಯಾಯ ಎನ್ನುತ್ತಿರುವ ಕಾಲದಲ್ಲೇ ಕೆಲವೊಂದು ಚಿತ್ರಗಳು ಹಾಫ್ ಸೆಂಚುರಿ, 100 ಡೇಸ್ ದಾಖಲೆ ಮಾಡಿ ಬಿಡುತ್ತವೆ. ಇದೀಗ ಅಂತಹ ಅಪರೂಪದ ಸಾಧನೆ ಮಾಡಿರುವುದು ಕೌಸಲ್ಯ ಸುಪ್ರಜಾ ರಾಮ.

    ಕೌಸಲ್ಯ ಸುಪ್ರಜಾ ರಾಮ ಚಿತ್ರ ತೆರೆಕಂಡ ಬಳಿಕ ಬೇರೆ ಬೇರೆ ಸಿನಿಮಾಗಳು ಬಿಡುಗಡೆ ಆದವು. ಪರಭಾಷೆಯಲ್ಲಿ ಹಲವು ಸಿನಿಮಾಗಳು ಅಬ್ಬರಿಸಿದವು. ಅವುಗಳಿಗೆಲ್ಲ ಸರಿಯಾದ ಪೈಪೋಟಿ ನೀಡುವ ಮೂಲಕ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ 50ನೇ ದಿನದ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದೆ. ಭಾರತ ವರ್ಸಸ್ ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಇದ್ದಾಗಲೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಒಳ್ಳೆಯ ಕಂಟೆಂಟ್ ಇದ್ದರೆ ಪ್ರೇಕ್ಷಕರು ಖಂಡಿತವಾಗಿಯೂ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವಂತಹ ಕಥಾಹಂದರ ಈ ಸಿನಿಮಾದಲ್ಲಿದೆ. ತಾಯಿ ಸೆಂಟಿಮೆಂಟ್ ಚೆನ್ನಾಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಸಿನಿಮಾದ ಮೂಲಕ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಜೋಡಿಗೆ ಮತ್ತೊಂದು ಗೆಲುವು ಸಿಕ್ಕಂತೆ ಆಗಿದೆ. ವಿಮರ್ಶಕರಿಂದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಬೃಂದಾ ಆಚಾರ್ಯ ಅವರ ಜನಪ್ರಿಯತೆ ಹೆಚ್ಚಾಗಿದೆ.

    ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸಂಜೆ 4.15ಕ್ಕೆ ಪ್ರೇಕ್ಷಕರೊಂದಿಗೆ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಶಶಾಂಕ್ ಮುಂತಾದವರು ಸಿನಿಮಾ ನೋಡಲಿದ್ದಾರೆ. ಟಿಕೆಟ್ ಕೌಂಟರ್ನಲ್ಲಿ ಮಿಲನಾ ಮತ್ತು ಕೃಷ್ಣ ಅವರು ಟಿಕೆಟ್ ನೀಡಲಿದ್ದಾರೆ. ಅದರೊಂದಿಗೆ ಸಿಹಿ ಕೂಡ ಹಂಚಲಿದ್ದಾರೆ. ಈ ಸಂಭ್ರಮದಲ್ಲಿ ಭಾಗಿ ಆಗುವಂತೆ ಪ್ರೇಕ್ಷಕರಿಗೆ ಚಿತ್ರತಂಡದವರು ಸೋಶಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ.

  • ಡಾರ್ಲಿಂಗ್ ಕೃಷ್ಣ-ಮಿಲನಾ ಮಧ್ಯೆ ತಂದಿಟ್ಟು ತಮಾಷೆ ನೋಡ್ತಿದ್ದಾರಾ ಶಶಾಂಕ್..?

    ಡಾರ್ಲಿಂಗ್ ಕೃಷ್ಣ-ಮಿಲನಾ ಮಧ್ಯೆ ತಂದಿಟ್ಟು ತಮಾಷೆ ನೋಡ್ತಿದ್ದಾರಾ ಶಶಾಂಕ್..?

    ಕೃಷ್ಣ, ಟ್ರಿಪ್ ಹೋಗೋಣ್ವಾ, ಟಿಕೆಟ್ ಬುಕ್ ಮಾಡ್ತೀನಿ. ಸಮ್ಮರ್ ಚೆನ್ನಾಗಿರುತ್ತೆ ಎಂದು ಮಿಲನಾ ಕೇಳ್ತಿದ್ರೆ, ಇತ್ತ ಕೃಷ್ಣ ಬೇಡ ಬೇಡ.. ಪ್ಯಾರಿಸ್ಸಿಗೆ ಬುಕ್ ಮಾಡು.. ಅಂತಾರೆ. ಸಿಡುಕು ಅಂದ್ರೆ ಸಿಡುಕು. ಸಿಡುಕೇಶ್ವರ.. ಆದರೆ ಮಿಲನ ಸಿಟ್ಟು ಮಾಡ್ಕೊಳ್ಳೋದು ಕೃಷ್ಣನ ಮೇಲಲ್ಲ. ಶಶಾಂಕ್ ಮೇಲೆ.. ಅದೇ ಡೈರೆಕ್ಟರ್ ಶಶಾಂಕ್.. ಮೊಗ್ಗಿನ ಮನಸ್ಸು ಶಶಾಂಕ್. ಅವರೇ.. ಅಂದಹಾಗೆ ಇದೂ ಸಿನಿಮಾ ಪ್ರಮೋಷನ್ನೇ. ಕೌಸಲ್ಯ ಸುಪ್ರಜಾ ರಾಮ ಅನ್ನೋ ಸಿನಿಮಾ ರೆಡಿಯಾಗಿದೆ. ಕೃಷ್ಣ ಹೀರೋ. ಬೃಂದಾ ಆಚಾರ್ಯ ಹೀರೋಯಿನ್. ಇಡೀ ಸಿನಿಮಾದಲ್ಲಿ ಪಾತ್ರದೊಳಗೆ ಕೃಷ್ಣ ಹೇಗೆ ಪರಕಾಯ ಪ್ರವೇಶ ಮಾಡಿದ್ದಾರೆ ಅನ್ನೋದನ್ನ ತೋರಿಸೋಕೆ ಈ ಟೀಸರ್ ಬಿಟ್ಟಿದ್ದಾರೆ.

    ಅಂದಹಾಗೆ ಇಲ್ಲಿ ಶಿವಾನಿಯ ಕಥೆ ಹೇಳ್ಬೇಕು. ಶಿವಾನಿಯ ಕಥೆ ಯಾಕ್ ಹೇಳ್ಬೇಕಂದ್ರೆ ಈಗ ಬಂದಿರೋದು ಶಿವಾನಿಯ ಟೀಸರ್. ಆಮೇಲೆ ಬರೋದು ಹಾಡು. ಶಿವಾನಿ ಹಾಡು.

    ಶಶಾಂಕ್ ಚಿತ್ರಗಳಲ್ಲಿ ಹಾಡು ಅದ್ಭುತವಾಗಿರುತ್ವೆ. ಸಾಹಿತ್ಯ ಬೊಂಬಾಟ್ ಆಗಿರುತ್ತೆ. ಜೊತೆಯಾಗಿರೋದು ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ. ಅಲ್ಲಿಗೆ ಹಾಡು ಸಖತ್ತಾಗಿಯೇ ಇರುತ್ತೆ. ಟೀಸರ್`ನಲ್ಲಿ ಅದರ ಝಲಕ್ ಮಾತ್ರವೇ ಇದೆ. ಕಿವಿಗಿಂಪಾಗಿದೆ.

  • ಮಿಲನ ನಾಗರಾಜ್ ಅವರದ್ದು ಪವರ್ ಫುಲ್ ಪಾತ್ರವಂತೆ..!

    ಮಿಲನ ನಾಗರಾಜ್ ಅವರದ್ದು ಪವರ್ ಫುಲ್ ಪಾತ್ರವಂತೆ..!

    ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ 2, ಲವ್ ಬರ್ಡ್ಸ್ ಚಿತ್ರದ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ಧಾರೆ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ಹಾಗಂತ ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ಮಿಲನ, ಕೃಷ್ಣಗೆ ಹೀರೋಯಿನ್ ಅಲ್ಲ. ಕೃಷ್ಣ ಅವರನ್ನು ಬೃಂದಾಗೆ ಬಿಟ್ಟುಕೊಟ್ಟಿದ್ದಾರೆ. ಆದರೆ ಅವರದ್ದಿಲ್ಲಿ ಪ್ರಮುಖ ಪಾತ್ರವಂತೆ.

    ಇದರಲ್ಲಿ ನನ್ನ ಪಾತ್ರದ ಬಗ್ಗೆ ಹೆಚ್ಚೇನು ಕೇಳಬೇಡಿ. ಎಲ್ಲವನ್ನೂ ಚಿತ್ರದಲ್ಲಿಯೇ ನೊಡಿ. ನಾನು ಇದರಲ್ಲಿ ಪವರ್ಫುಲ್ ಪಾತ್ರ ನಿರ್ವಹಿಸಿದ್ದೇನೆ. ಶಶಾಂಕ್ ನಿರ್ದೇಶನ ಮತ್ತು ಇಂತಹ ಪಾತ್ರ ಮಿಸ್ ಮಾಡಿದರೆ ಮತ್ತೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ ಎನ್ನುವುದು ಮಿಲನಾ ಅವರ ಮಾತು. ಶಶಾಂಕ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಮಿಸ್ ಮಾಡಬಾರದು ಎಂದು ಒಪ್ಪಿಕೊಂಡಿದ್ದಾರಂತೆ ಮಿಲನ.

    ಇದರಲ್ಲಿ ನನಗೆ ಅವರು ಶಿವಾನಿ ಎಂಬ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಬಬ್ಲಿ ಬಬ್ಲಿ ಪಾತ್ರ ನನ್ನದು. ಈ ಪಾತ್ರದ ಡಿಸೈನ್ ಸೇರಿದಂತೆ ಎಲ್ಲವೂ ಹೊಸದಾಗಿತ್ತು. ನಾನು ಬಹಳ ಇಷ್ಟಪಟ್ಟು ನಟಿಸಿದ ಪಾತ್ರವಿದು. ಕಥಾನಾಯಕ ರಾಮನ ಮನೋಭಾವ ಅರ್ಥ ಮಾಡಿಕೊಳ್ಳುವಂತಹ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎನ್ನುವು ಶಿವಾನಿ ಅಲ್ಲಲ್ಲ.. ಬೃಂದಾ ಆಚಾರ್ಯ ಮಾತು.

    ಸಿನಿಮಾ ಮಾಡುವುದಷ್ಟೇ ಅಲ್ಲ, ಚೆಂದದ ಕಥೆ ಹೇಳುತ್ತಲೇ ಸಿನಿಮಾ ಪ್ರೇಕ್ಷಕರನ್ನು ಒಂದು ಯೋಚನೆಗೆ ಹಚ್ಚಬೇಕು. ನನ್ನ ಚಿತ್ರದಲ್ಲಿ ಮಹಿಳಾ ಪರ ಕಥೆ ಇರುತ್ತದೆ ಅನ್ನೋದನ್ನು ನಾನು ಒಪ್ಪುತ್ತೇನೆ. ರಡೂವರೆ ಗಂಟೆ ನಗಿಸುವುದು ಅಥವಾ ಬೇರೆ ರೀತಿ ಎಂಟರ್ಟೇನ್ ಮಾಡುವ ಜತೆಗೆ ಅರ್ಥಪೂರ್ಣ ಕಥೆ ಹೇಳಿದರೆ ಒಳ್ಳೆಯದು. ಕುಟುಂಬದವರ ಒಟ್ಟಿಗೇ ಬೆಳೆದವನು ನಾನು. ಕೌಸಲಬ್ಯ ಸುಪ್ರಜಾ ರಾಮದಲ್ಲಿರುವ ಕಥೆಯನ್ನು ಇದೂವರೆಗೆ ಯಾರೂ ಹೇಳಿಲ್ಲ. ಆದರೆ ಎಲ್ಲರಿಗೂ ಗೊತ್ತಿರುವ ಕಥೆ ಎನ್ನುವುದು ಶಶಾಂಕ್ ಮಾತು. ಸಿನಿಮಾ ಇದೇ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ.

  • ಮೊಗ್ಗಿನ ಮನಸ್ಸು ಫ್ಯಾನ್.. ಕೌಸಲ್ಯ ಸುಪ್ರಜಾ ರಾಮ.. ಹೀರೋಯಿನ್..!

    ಮೊಗ್ಗಿನ ಮನಸ್ಸು ಫ್ಯಾನ್.. ಕೌಸಲ್ಯ ಸುಪ್ರಜಾ ರಾಮ.. ಹೀರೋಯಿನ್..!

    ದಟ್ ಈಸ್ ಕಾಲಚಕ್ರ ಎನ್ನಬಹುದು. ಕೌಸಲ್ಯ ಸುಪ್ರಜಾ ರಾಮ ಚಿತ್ರದ ಹೀರೋಯಿನ್ ಬೃಂದಾ ಆಚಾರ್ಯ. ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಕಲಾವಿದೆ. ಜೂಲಿಯೆಟ್ ಸಿನಿಮಾದಲ್ಲಿ ಮಾರ್ಷಲ್ ಆಟ್ರ್ಸ್ ಎಲ್ಲ ಮಾಡಿದ್ದ ಈ ಹುಡುಗಿ, ಈಗ ತಮಿಳಿನತ್ತ ಹೊರಟು ನಿಂತಿದ್ದಾರೆ. ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿರುವ ಈಕೆ ಮೊಗ್ಗಿನ ಮನಸ್ಸು ಚಿತ್ರಕ್ಕೆ ಫ್ಯಾನ್ ಆಗಿದ್ದರಂತೆ. ಅದೇ ಡೈರೆಕ್ಟರ್ ಚಿತ್ರದಲ್ಲಿ ಹೀರೋಯಿನ್ ಆಗುವ ಚಾನ್ಸ್ ಸಿಕ್ಕಿದೆ.

    ಶಶಾಂಕ್ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಯಾವತ್ತೂ ಮಹತ್ವ ಇರುತ್ತೆ. ಚಿತ್ರದಲ್ಲಿ ಶಿವಾನಿಯದ್ದು ಬಬ್ಲಿ ಕ್ಯಾರೆಕ್ಟರ್. ಆದರೆ ಮೆಚ್ಯೂರ್ಡ್. ಬಬ್ಲಿ & ಲವ್ಲಿ ಎನ್ನುವ ಬೃಂದಾ ಆಚಾರ್ಯ ಶಶಾಂಕ್ ಬಗ್ಗೆ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದಾರೆ.

    ಇದು ಮನೆ ಮನೆಯಲ್ಲಿ ನಡೆಯೋ ಕಥೆ. ಅದನ್ನೇ ಚೆಂದದ ಸಿನಿಮ ಮಾಡಿದ್ದಾರೆ ಶಶಾಂಕ್. ಏನಂದ್ರೆ.. ನಾವೇ ಆಗ್ಲಿ ಮನೆಗೆ ಹೋದಾಗ ಕಾಫಿ ಕೊಡಮ್ಮ ಅಂತಾ ಅಮ್ಮನನ್ನೇ ಕೇಳ್ತೀವಿ. ಅಪ್ಪನನ್ನ ಕೇಳಲ್ಲ. ಹೌದಲ್ವಾ.. ಆದರೆ ಅದನ್ನೇ ಮನಸ್ಥಿತಿಯನ್ನಾಗಿ ಬೆಳೆಸಿಕೊಂಡ ಯುವಕನ ಕಥೆ ಚಿತ್ರದಲ್ಲಿದೆ. ಆ ಯುವಕನ ಲೈಫಲ್ಲಿ ಶಿವಾನಿ ಬಂದ ಬಳಿಕ ಏನೇನೆಲ್ಲ ಬದಲಾಗುತ್ತೆ.. ಸಂಬಂಧಗಳು.. ಇವೆಲ್ಲ ಚಿತ್ರದಲ್ಲಿವೆ ಎಂದು ನಿರಂತರವಾಗಿ ಹೇಳುವ ಶಿವಾನಿ.. ಅಲ್ಲಲ್ಲ.. ಬೃಂದಾ ಆಚಾರ್ಯಗೆ ಕೌಸಲ್ಯ ಸುಪ್ರಜಾ ರಾಮದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

    ಶಶಾಂಕ್ ಡೈರೆಕ್ಷನ್ನಿನ ಸಿನಿಮಾ ಜುಲೈ 28ಕ್ಕೆ ರಿಲೀಸ್. ಬೃಂದಾ ಆಚಾರ್ಯಗೆ ಡಾರ್ಲಿಂಗ್ ಕೃಷ್ಣ ಹೀರೋ. ಸುಧಾ ಬೆಳವಾಡಿಗೆ ರಂಗಾಯಣ ರಘು ಹೀರೋ. ಜೊತೆಗೆ ಡಾರ್ಲಿಂಗ್ ಕೃಷ್ಣ ಲೈಫಿನ ರಿಯಲ್ ಹೀರೋಯಿನ್ ಮಿಲನ ನಾಗರಾಜ್ ಕೂಡಾ ಇದ್ದಾರೆ.

  • ರಾಧಿಕಾ ಪಂಡಿತ್ ಕಥೆ ಹೇಳಿದ್ಮೇಲೆ ಮಿಲನ ಮುತ್ತುಲಕ್ಷ್ಮಿಯಾದರಂತೆ.. : ಶಶಾಂಕ್ ಹೇಳಿದ ಕಥೆ

    ರಾಧಿಕಾ ಪಂಡಿತ್ ಕಥೆ ಹೇಳಿದ್ಮೇಲೆ ಮಿಲನ ಮುತ್ತುಲಕ್ಷ್ಮಿಯಾದರಂತೆ.. : ಶಶಾಂಕ್ ಹೇಳಿದ ಕಥೆ

    ಶಶಾಂಕ್ ಅವರ ಚಿತ್ರಗಳಲ್ಲಿ ಗಟ್ಟಿ ಕಥೆ ಇರುತ್ತದೆ. ಶಶಾಂಕ್ ಅವರ ಸಿನಿಮಾಗಳಲ್ಲಿ ನಟಿಸಿದವರು ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಮುಟ್ಟುತ್ತಾರೆ. ಮೊಗ್ಗಿನ ಮನಸ್ಸು ಚಿತ್ರದ ಪಾತ್ರ ಇವತ್ತಿಗೂ ರಾಧಿಕಾ ಪಂಡಿತ್, ಶುಭಾ ಪೂಂಜಾ ಅವರಿಗೆ ಹೆಸರು ಕೊಟ್ಟಿದೆ. ಕೃಷ್ಣಲೀಲಾ ಮೂಲಕ ಮಯೂರಿ, ಲವ್ 360 ಮೂಲಕ ರಚನಾ ಇಂದರ್, ಬಚ್ಚನ್ ಚಿತ್ರದ ಭಾವನಾ.. ಹೀಗೆ ಶಶಾಂಕ್ ಚಿತ್ರಗಳಲ್ಲಿ ಹೀರೋಗಳಷ್ಟೇ ಅಲ್ಲ, ಹೀರೋಯಿನ್‍ಗಳೂ ಗಮನ ಸೆಳೆಯುತ್ತಾರೆ. ಇದೀಗ ಕೌಸಲ್ಯ ಸುಪ್ರಜಾ ರಾಮದಲ್ಲಿ ಮುತ್ತುಲಕ್ಷ್ಮಿಯ ಪಾತ್ರ.

    ಚಿತ್ರದ ಹೀರೋಯಿನ್ ಬೃಂದಾ ಆಚಾರ್ಯ ಆದರೂ, ಇಂಟರ್`ವೆಲ್ ನಂತರ ಬರುವ ಮುತ್ತುಲಕ್ಷ್ಮಿಯ ಪಾತ್ರ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತದೆ. ಲವ್`ಮಾಕ್ಟೇಲ್ ಚಿತ್ರದ ಸಿಕ್ಕಾಪಟ್ಟೆ ಒಳ್ಳೆ ಹುಡ್ಗಿ ನಿಧಿಮಾ, ಕೌಸಲ್ಯ ಸುಪ್ರಜಾ ರಾಮದಲ್ಲಿ ಕುಡುಕಿಯಾಗಿ ಗೆಲ್ಲುತ್ತಾರೆ. ಡಾರ್ಲಿಂಗ್ ಕೃಷ್ಣ ಅವರ ಪಾತ್ರವನ್ನೂ ಆವರಿಸಿಕೊಳ್ಳುತ್ತಾರೆ. ಆದರೆ, ಮಿಲನ ಈ ಪಾತ್ರವನ್ನು ಒಪ್ಪಿಕೊಳ್ಳೋಕೆ ಡೈರೆಕ್ಟರ್ ಶಶಾಂಕ್, ರಾಧಿಕಾ ಪಂಡಿತ್ ನಟಿಸಿದ್ದ ಕೃಷ್ಣನ್ ಲವ್ ಸ್ಟೋರಿ ಚಿತ್ರದ ಕಥೆ ಹೇಳಿದ್ದರಂತೆ. ಇದು ಶಶಾಂಕ್ ಅವರೇ ಹೇಳಿದ ಕಥೆ.

    ಮಿಲನ ಅವರಿಗೆ ಮುತ್ತುಲಕ್ಷ್ಮಿ ಪಾತ್ರ ಮಾಡಬೇಕಾ.. ಬೇಡವಾ ಎಂದು ಗೊಂದಲದಲ್ಲಿದ್ದರಂತೆ. ಏಕೆಂದರೆ ನಿಧಿಮಾ ಪಾತ್ರದ ಮೂಲಕ ಬಂದಿರೋ ಒಳ್ಳೆ ಹುಡ್ಗಿ ಇಮೇಜ್ ಎಲ್ಲಿ ತಪ್ಪಿ ಹೋಗುತ್ತೋ ಅನ್ನೋ ಭಯ. ಆಗ ಶಶಾಂಕ್ ಅವರು ರಾಧಿಕಾ ಪಂಡಿತ್ ಅವರ ಕಥೆ ಹೇಳಿದ್ದರಂತೆ ಶಶಾಂಕ್.

    ಕೃಷ್ಣನ್ ಲವ್ ಸ್ಟೋರಿಯಲ್ಲಿ ರಾಧಿಕಾ ಪಂಡಿತ್ ಅವರದ್ದು, ಮಧ್ಯಮ ವರ್ಗದಲ್ಲಿ ಬಡತನದಲ್ಲಿ ಬೇಸತ್ತು ಹೋಗಿರುವ ಹುಡುಗಿಯ ಪಾತ್ರ. ಹೀಗಾಗಿ ಅವಳು ಹಣಕ್ಕೆ ಆಸೆ ಪಡ್ತಾಳೆ. ಪ್ರೀತಿಸಿದ ಹುಡುಗನಿಗೆ ಕೈಕೊಟ್ಟು, ದುಡ್ಡಿಗಾಗಿ ಇನ್ನೊಬ್ಬ ಯುವಕನನ್ನು ಮದುವೆಯಾಗೋಕೆ ಹೋಗ್ತಾಳೆ. ಹುಚ್ಚಿಯಾಗ್ತಾಳೆ. ಪಾತ್ರದ ಕಲ್ಪನೆ ಕೇಳಿದ ರಾಧಿಕಾ ಮೊಗ್ಗಿನ ಮನಸ್ಸು ಚಿತ್ರದಿಂದ ಬಂದಿರೋ ಇಮೇಜ್ ಡ್ಯಾಮೇಜ್ ಆಗಲ್ವಾ.. ಹುಡುಗರು ಬಯ್ಯಲ್ವಾ.. ವಿಲನ್ ರೀತಿ ನೋಡಲ್ವಾ.. ಹೀಗೆಲ್ಲ ಯೋಚಿಸಿದ್ದರಂತೆ. ಆದರೆ, ಶಶಾಂಕ್ ಅವರು ನಿಮ್ಮ ಅಭಿನಯಕ್ಕೆ ಕಥೆಯಲ್ಲಿ ಒಳ್ಳೆಯ ಸ್ಕೋಪ್ ಇದೆ. ಅಭಿನಯ ಪ್ರತಿಭೆಯನ್ನು ತೋರಿಸುವ ಪಾತ್ರವಿದು. ಒಪ್ಪಿಕೊಳ್ಳಿ, ಖಂಡಿತಾ ಹೆಸರು ಬರುತ್ತದೆ ಎಂದು ಒಪ್ಪಿಸಿದರಂತೆ. ಅನಂತರ ನಡೆದಿದ್ದು ಇತಿಹಾಸ. ಕೃಷ್ಣನ್ ಲವ್ ಸ್ಟೋರಿ ಹಿಟ್ ಆಯಿತಷ್ಟೇ ಅಲ್ಲ, ರಾಧಿಕಾ ಪಂಡಿತ್ ಅವರನ್ನು ಚಿತ್ರರಂಗ ಮತ್ತು ಪ್ರೇಕ್ಷಕರು ಒಳ್ಳೆಯ ಕಲಾವಿದೆ ಎಂದು ಒಪ್ಪಿಕೊಂಡರು.

    ಈಗ ಕೌಸಲ್ಯ ಸುಪ್ರಜಾ ರಾಮದ ಸರದಿ. ಮುತ್ತುಲಕ್ಷ್ಮಿಯನ್ನು ಒಪ್ಪಿಸಿ ನಟಿಸುವಂತೆ ಮಾಡಿ ಶಶಾಂಕ್ ಗೆದ್ದಿದ್ದಾರೆ. ಏಕೆಂದರೆ ಇದು ಗಂಡಸರೆಲ್ಲರೂ ನೋಡಲೇಬೇಕಾದ ಸಿನಿಮಾ. ಮುತ್ತುಲಕ್ಷ್ಮಿಯ ಪಾತ್ರ ನೋಡಿದವರು, ಮತ್ತೊಬ್ಬ ಮಾಲಾಶ್ರೀ ಎನ್ನುತ್ತಿದ್ದಾರೆ.

  • ಸಕ್ಸಸ್ ಕೊಟ್ರೂ ಸಲಾಮು ಹೊಡೀಬೇಕಾ..? ತಮಿಳು, ತೆಲುಗು, ಹಿಂದಿ ಸಿನಿಮಾಗಳ ಎದುರು ಕೌಸಲ್ಯ ಸುಪ್ರಜಾ ರಾಮಕ್ಕೆ  ಅನ್ಯಾಯ

    ಸಕ್ಸಸ್ ಕೊಟ್ರೂ ಸಲಾಮು ಹೊಡೀಬೇಕಾ..? ತಮಿಳು, ತೆಲುಗು, ಹಿಂದಿ ಸಿನಿಮಾಗಳ ಎದುರು ಕೌಸಲ್ಯ ಸುಪ್ರಜಾ ರಾಮಕ್ಕೆ  ಅನ್ಯಾಯ

    ಕೌಸಲ್ಯ ಸುಪ್ರಜಾ ರಾಮ ಚಿತ್ರ ಸೂಪರ್ ಹಿಟ್ ಲಿಸ್ಟಿಗೆ ಸೇರಿದೆ. ವೀಕೆಂಡ್ನಲ್ಲೂ ಜನ ಥಿಯೇಟರಿಗೆ ನುಗ್ಗಿ ಬರುತ್ತಿದ್ದಾರೆ. ಎಲ್ಲ ಕಡೆ ಹೌಸ್ಫುಲ್. ಆದರೆ ಮಲ್ಟಿಪ್ಲೆಕ್ಸ್ನವರು ಮಾತ್ರ ಪರಭಾಷೆಗೇ ಮಣೆ ಹಾಕುತ್ತಿದ್ಧಾರೆ. ಆಗಸ್ಟ್  11ರಂದು ಪರಭಾಷೆಯ ಕೆಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದರ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರತಂಡ ದೂರು ಕೊಟ್ಟಿದೆ.

    ತಮಿಳಿನ ರಜನಿಕಾಂತ್ ನಟನೆಯ ಜೈಲರ್ (ಶಿವಣ್ಣ ಕೂಡಾ ನಟಿಸಿದ್ದಾರೆ) ಈ ಚಿತ್ರಕ್ಕಾಗಿ ಈಗಾಗಲೇ ಬೆಂಗಳೂರಿನಲ್ಲಿ 950ಕ್ಕೂ ಹೆಚ್ಚು ಶೋಗಳು ಫಿಕ್ಸ್ ಆಗಿವೆ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ತಮಿಳಿಗರೇ ಹೆಚ್ಚು ಎಂದು ಜನ ಭಾವಿಸಬೇಕಾ.?

    ಹಿಂದಿಯ ಅಕ್ಷಯ್ ಕುಮಾರ್ ನಟನೆಯ ಓಮೈಗಾಡ್ 2, ತೆಲುಗಿನ ಚಿರಂಜೀವಿ ನಟನೆಯ ಬೋಳಾ ಶಂಕರ್ ಚಿತ್ರಗಳು ರಿಲೀಸ್ ಆಗುತ್ತಿವೆ. ಆ ಚಿತ್ರಗಳಿಗೆ ಥಿಯೇಟರ್ ಓಪನ್ ಇಟ್ಟುಕೊಂಡಿರೋ ಮಲ್ಟಿಪ್ಲೆಕ್ಸ್ಗಳು ಕನ್ನಡ ಚಿತ್ರಗಳಿಗೆ ಶೋಗಳನ್ನೇ ಕೊಡುತ್ತಿಲ್ಲ. ಚಿರಂಜೀವಿಯ ಚಿತ್ರಕ್ಕೆ 500ಕ್ಕೂ ಹೆಚ್ಚು ಶೋಗಳಿವೆ. ಅಕ್ಷಯ್ ಕುಮಾರ್ ಹಾಗೂ ಸನ್ನಿಡಿಯೋಲ್ ಚಿತ್ರಕ್ಕೂ ಭರಪೂರ ಶೋಗಳನ್ನು ಕೊಡಲಾಗಿದೆ. ಲಾಸ್ ಆಗುತ್ತಿರುವುದು ಚಿತ್ರರಂಗಕ್ಕೆ 6 ತಿಂಗಳ ನಂತರ ಗೆಲುವು ತೋರಿಸಿ, ಶುಭ ಸುದ್ದಿ ಕೊಟ್ಟ ಕನ್ನಡದ ಚಿತ್ರಗಳಿಗೆ.

    ಇದು ಕೇವಲ ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕಷ್ಟೇ ಅಲ್ಲ, ಹೊಸಬರ ಚಿತ್ರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಪ್ರಮೋಷನ್ ಮಾಡಿದ್ದರು) ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣದ ಆಚಾರ್ & ಕೋ ಚಿತ್ರಗಳಿಗೂ ಆಗಿದೆ. ಶೋಗಳನ್ನೇ ಕೊಡದೆ ಪ್ರೇಕ್ಷಕರ ಕೊರತೆ ತೋರಿಸಿ ಕನ್ನಡ ಚಿತ್ರಗಳನ್ನು ಹೊರಹಾಕಲಾಗುತ್ತಿದೆ.

    ಕಾರಣವೇನೆಂದರೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಿಗೆ ಟಿಕೆಟ್ ದರವನ್ನು ಮನಸ್ಸಿಗೆ ಬಂದಂತೆ ಏರಿಸುವುದು. ಆ ಮೂಲಕ ಡಬಲ್ ತ್ರಿಬಲ್ ಲಾಭ ಮಾಡುವುದು. ಇದರ ಪರಿಣಾಮ ಆಗುತ್ತಿರುವುದು ಕನ್ನಡ ಚಿತ್ರಗಳಿಗೆ.

    ಕೌಸಲ್ಯ ಸುಪ್ರಜಾ ರಾಮ ಹೊಸಬರ ಚಿತ್ರವೇನಲ್ಲ. ಚಿತ್ರ ನಿರ್ಮಾಣ ಮಾಡಿರುವುದು ಕೌರವ ಬಿಸಿ ಪಾಟೀಲ್ ಮತ್ತು ಶಶಾಂಕ್. ಶಶಾಂಕ್ ಅವರು ಸಕ್ಸಸ್ ಚಿತ್ರಗಳ ಸರಣಿಯನ್ನೇ ಕೊಟ್ಟಿರುವ ಡೈರೆಕ್ಟರ್. ಸ್ಟಾರ್ ನಿರ್ದೇಶಕ. ಚಿತ್ರದ ನಾಯಕ ನಾಯಕಿ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಅವರೂ ಸ್ಟಾರ್ ಕಲಾವಿದರೇ. ಚಿತ್ರದ ವಿತರಕ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಕೂಡಾ ಚಿತ್ರರಂಗದ ದೊಡ್ಡ ಸಂಸ್ಥೆ. ದೊಡ್ಡವರ ಚಿತ್ರಗಳಿಗೇ ಹೀಗಾಗುತ್ತಿದ್ದರೆ.. ಮುಂದೇನು ಕಥೆ..?

    ಗೊತ್ತಿಲ್ಲ. ಸದ್ಯಕ್ಕೆ ಕನ್ನಡ ಸಿನಿಮಾಗಳಿಗೆ ಕಂಟಕ ಎದುರಾಗುವುದು ಪಕ್ಕಾ! ಪ್ರಸ್ತುತ 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರಕ್ಕೆ ಬೆಂಗಳೂರಿನಲ್ಲಿ 120+ ಶೋಗಳು ಇವೆ. ಆದರೆ ಗುರುವಾರದಿಂದ 25 ಶೋಗಳು ಸಿಗುವುದು ಕೂಡ ಕಷ್ಟ.