` yogaraj bhat, - chitraloka.com | Kannada Movie News, Reviews | Image

yogaraj bhat,

 • ಯೋಗರಾಜ್ ಭಟ್ ಅವರಿಂದ ಚುನಾವಣಾ ಗೀತೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ

  election song shot in bengaluru

  ಬೆಂಗಳೂರು, ಮಾರ್ಚ್ 30, 2018: ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಲಿದೆ. ಈ ಚುನಾವಣಾ ಗೀತೆ ಪಾರದರ್ಶಕ ಮತದಾನ ಉತ್ತೇಜಿಸಲಿದ್ದು ಹೆಚ್ಚು ಮತದಾರರನ್ನು ಸೆಳೆಯಲಿದೆ. ಈ ಗೀತೆಯನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶಿಸುತ್ತಿದ್ದಾರೆ. ಯೋಗರಾಜ್ ಭಟ್ ತಮ್ಮ ಜನಪ್ರಿಯ ಗೀತರಚನೆಗೆ ಪ್ರಸಿದ್ಧರಾಗಿದ್ದು ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ. ಚುನಾವಣಾ ಗೀತೆಗೆ ಸಂಗೀತ ಸಂಯೋಜನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಮಾಡಲಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡದ ಗಾಯಕರು ಹಾಡಲಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರೆ. 

  ಈ ಚುನಾವಣಾ ಗೀತೆಯನ್ನು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಿಸಲಾಗುತ್ತಿದೆ. ಶುಕ್ರವಾರ ಕಂಠೀರವ ಸ್ಟೇಡಿಯಂ ಮತ್ತು ವಿಧಾನಸೌಧಗಳಲ್ಲಿ ಚಿತ್ರೀಕರಿಸಲಾಯಿತು. ಕರ್ನಾಟಕದ ನೂರಾರು ಸಾಂಸ್ಕøತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. `ಈ ಚುನಾವಣಾ ಗೀತೆಯ ಎಲ್ಲ ಗೌರವ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಸಲ್ಲಬೇಕು. ಅವರು ಈ ಚುನಾವಣೆಗಳಿಗೆ ಚುನಾವಣಾ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿದರು. ನಾವು ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಈ ಚುನಾವಣಾ ಗೀತೆಯ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದೇವೆ' ಎಂದರು. 

  ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್, `ಈ ಚುನಾವಣಾ ಗೀತೆ ಆಯೋಗದ ಧ್ಯೇಯ- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳ ಅನುಸಾರ ಇದೆ. `ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ ಮತ್ತು ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ಗೀತೆಯನ್ನು ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ' ಎಂದರು. 

  ನಿರ್ದೇಶಕ ಯೋಗರಾಜ್ ಭಟ್ ಈ ಯೋಜನೆ ಕುರಿತು ಬಹಳ ಸಂತೋಷ ವ್ಯಕ್ತಪಡಿಸಿ, `ಈ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ. ಈ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗ್ರಹಿಸಲು ಸುಲಭ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವುದರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಚಿತ್ರಗೀತೆಗಳನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ' ಎಂದರು. 

 • ರಂಗಾಯಣ ರಘು ಶೃಂಗಾರದ ಹೊಂಗೆ ಮರದ ಕಥೆ

  rangayana raghu's sringaradha hongemara

  ಶೃಂಗಾರದ ಹೊಂಗೆ ಮರ.. ಹಾಡು ಚಿತ್ರಿತವಾಗಿರೋದು ವಿಹಾನ್ ಮತ್ತು ಸೋನಲ್ ಮೇಲೆ. ಶೃಂಗಾರದ ಹೊಂಗೆ ಮರ ಹಾಡಿನ ಮೋಡಿ, ಜೋಡಿ.. ಮೈನವಿರೇಳಿಸಿರುವುದು, ರೋಮಾಂಚನಗೊಳಿಸಿರುವುದು ನಿಮಗೆಲ್ಲ ಗೊತ್ತಿರುವ ಕಥೆ. ಆದರೆ, ಈ ಶೃಂಗಾರದ ಹೊಂಗೆ ಮರಕ್ಕೂ ರಂಗಾಯಣ ರಘುಗೂ ಏನ್ ಸಂಬಂಧ..? ಸಂಬಂಧ ಇದೆ.

  ಚಿತ್ರದಲ್ಲಿ ವೃದ್ಧನ ಪಾತ್ರದಲ್ಲಿ, ರೇಸ್ ಮಾಡೋಣ ಬಾ ಎಂದು ಚಾಲೆಂಜ್ ಹಾಕುವ ಪಾತ್ರದಲ್ಲಿ ನಟಿಸಿರುವ ರಘು, ಈ ಚಿತ್ರದಲ್ಲಿ ಒಂದು ಪೋಲಿ ಪುಸ್ತಕ ಬರೀತಿರ್ತಾರೆ. ಆ ಪೋಲಿ ಪುಸ್ತಕದ ಹೆಸರೇ.. ಶೃಂಗಾರದ ಹೊಂಗೆ ಮರ.

  ಆ ಶೃಂಗಾರದ ಹೊಂಗೆ ಮರದ ಪಂಚತಂತ್ರ ಥಿಯೇಟರಿಗೆ ಬರುತ್ತಿದೆ. ಭಟ್ಟರು ಮತ್ತೊಮ್ಮೆ ಹೊಸಬರೊಂದಿಗೆ ಕೈ ಜೋಡಿಸಿ, ಗೆಲ್ಲುವ ಉತ್ಸಾಹದಲ್ಲಿದ್ದಾರೆ. 

 • ರಾಜಕೀಯ ಹಿಂಸೆಗೆ ಕಂಗಾಲಾದ ಯೋಗರಾಜ್ ಭಟ್

  yogaraj bhat upset over his lyrics being misused

  ಯೋಗರಾಜ್ ಭಟ್ಟರು ಬಿಡುವಾಗಿಯೇನೂ ಇಲ್ಲ. ಪಂಚತಂತ್ರ ಚಿತ್ರದ ರಿಲೀಸ್‍ನಲ್ಲಿ ಬ್ಯುಸಿಯಾಗಿದ್ದಾರೆ. ಗಾಳಿಪಟ-2ಗೆ ರೆಡಿಯಾಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬೇರೆ ನಿರ್ದೇಶಕರ ಚಿತ್ರಗಳಿಗೆ ಹಾಡು, ಪುಟ್ಟ ಪುಟ್ಟ ಪಾತ್ರಗಳಲ್ಲಿ ಬಿಡುವಿಲ್ಲದ ಜೀವನ ಅವರದ್ದು. ಅಂತಹವರಿಗೂ ಈ ರಾಜಕೀಯ ಸುಮ್ಮನೆ ಬಿಟ್ಟಿಲ್ಲ. ಹಿಂಸೆ ಕೊಟ್ಟಿದೆ.

  ಎಲ್ಲರಿಗೂ ಗೊತ್ತಿರೋ ಹಾಗೆ ಭಟ್ಟರ ಮಾತಿನಲ್ಲಿ ಹಾಸ್ಯ, ವಿಡಂಬನೆ, ಸಣ್ಣದೊಂದು ಕೊಂಕು, ದೊಡ್ಡದೊಂದು ಸಂದೇಶ ಎಲ್ಲವೂ ಇರುತ್ತೆ. ಅಂತಹ ತಮಾಷೆ, ಗಾದೆಗಳನ್ನು ಸೃಷ್ಟಿಸೋದ್ರಲ್ಲಿ ಭಟ್ಟರ್ ಎಕ್ಸ್‍ಪರ್ಟ್. ಆದರೆ, ಆ ಪದ, ಸಾಲುಗಳನ್ನೇ ಕೆಲವು ರಾಜಕೀಯ ಪಕ್ಷಗಳು ತಮ್ಮದೆಂಬಂತೆ ಬಿಂಬಿಸುತ್ತಿವೆ. ಭಟ್ಟರಿಗೆ ಹಿಂಸೆಯಾಗಿರುವುದು ಇದೇ..

  ಹೀಗಾಗಿಯೇ ಭಟ್ಟರು ತಾವು ಯಾವುದೇ ಪಕ್ಷ, ಜಾತಿ, ಧರ್ಮ, ಎಡ, ಬಲಕ್ಕೆ ಸೇರಿದವನಲ್ಲ. ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಿ ಎಂದು ಪ್ರಾರ್ಥಿಸಿದ್ದಾರೆ.

 • ವಿಧಾನಸೌಧದ ಎದುರು ಭಟ್ಟರ ಮತಜಾಗೃತಿ ಶೂಟಿಂಗ್

  after a decade yogaraj bhatt shots in vidhana soudha

  2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಜವಾಬ್ದಾರಿ ನೀಡಿದೆ. ಅಂಥಾದ್ದೊಂದು ಹೊಣೆ ನನಗೆ ಸಿಕ್ಕಿರುವ ಅದೃಷ್ಟ ಎನ್ನುತ್ತಿರುವ ಯೋಗರಾಜ್ ಭಟ್, ಮತದಾನ ಜಾಗೃತಿಗಾಗಿ ವಿಶೇಷ ಗೀತೆಯೊಂದನ್ನು ಬರೆದು ಚಿತ್ರೀಕರಿಸುತ್ತಿದ್ದಾರೆ. 

  ಎಷ್ಟೋ ವರ್ಷಗಳ ಹಿಂದೆ ವಿಧಾನಸೌಧದ ಎದುರು ಯಾವುದೇ ಚಿತ್ರೀಕರಣವನ್ನು ನಿಷೇಧಿಸಲಾಗಿತ್ತು. ಸುದ್ದಿ ಮಾಧ್ಯಮಗಳಿಗೆ ಬಿಟ್ಟರೆ, ಬೇರ್ಯಾರಿಗೂ ವಿಶೇಷ ಚಿತ್ರೀಕರಣಕ್ಕೆ ಅವಕಾಶ ಇರಲಿಲ್ಲ. ಈಗ ಅಂತಾದ್ದೊಂದು ವಿಶೇಷ ಚಿತ್ರೀಕರಣಕ್ಕೆ ಭಟ್ಟರಿಗೆ ಅವಕಾಶ ಸಿಕ್ಕಿದೆ.

  ವಿಭಿನ್ನ ಪರಿಕಲ್ಪನೆಯ ಈ ಗೀತೆ, ಪ್ರತಿಯೊಬ್ಬರಿಗೂ ಮತದಾನ ಮಾಡಲೇಬೇಕೆಂಬ ಉತ್ಸಾಹ ನೀಡಲಿದೆ. ಮತದಾನದಿಂದ ದೂರವೇ ಉಳಿದಿರುವ ಸಮೂಹದಲ್ಲಿ ಶೇ.5ರಷ್ಟಾದರೂ ಜನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ, ನನ್ನ ಶ್ರಮ ಸಾರ್ಥಕ ಎಂದಿದ್ದಾರೆ ಯೋಗರಾಜ್ ಭಟ್.

  ಒಟ್ಟು 4 ನಿಮಿಷದ ಈ ಹಾಡಿಗೆ ಸಂಗೀತ ನೀಡಿರುವುದು ಹರಿಕೃಷ್ಣ. ಹಾಡಿರುವುದು ವಿಜಯಪ್ರಕಾಶ್. ನೃತ್ಯ ಸಂಯೋಜನೆ ಇಮ್ರಾನ್ ಸರ್ದಾರಿಯಾ ಅವರದ್ದು. ವಿಧಾನಸೌಧದಲ್ಲಷ್ಟೇ ಅಲ್ಲ, ರಾಜ್ಯದ 30 ಜಿಲ್ಲೆಗಳಲ್ಲೂ ಈ ಹಾಡಿಗೆ ಚಿತ್ರೀಕರಣ ನಡೆಯಲಿದೆ.

  ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ, ಆಯೋಗದ ಧ್ಯೇಯ ಹಾಗೂ ನೈತಿಕತೆ ಅನುಸಾರ ಇದೆ ಎಂದಿದ್ದಾರೆ.

  ಮತದಾನ ಜಾಗೃತಿಗಾಗಿ ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ಇಂಥಾದ್ದೊಂದು ವಿಶೇಷ ಗೀತೆ ಸಂಯೋಜಿಸುತ್ತಿರುವುದು ಚುನಾವಣಾ ಆಯೋಗದ ಹೆಗ್ಗಳಿಕೆ.

 • ಶೃಂಗಾರದ ಹೊಂಗೆಮರ ನಾಳೆ ಹೂ ಬಿಡುತ್ತೆ..!

  panchantantra's first single song tomorrow

  ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ... ನಾಚಿಕೆಯು ನಮ್ಮ ಜೊತೆ ಠೂ ಬಿಟ್ಟಿದೆ.. ಯೋಗರಾಜ್ ಭಟ್ಟರ ಈ ಶೃಂಗಾರ ಕವಿತೆ ಹಾಡಾಗಿದೆ. ಕನಸಾಗಿದೆ. ಹದಿ ಹರೆಯದ ಮನಸ್ಸುಗಳಿಗೆ ಕಿಚ್ಚಿಟ್ಟಿದೆ. ಕನಸುಗಳು ಮೊಗ್ಗಾಗಿವೆ. ನಾಳೆ ಹೂ ಬಿಡಬೇಕು.

  ಪಂಚತಂತ್ರ ಚಿತ್ರದ ಈ ಹಾಡಿಗೆ ಧ್ವನಿಯಾಗಿರುವುದು ವಿಜಯ್ ಪ್ರಕಾಶ್. ಡಿ ಬೀಟ್ಸ್‍ನಲ್ಲಿ ನಾಳೆ ಹಾಡನ್ನು ಚಿತ್ರರಸಿಕರಿಗೆ ಕೇಳಿಸಲಿದ್ದಾರೆ ಭಟ್ಟರು. ಹಾಡು ಕೇಳಿದ ಮೇಲೆ ಪ್ರೇಮಿಗಳು ನಾಚಿಕೆ ಬಿಟ್ಟು ಹೂ ಬಿಡಿಸೋಕೆ ಹೋಗೋದು ಗ್ಯಾರಂಟಿ. ಕಿವಿಗೆ ಶೃಂಗಾರ ತುಂಬಿಕೊಳ್ಳೋಕೆ ಸಿದ್ಧರಾಗಿ.

 • ಸಾವಲ್ಲ.. ಇದು ಮರುಹುಟ್ಟು - ಭಟ್ಟರ ನುಡಿನಮನ

  yogaraj bhat writes on ambareesh

  ಯೋಗರಾಜ್ ಭಟ್. ರೆಬಲ್ಸ್ಟಾರ್ ಅಂಬರೀಷ್ ಇಮೇಜ್ ಬದಲಿಸಿದ ನಿರ್ದೇಶಕ. ಅಂಬಿ ಪೋಷಕ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದು ಹೆಚ್ಚಾಗಿ ಪುಟ್ಟಣ್ಣನವರ ಚಿತ್ರಗಳಲ್ಲಿ. ನಾಗರಹಾವು, ರಂಗನಾಯಕಿ, ಶುಭ ಮಂಗಳ, ಮಸಣದ ಹೂವು.. ಹೀಗೆ.. ಅವುಗಳನ್ನು ಬಿಟ್ಟರೆ, ಪೋಷಕ ಪಾತ್ರದಲ್ಲಿ ಅಂಬಿಗೆ ಅತೀ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಡ್ರಾಮಾ ಚಿತ್ರದ ಬೊಂಬೆ ಮಾಮನ ಪಾತ್ರ. 

  ಅಂಬರೀಷ್ಗೆ ಭಟ್ಟರು ಇಷ್ಟವಾಗೋಕೆ ಕಾರಣಗಳಿದ್ದವು. ಭಟ್ಟರದ್ದೂ ಕೂಡಾ ಹೆಚ್ಚೂ ಕಡಿಮೆ ಅಂಬಿಯ ಮನಸ್ಥಿತಿಯೇ. ಸಹಜವಾಗಿಯೇ ಭಟ್ಟರಿಗೆ ಅಂಬಿ ಇಷ್ಟವಾಗಿಬಿಟ್ಟಿದ್ದರು. ಅಂಬರೀಷ್ ಅವರನ್ನು ಕಳೆದುಕೊಂಡ ನೋವಿನಲ್ಲಿಯೇ ಅವರೊಂದು ನುಡಿ ನಮನ ಸಲ್ಲಿಸಿದ್ದಾರೆ. ಅಂಬಿ ಎಲ್ಲಿಯೂ ಹೋಗಿಲ್ಲ. ಅವರು ಮತ್ತೆ ಹುಟ್ಟಿದ್ದಾರೆ ಎಂದಿದ್ದಾರೆ ಭಟ್ಟರು.

  ತುಂಬಾ ಸಂತಸದ ಜೀವನ ಬಾಳಿದ ದೊಡ್ಡ ವ್ಯಕ್ತಿ ಹೋದಾಗ ಅದನ್ನ ಸಾವು ಅಂತ ಅನ್ನಬಾರದು… ಹುಟ್ಟು ಅನ್ನಬೇಕು… ಸಾವಲ್ಲ ಇದು ಅಂಬರೀಷ್ ಅಣ್ಣನ ಹುಟ್ಟು.

  ಅವರು ಎಲ್ಲೂ ಹೋಗಿಲ್ಲ, ಹೋಗೋದೂ ಇಲ್ಲ, ಸದಾಕಾಲ ನಮ್ಮೆಲ್ಲರ ಮನದಾಳದಲ್ಲಿ ಜೀವಂತವಾಗಿದ್ದಾರೆ, ಮುಂದೆಯೂ ಜೀವಂತವಾಗಿಯೇ ಇರುತ್ತಾರೆ…

  ನನ್ನ ಪ್ರಕಾರ ಈಗ ಅವರು ಸಾವಿಗೆ ಬಯ್ಯುತ್ತಾ ಕೂತಿದ್ದಾರೆ. “ನನ್ಮಗ್ನೆ ಮಾಡಕ್ ಕೆಲ್ಸ ಇಲ್ಲ ನಿಂಗೆ” ಅಂತ ಸಾವನ್ನು ಮುದ್ದಾಗಿ ಗದರಿಸುವ ತಾಕತ್ತು ಅವರೊಬ್ಬರಿಗೇ ಇರೋದು…

  ಯಾರನ್ನೂ ಬಿಡದ ಸಾವಿಗೆ ಅಂಬರೀಷಣ್ಣನ ದೋಸ್ತಿ ಮಾಡೋ ಅಸೆ ಯಾಕಾದ್ರೂ ಬಂತೋ 

  “ಬೊಂಬೆ ಆಡ್ಸೋನು” ಡ್ರಾಮ ಟೈಮ್ ಅವರ ಜೊತೆ ಇದ್ದ ನೆನಪು 

  ಮೊನ್ನೆ ಅವರಿಗೆ ನಾನು ಮತ್ತು ರಾಕ್ಲೈನ್ ವೆಂಕಟೇಶ್ ಹೆಡ್ ಮಸಾಜ್ ಮಾಡಿದ ನೆನಪು 

  ಅವರ ಕನಸಲ್ಲಿ ನಾನು ಹೋಗಿದ್ದಕ್ಕೆ ಅವರು ಕರೆದು ಬೈದ ನೆನಪು

  ಯಶ್ ರಾಧಿಕ ಸೀಮಂತದಲ್ಲಿ ಅವರು ಜೋಕ್ ಮಾಡುತ್ತಾ ಕೂತಿದ್ದ ನೆನಪು 

  ಜೊತೆಗೆ ಅಸಂಖ್ಯ ನೆನಪಿನ ಚಿತ್ರಗಳು

  ನೋ ವೇ… ಚಾನ್ಸೇ ಇಲ್ಲ… ಅವ್ರು ಹೋಗಿಲ್ಲ

  ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ

  ನಮನ.. ನಮನ.. ನಮನ..

  ಯೋಗರಾಜ್ ಭಟ್

 • ಹಂಸಲೇಖ ಹೇಳಿದ ಕರಿ ಕಾರ್ನಾಡ್ ಯಾರು..?

  hamsalekha's title to yogaraj bhat

  ತುಂಬ ವರ್ಷಗಳ ಹಿಂದೆಯೇ ಹಂಸಲೇಖ ಅವರಿಗೊಂದು ಹೆಸರಿಟ್ಟಿದ್ದರು. ಕೆಕೆ ಎಂದು ಕರೆಯುತ್ತಿದ್ದರು. ಏಕೆಂದರೆ, ಅವರನ್ನು ನೋಡಿದಾಗಲೆಲ್ಲ ಹಂಸಲೇಖ ಅವರಿಗೆ ಗಿರೀಶ್ ಕಾರ್ನಾಡ್ ನೆನಪಾಗುತ್ತಿತ್ತು. ಆದರೆ, ಇವರು ಅವರಷ್ಟು ಕಲರ್ ಇಲ್ಲ. ಸ್ವಲ್ಪ ಕಪ್ಪು. ಹೀಗಾಗಿಯೇ ಕೆಕೆ ಎಂದು ಹೆಸರಿಟ್ಟಿದ್ದರು ಹಂಸಲೇಖ. ಅಂದಹಾಗೆ ಹಂಸಲೇಖ ಹಾಗೆ ಕೆಕೆ ಎಂದು ನಾಮಕರಣ ಮಾಡಿದ್ದು ಯಾರಿಗೆ ಅಂದುಕೊಂಡಿದ್ದೀರಿ.. ಯೋಗರಾಜ್ ಭಟ್ಟರಿಗೆ. ಕೆಕೆ ಎಂದರೆ ಕರಿ ಕಾರ್ನಾಡ್ ಎಂದರ್ಥ.. ಅಷ್ಟೆ.

  ಭಟ್ಟರ ಪಂಚರಂಗಿ ಆಡಿಯೋ ಕಂಪೆನಿ ಉದ್ಘಾಟನೆ ವೇಳೆ ಈ ಮಾತು ಹೇಳಿಕೊಂಡ ಹಂಸಲೇಖ, ತಮ್ಮ ಹಾಗೂ ಭಟ್ಟರ ನಡುವಿನ ಸಾಮ್ಯತೆಯನ್ನು ಹೇಳಿಕೊಂಡರು.  ಚಿ.ಉದಯಶಂಕರ್ ಬರೆದದ್ದನ್ನೇ ನಾನು ಬರೆಯಬಾರದು, ಹೊಸದೇನನ್ನಾದರೂ ಬರೆಯಬೇಕು ಎಂಬ ಹಠಕ್ಕೆ ಬಿದ್ದು ನಾನು ಬರೆದೆ. ಹಂಸಲೇಖ ಬರೆದಿದ್ದನ್ನು ನಾನು  ಬರೆಯಬಾರದು ಎಂದು ಹಠ ತೊಟ್ಟವರಂತೆ ಯೋಗರಾಜ್ ಭಟ್ ಬರೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ ಹಂಸಲೇಖ.

 • ಹಂಸಲೇಖಾಗೆ ಭಟ್ಟರಿಂದ ಹಾರ್ಮೋನಿಯಂ ಕಾಣಿಕೆ

  yogaraj bhatt starts new venture with hamsalekha

  ಯೋಗರಾಜ್ ಭಟ್ಟರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪಂಚರಂಗಿ ಅನ್ನೋ ಸಿನಿಮಾ ನಿರ್ದೇಶಿಸುತ್ತಿರುವ ಯೋಗರಾಜ್ ಭಟ್, ಈಗ ಅದೇ ಹೆಸರಿನಲ್ಲಿ ಆಡಿಯೋ ಕಂಪೆನಿ ಹುಟ್ಟುಹಾಕಿದ್ದಾರೆ. ಆ ಕಂಪೆನಿ ಉದ್ಘಾಟಿಸಿದ್ದು ನಾದಬ್ರಹ್ಮ ಹಂಸಲೇಖ ಅನ್ನೋದು ವಿಶೇಷ. ಹಾಗೆ ತಮ್ಮ ಆಡಿಯೋ ಕಂಪೆನಿ ಉದ್ಘಾಟಿಸಿದ ಸಂಗೀತ ಸಾಮ್ರಾಟನಿಗೆ ಯೋಗರಾಜ್ ಭಟ್ ಕೊಟ್ಟ ಉಡುಗೊರೆ ಹಾರ್ಮೋನಿಯಂ.

  ಕಂಪೆನಿಯಿಂದ ಮೊದಲನೆಯದಾಗಿ ಬಿಡುಗಡೆಯಾದ ಆಡಿಯೋ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಮೂಲಕ ಭಟ್ಟರು ಹೊಸ ಸಾಹಸ ಆರಂಭಿಸಿಬಿಟ್ಟಿದ್ದಾರೆ. ಶುಭವಾಗಲಿ.

 • ಹೀರೋಯಿನ್ ಯಕ್ಷಗಾನದ ಗಾಳಿಪಟ 2

  gaalipata 2 will have yakshagana by heroine

  ಗಾಳಿಪಟ 2 ಚಿತ್ರದಲ್ಲಿ ಡಿಫರೆಂಟ್ ಡಿಫರೆಂಟ್ ಲವ್ ಸ್ಟೋರಿಗಳಿವೆ ಅನ್ನೊದನ್ನು ಭಟ್ಟರು ಹೇಳಿದ್ದರು. ಅಲ್ಲೊಂದು ಯಕ್ಷಗಾನ ಲವ್ ಸ್ಟೋರಿ ಇದೆ ಅನ್ನೋ ಸುಳಿವು ಈಗ ಬರ್ತಾ ಇದೆ. ಪಂಚತಂತ್ರದ ಶೃಂಗಾರದ ಹೊಂಗೆಮರದ ಹೂವು ಸೋನಲ್, ಈಗ ಯಕ್ಷಗಾನ ಕಲಿಯೋಕೆ ಹೊರಟಿದ್ದಾರೆ.

  ಗಾಳಿಪಟ 2 ಚಿತ್ರದ ನಾಯಕಿಯಾಗಿರೋ ಸೋನಲ್ ಅವರಿಗೆ ಗಾಳಿಪಟ 2ನದಲ್ಲಿರೋದು ಯಕ್ಷಗಾನ ಕಲಾವಿದೆಯ ಪಾತ್ರ. ಕರಾವಳಿಯವರಾದರೂ ಯಕ್ಷಗಾನ ನೋಡಿದ್ದರೂ.. ಯಕ್ಷಗಾನ ಕಲಿತಿಲ್ಲ. ಆದರೆ, ಈಗ ಪಾತ್ರಕ್ಕಾಗಿ 2 ವಾರ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಸೋನಲ್.

  ನಾಯಕಿಯೊಬ್ಬಳು ಯಕ್ಷಗಾನ ಕಲಾವಿದೆಯಾಗಿ ನಟಿಸುವುದು ಕನ್ನಡ ಚಿತ್ರರಂಗಕ್ಕೆ ಹೊಸದು. ಯಕ್ಷಗಾನದಲ್ಲಿ ಹಲವಾರು ಮಹಿಳಾ ಕಲಾವಿದೆಯರಿದ್ದರೂ, ಸಿನಿಮಾದಲ್ಲಿ ಯಕ್ಷಗಾನ ಮಾಡುವ ಸಾಹಸಕ್ಕೆ ಯಾವುದೇ ಕಲಾವಿದೆ ಪ್ರಯತ್ನ ಮಾಡಿಲ್ಲ. ಹೀಗಾಗಿ ನನಗೆ ಇದು ಚಾಲೆಂಜಿಂಗ್ ಎಂದಿದ್ದಾರೆ ಸೋನಲ್.

 • ಹೊಂಗೆಮರದ ಶೃಂಗಾರದಲ್ಲಿ.. ಯೋಗರಾಜ್ ಭಟ್ಟರ ಸೌಂದರ್ಯ ಸಮರ

  yogaraj bhatt's hongemaradha sringaradhalli song

  ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ.. ನಾಚಿಕೆಯು ನನ್ನಾ ಜೊತೆ ಠೂ ಬಿಟ್ಟಿದೆ.. ಎಂಬ ಸಾಲುಗಳ ಮೂಲಕವೇ ಶೃಂಗಾರದ ಪರಾಕಾಷ್ಠೆಗೆ ಕೊಂಡೊಯ್ದಿದ್ದ ಭಟ್ಟರು, ಈಗ ಹಾಡಿನ ಲಿರಿಕಲ್ ವಿಡಿಯೋದಲ್ಲೂ ಶೃಂಗಾರಧಾರೆಯನ್ನೇ ಸುರಿಸಿಬಿಟ್ಟಿದ್ದಾರೆ. ಅದು ಅದ್ಭುತ ಎನ್ನಿಸುವ ಪೇಂಟಿಂಗುಗಳ ಮೂಲಕ.

  ಇದುವರೆಗೆ ಯಾರೂ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದರೆ, ಭಟ್ಟರೇ ಬೇರೆ.. ಭಟ್ಟರ ಸ್ಟೈಲೇ ಬೇರೆ.. ಭಟ್ಟರ ಶೃಂಗಾರವೂ ಬೇರೆ.. ಹೀಗಾಗಿಯೇ ಪಂಚತಂತ್ರ ಚಿತ್ರದ ಈ ಹಾಡಿನ ಜೊತೆ 4 ಪೇಂಟಿಂಗ್ ಹೊರತಂದಿದ್ದಾರೆ ಭಟ್ಟರು. ಆ ಪೇಂಟಿಂಗುಗಳ ಮೇಲೆ ಹಾಡಿನ ಸಾಹಿತ್ಯವೂ ಇರಲಿದೆ. 

  ಹಾಡು ಓದಿಕೊಳ್ಳೋದಾ.. ಪೇಂಟಿಂಗ್ ನೋಡಿ ಶೃಂಗಾರದ ಹೂವು ಅರಳಿಸೋದಾ.. ಕಲ್ಪನೆಯ ಶೃಂಗಾರ ಲೋಕದಲ್ಲಿ ಏರಿ ಹೋಗೋದ.. ಅದು ಚಿತ್ರರಸಿಕರಿಗೆ ಬಿಟ್ಟ ಮಾತು.

  ವಿಹಾನ್ ಮತ್ತು ಸೋನಲ್ ಅಷ್ಟೇ ಅದ್ಭುತವಾಗಿ ನಟಿಸಿದ್ದಾರಂತೆ. ಆ ಶೃಂಗಾರ ಕಾವ್ಯವನ್ನು ನೋಡಲು ಚಿತ್ರ ಬಿಡುಗಡೆವರೆಗೂ ಕಾಯಬೇಕಂತೆ.

Matthe Udbhava Trailer Launch Gallery

Maya Bazaar Pressmeet Gallery