` yogaraj bhat, - chitraloka.com | Kannada Movie News, Reviews | Image

yogaraj bhat,

 • ತೆಲುಗು, ಹಿಂದಿಯಲ್ಲಿ ಪಂಚತಂತ್ರಕ್ಕೆ ಡಿಮ್ಯಾಂಡು

  panchatantra gets demand in telugu and hindi

  ಯೋಗರಾಜ್ ಭಟ್ಟರ ಪಂಚತಂತ್ರ ಚಿತ್ರ ಕಥೆ, ಪ್ರೀತಿ, ರೇಸ್‍ನಿಂದ ಮೋಡಿಯನ್ನೇ ಮಾಡಿದೆ. ಯುವ ಪ್ರೇಕ್ಷಕರನ್ನು ಸೆಳೆಯುತ್ತಿರುವ ಪಂಚತಂತ್ರ ಚಿತ್ರಕ್ಕೆ ಒಳ್ಳೆಯ ಓಪನಿಂಗೂ ಸಿಕ್ಕಿದೆ. ಪಂಚತಂತ್ರದ ಆಮೆ, ಮೊಲ ರೇಸ್ ಕಥೆಯನ್ನು ಇಷ್ಟು ಚೆಂದವಾಗಿ ಸಿನಿಮಾ ಮಾಡಬಹುದಾ ಎಂದು ಅಚ್ಚರಿ ಪಟ್ಟಿರುವುದು ಕನ್ನಡ ಪ್ರೇಕ್ಷಕರಷ್ಟೇ ಅಲ್ಲ, ತೆಲುಗು ಹಾಗೂ ಹಿಂದಿ ಚಿತ್ರರಂಗದವರೂ ಕೂಡಾ ಬೆರಗಾಗಿದ್ದಾರೆ.

  ಹೀಗಾಗಿಯೇ ಪಂಚತಂತ್ರ ಚಿತ್ರದ ರೀಮೇಕ್‍ಗೆ ಡಿಮ್ಯಾಂಡ್ ಬರೋಕೆ ಶುರುವಾಗಿದೆ. ಭಟ್ಟರ ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗುವುದು ಹೊಸದೇನಲ್ಲ. ಈ ಬಾರಿಯೂ ಅಷ್ಟೆ, ತೆಲುಗಿನಲ್ಲಿ ಆಗಲೇ ಆಂಧ್ರ ವರ್ಸಸ್ ತೆಲಂಗಾಣ ಅನ್ನೋ ಹೆಸರಲ್ಲಿ ಪಂಚತಂತ್ರ ರೀಮೇಕ್ ಆಗುತ್ತಿದೆ ಎಂಬ ಸುದ್ದಿಯಿದೆ.

  ಒಟ್ಟಿನಲ್ಲಿ ಹೊಸಬರನ್ನೇ ಇಟ್ಟುಕೊಂಡು ಯೋಗರಾಜ್ ಭಟ್ಟರು ಮತ್ತೊಮ್ಮೆ ಗೆದ್ದಿದ್ದಾರೆ. ಶೃಂಗಾರದ ಹೊಂಗೇ ಮರ ಹೂ ಬಿಟ್ಟು, ಅರಳಿದೆ.

 • ದನಕಾಯೋನ ದುಡ್ಡು ಭಟ್ಟರಿಗೆ ಬರಲೇ ಇಲ್ಲ..!

  yograj bhat still waiting for kanakpura srinivas money

  ದನಕಾಯೋನು. ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ. ಕನಕಪುರ ಶ್ರೀನಿವಾಸ್ ನಿರ್ಮಾಣದ ಆ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನವಿತ್ತು. ಆದರೆ, ಸಿನಿಮಾ ರಿಲೀಸ್ ಆಗಿ, ಲಾಭ ಮಾಡಿಕೊಂಡರೂ, ನಿರ್ಮಾಪಕ ಕನಕಪುರ ಶ್ರೀನಿವಾಸ್, ಯೋಗರಾಜ್ ಭಟ್ಟರಿಗೆ ಅವರಿಗೆ ಕೊಡಬೇಕಾದ ಸಂಭಾವನೆ ಕೊಡಲೇ ಇಲ್ಲ. ಫಿಲಂ ಚೇಂಬರ್ ಮೆಟ್ಟಿಲೇರಿ, ಹಲವು ಬಾರಿ ಸೂಚನೆ ಕೊಟ್ಟರೂ, ಶ್ರೀನಿವಾಸ್ ಪ್ರತಿ ಬಾರಿಯೂ ಮಾತಿಗೆ ತಪ್ಪಿದರು. ಕೊಟ್ಟಿದ್ದ ಚೆಕ್‍ಗಳು ಬೌನ್ಸ್ ಆದವು.

  ಅದೇ ಕನಕಪುರ ಶ್ರೀನಿವಾಸ್ ನಿರ್ಮಾಣದ ಭರ್ಜರಿ ಚಿತ್ರದ ರಿಲೀಸ್ ವೇಳೆ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ ಕೊಟ್ಟಿದ್ದರು. ಆಗ ಮತ್ತೊಮ್ಮೆ ಫಿಲಂ ಚೇಂಬರ್ ಮೊರೆ ಹೋದ ಕನಕಪುರ ಶ್ರೀನಿವಾಸ್, ಸೆಪ್ಟೆಂಬರ್ ಅಂತ್ಯದೊಳಗೆ ಹಣವನ್ನು ಪೂರ್ತಿ ನೀಡುವುದಾಗಿ ಭರವಸೆ ಕೊಟ್ಟು, ಸಿನಿಮಾ ರಿಲೀಸ್ ಆಗುವಂತೆ ನೋಡಿಕೊಂಡಿದ್ದರು. 

  ಕನಕಪುರ ಶ್ರೀನಿವಾಸ್ ಅವರನ್ನು ನಂಬಿದ್ದಕ್ಕೆ ಈ ಬಾರಿಯೂ ಭರ್ಜರಿಯಾಗಿಯೇ ಕೈಕೊಟ್ಟಿದ್ದಾರೆ. ಭರ್ಜರಿ ಚಿತ್ರವೂ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಯೋಗರಾಜ್ ಭಟ್ಟರಿಗೆ ಇದುವರೆಗೆ ಬರಬೇಕಾದ ಸಂಭಾವನೆ ಬಂದೇ ಇಲ್ಲ. ದನಕಾಯೋನು ಚಿತ್ರ ನಿರ್ದೇಶಿಸಿ, ಸಾಕ್ಷಾತ್ತು ಪುಣ್ಯಕೋಟಿಯಂತೆಯೇ ಕಾಯುತ್ತಿದ್ದಾರೆ ಯೋಗರಾಜ್ ಭಟ್.

  Related Articles :-
  ದನಕಾಯೋನು ಮುಗುಳ್ನಕ್ಕಾಗ..

  ದನಕಾಯೋನು ನಿರ್ಮಾಪಕರ ವಿರುದ್ಧ ಸಿಡಿದೆದ್ದ ಯೋಗರಾಜ್ ಭಟ್ 

 • ದನಕಾಯೋನು ನಿರ್ಮಾಪಕರ ವಿರುದ್ಧ ಸಿಡಿದೆದ್ದ ಯೋಗರಾಜ್ ಭಟ್ 

  yograj bhatt files complaint aganist kanakpura srinivas

  ದನಕಾಯೋನು, ದುನಿಯಾ ವಿಜಿ, ಪ್ರಿಯಾಮಣಿ ಅಭಿನಯದ ಚಿತ್ರ. ಕಳೆದ ವರ್ಷ ರಿಲೀಸ್ ಆಗಿದ್ದ ಚಿತ್ರವನ್ನು ನಿರ್ದೇಶಿಸಿದ್ದವರು ಯೋಗರಾಜ್ ಭಟ್. ನಿರ್ಮಾಪಕ ಕನಕಪುರ ಶ್ರೀನಿವಾಸ್. ಆದರೆ, ಸಿನಿಮಾ ರಿಲೀಸ್ ಆದ ಹೆಚ್ಚೂ ಕಡಿಮೆ ಒಂದು ವರ್ಷದ ನಂತರ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಸಮರ ಸಾರಿದ್ದಾರೆ. 

  ಏಕೆಂದರೆ, ಚಿತ್ರವನ್ನು ನಿರ್ದೇಶಿಸದ್ದಕ್ಕೆ ಕೊಡಬೇಕಾಗಿದ್ದ ಸಂಭಾವನೆಯನ್ನು ನಿರ್ಮಾಪಕ ಶ್ರೀನಿವಾಸ್ ಇದುವರೆಗೆ ಕೊಟ್ಟಿಲ್ಲ. ಭಟ್ಟರು, ಚಿತ್ರದ ಛಾಯಾಗ್ರಾಹಕರೂ ಸೇರಿದಂತೆ ಹಲವರಿಗೆ ಶ್ರೀನಿವಾಸ್ ಸಂಭಾವನೆಯನ್ನೇ ನೀಡಿಲ್ಲ. ಸಾಲದ ಸುಳಿಯಲ್ಲಿದ್ದ ಶ್ರೀನಿವಾಸ್, ಚಿತ್ರವನ್ನು ರಿಲೀಸ್ ಮಾಡುವುದೇ ಕಷ್ಟವಾಗಿತ್ತು. ಆಗ ಯೋಗರಾಜ್ ಭಟ್ ಅವರೇ ಮುತುವರ್ಜಿ ವಹಿಸಿ, ಸಿನಿಮಾ ಬಿಡುಗಡೆಗೆ ಸಹಕರಿಸಿದ್ದರು. 

  ದನಕಾಯೋನು ಸಿನಿಮಾ ಬಿಡುಗಡೆಯಾಗಿ, ಸಿನಿಮಾ ಒಂದು ಹಂತಕ್ಕೆ ಹಿಟ್ ಕೂಡಾ ಆಗಿತ್ತು. ಚಿತ್ರ ಈಗಾಗಲೇ ಟಿವಿಯಲ್ಲೂ ಪ್ರಸಾರವಾಗಿದೆ. ಆದರೆ, ಚಿತ್ರಮಂದಿರದ ಕಲೆಕ್ಷನ್ ಮತ್ತು ಟಿವಿ ರೈಟ್ಸ್​ ಎಲ್ಲವನ್ನೂ ಪಡೆದುಕೊಂಡ ನಿರ್ಮಾಪಕ ಶ್ರೀನಿವಾಸ್, ಸಂಭಾವನೆಯನ್ನು ಮಾತ್ರ ಕೊಡದೆ ಕೈ ಎತ್ತಿಬಿಟ್ಟಿದ್ದಾರೆ.

  ಹಾಗೆಂದು ಭಟ್ಟರು ಏಕಾಏಕಿ ಕಾನೂನು ಸಮರ ಸಾರಿಲ್ಲ. ಫಿಲಂ ಚೇಂಬರ್ ಹಾಗೂ ನಿರ್ದೇಶಕರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ  ವಿ.ನಾಗೇಂದ್ರ ಪ್ರಸಾದ್‌‌ ಮಧ್ಯಸ್ಥಿಕೆಯಲ್ಲಿ ಸಂಧಾನವೂ ನಡೆದಿದೆ. ಯೋಗರಾಜ್ ಭಟ್ ಅವರಿಗೆ ಬರಬೇಕಿರುವ ಒಂದು ಕೋಟಿ 31 ಲಕ್ಷ ರೂ. ಸಂಭಾವನೆಯನ್ನು ಎರಡು ಕಂತುಗಳಲ್ಲಿ ಕೊಡುವುದಾಗಿ ಒಪ್ಪಿಕೊಂಡಿದ್ದ ಶ್ರೀನಿವಾಸ್, ನಂತರ ಅದನ್ನೂ ಪಾಲಿಸಿಲ್ಲ. 

  ಹೀಗಾಗಿ ಯೋಗರಾಜ್ ಭಟ್, ನಿರ್ಮಾಪಕ ಶ್ರೀನಿವಾಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.ಕನಕಪುರ ಶ್ರೀನಿವಾಸ್ ಅವರ ಆರ್.ಎಸ್. ಪ್ರೊಡಕ್ಷನ್​ನ ಮುಂದಿನ ಚಿತ್ರಗಳಿಗೆ ತಡೆ ನೀಡುವಂತೆ ಕೋರಿದ್ದಾರೆ.  ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವ ಕುರಿತು ನೀಡಬೇಕಿರುವ ಅನುಮತಿ ಪತ್ರಕ್ಕೆ  ತಾವು ಸಹಿ ಹಾಕಿಲ್ಲ ಎಂದು ಕೂಡಾ ತಿಳಿಸಿ, ವಾರ್ತಾ ಇಲಾಖೆಗೂ ಮಾಹಿತಿ ನೀಡಿದ್ದಾರೆ. 

  ತಮ್ಮ ನಿರ್ದೇಶನದ ಚಿತ್ರಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುವ ಯೋಗರಾಜ್ ಭಟ್, ನೋವಿನಿಂದಲೇ ಕೋರ್ಟ್ ಮೆಟ್ಟಿಲೇರುತ್ತಿದ್ದೇನೆ. ಯಾವುದೇ ಕನ್ನಡ ಚಿತ್ರಗಳಿಗೆ ತೊಂದರೆಯಾಗಬಾರದು ಎನ್ನುವುದು ನನ್ನ ಕಳಕಳಿ. ಹಾಗೆಯೇ ಯಾವುದೇ ತಂತ್ರಜ್ಞರಿಗೆ ಮೋಸವಾಗಬಾರದು ಎನ್ನುವುದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾನು ಕೋರ್ಟ್ ಮೆಟ್ಟಿಲೇರಿದ್ಧೇನೆ ಎಂದು ಹೇಳಿದ್ಧಾರೆ ಯೋಗರಾಜ್ ಭಟ್.

  Related Articles :-

  Danakayonu Vs Bharjari

 • ದನಕಾಯೋನು ಮುಗುಳ್ನಕ್ಕಾಗ..

  danakayonu, yograjbhat smiles

  ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ದನಕಾಯೋನು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಚೆಕ್​ಬೌನ್ಸ್ ಕೇಸ್ ಹಾಕುತಿರುವುದು ಗೊತ್ತಿರುವ ವಿಚಾರ. ಈ ಕೇಸ್​ನ ಎಫೆಕ್ಟ್​ ತಟ್ಟಲಿರುವುದು ಶ್ರೀನಿವಾಸರ ಮುಂದಿನ ಚಿತ್ರ ಭರ್ಜರಿ ಚಿತ್ರದ ರಿಲೀಸ್​ಗೆ. ಹೀಗಾಗಿ ಧ್ರುವ ಸರ್ಜಾ ಅವರ ಕೆಲವು ಅಭಿಮಾನಿಗಳು ಭಟ್ಟರ ಮನೆಯೆದುರು ಪ್ರತಿಭಟನೆ ನಡೆಸಿದ್ದರು. ನೀವು ನೀವು ಏನಾದರೂ ಮಾಡಿಕೊಳ್ಳಿ, ನಮ್ಮ ಹೀರೋ ಚಿತ್ರ ಬಿಡುಗಡೆಗೆ ಅಡ್ಡಿ ಮಾಡಬೇಡಿ ಎಂದು ಭಟ್ಟರ ಮನೆಯ ಎದುರು ಜಮಾಯಿಸಿದ್ದರು. ಆದರೆ ಆಗಿದ್ದೇ ಬೇರೆ. ಘಟನೆಯ ಇನ್ನೊಂದು ಮುಖವನ್ನು ಚಿತ್ರಲೋಕ ಮೂಲಗಳು ಹೇಳಿದಾಗ ಹೊರಬಿದ್ದಿದ್ದೇ ಬೇರೆ. 

  ಭಟ್ಟರ ಮನೆಯೆದರು ಜಮಾಯಿಸಿದ್ದ ಜನರನ್ನು ನೋಡಿದ ಕೆಲವರು, ಈ ಬಗ್ಗೆ ಸಮೀಪದ ಪೊಲೀಸ್ ಸ್ಟೇಷನ್​ಗೆ ಮಾಹಿತಿ ನೀಡಿದರು. ತಕ್ಷಣ ಬಂದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಹುಡುಗರನ್ನೆಲ್ಲ ವಶಕ್ಕೆ ತೆಗೆದುಕೊಂಡರು. ಅದಾದ ಮೇಲೆ ಭಟ್ಟರು ಅನಿವಾರ್ಯವಾಗಿ ಠಾಣೆಗೆ ಹೋಗಲೇ ಬೇಕಾಯ್ತು.

  ಆದರೆ, ಹೋಗಿದ ಮೇಲೆ ನೋಡಿದರೆ, ಎಲ್ಲರೂ ಚಿಕ್ಕ ವಯಸ್ಸಿನ ಹುಡುಗರು. ಪೊಲೀಸರು ನೀವು ದೂರು ಕೊಟ್ಟರೆ, ಇವರನ್ನು ಬಂಧಿಸುತ್ತೇವೆ ಎಂದು ಹೇಳಿದಾಗ, ಭಟ್ಟರ ಮನಸ್ಸಿಗೇ ಕಸಿವಿಸಿಯಾಯಿತು. ಆ ಹುಡುಗರೋ.. ಊಟವನ್ನೂ ಮಾಡಿಲ್ಲ ಎನ್ನುವುದು ನೋಡಿದರೇನೇ ತಿಳಿಯುತ್ತಿತ್ತು. ಹೀಗಾಗಿ ಭಟ್ಟರೇ ಮನಸ್ಸು ಕರಗಿ ದೂರು ನೀಡದೆ, ಪೊಲೀಸರಿಗೆ ತಾವೇ ಸಮುಜಾಯಿಷಿ ನೀಡಿ, ಹುಡುಗರನ್ನು ಬಿಡಿಸಿದರು. ಅಷ್ಟೇ ಅಲ್ಲ ತಮ್ಮ ಜೇಬಿನಿಂದಲೇ ಹಣ ಕೊಟ್ಟು, ಒಂದು ಸಾವಿರ ಖರ್ಚು ಮಾಡಿ, ಹುಡುಗರಿಗೆ ಊಟವನ್ನೂ ಕೊಡಿಸಿ, ಬುದ್ದಿ ಹೇಳಿ ಕಳಿಸಿದರು. 

  ಮುಗುಳ್ನಗೆ ಚಿತ್ರ, ಥಿಯೇಟರುಗಳಲ್ಲಿಲ ಹೌಸ್​ಫುಲ್​ ಆದ ಖುಷಿಯಲ್ಲಿದ್ದ ಭಟ್ಟರಿಗೆ, ದನಕಾಯೋನು ಚಿತ್ರದ ನಿರ್ಮಾಪಕ ಹಣ ನೀಡಿಲ್ಲ. ಸಂಭಾವನೆಯ ಹಣ ನೀಡದೆ ಓಡಾಡುತ್ತಿರುವ ಶ್ರೀನಿವಾಸ್ ವಿರುದ್ಧ ದೂರು ನೀಡಿರುವ ಭಟ್ಟರು, ಪ್ರತಿಭಟನೆ ಮಾಡಲು ಬಂದವರಿಗೂ ಊಟ ಕೊಡಿಸಿ ಕಳಿಸಬೇಕಾಯ್ತು. ದನಕಾಯೋನು ಮುಗುಳ್ನಕ್ಕಾಗ ಎಂದಿದ್ದು ಇದಕ್ಕೇನೆ.

  Related Articles :-

  ದನಕಾಯೋನು ನಿರ್ಮಾಪಕರ ವಿರುದ್ಧ ಸಿಡಿದೆದ್ದ ಯೋಗರಾಜ್ ಭಟ್ 

 • ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್

  ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್

  ಹೊಲ್ಟೋಗಿರೋ ಹುಡ್ಗೀರೆಲ್ಲ ಹಂಗೇ ವಾಪಸ್ ಬಂದವ್ರಲ್ಲ..

  ಪ್ರೀತಿಸ್ಬೇಕಾ... ಪ್ರೀತಿಸ್ಬಾರ್ದಾ ಕರೆಕ್ಟಾಗಿ ಹೇಳು ದೇವ್ಲೇ ..

  ಮಕಾಡೆ ಮಲ್ಲಿಕ್ಕಂಡ್ರೆ ತುಕಾಲಿ ಕನಸುಗಳು.. ಅಂಗಾತ ಮಲ್ಲಿಕ್ಕಂಡ್ರೆ ಫ್ಲಾಷ್ ಬ್ಯಾಕೆಲ್ಲ ಬೆಂಕಿ ದೇವ್ಲೇ..

  ಗಟ ಗಟ ಬೀರು.. ಕುಡಿದರೆ ನೀರು..

  ನಾವು ಎಣ್ಣೇ ಬಿಟ್ರೂ ಎಣ್ಣೆ ನಮ್ಮನ್ ಬಿಡ್ತಾ ಇಲ್ಲ..

  ಭಟ್ಟರ ಫಿಲಾಸಫಿಯನ್ನು ಎಣ್ಣೆಯೊಂದಿಗೆ ಬೆರೆಸಿ ಕ್ಲಾಸಿಕ್ ಎಣ್ಣೆ ಸಾಂಗ್ ಕೊಟ್ಟಿದ್ದಾರೆ ಭಟ್ಟರು.

  ಭಟ್ಟರ ಸಾಹಿತ್ಯಕ್ಕೆ ಅಷ್ಟೇ ಖಡಕ್ಕಾಗಿ.. ಫುಲ್ ಟೈಟಾಗಿ ಹಾಡಿರೋದು ವಿಜಯ್ ಪ್ರಕಾಶ್. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಗಣೇಶ್-ದಿಗಂತ್-ಪವನ್ ಜೋಡಿ ಕುಣಿದಾಡಿದೆ.

  ಭಟ್ಟರ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ಇದ್ದರೆ ಸಾಕು. ಹಾಗೆಯೇ ಕಿಕ್ಕೇರಿಸುತ್ತೆ. ಎಣ್ಣೆ ಹೊಡೀಬೇಕಿಲ್ಲ ಅನ್ನೋದು ಗಣೇಶ್ ಕಾಂಪ್ಲಿಮೆಂಟು. ಈ ಮೊದಲಿನ ಎಣ್ಣೆ ಸಾಂಗುಗಳಿಗಿಂತ ಈ ಹಾಡು ಸ್ವಲ್ಪ ಡಿಫರೆಂಟ್ ಎನ್ನಿಸೋದು ರ ಜಾಗದಲ್ಲಿ ಲ ಸೇರಿಸಿರೋದು. ಅದನ್ನು ಸೇರಿಸಿದ ಮೇಲೆ ಹಾಡಿಗೆ ಬೇರೆಯದ್ದೇ ಖದರ್ ಬಂತು ಅಂತಾರೆ ಭಟ್ಟರು.

 • ನಾಚಿಕೆ ಬಿಡಿಸೋಕ್ ಹೋಗಿ ನಾಚಿ ನಾಚಿ ಮುದ್ದೆಯಾದ ವಿಹಾನ್

  panchatantra hero feeling shy after movie release

  ಪಂಚತಂತ್ರ ಸಿನಿಮಾ ರಿಲೀಸ್ ಆಗಿ ಯುವ ಪ್ರೇಕ್ಷಕರು ರೋಮಾಂಚಿತರಾಗುತ್ತಿದ್ದರೆ, ಸಿನಿಮಾ ಹೀರೋ ವಿಹಾನ್ ನಾಚಿ ನಾಚಿ ಮುದ್ದೆಯಾಗುತ್ತಿದ್ದಾರೆ. ಎಲ್ಲವೂ ಭಟ್ಟರ ತುಂಟಾಟದ ಫಲ. ಯೋಗರಾಜ್ ಭಟ್ಟರು ತಮ್ಮ ತುಂಟಾಟ, ಚೆಲ್ಲಾಟವನ್ನು... ಛೆ.. ನಾನೇ ಅಲ್ಲಿರಬಾರದಿತ್ತೆ ಎಂದು ಹೊಟ್ಟೆ ಉರಿದುಕೊಳ್ಳುವಂತೆ ಸ್ಕ್ರೀನ್ ಮೇಲೆ ತೋರಿಸೋದ್ರಲ್ಲಿ ಎತ್ತಿದ ಕೈ. ಪಂಚತಂತ್ರದಲ್ಲೂ ಅದನ್ನು ಮಾಡಿ ಗೆದ್ದಿರೋ ಭಟ್ಟರು, ವಿಹಾನ್‍ರನ್ನು ನಾಚಿಕೊಳ್ಳೋ ಹಾಗೆ ಮಾಡಿದ್ದಾರೆ. 

  ಈಗ ವಿಹಾನ್‍ಗೆ ಬರ್ತಿರೋ ಮೆಸೇಜ್‍ಗಳು ಎಂಥವಂತೆ ಗೊತ್ತಾ..? ನಾಚಿಕೆ ಬಿಡಿಸೋದನ್ನ ಹೇಗ್ ಕಲ್ತುಕೊಂಡ್ರಿ..?

  ಹುಕ್ಕು ಬಿಚ್ಚೋದು ಹೇಗೆ..? ಹೇಳ್ಕೊಡ್ರಿ..?

  ನಾಚಿಕೆ ಬಿಡಿಸಿದ್ರಲ್ಲ, ರಿಸಲ್ಟ್ ಯಾವಾಗ..? 

  ನಿಜಕ್ಕೂ ನಾಚಿಕೆ ಬಿಡಿಸಿದ್ರಾ..?

  ಹೀಗೆ ಮೆಸೇಜ್ ಮೇಲೆ ಮೆಸೇಜುಗಳು. ಪಾಪ.. ಭಟ್ಟರ ಎದುರಿಗೆ, ಇಡೀ ಸಿನಿಮಾ ಸೆಟ್ಟಿನವರ ಕಣ್ಗಾವಲಿನಲ್ಲಿ ನಾಚಿಕೊಂಡೇ ನಾಚಿಕೆ ಬಿಡಿಸಿದ್ದ ವಿಹಾನ್, ಈಗ ಈ ಪ್ರಶ್ನೆಗಳಿಗೆ ಉತ್ತರ ಕೊಡೋಕಾಗದೆ ನಾಚಿ ಮುದ್ದೆಯಾಗಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ವಿಹಾನ್-ಸೋನಲ್ ನಾಚಿಕೆ ಆಟ ನೋಡಿ ಒದ್ದೆಯಾಗಿದ್ದಾರೆ.

 • ನಿರ್ಮಾಪಕರಿಗೆ ಭಟ್ಟರು, ಕಥೆಯೇ ಕಾನ್ಫಿಡೆನ್ಸ್

  yogaraj bhat and story is the confidence to producers of panchtantra

  ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ವಿಹಾನ್, ಸೋನಲ್, ಅಕ್ಷರಾ, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ. ಇದು ಯುವಕರು ಮತ್ತು ವೃದ್ಧರ ನಡುವಿನ ಲೈಫು ಮತ್ತು ರೇಸಿನ ಕಥೆ. ಆಮೆ ಮೊಲದ ರೇಸ್ ಕಥೆಯನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಹೊಸ ಹೊಸ ಪ್ರತಿಭೆಗಳನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟ ಯೋಗರಾಜ್ ಭಟ್ ಅವರಿಗೆ ಬಂಡವಾಳ ಹೂಡಿರುವುದು ಕೂಡಾ ಹೊಸಬರೇ.

  ನಮಗೆ ಯೋಗರಾಜ್ ಭಟ್ಟರ ಮೇಲೆ ನಂಬಿಕೆ. ಜೊತೆಗೆ ಅವರು ಹೇಳಿದ ಕಥೆ ಬಹಳ ಇಷ್ಟವಾಯ್ತು. ಅವರ ಜೊತೆ ಈ ಹಿಂದೆ ಕೆಲಸ ಮಾಡಿದ್ದೇನೆ. ಜೊತೆಗೆ ಕಥೆಯಲ್ಲಿನ ಫ್ರೆಶ್‍ನೆಸ್ ಇಷ್ಟವಾಗಿ ನಿರ್ಮಾಪಕರಾದೆವು ಎನ್ನುತ್ತಾರೆ ಹರಿಪ್ರಸಾದ್ ಜಯಣ್ಣ.

  ಕಥೆ ಇಷ್ಟವಾಯ್ತು. ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ನನ್ನ ನಿರ್ಧಾರ ಸರಿ ಎಂದು ಪದೇ ಪದೇ ಎನ್ನಿಸಿತು. ಇದು ವಿಭಿನ್ನವಾದ ಕಥೆ ಇರುವ ಫ್ರೆಶ್ ಸಿನಿಮಾ. 6ನೇ ವಯಸ್ಸಿನವರಿಂದ 60 ದಾಟಿರುವ ವೃದ್ಧರವರೆಗೂ ಈ ಸಿನಿಮಾ ಇಷ್ಟವಾಗುತ್ತೆ ಎನ್ನುವುದು ಇನ್ನೊಬ್ಬ ನಿರ್ಮಾಪಕ ಹೇಮಂತ್ ಪರಾಡ್ಕರ್ ವಿಶ್ವಾಸ.

  ಪ್ರೇಕ್ಷಕರಿಗೂ ಅಷ್ಟೆ, ಕಲಾವಿದರು ಹೊಸಬರಿದ್ದರೂ, ಭಟ್ಟರ ಮೇಲೊಂದು ವಿಶ್ವಾಸ. ಅದಕ್ಕೆ ತಕ್ಕಂತೆ ಹಾಡುಗಳು ಸೂಪರ್ ಹಿಟ್. ಸಿನಿಮಾ ಹಿಟ್ ಆಗುವ ಸುದ್ದಿಯನ್ನೂ ಬೇಗನೇ ಹೇಳುವಂತಾಗೋಣ.

 • ಪಂಚತಂತ್ರ ನೋಡ ಬನ್ನಿ - ಪ್ರೇಕ್ಷಕರಿಗೆ ಯೋಗರಾಜ್ ಭಟ್ಟರ ಪತ್ರ

  yogaraj bhat writes a letter to panchatantra lovers

  ಕನ್ನಡ ಪಿಕ್ಚರ್‍ನಲ್ಲಿ ಏನಿರುತ್ತೆ.. ಅನ್ನೋದು ಕಿರಿಯರ ಮಾತು..ಎಷ್ಟೋ ವರ್ಷ ಆಯ್ತ್ ಕಣ್ರಿ.. ಸಿನಿಮಾನೇ ನೋಡಿಲ್ಲ ಅನ್ನೋದು ಹಿರಿಯರ ವಾದ.

  ಈ ಇಬ್ಬರಿಗೂ ಯೋಗರಾಜ್ ಭಟ್ಟರು ಒಂದು ಪತ್ರ ಬರೆದಿದ್ದಾರೆ. ಬನ್ನಿ.. ಪಂಚತಂತ್ರ ನೋಡಿ.. ಇದು ಹೊಸಬರೇ ನಟಿಸಿರುವ ಸಿನಿಮಾ. ಹಿರಿಯರು ಕಿರಿಯರು ನಡುವಿನ ಜನರೇಷನ್ ಗಲಾಟೆ, ಕರೆಂಟು ಹರಿದಂತ ಕ್ಲೈಮಾಕ್ಸ್.. ಹೀಗೆ  ಇದು ನಿಮ್ಮ ಮನಗಳ, ಮನೆಯ ಕಥೆ. ಬಂದು ನೋಡಿ. ಎಂಜಾಯ್ ಮಾಡಿ. ಅಪರೂಪದ ಸಿನ್ಮಾ ಮಿಸ್ ಮಾಡಬೇಡಿ. ಹೊಸಬರನ್ನು ಪ್ರೋತ್ಸಾಹಿಸಿ..

  ಎಂದು ಪುಟ್ಟದೊಂದು ಬರಹ ರೂಪದ ಪತ್ರ ಬರದಿದ್ದಾರೆ ಭಟ್ಟರು. ವಿಹಾನ್, ಸೋನಲ್, ಅಕ್ಷರಾ ಗೌಡ, ರಂಗಾಯಣ ರಘು ಮೊದಲಾದವರು ನಟಿಸಿದ್ದ ಚಿತ್ರ, ಬಿಡಗಡೆಗೂ ಮೊದಲು ಹಾಡಿನಿಂದ, ಬಿಡುಗಡೆಯಾದ ನಂತರ ಚಿತ್ರದಲ್ಲಿರೋ ಗಟ್ಟಿ ಕಥೆಯಿಂದ ಸದ್ದು ಮಾಡುತ್ತಿದೆ. 25ನೇ ದಿನದತ್ತ ಮುನ್ನಡೆಯುತ್ತಿರುವ ಚಿತ್ರ, ಎರಡೂ ಜನರೇಷನ್‍ರವರನ್ನು ಆಕರ್ಷಿಸುತ್ತಿದೆ.

 • ಪಂಚತಂತ್ರ ಮಾ.29ಕ್ಕೆ 

  panchatantra to release on march 29th

  ಯೋಗರಾಜ್ ಭಟ್ ನಿರ್ದೇಶನದ, ಹೊಸ ಹುಡುಗ-ಹುಡುಗಿಯರನ್ನೇ ಹಾಕ್ಕೊಂಡು ಮಾಡಿರುವ ಸಿನಿಮಾ ಪಂಚತಂತ್ರ. ಈಗಾಗಲೇ ಪಂಚತಂತ್ರದ ಶೃಂಗಾರದ ಹೊಂಗೇಮರ, ಮಂಕುತಿಮ್ಮನ ಹಾಡುಗಳೆಲ್ಲ ಹಿಟ್ ಆಗಿ, ಕಣ್ಣು, ಕಿವಿಯನ್ನು ರೋಮಾಂಚನಗೊಳಿಸಿವೆ. ಈಗ ಚಿತ್ರದ ರಿಲೀಸ್ ಡೇಟ್‍ನ್ನೂ ಹೇಳೋ ಮೂಲಕ ದಿನಗಣನೆ ಶುರು ಮಾಡಿಸಿದ್ದಾರೆ ಭಟ್ಟರು.

  ಸ್ನೇಹ, ಸಂಬಂಧ, ಸ್ಪರ್ಧೆ, ಸಂಗೀತ ಮತ್ತು ಮನರಂಜನೆಯೇ ಚಿತ್ರದ ಜೀವಾಳ ಎಂದಿರುವ ಭಟ್ಟರು, ಈ ಚಿತ್ರದಲ್ಲಿ ವಿಹಾನ್, ಸೋನಲ್, ಅಕ್ಷರಾ ಗೌಡರನ್ನು ಶೃಂಗಾರದ ಹೊಂಗೆ ಮರಕ್ಕೆ ನೇತು ಹಾಕಿದ್ದಾರೆ. ಅವರನ್ನೆಲ್ಲ ಮಾರ್ಚ್ 29ನೇ ತಾರೀಕು ಪ್ರೇಕ್ಷಕರ ಮುಂದಿಡಲಿದ್ದಾರೆ.

 • ಪಂಚತಂತ್ರದ ಪ್ರಥಮ ನೋಟ..

  panchatantra first look released

  ಪಂಚತಂತ್ರ. ಯೋಗರಾಜ್ ಭಟ್ಟರ ಸಿನಿಮಾ. ಸುದೀರ್ಘ ಕಾಲದ ನಂತರ ಹೊಸಬರ ಜೊತೆ ಮಾಡುತ್ತಿರುವ ಸಿನಿಮಾ. ಇತ್ತೀಚೆಗಷ್ಟೇ ಶೃಂಗಾರಕ್ಕೇ ಠೂ ಬಿಟ್ಟು ಮೈ ಚಳಿ ಹೆಚ್ಚಿಸಿದ್ದ ಭಟ್ಟರು, ಈಗ ಚಿತ್ರದ ಫಸ್ಟ್‍ಲುಕ್ ಹೊರತಂದಿದ್ದಾರೆ. ಚಿತ್ರದ ಫಸ್ಟ್‍ಲುಕ್ ಬಿಡುಗಡೆ ಮಾಡಿರುವುದು ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್.

  ಫಸ್ಟ್‍ಲುಕ್ ರಿಲೀಸ್ ಮಾಡಿದ ಶಿವಣ್ಣ, ಹೊಸ ನಟ ವಿಹಾನ್, ಸೋನಲ್ ಮಂತೆರೋಗೆ ಶುಭ ಹಾರೈಸಿದ್ದಾರೆ. ಸಿನಿಮಾದಲ್ಲಿ ಪಂಚತಂತ್ರದ ಕಥೆಯ ಎಳೆ ಬಿಚ್ಚಿಟ್ಟ ಯೋಗರಾಜ್ ಭಟ್, ಇದು ಒಂದು ಜಾಗಕ್ಕಾಗಿ ಎರಡು ತಲೆಮಾರಿನವರ ನಡುವೆ ನಡೆಯುವ ಹೋರಾಟದ ಕಥೆ ಎಂದಿದ್ದಾರೆ.

  ವಿಹಾನ್ ಚಿತ್ರದಲ್ಲಿ ಬೈಕ್ ರೇಸರ್. ಅವರಿಗೆ ಸೋನಲ್ ಮಂತೆರೋ ಸ್ಪೀಡ್ ಬ್ರೇಕರ್. ರಂಗಾಯಣ ರಘು, ಅಕ್ಷರಾ ಗೌಡ, ಕರಿಸುಬ್ಬು, ಮಾಸ್ತಿ ಮೊದಲಾದವರು ನಟಿಸಿರುವ ಸಿನಿಮಾಕ್ಕೆ, ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪರಾಡ್ಕರ್ ನಿರ್ಮಾಪಕರು. ನವೆಂಬರ್‍ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

 • ಪಂಚತಂತ್ರದಲ್ಲಿ ಭಟ್ಟರಿಗೆ ಕಾರ್ ಮೇಲೆ ಲವ್ವಾಗಿದೆ

  yogaraj bhat's panchatantra

  ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಲವ್ವು ಇರಲೇಬೇಕು. ಅದು ಬೇರೆಯವರು ಯೋಚನೆ ಅಥವಾ ಕಲ್ಪನೆಯನ್ನೂ ಮಾಡಿಕೊಳ್ಳದ ರೀತಿಯಲ್ಲಿರುತ್ತೆ ಅನ್ನೋದ್ರಲ್ಲೂ ನೋ ಡೌಟು. ಭಟ್ಟರು ಪ್ರೀತಿಗೆ ರೂಪಕಗಳನ್ನು ಬಳುಸುವುದೇ ಒಂದು ಚೆಂದ.

  ಮುಂಗಾರು ಮಳೆಯಲ್ಲಿ ಮೊಲ, ಗಾಳಿಪಟದಲ್ಲಿ ಗಾಳಿಪಟ, ನಗು, ಕಬಡ್ಡಿ, ಮೆಂಟಲ್ ಆಸ್ಪತ್ರೆ, ದನಗಳ ರೂಪಕಗಳನ್ನಿಟ್ಟುಕೊಂಡು ಪ್ರೇಮಕಥೆ ಹೇಳಿದ್ದ ಭಟ್ಟರು, ಹೊಸ ಚಿತ್ರ ಪಂಚತಂತ್ರದಲ್ಲಿ ಕಾರುಗಳ ಮೂಲಕ ಲವ್‍ಸ್ಟೋರಿ ಹೇಳುತ್ತಿದ್ದಾರೆ. ಪಂಚತಂತ್ರ ಚಿತ್ರದಲ್ಲಿ ಶೇ.40ರಷ್ಟು ಕಾರ್ ರೇಸ್ ಇರುತ್ತದಂತೆ. ಈ ಜಾನರ್‍ನ ಸಿನಿಮಾವನ್ನು ನಾನು ಇದುವರೆಗೆ ಮಾಡಿಲ್ಲ. ಈ ಸಿನಿಮಾ 20 ವರ್ಷದ ಯುವಕರಿಂದ 80 ವರ್ಷದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗಲಿದೆ ಅನ್ನೋ ಭರವಸೆ ಭಟ್ಟರಿಗಿದೆ.

  ಚಿತ್ರದ ಕಾರ್ ರೇಸ್ ದೃಶ್ಯಗಳಿಗಾಗಿ ಜರ್ಮನಿಯಿಂದ ಕಾರುಗಳನ್ನು ತರಿಸಲಾಗಿದೆಯಂತೆ. ಮೊನೀಷ್ ಮತ್ತು ಚಂದನ್ ಎಂಬ ಇಬ್ಬರು ರೇಸರ್‍ಗಳು ಭಟ್ಟರ ಕೆಲಸವನ್ನು ಸುಲಭ ಮಾಡಿದರಂತೆ. 

  ವಿಹಾನ್ ಗೌಡ, ಸೋನಲ್ ಮಂಥೆರೋ, ಅಕ್ಷರಾ ಗೌಡ, ರಂಗಾಯಣ ರಘು, ಕರಿಸುಬ್ಬು ಮೊದಲಾದವರು ನಟಿಸಿರುವ ಸಿನಿಮಾ ಇದು. ಡಿಸೆಂಬರ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.

 • ಪಡ್ಡೆಹುಲಿಯ ವಿಕಟ ಕವಿ ಇವರೇ ಕಣ್ರಪ್ಪಾ

  yogaraj bhat is philosopher to paddehuli

  ಪಡ್ಡೆಹುಲಿ ಟ್ರೇಲರ್ ನೋಡಿದವರಿಗೆ ಅರೆ.. ಇದೇನೋ.. ಯೋಗರಾಜ್ ಭಟ್ಟರ ಧ್ವನಿ ಇದ್ದ ಹಾಗಿದೆಯಲ್ಲ ಎನ್ನಿಸಿದ್ದರೆ ಖಂಡಿತಾ ಆಶ್ಚರ್ಯವಿಲ್ಲ. ಮಧ್ಯೆ ಮಧ್ಯೆ ಒಂದಿಷ್ಟು ವೇದಾಂತದ ಮಾತುಗಳು, ಉಡಾಫೆ ಎಂಬ ಮಸಾಲೆಯ ಜೊತೆ ಹದವಾಗಿ ಬೆರೆಸಿದಂತೆ ಕಿವಿಗೆ ಕೇಳಿಸಿರುವುದೂ ಸುಳ್ಳಲ್ಲ. ಅದು ಸುಳ್ಳೇನಲ್ಲ.. ಯೋಗರಾಜ್ ಭಟ್ಟರು ಇರೋದು ಸತ್ಯ.

  ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ಭಟ್ಟರು ವಿಕಟ ಕವಿ. ಅದೊಂದು ವಿಶೇಷವಾದ ಪಾತ್ರ. ಕ್ಲಬ್‍ನಲ್ಲಿಯೇ ಇರುವ ಭಟ್ಟರ ಪಾತ್ರ, ನಾಯಕನಿಗೆ ಹಾಡು, ಸಂಗೀತದ ಬಗ್ಗೆ ತಮ್ಮದೇ ಸ್ಟೈಲಿನಲ್ಲಿ ಕಿವಿ ಮಾತು ಹೇಳುತ್ತೆ. ಅರ್ಥಾತ್.. ಭಟ್ಟರ ಫಿಲಾಸಫಿ ತೆರೆಯ ಮೇಲೂ ಮುಂದುವರಿಯುತ್ತೆ.

  ಕೆ.ಮಂಜು ಪುತ್ರ ಶ್ರೇಯಸ್‍ಗೆ ಗುರು, ನಿರ್ದೇಶಕ ಗುರುದೇಶಪಾಂಡೆಯವರೇ ಆದರೂ, ತೆರೆಯ ಮೇಲೆ ಭಟ್ಟರೂ ಪಾಠ ಹೇಳ್ತಾರೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸುಧಾರಾಣಿ, ಪುನೀತ್, ರಕ್ಷಿತ್ ಶೆಟ್ಟಿ ಮೊದಲಾದ ತಾರೆಯರ ದಂಡೇ ಇದೆ.

 • ಪದವಿಪೂರ್ವ ; ಇದು ಭಟ್ಟರ ಹೊಸ ಸಿನಿಮಾ

  yogaraj bhat;s next is padavi [oorva

  ಹದಿಹರೆಯದವರ ತಲ್ಲಣ ತವಕಗಳನ್ನು ಹೇಳುತ್ತಲೇ ದೊಡ್ಡವರ ಹೃದಯವನ್ನೂ ಮುಟ್ಟಿರುವ ಯೋಗರಾಜ್ ಭಟ್, ಈಗ ಪದವಿಪೂರ್ವ ಅನ್ನೋ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಗಾಳಿಪಟ 2 ನಿರ್ದೇಶನ, ಸೀರೆ ಚಿತ್ರದ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್, ಪದವಿಪೂರ್ವ ಅನ್ನೋ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕರು ಮಾತ್ರ, ನಿರ್ದೇಶಕರಲ್ಲ.

  ಭಟ್ಟರ ಜೊತೆಯಲ್ಲೇ ಕೆಲಸ ಮಾಡಿ ಅನುಭವ ಇರುವ ಹರಿಪ್ರಸಾದ್ ಜಯಣ್ಣ, ಈ ಚಿತ್ರಕ್ಕೆ ನಿರ್ದೇಶಕ. ದಾವಣಗೆರೆಯ ಪೃಥ್ವಿ ಶಾಮನೂರು ನಾಯಕ. ಆತ ಹೊಸ ಪ್ರತಿಭೆ. ಭಟ್ಟರ ಜೊತೆ ಪೃಥ್ವಿಯವರ ತಂದೆ ರವಿ ಶಾಮನೂರು ಕೂಡಾ ನಿರ್ಮಾಣದಲ್ಲಿ ಭಟ್ಟರ ಜೊತೆ ಕೈಜೋಡಿಸಿದ್ದಾರೆ. 2020ರ ಆರಂಭದಲ್ಲಿ ಸಿನಿಮಾ ಸೆಟ್ಟೇರಲಿದ್ದು, ಪಿಯು ವಿದ್ಯಾರ್ಥಿಗಳ ಕಥೆಯನ್ನೇ ಚಿತ್ರದಲ್ಲಿ ಹೇಳಲು ಕಥೆ ಸಿದ್ಧ ಮಾಡಿದ್ದಾರೆ ಯೋಗರಾಜ್ ಭಟ್.

 • ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ..

  ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ..

  ಯೋಗರಾಜ್ ಭಟ್ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳಿಗೆ ನಾಂದಿ ಹಾಡಿದವರು. ಭಟ್ಟರು ಮತ್ತು ಗಣೇಶ್ ಇಬ್ಬರದ್ದೂ ಸೂಪರ್ ಹಿಟ್ ಕಾಂಬಿನೇಷನ್. ಈ ಜೋಡಿ 4ನೇ ಬಾರಿಗೆ ಒಂದಾಗಿರುವ ಚಿತ್ರವೇ ಗಾಳಿಪಟ 2. ಈ ಚಿತ್ರದ ಹಾಡುಗಳು ಈಗಾಗಲೇ ಗುಂಗು ಹಿಡಿಸುತ್ತಿವೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಪ್ರಚಾರವನ್ನೂ ಜೋರಾಗಿಯೇ ಇಟ್ಟುಕೊಂಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.

  ಇವತ್ತು ಅಂದ್ರೆ ಜುಲೈ 26ನೇ ತಾರೀಕು ಸಂಜೆ 5 ಗಂಟೆ 2 ನಿಮಿಷಕ್ಕೆ ಗಾಳಿಪಟ 2 ಚಿತ್ರದ ಮೊದಲ ಟೀಸರ್ ಹೊರಬೀಳಲಿದೆ. ಅದರಲ್ಲಿ ಗಣೇಶ್ ಪಾತ್ರದ ಕಥೆ ಇರಲಿದೆಯಂತೆ. ಅದನ್ನ ರಿಲೀಸ್ ಮಾಡೋದು ಉಪ್ಪಿ.

  ನಾನಾಡದ ಮಾತೆಲ್ಲವ ಕದ್ದಾಲಿಸು..

  ದೇವ್ಲೇ ದೇವ್ಲೇ..

  ನೀನು ಬಗೆಹರಿಯದ ಹಾಡು..

  ಹಾಗೂ ಎಕ್ಸಾಂ ಸಾಂಗ್‍ಗಳು ಹಿಟ್ ಆಗಿವೆ. ಈಗ ಮೊದಲ ಟೀಸರ್ ಬರಲಿದೆ. ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಸಂಯುಕ್ತಾ ಮೆನನ್, ಪವನ್, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್, ಬುಲೆಟ್ ಪ್ರಕಾಶ್ ಸೇರಿದಂತೆ ಬೃಹತ್ ತಾರಾಗಣದ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು.

 • ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

  ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.

  ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ  ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.

 • ಪ್ರಭುದೇವ ಶಿವಣ್ಣ ಚಿತ್ರ ಜೂನ್ 9ರಿಂದ ಆರಂಭ : ಕಥೆಗಾರ ಯಾರು?

  ಪ್ರಭುದೇವ ಶಿವಣ್ಣ ಚಿತ್ರ ಜೂನ್ 9ರಿಂದ ಆರಂಭ : ಕಥೆಗಾರ ಯಾರು?

  ಹ್ಯಾಟ್ರಿಕ್ ಹೀರೋ.. ಸೆಂಚುರಿ ಸ್ಟಾರ್ ಶಿವಣ್ಣ ಒಂದು ಕಡೆ.

  ಇಂಡಿಯನ್ ಮೈಕೇಲ್ ಜಾಕ್ಸನ್ ಎಂದೇ ಫೇಮಸ್ ಆಗಿರೋ ಪ್ರಭುದೇವ ಮತ್ತೊಂದು ಕಡೆ. ಅವರಿಬ್ಬರೂ ಒಟ್ಟಿಗೇ ಸೇರಿರುವುದು ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ. ಆ್ಯಕ್ಷನ್ ಕಟ್ ಹೇಳುತ್ತಿರುವುದು ಯೋಗರಾಜ್ ಭಟ್. ಸಿನಿಮಾ ಅಧಿಕೃತವಾಗಿ ಜೂನ್ 9ರಿಂದ ಶುರುವಾಗುತ್ತಿದೆ. ಇನ್ನೂ ಟೈಟಲ್ ಫೈನಲ್ ಆಗಿಲ್ಲ.

  ಇದು ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಎಂದಿದ್ದಾರೆ ಯೋಗರಾಜ್ ಭಟ್. ಶಿವಣ್ಣ ಮತ್ತು ಪ್ರಭುದೇವ ಇಬ್ಬರಿಗೂ ಸ್ಕ್ರೀನ್ ಪೇಸ್ ಸಮಾನವಾಗಿ ಇರಲಿದೆ ಅನ್ನೋದು ಅವರ ಪ್ರಾಮಿಸ್. ಜೂನ್ 9ರಂದು ಮುಹೂರ್ತ ಮುಗಿಸಿ ಮರುದಿನವೇ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಭಟ್ಟರು.

  ಇತ್ತ ಶಿವಣ್ಣ ಕೈಲಿ ಅವರದ್ದೇ ನಿರ್ಮಾಣದ ವೇದ, ನೀ ಸಿಗೋವರೆಗೂ, ಘೋಸ್ಟ್.. ಹೀಗೆ ಸಾಲು ಸಾಲು ಚಿತ್ರಗಳಿವೆ. ಭಟ್ಟರ ಕಥೆ ಇಷ್ಟವಾಯ್ತು. ಕಮರ್ಷಿಯಲ್ ಎಲಿಮೆಂಟ್ ಇರುವ ಕಥೆ ನನಗಂತೂ ಸಿಕ್ಕಾಪಟ್ಟೆ ಇಷ್ಟವಾಯ್ತು. ಜೊತೆಗೆ ಪ್ರಭುದೇವ ಕಾಂಬಿನೇಷನ್. ಹೀಗಾಗಿ ಒಪ್ಪಿದೆ ಎಂದಿದ್ದಾರೆ ಶಿವರಾಜಕುಮಾರ್.

  ಈ ಚಿತ್ರಕ್ಕೆ ಭಟ್ಟರೆ ಜೊತೆ ಕಥೆ ಬರೆಯಲು ಕೈಜೋಡಿಸಿರುವುದು ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಚಿತ್ರಕ್ಕಿನ್ನೂ ನಾಯಕಿಯರ ಆಯ್ಕೆ ಆಗಿಲ್ಲ.

 • ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಒಂದೊಂದು ಪದದ ಅರ್ಥವನ್ನೂ ಜಯಂತ್ ಕಾಯ್ಕಿಣಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದಿದ್ದರು ಯೋಗರಾಜ್ ಭಟ್. ಭಟ್ಟರು ಹಾಗೇಕೆ ಹೇಳಿದರು ಎಂದು ತಲೆ ತುರಿಸಿಕೊಂಡವರಿಗೆ ಗಾಳಿಪಟ 2 ಚಿತ್ರದ ಈ ಹಾಡು ಉತ್ತರ ನೀಡಿದೆ. ಜಯಂತ್ ಕಾಯ್ಕಿಣಿ ಪ್ರೇಮಸುಧೆಯನ್ನೇ ಹರಿಸಿದ್ದಾರೆ.

  ಆಡದ ಮಾತನ್ನೆಲ್ಲ ಕದ್ದು ಕೇಳು..

  ಅದನ್ನು ನನಗೆ ಹೇಳದೆ ಒದ್ದಾಡುವಂತೆ ಮಾಡು

  ಮುಂಗೋಪದಿಂದ ಒದ್ದಾಡುವಂತೆ ಮಾಡು..

  ನಾನು ಓದದ ಪುಸ್ತಕ.. ಎದೆಗೊತ್ತಿಕೊಳ್ಳುವೆಯಾ..

  ಈ ಪುಸ್ತಕದ ಪ್ರತಿ ಸಾಲಿಗೂ ಬಿಸಿಯುಸಿರು ನೀಡಿ ಕಥೆಯಾಗಿಸು..

  ಈ ಅರ್ಥದ ಸಾಲುಗಳನ್ನು ಅರೆದು..ಅರೆದು..ಸೋಸಿ ಬರೆದಿದ್ದಾರೆ ಪ್ರೇಮಿಗಳಿಗಾಗಿ.. ಪ್ರೇಮಿಗಳ ಹೃದಯಕ್ಕಾಗಿ. ಕಾಯ್ಕಿಣಿಯವರ ಪದಗಳನ್ನು ಅಷ್ಟೇ ಸಮರ್ಥವಾಗಿ ಎದೆಗೆ ದಾಟಿಸಿರೋದು ಸೋನು ನಿಗಮ್ ಅವರ ಕಂಠ ಮತ್ತು ಅರ್ಜುನ್ ಜನ್ಯಾ ಅವರ ಸಂಗೀತ.

  ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಅನಂತ್ ನಾಗ್, ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ.

 • ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ

  ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ

  ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಎಂದ ಕೂಡಲೇ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬಿಡುಗಡೆಯಾದ ಹಾಡುಗಳು, ಟ್ರೇಲರ್ ಹೊಸ ಲೆವೆಲ್ಲಿನಲ್ಲಿದ್ದವು. ಆ ನಿರೀಕ್ಷೆಗೆ ತಕ್ಕಂತೆಯೇ ಭಟ್ ಮತ್ತು ಗಣಿ ಜೋಡಿ ಗೆಲುವಿನ ನಗು ಬೀರಿದೆ. ಮೊದಲ ದಿನದ ಕಲೆಕ್ಷನ್ 20 ಕೋಟಿಯ ಗಡಿ ದಾಟಿದೆ.

  ಗಾಳಿಪಟ 2 ಮಲ್ಟಿಪ್ಲೆಕ್ಸ್‍ಗಳಲ್ಲಿ 250ಕ್ಕೂ ಹೆಚ್ಚು ಶೋ ಕಂಡರೆ, 150 ಸಿಂಗಲ್ ಸ್ಕ್ರೀನ್‍ಗಳಲ್ಲಿ 600+ ಶೋ ಪ್ರದರ್ಶನಗೊಂಡಿದೆ. ಎಲ್ಲ ಶೋಗಳೂ ಹೌಸ್‍ಫುಲ್ ಅನ್ನೋದು ರಮೇಶ್ ರೆಡ್ಡಿಯವರ ಖುಷಿಗೆ ಕಾರಣ. ಹೊರರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಶೋಗಳಿದ್ದವರು. ವಿದೇಶಗಳಲ್ಲಿ 50+ ಶೋಗಳಿದ್ದವು. ಎಲ್ಲೆಡೆ ಚಿತ್ರಮಂದಿರ ತುಂಬಿದೆ ಸಂದೇಶಗಳು ಬಂದಿವೆ. ಒಂದು ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ ಹೆಚ್ಚೂ ಕಡಿಮೆ 20 ಕೋಟಿ ಎನ್ನಲಾಗಿದೆ. ಗಾಳಿಪಟದ ಜೊತೆ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ.. ಆ ಎರಡೂ ಚಿತ್ರಗಳ ದೊಡ್ಡ ಮಾರುಕಟ್ಟೆಯನ್ನೂ ಮೀರಿ ಗಾಳಿಪಟ ಕಲೆಕ್ಷನ್ ಮಾಡಿದೆ.

  ಇದು ಇಡೀ ಗಾಳಿಪಟ 2 ತಂಡದ ಗೆಲುವು. ನನ್ನ ಮತ್ತು ಭಟ್ಟರ ಕಾಂಬಿನೇಷನ್ ಗೆಲ್ಲಬೇಕು ಎನ್ನುವ ಕನಸನ್ನು ಪ್ರೇಕ್ಷಕರು ಎತ್ತಿ ಹಿಡಿದಿದ್ದಾರೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಗಣೇಶ್.

 • ಭಟ್-ಶಶಾಂಕ್ ಸಿನಿಮಾಗೆ ರಚಿತಾ ರಾಮ್

  rachita in bhat shashank's movie

  ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.

  ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್‌ಆರ್‌ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.

  ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

 • ಭಟ್ಟರ 2ನೇ ಗಾಳಿಪಟಕ್ಕೆ ಇಬ್ಬರು ಚೆಲುವೆಯರು

  two heroines for bhatt's gaalipata 2 ..?

  ಯೋಗರಾಜ್ ಭಟ್, ಗಾಳಿಪಟ 2 ಸಿನಿಮಾ ಮಾಡೋದಾಗಿ ಘೋಷಿಸಿಯೂ ಆಗಿದೆ. ಶರಣ್, ಲೂಸಿಯಾ ಪವನ್, ರಿಷಿ ನಾಯಕತ್ವದ ಗಾಳಿಪಟ 2 ಚಿತ್ರಕ್ಕೆ  ಪಂಚತಂತ್ರ ಬಿಡುಗಡೆ ಟೈಮಿನಲ್ಲೇ ಕೆಲಸ ಶುರು ಮಾಡಿದ್ದಾರೆ. ಒಂದು ಚಿತ್ರ ಮುಗಿಯುತ್ತಿರುವಾಗಲೇ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿರುವುದು ಭಟ್ಟರ ಚರಿತ್ರೆಯಲ್ಲಿ ಇದೇ ಮೊದಲು ಎನ್ನಬೇಕು. ಈಗ ಆ ಚಿತ್ರಕ್ಕೆ ಇಬ್ಬರು ನಾಯಕಿಯರು ಓಕೆ ಆಗಿದ್ದಾರೆ.

  ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಚೆಲುವೆ ಸೋನಾಲ್ ಓಕೆ ಆಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಶರ್ಮಿಳಾ ಮಾಂಡ್ರೆ ಜೊತೆ ಮಾತುಕತೆ ನಡೆದಿದೆ. ಬೆಳಗಾವಿ ಮೂಲದ ಮಹೇಶ್ ಎಂಬುವರು ನಿರ್ಮಿಸುತ್ತಿರುವ ಗಾಳಿಪಟ 2ಗೆ ಸಂಗಿತ ಸಂಯೋಜನೆಗೆ ರೆಡಿಯಾಗಿದ್ಧಾರೆ ಭಟ್ಟರು.

  ಇದು ಕಂಪ್ಲೀಟ್ ನನ್ನ ಶೈಲಿಯ ಸಿನಿಮಾ. ಮನರಂಜನೆ ಮತ್ತು ಭಾವನಾತ್ಮಕ ಅಂಶಗಳನ್ನು ಹದವಾಗಿ ಬೆರೆಸಿರುವ ಸಿನಿಮಾ. ಈಗಿನ ಜನರೇಷನ್‍ಗೆ ಇಷ್ಟವಾಗುವ ಸಿನಿಮಾ ಎಂದಿದ್ದಾರೆ ಭಟ್ಟರು.